Tag: ನವದುರ್ಗೆ

  • Photo Gallery | ಮಂಗಳೂರು ದಸರಾ ವೈಭವ – ಶಾರದಾ ಮಾತೆಗೆ ಅಷ್ಟ ದಿನದ ಅಲಂಕಾರ

    Photo Gallery | ಮಂಗಳೂರು ದಸರಾ ವೈಭವ – ಶಾರದಾ ಮಾತೆಗೆ ಅಷ್ಟ ದಿನದ ಅಲಂಕಾರ

    ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವದ ಸಂಭ್ರಮ ಮನೆಮಾಡಿದೆ. 9 ದಿನಗಳ ಕಾಲ ಈ ಕ್ಷೇತ್ರದಲ್ಲಿ ಪೂಜಿಸಲ್ಪಡುವ ನವದುರ್ಗೆಯರ ಮೂರ್ತಿಯೊಂದಿಗೆ ಶಾರದಾ ಮಾತೆಯ ಮೂರ್ತಿಯೂ ಪ್ರತಿಷ್ಠಾಪನೆಗೊಂಡಿದೆ. ಶಾರದಾ ಮಾತ್ರೆಗೆ ದಿನಕ್ಕೊಂದು ರೀತಿಯಲ್ಲಿ ವಿಶೇಷ ಅಲಂಕಾರ ಮಾಡುವ ಮೂಲಕ ದಸರಾ ವೈಭವಕ್ಕೆ ಮೆರುಗು ನೀಡಲಾಗುತ್ತಿದೆ. ಮಾತೆ ದರ್ಶನಕ್ಕೆ ಬರುವ ಭಕ್ತರು ಅದ್ಧೂರಿ ಅಲಂಕಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹಾಗೆಯೇ ಕುದ್ರೋಳಿ‌ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪೂಜಿಸಲ್ಪಡುವ ಶಾರದಾ ಮಾತೆಗೆ ನವರಾತ್ರಿಯ 8ನೇ ದಿನದ ದಿವ್ಯಾಲಂಕಾರ SPOTLIGHT PRODUCTIONS ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ…

  • ಕೈ ಬೀಸಿ ಕರೆಯುತ್ತಿದೆ ಮಂಗಳೂರು ದಸರಾ – ಬರೋಬ್ಬರಿ 22 ಲಕ್ಷ ಬಲ್ಬುಗಳಿಂದ ಅಲಂಕಾರ

    ಕೈ ಬೀಸಿ ಕರೆಯುತ್ತಿದೆ ಮಂಗಳೂರು ದಸರಾ – ಬರೋಬ್ಬರಿ 22 ಲಕ್ಷ ಬಲ್ಬುಗಳಿಂದ ಅಲಂಕಾರ

    ಮಂಗಳೂರು: ದಸರಾ ಎಂದರೆ ಮೊದಲು ನೆನಪಾಗುವುದು ಮೈಸೂರು ದಸರಾ(Mysuru Dasara). ಇತ್ತೀಚಿನ ದಿನಗಳಲ್ಲಿ ಮಂಗಳೂರು ದಸರಾ (Mangaluru Dasara) ಕೂಡ ಮೈಸೂರು ದಸರಾದಷ್ಟೇ ಪ್ರಖ್ಯಾತಿ ಪಡೆದಿದೆ. ಇದೀಗ ದಸರಾ ಸಂಭ್ರಮದಲ್ಲಿ ಬೆಳಕಿನ ಚಿತ್ತಾರದಿಂದ ಎಲ್ಲರನ್ನೂ ಸ್ವಾಗತಿಸಲು ಸಿದ್ಧವಾಗಿ ನಿಂತಿದೆ.

    ಮಂಗಳೂರು ದಸರಾ ನಡೆಯುತ್ತಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ (Kudroli Shri Gokarnanatheshwara Kshetra) ಸಂಜೆಯಾಗುತ್ತಿದ್ದಂತೆ ಭೂಲೋಕದ ಸ್ವರ್ಗದಂತೆ ಕಂಗೊಳಿಸುತ್ತದೆ. ದಸರಾ ಮೆರವಣಿಗೆ (Dasara Procession) ಹಾದುಹೋಗುವ ನಗರದ ಸುಮಾರು 7ಕಿ.ಮೀ. ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಬರೋಬ್ಬರಿ 22 ಲಕ್ಷ ಬಲ್ಬುಗಳನ್ನು ಬಳಸಿ ದೀಪಾಲಂಕಾರ ಮಾಡಲಾಗಿದೆ. ಈ ಬೆಳಕಿನ ಚಿತ್ತಾರ ಮಂಗಳೂರು ದಸರಾವನ್ನು ಮತ್ತಷ್ಟು ಕಂಗೊಳಿಸುವಂತೆ ಮಾಡಿದೆ.ಇದನ್ನೂ ಓದಿ: BBK 11: ಕಂಟೆಂಟ್‌ಗೋಸ್ಕರ ಲವ್ ಆಗುತ್ತಾ?: ಚೈತ್ರಾಗೆ ಅನುಷಾ ಪ್ರಶ್ನೆ

    7 ಕಿ.ಮೀ. ರಸ್ತೆಯುದ್ದಕ್ಕೂ ಮಾಡಿರುವ ವಿದ್ಯುತ್ ದೀಪಾಲಂಕಾರದಲ್ಲಿ 10 ಲಕ್ಷ ದೊಡ್ಡ ಪ್ರಮಾಣದ ಬಲ್ಬ್ಗಳು ಸೇರಿದಂತೆ ಒಟ್ಟು 22 ಲಕ್ಷಕ್ಕೂ ಅಧಿಕ ಬಲ್ಬ್ಗಳಿಂದ ಶೃಂಗರಿಸಲಾಗಿದೆ. ದಸರಾದ ಹಿನ್ನೆಲೆಯಲ್ಲಿ ನವರಾತ್ರಿ ಆರಂಭಗೊಂಡ ಮೊದಲ ದಿನದಿಂದ 10 ದಿನಗಳ ಕಾಲ ಸಂಜೆ 7 ಗಂಟೆಯಾಗುತ್ತಿದ್ದAತೆ ನಗರವು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತದೆ. ವಾಹನ ಜನಜಂಗುಳಿಯಿಂದ ಕೂಡಿದ ರಸ್ತೆಗಳು ಇದೀಗ ಬೆಳಕಿನ ಚಿತ್ತಾರದಿಂದ ಮಧುವಣಗಿತ್ತಿಯಂತೆ ಅಲಂಕೃತಗೊಂಡಿದೆ.

    ಮಂಗಳೂರು ದಸರಾವನ್ನು ಕಟ್ತುಂಬಿಕೊಳ್ಳಲು ರಾಜ್ಯದ ಬೇರೆ ಬೇರೆ ಕಡೆಯಿಂದ ಜನರು ಆಗಮಿಸುತ್ತಾರೆ. ಅ.13 ರಂದು ಅದ್ದೂರಿ ದಸರಾ ಮೆರವಣಿಗೆ ನಡೆಯಲಿದ್ದು, ಭರ್ಜರಿಯಾಗಿ ಅಲಂಕೃತಗೊಂಡಿದೆ.ಇದನ್ನೂ ಓದಿ: ಇವಿಎಂ ಹ್ಯಾಕ್‌ ಮಾಡಲಾಗಿದೆ: ಹರಿಯಾಣ ಸೋಲಿನ ಬಗ್ಗೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು

  • Photo Gallery | ಮಂಗಳೂರು ನವರಾತ್ರಿ ಉತ್ಸವ – ಶಾರದಾ ಮಾತೆಗೆ 6ನೇ ದಿನದ ಶೃಂಗಾರ

    Photo Gallery | ಮಂಗಳೂರು ನವರಾತ್ರಿ ಉತ್ಸವ – ಶಾರದಾ ಮಾತೆಗೆ 6ನೇ ದಿನದ ಶೃಂಗಾರ

    ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವ ಕಳೆಗಟ್ಟಿದೆ. 9 ದಿನಗಳ ಕಾಲ ಈ ಕ್ಷೇತ್ರದಲ್ಲಿ ಆರಾಧನೆಗೊಳ್ಳಲಿರುವ ನವದುರ್ಗೆಯರ ಮೂರ್ತಿಯೊಂದಿಗೆ ಶಾರದಾ ಮಾತೆಯ ಮೂರ್ತಿಯನ್ನೂ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿದಿನ ಶಾರದಾ ಮಾತೆಗೆ ವಿಭಿನ್ನ ಅಲಂಕಾರ ಮಾಡುವ ಮೂಲಕ ಗಮನ ಸೆಳೆಯಲಾಗುತ್ತಿದೆ. ಹಾಗೆಯೇ ಕುದ್ರೋಳಿ‌ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ‌ಪ್ರತಿಷ್ಠಾಪನೆಗೊಂಡಿರುವ ಶಾರದಾ ಮಾತೆಗೆ ನವರಾತ್ರಿಯ ಆರನೇ ದಿನದ ಶೃಂಗಾರ ಮಾಡಿದ್ದು, ವೈಭವಪೂರಿತ ಅಲಂಕಾರ ದೃಶ್ಯ SPOTLIGHT PRODUCTIONS ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ…

  • Photo Gallery | ಮಂಗಳೂರಿನಲ್ಲಿ ಕಳೆಗಟ್ಟಿದ ದಸರಾ ಸಂಭ್ರಮ – ಶಾರದಾ ಮಾತೆಗೆ ದಿವ್ಯಾಲಂಕಾರ

    Photo Gallery | ಮಂಗಳೂರಿನಲ್ಲಿ ಕಳೆಗಟ್ಟಿದ ದಸರಾ ಸಂಭ್ರಮ – ಶಾರದಾ ಮಾತೆಗೆ ದಿವ್ಯಾಲಂಕಾರ

    ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಉತ್ಸವಕ್ಕೆ ವೈಭವೋಪೇತ ಚಾಲನೆ ಸಿಕ್ಕಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ಈ ಕ್ಷೇತ್ರದಲ್ಲಿ ಆರಾಧನೆಗೊಳ್ಳಲಿರುವ ನವದುರ್ಗೆಯರ ಮೂರ್ತಿಯೊಂದಿಗೆ ಶಾರದಾ ಮಾತೆಯ ಮೂರ್ತಿಯನ್ನೂ ಪ್ರತಿಷ್ಠಾಪನೆ ಮಾಡಲಾಗಿದೆ. ಗಣಪತಿ, ಶಾರದಾ ಮಾತೆ, ಆದಿಶಕ್ತಿಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸಿದ್ಧಿಧಾತ್ರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತೆ ಮಹಾಗೌರಿಯರಬನ್ನೂ ಇಲ್ಲಿನ ಸುಂದರ ಕಲಾಕೃತಿಗಳ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಸಂದರ್ಭದಲ್ಲಿ ಶಾರದಾ ಮಾತೆಯ ಅದ್ಧೂರಿ ಅಲಂಕಾರ, ದಸರಾ ಸಂಭ್ರಮದ ಕ್ಷಣಗಳು SPOTLIGHT PRODUCTIONS ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ…

     

  • ಮಂಗಳೂರು ದಸರಾಕ್ಕೆ ಅದ್ಧೂರಿ ಚಾಲನೆ – ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನವದುರ್ಗೆ ಸಹಿತ ಶಾರದಾ ಮಾತೆ ಪ್ರತಿಷ್ಠಾಪನೆ

    ಮಂಗಳೂರು ದಸರಾಕ್ಕೆ ಅದ್ಧೂರಿ ಚಾಲನೆ – ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನವದುರ್ಗೆ ಸಹಿತ ಶಾರದಾ ಮಾತೆ ಪ್ರತಿಷ್ಠಾಪನೆ

    – ದಸರಾಕ್ಕೆ ಚಾಲನೆ ನೀಡಿದ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ

    ಮಂಗಳೂರು: ಇಲ್ಲಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ (Kudroli Shri Gokarnanatheshwara Kshetra) ನಡೆಯುವ ಮಂಗಳೂರು ದಸರಾಕ್ಕೆ ಗುರುವಾರ ಚಾಲನೆ ದೊರೆಯಿತು. ನವರಾತ್ರಿಯ ಒಂಬತ್ತು ದಿನಗಳ ಕಾಲ ಈ ಕ್ಷೇತ್ರದಲ್ಲಿ ಆರಾಧನೆಗೊಳ್ಳಲಿರುವ ನವದುರ್ಗೆಯರ ಮೂರ್ತಿ (Navadurga Idol) ಪ್ರತಿಷ್ಠಾನೆ ನಡೆಯಿತು. ಈ ಬಾರಿಯ ದಸರಾಕ್ಕೆ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಚಾಲನೆ ನೀಡಿದರು.

    ಮಂಗಳೂರು ದಸರಾ ಮಹೋತ್ಸವವನ್ನು ಆಯೋಜಿಸುತ್ತಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಇಂದಿನಿಂದ ಒಂಬತ್ತು ದಿನಗಳ ಕಾಲ ನಡೆಯಲಿರುವ ನವರಾತ್ರಿ ಮಹೋತ್ಸವ ‘ಮಂಗಳೂರು ದಸರಾ’ಕ್ಕಿಂದು (Mangaluru Dasara) ವಿದ್ಯುಕ್ತ ಚಾಲನೆ ದೊರೆಯಿತು. ಕ್ಷೇತ್ರದಲ್ಲಿ ವಿಘ್ನವಿನಾಶಕ ಗಣೇಶ, ವಿದ್ಯಾದೇವಿ ಶಾರದಾ ಮಾತೆ, ಆದಿಶಕ್ತಿ ಹಾಗೂ ನವದುರ್ಗೆಯರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಇದನ್ನೂ ಓದಿ: ಈ ಮೈಸೂರು ದಸರಾದ ಗಜಪಡೆ – ಅಭಿಮನ್ಯು & ಟೀಂ ಬಗ್ಗೆ ಇಲ್ಲಿದೆ ಫುಲ್‌ ಡಿಟೇಲ್ಸ್‌ 

    ಎಲ್ಲಾ ದೇವರನ್ನು ಏಕಕಾಲಕ್ಕೆ ಪ್ರತಿಷ್ಠಾಪಿಸಲಾಗಿದ್ದು, 9 ದಿನಗಳ ಕಾಲ ಪೂಜಾ ಕೈಂಕರ್ಯ ನೆರವೇರಲಿದೆ. ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಈ ಬಾರಿಯ ಮಂಗಳೂರು ದಸರಾಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಇದನ್ನೂ ಓದಿ: ಶಿವಮೊಗ್ಗ ದಸರಾಗೆ ವೈಭವದ ಚಾಲನೆ

    ಈ ಸುಂದರ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಂಡ ನವದುರ್ಗೆಯರು ದೇಶ ವಿದೇಶದ ಭಕ್ತರನ್ನು ಸೆಳೆಯುತ್ತದೆ. ಗಣಪತಿ, ಶಾರದಾ ಮಾತೆ, ಆದಿಶಕ್ತಿಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸಿದ್ದಿದಾತ್ರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತೆ, ಮಹಾಗೌರಿಯರನ್ನ ಇಲ್ಲಿನ ಸುಂದರ ಕಲಾಕೃತಿಗಳ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಭೂಲೋಕದ ಸ್ವರ್ಗದಂತಿರುವ ಸಭಾಂಗಣದಲ್ಲಿ ಅತ್ಯಾಕರ್ಷ ಸಂಯೋಜನೆಯಲ್ಲಿ ಈ 12 ದೇವರುಗಳನ್ನು ನೋಡುವುದು ಭಕ್ತರ ಕಣ್ಣಿಗೊಂದು ಹಬ್ಬವೇ ಸರಿ. ಇದನ್ನೂ ಓದಿ: ವಿಜಯನಗರ ಸಾಮ್ರಾಜ್ಯದಿಂದ ಮೈಸೂರಿಗೆ ದಸರಾ ಸಾಗಿಬಂದ ಹಾದಿ – ನಾಡಹಬ್ಬ ಸಂಸ್ಕೃತಿ ನಿಮಗೆಷ್ಟು ಗೊತ್ತು?

