Tag: ನಳಿನ್ ಕುಮಾರ್

  • ಅವರ ಬಗ್ಗೆ ಟೀಕೆ ಮಾಡುವ ಶಕ್ತಿ ನನಗಿಲ್ಲ: ಹೆಚ್.ಡಿ ದೇವೇಗೌಡ

    ಅವರ ಬಗ್ಗೆ ಟೀಕೆ ಮಾಡುವ ಶಕ್ತಿ ನನಗಿಲ್ಲ: ಹೆಚ್.ಡಿ ದೇವೇಗೌಡ

    ವಿಜಯಪುರ: ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಒಬ್ಬ ಡ್ರಗ್ ಪೆಡ್ಲರ್ ಅನ್ನೋ ಹೇಳಿಕೆ ಬಗ್ಗೆ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡರು, ನಮಗೆ ಅವರ ಬಗ್ಗೆ ಟೀಕೆ ಮಾಡುವಷ್ಟು ಶಕ್ತಿಯಿಲ್ಲ ಎಂದು ಹೇಳಿದ್ದಾರೆ.

    ರಾಮಪುರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೌಡರು, ಇದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ಸ್ಪರ್ಧೆಯಾಗಿದೆ. ಇಲ್ಲಿ ಚುನಾವಣೆ ಮುಖ್ಯವಾಗಿಲ್ಲ, ಇವರುಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವಿನ ಸ್ಪರ್ಧೆಯಾಗಿ ಏರ್ಪಟ್ಟಿದೆ. ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿ, ವ್ಯಕ್ತಿಗರ ನಿಂದನೆ ಮಾಡುವ ಹವ್ಯಾ ಹಚ್ಚಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿ ಡ್ರಗ್ ಪೆಡ್ಲರ್: ಕಟೀಲ್

    ಕುಮಾರಸ್ವಾಮಿ ವಿರುದ್ಧದ ಬೈಗಮಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಗೌಡರು, ಟ್ವೀಟ್ ಮತ್ತು ಮರುಟ್ವೀಟ್ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತುಂಬಾನೆ ನಡೆಯುತ್ತಿದೆ. ಟ್ವೀಟ್‍ನಿಂದ ಚುನಾವಣೆಯಲ್ಲಾಗಲೀ, ರಾಜಕೀಯದಲ್ಲಾಗಲಿ ಗೆಲ್ಲಲು ಆಗಲ್ಲ. ಅದರಿಂದ ಲಾಭ ಸಿಗುತ್ತೇ ಅಂದ್ರೆ ಎಷ್ಟು ಬೇಕಾದ್ರು ಮಾಡಿಕೊಳ್ಳಲಿ ಅದಕೆಕ ನನ್ನ ಅಭ್ಯಂತರವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್ ಒಬ್ಬ ಅವಿವೇಕಿ, ಮಾನಸಿಕ ಅಸ್ವಸ್ಥ: ದಿನೇಶ್ ಗುಂಡೂರಾವ್

    ಎರಡೂ ಪಕ್ಷಗಳಿಗೆ ಹಣಕಾಸಿನ ಶಕ್ತಿಯಿದೆ, ಈ ರೀತಿ ವೈಯಕ್ತಿಕ ಟೀಕೆಗಳ ಮಾಡಿದ್ರೆ ಲಾಭ ಅಂತ ಅವರು ತಿಳಿದಿದ್ದಾರೆ. ಅವರಿಗೆ ಬುದ್ಧಿ ಹೇಳೋ ಶಕ್ತಿ ನನಗಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಇದನ್ನೂ ಓದಿ: ಧರ್ಮದ ಅಫೀಮು ತಿಂದು ಅಮಲಿನಲ್ಲಿ ತೇಲಾಡುತ್ತಿರೋ ಬಿಜೆಪಿಗರು ನಿಜವಾದ ಡ್ರಗ್ಗಿಸ್ಟ್‌ಗಳು: ಶ್ರೀನಿವಾಸ್ ಬಿ.ವಿ

  • ಸಿದ್ದರಾಮಯ್ಯ, ಡಿಕೆಶಿ ಕಾಂಗ್ರೆಸ್ಸಿಗರನ್ನು ಕಾಯುವ ಕಾವಲುಗಾರರು: ನಳಿನ್ ಕುಮಾರ್ ಕಟೀಲ್

    ಸಿದ್ದರಾಮಯ್ಯ, ಡಿಕೆಶಿ ಕಾಂಗ್ರೆಸ್ಸಿಗರನ್ನು ಕಾಯುವ ಕಾವಲುಗಾರರು: ನಳಿನ್ ಕುಮಾರ್ ಕಟೀಲ್

    ಧಾರವಾಡ: ಕಾಂಗ್ರೆಸ್ಸಿನಲ್ಲಿರುವವರನ್ನು ಕಾಯಲು ಇಬ್ಬರು ಕಾವಲುಗಾರರಿದ್ದಾರೆ. ಅದು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

    ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿರುವ ಎಲ್ಲರೂ ಪಂಜರದ ಗಿಣಿಗಳು. ಕಾಂಗ್ರೆಸ್‍ನಲ್ಲಿರುವ ನಾಯಕರನ್ನು ಕಾಯಲು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕಾವಲುಗಾರರಾಗಿದ್ದಾರೆ. ಕೆಲವು ಗಿಣಿಗಳು ಡಿಕೆಶಿ ಬಳಿ ಇದ್ದರೆ, ಇನ್ನೂ ಕೆಲವು ಸಿದ್ದರಾಮಯ್ಯನವರ ಬಳಿ ಇವೆ. ಮೊದಲು ಅವರೆಲ್ಲರೂ ಅದರಿಂದ ಹೊರ ಬರಲಿ ಎಂದು ವ್ಯಂಗ್ಯವಾಡಿದ್ದಾರೆ.

    ಬಸವರಾಜ್ ಬೊಮ್ಮಾಯಿಯವರು ಸಿಎಂ ಆದ ಬಳಿಕ ಸ್ವತಂತ್ರವಾಗಿ ಎಲ್ಲ ನಿರ್ಧಾರ ತೆಗೆದುಕೊಂಡು ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಸಿಎಂ ಬಿಎಸ್‍ವೈ ಸರ್ಕಾರದ ಎಲ್ಲ ಯೋಜನೆಗಳನ್ನು ಅನುಷ್ಟಾನ ಗೊಳಿಸುತ್ತಿದ್ದಾರೆ. ಸಿದ್ದರಾಮಣ್ಣ ಕಾಲದಲ್ಲಿ ಧರ್ಮ ವಿರೋಧಿ ನೀತಿಯಿಂದ ಬಿಜೆಪಿಗೆ ಅಧಿಕಾರ ಸಿಕ್ಕಿದೆ. ಮುಖ ಉಳಿಸಿಕೊಳ್ಳಲು ಸಿದ್ದರಾಮಯ್ಯ, ಡಿಕೆಶಿ ಹಾಗೂ ರಾಯರೆಡ್ಡಿ ಮಾತನಾಡುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ:ದೇಶವನ್ನೇ ತೊರೆದ ತಾಲಿಬಾನ್ ನಾಯಕನನ್ನು ಸಂದರ್ಶಿಸಿದ ಪತ್ರಕರ್ತೆ 

    ಇದೇ ವೇಳೆ ಕಾಂಗ್ರೆಸ್‍ನಲ್ಲಿ ಒಳಜಗಳ ಜಾಸ್ತಿಯಾಗಿದೆ, ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಇಷ್ಟು ದಿನ ಆದರೂ ಪದಾಧಿಕಾರಿಗಳ ನೇಮಕ ಆಗಿಲ್ಲ. ಒಂದು ಪಕ್ಷದಲ್ಲಿ ಸಲೀಂ, ರಾಮಲಿಂಗಾರೆಡ್ಡಿ, ಧ್ರುವನಾರಾಯಣ, ಖಂಡ್ರೆ ಹೀಗೆ ಎಷ್ಟು ಜನ ಅಧ್ಯಕ್ಷರಿದ್ದಾರೆ ಎಂದು ವ್ಯಂಗ್ಯವಾಡಿದರು. ಅಲ್ಲದೇ ಯುವ ಕಾಂಗ್ರೆಸ್‍ಗೆ ನಲಪಾಡ್ ಹಾಗೂ ರಕ್ಷಾ ಎಂಬ ಇಬ್ಬರು ಅಧ್ಯಕ್ಷರಿದ್ದಾರೆ. ಈಗ ಒಬ್ಬರಿಗೆ ಅಧಿಕಾರ ಕೊಟ್ಟಿದ್ದಾರೆ. ಮೂರು ತಿಂಗಳ ನಂತರ ಮತ್ತೊಬ್ಬರಿಗೆ ಅಧಿಕಾರ ಅಂತೆ ಎಂದು ಅಣುಕಿಸಿದ್ದಾರೆ.

    ಡಿಕೆಶಿ ನಲಪಾಡ್ ಅಧ್ಯಕ್ಷ ಅಂತಾರೆ, ಸಿದ್ದರಾಮಯ್ಯ ರಕ್ಷಾ ಅಧ್ಯಕ್ಷ ಅಂತಾರೆ, ಕಾಂಗ್ರೆಸ್ ಪಕ್ಷವನ್ನು ನಡೆಸುವುದಕ್ಕೆ ಆಗದ ಇವರು ರಾಜ್ಯ ಏನು ನಡೆಸುತ್ತಾರೆ? ಕೇಂದ್ರದಲ್ಲಿ ಕಾಂಗ್ರೆಸ್‍ಗೆ ಅಧ್ಯಕ್ಷರೇ ಇಲ್ಲ. ಇವರು ಇನ್ನೊಂದು ಪಕ್ಷಕ್ಕೆ ಏನು ಪಾಠ ಮಾಡುತ್ತಾರೆ. ಕಾಂಗ್ರೆಸ್ ನಶಿಸಿ ಹೋಗುವ ಪಕ್ಷವಾಗಿದ್ದು, ಅದು ಇತಿಹಾಸ ಸೇರುವ ಪಕ್ಷವಾಗಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ:ಕಾರಿನ ಮುಂಭಾಗದ ಗ್ಲಾಸಿಗೆ ಬಡಿದು ಸಿಕ್ಕಿಕೊಂಡಿತ್ತು ಯುವತಿಯ ತಲೆ

  • ಪೊಲೀಸರ ಎಚ್ಚರಿಕೆಯನ್ನೇ ಧಿಕ್ಕರಿಸಿ ಬಿಜೆಪಿಯಿಂದ ಮಂಡ್ಯದಲ್ಲಿ ಬೃಹತ್ ರ‍್ಯಾಲಿ!

    ಪೊಲೀಸರ ಎಚ್ಚರಿಕೆಯನ್ನೇ ಧಿಕ್ಕರಿಸಿ ಬಿಜೆಪಿಯಿಂದ ಮಂಡ್ಯದಲ್ಲಿ ಬೃಹತ್ ರ‍್ಯಾಲಿ!

    – ಜಿಲ್ಲಾಧಯಕ್ಷನಿಗೆ ನೋಟಿಸ್ ಕೊಟ್ರೂ ಡೋಂಟ್ ಕೇರ್

    ಮಂಡ್ಯ: ಕೊರೊನಾ ನಿಯಮಗಳು ಜನಸಾಮಾನ್ಯರಿಗಷ್ಟೇ ಸೀಮಿತವಾ ಎಂಬ ಪ್ರಶ್ನೆ ಮತ್ತೊಮ್ಮೆ ಮೂಡಿದೆ. ಈ ಹಿಂದೆಯೂ ಹಲವಾರು ಬಾರಿ ಬಿಜೆಪಿಯವರು ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಇದೀಗ ಮತ್ತೆ ಪೊಲೀಸರ ಎಚ್ಚರಿಕೆಯನ್ನು ಧಿಕ್ಕರಿಸಿ ಮಂಡ್ಯದಲ್ಲಿ ಬೃಹತ್ ರ‍್ಯಾಲಿ ಮಾಡುವ ಮೂಲಕ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

    ಹೌದು. ಮಂಡ್ಯ ಜಿಲ್ಲೆಯಲ್ಲಿ ಪೊಲೀಸರ ಆದೇಶಕ್ಕೆ ಕಿಮ್ಮತ್ತೇ ಇಲ್ವಾ ಅನ್ನೋ ಪ್ರಶ್ನೆ ಮೂಡಿದೆ. ಕಾರ್ಯಕ್ರಮ ನಡೆಸಲು ಅನುಮತಿ ಇಲ್ಲ ಎಂದು ಮಂಡ್ಯ ಪೊಲೀಸರು ಬಿಜೆಪಿ ಜಿಲ್ಲಾಧ್ಯಕ್ಷನಿಗೆ ತಿಳಿಸಿದ್ದಾರೆ. ಆದರೆ ಇದೀಗ ಪೊಲೀಸರ ಎಚ್ಚರಿಕೆಗೆ ಕ್ಯಾರೇ ಎನ್ನದೇ ಬಿಜೆಪಿ ಮುಖಂಡರು ರಾಜ್ಯ ಮಟ್ಟದ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಸಿದ್ದಾರೆ. ಬಿಜೆಪಿಯವರ ಈ ನಡೆ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ತಾಲಿಬಾನಿಗಳು ಹುಡುಕುತ್ತಾ ನನ್ನ ಮನೆಗೆ ಬಂದ್ರು: ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್

    ಬೈಕ್ ರ‍್ಯಾಲಿ, ಸಾವಿರಾರು ಕಾರ್ಯಕರ್ತರನ್ನ ಸೇರಿಸಿ ಮಂಡ್ಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಭಾಗಿಯಾಗಿದ್ದಾರೆ. ಕಲ್ಯಾಣ ಮಂಟಪದಲ್ಲಿ ಮದುವೆಗೆ 100 ಜನಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ನಿಯಮವಿದ್ದು, ಆದರೆ ಅಧಿಕಾರದಲ್ಲಿರುವ ಬಿಜೆಪಿ ನಾಯಕರಿಗೆ ಈ ನಿಯಮ ಅನ್ವಯಿಸಲ್ವಾ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

    ಜಿಲ್ಲಾಧ್ಯನಿಗೆ ನೋಟಿಸ್:
    ಸಭೆ ನಡೆಸಿದ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ್‍ಕುಮಾರ್ ಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಕೊರೊನಾ ನಿಯಮಗಳನ್ನು ಪಾಲನೆ ಮಾಡದೇ ಸಭೆ ಮಾಡಲಾತ್ತಿದೆ. ನೂರಾರು ಜನರನ್ನು ಸೇರಿಸಿಕೊಂಡು ಬೈಕ್ ರ‍್ಯಾಲಿ ಮಾಡುತ್ತಿದ್ದೀರಿ. ಈ ರೀತಿಯ ಕಾರ್ಯಕ್ರಮ ಆಯೋಜನೆಗೆ ಅವಕಾಶವಿಲ್ಲ ಎಂದು ಪೊಲೀಸರು ನೋಟಿಸ್ ನಲ್ಲಿ ತಿಳಿಸಿದ್ದಾರೆ.

    ಜಿಲ್ಲಾಧ್ಯಕ್ಷನಿಗೆ ನೋಟಿಸ್ ನೀಡಿದರೂ ಬಿಜೆಪಿ ಮುಖಂಡರು ಬೈಕ್ ರ‍್ಯಾಲಿ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ನಾರಾಯಣಗೌಡ, ಮಾಜಿ ಸಚಿವ ಎ.ಮಂಜು ಇತರರು ಜೀಪ್ ನಲ್ಲಿ ಮೆರವಣಿಗೆ ಮಾಡಿದ್ದಾರೆ. ರ‍್ಯಾಲಿಯಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಮಾಯವಾಗಿದೆ. ಇನ್ನು ಸಭೆಯಲ್ಲಿ ಕೂಡ ನೂರಾರು ಮಂದಿ ಭಾಗಿಯಾಗಿದ್ದಾರೆ.

  • ಸಿಎಂ ಯಡಿಯೂರಪ್ಪ ಬದಲಾವಣೆಯಿಲ್ಲ: ನಿರಂಜನ್ ಕುಮಾರ್

    ಸಿಎಂ ಯಡಿಯೂರಪ್ಪ ಬದಲಾವಣೆಯಿಲ್ಲ: ನಿರಂಜನ್ ಕುಮಾರ್

    ಚಾಮರಾಜನಗರ: ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಮೂಹೂರ್ತ ನಿಗದಿಯಾಗಿದೆ ಎನ್ನುವ ರೀತಿಯ ಚರ್ಚೆ ಜೋರಾಗಿದೆ. ಈ ಕುರಿತು ಯಡಿಯೂರಪ್ಪ ಆಪ್ತ ಬಣದ ಗುಂಡ್ಲುಪೇಟೆ ಬಿಜೆಪಿ ಶಾಸಕ ನಿರಂಜನ್ ಕುಮಾರ್ ರಾಜ್ಯದಲ್ಲಿ ಸಿಎಂ ಬದಲಾವಣೆಯಿಲ್ಲ, ಈ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ.

    ಯಡಿಯೂರಪ್ಪ ಬದಲಾವಣೆ ವಿಚಾರ ಕೇವಲ ಊಹಾಪೋಹಾ. ರಾಜ್ಯದಲ್ಲಿ ಯಡಿಯೂರಪ್ಪ ಬದಲಾವಣೆಯಿಲ್ಲ. ಯಡಿಯೂರಪ್ಪ ಬದಲಾವಣೆ ಬಗ್ಗೆ ಹೈಕಮಾಂಡ್, ರಾಜ್ಯಾಧ್ಯಕ್ಷರಾಗಲಿ,ಶಾಸಕರಾಗಲಿ, ಸಚಿವರಾಗಲಿ ಯಾರೂ ಕೂಡ ಚಕಾರವೆತ್ತಿಲ್ಲ. ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ ಪ್ರಶ್ನಾತೀತ ನಾಯಕರಾಗಿದ್ದಾರೆ. ನಾನು ಕೂಡ ನಿನ್ನೆ ಸಿಎಂ ಭೇಟಿ ಮಾಡಿದ್ದೆ. ಅವರ ಮನೆಯಲ್ಲಿ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆ ನಡೆಯಿತು. ಕ್ಷೇತ್ರದ ಅಭಿವೃದ್ಧಿಗೆ ಈ ಬಾರಿ ಅನುದಾನ ಕೊಡುವ ಭರವಸೆ ಕೊಟ್ಟಿದ್ದಾರೆ.

    ನಮ್ಮ ಪಕ್ಷದ 120 ಮಂದಿ ಶಾಸಕರಲ್ಲಿ ಇಬ್ಬರು ಸಿಎಂ ಬದಲಾವಣೆ ಬಗ್ಗೆ ಮಾತನಾಡಿದರೆ ಯಾವುದೇ ಬೆಲೆ ಸಿಗಲ್ಲ. ಉಳಿದೆಲ್ಲ ಶಾಸಕರು ಕೂಡ ಯಡಿಯೂರಪ್ಪ ಪರ ಇದ್ದಾರೆ. ರಾಜ್ಯಾಧ್ಯಕ್ಷ ಕಟೀಲ್ ಆಡಿಯೋ ವೈರಲ್ ವಿಚಾರವಾಗಿ ಇದು ನಕಲಿ ಆಡಿಯೋ ಅಂತ ಕಟೀಲ್ ಕೂಡ ಹೇಳಿದ್ದಾರೆ. ಈ ಬಗ್ಗೆ ದೂರು ಸಹ ಕೊಟ್ಟಿದ್ದಾರೆ. ತನಿಖೆ ನಂತರ ಗೊತ್ತಾಗುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಯಡಿಯೂರಪ್ಪರನ್ನು ಗೌರವದಿಂದ ನಡೆಸಿಕೊಳ್ಳಿ, ಇಲ್ಲ ಬಿಜೆಪಿಗೆ ನಷ್ಟ: ಮುರುಘಾ ಶರಣರು

  • ಆಪರೇಷನ್ ಕಮಲವನ್ನ ನಿಲ್ಲಿಸಿದ್ದೇವೆ, ಆದ್ರೆ ಬಿಜೆಪಿ ಮನೆ ಬಾಗಿಲು ಓಪನ್ ಇದೆ: ಕಟೀಲ್

    ಆಪರೇಷನ್ ಕಮಲವನ್ನ ನಿಲ್ಲಿಸಿದ್ದೇವೆ, ಆದ್ರೆ ಬಿಜೆಪಿ ಮನೆ ಬಾಗಿಲು ಓಪನ್ ಇದೆ: ಕಟೀಲ್

    ಯಾದಗಿರಿ: ಆಪರೇಷನ್ ಕಮಲವನ್ನ ನಾವು ನಿಲ್ಲಿಸಿದ್ದೇವೆ. ಆದರೆ ಬಿಜೆಪಿ ಮನೆ ಬಾಗಿಲು ಓಪನ್ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

    ನಗರದ ಸರ್ಕಿಟ್ ಹೌಸ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಜಿಟಿ ದೇವೇಗೌಡ ಬಿಜೆಪಿ ಸೇರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತವಿದೆ. ಯಾರೇ ರಾಜೀನಾಮೆ ಕೊಟ್ಟು ಬಂದರು ಸ್ವಾಗತಿಸುತ್ತೇವೆ. ಆಪರೇಷನ್ ಕಮಲವನ್ನ ನಾವು ನಿಲ್ಲಿಸಿದ್ದೇವೆ. ಆದರೆ ಬಿಜೆಪಿ ಮನೆ ಬಾಗಿಲು ಓಪನ್ ಇದೆ ಎಂದರು.

    ರಾಜ್ಯ ಬಿಜೆಪಿ ಸರ್ಕಾರ ಜನಾದೇಶದ ಅಲ್ಲದ ಸರ್ಕಾರ ಎನ್ನುವ ಸಿದ್ದು ಹೇಳಿಕೆಗೆ ಟಾಂಗ್ ನೀಡಿದ ಕಟೀಲ್, ಕಾಂಗ್ರೆಸ್ ಹಾಗೂ ಜೆಡಿಎಸ್‍ಗಿಂತ ಹೆಚ್ಚು ಜನಾದೇಶ ಬಿಜೆಪಿಗಿದೆ ಎಂದು ಕುಟುಕಿದರು. ಇದೇ ವೇಳೆಯಲ್ಲಿ ಕುಮಾರಸ್ವಾಮಿ, ಉಮೇಶ್ ಕತ್ತಿ ಭೇಟಿ ವಿಚಾರ ಎಲ್ಲ ಉಹಾಪೋಹಗಳು, ಸರ್ಕಾರ ಮೂರು ವರ್ಷ ಸುಭದ್ರವಾಗಿದೆ ಎಂದರು.

    ದೇವೇಗೌಡ ಚಾಣಾಕ್ಷ ರಾಜಕಾರಣಿ, ಅವರು ದಿನಕ್ಕೊಂದು ಮಾತಾಡುತ್ತಾರೆ. ಅವರ ಶಾಸಕರು ಕಾಲು ಹೊರಗಿಟ್ಟರೆ, ಪಕ್ಷ ಒಡೆಯುತ್ತೆ ಎನ್ನುತ್ತಾರೆ. ಪಾರ್ಟಿಯಲ್ಲಿ ಶಾಸಕರನ್ನ ಹಿಡಿದುಕೊಂಡಿದ್ರೆ ಸರ್ಕಾರ ಉಳಿಯುತ್ತೆ ಎಂದು ನಳಿನ್ ಕುಮಾರ್ ವ್ಯಂಗ್ಯವಾಡಿದರು.

  • ಆಂತರಿಕ ಸಮನ್ವಯ ಸಮಿತಿ ರಚನೆಗೆ `ಐ ಡೋಂಟ್ ಕೇರ್’ ಎಂದ ಬಿಎಸ್‍ವೈ

    ಆಂತರಿಕ ಸಮನ್ವಯ ಸಮಿತಿ ರಚನೆಗೆ `ಐ ಡೋಂಟ್ ಕೇರ್’ ಎಂದ ಬಿಎಸ್‍ವೈ

    ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಸರ್ಕಾರದಲ್ಲಿ ಸಮನ್ವಯತೆ ಕಚ್ಚಾಟ ನೋಡಿದ್ವಿ. ಈಗ ಬಿಜೆಪಿಯಲ್ಲೂ ಶುರುವಾಗಿದೆಯಾ ಸಮನ್ವಯದ ಕಾದಾಟ ಅನ್ನೋ ಪ್ರಶ್ನೆ ಎದ್ದಿದೆ. ಕಟೀಲ್ ಟೀಂ ಪ್ರಸ್ತಾಪಕ್ಕೆ ಯಡಿಯೂರಪ್ಪ ಟೀಂ ಗರಂ ಆಗಿದೆ ಅನ್ನೋ ಸುದ್ದಿ ಹರಿದಾಡ್ತಿದೆ. `ಐ ಡೋಂಟ್ ಕೇರ್’ ಅಂತಾ ಯಡಿಯೂರಪ್ಪ ಸಿಟ್ಟಾಗಿದ್ದಾರಂತೆ.

    ಪೀಸ್ ಪ್ರೆಸಿಡೆಂಟ್ ಇದ್ದವರನ್ನ ವಾರ್ ಪ್ರೆಸಿಡೆಂಟ್ ಮಾಡಿದೆ ಬಿಜೆಪಿ ಹೈಕಮಾಂಡ್. ತಾತ್ಕಾಲಿಕ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ನಳೀನ್ ಕುಮಾರ್ ಕಟೀಲ್ ಈಗ ಫುಲ್‍ಟೈಮ್ ಅಧ್ಯಕ್ಷ. ಪೀಸ್ ಟೈಂ ಪ್ರೆಸಿಡೆಂಟ್ ಅಧ್ಯಕ್ಷ ಮಾತ್ರ ಎನ್ನುತ್ತಿದ್ದವರಿಗೆ ವಾರ್ ಟೈಂ ಪ್ರೆಸಿಡೆಂಟ್ ಶಾಕ್ ಕೊಟ್ಟಿದ್ದಾರೆ. ಮೂರು ವರ್ಷಗಳ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಸಂಘಟನೆ ನಡೆಯಲಿದೆ. ಈ ಬೆನ್ನಲ್ಲೇ ನಳೀನ್ ಕುಮಾರ್ ಟೀಂನಿಂದ ಆಂತರಿಕ ಸಮನ್ವಯ ಸಮಿತಿಯ ಪ್ರಸ್ತಾಪವಾಗಿದೆ ಎನ್ನಲಾಗಿದೆ. ಸರ್ಕಾರ ಮತ್ತು ಪಕ್ಷದ ನಡುವೆ ಆಂತರಿಕ ಸಮನ್ವಯ ಸಮಿತಿ ರಚನೆಗೆ ಪಟ್ಟು ಹಿಡಿಯಲಾಗಿದೆ ಅಂತೆ.

    ಆದರೆ ನಳಿನ್ ಕುಮಾರ್ ಟೀಂ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಫುಲ್ ಗರಂ ಆಗಿ ರಿಯಾಕ್ಟ್ ಮಾಡಿದ್ದಾರೆ ಅನ್ನೋದು ಬಿಜೆಪಿ ಪಡಸಾಲೆಯಲ್ಲಿ ಸದ್ದು ಮಾಡ್ತಿದೆ. ಪಕ್ಷ ಸಂಘಟನೆ ಕೆಲಸ ನೀವು ಮಾಡಿ, ಸರ್ಕಾರದ ಕೆಲಸ ನಾವು ಮಾಡ್ತೀವಿ ಯಾವುದೇ ಆಂತರಿಕ ಸಮನ್ವಯ ಸಮಿತಿ ರಚನೆ ಅಗತ್ಯತೆ ಇಲ್ಲ ಎಂಬ ಸಂದೇಶವನ್ನ ಯಡಿಯೂರಪ್ಪ ರವಾನಿಸಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಹೈಕಮಾಂಡ್ ಮಟ್ಟದಲ್ಲಿ ಯಡಿಯೂರಪ್ಪ ಸಂದೇಶಕ್ಕೆ ಒಪ್ಪಿಗೆ ಸಿಗುತ್ತಾ? ಯಡಿಯೂರಪ್ಪ ಜತೆ ಕಾದಾಟಕ್ಕೆ ಇಳಿಯದೇ ಸುಮ್ಮನಿರುತ್ತಾ ಕಟೀಲ್ ಟೀಂ ಎಂಬ ಕುತೂಹಲ ಮನೆ ಮಾಡಿದೆ.

  • ಜಾರ್ಖಂಡ್ ಪ್ರವಾಸ ಮೊಟಕುಗೊಳಿಸಿ ಬಪ್ಪನಾಡು ದೇವಾಲಯಕ್ಕೆ ಸಂಸದ ಕಟೀಲ್ ಭೇಟಿ

    ಜಾರ್ಖಂಡ್ ಪ್ರವಾಸ ಮೊಟಕುಗೊಳಿಸಿ ಬಪ್ಪನಾಡು ದೇವಾಲಯಕ್ಕೆ ಸಂಸದ ಕಟೀಲ್ ಭೇಟಿ

    ಮಂಗಳೂರು: ಭಾರೀ ಮಳೆಯಿಂದಾಗಿ ಮೂಲ್ಕಿ ಬಳಿ ಇರುವ ಪ್ರಸಿದ್ಧ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನದಿ ನೀರು ನುಗ್ಗಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಬೆಂಗಳೂರು ಮೂಲಕ ಜಾರ್ಖಂಡ್ ರಾಜ್ಯದ ರಾಂಚಿಗೆ ಅಧ್ಯಯನ ಪ್ರವಾಸಕ್ಕೆಂದು ತೆರಳುತ್ತಿದ್ದ ನಳಿನ್ ಕುಮಾರ್ ಶನಿವಾರ ರಾತ್ರಿಯೇ ಪ್ರವಾಸ ಮೊಟಕುಗೊಳಿಸಿ ಜಿಲ್ಲೆಗೆ ಆಗಮಿಸಿದ್ದರು. ಮಳೆಯ ಕಾರಣ ಪ್ರವಾಸ ರದ್ದುಗೊಳಿಸಿ ಇಂದು ಮಂಗಳೂರು ತಾಲೂಕಿನ ಮೂಲ್ಕಿ ಭಾಗದ ಮಳೆ ಪೀಡಿತ ಪ್ರದೇಶಕ್ಕೆ ತೆರಳಿದ್ದಾರೆ.

    ಶನಿವಾರ ಸುರಿದ ಭಾರೀ ಮಳೆಯಿಂದಾಗಿ ಶಾಂಭವಿ ನದಿ ಉಕ್ಕಿ ಹರಿದಿದ್ದು, ಹಲವೆಡೆ ತಗ್ಗುಪ್ರದೇಶಗಳಿಗೆ ನೆರೆ ನೀರು ನುಗ್ಗಿತ್ತು. ಬಪ್ಪನಾಡು ಕ್ಷೇತ್ರದ ಒಳಗೆ ನುಗ್ಗಿದ್ದ ನೀರು ಇಂದು ಬೆಳಗ್ಗೆಯೂ ಅಂಗಣದಲ್ಲಿ ಉಳಿದುಕೊಂಡಿತ್ತು. ಇದೇ ವೇಳೆ ಕಟೀಲು ದೇವಸ್ಥಾನ ಬಳಿ ಶಾಂಭವಿ ನದಿ ಧುಮ್ಮಿಕ್ಕಿ ಹರಿಯುತ್ತಿದೆ.

  • ಬಸವಣ್ಣನ ವಚನದ ಮೂಲಕ ಸಂಸದ ನಳಿನ್ ಕುಮಾರ್ ಹೇಳಿಕೆಗೆ ಸಿಎಂ ತಿರುಗೇಟು

    ಬಸವಣ್ಣನ ವಚನದ ಮೂಲಕ ಸಂಸದ ನಳಿನ್ ಕುಮಾರ್ ಹೇಳಿಕೆಗೆ ಸಿಎಂ ತಿರುಗೇಟು

    ಬೆಂಗಳೂರು: ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, ಸಂಸ್ಕøತಿ ಇಲ್ಲದ ಬಿಜೆಪಿ. ಬಿಜೆಪಿ ನಾಯಕರ ಭಾಷೆ ಅವರ ಸಂಸ್ಕøತಿಯನ್ನು ತೋರಿಸುತ್ತದೆ. ನಾನು ಅವರ ಲೆವೆಲ್‍ಗೆ ಇಳಿದು ಮಾತನಾಡುವುದಿಲ್ಲ. ಬಸವಣ್ಣ ಅವರ ವಚನವನ್ನು ಹೇಳಲಷ್ಟೆ ಸಾಧ್ಯ ಎಂದು ಬಸವಣ್ಣನ ವಚನದ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

    ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
    ಅನ್ಯರಿಗೆ ಅಸಹ್ಯ ಪಡಬೇಡ
    ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
    ಇದೇ ನಮ್ಮ ಕೂಡಲ ಸಂಗಮನೊಲಿಸುವ ಪರಿ


    ಇತ್ತೀಚೆಗೆ ಬಂಟ್ವಾಳದ ಬಿಸಿರೋಡ್‍ನಲ್ಲಿ ನಡೆದ ಜನಸುರಕ್ಷಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಂಸದ ನಳಿನ್ ಕುಮಾರ್ ಕಟೀಲ್, ಸಿಎಂ ಸಿದ್ದರಾಮಯ್ಯ ಓರ್ವ ಭಯೋತ್ಪಾದಕ ಅಂತಾ ಟೀಕಿಸಿದ್ದರು. ಅಲ್ಲದೇ ಭಯೋತ್ಪಾದಕ ಅನ್ನೋ ಶಬ್ದಕ್ಕೆ ವಿವರಣೆಯನ್ನೂ ನೀಡಿದ್ದರು.

    ಸಿಎಂ ಸಿದ್ದರಾಮಯ್ಯ ಜನತೆಯಲ್ಲಿ ಭಯ ಉತ್ಪಾದಿಸುವ ಕೆಲಸವನ್ನು ಮಾಡುತ್ತಿದ್ದಾರೆ ಹೀಗಾಗಿಯೇ ಸಿಎಂ ಸಿದ್ದರಾಮಯ್ಯನವರು ಭಯೋತ್ಪಾದಕ. ಮಾತ್ರವಲ್ಲ ತಲ್ವಾರ್ ಹಿಡಿದವರಿಗೆ ಸಿಎಂ ಬೆಂಬಲವನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿರುವ ಮೂರು ಮಾರಿಗಳನ್ನು ಓಡಿಸಲು ಜನಸುರಕ್ಷಾ ಯಾತ್ರೆ ಮಾಡುತ್ತಿದ್ದು, ಮುಂದಿನ ದಿನದಲ್ಲಿ ಕಾಂಗ್ರೆಸ್, ಸಿದ್ದರಾಮಯ್ಯ ಮತ್ತು ರಮಾನಾಥ್ ರೈ ಎಂಬ ಮಾರಿಗಳನ್ನು ಕೇರಳಕ್ಕೆ ಓಡಿಸಲಾಗುತ್ತದೆ. ಮೂರು ತಿಂಗಳಲ್ಲಿ ಕಾಂಗ್ರೆಸ್‍ನ ಅಂತ್ಯಸಂಸ್ಕಾರವೂ ನೇರವೇರುತ್ತೆ ಅಂತಾ ಕಟೀಲ್ ಹೇಳಿಕೆ ನೀಡಿದ್ದರು.

  • ಕಾಂಗ್ರೆಸ್ ನಾಯಕರ ಜೊತೆಗೆ ನಾನು ಕುಳಿತದ್ದು ಯಾಕೆ: ನಳಿನ್ ಕುಮಾರ್ ಹೇಳಿದ್ದು ಇಷ್ಟು

    ಕಾಂಗ್ರೆಸ್ ನಾಯಕರ ಜೊತೆಗೆ ನಾನು ಕುಳಿತದ್ದು ಯಾಕೆ: ನಳಿನ್ ಕುಮಾರ್ ಹೇಳಿದ್ದು ಇಷ್ಟು

    ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಜೆ.ಆರ್.ಲೋಬೋ, ಐವನ್ ಡಿಸೋಜಾ ಅವರು ಒಂದೇ ಕಾರಿನಲ್ಲಿ ಪ್ರಯಾಣಿಸಿದ ಫೋಟೋ ಮತ್ತು ಸಚಿವ ಬಿ.ರಮಾನಾಥ ರೈಯವರೊಂದಿಗೆ ಸರ್ಕೂಟ್ ಹೌಸಿನಲ್ಲಿ ಕುಳಿತು ಮಾತನಾಡುತ್ತಿರುವ ಫೋಟೋ ಹರಿದಾಡುತ್ತಿರುವ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲು ಸ್ಪಷ್ಟನೆ ನೀಡಿದ್ದಾರೆ.

    ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ ಅವರು, ಈ ಫೋಟೋಗಳು ಈಗ ತೆಗೆದಿರುವುದು ಅಲ್ಲ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರ ಜೊತೆ ಮಾತುಕತೆ ನಡೆಸಿದಾಗ ತೆಗೆದಿರುವ ಫೋಟೋಗಳು ಎಂದು ತಿಳಿಸಿದ್ದಾರೆ.

    ಫೇಸ್ ಬುಕ್ ನಲ್ಲಿ ನಳಿನ್ ಕುಮಾರ್ ಕಟೀಲು ಬರೆದಿದ್ದು ಹೀಗೆ:
    ಇತ್ತೀಚೆಗೆ ಸಾಮಾಜಿಕ ತಾಣಗಳಲ್ಲಿ ನಾನು, ಶಾಸಕರಾದ ಜೆ.ಆರ್.ಲೋಬೋ, ಐವನ್ ಡಿಸೋಜಾ ಅವರು ಒಂದೇ ಕಾರಿನಲ್ಲಿ ಪ್ರಯಾಣಿಸಿದ ಫೋಟೋ ಮತ್ತು ನಾನು ಸಚಿವ ಬಿ ರಮಾನಾಥ ರೈಯವರೊಂದಿಗೆ ಸರ್ಕೂಟ್ ಹೌಸಿನಲ್ಲಿ ಕುಳಿತು ಮಾತನಾಡುತ್ತಿರುವ ಫೋಟೋ ಹರಿದಾಡುತ್ತಿದೆ. ಅದಕ್ಕೆ ಕೆಲವರು ವಿವಿಧ ಅರ್ಥದ ಅಭಿಪ್ರಾಯವನ್ನು ಬರೆದು ಹಾಕುತ್ತಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ಒಂದಿಷ್ಟು ಬೇಸರವಾಗಿದೆ. ಆ ಫೋಟೋಗಳ ಬಗ್ಗೆ, ಅದು ತೆಗೆದ ಸಂದರ್ಭದ ಬಗ್ಗೆ ವಿಶ್ಲೇಷಣೆ ಮಾಡದೆ ಮನಸ್ಸಿಗೆ ತೋಚಿದಂತೆ ಗೀಚಿದರೆ ಅದರಿಂದ ವಸ್ತು ಸ್ಥಿತಿಯ ಬಗ್ಗೆ ಅಪಾರ್ಥ ಮೂಡುತ್ತದೆ ವಿನಾ: ಬೇರೆ ಏನೂ ಸಾಧಿಸದಂತೆ ಆಗುವುದಿಲ್ಲ.

    ನಾನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ. ನನ್ನ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ನಾನು ಅಷ್ಟೂ ಪ್ರದೇಶಗಳಿಗೆ ಭೇಟಿ ಕೊಟ್ಟು ವಿಭಿನ್ನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂದರ್ಭಗಳು ಇರುತ್ತವೆ. ನಿಮಗೆ ಗೊತ್ತಿರುವಂತೆ ಈ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಜಿಲ್ಲೆಯ ಅಭಿವೃದ್ಧಿಯ ವಿಷಯ ಬಂದಾಗ ನಾನು ಮತ್ತು ಅವರುಗಳು ಒಂದೇ ವೇದಿಕೆಯಲ್ಲಿ ಸೇರಬೇಕಾಗುತ್ತದೆ. ಏಕೆಂದರೆ ಒಂದು ಅಭಿವೃದ್ಧಿ ಯೋಜನೆ ಎಂದರೆ ಅದರಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಸಮಪ್ರಮಾಣದ ಪಾಲುಗಳು ಕೂಡ ಇದ್ದೇ ಇರುತ್ತದೆ. ಅನೇಕ ಬಾರಿ ಕೇವಲ ಕೇಂದ್ರದ ಯೋಜನೆಗಳಾಗಿದ್ದರೂ ಅದಕ್ಕೆ ಬೇಕಾಗುವ ಜಾಗ, ಇತರೆ ಸೌಲಭ್ಯಗಳನ್ನು ರಾಜ್ಯ ಪೂರೈಸಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಹಾಗಿರುವಾಗ ಪರಸ್ಪರ ಭೇಟಿ ಅಗತ್ಯ ಮತ್ತು ಅನಿವಾರ್ಯ.

    ಬೇಕಾದರೆ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ತೆಗೆದುಕೊಂಡು ಹೋಗುವ ಕಾರ್ಯ ಇರಬಹುದು. ಇದಕ್ಕೆ ಇಲ್ಲಿನ ಸ್ಥಳೀಯ ಶಾಸಕರ ಸಲಹೆ, ಅಭಿಪ್ರಾಯ ಕೂಡ ಬೇಕಾಗುತ್ತದೆ. ಅದೇ ರೀತಿಯಲ್ಲಿ ನೇತ್ರಾವತಿ ನದಿ ತಿರುವು ಯೋಜನೆ ಇರಬಹುದು, ಆಗ ಸಚಿವರೊಂದಿಗೆ ಮಾತನಾಡಿ ರಾಜ್ಯ ಸರಕಾರದ ಮೇಲೆ ಒತ್ತಡ ತರುವಂತಹ ಕೆಲಸ ಮಾಡುವುದು ಒಬ್ಬ ಜನಪ್ರತಿನಿಧಿಯಾಗಿ ನನ್ನ ಜವಾಬ್ದಾರಿ. ಅವರು ನಮ್ಮ ಯೋಜನೆಗಳಿಗೆ ಎಷ್ಟು ಸಹಕಾರ ಕೊಡುತ್ತಾರೆ ಎನ್ನುವುದು ಅವರವರ ಆತ್ಮಸಾಕ್ಷಿಗೆ ಬಿಟ್ಟಿದ್ದು. ಆದರೆ ಭೇಟಿಯೇ ಆಗದೇ ಹೋದರೆ ಕೆಲಸ ಮುಂದುವರಿಯುವುದೇ ಇಲ್ಲ.

    ಇನ್ನು ಸೈದ್ಧಾಂತಿಕವಾಗಿ ನಾನು ಅವರ ನಿಲುವಿಗೆ ಬದ್ಧ ವಿರೋಧಿ. ಕಾಂಗ್ರೆಸ್ ಸಚಿವ, ಶಾಸಕರು ಮಾಡುವ ಸ್ವಜಾತಿ ಪ್ರೇಮ, ಅಲ್ಪಸಂಖ್ಯಾತರ ವಿಪರೀತ ಒಲೈಕೆ, ಧರ್ಮ ಬಿಟ್ಟು ನಡೆಯುವ ನಡೆಗಳಿಗೆ ನಾನು ಯಾವತ್ತೂ ವಿರೋಧ ವ್ಯಕ್ತಪಡಿಸಿದ್ದೇನೆ. ಅದನ್ನು ನನ್ನ ರಾಜಕೀಯ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿದ್ದೇನೆ. ಅದನ್ನು ಮುಂದೆಯೂ ಪಾಲಿಸಿಕೊಂಡು ಬರುವುದಕ್ಕೆ ಯಾವತ್ತೂ ಬದ್ಧ. ಹಾಗೆಂದು ನಾನು ಅವರೊಂದಿಗೆ ಕುಳಿತ, ನಿಂತ ಫೋಟೋಗಳನ್ನು ಹಾಕಿ ನಾನು ಅವರೊಂದಿಗೆ ಶಾಮೀಲಾಗಿ ನಾನು ಕೂಡ ಕಾಂಗ್ರೆಸ್ಸಿನವರೊಂದಿಗೆ ಚೆನ್ನಾಗಿದ್ದೇನೆ ಎಂದು ಅಪಾರ್ಥ ಸುದ್ದಿ ಹರಡಿಸುವ ಕೆಲಸವನ್ನು ಯಾರೂ ಕೂಡ ಮಾಡುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ.

     

    ರಾಜಕೀಯ ಎಂದರೆ ಅಭಿವೃದ್ಧಿ ಕೆಲಸಗಳಿಗೆ ಸಿಕ್ಕ ಅವಕಾಶ ಎಂದು ಭಾವಿಸಿದವ ನಾನು. ಅಭಿವೃದ್ಧಿ ಯೋಜನೆಗಳಿಗೆ ಯಾವ ಪಕ್ಷದ ಮುಖಂಡರ ಸಲಹೆ, ಅಭಿಪ್ರಾಯಗಳಿಗೆ ನನ್ನ ಸ್ವಾಗತವಿದೆ. ಹಾಗಂತ ಅವರು ಮಾಡುವ ಸಮಾಜ ವಿರೋಧಿ ಚಟುವಟಿಕೆಗಳಿಗೆ ನನ್ನ ಉಸಿರು ಇರುವ ತನಕ ನಾನು ಬಾಗುವುದಿಲ್ಲ.