Tag: ನರ್ಸರಿ

  • ಸ್ಕೂಲ್ ಬಸ್ಸಿನೊಳಗೆ ಉಸಿರುಗಟ್ಟಿ ಬಾಲಕಿ ಸಾವು ಪ್ರಕರಣ- ಶಾಲೆ ಮುಚ್ಚಲು ಆದೇಶ

    ಸ್ಕೂಲ್ ಬಸ್ಸಿನೊಳಗೆ ಉಸಿರುಗಟ್ಟಿ ಬಾಲಕಿ ಸಾವು ಪ್ರಕರಣ- ಶಾಲೆ ಮುಚ್ಚಲು ಆದೇಶ

    ದೋಹಾ: ಉಸಿರುಗಟ್ಟಿ ಶಾಲಾ ವಾಹನ (School Bus) ದಲ್ಲಿಯೇ 4 ವರ್ಷದ ಬಾಲಕಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಖಾಸಗಿ ನರ್ಸರಿ ಶಾಲೆಯನ್ನು ಮುಚ್ಚಲು ಆದೇಶ ನೀಡಲಾಗಿದೆ.

    ಮಿನ್ಸಾ ಮರಿಯಮ್ ಜಾಕೋಬ್ (4) ಮೃತ ದುರ್ದೈವಿ ಬಾಲಕಿ. ಈಕೆ ಕೇರಳ (Kerala) ಮೂಲದ ಅಭಿಲಾಷ್ ಜಾಕೋಬ್ ಮತ್ತು ಸೌಮ್ಯಾ ದಂಪತಿಯ ಎರಡನೇ ಮಗಳು. ಸೆಪ್ಟೆಂಬರ್ 11 ರಂದು ಮಿನ್ಸಾ ಹುಟ್ಟುಹಬ್ಬ (Birthday) ವಾಗಿದ್ದು, ಈ ದಿನವೇ ಆಕೆ ಕತಾರ್ ನ ಶಾಲಾ ಬಸ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಸಂಬಂಧ ಇದೀಗ ಕತಾರ್ ನ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಸಚಿವಾಲಯವು ಈ ಆದೇಶ ಹೊರಡಿಸಿದೆ. ಪ್ರಾಥಮಿಕ ತನಿಖೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

    ಏನಿದು ಘಟನೆ?: ವಕ್ರಾದ ಶಿಶುವಿಹಾರದಲ್ಲಿ ಓದುತ್ತಿದ್ದ ಮಿನ್ಸಾ, ಅದೇ ಶಾಲೆಯ ಬಸ್‍ನಲ್ಲಿಯೇ ಬಂಧಿಯಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ಈಕೆ ಭಾನುವಾರ ಬೆಳಗ್ಗೆ ತನ್ನ ಶಾಲಾ ಬಸ್‍ನಲ್ಲಿ ಶಾಲೆಗೆ ಹೋಗಿದ್ದಳು. ಹಿಂದೆ ಕುಳಿತಿದ್ದ ಆಕೆ ದಾರಿ ಮಧ್ಯೆಯೇ ನಿದ್ದೆ ಮಾಡಿದ್ದಾಳೆ. ಆದರೆ ಆಕೆ ನಿದ್ದೆ ಮಾಡಿದ್ದನ್ನು ಬಸ್ (Bus) ಸಿಬ್ಬಂದಿ ಯಾರೂ ಗಮನಿಸಿರಲಿಲ್ಲ. ಹೀಗಾಗಿ ಮಕ್ಕಳನ್ನು ಶಾಲೆಯಲ್ಲಿ ಇಳಿಸಿದ ಸಿಬ್ಬಂದಿ, ಶಾಲಾ ವಾಹನವನ್ನು ಬಿಟ್ಟು ಹೋಗಿದ್ದಾರೆ. ಇದನ್ನೂ ಓದಿ: ಮೂರುವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಬಸ್‌ ಚಾಲಕನ ಮನೆ ಧ್ವಂಸ

