Tag: ನರ್ತನ್

  • ಯಶ್ ಮುಂದಿನ ಸಿನಿಮಾಗೆ ಕರಾವಳಿ ಸುಂದರಿ ಜೋಡಿ

    ಯಶ್ ಮುಂದಿನ ಸಿನಿಮಾಗೆ ಕರಾವಳಿ ಸುಂದರಿ ಜೋಡಿ

    ಭಾರತೀಯ ಚಿತ್ರರಂಗದಲ್ಲಿ ಸದ್ಯ ಸದ್ದು ಮಾಡುತ್ತಿರುವ ಸೂಪರ್ ಸ್ಟಾರ್ ಅಂದ್ರೆ ನ್ಯಾಷನಲ್ ಸ್ಟಾರ್ ಯಶ್, `ಕೆಜಿಎಫ್ 2′ ಭರ್ಜರಿ ಹಿಟ್ ಆದ ಮೇಲೆ ಎಲ್ಲರ ಗಮನ ಯಶ್ ಮುಂದಿನ ಚಿತ್ರದ ಮೇಲಿದೆ. ರಾಕಿಭಾಯ್ ನೆಕ್ಸ್ಟ್‌ ಸಿನಿಮಾ ಯಾವುದು, ಅವರ ಮುಂದಿನ ಸಿನಿಮಾಗೆ ನಾಯಕಿ ಯಾರು ಎಂಬ ಎಲ್ಲಾ ಪ್ರಶ್ನೆಗೆ ಇಲ್ಲಿದೆ ಡೀಟೈಲ್ಸ್.‌

    ಚಿತ್ರರಂಗದಲ್ಲಿ ಯಶ್ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. `ಕೆಜಿಎಫ್ 2′ ಸಕ್ಸಸ್ ನಂತರ ಮುಂದಿನ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. `ಮಫ್ತಿ’ ನಿರ್ದೇಶಕ ನರ್ತನ್ ಮತ್ತು ಯಶ್ ಕಾಂಬಿನೇಷನ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬರೋದಕ್ಕೆ ತೆರೆ ಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಸದ್ಯದಲ್ಲೇ ಈ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಲಿದೆ.

    ನ್ಯಾಷನಲ್ ಸ್ಟಾರ್ ಯಶ್ ಮತ್ತು ಮಪ್ತಿ ನಿರ್ದೇಶಕ ನರ್ತನ್ ಸಿನಿಮಾಗೆ ಕೆವಿಎನ್ ಚಿತ್ರ ನಿರ್ಮಾಣ ಸಂಸ್ಥೆ ಕೈ ಜೋಡಿಸಿದೆ. ಇದರ ಬೆನ್ನಲ್ಲೆ ರಾಕಿಂಗ್ ಸ್ಟಾರ್ ಯಶ್‌ಗೆ ನಾಯಕಿ ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿರೋದ್ರಿಂದ ದಕ್ಷಿಣದ ಸ್ಟಾರ್ ನಾಯಕಿಯನ್ನೇ ಆಯ್ಕೆ ಮಾಡಿದ್ದಾರೆ. ಕರಾವಳಿ ಮೂಲದ ನಟಿ ದಕ್ಷಿಣ ಭಾರತದ ಬೊಟ್ಟಬೊಮ್ಮ ಸುಂದರಿ ಪೂಜಾ ಹೆಗ್ಡೆ ಯಶ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಪತ್ನಿ ನಯನತಾರಾ ತಪ್ಪಿಗೆ ಪತಿ ವಿಘ್ನೇಶ್ ಶಿವನ್ ಕ್ಷಮೆಯಾಚನೆ

    ನಟಿ ಪೂಜಾ ಹೆಗ್ಡೆ, ಕರ್ನಾಟಕದ ಮೂಲದವರಾಗಿದ್ದರೂ, ಬೆಳೆದಿದ್ದೆಲ್ಲಾ ಮುಂಬೈನಲ್ಲಿ ಸೌತ್ ಮತ್ತು ಬಾಲಿವುಡ್‌ನಲ್ಲಿ ಸಖತ್ ಬ್ಯುಸಿಯಿರೋ ಬ್ಯೂಟಿ ಇವರೆಗೂ ಒಂದೇ ಒಂದು ಕನ್ನಡ ಸಿನಿಮಾದಲ್ಲೂ ನಟಿಸಿಲ್ಲ. ಇದೀಗ ಆ ಕಾಲ ಕೂಡಿ ಬಂದಿದೆ. ಯಶ್‌ಗೆ ನಾಯಕಿಯಾಗುವ ಮೂಲಕ ಪೂಜಾ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಪೂಜಾ ನಿಜವಾಗಲೂ ಕನ್ನಡಕ್ಕೆ ಬರುತ್ತಾರಾ, ಯಶ್ ಜೊತೆ ಪೂಜಾ ಜೋಡಿ ಅದ್ಯಾವ ಮಟ್ಟಿಗೆ ಮೋಡಿ ಮಾಡಲಿದೆ ಅಂತಾ ಕಾದುನೋಡಬೇಕಿದೆ.

  • ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ

    ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ

    ಕೆಜಿಎಫ್ 2 ಸಿನಿಮಾದ ನಂತರ ಯಶ್ ಯಾರ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಚರ್ಚೆ ಹಲವು ತಿಂಗಳಿಂದ ನಡೆಯುತ್ತಿದೆ. ಕನ್ನಡದಲ್ಲಿ ಮಾಡುತ್ತಾರಾ? ಅಥವಾ ಬೇರೆ ಭಾಷೆ ಚಿತ್ರಗಳಿಗೆ ಮಣೆ ಹಾಕುತ್ತಾರೆ ಎನ್ನುವ ಲೆಕ್ಕಾಚಾರ ಕೂಡ ನಡೆದಿದೆ. ಈ ಚಿತ್ರಕ್ಕೆ ನಿರ್ದೇಶಕರು ಯಾರು ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಈ ನಡುವೆ ಖುಷಿ ವಿಷಯವೊಂದು ಸಿಕ್ಕಿದೆ. ಆದಷ್ಟು ಬೇಗ ಅಭಿಮಾನಿಗಳಿಗೆ ಯಶ್ ಶುಭ ಸುದ್ದಿ ಕೊಡಲಿದ್ದಾರೆ. ಇನ್ನೂ ಓದಿ : ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ

    ಕೆಜಿಎಫ್ 2 ನಂತರ ಯಶ್ ಅವರ ಚಿತ್ರಕ್ಕೆ ‘ಮಫ್ತಿ’ ಸಿನಿಮಾ ಖ್ಯಾತಿಯ ನರ್ತನ್ ನಿರ್ದೇಶನ ಮಾಡಲಿದ್ದಾರೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ಬ್ರೇಕ್ ಮಾಡಿತ್ತು. ಆನಂತರವು ಹಲವು ನಿರ್ದೇಶಕರ ಹೆಸರು ಕೇಳಿ ಬಂದವು. ಇದೀಗ ಮತ್ತೆ ಪಬ್ಲಿಕ್ ಟಿವಿ ಡಿಜಿಟಲ್ ಮತ್ತೊಂದು ಸುದ್ದಿಯನ್ನು ಬ್ರೇಕ್ ಮಾಡುತ್ತಿದೆ, ಮುಂದಿನ ಸಿನಿಮಾವನ್ನು ನರ್ತನ್ ಮಾಡುವುದೇ ಪಕ್ಕಾ ಆಗಿದೆ. ಸದ್ಯದಲ್ಲೇ ಚಿತ್ರತಂಡದಿಂದಲೇ ಈ ಸುದ್ದಿ ಅಧಿಕೃತಗೊಳ್ಳಲಿದೆ. ಇದನ್ನೂ ಓದಿ: ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರ

    ನರ್ತನ್ ಈಗಾಗಲೇ ಸ್ಕ್ರಿಪ್ಟ್ ಅನ್ನು ಅಂತಿಮಗೊಳಿಸಿದ್ದಾರೆ. ಯಶ್ ಕೂಡ ಅದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಮುಂದಿನ ಹಂತದ ತಯಾರಿ ಕೂಡ ನಡೆದಿದೆ. ಕೆಜಿಎಫ್ 2 ಭಾರೀ ಯಶಸ್ಸು ಕಂಡ ಹಿನ್ನೆಲೆಯಲ್ಲಿ ನರ್ತನ್ ಮತ್ತು ಯಶ್ ಮೇಲೆ ಗುರುತರ ಜವಾಬ್ದಾರಿ ಇರುವುದರಿಂದ, ಈ ಸಿನಿಮಾವನ್ನು ಹೆಚ್ಚಿನ ಕಾಳಜಿ ತಗೆದುಕೊಂಡು ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ಬೇಬಿ ಶವರ್‌ನಲ್ಲಿ ಮಿಂಚಿದ ಪ್ರಣೀತಾ ಸುಭಾಷ್

    ಕೆಜಿಎಫ್ 2 ಸಿನಿಮಾ ಐವತ್ತು ದಿನ ಪೂರೈಸಿದ ಹಿನ್ನೆಲೆಯಲ್ಲಿ ಯಶ್ ಅವರ ಹೊಸ ಸಿನಿಮಾ ಘೋಷಣೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಪಾರ್ಟಿ ಹೊರತಾಗಿ ಏನೂ ಆಗಲಿಲ್ಲ. ಯಶ್ ಅಭಿಮಾನಿಗಳಿಗೆ ಸಹಜವಾಗಿಯೇ ನಿರಾಸೆ ಆಗಿತ್ತು. ಅತೀ ಶೀಘ್ರದಲ್ಲೇ ಅಭಿಮಾನಿಗಳು ಖುಷಿ ನೀಡುವಂತಹ ಸುದ್ದಿಯನ್ನು ನೀಡಲಿದೆಯಂತೆ ಟೀಮ್ ಯಶ್.

  • ಕೆಜಿಎಫ್ 2 ಚಿತ್ರದ 50ನೇ ದಿನಕ್ಕೆ ಯಶ್ ನಟನೆಯ ಹೊಸ ಸಿನಿಮಾ ಅನೌನ್ಸ್?

    ಕೆಜಿಎಫ್ 2 ಚಿತ್ರದ 50ನೇ ದಿನಕ್ಕೆ ಯಶ್ ನಟನೆಯ ಹೊಸ ಸಿನಿಮಾ ಅನೌನ್ಸ್?

    ಕೆಜಿಎಫ್ 2 ಸಿನಿಮಾ ಯಶಸ್ಸಿನ ನಂತರ ಎಲ್ಲರ ಚಿತ್ರ ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ನೆಟ್ಟಿದೆ. ಈಗಾಗಲೇ ನಿರ್ದೇಶಕ ಪ್ರಶಾಂತ್ ನೀಲ್ ಎರಡು ಚಿತ್ರಗಳನ್ನು ಘೋಷಿಸಿ ಆಗಿದೆ. ಈಗಾಗಲೇ ಅವರು ಸಲಾರ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಗಿದ ನಂತರ ಜ್ಯೂನಿಯರ್ ಎನ್.ಟಿ.ಆರ್ ಗಾಗಿ ಅವರು ಸಿನಿಮಾ ಮಾಡಲಿದ್ದಾರೆ ಎನ್ನುವುದು ಮೊನ್ನೆಯಷ್ಟೇ ನಿಕ್ಕಿ ಆಗಿದೆ. ಆದರೆ, ಯಶ್ ನಡೆ ಮಾತ್ರ ಭಾರೀ ಕುತೂಹಲ ಮೂಡಿಸಿದೆ. ಇದನ್ನೂ ಓದಿ : ‘ಧಾಕಡ್’ ಸೋಲಿಗೆ ಕಂಗೆಟ್ಟ ಕಂಗನಾ ರಣಾವತ್ : ವೀಕೆಂಡ್ ನಲ್ಲೂ ವೀಕ್ ಕಲೆಕ್ಷನ್

    ಕೆಜಿಎಫ್ 2 ಸಿನಿಮಾದ ನಿರ್ಮಾಪಕರು ನಾಲ್ಕು ಸಿನಿಮಾಗಳನ್ನು ಘೋಷಿಸಿದ್ದರೆ, ಪ್ರಶಾಂತ್ ನೀಲ್ ಎರಡು ಚಿತ್ರಗಳನ್ನೂ ಈಗಾಗಲೇ ಅನೌನ್ಸ್ ಮಾಡಿದ್ದಾರೆ. ಅಲ್ಲದೇ, ಮತ್ತೊಂದು ಚಿತ್ರವನ್ನು ಶ್ರೀಮುರುಳಿ ಚಿತ್ರ ಮಾಡುವುದಾಗಿ ಹೇಳಿದ್ದಾರೆ. ಆದರೆ, ಯಶ್ ಮಾತ್ರ ತಮ್ಮ ಮುಂದಿನ ಸಿನಿಮಾ ಯಾರ ಜೊತೆ ಎನ್ನುವ ಗುಟ್ಟನ್ನು ಮಾತ್ರ ಇನ್ನೂ ಬಿಟ್ಟುಕೊಟ್ಟಿಲ್ಲ. ಇದನ್ನೂ ಓದಿ : ಶೀಘ್ರದಲ್ಲೇ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಸಿನಿಮಾ ಶುರು : ಯೋಗರಾಜ್ ಭಟ್ ನಿರ್ದೇಶಕ

    ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ನಿರ್ದೇಶಕ ನರ್ತನ್ ಜತೆ ಯಶ್ ಸಿನಿಮಾ ಮಾಡಬೇಕಿತ್ತು. ಆದರೆ, ಅದು ತಡವಾಗುತ್ತಲೇ ಬರುತ್ತಿದೆ. ಬಹುಶಃ ಯಶ್ ಅವರ ಮುಂದಿನ ಸಿನಿಮಾ ಇದೇ ಎನ್ನಲಾಗುತ್ತಿದೆ. ಈಗಾಗಲೇ ನರ್ತನ್ ಮತ್ತು ಟೀಮ್ ಹಲವು ಬದಲಾವಣೆಗಳ ಜತೆ ಕಥೆಯನ್ನು ರೆಡಿ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಯಶ್ ಕೂಡ ಕಥೆ ಹೆಣೆಯುವಲ್ಲಿ ತಮ್ಮ ಸಲಹೆಗಳನ್ನು ನೀಡಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಇದನ್ನೂ ಓದಿ: ವೀಲ್‍ಚೇರ್ ರೋಮಿಯೋಗೆ ಮಯೂರಿ ಜೂಲಿಯಟ್ – ‘ಆ’ ಸವಾಲಿನ ಪಾತ್ರ ಒಪ್ಪಿಕೊಂಡಿದ್ದರ ಹಿಂದಿದೆ ಒಂದು ಕಥಾನಕ!

    ಈ ಎಲ್ಲವುಗಳ ನಡುವೆ ಕೆಜಿಎಫ್ 2 ರಿಲೀಸ್ ಆಗಿ 50 ದಿನ ಪೂರೈಸುವ ಸಂದರ್ಭದಲ್ಲಿ ಯಶ್ ತಮ್ಮ ಮುಂದಿನ ಚಿತ್ರವನ್ನು ಅನೌನ್ಸ್ ಮಾಡಲಿದ್ದಾರೆ ಎನ್ನುವುದು ಈಗಿರುವ ಲೆಟೆಸ್ಟ್ ಮಾಹಿತಿ. ನರ್ತನ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಕೆವಿಎನ್ ಪ್ರೊಡಕ್ಷನ್ ಚಿತ್ರವನ್ನು ನಿರ್ಮಾಣ ಮಾಡಲಿದೆ ಎನ್ನುವುದು ಸಿಕ್ಕಿರುವ ಮಾಹಿತಿ. ಆದರೆ, ಈ ಕುರಿತು ಈವರೆಗೂ ಯಾರಿಗೂ ಅಧಿಕೃತವಾಗಿ ಹೇಳಿಕೊಂಡಿಲ್ಲ.

  • ಯಶ್ ಮುಂದಿನ ಚಿತ್ರಕ್ಕೆ ನಿರ್ದೇಶಕ ನರ್ತನ್ ಪಕ್ಕಾ?

    ಯಶ್ ಮುಂದಿನ ಚಿತ್ರಕ್ಕೆ ನಿರ್ದೇಶಕ ನರ್ತನ್ ಪಕ್ಕಾ?

    ಕೆಜಿಎಫ್ 2 ಸಿನಿಮಾ ಸಕ್ಸಸ್ ನಂತರ ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಚರ್ಚೆ ನಡೆಯುತ್ತಿದೆ. ಯಾರ ನಿರ್ದೇಶನದಲ್ಲಿ ಯಶ್ ನಟಿಸಲಿದ್ದಾರೆ ಎನ್ನುವುದು ಹಾಟ್ ಟಾಪಿಕ್ ಆಗಿದೆ. ಯಶ್ ವಲಯದಿಂದ ಕೇಳಿ ಬರುತ್ತಿರುವ ಸುದ್ದಿ ಎಂದರೆ,  ಮಫ್ತಿ ಚಿತ್ರದ ನಿರ್ದೇಶಕ ನರ್ತನ್ ಅವರೇ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದೇ ಖಚಿತವಾದ ಸುದ್ದಿಯೂ ಆಗಲಿದೆಯಂತೆ. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು

    ಈ ಹಿಂದಿ ನರ್ತನ್ ಕೂಡ ಈ ಕುರಿತು ಮಾತನಾಡಿ, ಯಶ್ ಅವರ ಜೊತೆ ಮಾತುಕತೆ ಆಗಿದ್ದು ನಿಜ, ಅವರಿಗಾಗಿ ಕಥೆಯನ್ನು ಮಾಡಿಕೊಂಡಿದ್ದೂ ಸತ್ಯ. ಆದರೆ, ಯಾವಾಗ ಸಿನಿಮಾ ಆಗುತ್ತದೆ ಎಂದು ಗೊತ್ತಿಲ್ಲ. ನಿರ್ದಿಷ್ಟವಾಗಿ ದಿನಾಂಕವನ್ನು ಹೇಳುವುದು ಸದ್ಯಕ್ಕೆ ಸಾಧ್ಯವಿಲ್ಲ ಎಂದಿದ್ದರು. ಈ ನಂತರ ಯಶ್ ಮತ್ತು ನರ್ತನ್ ಹಲವು ಬಾರಿ ಭೇಟಿ ಮಾಡಿದ ವಿಚಾರವೂ ಸುದ್ದಿಯಾಗಿತ್ತು. ಅದರಲ್ಲೂ ಲಾಕ್ ಡೌನ್ ಸಮಯದಲ್ಲಿ ನರ್ತನ್ ಅವರು ಯಶ್ ಆಫೀಸಿಗೆ ಬಂದು ಕಥೆಯನ್ನು ಚರ್ಚಿಸುತ್ತಿದ್ದರು ಎನ್ನುವುದು ಕೂಡ ಗುಟ್ಟಾಗಿ ಉಳಿದಿಲ್ಲ. ಇದನ್ನೂ ಓದಿ : ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

    KGF 2 Yash (4)

    ಕೆಜಿಎಫ್  ಸಿನಿಮಾ ಯಶಸ್ಸಿನಂತರ ಯಶ್ ಅವರ ಮುಂದಿನ ಚಿತ್ರವನ್ನು ಪುರಿ ಜಗನ್ನಾಥ್ ಮಾಡಲಿದ್ದಾರೆ ಎನ್ನುವ ಸುದ್ದಿಯೂ ಹರಡಿತ್ತು. ಆದರೆ, ಅದಕ್ಕೂ ಮುನ್ನ ನರ್ತನ್ ಹೆಸರು ಕೇಳಿ ಬಂದಿತ್ತು. ನಿನ್ನೆಯಷ್ಟೇ ಗೆಳೆಯನ ಮದುವೆ ಸಮಾರಂಭಕ್ಕೆ ಯಶ್ ಹೋಗಿದ್ದರು. ಅಲ್ಲಿ ನರ್ತನ್ ಕೂಡ ಯಶ್ ಜೊತೆಗಿದ್ದರು. ಹಾಗಾಗಿ ನರ್ತನ್ ಸಿನಿಮಾ ಬಹುತೇಕ ಖಚಿತ ಎನ್ನುವ ಸುದ್ದಿಯಿದೆ.  ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50

    ಪುರಿ ಜಗನ್ನಾಥ್, ನರ್ತನ್ ಹೀಗೆ ಹಲವು ನಿರ್ದೇಶಕರ ಹೆಸರು ಕೇಳಿ ಬಂದರೂ, ಯಶ್ ಮಾತ್ರ ಈ ಕುರಿತು ಯಾವುದೇ ಹೇಳಿಕೆ ಕೊಟ್ಟಿಲ್ಲ. ಆದರೆ, ಮುಂದಿನ ಸಿನಿಮಾದ ಕಥೆಯ ಕೆಲಸ ನಡೆಯುತ್ತಿದೆ. ಒಂದೊಳ್ಳೆ ಕಥೆಯೊಂದಿಗೆ ಮತ್ತೆ ಬರುತ್ತೇನೆ ಎಂದು ಹೇಳಿದ್ದು ಬಿಟ್ಟರೆ, ಉಳಿದಂತೆ ಎಲ್ಲವೂ ಸಸ್ಪೆನ್ಸ್.

  • ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

    ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

    ಕೆಜಿಎಫ್ 2 ನಂತರ ಭಾರತೀಯ ಸಿನಿಮಾ ರಂಗದಲ್ಲಿ ಕೇಳಿ ಬರುತ್ತಿರುವ ಒಂದೇ ಪ್ರಶ್ನೆ, ಯಶ್ ನಟನೆಯ ಮುಂದಿನ ಸಿನಿಮಾ ಯಾವುದು? ನಿರ್ದೇಶಕರು ಯಾರು? ಯಾವ ಕಥೆಯನ್ನು ಅವರು ಒಪ್ಪಲಿದ್ದಾರೆ ಎನ್ನುವುದು. ಹಲವು ಬಾರಿ ಸ್ವತಃ ಯಶ್ ಅವರಿಗೆ ಇಂಥದ್ದೊಂದು ಪ್ರಶ್ನೆಯನ್ನು ಮುಂದಿಟ್ಟಾಗಿ ‘ಕಥೆ ಗಟ್ಟಿಯಾಗುತ್ತಿದೆ. ದೊಡ್ಡದಾಗಿಯೇ ಕನಸು ಕಾಣುತ್ತಿದ್ದೇವೆ. ಸೂಕ್ತ ಸಮಯದಲ್ಲಿ ಹೇಳುತ್ತೇನೆ’ ಎಂದು. ಇದರ ಹೊರತಾಗಿ ಅವರು ಬೇರೆ ಏನೂ ಹೇಳಿಲ್ಲ. ಇದನ್ನೂ ಓದಿ : ಶತ್ರುಘ್ನಾ ಸಿನ್ಹಾ ಮೇಲೆ ಲೈಂಗಿಕ ಹಗರಣ ದಂಧೆ ಆರೋಪ : ನಟಿ ವಿರುದ್ಧ ತಿರುಗಿ ಬಿದ್ದ ಸಿನ್ಹಾ ಕುಟುಂಬ

    ಆದರೆ, ಯಶ್ ಮುಂದಿನ ಸಿನಿಮಾ ಕುರಿತಾಗಿ ಈಗಷ್ಟು ಸುದ್ದಿ ಸಿಕ್ಕಿವೆ. ಗಾಂಧಿನಗರದಲ್ಲಿ ಭಾರೀ ಬಜೆಟ್ ಚಿತ್ರಗಳನ್ನು ಮಾಡುತ್ತಿರುವ ಮತ್ತು ಆರ್.ಆರ್.ಆರ್ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಿಸಿರುವ ಕೆವಿಎನ್ ಪ್ರೊಡಕ್ಷನ್ ಯಶ್ ಅವರ ಸಿನಿಮಾ ಮಾಡಲಿದೆ ಎನ್ನುವ ಸುದ್ದಿ ಕೇಳಿ ಬಂದಿದೆ. ಈಗಾಗಲೇ ಮಾತುಕತೆ ಗೋವಾದಿಂದ ಶುರುವಾಗಿದೆ ಎನ್ನುತ್ತಿವೆ ಮೂಲಗಳು. ಇದನ್ನೂ ಓದಿ : ಸ್ಟಾರ್ ನಟಿ ಪೂಜಾ ಹೆಗಡೆ ನಿದ್ದೆಗೆಡಿಸಿದ ಸಾಲು ಸಾಲು ಸೋಲು

    ಮೊನ್ನೆಯಷ್ಟೇ ಯಶ್ ಅವರು ಗೋವಾ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು. ಆ ಸಮಯದಲ್ಲಿ ಕೆವಿಎನ್ ಪ್ರೊಡಕ್ಷನ್ ವೆಂಕಟ್ ಕೊನಂಕಿ ಕೂಡ ಹಾಜರಿದ್ದರು. ಹೀಗಾಗಿ ಅವತ್ತು ಒಂದು ಹಂತದ ಮಾತುಕತೆ ಕೂಡ ಮುಗಿದಿದೆ ಎನ್ನುವ ಮಾಹಿತಿ ಸಿಕ್ಕಿದೆ. ಕೆವಿಎನ್ ಪ್ರೊಡಕ್ಷನ್ ಯಶ್ ಅವರ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡಿದರೆ ನರ್ತನ್ ಅವರು ನಿರ್ದೇಶನ ಈ ಚಿತ್ರಕ್ಕೆ ಇರಲಿದೆ ಎನ್ನುವುದು ಪ್ರಾರ್ಥಮಿಕ ಮಾಹಿತಿ. ಆದರೆ, ಅಧಿಕೃತವಾಗಿ ಯಶ್ ಅವರಾಗಲಿ ಕೆವಿಎನ್ ಪ್ರೊಡಕ್ಷನ್ ಆಗಲಿ ಈ ಕುರಿತು ಹೇಳಿಕೊಂಡಿಲ್ಲ.

  • ಕೆಜಿಎಫ್ ನಂತರ ನೌಕಾಧಿಕಾರಿ ಪಾತ್ರದಲ್ಲಿ ರಾಕಿಂಗ್ ಸ್ಟಾರ್

    ಕೆಜಿಎಫ್ ನಂತರ ನೌಕಾಧಿಕಾರಿ ಪಾತ್ರದಲ್ಲಿ ರಾಕಿಂಗ್ ಸ್ಟಾರ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ದಿ ಮೋಸ್ಟ್ ಎಕ್ಸ್‍ಪೆಕ್ಟೆಡ್ ಸಿನಿಮಾ ಕೆಜಿಎಫ್-2 ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಯಶ್ ಮುಂದಿನ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ನಟ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್-2 ಸಿನಿಮಾದ ನಂತರ ನೌಕಾ ನೆಲೆಯ ಅಧಿಕಾರಿಯಾಗಿ ಮುಂದಿನ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೀಗ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ಪ್ರತಿ ಸಿನಿಮಾದಲ್ಲಿ ಭಿನ್ನ ಪಾತ್ರಗಳಲ್ಲಿ ಹಾಗೂ ಮಾಸ್ ಲುಕ್‍ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಮನಗೆದ್ದ ರಾಕಿ ಬಾಯ್ ಯಶ್, ಇದೀಗ ನಿರ್ದೇಶಕ ನರ್ತನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಕೂಡ ದೊಡ್ಡ ಬಜೆಟ್‍ನಲ್ಲಿ ನಿರ್ಮಾಣವಾಗುತ್ತಿದ್ದು, ಈ ಸಿನಿಮಾದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಚರ್ಚೆ ನಡೆಯುತ್ತಿದೆ.

    ಈ ಮುನ್ನ ನಟ ಡಾ.ಶಿವರಾಜ್‍ಕುಮಾರ್ ಹಾಗೂ ಶ್ರೀಮುರುಳಿ ಕಾಂಬಿನೇಷನ್‍ನಲ್ಲಿ ಮೂಡಿಬಂದಿದ್ದ ಮಫ್ತಿ ಸಿನಿಮಾಕ್ಕೆ ನರ್ತನ್ ನಿರ್ದೇಶನ ಮಾಡಿದ್ದರು. ಇದೀಗ್ ರಾಕಿ ಬಾಯ್ ಯಶ್ ಮುಂದಿನ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಈ ಸಿನಿಮಾದಲ್ಲಿ ಖಡಕ್ ನೌಕಾ ನೆಲೆಯ ಅಧಿಕಾರಿ ಲುಕ್‍ನಲ್ಲಿ ಕಾಣಿಸಿಕೊಳ್ಳಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಅಭಿಮಾನಿಗಳು ಎಡಿಟ್ ಮಾಡಿರುವ ಯಶ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈಗಾಗಲೇ ಬೆಳ್ಳಿ ಪರದೆ ಮೇಲೆ ಬರಬೇಕಿದ್ದ ಕೆಜಿಎಫ್-2 ಸಿನಿಮಾ ಕೊರೊನಾದಿಂದ ಕೊಂಚ ತಡವಾಗಿ ಬಿಡುಗಡೆಯಾಗಲಿದೆ. ಇನ್ನೂ ಈ ಸಿನಿಮಾದಲ್ಲಿ ರಗಡ್ ಹಾಗೂ ಮಾಸ್ ಲುಕ್‍ನಲ್ಲಿ ಯಶ್ ಕಾಣಿಸಿಕೊಂಡಿದ್ದು, ಯಶ್‍ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ, ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಬಾಲಿವುಡ್ ನಟ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ಮಾಳವಿಕ ಅವಿನಾಶ್ ಸೇರಿದಂತೆ ದೊಡ್ಡ ತಾರ ಬಳಗವೇ ಇರಲಿದೆ. ಇದನ್ನೂ ಓದಿ:  ಕೆಜಿಎಫ್-2ಗೆ ದೀಪಾ ಹೆಗ್ಡೆ ವಾಯ್ಸ್ ಡಬ್ಬಿಂಗ್ – ಫೋಟೋ ವೈರಲ್