    ಮೈಸೂರು ದಸರಾಕ್ಕೆ ಇದು ಸರಿಸಾಟಿ ಎಂದು ಭಕ್ತರು ಬಣ್ಣಿಸುತ್ತಾರೆ. ಈ ರೀತಿ ನವರಾತ್ರಿಯ ಸಂದರ್ಭ ದೇವರ ಪ್ರತಿಷ್ಠಾಪನೆ ದೇಶದ ಬೇರೆಲ್ಲೂ ಆಗೋದಿಲ್ಲ ಅನ್ನುವುದು ಇಲ್ಲಿನ ವಿಶೇಷತೆ. ಇದನ್ನೂ ಓದಿ: ದಿನೇಶ್ ಗುಂಡೂರಾವ್ ಗೋಹತ್ಯೆಗೆ ಬೆಂಬಲ ನೀಡುತ್ತಿದ್ದಾರೋ, ಗೋಮಾಂಸ ತಿನ್ನೋದನ್ನ ಸಮರ್ಥನೆ ಮಾಡ್ತಿದ್ದಾರೋ?- ಸಿ.ಟಿ.ರವಿ

    ಕ್ಷೇತ್ರದಲ್ಲಿ ಒಂಬತ್ತು ದಿನಗಳ ಕಾಲ ಪೂಜೆಗೊಳ್ಳುವ ಈ ಎಲ್ಲಾ ಮೂರ್ತಿಗಳನ್ನು ಅಕ್ಟೋಬರ್ 13 ರಂದು ದೇವಸ್ಥಾನದಲ್ಲೇ ವಿಸರ್ಜನಾ ಪೂಜೆ ನಡೆಸಿ ಕ್ಷೇತ್ರಕ್ಕೆ ಪ್ರದಕ್ಷಿಣೆ ಹಾಕಿ, ಬಳಿಕ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಗುವುದು. ಸಂಭ್ರಮದ ಮಂಗಳೂರು ದಸರಾಕ್ಕೆ ನೀವೂ ಬನ್ನಿ.

  • Navratri 2023: ನವರಾತ್ರಿಗೆ ನವರಂಗು – ಒಂದೊಂದು ಬಣ್ಣದಲ್ಲೂ ಅಡಗಿದೆ ದುರ್ಗೆಯ ಶಕ್ತಿ

    Navratri 2023: ನವರಾತ್ರಿಗೆ ನವರಂಗು – ಒಂದೊಂದು ಬಣ್ಣದಲ್ಲೂ ಅಡಗಿದೆ ದುರ್ಗೆಯ ಶಕ್ತಿ

    ದೇಶಾದ್ಯಂತ ವಿವಿಧೆಡೆ ವಿವಿಧ ರೀತಿಯಲ್ಲಿ ನವರಾತ್ರಿ ಹಬ್ಬ (Navaratri Festival) ಆಚರಿಸಲಾಗುತ್ತದೆ. 9 ದಿನಗಳ ಕಾಲ ಆಚರಿಸುವ ಪ್ರಮುಖ ಹಿಂದೂ ಹಬ್ಬಗಳಲ್ಲಿ ಇದೂ ಒಂದು. ಆ 9 ದಿನಗಳು ನವದುರ್ಗೆಯರಿಗೆ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗುತ್ತವೆ. ಎಲ್ಲೆಲ್ಲೂ ರಂಗುರಂಗಾದ ಬಣ್ಣಗಳು ಹಬ್ಬದಲ್ಲಿ ಮೇಳೈಸುತ್ತವೆ. ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿರುತ್ತವೆ. ನವರಾತ್ರಿಯ 9 ಬಣ್ಣಗಳ ವಿಶೇಷತೆ ಏನು ಎಂಬುದನ್ನು ಯೋಚಿಸಿದ್ದೀರಾ? ಹೌದು, ನವರಾತ್ರಿಯ 9 ಬಣ್ಣಗಳಿಗೆ ಒಂದೊಂದು ಅರ್ಥವಿದೆ. ಆ ಒಂದೊಂದು ಬಣ್ಣಗಳು ನವದುರ್ಗೆಯರನ್ನು ಪ್ರತಿನಿಧಿಸುತ್ತವೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ…..

    ಮೊದಲ ದಿನ
    ನವರಾತ್ರಿಯ ಮೊದಲ ದಿನ ಹಳದಿ ಬಣ್ಣದ ಸಂಕೇತವಾಗಿರುತ್ತದೆ. ಪರ್ವತಗಳ ತಾಯಿ ಶೈಲಪುತ್ರಿಯನ್ನು ಈ ಬಣ್ಣ ಪ್ರತಿನಿಧಿಸುತ್ತದೆ. ತಾಯಿ ಶೈಲಪುತ್ರಿ ದೇವಿಯು ಪರಿಸರದ ತಾಯಿಯಾಗಿದ್ದು ಶಕ್ತಿ ಸ್ವರೂಪಿಣಿ ಕೂಡ ಹೌದು. ಹಳದಿಯು ಉಜ್ವಲತೆ, ಖುಷಿ ಮತ್ತು ಉತ್ಸಾಹದ ಸಂಕೇತ. ನವರಾತ್ರಿಯ ಶುಭಾರಂಭಕ್ಕೆ ಹಳದಿಯು ಒಂದು ಶಕ್ತಿಯಾಗಿದೆ.

    2ನೇ ದಿನ
    ನವರಾತ್ರಿಯ 2ನೇ ದಿನವು ಬ್ರಹ್ಮಚಾರಿಣಿ ಮಾತೆಗೆ ಅರ್ಪಣೆ. ಪಾರ್ವತಿಯಾಗಿ ಹಿಮಾಲಯನ ಪುತ್ರಿಯಾಗಿ ಜನಿಸಿದ ದೇವಿಯು ಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ. ಕಠಿಣ ತಪಸ್ಸು ಮಾಡಿದ್ದರಿಂದ ದೇವಿಗೆ ತಪಶ್ಚಾರಿಣೀ ಅರ್ಥಾತ್‌ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂತು. ಬ್ರಹ್ಮಚಾರಿಣಿಯ ತಪಸ್ಸಿಗೆ ಮೆಚ್ಚಿ ಶಿವನು ಒಲಿಯುತ್ತಾನೆ. ಈ ದಿನ ಬಿಳಿ ಬಣ್ಣದ ಸಂಕೇತವಾಗಿದೆ. ಶ್ವೇತ ವರ್ಣವು ಶಾಂತಿಯನ್ನು ಸೂಚಿಸುತ್ತದೆ.

    3ನೇ ದಿನ
    ನವರಾತ್ರಿಗಳಲ್ಲಿ ಬರುವ 9 ವರ್ಣಗಳಲ್ಲಿ ಕೆಂಪು ಬಣ್ಣ ಅತ್ಯಂತ ಶಕ್ತಿಶಾಲಿ. ಈ ದಿನದಂದು ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ಪ್ರಕಾಶಮಾನವಾದ ಕೆಂಪು ಹೂವುಗಳಿಂದ ಮನೆಯನ್ನು ಅಲಂಕರಿಸಬಹುದು. ಜೊತೆಗೆ ಕೆಂಪು ಬಣ್ಣದ ಹಣ್ಣುಗಳನ್ನ ಪ್ರಸಾದವಾಗಿ ಅರ್ಪಿಸಬೇಕು. ಕೆಂಪು ಬಣ್ಣವು ಕೋಪದ ಸಂಕೇತ.

    4ನೇ ದಿನ
    ಕೂಷ್ಮಾಂಡ ದೇವಿಗೆ ನವರಾತ್ರಿಯ 4ನೇ ದಿನ ಅರ್ಪಣೆ. ಅಂದು ನೀಲಿ ಬಣ್ಣದ ಬಟ್ಟೆ ಧರಿಸಬೇಕು. ಈ ವರ್ಣವನ್ನು ಕೂಷ್ಮಾಂಡ ದುರ್ಗಾದೇವಿ ಮೆಚ್ಚಿಸಲು ಬಳಸಲಾಗುತ್ತದೆ. ನವರಾತ್ರಿಯಲ್ಲಿ ನೀಲಿ ಬಣ್ಣದ ಬಟ್ಟೆ ಧರಿಸಿ ದೇವಿಯನ್ನ ಪೂಜಿಸುವುದರಿಂದ ಆರೋಗ್ಯ, ಆಯಸ್ಸು, ಸಂಪತ್ತು ಲಭಿಸುತ್ತದೆ ಅನ್ನುವುದು ನಂಬಿಕೆ.

    5ನೇ ದಿನ
    ನವರಾತ್ರಿಯ 5ನೇ ದಿನವು ತಾಯಿ ಸ್ಕಂದಮಾತೆಗೆ ಅರ್ಪಣೆ. ಕಾರ್ತಿಕೇಯ ಅಥವಾ ಸ್ಕಂದನ ತಾಯಿಯೇ ಸ್ಕಂದ ಮಾತೆ. ಯುದ್ಧದ ಸಮಯದಲ್ಲಿ ಪೂಜಿಸುವ ದೇವಿ ಇವಳು. ಕೇಸರಿ ಬಣ್ಣವು ಖುಷಿ ಹಾಗೂ ಶಕ್ತಿಯ ಸಂಕೇತವಾಗಿರುವುದರಿಂದ ಅಂದು ಕೇಸರಿ ಬಣ್ಣವನ್ನು ಬಳಸಿದರೆ ಒಳಿತು.

    6ನೇ ದಿನ
    ನವರಾತ್ರಿಯ 6ನೇ ದಿನವು ಕಾತ್ಯಾಯನಿ ದೇವಿಗೆ ಮೀಸಲು. ಈ ದೇವಿಯ ಪ್ರಕಾಶಮಾನವಾದ ನಗುವು ಸೂರ್ಯನಿಗೆ ಭೂಮಿಯನ್ನು ಬೆಳಗುವ ಶಕ್ತಿ ನೀಡುತ್ತದೆ. ಸೂರ್ಯನು ಜೀವಂತವಾಗಿರುವಂತೆ ಈ ತಾಯಿ ನೋಡಿಕೊಳ್ಳುತ್ತಾಳೆ ಎಂಬ ನಂಬಿಕೆಯಿದೆ. ಅಂದು ಹಸಿರು ಬಣ್ಣದ ಬಟ್ಟೆ ಧರಿಸಬೇಕು. ಹಸಿರು ಪ್ರಕೃತಿ, ಶಕ್ತಿ, ಪರಿಸರ ಹಾಗೂ ಬೆಳವಣಿಗೆಯ ಸಂಕೇತ.

    7ನೇ ದಿನ
    ನವರಾತ್ರಿಯ 7ನೇ ದಿನವನ್ನು ತಾಯಿ ಕಾಳರಾತ್ರಿಗೆ ಅರ್ಪಿಸಲಾಗುತ್ತದೆ. ಅಂದು ಬೂದು ಬಣ್ಣ ಹೆಚ್ಚು ಸೂಕ್ತ. ಬೂದು ಬಣ್ಣವು ನಮ್ಮ ಮನಸ್ಸಿನ ಭಾವನೆಗಳ ಸಂಕೇತವಾಗಿದೆ. ಮನಸ್ಸಿನಲ್ಲಿರುವ ಕೆಟ್ಟ ವಿಷಯಗಳನ್ನು ತಾಯಿ ತೊಡೆದುಹಾಕುತ್ತಾಳೆ ಎಂಬುದು ಭಕ್ತರ ನಂಬಿಕೆ.

    8ನೇ ದಿನ
    ನವರಾತ್ರಿ 8ನೇ ದಿನ ತಾಯಿ ಮಹಾಗೌರಿಗೆ ಮೀಸಲಾಗಿದೆ. ಮಹಾಗೌರಿ ಆಧ್ಯಾತ್ಮಿಕ ಶಕ್ತಿಯೊಂದಿಗೆ ಜನರನ್ನು ಆಶೀರ್ವದಿಸುತ್ತಾಳೆ ಎಂಬ ನಂಬಿಕೆ ಇಂದಿಗೂ ಭಕ್ತರಲ್ಲಿ ಇದೆ. ಅಂದು ದೇವಿಗೆ ಪ್ರಿಯವಾದ ಗುಲಾಬಿ ಬಣ್ಣ ಧರಿಸುವುದು ಒಳಿತು. ಗುಲಾಬಿ ಬಣ್ಣವು ಶಾಂತಿ ಮತ್ತು ಬುದ್ಧಿವಂತಿಕೆಯ ಬಣ್ಣವಾದ್ದರಿಂದ ಅಂದು ದೇವಿ ಅಲಂಕಾರಕ್ಕೆ ಬಳಸಲಾಗುತ್ತದೆ.

    9ನೇ ದಿನ
    ನವರಾತ್ರಿಯ 9ನೇ ದಿನವು ತಾಯಿ ಸಿದ್ಧಿಧಾತ್ರಿಗೆ ಅರ್ಪಣೆ. ದೇವಿಯು ಜ್ಞಾನವನ್ನು ಕರುಣಿಸುತ್ತಾಳೆ. ಜೊತೆಗೆ ನಮ್ಮೆಲ್ಲರ ಗುರಿ ಮುಟ್ಟಲು ನೆರವಾಗುತ್ತಾಳೆ. ಅಂದು ದೇವಿಗೆ ಪ್ರಿಯವಾದ ನೇರಳೆ ಬಣ್ಣ ಧರಿಸಬೇಕು. ನೇರಳೆ ಬಣ್ಣವು ಆಕಾಂಕ್ಷೆಗಳ ಹಾಗೂ ಶಕ್ತಿಯ ಸಂಕೇತವಾಗಿರುತ್ತದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 7ನೇ ದಿನ ಕಾಲರಾತ್ರಿಯನ್ನು ಪೂಜೆ ಮಾಡೋದು ಯಾಕೆ?

    7ನೇ ದಿನ ಕಾಲರಾತ್ರಿಯನ್ನು ಪೂಜೆ ಮಾಡೋದು ಯಾಕೆ?

    ಗನ್ಮಾತೆ ದುರ್ಗೆಯ ಏಳನೇ ಶಕ್ತಿಯನ್ನು ಕಾಲರಾತ್ರಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇವಳ ಶರೀರದ ಬಣ್ಣವು ದಟ್ಟವಾದ ಅಂಧಕಾರದಂತೆ ಪೂರ್ಣವಾಗಿ ಕಪ್ಪಾಗಿದೆ. ತಲೆಯ ಕೂದಲೂ ಬಿಟ್ಟುಕೊಂಡು ಹರಡಿಕೊಂಡಿದೆ. ಕತ್ತಿನಲ್ಲಿ ಮಿಂಚಿನಂತೆ ಹೊಳೆಯುತ್ತಿರುವ ಮಾಲೆ ಇದ್ದು, ಮೂರುಕಣ್ಣುಗಳಿವೆ. ಈ ಮೂರು ಕಣ್ಣುಗಳು ಬ್ರಹ್ಮಾಂಡದಂತೆ ಗೋಲವಾಗಿದೆ. ಇವುಗಳ ಕಿರಣಗಳು ವಿದ್ಯುತ್ತಿನಂತೆ ಪಸರಿಸಿಕೊಂಡಿವೆ. ಇವಳ ವಾಹನ ಕತ್ತೆಯಾಗಿದ್ದು ನಾಲ್ಕು ಭುಜಗಳನ್ನು ಹೊಂದಿದ್ದಾಳೆ.

