Tag: ನವದಂಪತಿ

  • ಸಿನಿಮಾ ನೋಡಿಕೊಂಡು ಬರುತ್ತಿದ್ದಾಗ ಭೀಕರ ಅಪಘಾತ – ನವ ವಿವಾಹಿತೆ ಸ್ಥಳದಲ್ಲೇ ಸಾವು, ಪತಿ ಗಂಭೀರ

    ಸಿನಿಮಾ ನೋಡಿಕೊಂಡು ಬರುತ್ತಿದ್ದಾಗ ಭೀಕರ ಅಪಘಾತ – ನವ ವಿವಾಹಿತೆ ಸ್ಥಳದಲ್ಲೇ ಸಾವು, ಪತಿ ಗಂಭೀರ

    ಬೆಂಗಳೂರು: ಸಿನಿಮಾ ನೋಡಿಕೊಂಡು ಬರುತ್ತಿದ್ದ ನವದಂಪತಿಯ ಆಕ್ಟೀವ್ ಹೋಂಡಾಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಪತಿ ಸ್ಥಿತಿ ಗಂಭಿರವಾಗಿದೆ.

     

    ಮೃತ ನವವಧುವನ್ನು ಶ್ವೇತಾ (23) ಎಂದು ಗುರುತಿಸಲಾಗಿದ್ದು, ಪತಿ ಆನಂದ್ (28) ಸ್ಥಿತಿ ಗಂಭೀರವಾಗಿದೆ. ನಗರದ ಕಲ್ಯಾಣನಗರದ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ಇತ್ತೀಚೆಗಷ್ಟೇ ಮದುವೆಯಾಗಿದ್ದ ಈ ನವಜೋಡಿ, ತಡರಾತ್ರಿ ಸಿನಿಮಾ ನೋಡಲು ಹೋಗಿದ್ದರು. ಸಿನಿಮಾ ಮುಗಿದ ನಂತರ ಮನೆಗೆ ವಾಪಸ್ಸಾಗುವ ವೇಳೆ ಆಕ್ಟೀವ್ ಹೋಂಡಾಗೆ ಲಾರಿ ಡಿಕ್ಕಿ ಹೊಡೆದೆದ್ದು, ಬೈಕ್ ಹಿಂಬದಿ ಕುಳಿತಿದ್ದ ಶ್ವೇತಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.  ಇದನ್ನೂ ಓದಿ: ಹಿಂದೂ ದೇವರಿಗೆ ಜಾಹೀರಾತಿನಲ್ಲಿ ಅಪಮಾನ – Zomato ಬಾಯ್ಕಟ್‍ಗೆ ಕರೆ

    ಇದೀಗ ಶ್ವೇತಾಳ ಶವ ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಹೆಚ್‍ಬಿಆರ್ ಮುಖ್ಯ ರಸ್ತೆ ಬಳಿ ಇರುವ ಆಲ್ಟಿಯಸ್ ಆಸ್ಪತ್ರೆಯಲ್ಲಿ ಆನಂದ್‍ಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ಇದನ್ನೂ ಓದಿ: ಸಂಸತ್ತಿನ ಒಳಗಡೆ ಫೋಟೋ ಇರುವಾಗ ಸರ್ಕಲ್‍ಗೆ ಸಾವರ್ಕರ್ ಹೆಸರು ಇಟ್ಟರೆ ತಪ್ಪೇನು – ಭರತ್ ಶೆಟ್ಟಿ ಪ್ರಶ್ನೆ

    Live Tv
    [brid partner=56869869 player=32851 video=960834 autoplay=true]

  • ಅಂತರ್ಜಾತಿ ವಿವಾಹಕ್ಕೆ ಅಡ್ಡಿ – ರಕ್ಷಣೆಗೆ ಖಾಕಿ ಮೊರೆ ಹೋದ ಜೋಡಿ

    ಅಂತರ್ಜಾತಿ ವಿವಾಹಕ್ಕೆ ಅಡ್ಡಿ – ರಕ್ಷಣೆಗೆ ಖಾಕಿ ಮೊರೆ ಹೋದ ಜೋಡಿ

    ಚಿತ್ರದುರ್ಗ: ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಕಳೆದ ವಾರವಷ್ಟೇ ವಿವಾಹವಾಗಿದ್ದು, ಈ ನವದಂಪತಿಗೆ ಇದೀಗ ಕಂಟಕ ಎದುರಾಗಿದೆ. ಜಾತಿ ಮರೆತು ಸಪ್ತಪದಿ ತುಳಿದ ಪ್ರೇಮಿಗಳಿಗೆ ಯುವತಿಯ ಪೋಷಕರು ವಿಲನ್‍ಗಳಾಗಿದ್ದಾರೆ.

