Tag: ನಲಪಾಡ್‌ ಅಕಾಡೆಮಿ

  • ಆಪರೇಷನ್ ಬುಲ್ಡೋಜರ್‌ಗೆ 3ನೇ ದಿನ- ಇಂದೂ ನಡೆಯಲಿದೆ ನಲಪಾಡ್ ಅಕಾಡೆಮಿ ಒತ್ತುವರಿ ತೆರವು!

    ಆಪರೇಷನ್ ಬುಲ್ಡೋಜರ್‌ಗೆ 3ನೇ ದಿನ- ಇಂದೂ ನಡೆಯಲಿದೆ ನಲಪಾಡ್ ಅಕಾಡೆಮಿ ಒತ್ತುವರಿ ತೆರವು!

    ಬೆಂಗಳೂರು: ರಾಜಕಾಲುವೆ ಒತ್ತುವರಿದಾರರ ಹಿಟ್ ಲಿಸ್ಟ್ ನಲ್ಲಿ ಕಾಂಗ್ರೆಸ್ ಯುವನಾಯಕ ಮಾಲೀಕತ್ವದ ನಲಪಾಡ್ ಅಕಾಡೆಮಿ (Nalapad Academy) ಯಲ್ಲಿ ನಿನ್ನೆ (ಮಂಗಳವಾರ) ರಾಜಕಾಲುವೆ ತೆರವು ಕಾರ್ಯಾಚರಣೆ ವೇಳೆ ಹೈಡ್ರಾಮವೇ ನಡೆಯಿತು. ದೊಡ್ಡವರ ಮುಂದೆ ಜೆಸಿಬಿ (JCB) ಘರ್ಜನೆ ಸೈಲೆಂಟ್ ಆಗಿತ್ತು. ಇಂದೂ ಕೂಡ ನಲಪಾಡ್ ಅಕಾಡೆಮಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಪ್ರಹಸನ ಮುಂದುವರಿಯಲಿದೆ.

    ಜಸ್ಟ್ ಕಾಪೌಂಡ್ ಗೋಡೆ ಜೆಸಿಬಿಯಿಂದ ಟಚ್ ಮಾಡ್ತಿದ್ದಂತೆ ನಲಪಾಡ್ ಅಕಾಡೆಮಿಯ ಮ್ಯಾನೇಜರ್ ಕಿರುಚಾಟ, ಕಾರ್ಯಾಚರಣೆ ಸ್ಥಗಿತ. ಮತ್ತೆ ಮಾಧ್ಯಮ ಪ್ರಶ್ನೆ ಮಾಡ್ತಿದ್ದಂತೆ ಕಾರ್ಯಾಚರಣೆ ಆರಂಭ. ಹೀಗೆ ನಿನ್ನೆ ಚಲ್ಲಘಟ್ಟದ. ಶಾಸಕ ಹ್ಯಾರಿಸ್ (Harris) ಹಾಗೂ ನಲಪಾಡ್ ಮಾಲೀಕತ್ವದ ನಲಪಾಡ್ ಅಕಾಡೆಮಿಯ ತೆರವು ಕಾರ್ಯಾಚರಣೆ ವೇಳೆ ದೊಡ್ಡ ಹೈಡ್ರಾಮವೇ ನಡೆದುಹೋಯ್ತು. ಕೊನೆಗೂ ಜೆಸಿಬಿಯಿಂದ ರಾಜಕಾಲುವೆ ತೆರವು ಕಾರ್ಯಾಚರಣೆ ಮುಂದುವರಿದಿದ್ದು ಇಂದೂ ಕೂಡ ನಡೆಯಲಿದೆ. 150 ಮೀಟರ್ ಉದ್ದ 2.5 ಮೀಟರ್ ಅಗಲ ವಿರುವ ರಾಜಕಾಲುವೆ ಒತ್ತುವರಿ ಸಧ್ಯ 50 ಮೀಟರ್ ತೆರವು ಆಗಿದೆ. ಇಂದು ಉಳಿದ ಭಾಗದಲ್ಲಿಒತ್ತುವರಿ ತೆರವು ನಡೆಯಲಿದೆ. ಇದನ್ನೂ ಓದಿ: BBMP ಜೆಸಿಬಿ ಆಪರೇಷನ್ – ಒಂದೇ ವಾರದಲ್ಲಿ ನಲಪಾಡ್ ನಾಟಕ ಬಯಲು

    ನಿನ್ನೆ ಕ್ಷಣಕ್ಕೊಂದು ನಾಟಕವಾಡಿ ರಾಜಕಾಲುವೆ (Rajakaluve) ಒತ್ತುವರಿ ಮಾಡೇ ಇಲ್ಲ ಅಂತಾ ಶಾಸಕ ಹ್ಯಾರಿಸ್ ಸೇರಿದಂತೆ ಅಕಾಡೆಮಿಯ ಸಿಬ್ಬಂದಿಯೂ ವಾದ ಮಾಡ್ತಿದ್ರು. ಹೀಗಾಗಿ ಇಂದಿನ ಕಾರ್ಯಾಚರಣೆ ವೇಳೆಯೂ ಹೈಡ್ರಾಮ ನಡೆಯೋದು ಖಚಿತವಾಗಿದೆ. ಇನ್ನು ಒತ್ತುವರಿ ಭಾಗದಲ್ಲಿ ಕಾಪೌಂಡ್ ಕಟ್ಟಿ ಫೆನ್ಸಿಂಗ್ ಕೂಡ ಮಾಡಲಾಗಿದೆ. ಇದನ್ನೂ ಓದಿ: ಅಲ್ಲಿ ಪ್ರವಾಹ ಆಗಿಲ್ಲ, ಆ ಮೋರಿ ಎಲ್ಲಿದೆ, ಎಲ್ಲಿಗೆ ಹೋಗಿ ತಲುಪುತ್ತೆ ಗೊತ್ತಿಲ್ಲ: ಹ್ಯಾರಿಸ್

    ಬಡವರ ಮನೆ ಮುಂದೆ ಬಾಹುಬಲಿ, ಶ್ರೀಮಂತರ ಮನೆ ಮುಂದೆ ಇಲಿಯಂತೆ ಬಿಬಿಎಂಪಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಪ್ರಭಾವಿಗಳನ್ನು ಕಂಡ್ರೆ ಒತ್ತುವರಿಯೇ ಕೈಬಿಟ್ಟು ಕೈಕಟ್ಟಿ ನಿಂತುಬಿಡ್ತಾರೆ. ಹೀಗಾಗಿಯೇ ಜನರಿಗೆ ಅಪರೇಷನ್ ಬುಲ್ಡೋಜರ್ (Operation Buldozer) ಬಗ್ಗೆ ಅಪನಂಬಿಕೆ ಇರೋದು. ಇನ್ನೊಂದು ಕಡೆ ಜನ್ರಿಗೆ ಮಾದರಿಯಾಗಬೇಕಾಗಿದ್ದ ಜನಪ್ರತಿನಿಧಿಗಳೇ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವು ವಿಷಾದನೀಯ. ಇದನ್ನೂ ಓದಿ: ಪಬ್ಲಿಕ್‌ ಟಿವಿ ಇಂಪ್ಯಾಕ್ಟ್‌ – ನಲಪಾಡ್‌ ಅಕಾಡೆಮಿಗೆ ಜೆಸಿಬಿ ಗುನ್ನಾ!

    Live Tv
    [brid partner=56869869 player=32851 video=960834 autoplay=true]

  • BBMP ಜೆಸಿಬಿ ಆಪರೇಷನ್ – ಒಂದೇ ವಾರದಲ್ಲಿ ನಲಪಾಡ್ ನಾಟಕ ಬಯಲು

    BBMP ಜೆಸಿಬಿ ಆಪರೇಷನ್ – ಒಂದೇ ವಾರದಲ್ಲಿ ನಲಪಾಡ್ ನಾಟಕ ಬಯಲು

    ಬೆಂಗಳೂರು: ರಸ್ತೆಯಲ್ಲಿ ನೀರು ನಿಂತಾಗ ಸರ್ಕಾರದ (Karnataka Government) ವಿರುದ್ಧ ಪ್ರತಿಭಟನೆ (Protest) ನಡೆಸಿದ್ದ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ (mohammed haris nalapad) ನಾಟಕ ಒಂದೇ ವಾರದಲ್ಲಿ ಬಯಲಾಗಿದೆ.

    ರಾಜಕಾಲುವೆ (Rajkaluve) ಒತ್ತುವರಿ ಮಾಡಿ ಕಟ್ಟಡ ಕಟ್ಟಿದ ಪರಿಣಾಮ ಮಹಾದೇವಪುರ ವಿಧಾನ ಸಭಾ ಕ್ಷೇತ್ರದ ಕೆಲವೆಡೆ ರಸ್ತೆಯಲ್ಲಿ ನೀರು ನಿಂತಿತ್ತು. ಈ ಸಂದರ್ಭದಲ್ಲಿ ಟ್ರ್ಯಾಕ್ಟರ್‌ ಏರಿ ನಲಪಾಡ್ ಪ್ರತಿಭಟನೆ ನಡೆಸಿದ್ದರು. ಬಳಿಕ ಜಲಾವೃತಗೊಂಡ ರಸ್ತೆಯಲ್ಲಿ ಗಾಳಿ ತುಂಬಿದ ರಬ್ಬರ್ ಟ್ಯೂಬ್ ಮೇಲೆ ಕುಳಿತು ಸಂಚರಿಸುವ ಮೂಲಕ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದರು. ಆದರೆ ಈಗ ನಲಪಾಡ್ ನಿರ್ದೇಶಕರಾಗಿರುವ ನಲಪಾಡ್ ಅಕಾಡೆಮಿ ರಾಜಕಾಲುವೆ ಒತ್ತುವರಿ ಮಾಡಿಕೊಂಡ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: 40percentsarkara ವೆಬ್‌ಸೈಟ್‌ ಓಪನ್‌ – ಬಿಜೆಪಿ ಅಂದ್ರೆ ಭ್ರಷ್ಟಾಚಾರ ಅಭಿಯಾನ ಆರಂಭಿಸಿದ ಕಾಂಗ್ರೆಸ್‌

    ಚಲ್ಲಘಟ್ಟದ ಎಂಬೆಸಿ ಗಾಲ್ಫ್ ಲಿಂಕ್ ಬಿಸಿನೆಸ್ ಪಾರ್ಕ್ ಬಳಿ ನಲಪಾಡ್ ಅಕಾಡೆಮಿ (Nalapad Academy) ಸ್ಥಾಪನೆಯಾಗಿದೆ. ಒತ್ತುವರಿ ಮಾಡಿ ಅಕಾಡೆಮಿಯ ಕಾಪೌಂಡ್ ಕಟ್ಟಿದ ಹಿನ್ನೆಲೆಯಲ್ಲಿ ಇಂದು ಜೆಸಿಬಿ ಜೊತೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಜೆಸಿಬಿ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಪಿಎ, ನೋಟಿಸ್ ನೀಡಿಲ್ಲ. ಹೇಗೆ ತೆರವು ಮಾಡುತ್ತೀರಾ ಎಂದು ಅವಾಜ್ ಹಾಕಿದರು. ಜೆಸಿಬಿ (JCB) ಕಾರ್ಯಾಚರಣೆ ನಡೆಸುತ್ತಿದ್ದಂತೆ ಸ್ಥಗಿತಕ್ಕೆ ಸೂಚನೆ ನೀಡಿದರು. ಬಿಬಿಎಂಪಿ (BBMP) ಅಧಿಕಾರಿಗಳಿಗೆ ಗೇಟು ತೆಗೆಯಲು ಕೂಡ ಅವಕಾಶ ಕೊಡಲಿಲ್ಲ. ಹೀಗಾಗಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.

    ಕಾರ್ಯಾಚರಣೆ ಸ್ಥಗಿತಗೊಂಡ ಬೆನ್ನಲ್ಲೇ ಪಬ್ಲಿಕ್ ಟಿವಿ (Public TV) ನಿರಂತರ ವರದಿ ಮಾಡಿತ್ತು. ದೊಡ್ಡವರಿಗೆ ಒಂದು ನ್ಯಾಯ? ಬಡವರಿಗೆ ಒಂದು ನ್ಯಾಯ ಸರಿಯೇ ಎಂದು ಕೇಳಿತ್ತು. ನಿರಂತರ ವರದಿಯ ಬಳಿಕ ಬಿಬಿಎಂಪಿ ಜೆಸಿಬಿಗಳು ನಲಪಾಡ್ ಅಕಾಡೆಮಿ ಕಾಂಪೌಂಡ್‌ನ್ನು ಧರೆಗೆ ಉರುಳಿಸಿದೆ. ಇದನ್ನೂ ಓದಿ: ದೀದಿ ವಿರುದ್ಧ ಬಿಜೆಪಿ ಪ್ರತಿಭಟನೆ – ಪೊಲೀಸರಿಂದ ಜಲಫಿರಂಗಿ ಅಸ್ತ್ರ ಬಳಕೆ

    ವಾರದ ಹಿಂದೆ ಮಳೆ ಬಂದಾಗ ಪ್ರತಿಭಟನೆ ನಡೆಸಿದ್ದ ನಲಪಾಡ್, ʻತೊಲಗಲಿ ತೊಲಗಲಿ, ಬಿಜೆಪಿ ತೊಲಗಲಿ, ಜೀವವಿದ್ದರೆ ಜೀವನ – ಬಿಜೆಪಿಯಿದ್ದರೆ ದಹನ, ರಾಜಕಾಲುವೆ ನಿರ್ಮಿಸಿ, ಮಳೆಯಿಂದ ಜನರನ್ನು ರಕ್ಷಿಸಿ ಎಂಬಿತ್ಯಾದಿ’ ಘೋಷಣೆ ಕೂಗುತ್ತ ಪ್ಲಾಸ್ಟಿಕ್ ಟ್ಯೂಬ್ ಮೇಲೆ ಕುಳಿತು ಮೊಹಮ್ಮದ್ ನಲಪಾಡ್ ಪ್ರತಿಭಟನೆ ನಡೆಸಿದ್ದರು. ನಲಪಾಡ್‌ಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಸಾಥ್ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್‌ ಟಿವಿ ಇಂಪ್ಯಾಕ್ಟ್‌ – ನಲಪಾಡ್‌ ಅಕಾಡೆಮಿಗೆ ಜೆಸಿಬಿ ಗುನ್ನಾ!

    ಪಬ್ಲಿಕ್‌ ಟಿವಿ ಇಂಪ್ಯಾಕ್ಟ್‌ – ನಲಪಾಡ್‌ ಅಕಾಡೆಮಿಗೆ ಜೆಸಿಬಿ ಗುನ್ನಾ!

    ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ (BBMP) ಕೈಗೊಂಡಿರುವ ʼಆಪರೇಷನ್‌ ಬುಲ್ಡೋಜರ್‌ʼ (Operation Bulldozer) ಕಾರ್ಯಾಚರಣೆಯಲ್ಲಿ ದೊಡ್ಡವರಿಗೊಂದು ನ್ಯಾಯ, ಬಡವರಿಗೊಂದು ನ್ಯಾಯ ಎನ್ನುವಂತಾಗಿದೆ. ನಲಪಾಡ್‌ ಅಕಾಡೆಮಿ (Nalapad Academy) ತೆರವು ಕಾರ್ಯಾಚರಣೆ ವೇಳೆ ದೊಡ್ಡ ಹೈಡ್ರಾಮವೇ ನಡೆದಿತ್ತು. ಈ ವಿಚಾರ ʼಪಬ್ಲಿಕ್‌ ಟಿವಿʼ ಭಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.

    ಶಾಂತಿನಗರದ ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ಮಾಲೀಕತ್ವದ ನಲಪಾಡ್‌ ಅಕಾಡೆಮಿಯ ಕಾಂಪೌಂಡ್‌ನ್ನು ಧರೆಗೆ ಉರುಳಿಸಲಾಗಿದೆ. ಈ ವೇಳೆ ಹ್ಯಾರಿಸ್ ಪಿಎ ಸ್ಥಳದಲ್ಲಿ ಒತ್ತುವರಿ ಸ್ಥಗಿತಗೊಳಿಸಲು ಹೈಡ್ರಾಮ ನಡೆಸಿದರು. ನೋಟಿಸ್ ಕೊಟ್ಟಿಲ್ಲ, ಹೇಗೆ ತೆರವು ಮಾಡುತ್ತೀರಾ ಎಂದು ಅವಾಜ್‌ ಹಾಕಿದರು. ಜೆಸಿಬಿ ಕಾರ್ಯಾಚರಣೆ ನಡೆಸುತ್ತಿದ್ದಂತೆ ಸ್ಥಗಿತಕ್ಕೆ ಸೂಚನೆ ನೀಡಿದರು. ಬಿಬಿಎಂಪಿ ಅಧಿಕಾರಿಗೆ ಗೇಟು ತೆಗೆಯಲು ಕೂಡ ಅವಕಾಶ ಕೊಡಲಿಲ್ಲ. ಇದನ್ನೂ ಓದಿ: ನಲಪಾಡ್‌ ಅಕಾಡೆಮಿಯಿಂದ ರಾಜಕಾಲುವೆ ಒತ್ತುವರಿ – ಪ್ರಭಾವಿಗಳ ಬಿಲ್ಡಿಂಗ್‌ ತೆರವಿಗೆ BBMP ಹಿಂದೇಟು!

    ಬೆಂಗಳೂರಿನಲ್ಲಿ ಮಳೆ ಅವಾಂತರ, ಒತ್ತುವರಿ ವಿರುದ್ಧ ಮೊನ್ನೆಯಷ್ಟೇ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ ಇಂದು ತಮ್ಮ ಅಕಾಡೆಮಿ ಮೇಲಿನ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದರು. ʻರಾಜಕಾಲುವೆ ಒತ್ತುವರಿ ಆಗಿಲ್ಲ. ನೀವು ತಪ್ಪು ಮಾಡುತ್ತಿದ್ದೀರಿʼ ಎಂದು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

    ಪ್ರಭಾವಿಗಳ ಬಿಲ್ಡಿಂಗ್‌ ತೆರವಿಗೆ ಬಿಬಿಎಂಪಿ ಹಿಂದೇಟು ಹಾಕುತ್ತಿದ್ದು, ಅದಕ್ಕೆ ನಾನಾ ಕಾರಣಗಳನ್ನು ನೀಡುತ್ತಿದೆ. ನಮ್ಮ ಬಳಿ ಜೆಸಿಬಿ, ಬ್ರೇಕರ್‌ ಕೊರತೆ ಇದೆ ಎಂದು ಕಾರಣಗಳನ್ನು ನೀಡುತ್ತಿದೆ. ಹ್ಯಾರಿಸ್‌ ಮಾಲೀಕತ್ವದ ನಲಪಾಡ್‌ ಅಕಾಡೆಮಿಯ ಕೆಲ ಭಾಗಗಳಿಂದ ರಾಜಕಾಲುವೆ ಒತ್ತುವರಿಯಾಗಿತ್ತು. ಇದರ ತೆರವು ಕಾರ್ಯಾಚರಣೆಗೂ ಬೆಳಗ್ಗೆ ಯೋಜನೆ ರೂಪಿಸಲಾಗಿತ್ತು. ಆದರೆ ಕಾರ್ಯಾಚರಣೆ ಮಾತ್ರ ಆರಂಭವಾಗಿರಲಿಲ್ಲ. ಈ ಬಗ್ಗೆ ಕೇಳಿದರೆ, ತೆರವು ಕಾರ್ಯಾಚರಣೆಗೆ ಮೆಟಿರಿಯಲ್ಸ್‌ ಕೊರತೆ ಇದೆ ಎಂದು ಬಿಬಿಎಂಪಿ ಕಾರಣ ನೀಡುತ್ತಿದೆಯೆಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದರು. ಇದನ್ನೂ ಓದಿ: ಆಪರೇಷನ್ ಬುಲ್ಡೋಜರ್‌ಗೆ 2ನೇ ದಿನ – ಇಂದು ಪ್ರಭಾವಿಗಳ ಕಟ್ಟಡ ಕೆಡವುತ್ತಾ ಪಾಲಿಕೆ?

    Live Tv
    [brid partner=56869869 player=32851 video=960834 autoplay=true]

  • ನಲಪಾಡ್‌ ಅಕಾಡೆಮಿಯಿಂದ ರಾಜಕಾಲುವೆ ಒತ್ತುವರಿ – ಪ್ರಭಾವಿಗಳ ಬಿಲ್ಡಿಂಗ್‌ ತೆರವಿಗೆ BBMP ಹಿಂದೇಟು!

    ನಲಪಾಡ್‌ ಅಕಾಡೆಮಿಯಿಂದ ರಾಜಕಾಲುವೆ ಒತ್ತುವರಿ – ಪ್ರಭಾವಿಗಳ ಬಿಲ್ಡಿಂಗ್‌ ತೆರವಿಗೆ BBMP ಹಿಂದೇಟು!

    ಬೆಂಗಳೂರು: ಒತ್ತುವರಿ ಕಾರಣದಿಂದಾಗಿ ರಾಜಧಾನಿ ಬೆಂಗಳೂರು ಮಳೆಗಾಲದಲ್ಲಿ (Bengaluru Rain) ನಾನಾ ಅವಾಂತರಗಳನ್ನು ಎದುರಿಸಿತು. ಈ ಬಗ್ಗೆ ವಿಪಕ್ಷಗಳು ಹಾಗೂ ಜನರ ಟೀಕಾಪ್ರಹಾರದಿಂದ ಎಚ್ಚೆತ್ತ ಸರ್ಕಾರ, ಕೊನೆಗೂ ʼಆಪರೇಷನ್‌ ಬುಲ್ಡೋಜರ್‌ʼ (Operation Bulldozer) ಪ್ರಾರಂಭಿಸಿದೆ. ಆದರೆ ಪ್ರಭಾವಿಗಳ ಒತ್ತುವರಿ ಬಿಲ್ಡಿಂಗ್‌ ತೆರವಿಗೆ ಮಾತ್ರ ಮೀನಾಮೇಷ ಎಣಿಸುತ್ತಿದೆ.

    ಪ್ರಭಾವಿಗಳ ಬಿಲ್ಡಿಂಗ್‌ ತೆರವಿಗೆ ಬಿಬಿಎಂಪಿ (BBMP) ಹಿಂದೇಟು ಹಾಕುತ್ತಿದ್ದು, ಅದಕ್ಕೆ ನಾನಾ ಕಾರಣಗಳನ್ನು ನೀಡುತ್ತಿದೆ. ನಮ್ಮ ಬಳಿ ಜೆಸಿಬಿ, ಬ್ರೇಕರ್‌ ಕೊರತೆ ಇದೆ ಎಂದು ಕಾರಣಗಳನ್ನು ನೀಡುತ್ತಿದೆ. ಹ್ಯಾರಿಸ್‌ ಮಾಲೀಕತ್ವದ ನಲಪಾಡ್‌ ಅಕಾಡೆಮಿಯ (Nalapad Academy) ಕೆಲ ಭಾಗಗಳಿಂದ ರಾಜಕಾಲುವೆ ಒತ್ತುವರಿಯಾಗಿತ್ತು. ಇದರ ತೆರವು ಕಾರ್ಯಾಚರಣೆಗೂ ಬೆಳಗ್ಗೆ ಯೋಜನೆ ರೂಪಿಸಲಾಗಿತ್ತು. ಆದರೆ ಕಾರ್ಯಾಚರಣೆ ಮಾತ್ರ ಆರಂಭವಾಗಿರಲಿಲ್ಲ. ಈ ಬಗ್ಗೆ ಕೇಳಿದರೆ, ತೆರವು ಕಾರ್ಯಾಚರಣೆಗೆ ಮೆಟಿರಿಯಲ್ಸ್‌ ಕೊರತೆ ಇದೆ ಎಂದು ಬಿಬಿಎಂಪಿ ಕಾರಣ ನೀಡುತ್ತಿದೆಯೆಂದು ಸ್ಥಳೀಯರು ಗಂಭೀರ ಆರೋಪ ಮಾಡುತ್ತಿದ್ದಾರೆ. ಇದನ್ನೂ ಓದಿ: ಆಪರೇಷನ್ ಬುಲ್ಡೋಜರ್‌ಗೆ 2ನೇ ದಿನ – ಇಂದು ಪ್ರಭಾವಿಗಳ ಕಟ್ಟಡ ಕೆಡವುತ್ತಾ ಪಾಲಿಕೆ?

    ನಾವು ಏಳು ಗಂಟೆಯಿಂದ ಸ್ಥಳದಲ್ಲಿ ಕಾಯ್ತಾ ಇದ್ದೀವಿ. ದೊಡ್ಡವರ ಅಖಾಡಕ್ಕೆ ಜೆಸಿಬಿ ಹೋಗೋದೆ ಇಲ್ಲ. ಆದರೆ ಬಡವರ ಮನೆಗೆ ಮಾತ್ರ ಬೇಗ ಹೋಗುತ್ತೆ. ಹ್ಯಾರಿಸ್ ಮಾಲೀಕತ್ವ ಅಂತಾ ಟಚ್ ಮಾಡೋಕೆ ಹಿಂದೇಟು ಹಾಕ್ತಾ ಇದ್ದಾರೆ ಎಂದು ಅಧಿಕಾರಿಗಳಿಗೆ ಫೋನ್‌ ಕರೆ ಮಾಡಿ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಚಲ್ಲಘಟ್ಟದ ನಲಪಾಡ್ ಅಕಾಡೆಮಿಯ ಒತ್ತುವರಿ ಜಾಗ ತೆರವಿಗೆ ಬಿಬಿಎಂಪಿ ಹಿಂದೇಟು ಹಾಕಿತ್ತು. ಈ ಬಗ್ಗೆ ಜನರು ಆಕ್ರೋಶ ಹೊರಹಾಕುತ್ತಿದ್ದಂತೆ ಎಚ್ಚೆತ್ತು, ಕೊನೆಗೂ ನಲಪಾಡ್ ಅಕಾಡೆಮಿ ಸ್ಥಳಕ್ಕೆ ಅಧಿಕಾರಿಗಳ ನೇತೃತ್ವದಲ್ಲಿ ಜೆಸಿಬಿ ಧಾವಿಸಿದೆ. ಇದನ್ನೂ ಓದಿ: ಮಂಡ್ಯದ ಇಬ್ಬರು ಹಾಲಿ, ಓರ್ವ ಮಾಜಿ ಶಾಸಕರಿಗೆ ಸಂಕಷ್ಟ

    Live Tv
    [brid partner=56869869 player=32851 video=960834 autoplay=true]