    ಮೇಲಕ್ಕೆ ಎತ್ತಿರುವ ಬಲಕೈಯ ವರಮುದ್ರೆಯಿಂದ ಎಲ್ಲರಿಗೂ ವರದಾನ ನೀಡಿದರೆ ಕೆಳಗಿನ ಬಲಕೈಯಲ್ಲಿ ಅಭಯ ಮುದ್ರೆ ಇದೆ. ಎಡಗಡೆಯ ಮೇಲಿನ ಕೈಯಲ್ಲಿ ಕಬ್ಬಿಣದ ಮುಳ್ಳು ಹಾಗೂ ಕೆಳಗಿನ ಕೈಯಲ್ಲಿ ಖಡ್ಗವಿದೆ. ಕಾಲರಾತ್ರಿ ದುರ್ಗೆಯ ಸ್ವರೂಪವು ನೋಡಲು ಅತ್ಯಂತ ಭಯಂಕರವಾಗಿ ಕಂಡರೂ ಇವಳು ಶುಭಫಲವನ್ನೇ ನೀಡುವ ಕಾರಣ ಈಕೆಯನ್ನು ಶುಭಂಶರೀ ಎಂದು ಕರೆಯುತ್ತಾರೆ.

    ನವರಾತ್ರಿಯ ಏಳನೇ ದಿನ ಕಾಲರಾತ್ರಿಯ ಉಪಾಸನೆಯ ವಿಧಾನವಿದೆ. ಈ ದಿನ ಸಾಧಕನ ಮನಸ್ಸು ‘ಸಹಸ್ರಾರ’ ಚಕ್ರದಲ್ಲಿ ನೆಲೆಗೊಳ್ಳುತ್ತದೆ. ಅವನಿಗಾಗಿ ಬ್ರಹ್ಮಾಂಡದ ಎಲ್ಲ ಸಿದ್ಧಿಗಳ ಬಾಗಿಲು ತೆರೆದುಕೊಳ್ಳುತ್ತದೆ. ಈ ಚಕ್ರದಲ್ಲಿ ಸ್ಥಿತವಾದ ಸಾಧಕನ ಮನಸ್ಸು ಪೂರ್ಣವಾಗಿ ತಾಯಿ ಕಾಲರಾತ್ರಿಯ ಸ್ವರೂಪದಲ್ಲೇ ಸ್ಥಿರವಾಗುತ್ತದೆ. ಅವಳ ಸಾಕ್ಷಾತ್ಕಾರದಿಂದ ಸಿಗುವ ಪುಣ್ಯಕ್ಕೆ ಅವನು ಭಾಗಿಯಾಗುತ್ತಾನೆ. ಅವನ ಸಮಸ್ತ ಪಾಪ-ವಿಘ್ನಗಳ ನಾಶವಾಗುತ್ತದೆ. ಅವನಿಗೆ ಅಕ್ಷಯ ಪುಣ್ಯ ಲೋಕಗಳ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ. ಇದನ್ನೂ ಓದಿ: ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡುವ 6ನೇ ಅವತಾರ ಕಾತ್ಯಾಯನೀ

    ಜಗನ್ಮಾತೆಯ ಕಾಲರಾತ್ರಿಯು ದುಷ್ಟರ ವಿನಾಶ ಮಾಡುವವಳಾಗಿದ್ದಾಳೆ. ದಾನವ, ದೈತ್ಯ, ರಾಕ್ಷಸ, ಭೂತ-ಪ್ರೇತ ಮುಂತಾದವು ಇವಳ ಸ್ಮರಣೆಯಿಂದಲೇ ಭಯಭೀತರಾಗಿ ಓಡಿ ಹೋಗುತ್ತವೆ. ಇವಳು ಗ್ರಹಬಾಧೆಗಳನ್ನೂ ಕೂಡ ದೂರ ಮಾಡುತ್ತಾಳೆ. ಇವಳ ಉಪಾಸಕರಿಗೆ ಅಗ್ನಿಯ, ಜಲ, ಶತು, ಮತ್ತು ರಾತ್ರಿಯ ಭಯ ಮುಂತಾದವುಗಳು ಎಂದೂ ಆಗುವುದಿಲ್ಲ. ಇವಳ ಕೃಪೆಯಿಂದ ಅವನು ಸರ್ವಥಾ ಭಯ ಮುಕ್ತನಾಗಿ ಹೋಗುತ್ತಾನೆ.

    ಕಾಲರಾತ್ರಿ ದೇವಿಯ ಸ್ವರೂಪದ ವಿಗ್ರಹವನ್ನು ತನ್ನ ಹೃದಯದಲ್ಲಿ ನೆಲೆಗೊಳಿಸಿ ಮನುಷ್ಯನು ಏಕನಿಷ್ಠ ಭಾವದಿಂದ ಅವಳ ಉಪಾಸನೆ ಮಾಡಬೇಕು. ಯಮ, ನಿಯಮ, ಸಂಮಯವನ್ನು ಅವನು ಪೂರ್ಣವಾಗಿ ಪಾಲಿಸಬೇಕಾಗುತ್ತದೆ. ಇದನ್ನೂ ಓದಿ: ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

     

  • ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡುವ 6ನೇ ಅವತಾರ ಕಾತ್ಯಾಯನೀ

    ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡುವ 6ನೇ ಅವತಾರ ಕಾತ್ಯಾಯನೀ

    ಗನ್ಮಾತೆ ದುರ್ಗೆಯ ಆರನೇ ಸ್ವರೂಪದ ಹೆಸರು ಕಾತ್ಯಾಯನೀ. ಕಾತ್ಯಾಯನೀ ಹೆಸರು ಬರಲು ಒಂದು ಪುರಾಣ ಕಥೆಯಿದೆ. ಭಗವತಿಯೂ ತನ್ನ ಪುತ್ರಿಯ ಅವತಾರದಲ್ಲಿ ಜನಿಸಬೇಕೆಂದು ಕಾತ್ಯಯನ ಮಹರ್ಷಿ ಹಲವು ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿದ್ದರು. ಕಾತ್ಯಯನ ಭಕ್ತಿಗೆ ಮೆಚ್ಚಿ ಭಗವತಿಯು ಅವರ ಈ ಪ್ರಾರ್ಥನೆಯನ್ನು ನಡೆಸಿಕೊಟ್ಟಳು.

    ಕೆಲ ಕಾಲಾಂತರದಲ್ಲಿ ಭೂಮಿಯಲ್ಲಿ ಮಹಿಷಾಸುರನ ಉಪಟಳ ಹೆಚ್ಚಾಗತೊಡಗಿತು. ಈ ಸಮಯದಲ್ಲಿ ಬ್ರಹ್ಮ, ವಿಷ್ಣು, ಈಶ್ವರ ಮತ್ತು ಎಲ್ಲ ದೇವತೆಗಳು ತಮ್ಮ-ತಮ್ಮ ತೇಜದ ಅಂಶವನ್ನಿತ್ತು ಮಹಿಷಾಸುರನ ವಿನಾಶಕ್ಕಾಗಿ ಓರ್ವ ದೇವಿಯನ್ನು ಸೃಷ್ಟಿಸಿದರು. ಬಳಿಕ ಆ ದೇವಿಯನ್ನು ಮಹರ್ಷಿ ಕಾತ್ಯಾಯನರು ಮೊಟ್ಟಮೊದಲ ಬಾರಿಗೆ ಪೂಜೆ ಮಾಡಿದರು. ಭಾದ್ರಪದ ಕೃಷ್ಣ ಚತುದರ್ಶಿಯಂದು ಆಶ್ವೀನ ಶುಕ್ಲ ಸಪ್ತಮಿ, ಅಷ್ಟಮಿ, ನವಮಿಯವರೆಗೆ ಮೂರು ದಿನ ಕಾತ್ಯಾಯನ ಋಷಿಯ ಪೂಜೆಯನ್ನು ಸ್ವೀಕರಿಸಿ ನಂತರ ದಶಮಿಯಂದು ಮಹಿಷಾಸುರನ್ನು ದೇವಿ ಸಂಹರಿಸಿದ್ದಳು. ಕಾತ್ಯಾಯನರು ಮೊದಲ ಪೂಜೆ ಮಾಡಿದ ಹಿನ್ನೆಲೆಯಲ್ಲಿ ದೇವಿಯನ್ನು ಕಾತ್ಯಾಯನೀ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ನವರಾತ್ರಿ ವಿಶೇಷ – ಸ್ಕಂದಮಾತೆಯನ್ನ ಪೂಜಿಸುವುದು ಏಕೆ?

    ಭಗವಾನ್ ಕೃಷ್ಣನನ್ನು ಪತಿಯಾಗಿ ಪಡೆಯಲು ಗೋಪಿಕೆಯರು ಕಾಳಿಂದಿ-ಯಮುನೆಯ ತೀರದಲ್ಲಿ ಕಾತ್ಯಾಯನಿಯನ್ನು ಪೂಜಿಸಿದ್ದರು. ಇವಳು ವ್ರಜಮಂಡಲದ ಅಧಿಷ್ಠಾತ್ರಿ ದೇವಿಯಾಗಿ ಪ್ರತಿಷ್ಠಿತವಾಗಿದ್ದಾಳೆ. ಇವಳ ಸ್ವರೂಪವು ಅತ್ಯಂತ ಭವ್ಯ ಹಾಗೂ ದಿವ್ಯವಾಗಿದೆ. ಇವಳ ಬಣ್ಣವು ಬಂಗಾರದಂತೆ ಹೊಳೆಯುತ್ತದೆ. ಇವಳಿಗೆ ನಾಲ್ಕು ಭುಜಗಳಿವೆ. ಬಲಗಡೆಯ ಮೇಲಿನ ಕೈಯು ಅಭಯ ಮುದ್ರೆಯಲ್ಲಿದೆ, ಕೆಳಗಿನ ಕೈಯು ವರಮುದ್ರೆಯಲ್ಲಿದೆ, ಎಡಗಡೆಯ ಮೇಲಿನ ಕೈಯಲ್ಲಿ ಖಡ್ಗವಿದೆ, ಕೆಳಗಿನ ಕೈಯಲ್ಲಿ ಕಮಲಪುಷ್ಪವಿದ್ದು ಇವಳ ವಾಹನ ಸಿಂಹವಾಗಿದೆ. ಇದನ್ನೂ ಓದಿ: ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?

    ಈ ದೇವಿಯ ಪೂಜೆಯ ದಿನದಂದು ಸಾಧಕನ ಮನಸ್ಸು ‘ಆಜ್ಞಾ’ ಚಕ್ರದಲ್ಲಿ ನೆಲೆಗೊಳ್ಳುತ್ತದೆ. ಯೋಗಸಾಧನೆಯಲ್ಲಿ ಈ ಆಜ್ಞಾ ಚಕ್ರದ ಸ್ಥಾನ ಅತ್ಯಂತ ಮಹತ್ವ ಪೂರ್ಣಸ್ಥಾನವಿದೆ. ಈ ಚಕ್ರದಲ್ಲಿ ಸ್ಥಿತವಾದ ಮನಸ್ಸುಳ್ಳ ಸಾಧಕನು ತಾಯಿ ಕಾತ್ಯಾಯನಿಯ ಚರಣಗಳಲ್ಲಿ ತನ್ನ ಸರ್ವಸ್ವವನ್ನು ಅರ್ಪಿಸಿಕೊಳ್ಳುತ್ತಾನೆ. ಪೂರ್ಣವಾಗಿ ಆತ್ಮಸಮರ್ಪಣ ಮಾಡುವ ಇಂತಹ ಭಕ್ತನಿಗೆ ಸಹಜಭಾವದಿಂದ ಕಾತ್ಯಾಯನೀ ದೇವಿಯ ದರ್ಶನ ಪ್ರಾಪ್ತವಾಗುತ್ತದೆ. ಇದನ್ನೂ ಓದಿ: ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    ಕಾತ್ಯಾಯನಿಯ ಭಕ್ತಿ ಮತ್ತು ಉಪಾಸನೆಯ ಮೂಲಕ ಮನುಷ್ಯನಿಗೆ ಸುಲಭವಾಗಿ ಅರ್ಥ, ಧರ್ಮ, ಕಾಮ, ಮೋಕ್ಷವೆಂಬ ನಾಲ್ಕು ಫಲಗಳ ಪ್ರಾಪ್ತಿಯಾಗುತ್ತದೆ. ಅವನು ರೋಗ, ಶೋಕ, ಸಂತಾಪ, ಭಯ ಮುಂತಾದವುಗಳು ಪೂರ್ಣವಾಗಿ ನಾಶವಾಗುತ್ತದೆ. ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡಲು ಕಾತ್ಯಾಯನಿಯ ಉಪಾಸನೆಗಿಂತ ಸುಗಮ ಹಾಗೂ ಸರಳವಾದ ಮಾರ್ಗವು ಮತ್ತೊಂದಿಲ್ಲ. ಇವಳ ಉಪಾಸಕ ಯಾವಾಗಲೂ ಇವಳ ಸಾನ್ನಿಧ್ಯಲ್ಲಿ ಇದ್ದು ಪರಮಪದದ ಅಧಿಕಾರಿಯಾಗುತ್ತಾನೆ ಎನ್ನುವ ನಂಬಿಕೆಯಿದೆ.

     

  • ನವರಾತ್ರಿ ವಿಶೇಷ – ಸ್ಕಂದಮಾತೆಯನ್ನ ಪೂಜಿಸುವುದು ಏಕೆ?

    ನವರಾತ್ರಿ ವಿಶೇಷ – ಸ್ಕಂದಮಾತೆಯನ್ನ ಪೂಜಿಸುವುದು ಏಕೆ?

    ಗನ್ಮಾತೆ ದುರ್ಗೆಯ ಐದನೇ ಸ್ವರೂಪವನ್ನು ‘ಸ್ಕಂದಮಾತಾ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ಭಗವಾನ್ ಸ್ಕಂದನು ‘ಕುಮಾರ ಕಾರ್ತಿಕೇಯ’ ಎಂಬ ಹೆಸರಿನಿಂದಲೂ ತಿಳಿಯಲ್ಪಡುತ್ತಾನೆ. ಇವನು ಪ್ರಸಿದ್ಧ ತಾರಕನ ಜೊತೆಗಿನ ಸಂಗ್ರಾಮದಲ್ಲಿ ದೇವತೆಗಳ ಸೇನಾಪತಿಯಾಗಿದ್ದನು. ಪುರಾಣಗಳಲ್ಲಿ ಇವನನ್ನು ಕುಮಾರ ಹಾಗೂ ಶಕ್ತಿಧರ ಎಂದು ಹೇಳಿ ಇವನ ಮಹಿಮೆಯನ್ನು ವರ್ಣಿಸಲಾಗಿದೆ. ನವಿಲನ್ನು ವಾಹನವಾಗಿ ಬಳಸುವ ಕಾರಣ ಈತನನ್ನು ‘ಮಯೂರವಾಹನ’ ಎಂದೂ ಕರೆಯುತ್ತಾರೆ.

    ಸ್ಕಂದನ ತಾಯಿಯಾದ್ದರಿಂದ ದುರ್ಗೆಯ ಈ ಐದನೇ ಸ್ವರೂಪವನ್ನು ‘ಸ್ಕಂದಮಾತಾ’ ಎಂದು ಕರೆಯಲಾಗುತ್ತದೆ. ನವರಾತ್ರಿಯ ಐದನೇ ದಿನ ಇವಳ ಉಪಾಸನೆ ಮಾಡಲಾಗುತ್ತದೆ. ಈ ದಿನ ಸಾಧಕನ ಮನಸ್ಸು ವಿಶದ್ಧ ಚಕ್ರದಲ್ಲಿ ನೆಲೆ ನಿಲ್ಲುತ್ತದೆ. ಇವಳ ವಿಗ್ರಹದಲ್ಲಿ ಭಗವಾನ್ ಸ್ಕಂದನು ಬಾಲರೂಪದಲ್ಲಿ ಇವಳ ತೊಡೆಯಲ್ಲಿ ಕುಳಿತ್ತಿದ್ದಾನೆ. ಇದನ್ನೂ ಓದಿ: ನವರಾತ್ರಿ ವಿಶೇಷ- ನಾಲ್ಕನೇ ದಿನ ಕೂಷ್ಮಾಂಡ ದೇವಿ ಆರಾಧನೆ ಮಾಡೋದು ಯಾಕೆ ಗೊತ್ತಾ?

    ಸ್ಕಂದಮಾತೆಯಾದ ಇವಳಿಗೆ ನಾಲ್ಕು ಭುಜಗಳಿರುತ್ತವೆ. ಇವಳು ಬಲಗಡೆಯ ಮೇಲಿನ ಕೈಯಿಂದ ಸ್ಕಂದನ್ನು ತೊಡೆಯಲ್ಲಿ ಹಿಡಿದುಕೊಂಡಿದ್ದಾಳೆ. ಮೇಲಕ್ಕಿತ್ತಿರುವ ಕೆಳಗಿನ ಬಲ ಕೈಯಲ್ಲಿ ಕಮಲ ಪುಷ್ಪವನ್ನು ಹಿಡಿದಿದ್ದಾಳೆ. ಎಡಗಡೆಯ ಮೇಲಿನ ಕೈಯಲ್ಲಿ ವರಮುದ್ರೆ ಮತ್ತು ಮೇಲಕ್ಕೆತ್ತಿರುವ ಎಡಗೈಯಲ್ಲಿಯೂ ಕಮಲವಿದೆ. ಇವಳ ಶರೀರದ ಬಣ್ಣವೂ ಪೂರ್ಣವಾಗಿ ಬೆಳ್ಳಗಿದ್ದು, ಕಮಲದ ಆಸನದಲ್ಲಿ ವಿರಾಜಮಾನಳಾಗಿದ್ದಾಳೆ. ಇದೇ ಕಾರಣದಿಂದ ಇವಳನ್ನು ಪದ್ಮಸನಾದೇವೀ ಎಂದೂ ಹೇಳುತ್ತಾರೆ. ಸಿಂಹವೂ ಇವಳ ವಾಹನವಾಗಿದೆ. ಇದನ್ನೂ ಓದಿ: ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    ನವರಾತ್ರಿಯ ಪೂಜೆಯಲ್ಲಿ ಐದನೇ ದಿನದ ಮಹತ್ವ ಶಾಸ್ತ್ರಗಳಲ್ಲಿ ತುಂಬಾ ಹೇಳಲಾಗಿದೆ. ವಿಶುದ್ಧ ಚಕ್ರದಲ್ಲಿ ನೆಲೆಸಿದ ಮನಸ್ಸುಳ್ಳ ಸಾಧಕನ ಸಮಸ್ತ ಬಾಹ್ಯ ಕ್ರಿಯೆಗಳು ಹಾಗೂ ಚಿತ್ತವೃತ್ತಿಗಳು ಲೋಪವಾಗುತ್ತವೆ. ಅವನು ವಿಶುದ್ಧ ಚೈತನ್ಯ ಸ್ವರೂಪದತ್ತು ಮುಂದುವರಿಯುತ್ತವೆ. ಅವನ ಮನಸ್ಸು ಎಲ್ಲ ಲೌಕಿಕ, ಸಾಂಸಾರಿಕ ಬಂಧನಗಳಿಂದ ಮುಕ್ತವಾಗಿ ಪದ್ಮಾಸನಾ ಸ್ಕಂದಮಾತೆಯ ಸ್ವರೂಪದಲ್ಲಿ ಪೂರ್ಣವಾಗಿ ತಲ್ಲೀನವಾಗುತ್ತದೆ. ಈ ಸಮಯದಲ್ಲಿ ಸಾಧಕನು ಹೆಚ್ಚಿನ ಎಚ್ಚರಿಕೆಯಿಂದ ಉಪಾಸನೆಯಲ್ಲಿ ಮುಂದರಿಯಬೇಕು. ಅವನು ತನ್ನ ಎಲ್ಲ ಧ್ಯಾನ- ವೃತ್ತಿಗಳನ್ನು ಏಕಾಗ್ರವಿರಿಸಿಕೊಂಡು ಸಾಧನೆಯ ಪಥದಲ್ಲಿ ಮುಂದೆ ಹೋಗಬೇಕು. ಇದನ್ನೂ ಓದಿ: ನವರಾತ್ರಿ ವಿಶೇಷ – ಮೂರನೇ ದಿನ ಚಂದ್ರಘಂಟಾ ದೇವಿಯ ಪೂಜೆ ಮಾಡೋದು ಯಾಕೆ?

    ಜಗಜ್ಜನನಿ ಸ್ಕಂದಮಾತೆಯ ಉಪಾಸನೆಯಿಂದ ಭಕ್ತನ ಎಲ್ಲ ಇಚ್ಛೆಗಳು ಪೂರ್ಣವಾಗುತ್ತವೆ. ಈ ಮತ್ರ್ಯಲೋಕದಲ್ಲೇ ಅವನಿಗೆ ಪರಮ ಶಾಂತಿ ಮತ್ತು ಸುಖದ ಅನುಭವವಾಗ ತೊಡಗುತ್ತದೆ. ಅವನಿಗಾಗಿ ಮೋಕ್ಷದ ಬಾಗಿಲು ತಾನಾಗಿ ಸುಲಭವಾಗುತ್ತದೆ ಎನ್ನುವ ನಂಬಿಕೆಯಿದೆ. ಸ್ಕಂದಮಾತೆಯ ಉಪಾಸನೆಯಿಂದ ಬಾಲರೂಪೀ ಭಗವಾನ್ ಸ್ಕಂದನ ಉಪಾಸನೆಯೂ ಕೂಡ ತಾನಾಗಿಯೇ ಆಗುತ್ತದೆ.

     

  • ನವರಾತ್ರಿಯ 9ನೇ ದಿನ ಸಿದ್ಧಿದಾತ್ರೀ ಆರಾಧನೆ

    ನವರಾತ್ರಿಯ 9ನೇ ದಿನ ಸಿದ್ಧಿದಾತ್ರೀ ಆರಾಧನೆ

    ಗನ್ಮಾತೆ ದುರ್ಗಾದೇವಿಯ ಒಂಭತ್ತನೇ ಶಕ್ತಿಯ ಹೆಸರು ಸಿದ್ಧಿದಾತ್ರಿ. ಇವಳು ಎಲ್ಲ ಪ್ರಕಾರದ ಸಿದ್ಧಿಗಳನ್ನು ಕೊಡುವಂತಹವಳು. ಮಾರ್ಕಡೇಯ ಪುರಾಣದ ಅನುಸಾರ ಅಣಿಮಾ, ಮಾಹಿಮಾ, ಗರಿಮಾ, ಲಘಮಾ, ಪ್ರಾಪ್ತಿ, ಪ್ರಾಕಮ್ಯ, ಈಶಿತ್ವ ಮತ್ತು ವಶಿತ್ವ ಹೀಗೆ ಎಂಟು ಸಿದ್ಧಿಗಳು ಇವೆ.

    ದೇವೀಪುರಾಣಕ್ಕನುಸಾರ ಭಗವಾನ್ ಶಿವನು ಇವಳ ಕೃಪೆಯಿಂದ ಇವೆಲ್ಲ ಸಿದ್ಧಿಗಳನ್ನು ಪಡೆದುಕೊಂಡಿದ್ದನು. ಇವಳ ಅನುಕಂಪದಿಂದಲೇ ಭಗವಾನ್ ಶಿವನ ಅರ್ಧ ಶರೀರವು ದೇವಿಯಾಗಿತ್ತು. ಇದೇ ಕಾರಣದಿಂದ ಅವನು ಜಗತ್ತಿನಲ್ಲಿ ‘ಅರ್ಧನಾರೀಶ್ವರ’ ಹೆಸರಿನಿಂದ ಪ್ರಸಿದ್ಧನಾದನು. ಸಿದ್ಧಿದಾತ್ರಿಗೆ ನಾಲ್ಕು ಭುಜಗಳಿದ್ದು, ಇವಳ ವಾಹನ ಸಿಂಹವಾಗಿದೆ. ಇವಳು ಫಲಪುಷ್ಪದ ಮೇಲೆ ವಿರಾಜಮಾನವಾಗಿ ಕುಳಿತುಕೊಂಡಿರುತ್ತಾಳೆ. ಇವಳ ಕೆಳಗಿನ ಬಲಕೈಯಲ್ಲಿ ಚಕ್ರ, ಮೇಲಿನ ಕೈಯಲ್ಲಿ ಗದೆ ಇದೆ. ಎಡಗಡೆ ಕೆಳಗಿನ ಕೈಯಲ್ಲಿ ಶಂಖ ಮತ್ತು ಮೇಲಿನ ಕೈಯಲ್ಲಿ ಕಮಲವಿದೆ.

    ನವರಾತ್ರಿಯ 9ನೇ ದಿನ ಇವಳ ಉಪಾಸನೆ ಮಾಡಲಾಗುತ್ತದೆ. ಈ ದಿನ ಶಾಸ್ತ್ರೀಯ ವಿಧಿ-ವಿಧಾನದಿಂದ ಹಾಗೂ ಪೂರ್ಣನಿಷ್ಠೆಯಿಂದ ಸಾಧನೆ ಮಾಡುವ ಸಾಧಕರಿಗೆ ಸಿದ್ಧಿಗಳು ಪ್ರಾಪ್ತಿ ಆಗುತ್ತವೆ. ಬ್ರಹ್ಮಾಂಡದ ಮೇಲೆ ವಿಜಯವನ್ನು ಪಡೆಯುವ ಸಾಮಥ್ರ್ಯ ಅವನಲ್ಲಿ ಬಂದು ಬಿಡುತ್ತದೆ. ಪ್ರತಿಯೊಬ್ಬ ಮನುಷ್ಯನು ತಾಯಿ ಸಿದ್ಧಿದಾತ್ರಿಯ ಕೃಪೆಯನ್ನು ಪಡೆದುಕೊಳ್ಳಲು ನಿರಂತರ ಪ್ರಯತ್ನ ಮಾಡಬೇಕು. ಅವಳ ಆರಾಧನೆಯ ಕಡೆಗೆ ಮುಂದುವರಿಯಬೇಕು. ಇವಳ ಕೃಪೆಯಿಂದ ಅತ್ಯಂತ ದುಃಖರೂಪೀ ಸಂಸಾರದಿಂದ ನಿರ್ಲಿಪ್ತನಾಗಿದ್ದುಕೊಂಡು ಎಲ್ಲ ಸುಖವನ್ನು ಭೋಗಿಸುತ್ತಾ ಅವನು ಮೋಕ್ಷವನ್ನು ಪಡೆಯಬಲ್ಲನು.

    ನವದುರ್ಗೆಯಲ್ಲಿ ಸಿದ್ಧಿದಾತ್ರಿ ದೇವಿಯೂ ಕೊನೆಯವಳಾಗಿದ್ದಾಳೆ. ಬೇರೆ ಎಂಟು ದುರ್ಗೆಯರ ಪೂಜೆ ಉಪಾಸನೆಯನ್ನು ಶಾಸ್ತ್ರೀಯ ವಿಧಿ-ವಿಧಾನಕ್ಕನುಸಾರ ಮಾಡುತ್ತಾ ಭಕ್ತರು ನವರಾತ್ರಿಯ ಒಂಭತ್ತನೇ ದಿನ ಇವಳ ಉಪಾಸನೆಯಲ್ಲಿ ಪ್ರವೃತ್ತರಾಗುತ್ತಾರೆ. ಈ ಸಿದ್ಧಿದಾತ್ರೀ ದೇವಿಯ ಉಪಾಸನೆಯನ್ನು ಪೂರ್ಣಗೊಳಿಸಿದ ಬಳಿಕ ಭಕ್ತರ, ಸಾಧಕರ, ಲೌಕಿಕ-ಪಾರಲೌಕಿಕ ಎಲ್ಲ ಪ್ರಕಾರದ ಕಾಮನೆಯಗಳ ಪೂರ್ತಿ ಆಗಿ ಹೋಗುತ್ತದೆ ಎನ್ನುವ ನಂಬಿಕೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    5. ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    6. ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

    7. ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    8.ದೇಶದ ವಿವಿಧ ರಾಜ್ಯಗಳಲ್ಲಿ ದಸರಾ ಹೇಗೆ ಆಚರಿಸುತ್ತಾರೆ? – ಇಲ್ಲಿದೆ ಮಾಹಿತಿ

    9.ನವರಾತ್ರಿ ಹಬ್ಬ ಹೆಣ್ಣು ಮಕ್ಕಳಿಗೆ ಇಷ್ಟ ಯಾಕೆ?

    10. ನವರಾತ್ರಿ ಮೊದಲ ದಿನ ಶೈಲಪುತ್ರಿಯ ಪೂಜೆ: ದಾಕ್ಷಾಯಿಣಿ ಶೈಲಪುತ್ರಿಯಾಗಿ ಶಿವನ ಕೈ ಹಿಡಿದ ಕಥೆ ಓದಿ

    11. ನವರಾತ್ರಿ ಎರಡನೇ ದಿನ ಇಷ್ಟಾರ್ಥ ಸಿದ್ಧಿಗಾಗಿ ಬ್ರಹ್ಮಚಾರಿಣಿಯನ್ನು ಪೂಜಿಸೋದು ಯಾಕೆ? ಪುರಾಣ ಕಥೆ ಓದಿ

    12. ಸಿಂಪಲ್ ಮೈಸೂರು ಬೋಂಡಾ ಮಾಡುವ ವಿಧಾನ

    13. ನವದುರ್ಗೆಯ 4ನೇ ರೂಪ ಕೂಷ್ಮಾಂಡ -ಇವಳ ಭಕ್ತಿಯಿಂದ ಆಯಸ್ಸು, ಬಲ, ಆರೋಗ್ಯ ವೃದ್ಧಿ

    14. ನವರಾತ್ರಿ ವಿಶೇಷ – ಸ್ಕಂದಮಾತೆಯನ್ನ ಪೂಜಿಸುವುದು ಏಕೆ?

    15. ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡುವ 6ನೇ ಅವತಾರ ಕಾತ್ಯಾಯನೀ

    16. ಮೈಸೂರಿನ ಸಿಹಿ ಮಾತ್ರವಲ್ಲ ಹಬ್ಬಕ್ಕಾಗಿ ಬಾದೂಷವನ್ನು ಮಾಡಿ-ಇಲ್ಲಿದೆ ಸರಳ ವಿಧಾನ

    17. 7ನೇ ದಿನ ಕಾಲರಾತ್ರಿಯನ್ನು ಪೂಜೆ ಮಾಡೋದು ಯಾಕೆ?

    18. ನವರಾತ್ರಿಯ 8ನೇ ದಿನ ಮಹಾಗೌರಿಯ ಪೂಜೆ!