    ಸಮಾಜ ಅದೆಷ್ಟೇ ಮುಂದುವರೆದರೂ ಕೂಡ ಜನ ಜಾತಿ-ಧರ್ಮ ಅಂತ ಕಿತ್ತಾಡುವುದನ್ನು ನಿಲ್ಲಿಸುವುದಿಲ್ಲ. ಅಂತರ್ಜಾತಿ ವಿವಾಹಕ್ಕೆ ಸರ್ಕಾರವೇ ಪ್ರೋತ್ಸಾಹ ನೀಡುತ್ತದೆ. ಆದರೂ ಕೂಡ ಇಂತಹ ತಾರತಮ್ಯದಿಂದ ಹೊರಬರಲು ಜನರಿಗೆ ಆಗುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದವಾರವಷ್ಟೇ ಮದುವೆಯಾದ ಚಿತ್ರದುರ್ಗದ ಪ್ರಕಾಶ್ ಮತ್ತು ಸಂಧ್ಯಾ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಹೌದು, ಕಳೆದ 2 ವರ್ಷಗಳಿಂದ ಪ್ರೀತಿಸಿ ಮೊನ್ನೆಯಷ್ಟೇ ಪೋಷಕರ ವಿರೋಧದ ನಡುವೆ ವಿವಾಹವಾಗಿದ್ದ ಪ್ರಕಾಶ್ ಹಾಗೂ ಸಂಧ್ಯಾಗೆ ಇದೀಗ ಅನ್ಯಜಾತಿ ಯುವಕನನ್ನು ಮದುವೆಯಾಗಿದ್ದಕ್ಕೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿ ಕೊಲೆ ಬೆದರಿಕೆಯಾಕಿದ್ದಾರೆ.

    ಚಿತ್ರದುರ್ಗ ತಾಲೂಕಿನ ಸಜ್ಜನಕೆರೆಗ್ರಾಮದ ಪ್ರಕಾಶ್, ಖಾಸಗಿ ಬಸ್ ಚಾಲಕರಾಗಿದ್ದು, ಬಸ್‍ನಲ್ಲಿ ಪಾವಗಡಕ್ಕೆ ತೆರೆಳುತ್ತಿದ್ದರು. ಆಗ ಬಸ್‍ನಲ್ಲಿ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಸಂಧ್ಯಾಗೆ ಪ್ರಕಾಶ್ ಪರಿಚಯವಾಗಿ ಇಬ್ಬರು ಪರಸ್ಪರ ಮೆಚ್ಚಿಕೊಂಡು ಪ್ರೀತಿಸುತ್ತಿದ್ದರು. ಕಳೆದ ಶುಕ್ರವಾರವಷ್ಟೇ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾರೆ. ಹೀಗಾಗಿ ಈ ವಿಚಾರ ತಿಳಿದ ಸಂಧ್ಯಾಳ ಪೋಷಕರು, ಪಾವಗಡದಿಂದ ಚಿತ್ರದುರ್ಗಕ್ಕೆ ಧಾವಿಸಿ, ಈ ನವದಂಪತಿಗಳಿಗೆ ಕೊಲೆಬೆದರಿಕೆ ಹಾಕಿದ್ದಾರಂತೆ. ಹೀಗಾಗಿ ಪ್ರಕಾಶ್ ಹಾಗೂ ಸಂಧ್ಯಾ ನಮಗೆ ಸೂಕ್ತ ರಕ್ಷಣೆ ಬೇಕು ಅಂತ ಚಿತ್ರದುರ್ಗ ಎಸ್‍ಪಿ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಲಾಲ್‍ಬಾಗ್‍ನಲ್ಲಿ ಈಗ ಎಲ್ಲೆಲ್ಲೂ ಅಪ್ಪು – ನಗುವಿನ ಒಡೆಯನನ್ನು ನೋಡಲು ಮುಗಿಬಿದ್ದ ಜನ

    ಮತ್ತೊಂದೆಡೆ ಪ್ರೀತಿಸಿದ ಹುಡುಗನಿಂದ ತಾಳಿ ಕಟ್ಟಿಸಿಕೊಂಡಿರುವ ಸಂಧ್ಯಾ, ಇದ್ದರೆ ಪ್ರಕಾಶ್ ಜೊತೆಗೆ ಇರುತ್ತೇನೆ. ಇಲ್ಲ ಪ್ರಾಣ ಬಿಡುತ್ತೇನೆ ಹೊರೆತು ಅವರೊಂದಿಗೆ ಹೋಗಲ್ಲ ಎನ್ನುತ್ತಿದ್ದಾರೆ. ಇನ್ನು ಸಂಧ್ಯಾಳನ್ನು ಸೊಸೆ ಎಂದು ಆಸೆಯಿಂದ ಒಪ್ಪಿಕೊಂಡಿರುವ ಪ್ರಕಾಶ್‍ನ ತಾಯಿ ಪ್ರೀತಿಸಿ ಮದುವೆಯಾದ ಜೋಡಿಯನ್ನು ದೂರ  ಮಾಡಬೇಡಿ ಅಂತ ಅಂಗಲಾಚಿದ್ದಾರೆ. ಇದನ್ನೂ ಓದಿ: ಹನುಮನಿಂದ ಪ್ರಸಾದ ಪಡೆಯುವ ಅಲಾಯಿ ದೇವರು – ಕೊಪ್ಪಳದಲ್ಲಿ ವಿಶೇಷ ಆಚರಣೆ

    ಒಟ್ಟಾರೆ ಪ್ರೀತಿಸಿದ ಪ್ರೇಮಿಗಳು ಧೈರ್ಯಮಾಡಿ ಮದುವೆಯಾಗುವ ಮೂಲಕ ತಮ್ಮ ಪ್ರೀತಿಯನ್ನು ಉಳಿಸಿಕೊಂಡಿದ್ದಾರೆ. ಆದರೆ ಪೋಷಕರ ಬೆದರಿಕೆಗೆ ಬೆಚ್ಚಿರುವ ನವದಂಪತಿಗಳು ತಮ್ಮ ಜೀವ ರಕ್ಷಣೆಗಾಗಿ ಚಿತ್ರದುರ್ಗ ಪೊಲಿಸರ ಮೊರೆಗೆ ಧಾವಿಸಿದ್ದಾರೆ. ಸೂಕ್ತ ಭದ್ರತೆ ಒದಗಿಸಿ, ಅವರ ಹೊಸಬದುಕು ಅವಕಾಶ ಕಲ್ಪಿಸಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಿರ್ಭೂಮ್ ಹತ್ಯಾ ಪ್ರಕರಣ – ನವದಂಪತಿ ಸಾವು

    ಬಿರ್ಭೂಮ್ ಹತ್ಯಾ ಪ್ರಕರಣ – ನವದಂಪತಿ ಸಾವು

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ರಾಂಪುರ್ ಹತ್ಯೆನಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ನವ ವಿವಾಹಿತ ದಂಪತಿ ಮೃತಪಟ್ಟಿದ್ದಾರೆ.

