ಬೆಂಗಳೂರು: ರಾಜ್ಯದಲ್ಲಿರುವ ಕೆಟ್ಟ ಸರ್ಕಾರದ ವಿರುದ್ಧ ಸೋಮವಾರ ಹಾಗೂ ಮಂಗಳವಾರ ಎಲ್ಲಾ ಜಿಲ್ಲೆ ಮತ್ತು ಮಂಡಲಗಳಲ್ಲಿ ಬಿಜೆಪಿ (BJP) ದೊಡ್ಡ ಹೋರಾಟ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ (Nalin Kumar Kateel) ಕಟೀಲ್ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸೇರಿ ಸಭೆ ನಡೆಸಿದ್ದೇವೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾಧ್ಯಕ್ಷರು ನಾಳೆ ಜಿಲ್ಲೆಗಳಲ್ಲಿ ಮತ್ತು ಮಂಡಲ ಅಧ್ಯಕ್ಷರು ನಾಡಿದ್ದು ಮಂಡಲಗಳಲ್ಲಿ ಹೋರಾಟ ನಡೆಸಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ನಗದು ಅಭಿವೃದ್ಧಿ ಇಲಾಖೆ ಎಂದರೆ ಡಿಕೆಶಿಯದ್ದಾ – ಹೆಚ್‌ಡಿಕೆ ತಿರುಗೇಟು
ಅಧಿಕಾರಿಗಳಿಗೇ ರೇಟ್ ಫಿಕ್ಸ್ ಮಾಡಿದ ಸರ್ಕಾರವಿದು. ಅಧಿಕಾರಿಗಳಿಂದ ಭ್ರಷ್ಟಾಚಾರ ಆರಂಭಿಸಿದ ಈ ಸರ್ಕಾರ ಕಲಾವಿದರನ್ನೂ ಬಿಟ್ಟಿಲ್ಲ. ತಮ್ಮಲ್ಲಿ ಲಂಚ ಕೇಳಿದ್ದಾಗಿ ಮೈಸೂರು ದಸರಾದಲ್ಲಿ ಭಾಗವಹಿಸಬೇಕಾದ ಕಲಾವಿದರೇ ಆರೋಪ ಮಾಡಿದ್ದಾರೆ. ಹಿಂದೆ ಎಟಿಎಂ ಸರ್ಕಾರ ಬರಲಿದೆ ಎಂದಾಗ ಸಾಕ್ಷಿ ಕೊಡಿ ಎಂದಿದ್ದರು. ಇವತ್ತು ಸಾಕ್ಷಿ ಹಾಗೂ ಆಧಾರಗಳನ್ನು ಸಿದ್ರಾಮಣ್ಣ (Siddaramaiah), ಡಿ.ಕೆ.ಶಿವಕುಮಾರ್ (DK Shivakumar) ಇಟ್ಟಿದ್ದಾರೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.
ಐಟಿ ದಾಳಿ ಆದಾಗ ಗುತ್ತಿಗೆದಾರ, ಬಿಲ್ಡರ್‍ಗಳ ಮನೆಯಲ್ಲಿ 40 ಕೋಟಿ, 50 ಕೋಟಿ ಹಣ ಸಿಗುತ್ತಿದೆ. 600 ಕೋಟಿ ಹಣ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ ಎರಡೇ ದಿನಗಳಲ್ಲಿ 45 ಕೋಟಿ ಒಬ್ಬ ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದೆ. ಇದಕ್ಕೂ ಕಾಂಗ್ರೆಸ್‍ಗೂ ಸಂಬಂಧ ಇದೆ ಎಂಬುದು ಸ್ಪಷ್ಟವಾಗಿದೆ. ಈ ಲೂಟಿ ಸರ್ಕಾರದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದಲ್ಲಿರುವುದು ಎಟಿಎಂ ಸರ್ಕಾರವಾಗಿದೆ. ಈ ರಾಜ್ಯದಲ್ಲಿ ಜನರ ಹಣವನ್ನು ಲೂಟಿ ಮಾಡಿ ಪಂಚರಾಜ್ಯಗಳ ಚುನಾವಣೆಗೆ ಅದನ್ನು ಕಳುಹಿಸುತ್ತಿದ್ದಾರೆ. ಬೇರೆ ರಾಜ್ಯಗಳ ಚುನಾವಣೆಗೆ ಕರ್ನಾಟಕವು ಎಟಿಎಂ ಆಗಿದೆ. ಇವತ್ತು ಇನ್ನೊಬ್ಬರ ಮನೆಯಲ್ಲಿ ಹಣ ಸಿಕ್ಕಿದ್ದು, ಇದೆಲ್ಲವೂ ಲೂಟಿ ಹಣವಾಗಿದೆ. ದೂರು ಕೊಡುವ ಅಧಿಕಾರಿಗಳನ್ನು ಬಂಧಿಸಲಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಂಬಿಕಾಪತಿ, ಸಂತೋಷ್ ಕೃಷ್ಣಪ್ಪ ರಾಜ್ಯದ ನಂ 1, ನಂ 2 ಅವರ ಬೇನಾಮಿಗಳು: ಸಿಟಿ ರವಿ
ಈ ಬಾರಿಯೂ ಅಧಿಕಾರದ ಗದ್ದುಗೆಯ ಕನಸು ಕಾಣುತ್ತಿದ್ದ ಬಿಜೆಪಿಗೆ ಕರ್ನಾಟಕ ಮತದಾರ ಶಾಕ್ ನೀಡಿದ್ದಾನೆ. ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುವ ಮೂಲಕ ಆಶೀರ್ವಾದ ನೀಡಿದ್ದಾನೆ. ಫಲಿತಾಂಶದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Naleen Kumar Kateel) ಮಾತನಾಡಿ, ಬಿಜೆಪಿ ಸೋಲಿನ ಹೊಣೆ ಹೊರುವುದಾಗಿ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ‘ನಮ್ಮ ಕಾರ್ಯಕರ್ತರು ಹಗಲು, ರಾತ್ರಿ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರ ಉತ್ತಮ ಕೆಲಸ ಮಾಡಿದೆ. ಯಡಿಯೂರಪ್ಪ, ಬೊಮ್ಮಾಯಿ ಅವರು ಕೆಲಸ ಮಾಡಿದ್ದಾರೆ. ಇಂದು ಬಂದಿರೋ ಫಲಿತಾಂಶವನ್ನು ನಾನು ಸ್ವಾಗತಿಸ್ತೇನೆ. ಸೋತಿರೋ ಕಡೆ ಯಾಕೆ ಸೋತಿದ್ದೇವೆ ಅಂತ ಪರಾಮರ್ಶೆ ಮಾಡ್ತೀವಿ. ಮುಂದಿನ ಲೋಕಸಭಾ ಚುನಾವಣೆಗೆ ಒಟ್ಟಾಗಿ ಕೆಲಸ ಮಾಡ್ತೀವಿ’ ಎಂದರು.
ಮೋದಿ ರಾಲಿ ಕುರಿತು ಮಾತನಾಡಿ, ‘ಮೋದಿ ಅವರು ರೋಡ್ ಶೋ ಮಾಡಿದ್ದರಿಂದ ಕೆಲವೆಡೆ ಜನರು ಖುಷಿ ಆಗಿದ್ದಾರೆ. ತುಂಬಾ ಕಡೆ ಗೆದ್ದಿದ್ದೇವೆ. ದೊಡ್ಡ ಬಳ್ಳಾಪುರದಲ್ಲೂ ಗೆದ್ದಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ’ ಎಂದರು.
ಕೊಪ್ಪಳ: ಈ ರಾಜ್ಯಕ್ಕೆ ಟಿಪ್ಪು ಸಂತಾನ ಬೇಕಾ? ಅಥವಾ ಹನುಮಂತ, ಶ್ರೀರಾಮನ ಭಕ್ತರು ಬೇಕಾ? ಎಂಬ ಯೋಚನೆ ಮಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ತಿಳಿಸಿದರು.
ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದಲ್ಲಿ ಆಯೋಜಿಸಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಗೆ (BJP) ನಮಗೆ ಹನುಮಮಾಲೆ, ದತ್ತಮಾಲೆ ಮೇಲೆ ನಂಬಿಕೆ ಇದೆ. ಕಾಂಗ್ರೆಸ್‌ಗೆ (Congress) ಟಿಪ್ಪು ಮಾಲೆ ಮೇಲೆ ನಂಬಿಕೆ ಇದೆ. ರಾಜ್ಯದ ಬೇರೆಡೆಯಂತೆ ಯಲಬುರ್ಗಾ ಕ್ಷೇತ್ರವೂ ಕಾಂಗ್ರೆಸ್ ಮುಕ್ತ ಆಗುತ್ತದೆ ಎಂದು ಗುಡುಗಿದರು.
ಇಂದಿರಾ ಗಾಂಧಿ ಇದ್ದಾಗ ಕಾಂಗ್ರೆಸ್‌ನಿಂದ ವಿದ್ಯುತ್ ಕಂಬವನ್ನು ಚುನಾವಣೆಗೆ ನಿಲ್ಲಿಸಿದರೂ ಗೆಲ್ಲುತ್ತದೆ ಎಂಬ ಕಾಲವಿತ್ತು. ಆದರೆ ಇವತ್ತು ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಗೆ ಕ್ಷೇತವಿಲ್ಲದೇ ಕೇರಳಕ್ಕೆ ಹೋಗಿದ್ದಾರೆ. ಇತ್ತ ಕರ್ನಾಟಕದಲ್ಲಿ ಸಿದ್ದರಾಮಯ್ಯಗೂ ಕ್ಷೇತ್ರವಿಲ್ಲ. ಕ್ಷೇತ್ರವೇ ಇಲ್ಲದ ಸಿದ್ದರಾಮಯ್ಯ, ಸಿಎಂ ಆಗ್ತಿನಿ ಅಂತಾ ಶರ್ಟ್ ಹೊಲಿಸಿ ಇಟ್ಟಿದ್ದಾನೆ. ಆದರೆ, ನನ್ನ ಅಪ್ಪನ್ನ ಆಣೆಗೂ ಸಿದ್ದರಾಮಣ್ಣ ಮುಂದೆ ಸಿಎಂ ಆಗೋದಿಲ್ಲ ಎಂದು ಭವಿಷ್ಯ ನುಡಿದರು.
ಅವತ್ತು ಸೋನಿಯಾ ಗಾಂಧಿ ಕಾಲಿಡಿದು ಸಿಎಂ ಆಗಿದ್ರಿ. ದೇವೆಗೌಡರ ಹತ್ತಿರ ಬೆಳೆದು, ಅವರಿಗೆ ತುಳಿದ್ರಲ್ಲಾ ಸಿದ್ರಾಮಣ್ಣ. ನಂಗೆ ಸಿದ್ರಾಮಣ್ಣ ಜೋಕರ್ ಅಂತಾರೆ, ಆದರೆ ನೀವು ಬ್ರೋಕರ್. ಬ್ರೋಕರ್ ಆಗಿಯೇ ಸಿಎಂ ಆಗಿದ್ದವರು ನೀವು ಎಂದು ಟೀಕಿಸಿದ ಅವರು, ಕೊರೊನಾ ಲಸಿಕೆ ತೆಗೆದುಕೊಂಡರೇ ಮಕ್ಕಳು ಆಗೋಲ್ಲ ಅಂತ ಕಾಂಗ್ರೆಸ್‌ನವರು ಹೇಳಿದ್ದರು. ರಾಹುಲ್ ಅದಕ್ಕೆ ಮದುವೆ ಆಗಿಲ್ಲ ಎಂದು ವ್ಯಂಗ್ಯವಾಡಿದರು. ಕೊಡಗಿನಲ್ಲಿ ಇಬ್ಬರ ಬಲಿ ಪಡೆದಿದ್ದ ಹುಲಿ ಕೊನೆಗೂ ಸೆರೆ
ಚಾಮರಾಜನಗರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರಿಗೆ ನೂತನ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರ (Mallikarjun Kharge) ಭಯ ಶುರುವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ಟಾಂಗ್ ನೀಡಿದ್ದಾರೆ.
ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ಪಟ್ಟಣದ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಖರ್ಗೆಯವರು ಕಾಂಗ್ರೆಸ್ (Congress) ಅಧ್ಯಕ್ಷರಾಗಿರುವುದಕ್ಕೆ ಡಿಕೆಶಿ ಹಾಗೂ ಸಿದ್ದರಾಮಯ್ಯರಿಗೆ ಭಯ ಶುರುವಾಗಿದೆ. ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿ ವಿಚಲಿತವಾಗಿಲ್ಲ. ಆದರೆ ಕಾಂಗ್ರೆಸ್‌ನವರೇ ವಿಚಲಿತರಾಗಿದ್ದಾರೆ ಎಂದು ತಿರುಗೇಟು ನೀಡಿದರು.
ಭಾರತ್ ಜೋಡೋ ಯಾತ್ರೆಯಿಂದ ಅವರೊಳಗೆ ಕಚ್ಚಾಟ ಪ್ರಾರಂಭವಾಗಿದೆ. ಡಿಕೆಶಿ ಕೈ ಹಿಡಿಯುವುದೋ ಅಥವಾ ಸಿದ್ದರಾಮಯ್ಯ ಕೈ ಹಿಡಿಯುವುದೋ ಎಂಬ ಚರ್ಚೆ ಪ್ರಾರಂಭವಾಗಿದೆ. ಡಿಕೆಶಿ ಬೆಂಬಲಿಗರಿಗೆ ಅವರು ಮುಖ್ಯಮಂತ್ರಿ ಆಗಬೇಕು ಅಂತ ಇದ್ದರೆ, ಸಿದ್ದರಾಮಯ್ಯ ತಂಡಕ್ಕೆ ಅವರು ಮುಖ್ಯಮಂತ್ರಿ ಆಗಬೇಕು ಅಂತ ಇದೆ. ಇದರ ನಡುವೆ ಇವರಿಬ್ಬರಿಗೆ ಖರ್ಗೆಯ ಭಯ ಶುರುವಾಗಿದೆ ಎಂದರು. ಇದನ್ನೂ ಓದಿ: ಒಕ್ಕಲಿಗರಿಗೆ ರಾಮ-ಕೃಷ್ಣರಂತೆ ಬದುಕುವುದು ಗೊತ್ತು ಉಗ್ರ ನರಸಿಂಹನ ಅವತಾರ ತಾಳುವುದು ಗೊತ್ತು: ನಂಜಾವಧೂತ ಶ್ರೀ
ಈ ಹಿಂದೆ ಖರ್ಗೆಯವರನ್ನು ಮುಗಿಸಲು ಇವರೆಲ್ಲಾ ತಂತ್ರಗಾರಿಕೆ ಮಾಡಿದ್ದರು. ಈಗ ಎಐಸಿಸಿ ಅಧ್ಯಕ್ಷರಾಗಿರುವ ಖರ್ಗೆಯವರು ಇವರನ್ನೇನು ಮಾಡುತ್ತಾರೆ ಎನ್ನುವ ಭಯ ಶುರುವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನಾನು ಛೀ, ಥೂ ಅನ್ನಿಸಿಕೊಂಡು ಅಧಿಕಾರ ಮಾಡಿಲ್ಲ – ಸಿದ್ದರಾಮಯ್ಯ
Live Tv
[brid partner=56869869 player=32851 video=960834 autoplay=true]
ಹಾವೇರಿ: ಸಿದ್ದರಾಮಯ್ಯನವರ (Siddaramaiah) ಹುಟ್ಟೇ ಸುಳ್ಳು. ಅವರ ಜೀವನದಲ್ಲಿ ಅವರಷ್ಟು ದೊಡ್ಡ ಸುಳ್ಳುಗಾರ ಇನ್ನೊಬ್ಬರಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Naleen Kumar Kateel) ಕಿಡಿಕಾರಿದ್ದಾರೆ.
ಬಿಜೆಪಿ ಸಂಕಲ್ಪ ಯಾತ್ರೆ ಸುಳ್ಳಿನ ಯಾತ್ರೆ (BJP Sankalpa Yatra) ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಹಾವೇರಿಯಲ್ಲಿ (Haveri) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಹುಟ್ಟೇ ಸುಳ್ಳು. ಅವರ ಜೀವನದಲ್ಲಿ ಅವರಷ್ಟು ದೊಡ್ಡ ಸುಳ್ಳುಗಾರ ಇನ್ನೊಬ್ಬರಿಲ್ಲ. ಸಿದ್ದರಾಮಯ್ಯನ ಜೀವಮಾನದಲ್ಲಿ ಸತ್ಯ ಯಾವುದು ಹೇಳುತ್ತಾರೆ ಅಂದರೆ ನಾನು ಸಿದ್ದರಾಮಣ್ಣ ಅನ್ನೋದನ್ನು ಮಾತ್ರ ಸತ್ಯ ಹೇಳುತ್ತಾರೆ. ಬಾಕಿದೆಲ್ಲ ಸುಳ್ಳು ಹೇಳುತ್ತಾರೆ. ಸುಳ್ಳು ಸಿದ್ದರಾಮಣ್ಣ. ಅವರ ಭಾರತ್ ಜೋಡೋ ಯಾತ್ರೆ (Bharat Jodo Yatra) ಸುಳ್ಳು ಯಾತ್ರೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ದೇವ್ರಾಣೆ ಹೇಳ್ತೀನಿ, 31 ವರ್ಷದೊಳಗೆ ಕರ್ನಾಟಕ ಮೂರು ಭಾಗ ಆಗುತ್ತೆ : ಬ್ರಹ್ಮಾಂಡ ಗುರೂಜಿ ಭವಿಷ್ಯ
ಹಾವೇರಿ ಜಿಲ್ಲೆ ರಟ್ಟಿಹಳ್ಳಿಯಲ್ಲಿ ಅಕ್ಟೋಬರ್ 11ರಂದು ಹಲ್ಲೆಗೆ ಒಳಗಾಗಿದ್ದ ಐವರು ಆರ್‌ಎಸ್‍ಎಸ್ ಕಾರ್ಯಕರ್ತರನ್ನು (RSS Workiers) ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ರಟ್ಟೀಹಳ್ಳಿಯಲ್ಲಿ ಆರ್‌ಎಸ್‍ಎಸ್ ಪ್ರಾಥಮಿಕ ಶಿಕ್ಷಾ ವರ್ಗ ನಡೆಯುತ್ತಿದೆ. ವರ್ಷದಲ್ಲಿ ಎರಡು ಬಾರಿ ರಾಷ್ಟ್ರಭಕ್ತಿಯ ಬಗ್ಗೆ ಜಾಗೃತಿ ಮೂಡಿಸುವ ವ್ಯಕ್ತಿ ನಿರ್ಮಾಣದ ಶಿಬಿರ ನಡೆಯುತ್ತದೆ. ಅಕ್ಟೋಬರ್ 11ರ ರಾತ್ರಿ ಐವರು ಆರ್‌ಎಸ್‍ಎಸ್ ಕಾರ್ಯಕರ್ತರು ಪಥಸಂಚಲನದ ಮಾರ್ಗ ವೀಕ್ಷಣೆಗೆ ಹೋಗಿದ್ದರು. ವೀಕ್ಷಣೆಗೆ ತೆರಳಿದ್ದ ಐವರ ಮೇಲೆ ಮುಸ್ಲಿಂ ಗೂಂಡಾಗಳು ಹಲ್ಲೆ ಮಾಡಿದ್ದರು. ಹಲ್ಲೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
ಇದೊಂದು ದುರದೃಷ್ಟಕರ ಘಟನೆ. ಐವರು ಸಜ್ಜನ ವ್ಯಕ್ತಿಗಳು. ರಸ್ತೆ ಮೇಲೆ ಹೋಗುತ್ತಿದ್ದಾಗ ವಿನಾಕಾರಣ ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಇದೊಂದು ಮುಸ್ಲಿಂ ಮೂಲಭೂತವಾದದ ಮಾನಸಿಕತೆ ತೋರಿಸುತ್ತದೆ. ಇದನ್ನು ಸಹಿಸಲು ಅಸಾಧ್ಯ. ಅದೇನು ಪಾಕಿಸ್ತಾನವಲ್ಲ. ಪಾಕಿಸ್ತಾನದಲ್ಲೂ ಸ್ವತಂತ್ರವಾಗಿ ಹೋಗಬಹುದು. ಯಾವ ಏರಿಯಾದಲ್ಲಿ ಎಷ್ಟೋತ್ತಿಗೆ ಹೋಗಬಹುದು ಎನ್ನುವುದು ಸಂವಿಧಾನದಲ್ಲಿ ಎಲ್ಲೂ ಉಲ್ಲೇಖವಾಗಿಲ್ಲ. ನಮ್ಮ ಸರ್ಕಾರ ಈ ಘಟನೆ ಸಹಿಸುವುದಿಲ್ಲ. ಈಗಾಗಲೇ ಇಪ್ಪತ್ತೊಂದು ಜನರನ್ನು ಬಂಧಿಸಲಾಗಿದೆ. ಈ ಘಟನೆಗೆ ತಕ್ಷಣ ಸರ್ಕಾರ ಸ್ಪಂದಿಸಿದೆ. ಸಿಎಂ ಮತ್ತು ಗೃಹ ಸಚಿವರು ಸ್ಪಂದಿಸಿದ್ದಾರೆ. ಹಲ್ಲೆಗೊಳಗಾದವರ ಜೊತೆ ಈಗ ನಾನು ಮಾತನಾಡಿ ಬಂದಿದ್ದೇನೆ. ಗಲಭೆ ಸೃಷ್ಟಿಸಿ ಅಶಾಂತಿ ನಿರ್ಮಾಣ ಮಾಡುವ ಶಾಂತಿ ವಂಚಕರಿಗೆ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸ್ವಂತ ಉದ್ಯಮದ ಕನಸು ನನಸು – B ಟೆಕ್ ವಿದ್ಯಾರ್ಥಿನಿ ಈಗ `ಚಾಯ್‌ವಾಲಿ’
ಈ ಘಟನೆ ಹಿಂದೆ ಯಾರಿದ್ದಾರೆ ಎನ್ನುವುದನ್ನೂ ಪತ್ತೆ ಮಾಡಬೇಕು. ಇದರ ಹಿಂದೆ ಯಾವ ಶಕ್ತಿಗಳಿದ್ದಾವೆ ಅದನ್ನು ತನಿಖೆ ಮಾಡಬೇಕು. ಇದರಲ್ಲಿ ಯಾರ್ಯಾರಿದ್ದಾರೆ. ಸರ್ಕಾರ ಯಾವುದಿದೆ ಎನ್ನುವ ಪ್ರಶ್ನೆ ಅಲ್ಲ. ನಮ್ಮ ಸರ್ಕಾರ ಇಂಥವರ ಮೇಲೆ ಈಗಾಗಲೇ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಪಿಎಸ್‍ಐ ಸಂಘಟನೆ ಬ್ಯಾನ್ ಮಾಡಿದೆ ಎಂದು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ಹಾವೇರಿ: ಕರ್ನಾಟಕದಲ್ಲಿ (Karnataka) ಸಿದ್ದರಾಮಯ್ಯ (Siddaramaiah) ಟಿಪ್ಪು ಜಯಂತಿ ಮಾಡಿ ಹಿಂದೂ ಮುಸ್ಲಿಮರನ್ನು ಒಡೆದರು. ವೀರಶೈವ ಲಿಂಗಾಯತ ಸಮಾಜವನ್ನು ಒಡೆದರು. ಧರ್ಮ ಮತಗಳನ್ನು ಒಡೆದವರು ಕಾಂಗ್ರೆಸ್ (Congress). ಈಗ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ನಿರ್ಮಾಣ ಮಾಡಿರುವ ರಸ್ತೆಯಲ್ಲಿ ಭಾರತ್ ಜೋಡೋ (Bharat Jodo Yatra) ಮಾಡ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಹಾವೇರಿ (Haveri) ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಪೇಜ್ ಪ್ರಮುಖರು, ಮೇಲ್ಪಟ್ಟ ಪದಾಧಿಕಾರಿ ಹಾಗೂ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಗರೀಬಿ ಹಠಾವೋ ಅಂದರು. ಜನರು ಕಾಂಗ್ರೆಸ್ ಕುಟುಂಬ ಹಠಾವೋ, ಗಾಂಧಿ ಕುಟುಂಬ ಹಠಾವೋ ಅಂತಿದ್ದಾರೆ. ಕಾಂಗ್ರೆಸ್‌ನವರು ಭಾರತ್ ಜೋಡೋ ನಾಟಕ ಪ್ರಾರಂಭ ಮಾಡಿದ್ದಾರೆ. ಅದು ಭಾರತ್ ಜೋಡೋ ಅಲ್ಲ, ಭಾರತ್ ತೋಡೋ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಇವತ್ತು ನಾಶ ಆಗ್ತಿದೆ. ಜೋಡೋಗಳ ಮಧ್ಯೆ ಜಗಳಗಳು ಜಾಸ್ತಿ ಆಗ್ತಿದೆ. ರಾಹುಲ್ ಗಾಂಧಿ ಯಾತ್ರೆ ಪ್ರಾರಂಭ ಆಗಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಜಗಳವೂ ಜೋರಾಗಿದೆ. ಸಿದ್ದರಾಮಯ್ಯ ಮೀಟಿಂಗ್‌ಗೆ ಡಿಕೆಶಿ ಹೋಗೋದಿಲ್ಲ, ಡಿಕೆಶಿ ಮೀಟಿಂಗ್‌ಗೆ ಸಿದ್ದರಾಮಯ್ಯ ಹೋಗೋದಿಲ್ಲ. ಪಾದಯಾತ್ರೆಯಲ್ಲಿ ಡಿಕೆಶಿ ದಿಲ್ಲಿಗೆ, ಸಿದ್ದರಾಮಣ್ಣ ಗಲ್ಲಿಗೆ ಹೋಗುತ್ತಾರೆ. ರಾಹುಲ್ ಗಾಂಧಿ ಕೈ ಹಿಡ್ಕೊಂಡು ಓಡ್ತಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ನಿಮ್ಮನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲೇ ನಿಲ್ಲಿಸುತ್ತೇವೆ- ಸಿದ್ದರಾಮಯ್ಯಗೆ ಬಿಎಸ್‍ವೈ ಎಚ್ಚರಿಕೆ
ಡಿಕೆಶಿಗೆ ಅಲ್ಲಿ ಟೆನ್ಷನ್ ಶುರುವಾಗಿದೆ. ಚುನಾವಣೆಗೆ ಮುಂಚೆ ಕಾಂಗ್ರೆಸ್ ಎರಡು ಹೋಳಾಗುತ್ತದೆ ಎಂದು. ಸಿದ್ದರಾಮಯ್ಯ ಪಾರ್ಟಿ, ಡಿಕೆಶಿ ಪಾರ್ಟಿ ಎರಡು ಹೋಳಾಗುತ್ತೆ. ಇನ್ನೊಂದು ಮೂರನೇ ಶಕ್ತಿ ಕೇಂದ್ರ ನಿರ್ಮಾಣವಾಗುತ್ತಿದೆ. ಅದ್ಯಾವುದು ಅಂದರೆ ಖರ್ಗೆ ಗ್ಯಾಂಗ್. ಖರ್ಗೆ ಅಧ್ಯಕ್ಷರಾದ್ಮೇಲೆ ಸಿದ್ದರಾಮಯ್ಯನಿಗೆ ಕಾಂಗ್ರೆಸ್‌ನಲ್ಲಿ ಜಾಗವಿಲ್ಲ. ಯಾಕಂದ್ರೆ ಖರ್ಗೆಯನ್ನು ಮುಖ್ಯಮಂತ್ರಿ ಮಾಡಲಿಕ್ಕೆ ಅಡ್ಡಗಾಲಿಟ್ಟು, ಖರ್ಗೆಯನ್ನು ಸೋಲಿಸಿದ್ದವರೇ ಈ ಸಿದ್ದರಾಮಯ್ಯ. ಈ ಬಾರಿ ಸಿದ್ದರಾಮಯ್ಯನನ್ನು ಖರ್ಗೆ ಸೋಲಿಸುತ್ತಾರೆ. ಸಿದ್ದರಾಮಯ್ಯ ಕಾಡಿಗೆ, ಡಿಕೆಶಿ ಬಂಡೆ ಒಡೆಯಲಿಕ್ಕೆ, ಬಿಜೆಪಿ ಅಧಿಕಾರಕ್ಕೆ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜನ ಸೇರದೇ ಇದ್ದು, ಖುರ್ಚಿಗಳು ಖಾಲಿ ಖಾಲಿಯಿದ್ದವು. ಆದರೂ ಅರ್ಧ ಗಂಟೆಗೂ ಅಧಿಕ ಸಮಯ ಜೋಷ್‌ನಲ್ಲಿಯೇ ನಳೀನ್ ಕುಮಾರ್ ಕಟೀಲ್ ಭಾಷಣ ಮಾಡಿದರು. ಇದನ್ನೂ ಓದಿ: BJP ಸರ್ಕಾರವನ್ನು ಯಾರೂ ಪ್ರಶ್ನೆ ಮಾಡೋ ಹಾಗಿಲ್ಲ: ಸಿದ್ದರಾಮಯ್ಯ
Live Tv
[brid partner=56869869 player=32851 video=960834 autoplay=true]
ದಾವಣಗೆರೆ: ಟಿಪ್ಪು ಹೆಸರೇ ಗೊಂದಲದಲ್ಲಿದೆ, ಅವನ ಸಾಧನೆಗಳು ಚರ್ಚೆಯಲ್ಲಿವೆ, ಹಾಗಾಗಿ ಚರ್ಚೆಯಲ್ಲಿ ಇರುವವರ ಹೆಸರು ಸರಿಯಲ್ಲ ಎಂದು ರೈಲಿಗೆ ಟಿಪ್ಪು ಹೆಸರು ತೆಗೆದು ಒಡೆಯರ್ ಹೆಸರು ನಾಮಕರಣ ಮಾಡಿರುವ ವಿಚಾರವನ್ನು ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ಸಮರ್ಥಿಸಿಕೊಂಡರು.
ದಾವಣಗೆರೆಯಲ್ಲಿ (Davanagere) ಮಾತನಾಡಿದ ಅವರು, ಒಡೆಯರ್ ಅವರ ಕೊಡುಗೆ ಈ ರಾಜ್ಯದಲ್ಲಿ ಅಪಾರವಿದೆ. ಶ್ರೇಷ್ಠ ಅಭಿವೃದ್ಧಿ ಹರಿಕಾರರು ಒಡೆಯರ್ ಅವರಾಗಿದ್ದಾರೆ. ಈಗ ಮೋದಿಯವರು (Narendra Modi) ಏನ್ ಮಾಡಿದ್ದಾರೋ ಅದನ್ನು ಒಡೆಯರ್ ಅವರು ಆಗಿನ ಕಾಲದಲ್ಲಿ ಮಾಡಿದ್ದಾರೆ. ಅಲ್ಲದೆ ಟಿಪ್ಪು ಹೆಸರೇ ಗೊಂದಲದಲ್ಲಿದೆ. ಅವನ ಸಾಧನೆಗಳು ಚರ್ಚೆಯಲ್ಲಿವೆ, ಹಾಗಾಗಿ ಚರ್ಚೆಯಲ್ಲಿ ಇರುವರ ಹೆಸರು ಟ್ರೈನ್‌ಗೆ ಇಡುವುದು ಸರಿಯಲ್ಲ. ಆದ್ದರಿಂದ ಒಡೆಯರ್ ಎಕ್ಸ್‌ಪ್ರೆಸ್ (Wodeyar Express) ಎಂದು ಮರುನಾಮಕರಣ ಮಾಡಿದ್ದೇವೆ ಎಂದು ಹೇಳಿದರು.
ಎಸ್ಸಿ, ಎಸ್‌ಟಿ (SC, ST) ಮೀಸಲಾತಿ ಬೇಡಿಕೆ ಈಡೇರಿಕೆ ಮಾಡಿದ್ದೇವೆ. ಅದಕ್ಕಾಗಿ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲಾ ಜನರ ಜನತೆಗೆ ಬೆಂಬಲವಾಗಿ ನಿಲ್ಲುವ ಪಾರ್ಟಿಯಾಗಿ ನಾವು ಗುರುತಿಸಿಕೊಂಡಿದ್ದೇವೆ. ಎರಡು ಸಮುದಾಯಕ್ಕೆ ನ್ಯಾಯ ಸಿಕ್ಕಿದೆ. ಎಲ್ಲಾ ಕಾನೂನು ವಿವರಗಳನ್ನು ಪಡೆದು ಮಾಡಿದ್ದಾರೆ. ಸಾಂವಿಧಾನಿಕವಾಗಿ ತಯಾರಿ ಮಾಡಿ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು.
ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಕೆಎಸ್ ಈಶ್ವರಪ್ಪಗೆ ಅಸಮಾಧಾನ ಇಲ್ಲ. ಖಾಲಿ ಇರುವ ಸಚಿವ ಸ್ಥಾನಗಳನ್ನು ತುಂಬಿಸಲು ಹೇಳಿದ್ದಾರೆ. ಅವರು ನಿರಂತರವಾಗಿ ನಮ್ಮ ಜೊತೆಯಲ್ಲಿಯೇ ಇದ್ದಾರೆ. ಸಂಪುಟ ವಿಸ್ತಾರಣೆಗೆ ಸಲಹೆ ನೀಡಿದ್ದಾರೆ. ಈಶ್ವರಪ್ಪ ಅವರಿಗೆ ಪುನಃ ಸಚಿವ ಸ್ಥಾನ ನೀಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸಿದರು.
ಭಾರತ್ ಜೋಡೋ ಹಾಗೂ ಎಸ್ಸಿ ಎಸ್ಟಿ ಮೀಸಲಾತಿಗೆ ಸಂಬಂಧ ಇಲ್ಲ: ಕಾಂಗ್ರೆಸ್ ಸರ್ಕಾರ ಇದ್ದಾಗ ಅವರ ನಾಯಕರು ಕಣ್ಮುಚ್ಚಿ ಕುಳಿತ್ತಿದ್ದರು. ಎಸ್ಸಿ, ಎಸ್ಟಿ ಸಮುದಾಯದ ಬಗ್ಗೆ ಕಾಳಜಿ ಇದ್ದಿದ್ದರೇ, ಅವರ ಕಾಲಘಟ್ಟದಲ್ಲಿ ಮಾಡಬಹುದಿತ್ತು. ಅವರು ಕಮಿಟಿ ಮಾಡಿ ಕಮಿಟಿಯನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಸಿದ್ದರಾಮಯ್ಯನವರು ಮಾಡಿದರು. ನಮ್ಮ ಸರ್ಕಾರ ಯಾರ ಮಾತು ತಪ್ಪದ ಸರ್ಕಾರ ನುಡಿದಂತೆ ನಡೆದಿದೆ.
ಭಾರತ್ ಜೋಡೋ ಭಾರತದಿಂದ ಓಡುವಂತಹ ಯಾತ್ರೆಯಾಗಿದೆ. ಗಾಂಧಿಗೂ ಈಗಿರುವ ಗಾಂಧಿ ಕುಟುಂಬಕ್ಕೂ ಏನ್ ಸಂಬಂಧ ಎಂದು ಮಕ್ಕಳು ಕೂಡ ಈಗ ಕೇಳ್ತಾ ಇದ್ದಾರೆ. ಭಾರತ ವಿಭಜನೆಗೆ, ಎಲ್ಲಾ ಗೊಂದಲಕ್ಕೂ ಕಾಂಗ್ರೆಸ್ ಕಾರಣ, ಧರ್ಮದ ಹಾಗೂ ಜಾತಿಗಳ ನಡುವಿನ ಸಂಘರ್ಷಕ್ಕೆ ಕಾಂಗ್ರೆಸ್‌ನ ತೀರ್ಮಾನವೇ ಕಾರಣ ಎಂದು ಕಿಡಿಕಾರಿದರು.
ಮುಸ್ಲಿಂ ಸಮುದಾಯದಲ್ಲಿ ಜಯಂತಿ ಆಚರಣೆ ಪದ್ಧತಿಯಿಲ್ಲ: ಮುಸ್ಲಿಂ ಸಮುದಾಯದಲ್ಲಿ ಜಯಂತಿ ಆಚರಣೆ ಪದ್ಧತಿಯಿಲ್ಲ. ಸಿದ್ದರಾಮಯ್ಯ ಸರ್ಕಾರ ಬಂದಾಗ ಟಿಪ್ಪು ಜಯಂತಿ ತಂದು ದುರಂತಕ್ಕೆ ಕಾರಣರಾದರು. ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತಂದು ಅವರ ಭಾವನೆಗಳನ್ನು ಕೆರಳಿಸಿದರು, ಮತಬ್ಯಾಂಕ್‌ಗಾಗಿ ಸಣ್ಣತನದ ರಾಜಕಾರಣ ಮಾಡಿದರು. ಭಾರತವನ್ನು ಜಾತಿ, ಮತ, ಪಂಥ, ಪಂಗಡಗಳಲ್ಲಿ ಎಲ್ಲಿ ತುಂಡು ಮಾಡಬೇಕೋ ಅಲ್ಲಿ ಮಾಡಬೇಕೋ ಮಾಡಿದ್ದಾರೆ, ವಿಭಜನೆ ಮಾಡಿರುವವರು ಎಲ್ಲಿ ಜೋಡೋ ಮಾಡ್ತಾರೆ ಎಂದು ಟಾಂಗ್ ನೀಡಿದರು.
ಪಾಕಿಸ್ತಾನಕ್ಕೆ ಜಿಂದಾಬಾದ್ ಅಂದವರು, ಪಾಕಿಸ್ತಾನದ ಪರ ಮಾತನಾಡಿದರನ್ನು ಜೋಡಿಸಿಕೊಂಡು ಹೋಗ್ತಾರೆ. ಈ ದೇಶವನ್ನು ಜೋಡಿಸಿದವರು ಯಾರಾದರೂ ಇದ್ದರೆ ಅದು ಅಟಲ್ ಬಿಹಾರಿ ವಾಜಪೇಯಿ ಅವರಾಗಿದ್ದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಚತುಷ್ಪತ ರಸ್ತೆ ಮಾಡಿ ಜೋಡಿಸಿದ್ದಾರೆ ಎಂದ ಅವರು ಅಕ್ಟೋಬರ್ 11 ರಿಂದ ಸಿಎಂ ನೇತೃತ್ವದಲ್ಲಿ ಕರ್ನಾಟಕ ಯಾತ್ರೆ ಶುರುವಾಗುತ್ತದೆ ಎಂದರು. ಇದನ್ನೂ ಓದಿ: ಟಿಪ್ಪು ಎಕ್ಸ್‌ಪ್ರೆಸ್‌ಗೆ ಒಡೆಯರ್ ಎಕ್ಸ್‌ಪ್ರೆಸ್ ಬೋರ್ಡ್ ನೇತಾಕಿದ ರೈಲ್ವೆ ಇಲಾಖೆ
ಅರ್ಕಾವತಿ ಬಡಾವಣೆ ಹಗರಣ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಅರ್ಕಾವತಿ ಹಗರಣವನ್ನು ಮುಚ್ಚಿಡುವ ಪ್ರಯತ್ನ ಸಿದ್ದರಾಮಯ್ಯ ಮಾಡಿದ್ದಾರೆ, ದಾಖಲೆಗಳನ್ನು ಮುಚ್ಚಿಟ್ಟಿದ್ದಾರೆ, ನಮ್ಮ ಸರ್ಕಾರ ದಾಖಲೆಗಳನ್ನು ಹೊರ ತೆಗೆಯುವ ಕೆಲಸ ಮಾಡುತ್ತೇವೆ, ಫಲಿತಾಂಶಕ್ಕಾಗಿ ಕಾದು ನೋಡಿ ಎಂದ ತಿಳಿಸಿದರು. ಇದನ್ನೂ ಓದಿ: 2023 ಚುನಾವಣೆ – ಮತ್ತೆ ಟಿಪ್ಪು ವಾರ್ ಶುರು ಆಗುತ್ತಾ?
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಕಾಂಗ್ರೆಸ್ಸಿನ ಭಾರತ್ ಜೋಡೋ ಯಾತ್ರೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ (Nalin Kumar Kateel) ಕಟೀಲು ಮತ್ತೆ ಲೇವಡಿ ಮಾಡಿದ್ದಾರೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಭಾರತ್ ಜೋಡೋ ಯಾತ್ರೆ (Bharat Jodo Yatre) ಯನ್ನ ಕಾಂಗ್ರೆಸ್ಸಿಗರ ಭಾರತ ಬಿಟ್ಟು ಓಡೋ ಯಾತ್ರೆ ಎಂದು ಲೇವಡಿ ಮಾಡಿದ್ದಾರೆ.
ಗುಲಾಂ ನಬಿ ಆಜಾದ್ (Ghulam Nabi Azad) ಅವರು ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕತ್ವದ ವಿರುದ್ಧ ಕೋಪದಿಂದಿರುವ ನಾಯಕರು ಜೊತೆಗೂಡಿ ಜಿ-23 ಗುಂಪು ರಚಿಸಿದ್ದರು. ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಅದು ಚೇತರಿಕೆ ಕಾಣಲಾರದು ಎಂಬುದನ್ನು ಮನಗಂಡ ನಾಯಕರನೇಕರು ಒಬ್ಬೊಬ್ಬರಾಗಿ ಈಗಾಗಲೇ ಆ ಪಕ್ಷಕ್ಕೆ ವಿದಾಯ ಹೇಳಿದ್ದಾರೆ ಅಂತ ಟೀಕಿಸಿದರು.
ಸ್ವಜನಪಕ್ಷಪಾತ, ಕುಟುಂಬ ರಾಜಕಾರಣದ ಮೂಲಕ ಗುರುತಿಸಿಕೊಂಡ ಕಾಂಗ್ರೆಸ್ (Congress) ಪಕ್ಷ ಮುಂದಿನ ದಿನಗಳಲ್ಲಿ ಪಕ್ಷದೊಳಗಿನ ಭಿನ್ನಮತ ಹಾಗೂ ಸಮರ್ಥ ನಾಯಕತ್ವದ ಕೊರತೆಯಿಂದ ನೆಲಕಚ್ಚಲಿದೆ. ಕಾಂಗ್ರೆಸ್ ತೊರೆಯುವ ನಾಯಕರನ್ನು ಒಂದೆಡೆ ಸೇರಿಸಿ ಕಾಂಗ್ರೆಸ್ ಜೋಡೋ ಮಾಡಬೇಕಿದ್ದ ರಾಹುಲ್ ಗಾಂಧಿ (Rahul Gandhi) ಯವರು ತಮ್ಮ ಮುತ್ತಾತ ನೆಹರೂ ಅವರು ದೇಶವನ್ನು ಇಬ್ಭಾಗ ಮಾಡಿದ್ದನ್ನು ಮರೆತಿದ್ದಾರೆ. ಇದು ಜಾಣಮರೆವಲ್ಲದೆ ಮತ್ತೇನಲ್ಲ ಅಂತ ಲೇವಡಿ ಮಾಡಿದ್ದಾರೆ.
130 ಕೋಟಿ ಜನರ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದು ಮಾಡಿ ದೇಶ ಜೋಡಿಸುವ ಕಾರ್ಯ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಶಾಶ್ವತವಾಗಿ ಮೂಲೆಗುಂಪು ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಪಕ್ಷ. ಹಿಂದೂ ವಿರೋಧಿ ಜಾತಿ- ಜಾತಿಗಳ ನಡುವೆ, ಮತೀಯ ಸಂಘರ್ಷ ಹೆಚ್ಚಿಸುವ ಪಕ್ಷವಾದರೆ, ಬಿಜೆಪಿ ಸದಾ ಜನಹಿತ ಮತ್ತು ಅಭಿವೃದ್ಧಿಗಾಗಿ ಶ್ರಮಿಸುವ ಪಕ್ಷ ಎಂಬುದು ಜನರಿಗೆ ಅರಿವಾಗಿದೆ. ಕಾಂಗ್ರೆಸ್ ಪಕ್ಷದ ಆರು ದಶಕಗಳ ಭ್ರಷ್ಟಾಚಾರ, ಸಾಲು ಸಾಲು ಹಗರಣಗಳನ್ನು ಗಮನಿಸಿದ ಮಹಾಜನತೆ ಕಾಂಗ್ರೆಸ್ ಪಕ್ಷವನ್ನು ಶಾಶ್ವತವಾಗಿ ಮೂಲೆಗುಂಪು ಮಾಡುವ ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದರು.
ರಾಹುಲ್ ಗಾಂಧಿಯವರು ಭಾರತ್ ಜೋಡೋ ಮೂಲಕ ಕರ್ನಾಟಕಕ್ಕೆ ಪ್ರವೇಶ ಮಾಡುವ ಸಂದರ್ಭದಲ್ಲೇ ಇಲ್ಲಿನ ಕಾಂಗ್ರೆಸ್ ಮುಖಂಡರು ಎರಡು ತಂಡಗಳಾಗಿ ಸ್ವಾಗತ ಮಾಡಿದ್ದಾರೆ. ಮುಖ್ಯಮಂತ್ರಿ ಕುರ್ಚಿಯ ಹಗಲುಕನಸು ಕಾಣುವ ಸಿದ್ದರಾಮಯ್ಯ (Siddaramaiah) ಒಂದೆಡೆ ಸ್ವಾಗತ ಕೋರಿದರೆ, ಜೈಲಿನತ್ತ ಮುಖ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಮತ್ತು ಹಗರಲಿರುಳೂ ಸಿಎಂ ಕುರ್ಚಿಯ ತಿರುಕನ ಕನಸು ಕಾಣುವ ಡಿ.ಕೆ.ಶಿವಕುಮಾರ್ ಮತ್ತೊಂದೆಡೆ ರಾಹುಲ್ ಗಾಂಧಿಯವರನ್ನು ಸ್ವಾಗತಿಸಿದ್ದಾರೆ. ಇದು ಕಾಂಗ್ರೆಸ್ ಭಿನ್ನಮತಕ್ಕೆ ಸ್ಪಷ್ಟ ನಿದರ್ಶನ. ಇದನ್ನು ಜನತೆ ಗಮನಿಸಿದ್ದಾರೆ ಅಂತ ಟೀಕಿಸಿದರು.
ಸಂವಿಧಾನದ ಕರ್ತೃ, ಮಹಾನ್ ನಾಯಕ ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರಿಗೆ ಸದಾ ಅನ್ಯಾಯ- ಅವಹೇಳನ ಮಾಡಿದ ಪಕ್ಷ ಕಾಂಗ್ರೆಸ್. ಅವರನ್ನು ಕೇವಲ ಮತಬ್ಯಾಂಕಾಗಿ ಅದು ಬಳಸಿಕೊಂಡಿತ್ತು. ಬಿಜೆಪಿ ಅಂಬೇಡ್ಕರ್ ಅವರ ಪ್ರಮುಖ ಸ್ಥಳಗಳನ್ನು ಪಂಚಕ್ಷೇತ್ರಗಳನ್ನಾಗಿ ಅಭಿವೃದ್ಧಿಪಡಿಸಿದೆ. ರಾಜ್ಯದಲ್ಲೂ ಅವರು ಭೇಟಿ ಕೊಟ್ಟ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಬಿಜೆಪಿ(BJP) ಯ ಬಸವರಾಜ ಬೊಮ್ಮಾಯಿಯವರ ನೇತೃತ್ವದ ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೀತಿಯ ಶ್ವಾನ ನಾಪತ್ತೆ- ಸಿಎಂ ಕಚೇರಿಗೆ ಮಹಿಳೆ ದುಂಬಾಲು, ಹುಡುಕಿ ಕೊಡಲು ಆದೇಶ
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಚಿಂತನೆಯೊಂದಿಗೆ ಮುನ್ನಡೆಯುತ್ತಿರುವ ಜಗದ್ವಂದ್ಯ ನಾಯಕ ನರೇಂದ್ರ ಮೋದಿಜಿ ಮತ್ತು ರಾಜ್ಯದ ಕಾಮನ್ ಮ್ಯಾನ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಕೇಂದ್ರ- ರಾಜ್ಯದಲ್ಲಿ ಮತ್ತೊಮ್ಮೆ ಅವಕಾಶ ನೀಡಲು ಪ್ರಜ್ಞಾವಂತ ಮತದಾರರು ಡಬಲ್ ಎಂಜಿನ್ ಅಭಿವೃದ್ಧಿಯ ಸರ್ಕಾರಗಳಿಗೆ ಮತ್ತೆ ಸ್ಪಷ್ಟ ಬಹುಮತ ಕೊಡಲು ಈಗಾಗಲೇ ತೀರ್ಮಾನ ಮಾಡಿದ್ದಾರೆ.
ಕಾಂಗ್ರೆಸ್ಸಿಗರು ಭಾರತ್ ಜೋಡೋದಂಥ ನಾಟಕದ ಮೂಲಕ ಜನರಿಗೆ ರಂಜನೆಯನ್ನಷ್ಟೇ ನೀಡಬಲ್ಲರು. 2023ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಗೆದ್ದು ರಾಜ್ಯವನ್ನು ಕಾಂಗ್ರೆಸ್ ಪಾರ್ಟಿ ಎಟಿಎಂ ಮಾಡಿಕೊಳ್ಳಲು ಕಾಂಗ್ರೆಸ್‍ನ ನಕಲಿ ಗಾಂಧಿ ಕುಟುಂಬ ಯೋಚಿಸಿದೆ. ಅದು ಈಡೇರುವ ಸಾಧ್ಯತೆ ಇಲ್ಲ ಎಂಬುದು ಅರಿವಾದ ಬಳಿಕ ಡಿಕೆ ಶಿವಕುಮಾರ್- ಸಿದ್ದರಾಮಯ್ಯರವರು ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಅಂತ ಆರೋಪಿಸಿದರು.
ಕಾಂಗ್ರೆಸ್ ಅವಧಿಯ ಶಿಕ್ಷಕರ ನೇಮಕಾತಿ ಹಗರಣ, ಪೊಲೀಸ್ ಇಲಾಖೆಯ ನೇಮಕಾತಿ ಹಗರಣ, ದಿಂಬು- ಹಾಸಿಗೆ ಖರೀದಿ ಹಗರಣ, ಅರ್ಕಾವತಿ ರೀಡೂ ಹಗರಣಗಳ ತನಿಖೆ ಸಾಧ್ಯತೆಯ ವಿಚಾರ ತಿಳಿದ ಬಳಿಕ ಸಿದ್ದರಾಮಯ್ಯರಿಗೆ ನಿದ್ರೆ ಬರುತ್ತಿಲ್ಲ. ಜೈಲುರಾಮಯ್ಯ ಆಗುವ ಆತಂಕ ಅವರನ್ನು ಕಾಡುತ್ತಿದೆ. ತಾನು ಕಳ್ಳ ಪರರನ್ನು ನಂಬಲಾರ ಎಂಬ ಸ್ಥಿತಿ ಈ ಮುಖಂಡರದು ಅಂತ ವಾಗ್ದಾಳಿ ನಡೆಸಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)ಯ ಸಾವಿರಾರು ಮುಖಂಡರು ಮತ್ತು ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ರದ್ದು ಮಾಡಿದ್ದ ಸಿದ್ದರಾಮಯ್ಯರ ಹಿಂದಿನ ಸರ್ಕಾರವು ಜನರಿಗೆ ಪಿಎಫ್‍ಐ ಭಯೋತ್ಪಾದನಾ ಭಾಗ್ಯ ನೀಡಿತ್ತು. ಪಿಎಫ್‍ಐ ಮತ್ತು ಸಹ ಸಂಘಟನೆಗಳ ನಿಷೇಧ ಸಿದ್ದರಾಮಣ್ಣನಿಗೆ ನುಂಗಲಾರದ ಬಿಸಿ ತುಪ್ಪದಂತಾಗಿದೆ. ಓಲೈಕೆ, ತುಷ್ಟೀಕರಣ ಮತ್ತು ಹಿಂದೂ ವಿರೋಧಿ ರಾಜಕಾರಣ ಮಾಡುತ್ತಲೇ ಬಂದಿರುವ ಸಿದ್ದರಾಮಣ್ಣ ಮತ್ತು ಡಿ.ಕೆ.ಶಿವಕುಮಾರ್ ಕುತಂತ್ರಗಳು ಮುಂದಿನ ಚುನಾವಣೆಯಲ್ಲಿ ಫಲ ಕೊಡುವುದಿಲ್ಲ ಅಂತ ಕಾಂಗ್ರೆಸ್ ವಿರುದ್ಧ ಕಟೀಲು ಕಿಡಿಕಾರಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಪೇ ಸಿಎಂ ಅಂದ್ರೆ ‘ಪೇ ಕಾಂಗ್ರೆಸ್ ಮೇಡಂ’ (Pay Congress Madam) ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ (Nalin Kumar Kateel) ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲಿಂದು ಸಿದ್ದರಾಮಣ್ಣ ಅಧಿಕಾರಾವಧಿಯ ಶೇ 100 ಭ್ರಷ್ಟಾಚಾರವನ್ನು ಅನಾವರಣಗೊಳಿಸುವ ʻಸ್ಕ್ಯಾಮ್ ರಾಮಯ್ಯ” (Scam Ramaiah) ಪುಸ್ತಕ ಬಿಡುಗಡೆ ಮಾಡಿದರು. ಕಾಂಗ್ರೆಸ್ (Congress) ಮೇಡಂಗೆ ಮಾಡುವ ಪೇಮೆಂಟ್ ಬಗ್ಗೆ ಉಲ್ಲೇಖ ಇದಾಗಿದೆ. ಶಿವಕುಮಾರ್ (DK Shivakumar) ಚೀಟಿ ನುಂಗಿದ್ದನ್ನು ನೋಡಿದ್ದೀರಿ. ಅವರು ಚೀಟಿ ಶಿವಕುಮಾರ್ ಆಗಿದ್ದಾರೆ. ಪೇ ಸಿಎಂ ಅಭಿಯಾನವು ಕರ್ನಾಟಕಕ್ಕೆ (Karnataka) ಮಾಡುತ್ತಿರುವ ಅವಮಾನ. ಸಿದ್ದರಾಮಯ್ಯ ಅವರು ಕೋರ್ಟಿನ (Court) ಆದೇಶದನ್ವಯ ಬಂಧನಕ್ಕೆ ಒಳಗಾಗಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಗೌರವ ಹೋದ್ರೆ ಎಲ್ಲರದ್ದೂ ಹೋಗಲಿದೆ – ಪೇ ಸಿಎಂ ಗದ್ದಲ, ಗಲಾಟೆ: ಕಲಾಪ ಮುಂದೂಡಿಕೆ
ಕಾಂಗ್ರೆಸ್ ಪಕ್ಷವು ತನ್ನ ಸುದೀರ್ಘ ರಾಜಕಾರಣದಲ್ಲಿ (Politics) ಭ್ರಷ್ಟಾಚಾರಕ್ಕೆ ಅತಿದೊಡ್ಡ ಕೊಡುಗೆ ನೀಡಿದೆ. ದೇಶದಲ್ಲಿ ಉಗ್ರವಾದ ಭಯೋತ್ಪಾದನೆಗೂ (Terrorism) ಕಾಂಗ್ರೆಸ್ ಪಕ್ಷವೇ ಕಾರಣ. 1947ರಿಂದ 2014ರವರೆಗೆ ಗರಿಷ್ಠ ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ (Congress) ಪಕ್ಷವು ಭ್ರಷ್ಟಾಚಾರಕ್ಕೆ ಬೃಹತ್ತಾದ ಕೊಡುಗೆ ನೀಡಿದೆ ಎಂದು ಟೀಕಿಸಿದರು. ಇದನ್ನೂ ಓದಿ: ನಾನು ಆರೋಗ್ಯವಾಗಿದ್ದೇನೆ, ಕಾರ್ಯಕರ್ತರು ಆತಂಕ ಪಡೋ ಅಗತ್ಯವಿಲ್ಲ: ಹೆಚ್.ಡಿ ದೇವೇಗೌಡ
ಕಾಂಗ್ರೆಸ್‍ನ ಅತಿ ಹೆಚ್ಚು ಜನರು ಕಾಂಗ್ರೆಸ್‍ನ ರಾಷ್ಟ್ರೀಯ ನಾಯಕರು (National Congress Leader), ರಾಜ್ಯದ ನಾಯಕರು ಹಗರಣಗಳಲ್ಲಿ ಸಿಲುಕಿದ್ದಾರೆ. ತನಿಖೆಯ ಫಲಿತಾಂಶಗಳು ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಈಡುಮಾಡಿವೆ. ಜನರ ದಾರಿ ತಪ್ಪಿಸಲು ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ. ಸಿದ್ದರಾಮಣ್ಣನ ಕಾಲಘಟ್ಟದಲ್ಲೂ ಅತಿಹೆಚ್ಚು ಹಗರಣಗಳು ನಡೆದಿದ್ದು, ಲೋಕಾಯುಕ್ತ ಶಕ್ತಿ ಕುಂದಿಸಿ ಹಗರಣಗಳನ್ನು ಮುಚ್ಚಿ ಹಾಕಲು ಆಗಿನ ಸರ್ಕಾರ ಮುಂದಾಗಿತ್ತು ಎಂದು ತಿಳಿಸಿದರು.
ಸಾಲು ಸಾಲು ಹಗರಣ:
ನೆಹರೂರಿಂದ ಆರಂಭಿಸಿ ಮನಮೋಹನ್ ಸಿಂಗ್ (Manmohan Singh) ಕಾಲಘಟ್ಟದವರೆಗೆ ಈ ದೇಶದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದ ಇತರ ಎಲ್ಲ ಪ್ರಧಾನಮಂತ್ರಿಗಳು ಭ್ರಷ್ಟಾಚಾರ ಮತ್ತು ವಿವಿಧ ಹಗರಣಗಳಲ್ಲಿ ಸಿಲುಕಿದವರೇ ಆಗಿದ್ದಾರೆ. 1948ರ ಜೀಪ್ ಹಗರಣದಿಂದ ಬೊಫೋರ್ಸ್ (Bofors Case), ಸಿಮೆಂಟ್ ಹಗರಣ, ಕಾಮನ್‍ವೆಲ್ತ್ ಹಗರಣದಿಂದ 2ಜಿ ಹಗರಣದವರೆಗೆ ಆಕಾಶ, ನೀರು, ಮಣ್ಣು ಮತ್ತು ಗಾಳಿಯಲ್ಲಿ ಗರಿಷ್ಠ ಹಗರಣಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅನ್ವರ್ ಮಾಣಿಪ್ಪಾಡಿ ವರದಿ 2.5 ಲಕ್ಷ ಕೋಟಿ ಹಗರಣವನ್ನು ಬೆಳಕಿಗೆ ತರಲಿದೆ. ಅರ್ಕಾವತಿ, ಮೊಟ್ಟೆ, ಹಾಸಿಗೆ, ದಿಂಬು ಸೇರಿ ಅನೇಕ ಹಗರಣಗಳು ನಡೆದಿದ್ದವು. ಇವೆಲ್ಲವುಗಳನ್ನು ಮುಚ್ಚಿಡಲು ಕಾಂಗ್ರೆಸ್ ಪ್ರಯತ್ನಿಸಿತು. ಡ್ರಗ್ ದಂಧೆ, ಮರಳು ಮಾಫಿಯಾಗಳು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ನಡೆಸುತ್ತಿದ್ದವು. ಆ ದಂಧೆಗಳನ್ನು ನಮ್ಮ ಸರ್ಕಾರ ನಿಯಂತ್ರಿಸಿದೆ ಎಂದು ವಿವರಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದವರ ಬಂಧನವೇಕಿಲ್ಲ?: ದಿನೇಶ್ ಗುಂಡೂರಾವ್
ಕಾಂಗ್ರೆಸ್ ಹಗರಣಗಳ ಸಂಪೂರ್ಣ ತನಿಖೆ ನಡೆಯಲಿದ್ದು, ತಪ್ಪಿತಸ್ಥರ ಬಂಧನವಾಗಲಿದೆ. ನಮ್ಮ ಸಾಧನೆ ಮತ್ತು ಅಭಿವೃದ್ಧಿಗಳನ್ನು ನೋಡಿ ಆತಂಕಗೊಂಡ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ. ಹಾಗಾಗಿ ದಾಖಲೆಗಳನ್ನು ಸಂಗ್ರಹಿಸಿ, ʻಸ್ಕ್ಯಾಮ್ ರಾಮಯ್ಯʼ ಪುಸ್ತಕ ಹೊರತಂದಿದ್ದೇವೆ. ಅಧಿಕಾರಿಗಳಾದ ಕೆಂಪಯ್ಯ ಮತ್ತು ಕಾಂಟ್ರಾಕ್ಟರ್ ಕೆಂಪಣ್ಣನ ಮೂಲಕ ಸಿದ್ದರಾಮಣ್ಣ ರಾಜಕೀಯ ಮಾಡುತ್ತಿದ್ದಾರೆ. ಆದರೆ, ನಾವು ಲೋಕಾಯುಕ್ತಕ್ಕೆ ಜೀವ ಕೊಡುವ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಆಡಳಿತ ಅವಧಿಯ ಎಲ್ಲ ಹಗರಣಗಳನ್ನು ತನಿಖೆ ಮಾಡಿಸಲಿದ್ದೇವೆ. ಪ್ರಕರಣ ದಾಖಲಿಸಿ, ಎಷ್ಟೇ ದೊಡ್ಡವರಿದ್ದರೂ ಬಂಧಿಸಲಿದ್ದೇವೆ. ಪಾರದರ್ಶಕ ಆಡಳಿತ ನಡೆಸಲಿದ್ದೇವೆ ಎಂದು ನುಡಿದರು.
ಉಗ್ರವಾದವನ್ನು ಪೋಷಿಸಿದ ಪಕ್ಷ ಕಾಂಗ್ರೆಸ್. ನಾವು ಉಗ್ರರನ್ನು ಮಟ್ಟ ಹಾಕಲು ಎನ್‍ಐಎ ಮೂಲಕ ದಾಳಿಗಳನ್ನು ಸಂಘಟಿಸಿದ್ದೇವೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು. ಕಾಶ್ಮೀರ ಉಳಿಸಲು ನಮ್ಮ ಸರ್ಕಾರ ಕ್ರಮ ಕೈಗೊಂಡಿತ್ತು ಎಂದ ಅವರು, ಸಿದ್ದರಾಮಯ್ಯರ ಎಲ್ಲ ಹಗರಣಗಳ ದಾಖಲೆ ಸಂಗ್ರಹಿಸಲಾಗಿದೆ. ಈಗ ತನಿಖೆ ಮುಂದುವರಿಯಲಿದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಎನ್‌ಐಎ ದಾಳಿ- ಅಪರಾಧಗಳ ಹಿನ್ನೆಲೆ ಮಾತ್ರ ಗಣನೆ, ಧರ್ಮ ಅಲ್ಲ: ಆರಗ ಜ್ಞಾನೇಂದ್ರ
ಕಾಂಗ್ರೆಸ್ ಶಾಪಗ್ರಸ್ಥ ಪಕ್ಷ:
ಕಾಂಗ್ರೆಸ್ ಪಕ್ಷವು ಭ್ರಷ್ಟರ ಮೂಲ ಕೇಂದ್ರ. ಭಾರತ್ ಜೋಡೋಗಿಂತ ಮೊದಲು ಕಾಂಗ್ರೆಸ್ ಜೋಡೋ ಮಾಡಬೇಕಿದೆ. ಜಾತಿ-ಜಾತಿಗಳನ್ನು ಒಡೆದ, ರಾಜ್ಯಗಳನ್ನು ಮತ್ತು ದೇಶ ಒಡೆದ ಶಾಪ ಕಾಂಗ್ರೆಸ್‍ಗಿದೆ. ಅದೊಂದು ಶಾಪಗ್ರಸ್ಥ ಪಕ್ಷ. ಡಿಕೆಶಿ ಡೀಲ್ ಮಾಸ್ಟರ್ ಎಂದು ಅವರ ಪಕ್ಷದವರೇ ಹೇಳಿದ್ದಾರೆ. ಇಲ್ಲಿಯೂ ಡಿಕೆಶಿ- ಸಿದ್ದರಾಮಣ್ಣ ನಡುವೆ ಜಗಳ ನಡೆಯುತ್ತಿದೆ. ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಡಿಐಜಿ ಮಟ್ಟದ ಅಧಿಕಾರಿಯನ್ನು ನಮ್ಮ ಸರ್ಕಾರ ಬಂಧಿಸಿದೆ ಎಂದು ಮಾಹಿತಿ ನೀಡಿದರು.
ಭ್ರಷ್ಟಾಚಾರ ಕುರಿತು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನಿಗೆ ಕಾಲಾವಕಾಶ ಕೊಟ್ಟಿದ್ದರೂ ದಾಖಲೆ ಕೊಟ್ಟಿಲ್ಲ. ಇಂದಿನ ವರೆಗೆ ಕಾಂಗ್ರೆಸ್ ಮತ್ತು ಅವರ ಏಜೆಂಟರು ದಾಖಲೆಗಳನ್ನು ಕೊಟ್ಟಿಲ್ಲ. ಸಾಕ್ಷಿ ಇಲ್ಲದೆ ತನಿಖೆ ಮಾಡಲು ಹೇಗೆ ಸಾಧ್ಯ? ಅದಕ್ಕಾಗಿ ಪಕ್ಷದ ಮೂಲಕ ಮಾನನಷ್ಟ ಮೊಕದ್ದಮೆ ದಾಖಲಿಸಲಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್. ರವಿಕುಮಾರ್ ಹಾಗೂ ಸಿದ್ದರಾಜು, ರಾಜ್ಯ ಬಿಜೆಪಿ ವಕ್ತಾರ ಎಂ.ಜಿ. ಮಹೇಶ್, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಸಿದ್ದರಾಮಯ್ಯ, ರಾಜಕೀಯವಾಗಿ ಮೂಲೆಗುಂಪಾಗುವ ದಿನ ದೂರ ಉಳಿದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ಜನಸ್ಪಂದನ ಸಮಾವೇಶ ಕುರಿತಂತೆ ಸಿದ್ದರಾಮಯ್ಯ ಅವರು ಟೀಕೆ ವ್ಯಕ್ತಪಡಿಸಿದ ಹಿನ್ನೆಲೆ ನಳಿನ್ ಕುಮಾರ್ ಕಟೀಲ್ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಸಿದ್ದರಾಮಯ್ಯ, ರಾಜಕೀಯವಾಗಿ ಮೂಲೆಗುಂಪಾಗುವ ದಿನ ದೂರವಿಲ್ಲ. ಮೋದಿಯವರ ಮಂಗಳೂರು ಕಾರ್ಯಕ್ರಮ ಮತ್ತು ದೊಡ್ಡಬಳ್ಳಾಪುರದ ಜನಸ್ಪಂದನಕ್ಕೆ ಸ್ವಯಂಪ್ರೇರಿತ ಜನಸಾಗರ ಬಂದಿತ್ತು. ಇದನ್ನು ಗಮನಿಸಿ ಸಿದ್ದರಾಮಯ್ಯರು ಸ್ಥಿಮಿತ ಕಳೆದುಕೊಂಡಂತಿದೆ. ಅದಕ್ಕಾಗಿಯೇ ಅವರು ತಮ್ಮ ಸುಳ್ಳಿನ ಸರಮಾಲೆ, ವ್ಯರ್ಥ ಆರೋಪಗಳ ಮೂಲಕ ನಾಟಕ ಮುಂದುವರಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕನ್ನಡನಾಡಿನ ಜನತೆ ನಿರ್ಧರಿಸಿದ್ದಾರೆ. ಅಧಿಕಾರ ಗಳಿಸುವ ಕಾಂಗ್ರೆಸ್ಸಿಗರ ಕನಸು ಕೇವಲ ಹಗಲುಗನಸಾಗಿ ಉಳಿಯಲಿದೆ. ಸಿದ್ದರಾಮಯ್ಯರನ್ನು ಜನರು ಸೋಲಿಸಿ ರಾಜಕೀಯವಾಗಿ ಮೂಲೆಗುಂಪಾಗುವಂತೆ ಮಾಡಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ನಮಗೆ ಸವಾಲು ಹಾಕುವ ಧಮ್ ನಿಮಗೆ ಇಲ್ಲ: ಬೊಮ್ಮಾಯಿ ವಿರುದ್ಧ ಸಿದ್ದು ಕಿಡಿ
ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ. ಸಿದ್ದರಾಮಯ್ಯ ಎಂದರೆ ಡೋಂಗಿತನ, ಹಿಂದೂ ವಿರೋಧಿತನದ ಸಂಕೇತ. ರಾಷ್ಟ್ರವಿರೋಧಿ ಶಕ್ತಿಗಳ ಜೊತೆ ಕೈ ಜೋಡಿಸುವ ಮತ್ತು ಧರ್ಮಗಳನ್ನು ಒಡೆಯುವ ಸಿದ್ದರಾಮಯ್ಯ. ಒಮ್ಮೆ ನಿರುದ್ಯೋಗ ಸಮಸ್ಯೆ ಎನ್ನುವ ಸಿದ್ದರಾಮಣ್ಣ, ಮತ್ತೆ ಪ್ಲೇಟ್ ಬದಲಿಸಿ ಶೇಕಡಾ 40 ಭ್ರಷ್ಟಾಚಾರ ಎಂದು ರಾಗ ಎಳೆಯುತ್ತಾರೆ. ಅರ್ಕಾವತಿ ಹಗರಣ ಸೇರಿ ವಿವಿಧ ಭ್ರಷ್ಟಾಚಾರ ಹಗರಣಗಳನ್ನು ಬಿಜೆಪಿ ಸರ್ಕಾರ ಬಯಲಿಗೆ ಎಳೆಯಲಿದೆ. ಇದು ಗೊತ್ತಾಗಿ ಸಿದ್ದರಾಮಣ್ಣನಿಗೆ ಚಳಿಜ್ವರ ಬಂದಂತಿದೆ. ಅದಕ್ಕಾಗಿಯೇ ಸದಾ ಪ್ರಚಾರದಲ್ಲಿರಲು ಸುಳ್ಳು ಸುಳ್ಳು ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿನವರಿಗೆ ತಾಕತ್, ಧಮ್ ಇದ್ದರೇ ನಮ್ಮನ್ನು ತಡೆಯಲಿ: ಬೊಮ್ಮಾಯಿ ಸವಾಲು
ಸಿದ್ದರಾಮಯ್ಯ ಬಾಯಿ ಚಪಲಕ್ಕಾಗಿ ಮಾತನಾಡುತ್ತಿದ್ದಾರೆ. ಮಳೆ ಹಾನಿ ಸಂಬಂಧ ನೀವು ಮತ್ತು ನಿಮ್ಮ ಪಕ್ಷದವರು ಎಷ್ಟು ಪ್ರವಾಸ ಮಾಡಿದ್ದೀರಿ? ನಿನ್ನೆ ಕಾಟಾಚಾರಕ್ಕೆ ಬಾದಾಮಿಗೆ ಹೋಗಿ ಬಂದಿದ್ದಲ್ಲವೇ? ನಿಮ್ಮ ಅಸಲಿಯತ್ತು ನಮಗೆ ಮಾತ್ರವಲ್ಲದೆ ಜನರಿಗೂ ಗೊತ್ತಿದೆ. ನಕಲಿ ಸಮಾಜವಾದಿಗಳು, ನಕಲಿ ಬುದ್ಧಿಜೀವಿಗಳ ಜೊತೆ ಸೇರಿ ಮಾತನಾಡುವ ನಿಮ್ಮನ್ನು ಜನರು ನಂಬಲಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.