Tag: ನವನೀತ್ ಕೌರ್

  • LokSabha Election- ಲೋಕ ಅಖಾಡದಲ್ಲಿ ಬಿಜೆಪಿಯ ಸಿನಿ ತಾರೆಯರು

    LokSabha Election- ಲೋಕ ಅಖಾಡದಲ್ಲಿ ಬಿಜೆಪಿಯ ಸಿನಿ ತಾರೆಯರು

    ಬಾರಿಯ ಲೋಕಸಭಾ ಚುನಾವಣೆ ತಾರೆಯರಿಂದ ರಂಗೇರಿದೆ. ಅದರಲ್ಲೂ ಬಿಜೆಪಿಯು ನಾನಾ ಕ್ಷೇತ್ರಗಳಲ್ಲಿ ನಟಿಯರಿಗೆ ಟಿಕೆಟ್ ನೀಡಿ ಅದೃಷ್ಟ ಪರೀಕ್ಷೆಗೆ ರೆಡಿಯಾಗಿದೆ. ಈಗಾಗಲೇ ಚುನಾವಣೆಯಲ್ಲಿ ಪಾಲ್ಗೊಂಡ ನಟಿಯರ ಜೊತೆಗೆ ಹೊಸ ಮುಖಗಳಿಗೂ ಮಣೆ ಹಾಕಿದೆ. ಹಾಗಾಗಿ ಲೋಕ ಅಖಾಡದಲ್ಲಿ ಬಣ್ಣದ ಬೆಡಗಿಯರು ಕಾಣುತ್ತಿದ್ದಾರೆ. ಚಿತ್ರರಂಗಕ್ಕೆ ಅಲ್ಪವಿರಾಮ ಹೇಳಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

    ರಾಧಿಕಾ ಶರತ್ ಕುಮಾರ್

    ತಮಿಳು ನಾಡಿನಲ್ಲಿ ನಟಿ ರಾಧಿಕಾ ಶರತ್ ಕುಮಾರ್ (Radhika Sarath Kumar) ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ನಟಿ ಹಾಗೂ ರಾಜಕಾರಣಿಯೂ ಆಗಿರುವ ರಾಧಿಕಾ ಅವರು, ವಿರುಧನಗರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಇತ್ತೀಚೆಗಷ್ಟೇ ರಾಧಿಕಾ ಪತ್ನಿ ಶರತ್ ಕುಮಾರ್ ಅವರು ತಮ್ಮ ಅಖಿಲ ಭಾರತೀಯ ಸಮತುಮ ಮಕ್ಕಳ ಕಚ್ಚಿ ಪಕ್ಷವನ್ನು ಬಿಜೆಪಿ ಜೊತೆ ವಿಲಿನ ಮಾಡಿಕೊಂಡಿದ್ದರು.

    ಕಂಗನಾ ರಣಾವತ್

    ಬಿಜೆಪಿ ತನ್ನ ಲೋಕಸಭಾ (Lok Sabha) ಚುನಾವಣೆಯ 5ನೇ ಪಟ್ಟಿ ಘೋಷಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿತ್ತು. ಈ ಪಟ್ಟಿಯಲ್ಲಿ ಬಾಲಿವುಡ್‌ ನಟಿ ಕಂಗನಾ ರಣಾವತ್‌ (Kangana Ranaut)ಗೆ ತವರು ರಾಜ್ಯ ಹಿಮಾಚಲ ಪ್ರದೇಶದ (Himachal Pradesh) ಮಂಡಿ (Mandi) ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಕಂಗನಾ ಮಂಡಿ ಕ್ಷೇತ್ರದಲ್ಲಿ ಕಾಣಿಸಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ. ಹಲವು ತಿಂಗಳುಗಳಿಂದ ಕಂಗನಾ ರಣಾವತ್ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಸುದ್ದಿ ಇತ್ತು. ಅವರು ಕೂಡ ಕೃಷ್ಣ ಕಣ್ಬಿಟ್ಟರೆ ರಾಜಕೀಯಕ್ಕೆ ಬರೋದು ದೊಡ್ಡ ವಿಷಯವೇ ಅಲ್ಲ ಎಂದೂ ಹೇಳಿದ್ದರು. ಜೊತೆಗೆ ರಾಜಕೀಯ ಮುಖಂಡರನ್ನು ಭೇಟಿ ಮಾಡುವ ಮೂಲಕ ಟಿಕೆಟ್ ಬೇಡಿಕೆಯನ್ನೂ ಇಟ್ಟಿದ್ದರು. ಕೊನೆಗೂ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಹೇಮಾ ಮಾಲಿನಿ

    ಬಾಲಿವುಡ್ ನಟಿ ಹೇಮಾ ಮಾಲಿನಿ (Hema Malini) 2024ರ ಲೋಕಸಭೆ ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ 2ನೇ ಬಾರಿ ಲೋಕಸಭೆ ಚುನಾವಣೆಗೆ (Loksabha Elections 2024) ನಿಲ್ಲುವ ಮೂಲಕ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 1999ರಲ್ಲಿ ವಿನೋದ್ ಖನ್ನಾ ಪರವಾಗಿ ಹೇಮಾ ಮಾಲಿನಿ ಪ್ರಚಾರ ಮಾಡಿದ್ದರು. 2004ರಲ್ಲಿ ಅಫಿಷಿಯಲ್ ಆಗಿ ಬಿಜೆಪಿಗೆ ಸೇರ್ಪಡೆಯಾದರು. 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಜಯಂತ್ ಚೌಧರಿ ಅವರನ್ನು ಸೋಲಿಸಿ ಹೇಮಾ ಮಾಲಿನಿ ಮಥುರಾದಲ್ಲಿ ಗೆದ್ದು ಬೀಗಿದ್ದರು. ಇದೀಗ 3ನೇ ಬಾರಿಯು ಮಥುರಾದಿಂದಲೇ ನಟಿ ಲೋಕಸಭಾ ಎಲೆಕ್ಷನ್‌ಗೆ ನಿಂತಿದ್ದಾರೆ.

    ಸ್ಮೃತಿ ಇರಾನಿ

    ಕಿರುತೆರೆಯ ಖ್ಯಾತ ನಟಿಯಾಗಿದ್ದ ಸ್ಮೃತಿ ಇರಾನಿ (Smriti Irani), ಆನಂತರ ಕಿರುತೆರೆಯಿಂದ ದೂರವಾಗಿ ರಾಜಕಾರಣಕ್ಕೆ ಪ್ರವೇಶ ಮಾಡಿದರು. 2019 ರಲ್ಲಿ ಕಾಂಗ್ರೆಸ್ ಭದ್ರಕೋಟೆಯಾದ ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಗೆಲುವು ಸಾಧಿಸಿದ್ದರು. ನಂತರ ಮಂತ್ರಿಯಾಗಿಯೂ ಕೆಲಸ ಮಾಡಿದವರು. ಈಗ ಸ್ಮೃತಿ ಇರಾನಿ ಅವರಿಗೆ ಮತ್ತೊಮ್ಮೆ ಉತ್ತರ ಪ್ರದೇಶದ ಅದೇ ಕ್ಷೇತ್ರವನ್ನು ಸ್ಪರ್ಧೆಗೆ ನೀಡಲಾಗಿದೆ.

    ಲಾಕೆಟ್ ಚಟರ್ಜಿ

    ಬಂಗಾಳಿ ಚಲನಚಿತ್ರ ಚಿತ್ರ ನಟಿ ಹಾಗೂ ಜನಪ್ರಿಯ ಡಾನ್ಸ್ ಆಗಿರುವ ಲಾಕೆಟ್ ಚಟರ್ಜಿ (Locket chatterjee) ಅವರಿಗೂ ಈ ಬಾರಿ ಬಿಜೆಪಿ ಟಿಕೆಟ್ ಘೋಷಿಸಿದೆ. ಪಶ್ಚಿಮ ಬಂಗಾಳದ ಹೂಗ್ಲಿ ಕ್ಷೇತ್ರದಿಂದ ಕಳೆದ ಬಾರಿ ಗೆದ್ದ ಇವರಿಗೆ, ಈ ಬಾರಿಯೂ ಅದೇ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದ್ದು, ಈ ಬಾರಿಯೂ ಅಷ್ಟೇ ಹುರುಪಿನಿಂದ ಅವರು ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.

    ನವನೀತ್ ಕೌರ್

    ಲೋಕಸಭೆ ಅಖಾಡಕ್ಕೆ ಸಿನಿಮಾ ಕಲಾವಿದರಿಂದ ರಂಗೇರುತ್ತಿದೆ. ಈಗಾಗಲೇ ಕಂಗನಾ ರಣಾವತ್ (Navneet Kaur) ಸೇರಿದಂತೆ ಹಲವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಅದರಂತೆ  ತನ್ನ 7ನೇ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಅದರಲ್ಲಿ ಮಹಾರಾಷ್ಟ್ರ ಮೂಲದ ನಟಿ, ಕನ್ನಡದಲ್ಲೂ ದರ್ಶನ್ ಚಿತ್ರದಲ್ಲಿ ನಟಿಸಿರುವ ನವನೀತ್ ಕೌರ್ ರಾಣಾಗೆ ಟಿಕೆಟ್ ಘೋಷಣೆ ಮಾಡಿದೆ.

    ನವನೀತ್ ಕೌರ್ ಗೆ ಚುನಾವಣೆ ಹೊಸದೇನೂ ಅಲ್ಲ. ಈಗಾಗಲೇ ಅವರು ಸಂಸದೆಯಾಗಿ ಗುರುತಿಸಿಕೊಂಡಿದ್ದಾರೆ. ಅಮರಾತಿಯಲ್ಲಿ ಕಳೆದ ಬಾರಿ ಗೆದ್ದಿದ್ದಾರೆ. ಆದರೆ, ಇತ್ತಿಚೆಗಷ್ಟೇ ಅವರು ಬಿಜೆಪಿ ಸೇರಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿಯನ್ನು ಮತ್ತಷ್ಟು ಬಲ ಪಡಿಸಲು ತಾನು ಬಿಜೆಪಿ ಸೇರಿಕೊಂಡಿರುವುದಾಗಿ ಹೇಳಿದ್ದರು. ಬಿಜೆಪಿ ಸೇರಿದ ಬೆನ್ನಲ್ಲೇ ಅವರಿಗೂ ಟಕೆಟ್ ಘೋಷಣೆ ಆಗಿದೆ.

     

    2019ರ ಸಾರ್ವತ್ರೀಕ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ನಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಜಂಟಿ ಅಭ್ಯರ್ಥಿಯಾಗಿ ಅಮರಾವತಿಯಲ್ಲಿ ಸ್ಪರ್ಧೆ ಮಾಡಿದ್ದ ನವನೀತ್ ಕೌರ್ ಗೆಲುವು ಪಡೆದು ಸಂಸದರಾಗಿ ಆಯ್ಕೆಯಾಗಿದ್ದರು. ಲೋಕಸಭೆಗೆ ಆಯ್ಕೆಯಾದ ಬಳಿಕ ಸಂಸತ್‍ನಲ್ಲಿ ಹಲವು ವಿಚಾರಗಳ ಕುರಿತು ಧ್ವನಿ ಎತ್ತಿದ್ದರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಿಂದಿ ಭಾಷೆಗಳ ಚಿತ್ರಗಳಲ್ಲಿ ನವನೀತ್ ಕೌರ್ ನಟಿಸಿದ್ದಾರೆ.

  • ದರ್ಶನ್ ಜೊತೆ ನಟಿಸಿದ್ದ ನಟಿ ಈಗ ಸಂಸದೆ

    ದರ್ಶನ್ ಜೊತೆ ನಟಿಸಿದ್ದ ನಟಿ ಈಗ ಸಂಸದೆ

    ಮುಂಬೈ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ನಟಿಸಿದ್ದ ನಾಯಕಿಯೊಬ್ಬರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು, ಮಹಾರಾಷ್ಟ್ರದ ಅಮರಾವತಿಯ ನೂತನ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.