    ಲಿಲಿ ಖಾತೂನ್ ಮತ್ತು ಖಾಜಿ ಸಾಜಿದುರ್ ಅವರು ಜನವರಿಯಲ್ಲಿ ವಿವಾಹವಾವಾಗಿದ್ದದರು. ಬಾಗ್ಟುಯಿ ಗ್ರಾಮದಲ್ಲಿರುವ ಲಿಲಿ ಖಾತೂನ್ ಅವರ ತಾಯಿಯ ಮನೆಗೆ ಭೇಟಿ ನೀಡುತ್ತಿದ್ದರು. ಈ ವೇಳೆ ಮಧ್ಯರಾತ್ರಿ ಸಾಜಿದುರ್ ಮತ್ತು ಅವರ ಪತ್ನಿ ಇರುವ ಮನೆಗೆ ಬೀಗ ಹಾಕಿದ್ದಾರೆ. ಇದನ್ನು ಕಂಡು ಗಾಬರಿಯಾದ ಸಾಜಿದುರ್ ತಮ್ಮ ಸ್ನೇಹಿತ ಮಜೀಮ್‍ಗೆ ಕರೆ ಮಾಡಿ ವಿಚಾರವನ್ನು ತಿಳಿಸಿ, ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ಮೋಹಿನಿಯಾಟ್ಟಂ ನೃತ್ಯಕ್ಕೆ ಅರ್ಧದಲ್ಲೇ ತಡೆ – ಕೇರಳ ಜಡ್ಜ್‌ ಪಾಷಾ ವಿರುದ್ಧ ಖ್ಯಾತ ಕಲಾವಿದೆ ಆಕ್ರೋಶ

    ನಂತರ ಮಾಜೀಮ್ ಸಾಜಿದುರ್ ಅವರ ತಂದೆಗೆ ಕೂಡ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಈ ವೇಳೆ ಸಾಜಿದುರ್ ಅವರನ್ನು ಸಂಪರ್ಕಿಸಲು ಅವರ ತಂದೆ ಪ್ರಯತ್ನಿಸಿದ್ದಾರೆ. ಆದರೆ ಎಲ್ಲ ಪ್ರಯತ್ನಗಳು ವಿಫಲವಾದವು. ಮರುದಿನ ಬೆಳಗ್ಗೆ ದಂಪತಿ ದೇಹ ಸುಟ್ಟು ಕರಕಲಾಗಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಟಿಎಂಸಿ ಮುಖಂಡನ ಹತ್ಯೆ – ಹಲವು ಮನೆಗಳಿಗೆ ಬೆಂಕಿ, 10 ಮಂದಿ ಸಜೀವ ದಹನ

    ಮಂಗಳವಾರ ಬಂಗಾಳದ ಬಿರ್ಭೂಮ್ ಜಿಲ್ಲೆಯ ರಾಮ್‍ಪುರಹತ್ ಗ್ರಾಮದಲ್ಲಿ ಸುಮಾರು 12ಕ್ಕೂ ಹೆಚ್ಚು ಮನೆಗಳಿಗೆ ಕಿಡಿಕೇಡಿಗಳು ಬೆಂಕಿ ಹಚ್ಚಿದ್ದು, ಇಬ್ಬರು ಮಕ್ಕಳು ಸೇರಿದಂತೆ ಸುಮಾರು ಎಂಟು ಮಂದಿ ಸಾವನ್ನಪ್ಪಿದ್ದಾರೆ. ಈ ಸಂಬಮಧ ತನಿಖೆ ನಡೆಸಲು ರಾಜ್ಯ ಸರ್ಕಾರ ಎಡಿಜಿ (ಸಿಐಡಿ) ಜ್ಞಾನವಂತ್ ಸಿಂಗ್ ನೇತೃತ್ವದಲ್ಲಿ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‍ಐಟಿ) ರಚಿಸಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಪಶ್ಚಿಮಬಂಗಾಳ ಸರ್ಕಾರಕ್ಕೆ ವರದಿ ಕೇಳಿದೆ. ಬಂಗಾಳ ಬಿಜೆಪಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಒತ್ತಾಯಿಸಿದೆ.

  • ಪೋಷಕರ ವಿರೋಧದ ನಡುವೆಯೂ ಪ್ರೇಮ ವಿವಾಹ – ನವದಂಪತಿ ಆತ್ಮಹತ್ಯೆ

    ಪೋಷಕರ ವಿರೋಧದ ನಡುವೆಯೂ ಪ್ರೇಮ ವಿವಾಹ – ನವದಂಪತಿ ಆತ್ಮಹತ್ಯೆ

    ಮೈಸೂರು: ಪೋಷಕರ ವಿರೋಧದ ನಡುವೆಯೂ ಪ್ರೇಮ ವಿವಾಹವಾದ ನವದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಹುಣಸೂರಿನಲ್ಲಿ ನಡೆದಿದೆ.