    ಮಧ್ಯಾಹ್ನ ತರಗತಿಗಳು ಮುಗಿದ ನಂತರ ಡ್ರೈವರ್ ಮತ್ತು ಕಂಡಕ್ಟರ್ ಮಕ್ಕಳನ್ನು ಅವರ ಮನೆಗೆ ಬಿಡಲು ಹಿಂದಿರುಗಿದಾಗ, ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಳು. ಕೂಡಲೇ ಆಕೆಯನ್ನು ವಕ್ರಾ ಆಸ್ಪತ್ರೆ (Hospital) ಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಶಾಲೆಯಲ್ಲಿ ಬಸ್ ಬಿಟ್ಟು ಡ್ರೈವರ್ ಹಾಗೂ ನಿರ್ವಾಹಕ ‌ ಡೋರ್‌, ವಿಂಡೋಸ್ ಕ್ಲೋಸ್ ಮಾಡಿದ್ದಾರೆ. ಇದರಿಂದ ನಿದ್ದೆಗೆ ಜಾರಿದ್ದ ಬಾಲಕಿಗೆ ಉಸಿರಾಡಲು ಸಾಧ್ಯವಾಗಿಲ್ಲ.

    weather

    ಕತಾರ್ ನಾದ್ಯಂತ ಗರಿಷ್ಠ ತಾಪಮಾನವು 36 ಡಿಗ್ರಿ ಸೆಲ್ಸಿಯಸ್ ಮತ್ತು 43 ಡಿಗ್ರಿ ಸೆಲ್ಸಿಯಸ್ ನಡುವೆ ಇತ್ತು ಎಂದು ಕತಾರ್ ಟ್ರಿಬ್ಯೂನ್ ವರದಿ ಮಾಡಿದೆ. ಇಂತಹ ವಾತಾವರಣದಲ್ಲಿ ಬಿಸಿಯಲ್ಲಿ ಬಾಲಕಿ 4 ಗಂಟೆಗಳ ಕಾಲ ಉಸಿರಾಡಲಾಗದೇ ಒದ್ದಾಡಿದ್ದಾಳೆ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅಣ್ಣನ ಕಳುಹಿಸಲು ಹೋದ ಒಂದೂವರೆ ವರ್ಷದ ಕಂದಮ್ಮ ಶಾಲಾ ಬಸ್ಸಿಗೆ ಬಲಿ!

    ಅಣ್ಣನ ಕಳುಹಿಸಲು ಹೋದ ಒಂದೂವರೆ ವರ್ಷದ ಕಂದಮ್ಮ ಶಾಲಾ ಬಸ್ಸಿಗೆ ಬಲಿ!

    ಹೈದರಾಬಾದ್: ಅಣ್ಣನ ಶಾಲಾ ಬಸ್ಸಿನಡಿ ಸಿಲುಕಿ 18 ತಿಂಗ್ಳು(ಒಂದೂವರೆ ವರ್ಷದ) ಹೆಣ್ಣು ಮಗು ದಾರುಣವಾಗಿ ಮೃತಪಟ್ಟ ಘಟನೆ ಹೈದಾರಾಬಾದ್ ನ ಬೊಂಗ್ಳೂರು ಎಂಬಲ್ಲಿ ನಡೆದಿದೆ.

    ಈ ಘಟನೆ ಸೋಮವಾರ ಬೆಳಗ್ಗೆ ನಡೆದಿದ್ದು, ಮೃತ ದುರ್ದೈವಿ ಕಂದಮ್ಮನನ್ನು ಪ್ರತೀಕಾ ಎಂದು ಗುರುತಿಸಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಸತ್ತಯ್ಯನನ್ನು ಆದಿಭಟ್ಲಾ ಪೊಲೀಸರು ಬಂಧಿಸಿದ್ದಾರೆ.

