Tag: ನರ್ಮದಾ ಪರಿಕ್ರಮ

  • ‘ರಾಮಪಥ’ ನಿರ್ಮಾಣಕ್ಕೆ ಕಾಂಗ್ರೆಸ್ ಬದ್ಧ: ದಿಗ್ವಿಜಯ್ ಸಿಂಗ್

    ‘ರಾಮಪಥ’ ನಿರ್ಮಾಣಕ್ಕೆ ಕಾಂಗ್ರೆಸ್ ಬದ್ಧ: ದಿಗ್ವಿಜಯ್ ಸಿಂಗ್

    ಭೋಪಾಲ್: ಪೌರಾಣಿಕ ಮಾರ್ಗ ‘ರಾಮಪಥ’ ನಿರ್ಮಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

    ಹಿಂದೂಗಳ ಆರಾಧ್ಯದೇವ ಶ್ರೀರಾಮ 14 ವರ್ಷಗಳ ವನವಾಸದ 11 ವರ್ಷ ಮಧ್ಯಪ್ರದೇಶ ಅರಣ್ಯ ಪ್ರದೇಶದಲ್ಲಿ ಸಂಚರಿಸಿದ ಎಂದು ಹೇಳಲಾಗುವ ಮಾರ್ಗವನ್ನು ಕಾಂಗ್ರೆಸ್ ಸರ್ವೆ ನಡೆಸಿ ನಿರ್ಮಾಣ ಮಾಡಲಾಗುತ್ತದೆ. ರಾಮಪಥದ ಜೊತೆಗೆ ‘ನರ್ಮದಾ ಪರಿಕ್ರಮ ಪಥ’ ನಿರ್ಮಿಸಲಾಗುವುದು. ರಾಮಪಥ ನಿರ್ಮಾಣಕ್ಕಾಗಿ ಜನರು ಕಾಂಗ್ರೆಸ್ ಅಧಿಕಾರಕ್ಕೆ ತರಬೇಕಿದೆ ಎಂದು ದಿಗ್ವಿಜಯ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ.

    ಆಡಳಿತ ಬಿಜೆಪಿ ಸರ್ಕಾರ ಚುನಾವಣೆಗೂ ಮುನ್ನ ರಾಮಪಥ ನಿರ್ಮಿಸಲಾಗುವುದು ಎಂದು ಭರವಸೆ ನೀಡಿತ್ತು. ಅಧಿಕಾರ ಗದ್ದುಗೆ ಹಿಡಿದ ಬಿಜೆಪಿ ಕೊಟ್ಟ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಮಧ್ಯಪ್ರದೇಶದ ಗಡಿ ಭಾಗದವರೆಗೂ ರಾಮಪಥವನ್ನು ನಾವು ನಿರ್ಮಿಸುತ್ತೇವೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಗೋ ಮಾತೆಯ ಬಗ್ಗೆ ದೊಡ್ಡ ಮಾತುಗಳನ್ನಾಗಿ ಗೆದ್ದ ಬಳಿಕ ಮರೆತು ಬಿಡ್ತಾರೆ. ಇದೂವರೆಗೂ ರಾಜ್ಯದಲ್ಲಿ ಗೋ ಶಾಲೆ ನಿರ್ಮಿಸಲು ವಿಫಲವಾಗಿದ್ದು, ಸರ್ಕಾರದ ಆಡಳಿತ ವೈಖರಿಗೆ ಕೈಗನ್ನಡಿಯಾಗಿದೆ. ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದ್ರೆ ಗೋವುಗಳಿಗಾಗಿ ಪ್ರತಿ ಪಂಚಾಯ್ತಿ ಮಟ್ಟದಲ್ಲಿ ‘ಗೋ ಶಾಲೆ’ ಆರಂಭಿಸಲಾಗುವುದು ಎಂದು ದಿಗ್ವಿಜಯ್ ಸಿಂಗ್ ಭರವಸೆ ನೀಡಿದರು.

    ಏನಿದು ನರ್ಮದಾ ಪರಿಕ್ರಮ ಪಥ?
    ನರ್ಮದಾ ನದಿಗೆ ಪ್ರದಕ್ಷಿಣೆ ಹಾಕುವ ಧಾರ್ಮಿಕ ಪದ್ಧತಿಗೆ ‘ನರ್ಮದಾ ಪರಿಕ್ರಮ’ ಎಂದು ಕರೆಯುತ್ತಾರೆ. ಒಟ್ಟು 3,300 ಕಿ.ಮೀ. ಉದ್ದದ ನರ್ಮದಾ ನದಿಗೆ ಭಕ್ತರು ಪ್ರದಕ್ಷಿಣೆ ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ಭಕ್ತಾದಿಗಳಿಗಾಗಿ ಸುಸಜ್ಜಿತ ಮತ್ತು ಮೂಲಭೂತ ಸೌಕರ್ಯಯುಳ್ಳ ಮಾರ್ಗ ಅಭಿವೃದ್ಧಿ ಆಗಬೇಕಿದೆ.

    ಅಕ್ಟೋಬರ್ 1, 2017ರಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ‘ರಾಮ ಗಮನ ಪಥ’ ನಿರ್ಮಿಸುತ್ತೇವೆ ಎಂಬ ಭರವಸೆ ನೀಡಿದ್ದರು. ರಾಮಪಥ ಮಧ್ಯಪ್ರದೇಶದ ಸಾತ್ನಾ, ಪನ್ನಾ, ಶಾದೋಲ್, ಜಬಲ್ಪುರ ಮತ್ತು ವಿದಿಶಾ ಜಿಲ್ಲೆಗಳಲ್ಲಿ ನಿರ್ಮಾಣ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv