Tag: ನವಜೋತ್ ಸಿಂಗ್ ಸಿದ್ದು

  • ಪಂಜಾಬ್ ಕಾಂಗ್ರೆಸ್‍ಗೆ ನಡುಕ- ಸಿಧು ಬೆನ್ನಲ್ಲೇ ನಾಲ್ವರು ರಾಜೀನಾಮೆ

    ಪಂಜಾಬ್ ಕಾಂಗ್ರೆಸ್‍ಗೆ ನಡುಕ- ಸಿಧು ಬೆನ್ನಲ್ಲೇ ನಾಲ್ವರು ರಾಜೀನಾಮೆ

    ಚಂಡೀಗಢ: 2022ರ ಚುನಾಣೆ ಹತ್ತಿರವಾದ ಬೆನ್ನಲ್ಲೇ ಪಂಜಾಬ್ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗುತ್ತಿದೆ. ಇಂದು ಪಂಜಾಬ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಇದೀಗ ಮತ್ತೆ ನಾಲ್ವರು ನಾಯಕರು ರಾಜೀನಾಮೆ ನೀಡಿದ್ದಾರೆ.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ರಜಿಯಾ ಸುಲ್ತಾನಾ, ಶಾಸಕ ಪರಗಟ ಸಿಂಗ್, ಪಂಜಾಬ್ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಗೌತಮ್ ಸೇಠ್ (ತರಬೇತಿ ಮೇಲ್ವಿಚಾರಣೆ), ಕಜಾಂಚಿ ಗುಲ್ಜರ್ ಇಂದರ್ ಚಾಹಲ್ ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಿಧು ಅವರೊಂದಿಗೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದನ್ನೂ ಓದಿ:  ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ

    ಸಿಧು ಅವರ ರಾಜೀನಾಮೆಯನ್ನು ಕಾಂಗ್ರೆಸ್ ವರಿಷ್ಠರು ಸ್ವೀಕರಿಸಿಲ್ಲ. ರಾಜ್ಯದ ಮಟ್ಟದಲ್ಲಿಯೇ ವಿಚಾರ ಬಗೆಹರಿಸಿಕೊಳ್ಳುವಂತೆ ವರಿಷ್ಠರು ಪಕ್ಷದ ಮುಖಂಡರಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ ಎಂದು ಎಎನ್‍ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

    ನವಜೋತ್ ಸಿಂಗ್ ರಾಜೀನಾಮೆ ನೀಡುತ್ತಿದ್ದಂತೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಪಂಜಾಬ್ ಕಾಂಗ್ರೆಸ್‍ನಲ್ಲಿ ನಡುಕ ಶುರುವಾಗಿದೆ.

  • ಎರಡು ದೇಶಗಳ ಸ್ನೇಹ ವೃದ್ಧಿಸಲು ಸಿದ್ದು ಭಾರತ ಪ್ರಧಾನಿ ಆಗಬೇಕಿಲ್ಲ – ಗೆಳೆಯನನ್ನು ಹಾಡಿಹೊಗಳಿದ ಇಮ್ರಾನ್ ಖಾನ್

    ಎರಡು ದೇಶಗಳ ಸ್ನೇಹ ವೃದ್ಧಿಸಲು ಸಿದ್ದು ಭಾರತ ಪ್ರಧಾನಿ ಆಗಬೇಕಿಲ್ಲ – ಗೆಳೆಯನನ್ನು ಹಾಡಿಹೊಗಳಿದ ಇಮ್ರಾನ್ ಖಾನ್

    ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ನವಜೋತ್ ಸಿಂಗ್ ಸಿದ್ದುರನ್ನು ಏಕೆ ಟೀಕೆ ಮಾಡುತ್ತಿದ್ದಾರೆಂದು ನನಗೆ ತಿಳಿಯುತ್ತಿಲ್ಲ. ಆದರೆ ಎರಡು ದೇಶಗಳ ಸ್ನೇಹವನ್ನು ವೃದ್ಧಿಸಲು ಸಿದ್ದು ಭಾರತದ ಪ್ರಧಾನಿ ಆಗಬೇಕೆಂದು ನನಗೆ ಆನ್ನಿಸುತ್ತಿಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

    ಸಿಖ್ಖರ ಧಾರ್ಮಿಕ ಕೇಂದ್ರವಾಗಿರುವ ದರ್ಬಾರ್ ಗೆ ಭಾರತದಿಂದ ಸಂಪರ್ಕ ಕಲ್ಪಿಸುವ ಕರ್ತಾರಪುರ ಮಾರ್ಗದ ಕಾರಿಡಾರ್ ಕಾಮಗಾರಿಗೆ ಇಮ್ರಾನ್ ಖಾನ್ ಶಂಕುಸ್ಥಾಪನೆ ಮಾಡಿದರು. ಈ ವೇಳೆ ಮಾತನಾಡಿದ ಇಮ್ರಾನ್ ಖಾನ್, ಎರಡು ದೇಶಗಳ ನಡುವೆ ಉತ್ತಮ ನಾಗರಿಕ ಸಂಬಂಧ ವೃದ್ಧಿಯಾಗಬೇಕಿದೆ. ನಾನು ಭಾರತಕ್ಕೆ ಭೇಟಿ ನೀಡಿದ ವೇಳೆ ಪಾಕಿಸ್ತಾನದ ಸೈನ್ಯಕ್ಕೆ ಶಾಂತಿ ಅಗತ್ಯವಿಲ್ಲ ಎಂಬ ಮಾತು ಹೇಳಿದ್ದರು. ಆದರೆ ಇಂದು ನಾನು ಪಾಕಿಸ್ತಾನದ ಪ್ರಧಾನಿಯಾಗಿ, ಪಕ್ಷದ ನಾಯಕನಾಗಿ ಹಾಗೂ ನಮ್ಮ ದೇಶದ ಸೈನ್ಯದ ಪರವಾಗಿ ಹೇಳುತ್ತಿದ್ದು, ಎರಡು ದೇಶಗಳೊಂದಿಗೆ ಉತ್ತಮ ನಾಗರಿಕ ಸಂಬಂಧಗಳು ಬೆಳೆಯಬೇಕು ಎಂದು ತಿಳಿಸಿದ್ರು.

    ಇದೇ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡ, ಶಾಸಕ ನವಜೋತ್ ಸಿಂಗ್ ಸಿದ್ದುರನ್ನು ಹಾಡಿಹೊಗಳಿದ ಇಮ್ರಾನ್ ಖಾನ್, ನನ್ನ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ದುರನ್ನ ಏಕೆ? ಭಾರತದಲ್ಲಿ ಟೀಕೆ ಮಾಡಿದರು ಎಂದು ನನಗೆ ಗೊತ್ತಿಲ್ಲ. ಸಿದ್ದು ಶಾಂತಿ ಬಗ್ಗೆ ಮಾತನಾಡುತ್ತಿದ್ದಾರೆ ಅಷ್ಟೇ. ಒಂದೊಮ್ಮೆ ಸಿದ್ದು ಪಾಕ್ ನೆಲದಲ್ಲಿ ಚುನಾವಣೆ ಎದುರಿಸಿದರು ಗೆದ್ದು ಬರುತ್ತಾರೆ. ಎರಡು ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ಸಿದ್ದು ಭಾರತದ ಪ್ರಧಾನಿ ಆಗಬೇಕು ಎಂದು ನನಗೆ ಆನ್ನಿಸುತ್ತಿಲ್ಲ ಎಂದರು.

    ಭಾರತೀಯರಿಗೆ ಗುರುದ್ವಾರದ ಮಾರ್ಗ ತೆರೆದ ಕಾರಣ ವಿಸಾ ಇಲ್ಲದೇ ತೆರಳಬಹುದಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಗೆ ಸಿದ್ದು ಮಂಗಳವಾರವೇ ಪಂಜಾಬ್‍ಗೆ ತೆರಳಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಹರ್ ಸಿಮ್ರತ್ ಕೌರ್ ಭಾಗಿಯಾಗಿದ್ದರು.