    ಘಟನೆ ವಿವರ:
    ಪ್ರತೀಕಾ, ಬೊಂಗ್ಳೂರು ಅಂತಪುರಂ ಕಾಲೊನಿಯ ವೆಂಕಟೇಶ್ ಹಾಗೂ ಚಂದನ ದಂಪತಿಯ ಪುತ್ರಿ. ಈಕೆಯ ಅಣ್ಣ ಪ್ರಜ್ವಲ್, ಬೊಂಗ್ಳೂರು ಸಾಹಿತಿ ವಿದ್ಯಾಲಯ ನರ್ಸರಿ ಶಾಲೆಗೆ ಹೋಗುತ್ತಿದ್ದಾನೆ ಅಂತ ಆದಿಭಟ್ಳಾ ಸಬ್ ಇನ್ಸ್ ಪೆಕ್ಟರ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.

    ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಚಂದನ, ಪ್ರಜ್ವಲ್ ಹಾಗೂ ಪ್ರತೀಕಾ ಮನೆಯ ಹತ್ತಿರವೇ ಶಾಲಾ ಬಸ್ಸಿಗಾಗಿ ಕಾಯುತ್ತಿದ್ದರು. ಸ್ವಲ್ಪ ಸಮಯದಲ್ಲೇ ಬಸ್ ಬಂದಿದೆ. ಬಸ್ ಬಂದ ಕೂಡಲೇ ಅದರಲ್ಲಿದ್ದ ಆಯ ಕೆಳಗಿಳಿದು ಪ್ರಜ್ವಲ್ ನನ್ನು ಬಸ್ ಗೆ ಹತ್ತಿಸಿದ್ದಾರೆ. ಇತ್ತ ತಾಯಿ ಮಗನ ಬ್ಯಾಗ್ ಹಿಡಿದುಕೊಂಡಿದ್ದು, ಅದನ್ನು ಆತನಿಗೆ ಕೊಡುವಲ್ಲಿ ನಿರತರಾಗಿದ್ದರು. ಹೀಗಾಗಿ ಮಗಳು ಪ್ರತೀಕಾ ಕಡೆ ಅವರು ಗಮನಹರಿಸಿರಲಿಲ್ಲ. ಪರಿಣಾಮ ಪ್ರತೀಕಾ ಬಸ್ ನ ಮುಂದುಗಡೆ ತೆರಳಿದ್ದಾಳೆ. ಇದನ್ನು ಚಾಲಕ ಕೂಡ ಗಮನಿಸಿರಲಿಲ್ಲ. ಅಲ್ಲದೇ ಬಸ್ಸನ್ನು ಏಕಾಏಕಿ ಚಲಾಯಿಸಿದ್ದಾನೆ. ಈ ವೇಳೆ ಬಸ್ ಮುಂಬದಿಯಿದ್ದ ಪ್ರತೀಕಾ ಬಸ್ಸಿನ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಅಂತ ಎಸ್‍ಐ ವಿವರಿಸಿದ್ದಾರೆ.

    ಮಗು ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಚಾಲಕ ಬಸ್ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಕೂಡಲೇ ಸ್ಥಳೀಯರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದು, ಆರೋಪಿ ಚಾಲಕನನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿದ್ದರು.

    ತಲೆಮರೆಸಿಕೊಂಡಿದ್ದ ಚಾಲಕನನ್ನು ಕೊನೆಗೂ ಆದಿಭಟ್ಲಾ ಪೊಲೀಸರು ಬಂಧಿಸಿದ್ದಾರೆ. ಚಾಲಕ ಸತ್ತಯ್ಯನ ಜೊತೆ ಲೈಸನ್ಸ್ ಇದ್ದು, ಘಟನೆ ನಡೆದ ವೇಳೆ ಆತ ಮದ್ಯಪಾನ ಮಾಡಿರಲಿಲ್ಲ ಅಂತ ತಿಳಿಸಿದ್ದಾರೆ. ಸದ್ಯ ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 304- ಎ(ವೇಗದ ಚಾಲನೆ ಅಥವಾ ಅಜಾಗರೂಕತೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv