Tag: ನವಜೋತ್ ಸಿಂಗ್

  • ಪಂಜಾಬ್ ಕಾಂಗ್ರೆಸ್‍ನ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ

    ಪಂಜಾಬ್ ಕಾಂಗ್ರೆಸ್‍ನ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ

    ಚಂಡೀಗಢ: ಪಂಜಾಬ್ ಕಾಂಗ್ರೆಸ್‍ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಟ್ವೀಟ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಪಂಚರಾಜ್ಯಗಳ ಸೋಲಿನ ಬಳಿಕ 5 ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಜಾಗೊಳಿಸಿದ ಮರುದಿನ ಟ್ವಿಟ್ಟರ್‌ನಲ್ಲಿ ರಾಜೀನಾಮೆಯ ಪತ್ರವನ್ನು ಶೇರ್ ಮಾಡಿಕೊಂಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?:
    ಕಾಂಗ್ರೆಸ್ ಅಧ್ಯಕ್ಷರ ಅಪೇಕ್ಷೆಯಂತೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿ ಸೋನಿಯಾ ಗಾಂಧಿಗೆ ಬರೆದ ರಾಜೀನಾಮೆ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.

    ನಿನ್ನೆ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸೇರಿದಂತೆ ಮಣಿಪುರ, ಗೋವಾ, ಉತ್ತರಾಖಂಡ ಹಾಗೂ ಉತ್ತರ ಪ್ರದೇಶದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿಧು ಸೇರಿ 4 ರಾಜ್ಯದ ಕಾಂಗ್ರೆಸ್ ಅಧ್ಯಕ್ಷರನ್ನು ವಜಾಗೊಳಿಸಿದ ಸೋನಿಯಾ ಗಾಂಧಿ

    ಪಂಜಾಬ್‍ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸಿತು. ಪಂಜಾಬ್‍ನಲ್ಲಿ ಕಾಂಗ್ರೆಸ್ 18 ಸ್ಥಾನ ಗೆದ್ದರೆ, ಉತ್ತರಾಖಂಡದಲ್ಲಿ 19, ಗೋವಾದಲ್ಲಿ 11, ಮಣಿಪುರದಲ್ಲಿ 5 ಮತ್ತು ಉತ್ತರ ಪ್ರದೇಶದಲ್ಲಿ ಕೇವಲ 2 ಸ್ಥಾನ ಗೆದ್ದುಕೊಂಡು ಕಾಂಗ್ರೆಸ್ ಮುಖಭಂಗ ಅನುಭವಿಸಿತ್ತು. ಇದನ್ನೂ ಓದಿ: ರಷ್ಯಾದ ಆಕ್ರಮಣ ಪ್ರತಿಭಟಿಸಲು ಕಚ್ಚಾ ತೈಲ, ಅನಿಲ ಖರೀದಿಯನ್ನು ನಿಲ್ಲಿಸಬೇಕು: ಇಂಗ್ಲೆಂಡ್ ಪ್ರಧಾನಿ

  • ನಮ್ಮಣ್ಣ ಒಬ್ಬ ಕ್ರೂರಿ ಮನುಷ್ಯ -ನವಜೋತ್ ಸಿಂಗ್ ಸಹೋದರಿ ಸುಮನ್

    ನಮ್ಮಣ್ಣ ಒಬ್ಬ ಕ್ರೂರಿ ಮನುಷ್ಯ -ನವಜೋತ್ ಸಿಂಗ್ ಸಹೋದರಿ ಸುಮನ್

    ನವದೆಹಲಿ: ನಮ್ಮಣ್ಣ ಒಬ್ಬ ಕ್ರೂರಿ ಮನುಷ್ಯ ಎಂದು ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಅವರ ಸಹೋದರಿ ಸುಮನ್  ವಾಗ್ದಾಳಿ  ಮಾಡಿದ್ದಾರೆ.

    ಅನಿವಾಸಿ ಭಾರತೀಯರಾದ ಸದ್ಯ ಅಮೆರಿಕಾದಲ್ಲಿ ನೆಲೆಸಿರುವ ನವಜೋತ್ ಸಹೋದರಿ ಸುಮನ್ ತೋರ್, ನವಜೋತ್ ಸಿಂಗ್ ಅವರ ಕುರಿತಾಗಿ ಸಾಕಷ್ಟು ವಿಚಾಗರಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ನವಜೋತ್ ನಮ್ಮ ಹಿರಿಯ ಸಹೋದರಿ ಅಪಘಾತದಲ್ಲಿ ದುರ್ಮರಣ ಕಂಡಾಗ ನೋಡಲಿಕ್ಕೂ ಬರಲಿಲ್ಲ. ಜೊತೆಗೆ ಕನಿಷ್ಠ ಪಕ್ಷ ಒಂದು ಶ್ರದ್ಧಾಂಜಲಿ ಸಲ್ಲಿಸಲೂ ಆಗಮಿಸಿರಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

    ನಮ್ಮ ತಂದೆ ಭಗವಂತ ಸಿಂಗ್ ಸಿಧು ಸಾವನ್ನಪ್ಪುತ್ತಿದ್ದಂತೆ ನವಜೋತ್ ನನ್ನ ಹಾಗೂ ನಮ್ಮ ತಾಯಿಯನ್ನು ಮನೆಯಿಂದ ಹೊರ ಹಾಕಿದರು. ಆ ಕ್ಷಣದಲ್ಲಿ ನಾವು ಬಸ್‍ಸ್ಟ್ಯಾಂಡ್‍ವರೆಗೆ ಬರಿಗಾಲಿನಲ್ಲೇ ನಡೆದುಕೊಂಡು ಹೋಗಿದ್ದೆವು. ಅಷ್ಟರ ಮಟ್ಟಿಗೆ ಅವರು ಕ್ರೂರತೆಯಿಂದ ನಮ್ಮೊಂದಿಗೆ ವರ್ತಿಸಿದ್ದಾರೆ ಎಂದು ಸುಮನ್ ಆರೋಪಿಸಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಮೊಮ್ಮಗಳು ನೇಣು ಬಿಗಿದು ಆತ್ಮಹತ್ಯೆ

    ನಾನು ಜನವರಿ 20 ರಂದು ಅವರ ಭೇಟಿಗೆ ಹೋಗಿದ್ದೆ. ಮನೆ ಬಾಗಿಲು ತೆರೆಯದೇ ನನ್ನನ್ನು ಅವಮಾನಿಸಿ ಕಳಿಸಿದ್ದರು ಎಂದು ಸಹೋದರನ ಕುರಿತಾಗಿ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಗುವಾದ ಬಳಿಕ ಡಿಪ್ರೆಷನ್‌ಗೆ ಒಳಗಾಗಿದ್ರಾ ಬಿಎಸ್‌ವೈ ಮೊಮ್ಮಗಳು?

  • ನವಜೋತ್ ಸಿಂಗ್‍ನನ್ನು ಪಾಕಿಸ್ತಾನಕ್ಕೆ ಕೊಟ್ಟು ಪಾತಕಿ ದಾವೂದ್‍ನನ್ನ ಭಾರತಕ್ಕೆ ತನ್ನಿ: ಶಾಸಕ ಯತ್ನಾಳ

    ನವಜೋತ್ ಸಿಂಗ್‍ನನ್ನು ಪಾಕಿಸ್ತಾನಕ್ಕೆ ಕೊಟ್ಟು ಪಾತಕಿ ದಾವೂದ್‍ನನ್ನ ಭಾರತಕ್ಕೆ ತನ್ನಿ: ಶಾಸಕ ಯತ್ನಾಳ

    -ಮನಸ್ಸು ಮಾಡಿದ್ರೆ ಅಂಬೇಡ್ಕರ್ ಇಸ್ಲಾಂ ಧರ್ಮ ಸೇರುತ್ತಿದ್ರು

    ಬಾಗಲಕೋಟೆ: ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರನ್ನು ಪಾಕಿಸ್ತಾನದವರು ತೆಗೆದುಕೊಂಡು ಭೂಗತ ಪಾತಕಿ ದಾವೂದ್ ಹಾಗೂ ಇನ್ನೊಬ್ಬ ಸಹಚರನನ್ನು ಭಾರತಕ್ಕೆ ಕೊಡಲಿ. ಆಗ ನಾವು ಎರಡು ಹೆಜ್ಜೆ ಮುಂದೆ ಬಂದು ಸ್ನೇಹ ಹಸ್ತ ಚಾಚುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ಗೆ ಭಾರತದ ಬಗ್ಗೆ ದೇಶಭಕ್ತಿ ಇದ್ದರೆ ನವಜೋತ್ ಸಿಂಗ್ ಅವರನ್ನು ಪಕ್ಷದಿಂದ ತಕ್ಷಣವೇ ವಜಾ ಮಾಡಲಿ. ಅಷ್ಟೇ ಅಲ್ಲದೆ ದೇಶದ್ರೋಹಿ ಪ್ರಕರಣದಡಿ ಅವರ ಮೇಲೆ ದೂರು ದಾಖಲಿಸಬೇಕು ಎಂದು ಆಗ್ರಹಿಸಿದರು.

    ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಈ ಬಾರಿ ಒಳ್ಳೆಯಕಾಲ ಆರಂಭವಾಗಿದೆ. ದೇಶದ ಎಲ್ಲ ರಾಜಕೀಯ ಪಕ್ಷಗಳು ವಿರೋಧ ಮಾಡುವುದನ್ನು ಕಡಿಮೆ ಮಾಡಿವೆ. ರಾಮನ ಶಕ್ತಿ ಏನು ಎನ್ನುವುದು ಎಲ್ಲ ಪಕ್ಷ ಹಾಗೂ ಜನಾಂಗದವರಿಗೆ ಗೊತ್ತಾಗಿದೆ. ಅಯೋಧ್ಯೆ, ಮಥುರಾ ಹಾಗೂ ಕಾಶಿಯಲ್ಲಿ ಕೃಷ್ಣ ಮಂದಿರ, ರಾಮ ಮಂದಿರ, ವಿಶ್ವನಾಥ್ ಮಂದಿರ ನಿರ್ಮಾಣವಾಗಬೇಕೆಂದು ಹಿಂದೂಗಳ ಭಾವನೆಯಾಗಿದೆ ಎಂದರು.

    ಕೆಲವು ಮುಸ್ಲಿಂ ಏಜೆಂಟರು ಈ ದೇಶದಲ್ಲಿದ್ದಾರೆ. ಅವರು ದಲಿತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಅಂಬೇಡ್ಕರ್ ಅವರು ಎಂದಿಗೂ ಹಿಂದೂಗಳ ಭಾವನೆಗೆ ನೋವಾಗದಂತೆ ನಡೆದುಕೊಂಡಿಲ್ಲ. ಒಂದು ವೇಳೆ ಅವರು ಮನಸ್ಸು ಮಾಡಿದ್ದರೆ ಇಸ್ಲಾಂ ಧರ್ಮವನ್ನೇ ಸ್ವೀಕಾರ ಮಾಡುತ್ತಿದ್ದರು. ಆದರೆ ಹಿಂದೂ ಧರ್ಮದ ಅಂಗವಾದ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಕೆಲವರು ದಲಿತ ಹಾಗೂ ಅಲ್ಪಸಂಖ್ಯಾತ ಒಕ್ಕೂಟ ಮಾಡಿಕೊಂಡು ಹಿಂದೂಗಳನ್ನು ನಾಶ ಮಾಡುತ್ತೇವೆ ಅಂತ ಭಾಷಣದಲ್ಲಿ ಹೇಳುತ್ತಾರೆ. ಅಲ್ಲದೇ ರಾಮಮಂದಿರ ನಿರ್ಮಾಣ ಮಾಡಿದರೆ ಪ್ರಧಾನಿ ನರೇಂದ್ರ ಮೋದಿ ಅವರ ರುಂಡ ಕತ್ತರಿಸುತ್ತೇವೆ ಎನ್ನುತ್ತಾರೆ ಎಂದು ಕಿಡಿಕಾರಿದರು.

    ನಾವು ಹಿಂದೂಗಳೇನು ಬಳೆ ತೊಟ್ಕೊಂಡಿದ್ದಿವಾ? ಓವೈಸಿ ಅವರಪ್ಪನಂತಹ ಸಂಘಟನೆಗಳು ಹಿಂದೂಗಳಲ್ಲಿವೆ. ಯಾರು ರುಂಡ ಯಾರೂ ಕಡಿಯುತ್ತಾರೆ ಅಂತ ನಾವೂ ನೋಡುತ್ತೇವೆ. ನಮಗೂ ತಾಕತ್ತಿದೆ. ರುಂಡ ಅಲ್ಲ, ಈ ದೇಶದಲ್ಲಿರದಂತೆ ನೋಡಿಕೊಳ್ಳುತ್ತೇವೆ ಎಂದು ಶಾಸಕರು, ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಕಿಡಿಕಾರಿದರು.

    ಸಂಪುಟ ವಿಸ್ತರಣೆಯಾದರೂ, ಆಗದಿದ್ದರೂ ಸರ್ಕಾರ ಬೀಳುತ್ತದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸೂಚನೆಯಂತೆ ನಾವು ರೆಸಾರ್ಟ್ ರಾಜಕಾರಣದಿಂದ ದೂರ ಇರುತ್ತೇವೆ. ಉದ್ದೇಶಪೂರ್ವಕವಾಗಿ ನಮ್ಮ ನಾಯಕರ ಹೆಸರು ಕೆಡಿಸುವ ಕೆಲಸವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿದ್ದಾರೆ. ಟೇಪ್ ಹಗರಣಕ್ಕೆ ಸಂಬಂಧಪಟ್ಟಂತೆ, ತಾಕತ್ತಿದ್ದರೆ ಧ್ವನಿ ಪರೀಕ್ಷೆ ಮಾಡಲಿ. ಅದು ಯಾರದು ಎಂಬ ಸತ್ಯ ಹೊರಬೀಳಲಿ ಎಂದು ಸರ್ಕಾರಕ್ಕೆ ಸವಾಲ್ ಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv