Tag: ನವಗ್ರಹ

  • `ನವಗ್ರಹ’ ಚಿತ್ರದಲ್ಲಿ ನಟಿಸಿದ್ದ ಗಿರಿ ದಿನೇಶ್ ನಿಧನ

    `ನವಗ್ರಹ’ ಚಿತ್ರದಲ್ಲಿ ನಟಿಸಿದ್ದ ಗಿರಿ ದಿನೇಶ್ ನಿಧನ

    ವಗ್ರಹ ಚಿತ್ರದಲ್ಲಿ ದರ್ಶನ್ (Darshan) ಜೊತೆ ಅಭಿನಯಿಸಿದ್ದ ನಟ ಗಿರಿ ದಿನೇಶ್ (Giri Dinesh) ಇಂದು (ಫೆ.7) ನಿಧನರಾಗಿದ್ದಾರೆ.

    ಗಿರಿ ದಿವಂಗತ ನಟ ದಿನೇಶ್ (Actor Dinesh) ಅವರ ಪುತ್ರ. ನವಗ್ರಹ ಚಿತ್ರದಲ್ಲಿ 9 ಖಳನಟರ ಪುತ್ರರಲ್ಲಿ ಗಿರಿ ಕೂಡ ಒಬ್ಬರು. ಚಮ್ಕಾಯ್ಸು ಚಿಂದಿ ಉಡಾಯ್ಸು ಚಿತ್ರದಲ್ಲೂ ಅವರು ನಟಿಸಿದ್ದರು. ಅವರಿಗೆ ಹೆಚ್ಚಿನ ಸಿನಿಮಾ ಅವಕಾಶ ಸಿಕ್ಕಿರಲಿಲ್ಲ. ಇದನ್ನೂ ಓದಿ: ಬಾಲಿವುಡ್‌ ನಟ ಸೋನು ಸೂದ್‌ ವಿರುದ್ಧ ಬಂಧನ ವಾರೆಂಟ್‌

    ನವಗ್ರಹ ರೀರಿಲೀಸ್ ವೇಳೆ ಸಂಪರ್ಕ ಮಾಡಿದ್ದಾಗಲೂ ಕ್ಯಾಮೆರಾದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾಗಿ ಹೇಳಿಕೊಂಡಿದ್ದರಂತೆ.

    ಸಂಜೆ ಮನೆಯಲ್ಲೇ ಅವರು ಅಸ್ವಸ್ಥರಾಗಿ ಕುಸಿದುಬಿದ್ದಿದ್ದರು. ಬಳಿಕ ಆಸ್ಪತ್ರೆಗೆ ದಾಖಲಿಸಿದಾಗ ನಿಧನರಾಗಿದ್ದಾರೆ. ಅವರಿಗೆ ಮದುವೆಯಾಗಿರಲಿಲ್ಲ. ಅಣ್ಣನಮನೆಯಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅನ್‌ಲಾಕ್ ರಾಘವನ ಬಗ್ಗೆ ರೆಚೆಲ್ ಡೇವಿಡ್ ಹೇಳಿದ್ದಿಷ್ಟು!

  • BBK 11: ಕಿಚ್ಚನ ಶೋನಲ್ಲಿ ದರ್ಶನ್ ನಟನೆಯ ‘ನವಗ್ರಹ’ ರೀ ರಿಲೀಸ್ ವಿಚಾರ ಚರ್ಚೆ

    BBK 11: ಕಿಚ್ಚನ ಶೋನಲ್ಲಿ ದರ್ಶನ್ ನಟನೆಯ ‘ನವಗ್ರಹ’ ರೀ ರಿಲೀಸ್ ವಿಚಾರ ಚರ್ಚೆ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 11) ಸಾಮಾನ್ಯವಾಗಿ ಹೊರಗಿನ ವಿಚಾರ ಸ್ಪರ್ಧಿಗಳಿಗೆ ಸಿಗುವುದಿಲ್ಲ. ಇದೀಗ ಸುದೀಪ್ (Sudeep) ತಾಯಿಯ ನಿಧನದ ಸುದ್ದಿ ಸಿಕ್ಕ ಬೆನ್ನಲ್ಲೇ ದರ್ಶನ್ (Darshan) ನಟನೆಯ ‘ನವಗ್ರಹ’ (Navagraha) ಮರುಬಿಡುಗಡೆಯ ಬಗ್ಗೆ ಶೋನಲ್ಲಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ನನ್ನ ವೃತ್ತಿ, ಸಂಭಾವನೆ ಎಲ್ಲ ಬಿಟ್ಟು ಬಂದಿದ್ದೇನೆ: ವಿಜಯ್ ಪವರ್‌ಫುಲ್ ಸ್ಪೀಚ್

    ಸುದೀಪ್ (Sudeep) ಅನುಪಸ್ಥಿತಿಯಲ್ಲಿ ಈ ವಾರಾಂತ್ಯ ಯೋಗರಾಜ್ ಭಟ್ ಮತ್ತು ಸೃಜನ್ ಲೋಕೇಶ್ (Srujan Lokesh) ಅತಿಥಿಗಳಾಗಿ ಬಿಗ್ ಬಾಸ್‌ಗೆ ಆಗಮಿಸಿದ್ದರು. ಸೃಜನ್ ಆಗಮಿಸಿದ್ದು, ಧರ್ಮಗೆ ಖುಷಿಯಾಗಿದೆ. ಈ ಹಿಂದೆ ಇಬ್ಬರೂ ಜೊತೆಯಾಗಿ ಸಿನಿಮಾ ಮಾಡಿದ್ದಾರೆ.

    ದೊಡ್ಮನೆಗೆ ಅತಿಥಿಯಾಗಿ ಬರುತ್ತಿದ್ದಂತೆ ಯಾರ ಪರಿಚಯ ತಮಗೆ ಮೊದಲೇ ಇದೆ ಎಂಬುದನ್ನು ಹೇಳಿದರು. ಆಗ ಧರ್ಮ (Dharma Keerthiraj) ಬಳಿ ನಿಮಗೆ ಒಂದು ಗುಡ್ ನ್ಯೂಸ್ ಇದೆ ಎಂದರು ಸೃಜನ್. ‘ನವಗ್ರಹ’ ಸಿನಿಮಾ ಮತ್ತೆ ರೀ-ರಿಲೀಸ್ ಆಗುತ್ತಿದೆ. ಇದನ್ನು ಕೇಳಿ ಯಾವಾಗ ಎಂದು ಪ್ರಶ್ನೆ ಮಾಡಿದರು. ನವೆಂಬರ್ 8ಕ್ಕೆ ಎಂದು ಸೃಜನ್ (Srujan Lokesh) ಉತ್ತರ ಕೊಟ್ಟರು. ಇದನ್ನು ಕೇಳಿ ಧರ್ಮ ಖುಷಿಪಟ್ಟರು. ಈ ಮೂಲಕ ಬಿಗ್ ಬಾಸ್ ಮನೆಯೊಳಗೂ ನವಗ್ರಹ ಚಿತ್ರದ್ದೇ ಚರ್ಚೆಯಾಗಿದೆ.

    ಅಂದಹಾಗೆ, ದರ್ಶನ್ ನಟನೆಯ ‘ನವಗ್ರಹ’ ಸಿನಿಮಾ 16 ವರ್ಷಗಳ ಹಿಂದೆ 2008ರ ನವೆಂಬರ್ 7ರಂದು ರಿಲೀಸ್ ಆಗಿತ್ತು. ದರ್ಶನ್ ಜೊತೆ ಸೃಜನ್ ಲೋಕೇಶ್, ಧರ್ಮ ಕೀರ್ತಿರಾಜ್, ಶರ್ಮಿಳಾ ಮಾಂಡ್ರೆ, ವರ್ಷಾ, ತರುಣ್ ಸುಧೀರ್, ವಿನೋದ್ ಪ್ರಭಾಕರ್ ನಟಿಸಿದರು. ದಿನಕರ್ ತೂಗುದೀಪ ನಿರ್ದೇಶನ ಮಾಡಿದ್ದರು. ಇದೀಗ ಇದೇ ನ.8ಕ್ಕೆ ಸಿನಿಮಾ ಮರುಬಿಡುಗಡೆ ಆಗುತ್ತಿದೆ.

  • ನ.8ರಂದು ದರ್ಶನ್ ನಟನೆಯ ‘ನವಗ್ರಹ’ ಚಿತ್ರ ರೀ ರಿಲೀಸ್

    ನ.8ರಂದು ದರ್ಶನ್ ನಟನೆಯ ‘ನವಗ್ರಹ’ ಚಿತ್ರ ರೀ ರಿಲೀಸ್

    ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಟನೆಯ ‘ನವಗ್ರಹ’ (Navagraha) ಸಿನಿಮಾ ಇದೀಗ ನವೆಂಬರ್ 8ರಂದು ರೀ ರಿಲೀಸ್ ಆಗುತ್ತಿದೆ. 16 ವರ್ಷಗಳ ಬಳಿಕ ಮತ್ತೆ ಈ ಸಿನಿಮಾ ತೆರೆ ಕಾಣುತ್ತಿದೆ. ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಆರೋಪ- ಜಾನಿ ಮಾಸ್ಟರ್‌ಗೆ ಜಾಮೀನು ಮಂಜೂರು

    ದರ್ಶನ್, ತರುಣ್ ಸುಧೀರ್, ಮರಿ ಟೈಗರ್ ವಿನೋದ್ ಪ್ರಭಾಕರ್, ಧರ್ಮ ಕೀರ್ತಿರಾಜ್, ಸೃಜನ್ ಲೋಕೇಶ್, ನಾಗೇಂದ್ರ ಅರಸ್, ಗಿರಿ ದಿನೇಶ್, ವರ್ಷ, ಶರ್ಮಿಳಾ ಮಾಂಡ್ರೆ ನಟನೆಯ ‘ನವಗ್ರಹ’ ಚಿತ್ರ ನವೆಂಬರ್ 8ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 16 ವರ್ಷಗಳ ಹಿಂದೆ 2008ರ ನ.7ರಂದು ಚಿತ್ರ ತೆರೆಕಂಡಿತ್ತು.

    ಈ ಚಿತ್ರವನ್ನು ತೂಗುದೀಪ ಸಂಸ್ಥೆಯ ನಿರ್ಮಾಣದಲ್ಲಿ ದಿನಕರ್ ತೂಗುದೀಪ ನಿರ್ದೇಶನ ಮಾಡಿದ್ದರು. ಇನ್ನೂ ದರ್ಶನ್ ನಟನೆಯ ಸಿನಿಮಾಗಳು ಮರು ಬಿಡುಗಡೆಯಾಗುತ್ತಿವೆ. ಈಗಾಗಲೇ ಪೊರ್ಕಿ, ಕರಿಯ, ಶಾಸ್ತ್ರಿ ಚಿತ್ರಗಳು ರಿಲೀಸ್ ಆಗಿವೆ.

  • ಚಕ್ರವರ್ತಿ ನಿರ್ದೇಶಕ ಎ.ವಿ.ಚಿಂತನ್ ಏನು ಮಾಡುತ್ತಿದ್ದಾರೆ?

    ಚಕ್ರವರ್ತಿ ನಿರ್ದೇಶಕ ಎ.ವಿ.ಚಿಂತನ್ ಏನು ಮಾಡುತ್ತಿದ್ದಾರೆ?

    ಬೆಂಗಳೂರು: ಎ.ವಿ. ಚಿಂತನ್. ಸಹೃದಯಿ ಸಿನಿಮಾ ವಲಯದಲ್ಲಿ, ಸಿನೆಮಾಗಳನ್ನು ಸೀರಿಯಸ್ಸಾಗಿ ಪರಿಗಣಿಸಿದವರ ನಡುವೆ ಚಿಂತನ್ ಎಂಬ ಹೆಸರು ಕೇಳಿದರೇನೆ ಎಲ್ಲರ ಮುಖದಲ್ಲೂ ಸಂತಸ ಮನೆ ಮಾಡುತ್ತದೆ. ಎಲ್ಲೇ ಆದರೂ ‘ಚಿಂತನ್ ಥರಾ ವ್ಯಕ್ತಿ ಮತ್ತೊಬ್ಬರಿಲ್ಲ…’ ಅನ್ನೋ ಏಕಮೇವ ಅಭಿಪ್ರಾಯವೇ ಮನೆಮಾಡಿದೆ. ಒಂದು ಕಾಲಕ್ಕೆ ಯಾವುದೇ ಸ್ಟಾರ್ ಸಿನಿಮಾಗಳು ಚಿತ್ರೀಕರಣಕ್ಕೆ ಹೋಗೋ ಮುಂಚೆ `ಒಂದು ಸಲ ಚಿಂತನ್‍ಗೆ ಕತೆ ಹೇಳಿ ಒಪೀನಿಯನ್ ತಗೆದುಕೊಳ್ಳಬೇಕು. ಏನೇ ಯಡವಟ್ಟುಗಳಿದ್ದರೂ ನೇರವಾಗಿ ಹೇಳಿ, ಒಳ್ಳೋ ಸಜೆಷನ್ಸ್ ಕೊಡ್ತಾರೆ…’ ಅನ್ನೋ ಮಾತಿತ್ತು. `ನವಗ್ರಹ’, `ಸಾರಥಿ’ಯಿಂದ ಹಿಡಿದು ಚಕ್ರವರ್ತಿಯ ತನಕ ದರ್ಶನ್ ಅವರ ಬಹುತೇಕ ಸಿನಿಮಾಗಳಿಗೆ ಸಂಭಾಷಣೆ ಬರೆದವರು ಚಿಂತನ್. ದರ್ಶನ್ ಸಿನಿಮಾ ಅಂದರೆ ಅದಕ್ಕೆ ಚಿಂತನ್ ಅವರೇ ಮಾತುಗಳನ್ನು ಹೊಸೆಯಬೇಕು ಅನ್ನುವಷ್ಟರ ಮಟ್ಟಿಗೆ ಇವರಿಬ್ಬರ ಕಾಂಬಿನೇಷನ್ ಹೆಸರು ಮಾಡಿದೆ.

    ಬಿಡುಗಡೆಗೆ ಮುಂಚೆಯೇ ಅತಿಯಾದ ನಿರೀಕ್ಷೆ ಇಟ್ಟುಕೊಂಡಿದ್ದರಿಂದಲೋ ಏನೋ `ಚಕ್ರವರ್ತಿ’ ಬಿಡುಗಡೆಯ ನಂತರ ಅಂತಾ ಸೌಂಡು ಮಾಡಲು ಸಾಧ್ಯವಾಗಲಿಲ್ಲ. ಆದರೆ ಮೊನ್ನೆ ಈ ಚಿತ್ರದ ಹಿಂದಿ ಡಬ್ಬಿಂಗ್ ವರ್ಷನ್ನು ಬಿಡುಗಡೆಯಾಗಿ ಒಂದು ಕೋಟಿಗೂ ಅಧಿಕ ಜನ ವೀಕ್ಷಿಸಿದ್ದಾರೆ. ಒಂದು ಸಿನಿಮಾ ಬಿಡುಗಡೆಯಾಗಿ ವರ್ಷ ಕಳೆದ ನಂತರವೂ ಈ ರೀತಿಯಲ್ಲಿ ಸೌಂಡು ಮಾಡುತ್ತಿದೆ ಅನ್ನೋದು ನಿಜಕ್ಕೂ ಮೆಚ್ಚಬೇಕಾದ ವಿಚಾರ. ಕನ್ನಡ ಸಿನಿಮಾವೊಂದು ಹಿಂದಿಯಲ್ಲಿ ಡಬ್ ಆಗಿ ಇಷ್ಟು ಮಟ್ಟಕ್ಕೆ ಟಾಕ್ ಕ್ರಿಯೇಟ್ ಮಾಡಿರೋದು ಕನ್ನಡಿಗರ ಪಾಲಿಗೆ ಅಪಾರ ಖುಷಿಯ ಸಂಗತಿಯೂ ಹೌದು.

    ಹಾಗೆ ನೋಡಿದರೆ ದರ್ಶನ್ ಅವರ, ಅದರಲ್ಲೂ ಅದೂ ಆ ಮಟ್ಟಿಗೆ ಸಂಚಲನ ಸೃಷ್ಟಿಸಿದ ಸಿನಿಮಾವನ್ನು ನಿರ್ದೇಶಿಸಿದ ಬೇರೆ ಯಾರೇ ನಿರ್ದೇಶಕರಾಗಿದ್ದರೂ ಅಗತ್ಯಕ್ಕಿಂತಾ ಹೆಚ್ಚೇ ಪಬ್ಲಿಸಿಟಿ ಪಡೆಯುತ್ತಿದ್ದರು. ಆ ಮೂಲಕ ಒಂದಷ್ಟು ಸಿನಿಮಾಗಳನ್ನು ಒಂದರ ಹಿಂದೆ ಒಂದರಂತೆ ಮಾಡಿ ಮುಗಿಸುತ್ತಿದ್ದರು. ಆದರೆ ಚಿಂತನ್ ಮೊದಲಿನಿಂದಲೂ ಹೆಸರಿಗಾಗಿ ತಹತಹಿಸುವವರಲ್ಲ. ಎಲೆಮರೆಕಾಯಿಯಂತೆ ಕೆಲಸ ಮಾಡೋದರಲ್ಲೇ ಹೆಚ್ಚು ಖುಷಿ ಪಡುವ ವ್ಯಕ್ತಿ.

    ದರ್ಶನ್ ಅವರಂಥಾ ವ್ಯಕ್ತಿತ್ವಕ್ಕೆ ಹೊಂದುವ ಮಾತುಗಳನ್ನು ಸೃಷ್ಟಿಸಿ, ಚಿತ್ರಕತೆಗಳನ್ನು ಬರೆದು ಕೋಟ್ಯಂತರ ಅಭಿಮಾನಿಗಳನ್ನು ರಂಜಿಸಿದ ಚಿಂತನ್ ಚಕ್ರವರ್ತಿಯ ನಂತರ ಏನು ಮಾಡುತ್ತಿದ್ದಾರೆ? ಎಲ್ಲಿ ಹೋದರು ಅನ್ನೋ ಪ್ರಶ್ನೆ ಹುಟ್ಟೋದು ಸಹಜ. ಸಿನಿಮಾ ವಿಚಾರದಲ್ಲಿ ಚಿಂತನ್ ನಿಜಕ್ಕೂ ಹುಲಿ ಇದ್ದಂತೆ. `ಹುಲಿ ಸೈಲೆಂಟಾಗಿದೆ ಅಂದ್ರೆ ಭೇಟೆಯ ತಯಾರಿ ಜೋರಾಗೇ ಇದೆ’ ಅಂತಾ ಅಂದುಕೊಳ್ಳಬಹುದೇನೋ. ಒಂದೊಳ್ಳೆ ಸಿನಿಮಾದ ಮೂಲಕ ಚಿಂತನ್ ದೊಡ್ಡ ಮಟ್ಟದಲ್ಲಿ ಘರ್ಜಿಸಲಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv