Tag: ನರ್ಸಿಂಗ್

  • ಪ್ರೇಮಕ್ಕೆ ಕುಟುಂಬಸ್ಥರ ವಿರೋಧ – ಪ್ರೇಮಿಯೊಂದಿಗೆ ಬೆಂಕಿ ಹಚ್ಚಿಕೊಂಡು ವಿವಾಹಿತೆ ಆತ್ಮಹತ್ಯೆ

    ಪ್ರೇಮಕ್ಕೆ ಕುಟುಂಬಸ್ಥರ ವಿರೋಧ – ಪ್ರೇಮಿಯೊಂದಿಗೆ ಬೆಂಕಿ ಹಚ್ಚಿಕೊಂಡು ವಿವಾಹಿತೆ ಆತ್ಮಹತ್ಯೆ

    ಬೆಂಗಳೂರು: ತಮ್ಮ ಪ್ರೇಮಕ್ಕೆ (Love) ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದರೆಂದು ಬೆಂಕಿ ಹಚ್ಚಿಕೊಂಡು ಪ್ರೇಮಿಯೊಂದಿಗೆ ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ದೊಡ್ಡಗುಬ್ಬಿ ನಿವಾಸದ ಅಪಾರ್ಟ್ಮೆಂಟ್‌ನಲ್ಲಿ (Apartment) ನಡೆದಿದೆ.

    ಸೌಮಿನಿ ದಾಸ್ (20), ಅಬಿಲ್ ಅಬ್ರಾಹಂ (29) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಫ್ಲ್ಯಾಟ್‌ನಲ್ಲಿ ಬೆಂಕಿ ಕಂಡು ಅಪಾರ್ಟ್ಮೆಂಟ್ ನಿವಾಸಿಗಳು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಬೆಂಕಿಯಲ್ಲಿ ಬೆಂದು ಸೌಮಿನಿ ಕೊನೆಯುಸಿರೆಳೆದಿದ್ದಾಳೆ. ಭಾಗಶಃ ಸುಟ್ಟು ಹೋಗಿದ್ದ ಅಬ್ರಾಹಂನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅಬ್ರಾಹಂ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿಗೆ 17 ಬಾರಿ ಇರಿದು, ದೇಹದ ಮೇಲೆ ಗಾಡಿ ಓಡಿಸಿದ್ದ ಕೇರಳದ ವ್ಯಕ್ತಿಗೆ ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ

    ಮೃತ ಸೌಮಿನಿ ದಾಸ್ ಪಶ್ಚಿಮ ಬಂಗಾಳ ರಾಜ್ಯದವಳಾಗಿದ್ದು, ಕರಿಯಮ್ಮ ಆಗ್ರಹಾರ ಸಮೀಪದ ಖಾಸಗಿ ಕಾಲೇಜಿನಲ್ಲಿ 2ನೇ ವರ್ಷದ ನರ್ಸಿಂಗ್ (Nursing) ಓದುತ್ತಿದ್ದಳು. ಎರಡು ವರ್ಷಗಳ ಹಿಂದೆಯೇ ಆಕೆಗೆ ವಿವಾಹವಾಗಿತ್ತು. ಇನ್ನು ನರ್ಸ್ ಸರ್ವೀಸ್ ಏಜೆನ್ಸಿ ನಡೆಸುತ್ತಿದ್ದ ಕೇರಳ ಮೂಲದ ಅಬ್ರಾಹಂಗೆ ಕೆಲ ತಿಂಗಳ ಹಿಂದೆ ಸೌಮಿನಿಯ ಪರಿಚಯವಾಗಿತ್ತು. ರಜೆ ಇದ್ದಂತಹ ಸಂದರ್ಭದಲ್ಲಿ ಮತ್ತು ಬಿಡುವಿನಲ್ಲಿ ಸೌಮಿನಿ ಅಬ್ರಾಹಂ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಳು. 3 ತಿಂಗಳ ಹಿಂದೆ ಅಬ್ರಾಹಂನನ್ನು ತನ್ನ ಪತಿಗೆ ಸೌಮಿನಿ ಪರಿಚಯ ಮಾಡಿಸಿದ್ದಳು. ದಿನಗಳು ಕಳೆಯುತ್ತಾ ಇವರಿಬ್ಬರ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಇದನ್ನೂ ಓದಿ: ಸಹಾಯ ಮಾಡುವ ನೆಪದಲ್ಲಿ ಎಟಿಎಂ ಪಿನ್ ಪಡೆದು ವಂಚನೆ – ಅಂತರಾಜ್ಯ ಕಳ್ಳರ ಬಂಧನ

    ಕೆಲ ದಿನಗಳ ಹಿಂದೆ ಸೌಮಿನಿ ಕೋಲ್ಕತ್ತಾಗೆ ಹೋಗಿದ್ದಳು. ಇದಾದ ಬಳಿಕ ಬೆಂಗಳೂರಿಗೆ ಬಂದಿದ್ದಳು. ನಂತರ ಇಬ್ಬರೂ 14 ದಿನಕ್ಕೆ ಫ್ಲ್ಯಾಟ್‌ವೊಂದನ್ನು ಬಾಡಿಗೆ ಪಡೆದಿದ್ದರು. ಬಳಿಕ ಸೌಮಿನಿ ಪ್ರೇಮದ ವಿಚಾರವನ್ನು ತನ್ನ ಪತಿಗೆ ತಿಳಿಸಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ ಎನ್ನಲಾಗಿದೆ. ಈ ವಿಚಾರಕ್ಕೆ ಸೌಮಿನಿ ಹಾಗೂ ಅಬ್ರಾಹಂ ಇಬ್ಬರೂ ಸಾಯಲು ತೀರ್ಮಾನ ಮಾಡಿದ್ದಾರೆ. ಭಾನುವಾರ ಮಧ್ಯಾಹ್ನ ವೇಳೆಗೆ ಬಾಡಿಗೆ ಪಡೆದಿದ್ದ ಅಪಾರ್ಟ್ಮೆಂಟ್‌ನಲ್ಲಿ ಪೆಟ್ರೋಲ್ (Petrol) ಸುರಿದುಕೊಂಡು ಇಬ್ಬರೂ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಪ್ರತಿಮಾ ಕೊಲೆ- ತಪ್ಪೊಪ್ಪಿಕೊಂಡ ಕಿರಣ್

  • ಭಾರತ ಮೂಲದ ಯುವತಿಯ ಜೀವಂತ ಸಮಾಧಿ – ಆರೋಪಿಗೆ ಜೀವಾವಧಿ ಶಿಕ್ಷೆ ಸಾಧ್ಯತೆ

    ಭಾರತ ಮೂಲದ ಯುವತಿಯ ಜೀವಂತ ಸಮಾಧಿ – ಆರೋಪಿಗೆ ಜೀವಾವಧಿ ಶಿಕ್ಷೆ ಸಾಧ್ಯತೆ

    ಕ್ಯಾನ್ಬೆರಾ: ಆಸ್ಟ್ರೇಲಿಯಾದಲ್ಲಿ (Australia) ನಡೆದಿದ್ದ ಭಾರತದ (India) ಮೂಲದ ಯುವತಿಯೊಬ್ಬಳನ್ನು ಆಕೆಯ ಮಾಜಿ ಪ್ರಿಯಕರ ಜೀವಂತವಾಗಿ ಸಮಾಧಿ ಮಾಡಿದ ಪ್ರಕರಣದಲ್ಲಿ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

    21 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ‌ (Nursing Student) ಜಸ್ಮೀನ್ ಕೌರ್ ಎಂಬ ಯುವತಿಯನ್ನು ಆರೋಪಿ ತಾರಿಕ್‍ಜೋತ್ ಸಿಂಗ್ 2021ರ ಮಾರ್ಚ್‍ನಲ್ಲಿ ಅಪಹರಿಸಿದ್ದ. ಬಳಿಕ ಕೇಬಲ್ ಹಾಗೂ ಗಮ್ ಟೇಪ್ ಬಳಸಿ ಕೈ ಕಾಲುಗಳಿಗೆ ಸುತ್ತಿ ಆಕೆಯನ್ನು ಜೀವಂತವಾಗಿ ಸಮಾಧಿ ಮಾಡಿದ್ದ. ಆತ ಈ ಕೃತ್ಯವನ್ನು ಆಕೆಯ ಮೇಲಿನ ದ್ವೇಷದಿಂದ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ನಾಲ್ವರು ಅಪ್ರಾಪ್ತರಿಂದಲೇ 9ರ ಬಾಲಕಿ ಮೇಲೆ ಅತ್ಯಾಚಾರ

    ಈ ವರ್ಷದ ಫೆಬ್ರುವರಿಯಲ್ಲಿ ಆತನ ವಿಚಾರಣೆ ನಡೆಸಿದ್ದಾಗ ಆರೋಪಿ ಆಕೆಯ ಹತ್ಯೆ ಮಾಡಿದ್ದಾಗಿ ತಪ್ಪೋಪ್ಪಿಕೊಂಡಿದ್ದ. ಬಳಿಕ ಯುವತಿಯ ಶವವನ್ನು ಪೊಲೀಸರು ಪತ್ತೆ ಮಾಡಿದ್ದರು.

    ಈ ಬಗ್ಗೆ ಮಾತನಾಡಿರುವ ಯುವತಿಯ ತಾಯಿ, ಆರೋಪಿ ತನ್ನ ಮಗಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ಆಕೆ ಆತನನ್ನು ನಿರಾಕರಿಸಿದ್ದಳು. ಇದರಿಂದಾಗಿ ಆತ ಕೃತ್ಯ ಎಸಗಿದ್ದಾನೆ. ಆತ ಕ್ಷಮೆಗೆ ಯೋಗ್ಯನಲ್ಲ, ನನ್ನ ಮಗಳ ಸಂಕಟ ನೆನೆದು ದುಃಖಿಸುತ್ತಿದ್ದೇನೆ ಎಂದಿದ್ದಾರೆ.

    ಈ ಬಗ್ಗೆ ನ್ಯಾಯಾಲಯದಲ್ಲಿ ವಾದಿಸಿರುವ ಕೌರ್ ಪರ ವಕೀಲ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಕನ್ನಡ ಹೆಚ್ಚು ಕಡಿಮೆ ಇರ್ಬೋದು, ಆದ್ರೆ ಪ್ರೀತಿಯ ಭಾಷೆ: ಖಾದರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಡಿಮೆ ಅಂಕ ಬಂದಿದ್ದಕ್ಕೆ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

    ಕಡಿಮೆ ಅಂಕ ಬಂದಿದ್ದಕ್ಕೆ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

    ವಿಜಯಪುರ: ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಮನನೊಂದು ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾದ ಘಟನೆ ವಿಜಯಪುರ (Vijayapura) ಜಿಲ್ಲೆಯ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದೆ.

    POLICE JEEP

    ಪಟ್ಟಣದ ನೇಕಾರ ಕಾಲೋನಿಯ ಕೀರ್ತನಾ ಮಧುಕರ(21)ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಬಿಎಲ್‍ಡಿಇ ನರ್ಸಿಂಗ್ ಕಾಲೇಜ್‍ನಲ್ಲಿ ಎರಡನೇ ವರ್ಷದ ನರ್ಸಿಂಗ್ ನಲ್ಲಿ ಓದುತ್ತಿದ್ದಳು. ಪರೀಕ್ಷೆಯ ಫಲಿತಾಂಶ ಬಂದಾಗ ನಿರೀಕ್ಷೆಯಷ್ಟು ಅಂಕಗಳು ಬಂದಿರಲಿಲ್ಲ.  ಇದನ್ನೂ ಓದಿ: ಕೊಯಮತ್ತೂರು ಕಾರು ಸ್ಫೋಟ ಪ್ರಕರಣ – 45ಕ್ಕೂ ಹೆಚ್ಚು ಕಡೆ NIA ದಾಳಿ

    ಈ ವಿಚಾರದಿಂದ ಮನನೊಂದಿದ್ದ ಕೀರ್ತನಾ ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: CRPF ನನ್ನ ಮೇಲೆ ಜೈಲಿನಲ್ಲಿ ಹಲ್ಲೆ ನಡೆಸಿದೆ – ಸುಕೇಶ್ ಚಂದ್ರಶೇಖರ್ ಆರೋಪ

    Live Tv
    [brid partner=56869869 player=32851 video=960834 autoplay=true]

  • ಕೇರಳದಿಂದ ಬಂದಿದ್ದ ಒಂದೇ ಕಾಲೇಜಿನ 21 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್

    ಕೇರಳದಿಂದ ಬಂದಿದ್ದ ಒಂದೇ ಕಾಲೇಜಿನ 21 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್

    – ಹಾಸನ ನರ್ಸಿಂಗ್ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿಗಳು

    ಹಾಸನ: ರಾಜ್ಯಾದ್ಯಂತ ಹಲವು ತಿಂಗಳು ಬಳಿಕ ಶಾಲಾ-ಕಾಲೇಜು ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಈ ವೇಳೆ ಜಿಲ್ಲೆಗೆ ಕೇರಳದಿಂದ ಪರೀಕ್ಷೆ ಗೆ ಹಾಜರಾಗಲು ಬಂದಿದ್ದ ಒಂದೇ ಕಾಲೇಜಿನ 21 ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

    15 ದಿನದ ಹಿಂದೆ ಹಾಸನ ನಗರದ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿರುವ ಕೇರಳ ಮೂಲದ 21 ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ವರದಿಯಾಗಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಖಚಿತಪಡಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಕೆಆರ್ ಪುರಂನಲ್ಲಿ ಇರುವಂತಹ ಖಾಸಗಿ ಪಿಜಿಯಲ್ಲಿ ಇದ್ದುಕೊಂಡು ನರ್ಸಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ. ಎಲ್ಲಾ ವಿದ್ಯಾರ್ಥಿಗಳೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 27 ವಿದ್ಯಾರ್ಥಿನಿಯರನ್ನು ಈಗಾಗಲೇ ಖಾಸಗಿ ವಸತಿಗೃಹದಲ್ಲಿ ಕ್ವಾರಂಟೈನಲ್ಲಿ ಇಡಲಾಗಿದ್ದು ಇವರನ್ನು ಕೂಡ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

    ಬಂದಿದ್ದ 21 ಕೇರಳ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿ ಇರುವಂತಹ ಸಿಬ್ಬಂದಿ, ವಿದ್ಯಾರ್ಥಿಗಳಿಗೂ ಕೊರೊನಾ ಪರೀಕ್ಷೆ ಮಾಡಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮವನ್ನು ವಹಿಸಲಾಗುತ್ತಿದೆ ಎಂದು ಸತೀಶ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೊರೊನಾ 3ನೇ ಅಲೆ ಮಕ್ಕಳಿಗೆ ಹೆಚ್ಚು ಪರಿಣಾಮಕಾರಿಯಲ್ಲ-ಅಧ್ಯಯನ ವರದಿ!

    ಹಾಸನ ನಗರದಲ್ಲಿ ದಿನನಿತ್ಯ ಕೊರೊನಾ ಪಾಸಿಟಿವ್ ಪ್ರಕರಣದ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಕೇರಳ ಮೂಲದ 21 ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ರಾಜ್ಯದಲ್ಲಿ ಈಗಾಗಲೇ ಮೂರನೇ ಅಲೆ ಭೀತಿ ಎದುರಾಗಿದ್ದು ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹರಡುತ್ತಿರುವುದು ಹೆಚ್ಚು ಅಪಾಯಕಾರಿ ಬೆಳವಣಿಗೆಯಾಗಿದೆ.

  • ಪ್ರೇಯಸಿಯ ಶೀಲ ಶಂಕಿಸಿ, ಕತ್ತು ಹಿಸುಕಿ ಕೊಲೆಗೈದ ಪ್ರೇಮಿ – ಈಗ ಲವ್‍ಜಿಹಾದ್ ಶಂಕೆ

    ಪ್ರೇಯಸಿಯ ಶೀಲ ಶಂಕಿಸಿ, ಕತ್ತು ಹಿಸುಕಿ ಕೊಲೆಗೈದ ಪ್ರೇಮಿ – ಈಗ ಲವ್‍ಜಿಹಾದ್ ಶಂಕೆ

    ಬಾಗಲಕೋಟೆ: ಪ್ರೇಯಸಿಯ ಶೀಲ ಶಂಕಿಸಿ, ಕತ್ತು ಹಿಸುಕಿ ಕೊಲೆಗೈದು, ಘಟಪ್ರಭಾ ನದಿಗೆ ಎಸೆದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದು ಲವ್ ಜಿಹಾದ್ ಪ್ರಕರಣ ಎಂದು ಮೃತ ಯುವತಿಯ ಕುಟುಂಬಸ್ಥರು ಮತ್ತು ಹಿಂದೂಪರ ಸಂಘಟನೆಗಳು ಆರೋಪಿಸಿವೆ.

    ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ಜ್ಯೋತಿ ಭಾಗವ್ವಗೋಳ(22) ಕೊಲೆಯಾದ ಯುವತಿ. ಬಾಗಲಕೋಟೆ ಜಿಲ್ಲೆಯ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಬೀಳಗಿ ತಾಲೂಕಿನ ಕಾತರಕಿ ಸೇತುವೆ ಬಳಿ ಯುವತಿಯ ಶವ ಪತ್ತೆಯಾಗಿದೆ.

    ಬಾಗಲಕೋಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಪೊಲೀಸರು ಆರೋಪಿ ಪ್ರೇಮಿ ಹನೀಫ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ಜ್ಯೋತಿ ಬಾಗಲಕೋಟೆ ನಗರದಲ್ಲಿ 3ನೇ ವರ್ಷದಲ್ಲಿ ನರ್ಸಿಂಗ್ ಓದುತ್ತಾ, ಖಾಸಗಿ ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ನರ್ಸಿಂಗ್ ಕಲಿಕೆಗಾಗಿ ಬಾಗಲಕೋಟೆಯ ವಿನಾಯಕ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಓದಿನ ಜೊತೆಗೆ ಹನೀಫ್ ಆಸ್ಪತ್ರೆಯಲ್ಲಿ ಕೆಲ್ಸ ಮಾಡುತ್ತಿದ್ದ ಜ್ಯೋತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದನು.

    ಪ್ರೀತಿ ವಿಚಾರ ಮೊದಲೇ ಗೊತ್ತಿದ್ದ ಯುವತಿ ಜ್ಯೋತಿ ಕುಟುಂಬಸ್ಥರು, ಜಾತಿ ಬೇರೆ ಎಂದು ಹನೀಫ್‍ಗೆ ಬುದ್ಧಿವಾದ ಹೇಳಿದ್ದರು. ಹನೀಫ್ ಯುವತಿಯ ಕುಟುಂಬಸ್ಥರ ಮಾತಿಗೆ ಬೆಲೆ ಕೊಟ್ಟಿರಲಿಲ್ಲ. ಆದರೆ ಇತ್ತೀಚೆಗೆ ಜ್ಯೋತಿ ಶೀಲದ ಬಗ್ಗೆ ಅನುಮಾನಗೊಂಡಿದ್ದ ಹನೀಫ್ ಫೆಬ್ರವರಿ 13 ರಂದು ಜ್ಯೋತಿಯನ್ನು ಪುಸಲಾಯಿಸಿ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದ. ಈ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿದ್ದು ಜ್ಯೋತಿಯನ್ನು ಕೊಲೆಗೈದು ಸಾಕ್ಷಿ ನಾಶಮಾಡಲು ಶವವನ್ನ ಘಟಪ್ರಭಾ ನದಿಗೆ ಎಸೆದು ಹೋಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

    ಪ್ರಕರಣ ಬೇಧಿಸಿದ ಪೊಲೀಸರು, ಆರೋಪಿ ಹನೀಫ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಯುವತಿಯ ಕೊಲೆ ಮಾಡಿರುವುದಾಗಿ ಆರೋಪಿ ಹನೀಫ್ ಒಪ್ಪಿಕೊಂಡಿದ್ದಾನೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

    ಕೊಲೆ ಪ್ರಕರಣಕ್ಕೆ ಹಿಂದೂಪರ ಸಂಘಟನೆಗಳು ಲವ್ ಜಿಹಾದ್ ಶಂಕೆಯನ್ನ ವ್ಯಕ್ತಪಡಿಸಿವೆ. ದಲಿತ ಸಮುದಾಯದ ಯುವತಿ ಜ್ಯೋತಿ ನಾಪತ್ತೆ ಕೇಸ್, ಲವ್ ಜಿಹಾದ್ ಎಂದು ಆರೋಪಿಸುತ್ತಿರುವ ಹಿಂದೂಪರ ಸಂಘಟನೆ ಯುವತಿಯನ್ನ ಕೊಲೆಗೈದು ಸಾಕ್ಷಿ ನಾಶಪಡಿಸಲು ಮೃತ ದೇಹ ನದಿಗೆ ಎಸೆದಿದ್ದ ಆರೋಪಿ ವಿರುದ್ಧ ಕಠಿಣ ಶಿಕ್ಷೆ ನೀಡಿ ಅಂತಿದ್ದಾರೆ. ಇತ್ತ ಮೃತ ಯುವತಿಯ ಕುಟುಂಬಸ್ಥರು ಸಹ ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿದ್ದು,  ಕಠಿಣ ಶಿಕ್ಷೆಗೆ ಆಗ್ರಹಿಸಿ  ಕಣ್ಣೀರಿಟ್ಟಿದ್ದಾರೆ.

  • ರಸ್ತೆ ಅಪಘಾತದಲ್ಲಿ ಮಿಲಿಟರಿ ನರ್ಸಿಂಗ್ ಕ್ಯಾಪ್ಟನ್ ನಿಧನ

    ರಸ್ತೆ ಅಪಘಾತದಲ್ಲಿ ಮಿಲಿಟರಿ ನರ್ಸಿಂಗ್ ಕ್ಯಾಪ್ಟನ್ ನಿಧನ

    ಶಿಮ್ಲಾ: ರಸ್ತೆ ಅಪಘಾತದಲ್ಲಿ ಮಿಲಿಟರಿ ನರ್ಸಿಂಗ್ ಕ್ಯಾಪ್ಟನ್ ನಿಧನರಾದ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.

    ರೋಹಿಣಿ(29) ನಿಧನರಾದ ಕ್ಯಾಪ್ಟನ್. ರೋಹಿಣಿ ಆರ್ಮಿ ಕ್ಯಾಂಪ್ ಜಲಂಧರ್ ನಲ್ಲಿ ಮಿಲಿಟರಿ ನರ್ಸಿಂಗ್ ಸೇವೆಯಲ್ಲಿ ಕ್ಯಾಪ್ಟನ್ ಆಗಿದ್ದರು. ರೋಹಿಣಿ ತನ್ನ ಸ್ಕೂಟಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

    ಸ್ಕೂಟಿಯಲ್ಲಿ ರೋಹಿಣಿ ಕೆಲಸಕ್ಕೆ ತೆರಳುತ್ತಿದ್ದಾಗ ಟ್ರಕ್‍ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ರೋಹಿಣಿ ತಲೆಗೆ ಗಂಭೀರವಾಗಿ ಗಾಯವಾಗಿದ್ದ ಪರಿಣಾಮ ಅವರು ಕೋಮಾಗೆ ಜಾರಿದ್ದರು. ಬುಧವಾರ ರೋಹಿಣಿ ಕೊನೆಯುಸಿರೆಳೆದಿದ್ದಾರೆ.

    ಇಂದು ಕ್ಯಾಪ್ಟನ್ ರೋಹಿಣಿ ಅವರ ಅಂತಿಮ ಸಂಸ್ಕಾರವನ್ನು ಕುಲುವಿನ ಪಟ್ಲಿಕುಹಾಲ್‍ನಲ್ಲಿರುವ ಡುವಾಡಾದಲ್ಲಿ ಮಾಡಲಾಗಿದೆ. ಲಾಹೌಲ್ ಬುಡಕಟ್ಟು ಪ್ರದೇಶದ ಗೌಶಾಲ್ ಗ್ರಾಮದಲ್ಲಿ ರೋಹಿಣಿ ಅವರ ಕುಟುಂಬಸ್ಥರು ವಾಸಿಸುತ್ತಿದ್ದಾರೆ.

    ಯುವ ಕ್ಯಾಪ್ಟನ್ ರೋಹಿಣಿ ಸಾವಿನ ಸುದ್ದಿ ತಿಳಿದ ಲಾಹೌಲ್ ಕಣಿವೆ ಶೋಕದಲ್ಲಿ ಮುಳುಗಿದೆ.

  • ಹಾಸ್ಟೆಲ್ ನಲ್ಲಿ ವಿಜಯೋತ್ಸವ: ಮನನೊಂದು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

    ಹಾಸ್ಟೆಲ್ ನಲ್ಲಿ ವಿಜಯೋತ್ಸವ: ಮನನೊಂದು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

    ಹುಬ್ಬಳ್ಳಿ: ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.

    ಈ ಘಟನೆ ಕಿಮ್ಸ್ ಆಸ್ಪತ್ರೆಯ ಹಾಸ್ಟೆಲ್ ಶುಕ್ರವಾರ ತಡರಾತ್ರಿ ನಡೆದಿದೆ. ಜ್ಯೋತಿ ಡಿ.ಸಿ (19) ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ.

    ಶುಕ್ರವಾರ ನರ್ಸಿಂಗ್ ಪ್ರಥಮ ವರ್ಷದ ಪರೀಕ್ಷೆ ಯ ಫಲಿತಾಂಶ ಪ್ರಕಟಗೊಂಡಿತ್ತು. ಹೀಗಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನರ್ಸಿಂಗ್ ವಿದ್ಯಾರ್ಥಿನಿಯರು ಹಾಸ್ಟೆಲ್ ಆವರಣದಲ್ಲಿ ವಿಜಯೋತ್ಸವ ಆಚರಿಸುತ್ತಿದ್ದರು. ಇದರಿಂದ ಮನನೊಂದ ವಿದ್ಯಾರ್ಥಿನಿ ಜ್ಯೋತಿ ನಿದ್ದೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆ ಗೆ ಯತ್ನಿಸಿದ್ದಾಳೆ.

    ಹಾಸ್ಟೆಲ್‍ ನ ಇತರ ವಿದ್ಯಾರ್ಥಿನಿಯರು ಕಿಮ್ಸ್ ಪ್ರಾಚಾರ್ಯರು ಹಾಗೂ ನಿರ್ದೇಶಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಕೂಡಲೇ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಬಾಗಲಕೋಟೆ: ನರ್ಸಿಂಗ್ ವಿದ್ಯಾರ್ಥಿನಿ ನೇಣಿಗೆ ಶರಣು

    ಬಾಗಲಕೋಟೆ: ನರ್ಸಿಂಗ್ ವಿದ್ಯಾರ್ಥಿನಿ ನೇಣಿಗೆ ಶರಣು

    ಬಾಗಲಕೋಟೆ: ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯ ಗದ್ದನಕೇರಿ ಗ್ರಾಮದಲ್ಲಿ ನಡೆದಿದೆ.

    ವಿಜಯಲಕ್ಷ್ಮಿ ಬಾಪುಗೌಳಿ(20) ಆತ್ಮಹತ್ಯೆ ಮಾಡಿಕೊಂಡ ವಿಧ್ಯಾರ್ಥಿನಿಯಾಗಿದ್ದು, ಈಕೆ ಗದಗ ಜಿಲ್ಲೆ ಕುರ್ತಕೋಟಿ ಮೂಲದವಳು ಎಂದು ತಿಳಿದುಬಂದಿದೆ. ವಿಜಯಲಕ್ಷ್ಮೀ ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಸಜ್ಜಲಶ್ರೀ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿನಿ. ಗದ್ದನಕೇರಿ ಗ್ರಾಮದಲ್ಲಿ ಬಾಡಿಗೆ ರೂಮ್‍ನಲ್ಲಿ ವಾಸವಾಗಿದ್ದಳು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

    ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.