Tag: ನಳಪಾಡ್

  • ರಾಹುಲ್ ಗಾಂಧಿ ಮೇಲೆ ಅತ್ಯಾಚಾರ ಆಗ್ತಿದೆ: ನಲಪಾಡ್

    ರಾಹುಲ್ ಗಾಂಧಿ ಮೇಲೆ ಅತ್ಯಾಚಾರ ಆಗ್ತಿದೆ: ನಲಪಾಡ್

    ಬೆಂಗಳೂರು: ರಾಹುಲ್ ಗಾಂಧಿ ಮೇಲೆ ಅತ್ಯಾಚಾರ ಆಗುತ್ತಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ನೀಡಿರುವ ಹೇಳಿಕೆಯೊಂದು ವೈರಲ್ ಆಗುತ್ತಿದೆ.

    rahul gandi

    ರಾಹುಲ್ ಗಾಂಧಿ ಈಡಿ ವಿಚಾರಣೆ ಮಾಡುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಭವನದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಆ ಸಂದರ್ಭದಲ್ಲಿ ಪೊಲೀಸರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಬಸ್‍ನಲ್ಲಿ ಹೋಗುವಾಗ ಮಾತನಾಡಿರುವ ನಲಪಾಡ್, ಇವತ್ತು ರಾಹುಲ್ ಗಾಂಧಿ ಅವರ ಮೇಲೆ ಅತ್ಯಾಚಾರ ಆಗ್ತಿದೆ. ಪ್ರತಿಯೊಬ್ಬ ಭಾರತೀಯನ ಮೇಲೆ ಆಗ್ತಿದೆ ಎಂದಿರುವ ವೀಡಿಯೋ ಹರಿದಾಡುತ್ತಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಶರದ್ ಪವಾರ್

    ಅತ್ತ ದೆಹಲಿ ಪೊಲೀಸ್ ಯೂಥ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಘರ್ಷವೇ ಏರ್ಪಟ್ಟಿತ್ತು. ಕಾಂಗ್ರೆಸ್ ನಾಯಕರು ಎಐಸಿಸಿ ಕಚೇರಿಯಿಂದ ಇಡಿ ಕಚೇರಿವರೆಗೂ ಪ್ರತಿಭಟನೆ ನಡೆಸಲು ಪ್ರಯತ್ನಿಸಿರು. 144 ಸೆಕ್ಷನ್ ಜಾರಿ ಹಿನ್ನಲೆ ಪ್ರತಿಭಟನೆ ಆರಂಭವಾಗುತ್ತಿದ್ದಂತೆ ತಡೆಯಲು ದೆಹಲಿ ಪೊಲೀಸರು ಪ್ರಯತ್ನಿಸಿದರು. ಈ ವೇಳೆ ದೆಹಲಿ ಪೊಲೀಸ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ದೊಡ್ಡ ಸಂಘರ್ಷವೇ ನಡೆದು ಹೊಯ್ತು. ಇದನ್ನೂ ಓದಿ: ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ತೀವ್ರ – ರಸ್ತೆಗಳಲ್ಲಿ ಟೈಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ

    ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಂಸದ ಡಿ.ಕೆ ಸುರೇಶ್, ಯೂಥ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಅವರನ್ನು ಪೊಲೀಸರು ಕೈ ಕಾಲು ಹಿಡಿದು ಹೊತ್ತಿಕೊಂಡು ಹೋಗಿ ಪೊಲೀಸ್ ವಾಹನದಲ್ಲಿ ತುಂಬಿಸಿದ್ದಾರೆ. ಪ್ರತಿಭಟನೆ ವೇಳೆ ಡಿ.ಕೆ ಸುರೇಶ್ ದೆಹಲಿ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದರು. ಪ್ರತಿಭಟನೆ ನಡೆಸಲು ಅವಕಾಶ ಕೇಳಿದರು. ಇದಕ್ಕೆ ದೆಹಲಿ ಪೊಲೀಸರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಏರ್ಪಟ್ಟ ಸಂಘರ್ಷದಲ್ಲಿ ಪೊಲೀಸರು ಡಿ.ಕೆ ಸುರೇಶ್ ಅವರನ್ನು ವಶಕ್ಕೆ ಪಡೆದುಕೊಂಡರು.

    Live Tv

  • ಕೊನೆಗೂ ಡಿಕೆಶಿ ಹಠಕ್ಕೆ ಮಣೆ ಹಾಕಿದ ಹೈಕಮಾಂಡ್

    ಕೊನೆಗೂ ಡಿಕೆಶಿ ಹಠಕ್ಕೆ ಮಣೆ ಹಾಕಿದ ಹೈಕಮಾಂಡ್

    – ಒಂದು ವರ್ಷ ರಕ್ಷಾ ರಾಮಯ್ಯ
    – 2 ವರ್ಷ ನಲಪಾಡ್‍ಗೆ ಪಟ್ಟ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಠಕ್ಕೆ ಹೈಕಮಾಂಡ್ ಕೊನೆಗೂ ಮಣೆ ಹಾಕಿದೆ. 2022ರ ಜನವರಿ 31 ರವರೆಗೆ ಮಾತ್ರ ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. 2022 ರ ಜನವರಿ 31ರಿಂದ ಮೊಹಮ್ಮದ್ ನಲಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾಗಲಿದ್ದಾರೆ. ರಕ್ಷಾ ರಾಮಯ್ಯಗೆ ಒಟ್ಟು 1 ವರ್ಷ ಅಧಿಕಾರ, ನಲಪಾಡ್ ಅವರಿಗೆ 2 ವರ್ಷ ಅಧ್ಯಕ್ಷ ಸ್ಥಾನ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ರಿಂದ ಅಧಿಕೃತವಾಗಿ ಪ್ರಕಟಣೆ ಹೊರಡಿಸಲಾಗಿದೆ.

    ಈ ಹಿಂದೆ ಸಿದ್ದರಾಮಯ್ಯ ಡಿಕೆಶಿ ಬಣದ ಪ್ರತಿಷ್ಠೆಯ ಕದನದಲ್ಲಿ ಗಲಾಟೆಗೆ ಹೈ ಕಮಾಂಡ್ ಬ್ರೇಕ್ ಹಾಕಿತ್ತು. ನಲಪಾಡ್‍ರನ್ನು ಯುವ ಕಾಂಗ್ರೆಸ್ ಅಧ್ಯಕ್ಷನನ್ನಾಗಿ ಮಾಡಲು ಮುಂದಾಗಿದ್ದ ಡಿಕೆಶಿಗೆ ಹೈಕಮಾಂಡ್ ಸೂಚನೆಯಿಂದ ಹಿನ್ನಡೆಯಾಗಿತ್ತು. ಎಲ್ಲ ತಣ್ಣಗಾಯ್ತು ಎನ್ನುವಷ್ಟರಲ್ಲಿ ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡಿ ತಮ್ಮ ಶಿಷ್ಯ ನಲಪಾಡ್‍ಗೆ ಮುಂದಿನ 2 ವರ್ಷದ ಅಧ್ಯಕ್ಷ ಗಾದಿ ಕೊಡಿಸುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದಾರೆ.

    ಹಾಲಿ ಅಧ್ಯಕ್ಷ ರಕ್ಷಾ ರಾಮಯ್ಯಗೆ ಇನ್ನು 7 ತಿಂಗಳುಗಳ ಕಾಲವಷ್ಟೇ ಅಧ್ಯಕ್ಷರಾಗಿ ಅಧಿಕಾರ ಮುಂದುವರಿಯಲಿದ್ದಾರೆ. ಈ ಬೆಳವಣಿಗೆ ನಂತರ ಅಧ್ಯಕ್ಷನಾಗಿ ಮುಂದಿನ 2 ವರ್ಷದ ಅಧಿಕಾರ ಸಿಗುವುದು ಖಚಿತವಾಗಿತ್ತಿದ್ದಂತೆ ಸಿದ್ದರಾಮಯ್ಯ ನಿವಾಸದಲ್ಲಿ ಸಿದ್ದರಾಮಯ್ಯರನ್ನು ಭೇಟಿ ಮಾಡಲು ನಲಪಾಡ್ ತೆರಳಿದರು. ಈ ವೇಳೆ ಹಾರ ತುರಾಯಿ ತಂದ ನಲಪಾಡ್‍ಗೆ ಮುಜುಗರ ಆಗುವಂತ ಪ್ರಸಂಗ ನಡೆಯಿತು. ಹಾರ ಹಾಕಲು ಹೋದ ನಲಪಾಡ್‍ಗೆ ಸಿದ್ದರಾಮಯ್ಯ ಹಾರ ಬೇಡ ಎಂದರು. ಪೇಟ ಹಾಕಲು ಮುಂದಾಗಿತ್ತಿದ್ದಂತೆ ಪೇಟವು ಬೇಡ ಎಂದರು. ಅದೆಲ್ಲ ಬೇಡ ಎಂದು ಶಾಲು ಮಾತ್ರ ಸ್ವೀಕರಿಸಿದರು. ಇದಕ್ಕೂ ಮುನ್ನ ನಾನೇನು ಮಾಡಿದ್ದೆನಪ್ಪ ನಿನಗೆ ಎಂದು ಸಿದ್ದರಾಮಯ್ಯ ಅವರು ನಲಪಡ್‍ಗೆ ಪ್ರಶ್ನಿಸಿದರು. ಆ ಬಳಿಕ ಕ್ಯಾಮೆರಾ ನೋಡಿ ಹಾಗೆ ಸುಮ್ಮನಾದರು. ಇದನ್ನೂ ಓದಿ: ಹಗಲು ಹೊಡೆದು ರಾತ್ರಿ ರಾಜಿ ಮಾಡ್ಕೊಂಡ ನಲಪಾಡ್

    ಅಧಿಕಾರ ಸಿಗುವುದು ಖಚಿತವಾಗುತ್ತಿದ್ದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ನಲಪಾಡ್, ಪಕ್ಷ ಯಾವುದೇ ಅಧಿಕಾರ ಕರ್ತವ್ಯ ಕೊಟ್ಟರೂ ನಿರ್ವಹಿಸುತ್ತೇನೆ. ಐವೈಸಿ ನನಗೆ ಈಗ ಅಧಿಕಾರ ನೀಡಿದೆ. ಕಾಂಗ್ರೆಸ್ ನನ್ನ ತಾಯಿ ಇದ್ದಂತೆ. ಕಾಂಗ್ರೆಸ್ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ. ಯುವಕರನ್ನು ಕಾಂಗ್ರೆಸ್ ಬಳಿ ಸೇರಿಸಲು ಈ ಯುವ ಕಾಂಗ್ರಸ್ ಹುದ್ದೆ ಬೇಕಿದೆ. ಪಕ್ಷ ನನ್ನ ಕೆಲಸ ನೋಡಿ ಪಕ್ಷ ಕಟ್ಟುವ ಕೆಲಸ ನೀಡಿದೆ. ನಾನು ಇದನ್ನು ನಿಭಾಯಿಸಿಕೊಂಡು ಹೋಗುವೆ. ಈಗ ಅಧ್ಯಕ್ಷ ಸ್ಥಾನ ನೀಡಿರುವುದು ಖುಷಿ ತಂದಿದೆ. ತಂದೆ, ತಾಯಿ, ಡಿಕೆಶಿ, ಸಿದ್ದರಾಮಯ್ಯ ಒಂದು ಅವಕಾಶ ಮಾಡಿಕೊಟ್ಟಿದ್ದಾರೆ. ಅದನ್ನು ನಿಭಾಯಿಸಿಕೊಂಡು ಹೋಗುತ್ತೇನೆ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಎಲ್ಲರನ್ನೂ ಜೊತೆಗೂಡಿ ಒಟ್ಟಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.