    `ದರ್ಶನ್’ ಚಿತ್ರದಲ್ಲಿ ನಟಿಸಿದ್ದ ನಟಿ ನವನೀತ್ ಕೌರ್ ರಾಣಾ(34) ಇದೀಗ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಯುವ ಸ್ವಾಭಿಮಾನ ಪಕ್ಷದ(ವೈಎಸ್‍ಪಿ) ಅಭ್ಯರ್ಥಿಯಾಗಿ ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದಲ್ಲಿ ನವನೀತ್ ಅವರು ಶಿವಸೇನೆಯ ಆನಂದ್‍ರಾವ್ ಅದ್ಸಲ್ ವಿರುದ್ಧ ಸ್ಪರ್ಧಿಸಿದ್ದರು. 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಆನಂದ್ ರಾವ್ ಅವರನ್ನು ಈ ಬಾರಿ 37,295 ಮತಗಳಿಂದ ಸೋಲಿಸಿ ಅಚ್ಚರಿಯ ರೀತಿಯಲ್ಲಿ ನವನೀತ್ ಗೆಲುವು ಸಾಧಿಸಿದ್ದಾರೆ.

    ನವನೀತ್ ಅವರ ಪತಿ ರವಿ ರಾಣಾ ಅಮರಾವತಿ ಕ್ಷೇತ್ರದಲ್ಲಿ ವಿಧಾನಸಭಾ ಸದಸ್ಯರಾಗಿದ್ದು, ಅವರೇ ಸ್ಥಾಪಿಸಿರುವ ವೈಎಸ್‍ಪಿ ಪಕ್ಷದಿಂದ 2014ರ ಚುನಾವಣೆಯಲ್ಲಿ ಕೂಡಾ ನವನೀತ್ ಸ್ಪರ್ಧಿಸಿದ್ದರು. ಆಗ ಬರೋಬ್ಬರಿ 1.36 ಲಕ್ಷ ಮತಗಳ ಅಂತರದಿಂದ ಆನಂದ್‍ರಾವ್ ಅವರ ವಿರುದ್ಧವೇ ಸೋತಿದ್ದರು.

    ಈ ಬಾರಿ ಕಾಂಗ್ರೆಸ್ ಮತ್ತು ವೈಎಸ್‍ಪಿ ಮೈತ್ರಿಕೂಟದ ಬೆಂಬಲದೊಂದಿಗೆ ನವನೀತ್ ಕಣಕ್ಕೆ ಇಳಿದು ಭರ್ಜರಿ ಜಯ ಗಳಿಸಿದ್ದಾರೆ. ಅಲ್ಲದೆ ಈ ಮೈತ್ರಿಕೂಟದಲ್ಲಿ ಗೆದ್ದ ಏಕೈಕ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ನವನೀತ್ ಪಾತ್ರರಾಗಿದ್ದಾರೆ. ನವನೀತ್ ಕೌರ್ ಅವರಿಗೆ 5,07,844 ಮತಗಳು ಬಿದ್ದಿದ್ದರೆ, ಆನಂದ್ ರಾವ್ ಅವರಿಗೆ 4,70,549 ಮತಗಳು ಬಿದ್ದಿದೆ. ಚುನಾವಣಾ ಕಣದಲ್ಲಿ 25 ಮಂದಿ ಸ್ಪರ್ಧಿಸಿದ್ದರು.

    ಮುಂಬೈನಲ್ಲಿ ಜನಿಸಿದ ನವನೀತ್ ಕೌರ್ ತಂದೆ-ತಾಯಿ ಪಂಜಾಬ್ ಮೂಲದವರಾಗಿದ್ದು, ತಂದೆ ಸೇನಾಧಿಕಾರಿಯಾಗಿದ್ದರು. ಪಿಯುಸಿ ಅಧ್ಯಯನ ಅರ್ಧಕ್ಕೆ ಕೈಬಿಟ್ಟಿದ್ದ ನವನೀತ್ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಬಳಿಕ ಚಿತ್ರರಂಗ ಪ್ರವೇಶಿಸಿ ಅವರು, ಕನ್ನಡ, ತೆಲುಗು, ಮಲೆಯಾಳಿ, ಹಿಂದಿ ಹಾಗು ಪಂಜಾಬಿ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು.

    https://www.youtube.com/watch?v=wqLMb0A_FsY