    ಇತ್ತ ಪಾಕ್ ಕಾರ್ಯಕ್ರಮದಲ್ಲಿ ಭಾರತದ ಸಚಿವೆ ಭಾಗವಹಿಸಿರುವುದು ದ್ವಿಪಕ್ಷೀಯ ಸಂಬಂಧದ ಆರಂಭದ ಸೂಚನೆ ಅಲ್ಲ. ಕಳೆದ 20 ವರ್ಷಗಳಿಂದ ಈ ಕಾರಿಡಾರ್ ಆರಂಭ ಮಾಡಲು ಭಾರತ ಮನವಿ ಸಲ್ಲಿಸಿತ್ತು. ಇದೇ ಮೊದಲ ಬಾರಿ ಪಾಕ್ ಪ್ರತಿಕ್ರಿಯೆ ನೀಡಿದೆ. ಆದರೆ ಭಯೋತ್ಪಾದನೆಗೆ ಪಾಕ್ ಸಂಪೂರ್ಣವಾಗಿ ಬೆಂಬಲ ನೀಡುವುದನ್ನು ನಿಲ್ಲಿಸಿದ ಬಳಿಕವೇ ಮಾತುಕತೆ ಆರಂಭವಾಗುತ್ತದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಮ್ರಾನ್ ಖಾನ್ ಆಮಂತ್ರಣವನ್ನು ಒಪ್ಪಿಕೊಂಡ ನವಜೋತ್ ಸಿಂಗ್ ಸಿದ್ದು

    ಇಮ್ರಾನ್ ಖಾನ್ ಆಮಂತ್ರಣವನ್ನು ಒಪ್ಪಿಕೊಂಡ ನವಜೋತ್ ಸಿಂಗ್ ಸಿದ್ದು

    ಚಂಡೀಗಡ: ಮಾಜಿ ಕ್ರಿಕೆಟ್ ಆಟಗಾರ ಹಾಗೂ ನೂತನ ಪ್ರಧಾನಿ ಇಮ್ರಾನ್ ಖಾನ್ ರವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ರಾಜಕಾರಣಿಯಾದ ನವಜೋತ್ ಸಿಂಗ್ ಸಿದ್ದು ಆಮಂತ್ರಣ ಸ್ವೀಕರಿಸಿದ್ದಾರೆ.

    ಇದೇ ಆಗಸ್ಟ್ 18 ರಂದು ಪಾಕಿಸ್ತಾನದ ಇಸ್ಲಾಮಬಾದ್ ನಲ್ಲಿ ನಡೆಯಲಿರುವ ನೂತನ ಪ್ರಧಾನಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಇಮ್ರಾನ್ ಖಾನ್ ರವರು ನವಜೋತ್ ಸಿಂಗ್ ಸಿದ್ದುರವರಿಗೆ ಆಮಂತ್ರಣವನ್ನು ನೀಡಿದ್ದರು. ಇವರ ಈ ಆಮಂತ್ರಣವನ್ನು ಒಪ್ಪಿಕೊಂಡಿರುವ ಅವರು ಕೇಂದ್ರ ಗೃಹ ಮಂಡಳಿ ಹಾಗೂ ಪಂಜಾಬ್ ಮುಖ್ಯಮಂತ್ರಿಗಳ ಕಾರ್ಯಲಯದ ಅನುಮತಿಗಾಗಿ ಕೋರಿದ್ದಾರೆ ಎಂದು ತಿಳಿದು ಬಂದಿದೆ.

    ಇಮ್ರಾನ್ ಖಾನ್ ರವರು ಪಾಕಿಸ್ತಾನದ ತೆಹ್ರಿಕ್-ಇ-ಇನ್ಸಾಫ್(ಪಿಟಿಐ) ಪಕ್ಷದ ಮುಖಂಡರಾಗಿದ್ದು, ಖುದ್ದು ದೂರವಾಣಿ ಮೂಲಕ ಸಿದ್ದುರವರನ್ನು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.

    ಆಹ್ವಾನಕ್ಕೂ ಮುನ್ನ ಸಿದ್ದು ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಬಂಧವು ಕ್ರಿಕೆಟ್ ಮೂಲಕವಾದರೂ ಬದಲಾವಣೆಯಾಗುತ್ತದೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews