Tag: ನಳಿನಿ ಶ್ರೀಹರನ್‌

  • ಜೈಲಿನಲ್ಲಿದ್ದಾಗ ಪ್ರಿಯಾಂಕಾ ಗಾಂಧಿ ಭೇಟಿಯಾಗಿ ರಾಜೀವ್ ಗಾಂಧಿ ಹತ್ಯೆ ಬಗ್ಗೆ ಪ್ರಶ್ನಿಸಿದ್ದರು: ನಳಿನಿ ಶ್ರೀಹರನ್

    ಜೈಲಿನಲ್ಲಿದ್ದಾಗ ಪ್ರಿಯಾಂಕಾ ಗಾಂಧಿ ಭೇಟಿಯಾಗಿ ರಾಜೀವ್ ಗಾಂಧಿ ಹತ್ಯೆ ಬಗ್ಗೆ ಪ್ರಶ್ನಿಸಿದ್ದರು: ನಳಿನಿ ಶ್ರೀಹರನ್

    ಚೆನ್ನೈ: ಜೈಲಿನಲ್ಲಿದ್ದಾಗ (Jail)  ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ನನ್ನನ್ನು ಭೇಟಿ ಆಗಿ ತನ್ನ ತಂದೆಯ ಹತ್ಯೆಯ ಬಗ್ಗೆ ಪ್ರಶ್ನಿಸಿದ್ದರು ಎಂದು ರಾಜೀವ್ ಗಾಂಧಿ (Rajiv Gandhi) ಹತ್ಯೆ ಪ್ರಕರಣದ 6 ಅಪರಾಧಿಗಳಲ್ಲಿ ಒಬ್ಬರಾದ ನಳಿನಿ ಶ್ರೀಹರನ್ (Nalini Sriharan) ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿ ನನ್ನನ್ನು ಜೈಲಿನಲ್ಲಿ ಭೇಟಿಯಾಗಿದ್ದರು. ಆಗ ತಮ್ಮ ತಂದೆಯ ಹತ್ಯೆ ಬಗ್ಗೆ ಕೇಳಿದ್ದಾರೆ. ಆ ವೇಳೆ ಭಾವುಕರಾಗಿ ಅತ್ತಿದ್ದರು ಎಂದ ಅವರು, ನಾನು ಗಾಂಧಿ ಕುಟುಂಬಕ್ಕೆ ತುಂಬಾ ಕೃತಜ್ಞನಾಗಿದ್ದೇನೆ. ಅವರನ್ನು ಭೇಟಿ ಮಾಡಲು ಅವಕಾಶ ಸಿಕ್ಕರೆ ನಾನು ಅವರನ್ನು ಭೇಟಿ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು.

    ನಾನು ತಮಿಳುನಾಡಿನ ಕೆಲವು ಸ್ಥಳಗಳಿಗೆ ಹೋಗಿ ನೋಡಲು ಬಯಸುತ್ತೇನೆ. ಅದರಲ್ಲೂ ಮುಖ್ಯವಾಗಿ ದಿವಂಗತ ಕಮಲ ಸರ್ ಸ್ಮಾರಕವನ್ನು ನೋಡಲು ಬಯಸುತ್ತೇನೆ ಎಂದ ಅವರು, ನಾನು ಇನ್ನೂ ನನ್ನ ಪತಿಯನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸದ್ಯಕ್ಕೆ ನನಗೆ ಸಂತೋಷವಿಲ್ಲ. ತನ್ನ ಪತಿಯನ್ನು ತಿರುಚ್ಚಿ ವಿಶೇಷ ಶಿಬಿರದಿಂದ ಆದಷ್ಟು ಬೇಗ ಬಿಡುಗಡೆ ಮಾಡಲು ತಮಿಳುನಾಡು ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

    ಈ ಪ್ರಕರಣದಿಂದ ಹೊರಬರಲು ತನಗೆ ಸಹಾಯ ಮಾಡಿದ ಎಲ್ಲರನ್ನು ಭೇಟಿಯಾಗಲು ಬಯಸುತ್ತೇನೆ. ನಾನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ನೋಡಲು ಬಯಸುತ್ತೇನೆ. ನಾನು ಶೀಘ್ರದಲ್ಲೇ ಸಿಎಂ ಸ್ಟಾಲಿನ್ ಅವರನ್ನು ಭೇಟಿಯಾಗಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದರು.

    ಜೈಲಿನಲ್ಲಿದ್ದ ದಿನಗಳನ್ನು ಮೆಲುಕು ಹಾಕಿದ ಅವರು, ನಮ್ಮನ್ನು ಜೈಲಿನಲ್ಲಿ ಮರಣದಂಡನೆಗೆ ಒಳಗಾದ ಅಪರಾಧಿಗಳಂತೆ ನಡೆಸಿಕೊಳ್ಳಲಾಗುತ್ತಿತ್ತು. ತಾನು ಎರಡು ತಿಂಗಳ ಗರ್ಭಿಣಿಯಾಗಿದ್ದರೂ ಜೈಲಿನೊಳಗೆ ಬೀಗ ಹಾಕಲಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

    ಮುಂದಿನ ದಿನಗಳಲ್ಲಿ ಕುಟುಂಬವು ನನ್ನ ಆದ್ಯತೆಯಾಗಿದೆ ಮತ್ತು ನಾನು ವೃತ್ತಿಪರವಾಗಿ ಏನನ್ನೂ ಮಾಡಲು ಹೋಗುವುದಿಲ್ಲ. ನನ್ನ ಇಡೀ ಜೀವನವು ಈಗಾಗಲೇ ಸಂಪೂರ್ಣವಾಗಿ ನಾಶವಾಗಿದೆ. ಆದ್ದರಿಂದ ನಾನು ಕುಟುಂಬವನ್ನು ನೋಡಿಕೊಳ್ಳಲಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಗೆಲ್ಲುವ ವಿಶ್ವಾಸ ಇಲ್ಲದೆ ಸಿದ್ದರಾಮಯ್ಯ ಜಾಗ ಹುಡುಕಾಟ: ಯಡಿಯೂರಪ್ಪ ವ್ಯಂಗ್ಯ

    ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರ್.ಪಿ. ರವಿಚಂದ್ರನ್ ಸೇರಿದಂತೆ ಎಲ್ಲಾ 6 ಅಪರಾಧಿಗಳನ್ನು ಬಿಡುಗಡೆಗೊಳಿಸಿ ಶುಕ್ರವಾರ ಸುಪ್ರೀಂ ಕೋರ್ಟ್‍ನ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ನಳಿನಿ ಶ್ರೀಹರನ್ ಬಿಡುಗಡೆಗೊಂಡಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಕಾಲ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಹಿಳಾ ಕೈದಿ ನಳಿನಿ ಶ್ರೀಹರನ್ ಅವರನ್ನು ಶನಿವಾರ ವೆಲ್ಲೂರು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ನಾವು ಕೊಲೆಗಾರರಲ್ಲ, ನಮ್ಮನ್ನು ಸಂತ್ರಸ್ತರೆಂದು ನೋಡಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ

    Live Tv
    [brid partner=56869869 player=32851 video=960834 autoplay=true]

  • ನಾವು ಕೊಲೆಗಾರರಲ್ಲ, ನಮ್ಮನ್ನು ಸಂತ್ರಸ್ತರೆಂದು ನೋಡಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ

    ನಾವು ಕೊಲೆಗಾರರಲ್ಲ, ನಮ್ಮನ್ನು ಸಂತ್ರಸ್ತರೆಂದು ನೋಡಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ

    ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ  (Rajiv Gandhi) ಹತ್ಯೆ ಪ್ರಕರಣದಲ್ಲಿ ಶನಿವಾರ ಬಿಡುಗಡೆಯಾದ 6 ಅಪರಾಧಿಗಳ ಪೈಕಿ ಒಬ್ಬರಾದ ಆರ್.ಪಿ. ರವಿಚಂದ್ರನ್ (RP Ravichandran) ಮಾತನಾಡಿ, ಉತ್ತರ ಭಾರತದ ಜನರು ನಮ್ಮನ್ನು ಭಯೋತ್ಪಾದಕರು ಅಥವಾ ಕೊಲೆಗಾರರು ಎಂದು ನೋಡುವ ಬದಲಿಗೆ ನಮ್ಮನ್ನು ಸಂತ್ರಸ್ತರು ಎಂದು ನೋಡಬೇಕು ಎಂದು ಮನವಿ ಮಾಡಿದರು.

    ಮಧುರೈನ ಸೆಂಟ್ರಲ್ ಜೈಲ್‍ನಿಂದ ಬಿಡುಗಡೆಯಾದ ನಂತರ ಮಾತನಾಡಿ, ಯಾರು ಭಯೋತ್ಪಾದಕರು? ಯಾರು ಸ್ವಾತಂತ್ರ್ಯ ಹೋರಾಟಗಾರು ಎಂಬುದನ್ನು ಕಾಲವೇ ನಿರ್ಧರಿಸುತ್ತದೆ. ನಾವು ಭಯೋತ್ಪಾದಕರು ಎಂಬ ಆರೋಪವನ್ನು ಹೊತ್ತಿದ್ದರೂ ಈಗ ನಾವು ಮುಗ್ಧರಾಗಿ ಬಿಡುಗಡೆಯಾಗಿದ್ದೇವೆ. ನಾವು ಮುಗ್ಧರು ಎಂಬುದನ್ನು ಕಾಲವೇ ನಿರ್ಣಯಿಸಿದೆ ಎಂದರು.

    ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಅಪರಾಧಿಗಳಾದ ನಳಿನಿ (Nalini Sriharan) ಮತ್ತು ರವಿಚಂದ್ರನ್ ಅವರು ಅಗಸ್ಟ್‍ನಲ್ಲಿ ಬಿಡುಗಡೆಗೆ ಕೋರಿ ಸುಪ್ರೀಂ ಕೋರ್ಟ್‍ನ  (Supreme Court) ಮೊರೆ ಹೋಗಿದ್ದರು. ನಾವು ಈಗಾಗಲೇ 30 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದೇವೆ. ರಾಜೀವ್ ಗಾಂಧಿಯ ಕೊಲೆಯ 7 ಅಪರಾಧಿಗಳ ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಲು ತಮಿಳುನಾಡು ಸರ್ಕಾರ 4 ವರ್ಷಗಳ ಹಿಂದೆಯೇ ಒಪ್ಪಿಕೊಂಡಿತ್ತು ಎಂದು ಅಪರಾಧಿಗಳಾದ ಎಸ್ ನಳಿನಿ ಮತ್ತು ಆರ್.ಪಿ. ರವಿಚಂದ್ರನ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.

    ಅವಧಿಗೆ ಮೊದಲೇ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಕೋರಿ ರಾಜೀವ್ ಗಾಂಧಿ ಹಂತಕರು ಸುಪ್ರೀಂ ಕೋರ್ಟ್‍ನಲ್ಲಿ ಸಲ್ಲಿಸಿರುವ ಅರ್ಜಿಗೆ ತಮಿಳುನಾಡು ಸರ್ಕಾರ ಬೆಂಬಲ ನೀಡಿತ್ತು. ತಮ್ಮ ಸಹ ಅಪರಾಧಿ ಎಜಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಿದಂತೆ ತಮ್ಮನ್ನೂ ಬಿಡುಗಡೆ ಮಾಡುವಂತೆ ಕೋರಿ ನಳಿನಿ ಮತ್ತು ರವಿಚಂದ್ರನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ನೀಡಿ ಅವರನ್ನು ಬಿಡುಗಡೆ ಮಾಡಲು ಆದೇಶ ಹೊರಡಿಸಿತ್ತು. ಇದನ್ನೂ ಓದಿ: ಗಾಂಧಿ ಕುಟುಂಬಕ್ಕೆ ಕ್ಷಮೆ ಕೋರುವೆ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ

    ದೇಶದಲ್ಲೇ ಅತಿ ಹೆಚ್ಚು ಕಾಲ ಜೀವಾವಧಿ ಶಿಕ್ಷೆ ಅನುಭವಿಸಿದ್ದ ಮಹಿಳಾ ಕೈದಿ ನಳಿನಿ ಶ್ರೀಹರನ್ ಅವರನ್ನು ಶನಿವಾರ ವೆಲ್ಲೂರು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಜೈಲಿನಿಂದ ಹೊರನಡೆದ ನಂತರ ನಳಿನಿ ಮಾತನಾಡಿ, 32 ವರ್ಷಗಳ ಕಾಲ ತಮ್ಮನ್ನು ಬೆಂಬಲಿಸಿದ ತಮಿಳುನಾಡಿನ ಜನರಿಗೆ ಧನ್ಯವಾದ ಅರ್ಪಿಸಿದರು. ಇದನ್ನೂ ಓದಿ: ರಾಜೀವ್‌ ಗಾಂಧಿ ಹತ್ಯೆ ಕೇಸ್‌ – 30 ವರ್ಷಗಳ ನಂತರ ನಳಿನಿ ಶ್ರೀಹರನ್‌ ಸೇರಿ 3 ಅಪರಾಧಿಗಳು ರಿಲೀಸ್‌

    Live Tv
    [brid partner=56869869 player=32851 video=960834 autoplay=true]

  • ಗಾಂಧಿ ಕುಟುಂಬಕ್ಕೆ ಕ್ಷಮೆ ಕೋರುವೆ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ

    ಗಾಂಧಿ ಕುಟುಂಬಕ್ಕೆ ಕ್ಷಮೆ ಕೋರುವೆ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ

    ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ನಳಿನಿ ಶ್ರೀಹರನ್ (Nalini Sriharan), ಸ್ಫೋಟದಲ್ಲಿ ಸಾವನ್ನಪ್ಪಿದವರ ಹಾಗೂ ಗಾಂಧಿ ಕುಟುಂಬಕ್ಕೆ ಕ್ಷಮೆ ಕೇಳಿದ್ದಾರೆ.

    ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳನ್ನು 31 ವರ್ಷಗಳ ನಂತರ ಬಿಡುಗಡೆ ಮಡಲಾಗಿತ್ತು. ಈ ವೇಳೆ ಮಾತನಾಡಿದ ನಳಿನಿ ಶ್ರೀಹರನ್, ನಾನು ಸ್ಫೋಟದಲ್ಲಿ ಸಾವನ್ನಪ್ಪಿದವರ ಬಗ್ಗೆ ತುಂಬಾ ವಿಷಾದವಿದೆ. ನಾವು ಘಟನೆಯ ಬಗ್ಗೆ ಯೋಚಿಸುತ್ತಾ ಹಲವು ವರ್ಷಗಳನ್ನು ಕಳೆದಿದ್ದೇವೆ. ಆ ಕುಟುಂಬದವರ ಬಳಿ ಕ್ಷಮೆಯಾಚಿಸುತ್ತೇನೆ ಎಂದರು.

    ಸ್ಫೋಟದಲ್ಲಿ ಅನೇಕರು ತಮ್ಮ ಆತ್ಮೀಯರನ್ನು ಕಳೆದುಕೊಂಡಿದ್ದಾರೆ. ಅವರೆಲ್ಲರೂ ಒಮ್ಮೆಯಾದರೂ ಆ ದುರಂತದಿಂದ ಯಾವುದೇ ಸಮಯದಲ್ಲಾದರೂ ಹೊರಬರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.

    ರಾಜೀವ್ ಗಾಂಧಿಯವರ ಕುಟುಂಬವನ್ನು ಭೇಟಿಯಾಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ನನ್ನನ್ನು ಭೇಟಿ ಮಾಡುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅವರು ನನ್ನನ್ನು ನೋಡುವ ಸಮಯ ಕಳೆದಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

    1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆ ಪ್ರಕರಣದಲ್ಲಿ ನಳಿನಿ ಅವರಲ್ಲದೆ, ಶ್ರೀಹರನ್, ಸಂತನ್, ಮುರುಗನ್, ರಾಬರ್ಟ್ ಪಾಯಸ್ ಮತ್ತು ಆರ್ಪಿ ರವಿಚಂದ್ರನ್ ಅವರು ಜೈಲು ಪಾಲಾಗಿದ್ದರು. ಅಪರಾಧಿಗಳು ತೃಪ್ತಿದಾಯಕ ನಡವಳಿಕೆ ತೋರಿದ್ದಾರೆ. ಪದವಿಗಳನ್ನು ಪಡೆದಿದ್ದು, ಪುಸ್ತಕಗಳನ್ನು ಬರೆದಿದ್ದಾರೆ. ಸಮಾಜ ಸೇವೆಯಲ್ಲಿ ಭಾಗವಹಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಇದನ್ನೂ ಓದಿ: ರಾಜೀವ್‌ ಗಾಂಧಿ ಹತ್ಯೆ ಕೇಸ್‌ – 30 ವರ್ಷಗಳ ನಂತರ ನಳಿನಿ ಶ್ರೀಹರನ್‌ ಸೇರಿ 3 ಅಪರಾಧಿಗಳು ರಿಲೀಸ್‌

    ಮೇ ತಿಂಗಳಲ್ಲಿ, ಏಳನೇ ಅಪರಾಧಿ ಪೆರಾರಿವಾಲನ್‍ನನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ (Supreme Court)  ತನ್ನ ಅಸಾಮಾನ್ಯ ಅಧಿಕಾರವನ್ನು ಬಳಸಿತ್ತು. ಅದೇ ಆದೇಶವು ಉಳಿದ ಅಪರಾಧಿಗಳಿಗೂ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಕ್ಯಾಬಿನೆಟ್ 2018 ರಲ್ಲಿ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ರಾಜ್ಯಪಾಲರು ಬದ್ಧರಾಗಿದ್ದಾರೆ ಎಂದು ನ್ಯಾಯಾಲಯ ಗಮನಿಸಿತ್ತು. ಇದನ್ನೂ ಓದಿ: ದ್ರೌಪದಿ ಮುರ್ಮು ನೋಡಲು ಹೇಗಿದ್ದಾರೆ ಗೊತ್ತಲ್ಲ- ವಿವಾದವಾಗ್ತಿದ್ದಂತೆ ಟಿಎಂಸಿ ಸಚಿವ ಕ್ಷಮೆ

    Live Tv
    [brid partner=56869869 player=32851 video=960834 autoplay=true]

  • ರಾಜೀವ್‌ ಗಾಂಧಿ ಹತ್ಯೆ ಕೇಸ್‌ – 30 ವರ್ಷಗಳ ನಂತರ ನಳಿನಿ ಶ್ರೀಹರನ್‌ ಸೇರಿ 3 ಅಪರಾಧಿಗಳು ರಿಲೀಸ್‌

    ರಾಜೀವ್‌ ಗಾಂಧಿ ಹತ್ಯೆ ಕೇಸ್‌ – 30 ವರ್ಷಗಳ ನಂತರ ನಳಿನಿ ಶ್ರೀಹರನ್‌ ಸೇರಿ 3 ಅಪರಾಧಿಗಳು ರಿಲೀಸ್‌

    ಚೆನ್ನೈ: ರಾಜೀವ್ ಗಾಂಧಿ (Rajiv Gandhi) ಹತ್ಯೆ ಪ್ರಕರಣದ ಅಪರಾಧಿಗಳನ್ನು 31 ವರ್ಷಗಳ ಜೈಲುವಾಸದ ನಂತರ ಬಿಡುಗಡೆ ಮಾಡಲಾಯಿತು. ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ (Supreme Court) ಆದೇಶ ಹೊರಡಿಸಿದ ಒಂದು ದಿನದ ನಂತರ ಅವರನ್ನು ಇಂದು ರಿಲೀಸ್‌ ಮಾಡಲಾಗಿದೆ.

    ಅಪರಾಧಿಗಳಾಗಿದ್ದ ನಳಿನಿ ಶ್ರೀಹರನ್ (Nalini Sriharan), ಅವರ ಪತಿ ಮುರುಗನ್ ಮತ್ತು ಸಂತನ್ ಅವರನ್ನು ಶನಿವಾರ ಸಂಜೆ ಬಿಡುಗಡೆ ಮಾಡಲಾಯಿತು. ಪೆರೋಲ್ ಷರತ್ತುಗಳ ಭಾಗವಾಗಿ ನಳಿನಿ ಇಂದು ಬೆಳಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಕೇಸ್ – ಸುಪ್ರೀಂ ತೀರ್ಪು ಸ್ವಾಗತಿಸಿದ ಸ್ಟಾಲಿನ್

    ಮೇ ತಿಂಗಳಲ್ಲಿ, ಏಳನೇ ಅಪರಾಧಿ ಪೆರಾರಿವಾಲನ್‌ನನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ತನ್ನ ಅಸಾಮಾನ್ಯ ಅಧಿಕಾರವನ್ನು ಬಳಸಿತ್ತು. ಅದೇ ಆದೇಶವು ಉಳಿದ ಅಪರಾಧಿಗಳಿಗೂ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಕ್ಯಾಬಿನೆಟ್ 2018 ರಲ್ಲಿ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ರಾಜ್ಯಪಾಲರು ಬದ್ಧರಾಗಿದ್ದಾರೆ ಎಂದು ನ್ಯಾಯಾಲಯ ಗಮನಿಸಿತ್ತು.

    1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆ ಪ್ರಕರಣದಲ್ಲಿ ನಳಿನಿ ಅವರಲ್ಲದೆ, ಶ್ರೀಹರನ್, ಸಂತನ್, ಮುರುಗನ್, ರಾಬರ್ಟ್ ಪಾಯಸ್ ಮತ್ತು ಆರ್ಪಿ ರವಿಚಂದ್ರನ್ ಅವರು ಜೈಲು ಪಾಲಾಗಿದ್ದರು. “ಅಪರಾಧಿಗಳು ತೃಪ್ತಿದಾಯಕ ನಡವಳಿಕೆ ತೋರಿದ್ದಾರೆ. ಪದವಿಗಳನ್ನು ಪಡೆದಿದ್ದು, ಪುಸ್ತಕಗಳನ್ನು ಬರೆದಿದ್ದಾರೆ. ಸಮಾಜ ಸೇವೆಯಲ್ಲಿ ಭಾಗವಹಿಸಿದ್ದಾರೆ” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಇದನ್ನೂ ಓದಿ: ರಾಜೀವ್‌ಗಾಂಧಿ ಹತ್ಯೆ – ಜೀವಾವಧಿ ಶಿಕ್ಷೆಗೊಳಗಾದ 6 ಮಂದಿಯ ಬಿಡುಗಡೆಗೆ ಸುಪ್ರೀಂ ಆದೇಶ

    ನಳಿನಿ ಶ್ರೀಹರನ್ ಅವರ ಸಹೋದರ ಬಾಕಿನಾಥನ್ ಮಾತನಾಡಿ, ಅಪರಾಧಿಗಳು ಈಗಾಗಲೇ ಮೂರು ದಶಕಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ. ಜೈಲಿನಲ್ಲಿ ಸಾಕಷ್ಟು ನೋವು ಅನುಭವಿಸಿದ್ದಾರೆ. ಮಾನವೀಯತೆ ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ. ಅವರ ಬಿಡುಗಡೆಯನ್ನು ವಿರೋಧಿಸುವವರು ಭಾರತದ ಕಾನೂನನ್ನು ಗೌರವಿಸಬೇಕು ಎಂದು ತಿಳಿಸಿದ್ದಾರೆ. ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆಗೊಳಿಸಿದ ಸುಪ್ರೀಂ ಕೋರ್ಟ್ ಆದೇಶಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜೀವ್‌ ಗಾಂಧಿ ಹತ್ಯೆ ಪ್ರಕರಣ – ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ನಳಿನಿ

    ರಾಜೀವ್‌ ಗಾಂಧಿ ಹತ್ಯೆ ಪ್ರಕರಣ – ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ನಳಿನಿ

    ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳಲ್ಲಿ ಒಬ್ಬರಾದ ನಳಿನಿ ಶ್ರೀಹರನ್ ಅವರು ಗುರುವಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾರೆ. ಎ.ಜಿ.ಪೆರಾರಿವಾಲನ್ ಅವರಂತೆ ತನ್ನನ್ನೂ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

    ಸಹ ಅಪರಾಧಿಯಾಗಿದ್ದ ಎ.ಜಿ.ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ನಳಿನಿ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೂ ಮೊದಲು ನಳಿನಿ ಅವರು ಬಿಡುಗಡೆ ಮಾಡುವಂತೆ ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತ್ತು. ಇದನ್ನೂ ಓದಿ: ಎಲ್ಲರೂ ಮನುಷ್ಯರೇ: ರಾಜೀವ್ ಗಾಂಧಿ ಹಂತಕನ ಪ್ರತಿಕ್ರಿಯೆ

    ಅರ್ಜಿಯನ್ನು ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್, ಸಂವಿಧಾನದ 142ನೇ ಪರಿಚ್ಛೇದದ ಅಡಿಯಲ್ಲಿ ಸುಪ್ರೀಂ ಕೋರ್ಟ್ ಹೊಂದಿರುವ ವಿಶೇಷ ಅಧಿಕಾರಗಳನ್ನು ತಾನು ಹೊಂದಿಲ್ಲ. ಆದ್ದರಿಂದ 2022ರ ಮೇ ತಿಂಗಳಲ್ಲಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್‌ನಂತೆ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

    ಈ ಹಿಂದೆ, ಮತ್ತೊಬ್ಬ ಸಹ ಅಪರಾಧಿ ಪಿ.ರವಿಚಂದ್ರನ್ ಕೂಡ ಬಿಡುಗಡೆ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಇದೀಗ 30 ವರ್ಷಗಳಿಂದ ಜೈಲಿನಲ್ಲಿರುವ ರವಿಚಂದ್ರನ್ ಅವರು ಔಪಚಾರಿಕ ಬಿಡುಗಡೆಗಾಗಿ ತಮ್ಮ ಪ್ರಕರಣವು ಮುಕ್ತಾಯಗೊಳ್ಳುವವರೆಗೆ ಮಧ್ಯಂತರ ಜಾಮೀನು ಕೋರಿದ್ದಾರೆ. ಇದನ್ನೂ ಓದಿ: ರಾಜೀವ್‌ಗಾಂಧಿ ಹತ್ಯೆಪ್ರಕರಣ: ನನ್ನ ಮಗಳೂ ಬಿಡುಗಡೆ ಆಗ್ತಾಳೆಂಬ ನಂಬಿಕೆಯಿದೆ ಎಂದ ನಳಿನಿ ತಾಯಿ

    ಪೆರಾರಿವಾಲನ್ ಬಿಡುಗಡೆಯನ್ನು ಉಲ್ಲೇಖಿಸಿ ತಮ್ಮ ಮನವಿ ಸಲ್ಲಿಸುವುದಾದರೆ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಬಹುದು ಎಂದು ಹೈಕೋರ್ಟ್ ಹೇಳಿತ್ತು. ಮೇ 18 ರಂದು, ಹತ್ಯೆ ಪ್ರಕರಣದ ಏಳು ಅಪರಾಧಿಗಳಲ್ಲಿ ಒಬ್ಬರಾದ ಎ.ಜಿ.ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಲು ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್ ತನಗೆ ನೀಡಿರುವ ಪರಮಾಧಿಕಾರವನ್ನು ಚಲಾಯಿಸಿ ಆದೇಶ ಹೊರಡಿಸಿತ್ತು.

    ಪೆರಾರಿವಾಲನ್ ಬಿಡುಗಡೆಯ ನಂತರ, ರವಿಚಂದ್ರನ್ ಅವರು ತನ್ನನ್ನೂ ಸೇರಿದಂತೆ ಉಳಿದ ಆರು ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಪತ್ರ ಕಳುಹಿಸಿದ್ದರು. ರಾಜ್ಯಪಾಲರು ಮೂರು ವರ್ಷಗಳಿಂದ ಬಿಡುಗಡೆಯ ಕಡತಗಳನ್ನು ಪರಿಗಣಿಸದೆ ಇರಿಸಿದ್ದಾರೆ. ಇದು ಸಂವಿಧಾನ ವಿರೋಧಿ ನಡೆ ಎಂದು ಖಂಡಿಸಿದ್ದರು. ಇದನ್ನೂ ಓದಿ: ವಿಮಾನದೊಳಗೆ ಸಿಗರೇಟ್ ಸೇದುತ್ತಾ ಪೋಸ್ ಕೊಟ್ಟ ವ್ಯಕ್ತಿ – ಸಿಂಧಿಯಾಗೆ ಬೆಂಡೆತ್ತಿದ ನೆಟ್ಟಿಗರು!

    ಸೆಪ್ಟೆಂಬರ್ 2018ರಲ್ಲಿ ತಮಿಳುನಾಡು ಸರ್ಕಾರ ಮಾಡಿದ ಶಿಫಾರಸಿನ ಆಧಾರದ ಮೇಲೆ ಜೈಲಿನಿಂದ ಅವಧಿಪೂರ್ವ ಬಿಡುಗಡೆಗಾಗಿ ಪೆರಾರಿವಾಲನ್ ಅವರ ಮನವಿಯನ್ನು ಪುರಸ್ಕರಿಸಿ, ಸುಪ್ರೀಂ ಕೋರ್ಟ್ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತು. ಆದರೆ ಇತರ ಆರು ಅಪರಾಧಿಗಳು ಜೈಲಿನಲ್ಲಿದ್ದಾರೆ.

    ರವಿಚಂದ್ರನ್ ಅವರು ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಿದ ಮೇಲ್ಮನವಿಯಲ್ಲಿ ಪೆರಾರಿವಾಲನ್ ಅವರ ಬಿಡುಗಡೆ ಸಂಬಂಧ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿದ್ದಾರೆ. ಮೇ 21, 1991ರ ರಾತ್ರಿ ತಮಿಳುನಾಡಿನ ಪೆರಂಬದೂರಿನಲ್ಲಿ ಚುನಾವಣಾ ರ‍್ಯಾಲಿ ವೇಳೆ ಧನು ಎಂದು ಗುರುತಿಸಲ್ಪಟ್ಟ ಮಹಿಳಾ ಆತ್ಮಾಹುತಿ ಬಾಂಬರ್‌ನಿಂದ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಲಾಗಿತ್ತು.

    Live Tv
    [brid partner=56869869 player=32851 video=960834 autoplay=true]