    ಇಬ್ಬರೂ ಅನ್ಯ ಜಾತಿಗೆ ಸೇರಿದ ಹಿನ್ನೆಲೆ ಪೋಷಕರ ಈ ಜೋಡಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಈ 4 ತಿಂಗಳ ಹಿಂದೆ ಮನೆ ಬಿಟ್ಟು ಓಡಿ ಹೋಗಿ ವಿವಾಹವಾಗಿದ್ದರು. ಮದುವೆಯಾಗಿ ಕೇವಲ ನಾಲ್ಕು ತಿಂಗಳಿಗೆ ಈ ನವಜೋಡಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಹುಣಸೂರು ತಾಲೂಕಿನ ಸಿಂಗರಮಾರನಹಳ್ಳಿಯಲ್ಲಿ ನಡೆದಿದೆ. ಇದನ್ನೂ ಓದಿ:  1,200 ವರ್ಷದಷ್ಟು ಹಳೆಯ ಮಕ್ಕಳ, ವಯಸ್ಕರ ಅವಶೇಷ ಪತ್ತೆ!

    ಏನಿದು ಘಟನೆ?
    ಗ್ರಾಮದ ರಾಕೇಶ್(25), ಅರ್ಚನಾ(20)ಮೃತ ಪ್ರೇಮಿಗಳು. ರಾಕೇಶ್ ಮತ್ತು ಅರ್ಚನಾ ಎರಡು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇಬ್ಬರೂ ಒಂದೇ ಊರಿನ ಅಕ್ಕಪಕ್ಕದ ಮನೆಯವರು. ಪೋಷಕರು ವಿರೋಧ ಇದ್ದ ಹಿನ್ನೆಲೆ ಪ್ರೇಮಿಗಳು ನಾಲ್ಕು ತಿಂಗಳ ಹಿಂದೆ ಓಡಿ ಹೋಗಿ ಮದುವೆಯಾಗಿದ್ದರು.

    10,000+ Free Couples & Love Images

    ತಡರಾತ್ರಿ ಗ್ರಾಮಕ್ಕೆ ಬಂದು ಊರ ಹೊರವಲಯದಲ್ಲಿ ಮರಕ್ಕೆ ನವದಂಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರೂ ಅನ್ಯ ಜಾತಿಗೆ ಸೇರಿದ ಹಿನ್ನೆಲೆ ಪೋಷಕರ ವಿರೋಧವಿತ್ತು. ಆದರೂ ಇಬ್ಬರು ಮದುವೆಯಾಗಿದ್ದು, ಈ ದುಸ್ಥಿತಿ ಬಂದಿರುವುದು ವಿಪರ್ಯಾಸವಾಗಿದೆ. ಇದನ್ನೂ ಓದಿ: ಅತಿ ಹಿಂದುಳಿದ ವರ್ಗಗಳಿಗೂ ರಾಜಕೀಯ ಮೀಸಲಾತಿ ನೀಡಲು ಆಯೋಗ ರಚಿಸಬೇಕು – ರಾಜ್ಯಪಾಲರಿಗೆ ಮನವಿ

    ಸ್ಥಳಕ್ಕೆ ಬಿಳಿಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಪುನೀತ್ ಹೆಸರಲ್ಲಿ ನೇತ್ರದಾನ ಮಾಡಿದ ನವ ವಿವಾಹಿತ ಜೋಡಿ

    ಪುನೀತ್ ಹೆಸರಲ್ಲಿ ನೇತ್ರದಾನ ಮಾಡಿದ ನವ ವಿವಾಹಿತ ಜೋಡಿ

    ಕಾರವಾರ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನದ ಬಳಿಕ ತಮ್ಮ ಕಣ್ಣುಗಳನ್ನು ದಾನ ಮಾಡಿ ಅಂದರ ಬಾಳಿಗೆ ಬೆಳಕಾಗಿದ್ದಾರೆ. ಈ ಸಮಾಜಮುಖಿ ಕಾರ್ಯದಿಂದ ಅಭಿಮಾನಿಗಳು ಅವರ ಹಾದಿಯಲ್ಲೇ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾದರಿಯಾಗುತ್ತಿದ್ದಾರೆ. ಇದೀಗ ನವದಂಪತಿ ಪುನೀತ್ ಹೆಸರಿನಲ್ಲಿ ನೇತ್ರ ದಾನ ಮಾಡಿ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಮಂಜಗುಣಿ ಗ್ರಾಮದಲ್ಲಿ ಪುನೀತ್ ಅಭಿಮಾನಿಗಳು ಅವರ ಪುತ್ಥಳಿ ನಿರ್ಮಿಸಿದ್ದು, 50ಕ್ಕೂ ಅಧಿಕ ಜನರು ನೇತ್ರದಾನ ಮಾಡಿದ್ದಾರೆ. ಅಭಿಮಾನಿಗಳಿಂದ ನಿರ್ಮಿಸಲಾಗಿರುವ ಪುತ್ಥಳಿಗೆ ನವದಂಪತಿ ಮಣಿಕಂಠ ನಾಯ್ಕ ಹಾಗೂ ಸಿಂಧು ಮಾಲಾರ್ಪಣೆ ಮಾಡಿ ನೇತ್ರದಾನ ಮಾಡಿದ್ದಾರೆ. ಇದನ್ನೂ ಓದಿ: UAEನಿಂದ ಗೋಲ್ಡನ್ ವೀಸಾ ಪಡೆದ ಪ್ರಣಿತಾ!

    ಭಟ್ಕಳದಲ್ಲಿ ವಿವಾಹವಾಗಿದ್ದ ನವದಂಪತಿಗೆ ಪುನೀತ್ ಎಂದರೆ ಪಂಚಪ್ರಾಣ. ಹೀಗಾಗಿ ತಾವು ಹೊಸ ಜೀವನಕ್ಕೆ ಕಾಲಿಡುವಾಗ ಪುನೀತ್‍ರಂತೆ ಕಾರ್ಯ ಮಾಡಬೇಕು ಎಂಬ ಹಂಬಲದಿಂದ ನೇತ್ರದಾನ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ. ಇದನ್ನೂ ಓದಿ: ಹಿಜಬ್ ಬಗ್ಗೆ ಕೊನೆಗೂ ಮೌನ ಮುರಿದ ಅಮಿತ್ ಶಾ

  • ಮದುವೆ ಮಂಟಪದಲ್ಲಿ ವಧು ನೋಡಿ ಬಿಕ್ಕಿ ಬಿಕ್ಕಿ ಅತ್ತ ವರ

    ಮದುವೆ ಮಂಟಪದಲ್ಲಿ ವಧು ನೋಡಿ ಬಿಕ್ಕಿ ಬಿಕ್ಕಿ ಅತ್ತ ವರ

    ದುವೆ ಎಂದರೆ ಸಂಭ್ರಮ, ಸಡಗರ, ನವದಂಪತಿಗೆ ವಿಶೇಷ ದಿನವಾಗಿದೆ. ದಾಂಪತ್ಯ ಜೀವನಕ್ಕೆ ಕಾಲಿಡುವ ಜೋಡಿಗಳು ಸಂತೋಷದಿಂದ ಮದುವೆಯಾಗುತ್ತಾರೆ. ಆದರೆ ಇಲ್ಲೊಬ್ಬ ವರ, ವಧು ಮಂಟಪಕ್ಕೆ ಬರುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತಿರುವ ಘಟನೆ ನಡೆದಿದೆ.

    ನೀವು ನನ್ನನ್ನು ತುಂಬಾ ಸಂತೋಷಪಡಿಸಿದ್ದೀರಿ. ನನ್ನ ಭಯವನ್ನು ಮಾಯವಾಗಿಸಿದ್ದಕ್ಕಾಗಿ ಧನ್ಯವಾದಗಳು. ನಾನು ಅದೃಷ್ಟಶಾಲಿ ವ್ಯಕ್ತಿ ಎಂದು ಭಾವಿಸುತ್ತೇನೆ. 5 ವರ್ಷಗಳ ನಂತರ ಅಂತಿಮವಾಗಿ ಮದುವೆಯಾಗಿದ್ದೇವೆ ಎಂದು ಬರೆದುಕೊಂಡು ವಧು, ಆಕಾಂಕ್ಷಾ ಕರಿವಾಲಾ ಮದುವೆಯಲ್ಲಿ ವರ ಕಣ್ಣೀರು ಹಾಕುತ್ತಿರುವ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:  ಒಡೆದ ಹಿಮ್ಮಡಿಯ ಆರೈಕೆಗೆ ಏನು ಮಾಡಬೇಕು ಗೊತ್ತಾ?

     

    View this post on Instagram

     

    A post shared by AKB (@aakanshakariwala)

    ವೀಡಿಯೋದಲ್ಲಿ ಏನಿದೆ?: ಮದುವೆ ಸಂಭ್ರಮ ಮನೆ ಮಾಡಿದೆ. ವರನು ಶೆರ್ವಾನಿಯಲ್ಲಿ ಸುಂದರವಾಗಿ ಕಾಣುತ್ತಿದ್ದಾನೆ. ವಧು ಕೆಂಪು ಲೆಹೆಂಗಾ ತೊಟ್ಟು ಮದುವೆ ಮಂಟಪದ ಕಡೆಗೆ ಬರುತ್ತಿದ್ದಳು. ಮಂಟಪಕ್ಕೆ ವಧು ಪ್ರವೇಶಿಸುವುದನ್ನು ನೋಡಿದ ವರನಿಗೆ ಅದೇನಾಯ್ತೋ ಗೊತ್ತಿಲ್ಲ, ಒಂದೇ ಸಮನೆ ಕಣ್ಣೀರು ಜಾರಿದೆ. ನಂತರ ವಧು ಆಕಾಂಕ್ಷಾ ಹೂಮಾಲೆ ಹಾಕುವಾಗ ಬಗ್ಗಿ ಕೊರಳಿಗೆ ಹೂಮಾಲೆಯನ್ನು ಹಾಕಿಸಿಕೊಳ್ಳುತ್ತಾನೆ.

  • ಆತ್ಮಹತ್ಯೆಗೆ ಶರಣಾದ ನವದಂಪತಿ

    ಆತ್ಮಹತ್ಯೆಗೆ ಶರಣಾದ ನವದಂಪತಿ

    ತುಮಕೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ನವದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೆಂಪಸಾಗರ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು 247 ಕೊರೊನಾ ಕೇಸ್, 1 ಸಾವು

    ಪತ್ನಿ ವರಲಕ್ಷ್ಮೀ(23) ಪತಿ ಮುನಿಸ್ವಾಮಿ (30) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಇವರಿಗೆ ಆರು ತಿಂಗಳ ಹಿಂದಷ್ಟೆ ಮದುವೆಯಾಗಿತ್ತು. ವರಲಕ್ಷ್ಮಿ ಅವರು ಸಂಬಂಧಿಕ ಮುನಿಸ್ವಾಮಿಯನ್ನೇ ಮದುವೆಯಾಗಿದ್ದರು. ಇದೀಗ ಅವರು ಕೌಟುಂಬಿಕ ಕಲಹದಿಂದ ಬೇಸತ್ತು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಇತ್ತ ಪತ್ನಿಯ ಆತ್ಮಹತ್ಯೆ ವಿಷಯ ತಿಳಿದ ಮುನಿಸ್ವಾಮಿಯೂ ಹೊಲದಲ್ಲಿದ್ದ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಭೀಕರ ಅಪಘಾತ- ಒಂದೇ ಕುಟುಂಬದ ಮೂವರ ದುರ್ಮರಣ, ಮಹಿಳೆ ಸ್ಥಿತಿ ಗಂಭೀರ

  • ಫ್ರೆಂಡ್ಸ್ ಜೊತೆಗೆ ಊರು ಸುತ್ತೋಕೆ ಬಂದು ಪೊಲೀಸರ ಕೈಗೆ ತಗ್ಲಾಕೊಂಡ ನವದಂಪತಿ

    ಫ್ರೆಂಡ್ಸ್ ಜೊತೆಗೆ ಊರು ಸುತ್ತೋಕೆ ಬಂದು ಪೊಲೀಸರ ಕೈಗೆ ತಗ್ಲಾಕೊಂಡ ನವದಂಪತಿ

    ಯಾದಗಿರಿ: ಸಂಪೂರ್ಣ ಲಾಕ್‍ಡೌನ್ ಹಿನ್ನೆಲೆ ಅಂತರ್ ಜಿಲ್ಲೆಯ ಪ್ರಯಾಣ ನಿಷೇಧವಿದೆ. ಹೀಗಿದ್ದರೂ ಹೊಸದಾಗಿ ಮದುವೆಯಾದ ನವದಂಪತಿ ಫ್ರೆಂಡ್ಸ್ ಜೊತೆಗೆ ಊರು ಸುತ್ತೋಕೆ ಬಂದು, ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದಾರೆ. ಇದನ್ನೂ ಓದಿ: ಬೈಕ್ ಬಿಟ್ಟು ಬಿಡಿ – ಡಿವೈಎಸ್ಪಿ ಕಾಲಿಗೆ ಬಿದ್ದು ಮಹಿಳೆ ಕಣ್ಣೀರು

    ಕಲಬುರಗಿ ಜಿಲ್ಲೆಯ ರಾಮತೀರ್ಥದ ನವ ಜೋಡಿಯೊಂದು ಯಾದಗಿರಿ ಮಲ್ಲಯ್ಯನ ದರ್ಶನಕ್ಕೆ ಅವರ ಗೆಳೆಯರು ಜೊತೆಗೆ ಬಂದಿದ್ದರು. ಯಾದಗಿರಿ ಸಂಪೂರ್ಣ ಲಾಕ್‍ಡೌನ್ ಆಗಿರುವ ಹಿನ್ನೆಲೆ ನಗರದಲ್ಲಿ ಪೊಲೀಸರ ಫುಲ್ ರೌಂಡ್ಸ್ ನಡೆಸುತ್ತಿದ್ದರು. ಈ ವೇಳೆ ಯಾದಗಿರಿ ನಗರದ ಡಿಗ್ರಿ ಕಾಲೇಜು ವೃತ್ತದಲ್ಲಿ ಪೊಲೀಸರ ಕೈಯಲ್ಲಿ ಈ ನವದಂಪತಿ ಸಿಕ್ಕಿದ್ದಾರೆ. ಪೊಲೀಸರ ಕಂಡ ಕೂಡಲೇ ಹೈಡ್ರಾಮಾ ಶುರು ಮಾಡಿದ ದಂಪತಿ, ಕಾರಿನಲ್ಲಿ ವಧುವಿನ ಗೆಟಪ್‍ನಲ್ಲಿದ್ದವಳು ಅಪ್ರಾನ್ ಧರಿಸಿದ ಸ್ಟಾಪ್ ನರ್ಸ್ ಆಗಿ ಬದಲಾಗಿ ಬಿಟ್ಟಿದ್ದಾಳೆ. ಇದನ್ನೂ ಓದಿ: ಮದ್ಯದಂಗಡಿಗೆ ಮುಗಿಬಿದ್ದ ಜನ

    ಈ ಬಗ್ಗೆ ವಿಚಾರಣೆ ನಡೆಸಿದಾಗ. ಪೊಲೀಸರಿಗೆ ದಾರಿ ತಪ್ಪಿಸಲು ಮುಂದಾದ ಪತಿ,ಸಾರ್ ನನ್ನ ಹೆಂಡತಿ ಸ್ಟಾಪ್ ನರ್ಸ್ ಡ್ಯೂಟಿಗೆ ಬಿಡಲು ಮತ್ತು ಜೊತೆಗೆ ನಾನು ವ್ಯಾಕ್ಸಿನ್ ಹಾಕಿಕೊಳ್ಳಲು ಬಂದೆ ಅಂತ ಕಲರ್‍ಕಲರ್ ಕಾಗೆ ಹಾರಿಸೋಕೆ ಶುರು ಮಾಡಿದ್ದಾನೆ. ಗಂಡ-ಹೆಂಡತಿ ಡ್ರಾಮಾ ಕಂಡು ಕೆಂಡಾಮಂಡಲವಾದ, ಎಸ್ಪಿ ವೇದಮೂರ್ತಿ, ಸಂಚಾರಿ ಪಿಎಸ್ ಐ ಪ್ರದೀಪ್, ತಹಶಿಲ್ದಾರ ಚನ್ನಮಲ್ಲಪ್ಪ ಘಂಟಿ ಬೈದು ಬುದ್ಧಿವಾದ ಹೇಳಿದರು. ಕಾರು ವಶಕ್ಕೆ ಪಡೆದು ದಂಡ ಹಾಕಿ ನವದಂಪತಿಗಳಿಗೆ ಮತ್ತು ಸ್ನೇಹಿತರಿಗೆ ಪೊಲೀಸರು ಖಡಕ್ ವಾನಿರ್ಂಗ್ ಕೊಟ್ಟಿದ್ದಾರೆ.  ಇದನ್ನೂ ಓದಿ: ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಗ್ರಾಮದಲ್ಲಿ ಅದ್ಧೂರಿ ಜಾತ್ರೆ

  • ಕೊರೊನಾ ಭಯ – ಪತ್ನಿಯಿಂದ ಅಂತರ ಕಾಪಾಡಿದ್ದಕ್ಕೆ ಪತಿಗೆ ಪುರುಷತ್ವ ಪರೀಕ್ಷೆ

    ಕೊರೊನಾ ಭಯ – ಪತ್ನಿಯಿಂದ ಅಂತರ ಕಾಪಾಡಿದ್ದಕ್ಕೆ ಪತಿಗೆ ಪುರುಷತ್ವ ಪರೀಕ್ಷೆ

    ಭೋಪಾಲ್‌: ಕೊರೊನಾ ಬರುತ್ತದೆ ಎಂದು ಹೆದರಿ ಪತ್ನಿಯಿಂದ ಅಂತರ ಕಾಯ್ದುಕೊಂಡಿದ್ದ ನವವಿವಾಹಿತನೊಬ್ಬ ಪುರುಷತ್ವ ಪರೀಕ್ಷೆಗೆ ಒಳಗಾದ ಪ್ರಸಂಗ ಮಧ್ಯಪ್ರದೇಶದಲ್ಲಿ ನಡೆದಿದೆ.

    ದಂಪತಿ ಜೂನ್‌ 29 ರಂದು ಕೊರೊನಾ ನಿಯಮಗಳ ಪಾಲನೆಯೊಂದಿಗೆ ಮದುವೆಯಾಗಿದ್ದರು. ಮದುವೆಯಾದ ನಂತರ ಪತ್ನಿಯ ಮನೆಯವರಿಗೆ ಕೊರೊನಾ ಬಂದಿದೆ.

    ಈ ವಿಚಾರ ತಿಳಿದು ಪತ್ನಿಗೂ ಕೊರೊನಾ ಬಂದಿರಬಹುದು. ಆದರೆ ಲಕ್ಷಣ ಕಾಣಿಸುತ್ತಿಲ್ಲ ಎಂದು ಪತಿ ಭಾವಿಸಿದ್ದ. ಅಷ್ಟೇ ಅಲ್ಲದೇ ಕೊರೊನಾ ವಿಷಯವನ್ನು ಪ್ರಸ್ತಾಪಿಸಿ ಪತ್ನಿಯಿಂದ ಅಂತರ ಕಾಯ್ದುಕೊಂಡಿದ್ದ.  ಇದನ್ನೂ ಓದಿ: ನನ್ನ ಗಂಡನಿಗೆ ಪುರುಷತ್ವ ಇಲ್ಲ ಎಂದು ಪೊಲೀಸರಿಗೆ ಪತ್ನಿ ದೂರು

    ಪತಿಯ ಈ ವಿಲಕ್ಷಣ ನಡೆಯಿಂದ ನವವಿವಾಹಿತೆ ಅನುಮಾನಗೊಂಡು, ಪುರುಷತ್ವ ಇಲ್ಲದ್ದಕ್ಕೆ ಈತ ಈ ರೀತಿ ನಡೆದುಕೊಳ್ಳುತ್ತಿದ್ದಾನೆ ಎಂದು ಭಾವಿಸಿ ಗಲಾಟೆ ಮಾಡಿ ತವರು ಮನೆಗೆ ತೆರಳಿದ್ದಾಳೆ.

    ಮಗಳು ದಿಢೀರ್‌ ಬಂದ ವಿಚಾರ ತಿಳಿದು ಪೋಷಕರು ವಿಚಾರಿಸಿದ್ದಾರೆ. ವಿಷಯ ತಿಳಿದು ಎರಡು ಕುಟುಂಬದ ಸದಸ್ಯರು ಮಾತುಕತೆ ನಡೆಸಿ ಸಂಧಾನ ನಡೆಸಿದರೂ ಪತ್ನಿಯ ಅನುಮಾನ ಮಾತ್ರ ಪರಿಹಾರವಾಗಲೇ ಇಲ್ಲ.

    ಪತಿಗೆ ಪುರುಷತ್ವ ಪರೀಕ್ಷೆ ಮಾಡಲೇಬೇಕೆಂದು ಪಟ್ಟು ಹಿಡಿದಿದ್ದ ಪತ್ನಿ ಡಿ. 2 ರಂದು ವೈವಾಹಿಕ ವ್ಯಾಜ್ಯಗಳ ಕೇಂದ್ರಕ್ಕೆ ತೆರಳಿ ಮನವಿ ಸಲ್ಲಿಸಿದ್ದಾಳೆ. ಈ ಕೇಂದ್ರದ ಅಧಿಕಾರಿಗಳು ಪತಿಯನ್ನು ಕರೆಸಿ ದಾಂಪತ್ಯ ಜೀವನ ಮುಂದುವರಿಯಬೇಕಾದರೆ ಪುರುಷತ್ವ ಪರೀಕ್ಷೆಗೆ ಒಳಪಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ. ಸಲಹೆಯನ್ನು ಒಪ್ಪಿದ ಪತಿ ಪುರುಷತ್ವ ಪರೀಕ್ಷೆ ಎದುರಿಸಿದ್ದು ಶುಕ್ರವಾರ ಪಾಸಿಟಿವ್‌ ಫಲಿತಾಂಶ ಬಂದಿದೆ.

    ಪುರುಷತ್ವ ಸಾಬೀತಾದ ಬಳಿಕ ಪೋಕಷರು ಆಕೆಯ ಜೊತೆ ಮಾತನಾಡಿ ಗಂಡನ ಮನೆಗೆ ತೆರಳಬೇಕು ಎಂದು ಸಲಹೆ ನೀಡಿದ್ದಾರೆ. ಸಲಹೆಯನ್ನು ಒಪ್ಪಿದ ಪತ್ನಿ ಕೊನೆಗೂ ಪತಿ ಮನೆಗೆ ಹೋಗಲು ಒಪ್ಪಿಕೊಂಡಿದ್ದಾಳೆ.

  • ಮನೆಯೊಳಗೆ ಬರದಂತೆ ನವದಂಪತಿಯನ್ನು ತಡೆದ ಮಾಲೀಕ

    ಮನೆಯೊಳಗೆ ಬರದಂತೆ ನವದಂಪತಿಯನ್ನು ತಡೆದ ಮಾಲೀಕ

    ಬೆಂಗಳೂರು: ಕೊರೊನಾ ವೈರಸ್ ಹರಡವುದನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಬಾರಿ ಲಾಕ್ ಡೌನ್ ವಿಸ್ತರಿಸುವಂತೆ ಕರೆ ಕೊಟ್ಟಿದ್ದಾರೆ. ಲಾಕ್ ಡೌನ್‍ನಿಂದಾಗಿ ಅನೇಕ ಮಂದಿಯ ಜೀವನ ಅತಂತ್ರವಾಗಿದೆ. ಹೀಗೆ ಬೆಂಗಳೂರಲ್ಲಿ ಮದುವೆ ಮುಗಿಸಿಕೊಂಡು ಬಂದ ನವದಂಪತಿಯನ್ನು ಮಾಲೀಕನೊಬ್ಬ ತಡೆದ ಪ್ರಸಂಗವೊಂದು ನಡೆದಿದೆ.

    ಹೌದು. ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ರಂಗ, ಪವಿತ್ರ ಎಂಬಾಕೆಯನ್ನು ಮದುವೆಯಾಗಿದ್ದಾನೆ. ಕೆಲಸವಿಲ್ಲದೆ ಬೇರೆಯವರ ಮನೆಯಲ್ಲಿದ್ದ ರಂಗ ನಿನ್ನೆ ರಾತ್ರಿ 11 ಗಂಟೆಗೆ ತಾನು ಉಳಿದುಕೊಂಡಿದ್ದ ಮನೆಗೆ ವಾಪಸ್ಸಾಗಿದ್ದಾನೆ. ಈ ವೇಳೆ ಮಾಲೀಕ ಗೇಟಿಗೆ ಬೀಗ ಹಾಕಿ ನವದಂಪತಿಯನ್ನು ಹೊಹಾಕಿದ್ದಾನೆ.

    ಸುತ್ತಾಡಿ ಬಂದಿದ್ದೀರಿ ಮೆಡಿಕಲ್ ರಿಪೋರ್ಟ್ ತಗೊಂಡು ಬನ್ನಿ ಎಂದು ಮಾಲೀಕ ಗಲಾಟೆ ಮಾಡಿದ್ದಾನೆ. ಅಲ್ಲದೆ ಕೊರೊನಾ ಬಂದಿರುವ ಶಂಕೆ ಇದೆ. ಹೀಗಾಗಿ ಮೆಡಿಕಲ್ ರಿಪೋರ್ಟ್ ತಂದು ಮನೆಗೆ ಬನ್ನಿ ಎಂದು ಗೇಟಿಗೆ ಬೀಗ ಜಡಿದಿದ್ದಾನೆ. ಪರಿಣಾಮ ಬೇರೆ ದಾರಿ ಇಲ್ಲದೆ ದಂಪತಿ ಕಾರಿನಲ್ಲೇ ಮಲಗಿದ್ದಾರೆ.

    ಮದ್ವೆಯಾಗಿ 1 ತಿಂಗಳಾಗಿದೆ. ಕ್ಯಾಬ್ ಕೆಲಸವೂ ಇಲ್ಲದೆ ಹಸಿದಿದ್ದ ನವದಂಪತಿ ಬಗಲಗುಂಟೆಯಲ್ಲಿ ಮನೆ ಮಾಡಿ ಊಟಕ್ಕಾಗಿ ಬೇರೆಯವರ ಮನೆಯಲ್ಲಿದ್ದರು. ಕಷ್ಟದಲ್ಲಿದ್ದರೂ ಮನೆ ಮಾಲೀಕನ ದುರ್ವರ್ತನೆಗೆ ನವದಂಪತಿ ನೊಂದಿದ್ದಾರೆ.