Tag: ನರ್ತನ್

  • ಬಾಲಿವುಡ್ ಆಳಿ, ಹಾಲಿವುಡ್ ಅಂಗಳಕ್ಕೂ ಕಾಲಿಟ್ರಾ ರಾಕಿಭಾಯ್ ಯಶ್

    ಬಾಲಿವುಡ್ ಆಳಿ, ಹಾಲಿವುಡ್ ಅಂಗಳಕ್ಕೂ ಕಾಲಿಟ್ರಾ ರಾಕಿಭಾಯ್ ಯಶ್

    ಕೆಜಿಎಫ್ (KGF) ಸಿನಿಮಾದ ಮೂಲಕ ಭಾರತೀಯ ಸಿನಿಮಾ ರಂಗವನ್ನೇ ತನ್ನತ್ತ ಸೆಳೆದುಕೊಂಡಿರುವ ನಟ ಯಶ್, ಮುಂದಿನ ಹೆಜ್ಜೆಯನ್ನು ಜಾಣ್ಮೆಯಿಂದ ಇಡುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಕೆಜಿಎಫ್ ಸಿನಿಮಾಗಿಂತಲೂ ಒಂದು ಹೆಜ್ಜೆ ಮುಂದಿಡುವ ಜಾಣ್ಮೆ ನಡೆಯದು ಎಂದು ಅವರ ಆಪ್ತರು ಮಾತನಾಡಿಕೊಳ್ಳುತ್ತಿದ್ದರು. ಈ ಮಾತುಗಳಿಗೆ ಪುಷ್ಠಿ ಅನ್ನುವಂತೆ ಯಶ್ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಹಾಲಿವುಡ್ (Hollywood)ನ ಖ್ಯಾತ ಸಾಹಸ ನಿರ್ದೇಶಕ ಹಾಗೂ ಸಿನಿಮಾ ನಿರ್ದೇಶಕ ಜೆ.ಜೆ. ಪೆರ್ರಿಯನ್ನು (J.J. Perry) ಭೇಟಿ ಮಾಡಿದ್ದಾರೆ.

    ಹಾಲಿವುಡ್ ಸಿನಿಮಾ ರಂಗದಲ್ಲಿ ಜೆಜೆ ಪೆರ್ರಿ ಅವರದ್ದು ಬಹುದೊಡ್ಡ ಹೆಸರು. ಸಾವಿರಾರು ಕೋಟಿ ಬಜೆಟ್ ಸಿನಿಮಾಗಳಿಗೆ ಸ್ಟಂಟ್ ನಿರ್ದೇಶಕರಾಗಿ ಹಾಗೂ ಇತ್ತೀಚಿನ ದಿನಗಳಲ್ಲಿ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಆ್ಯಕ್ಷನ್ ದೃಶ್ಯಗಳಿಗೆ ಹೇಳಿ ಮಾಡಿಸಿದ ನಿರ್ದೇಶಕ ಜೆಜೆ. ಸದ್ದಿಲ್ಲದೇ ಯಶ್ (Yash) ಅವರು ಜೆಜೆ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಈ ಭೇಟಿ ಅಮೆರಿಕಾದಲ್ಲಿ ನಡೆದದ್ದು, ಕೆಲ ದಿನಗಳ ಹಿಂದೆಯಷ್ಟೇ ಈ ಭೇಟಿ ನಡೆದಿದೆ. ಅವರನ್ನು ಖುದ್ದಾಗಿ ಭೇಟಿ ಆಗಲೆಂದು ಯಶ್ ಅಮೆರಿಕಾಗೆ ತೆರಳಿದ್ದರು. ಇದನ್ನೂ ಓದಿ:ಗನ್ ಹಿಡಿದು ಫೀಲ್ಡಿಗಿಳಿದ ರಾಕಿಭಾಯ್: ಮುಂದಿನ ಸಿನಿಮಾಗೆ ಯಶ್ ತಯಾರಿ

    ಅಂದುಕೊಂಡಂತೆ ಆಗಿದ್ದರೆ ನರ್ತನ್ (Narthan) ನಿರ್ದೇಶನದಲ್ಲಿ ಯಶ್ ನಟಿಸಬೇಕಿತ್ತು. ಇನ್ನೇನು ಈ ಸಿನಿಮಾ ಸೆಟ್ಟೇರಲಿದೆ ಎನ್ನುವ ಹೊತ್ತಿನಲ್ಲಿ ಯಶ್ ಮನಸು ಬದಲಾಯಿಸಿದರು ಎಂದು ಹೇಳಲಾಗುತ್ತಿದೆ. ಹಾಗಾಗಿ ಸದ್ಯಕ್ಕೆ ಈ ಕಾಂಬಿನೇಷನ್ ನಲ್ಲಿ ಸಿನಿಮಾ ಅನುಮಾನ. ಈ ನಡುವೆ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಅವರ ಹೆಸರೂ ಕೇಳಿ ಬಂತು. ಶಂಕರ್ ಸದ್ಯ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಹಾಗಾದರೆ, ಯಶ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿದೆ.

    ಅಮೆರಿಕಾಗೆ (America) ಹೋಗಿ ಜೆಜೆ ಅವರನ್ನು ಯಶ್ ಭೇಟಿ ಮಾಡಿ ಬಂದಿದ್ದಾರೆ. ಜೆಜೆ ಎದುರು ಗನ್ ಶೂಟ್ ಮಾಡಿ, ತಾನೆಷ್ಟು ಶಾರ್ಪ್ ಎನ್ನುವುದನ್ನು ತೋರಿಸಿದ್ದಾರೆ. ಜೆಜೆ ಭೇಟಿಯ ಹಿಂದೆ ಹೊಸ ಸಿನಿಮಾದ ಮಾತುಕತೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾದರೆ, ಯಶ್ ಹಾಲಿವುಡ್ ಗೆ ಹೋಗುತ್ತಾರಾ ಅಥವಾ ಭಾರತೀಯ ಸಿನಿಮಾ ರಂಗಕ್ಕೆ ಅವರನ್ನೇ ಕರೆತರುತ್ತಾರಾ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಘೋಷಣೆಗೆ ದಿನಗಣನೆ: ಸೆ.2ಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್

    ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಘೋಷಣೆಗೆ ದಿನಗಣನೆ: ಸೆ.2ಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಕೆಜಿಎಫ್ 2 ನಂತರ ರಾಕಿಂಗ್ ಸ್ಟಾರ್ ಯಶ್ ಯಾವ ಮತ್ತು ಯಾರ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನುವುದು ಸಸ್ಪೆನ್ಸ್ ಆಗಿಯೇ ಉಳಿದಿದೆ. ನರ್ತನ್, ಶಂಕರ್ ಸೇರಿದಂತೆ ಹಲವು ನಿರ್ದೇಶಕರ ಚಿತ್ರಗಳ ಹೆಸರು ಕೇಳಿ ಬಂದರೂ, ಯಾವುದೂ ಅಂತಿಮವಾಗಿಲ್ಲ. ಅಲ್ಲದೇ, ಹಲವು ನಿರ್ಮಾಪಕರು ಕೂಡ ಯಶ್ ಸಿನಿಮಾ ಮಾಡಲು ಮುಂದೆ ಬಂದರೂ, ರಾಕಿಭಾಯ್ ಮಾತ್ರ ಮೌನಕ್ಕೆ ಜಾರಿದ್ದಾರೆ. ಹಾಗಾಗಿ ಮುಂದಿನ ಸಿನಿಮಾ ಯಾವುದು ಎನ್ನುವುದು ಯಕ್ಷಪ್ರಶ್ನೆಯಾಗಿದೆ.

    ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ನರ್ತನ್ ನಿರ್ದೇಶನದ ಸಿನಿಮಾ ಹೆಸರು ಘೋಷಣೆ ಆಗಬೇಕಿತ್ತು. ಕಳೆದ ಎರಡು ವರ್ಷಗಳಿಂದ ಯಶ್ ಗಾಗಿಯೇ ನರ್ತನ್ ಕಥೆ ಬರೆಯುತ್ತಿದ್ದಾರೆ. ಇದೇ ಸಿನಿಮಾ ಅಂತಿಮವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಆ ಸಿನಿಮಾವನ್ನೂ ಯಶ್ ಮುಂದೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಮುಂದಿನ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಮೂಡಿದೆ.   ಇದನ್ನೂ ಓದಿ:ಊಟದಲ್ಲಿನ ಗರಂ ಮಸಾಲಾ ಥರ ಸೋನು ಶ್ರೀನಿವಾಸ್ ಗೌಡ: ಹೀಗ್ಯಾಕೆ ಅಂದ್ರು ಬಿಗ್ ಬಾಸ್ ಮನೆಮಂದಿ

    ಸದ್ಯ ಗಾಂಧಿನಗರದಲ್ಲಿ ಮತ್ತೊಂದು ಸುದ್ದಿ ಓಡಾಡುತ್ತಿದ್ದು, ಸೆಪ್ಟಂಬರ್ 2 ರಂದು ಯಶ್ ತಮ್ಮ ಹೊಸ ಸಿನಿಮಾವನ್ನು ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂತಹ ಸುದ್ದಿಗಳು ಈಗಾಗಲೇ ಹಲವು ಬಾರಿ ಬಂದರೂ, ಈ ಬಾರಿ ಮಿಸ್ ಆಗುವುದಕ್ಕೆ ಚಾನ್ಸೇ ಇಲ್ಲ ಎಂದು ಹೇಳಲಾಗುತ್ತಿದೆ. ಸೆಪ್ಟಂಬರ್ 2 ರಂದು ರಾಕಿ ಭಾಯ್ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿಯನ್ನೇ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಾರಿಯಾದರೂ ಸುದ್ದಿ ನಿಜವಾಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 

    Live Tv
    [brid partner=56869869 player=32851 video=960834 autoplay=true]

  • ಕನ್ನಡದಿಂದ ಕೈತಪ್ಪಿ ಹೋಗ್ತಾರಾ ನ್ಯಾಷನಲ್ ಸ್ಟಾರ್ ಯಶ್?

    ಕನ್ನಡದಿಂದ ಕೈತಪ್ಪಿ ಹೋಗ್ತಾರಾ ನ್ಯಾಷನಲ್ ಸ್ಟಾರ್ ಯಶ್?

    ಕೆಜಿಎಫ್ 2 ಸಿನಿಮಾದ ಯಶಸ್ಸಿನ ನಂತರ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ರಾಶಿ ರಾಶಿ ಗಾಸಿಪ್ ಗಳು ಗಾಂಧಿನಗರದಲ್ಲಿ ಹರಿದಾಡುತ್ತಿವೆ. ಅವರ ಮುಂದಿನ ಸಿನಿಮಾ ನರ್ತನ್ ಮಾಡಲಿದ್ದಾರೆ ಎನ್ನುವುದರಿಂದ ಹಿಡಿದು, ಅವರು ತಮಿಳು ನಿರ್ದೇಶಕ ಶಂಕರ್ ಅವರ ಚಿತ್ರಕ್ಕೂ ಸಹಿ ಮಾಡಿದ್ದಾರೆ ಎನ್ನುವತನಕ ಸುದ್ದಿಗಳಿವೆ. ಆದರೆ, ಯಶ್ ಈವರೆಗೂ ಹೊಸ ಸಿನಿಮಾದ ಬಗ್ಗೆ ತುಟಿ ಬಿಚ್ಚಿಲ್ಲ.

    ಈಗ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಹೊಸ ಸುದ್ದಿ ಹರಡಿದೆ. ಸದ್ಯಕ್ಕೆ ನರ್ತನ್ ಅವರ ಸಿನಿಮಾದಲ್ಲಿ ಯಶ್ ನಟಿಸುತ್ತಿಲ್ಲವಾದ್ದರಿಂದ ಅವರು ತಮಿಳು ನಿರ್ದೇಶಕರಿಗೆ ಮಣೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಅದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರಿಂದ, ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರಲಿದೆ ಎಂದು ಹೇಳಲಾಗುತ್ತಿದೆ. ಬರೋಬ್ಬರಿ ಈ ಚಿತ್ರಕ್ಕಾಗಿ 250 ಕೋಟಿ ರೂಪಾಯಿ ಬಂಡವಾಳ ಹೂಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ ಎನ್ನುವ ಸುದ್ದಿಯೂ ಜೊತೆಗಿದೆ. ಇದನ್ನೂ ಓದಿ:ಅಫೇರ್ ಆರೋಪ ನಂತರ `ಅಣ್ಣ-ತಂಗಿ’ ಆಗಿಬಿಟ್ರಾ ನರೇಶ್-ಪವಿತ್ರಾ!

    ನರ್ತನ್ ಜೊತೆ ಮಾಡಬೇಕಿದ್ದ ಸಿನಿಮಾವನ್ನು ಈ ತಮಿಳು ನಿರ್ದೇಶಕರ ಸಿನಿಮಾ ನಂತರ ಮಾಡಲಿದ್ದಾರಂತೆ ಯಶ್. ಅಲ್ಲಿವರೆಗೂ ನರ್ತನ್ ಬೇರೆ ನಟರಿಗೆ ಸಿನಿಮಾ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಆ ತಮಿಳು ನಿರ್ದೇಶಕ ಕಂಡಿತಾ ಶಂಕರ್ ಅಲ್ಲವಂತೆ. ಆದರೆ, ಶಂಕರ್ ಅವರಷ್ಟೇ ಖ್ಯಾತಿ ಪಡೆದ ನಿರ್ದೇಶಕರು ಯಶ್ ಗಾಗಿ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಯಶ್ ಏನು ಸ್ಪಷ್ಟನೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ನರ್ತನ್ ನಿರ್ದೇಶನದಲ್ಲಿ ಯಶ್ ನಟಿಸ್ತಾರಾ ಅಥವಾ ಇಲ್ಲವಾ? : ಒಂದು ವಾರ ಡೆಡ್ ಲೈನ್

    ನರ್ತನ್ ನಿರ್ದೇಶನದಲ್ಲಿ ಯಶ್ ನಟಿಸ್ತಾರಾ ಅಥವಾ ಇಲ್ಲವಾ? : ಒಂದು ವಾರ ಡೆಡ್ ಲೈನ್

    ಕೆಜಿಎಫ್ 2 ಸಿನಿಮಾದ ನಂತರ ಯಶ್ ಬೇಡಿಕೆ ತುಂಬಾ ಹೆಚ್ಚಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಯ ಸಿನಿಮಾ ನಿರ್ಮಾಪಕರು, ನಿರ್ದೇಶಕರು ಯಶ್ ಹಿಂದೆ ಬಿದ್ದಿದ್ದಾರೆ. ಇಷ್ಟೊಂದು ಬೇಡಿಕೆ ಇರುವಾಗ ಯಶ್ ಮೌನವಹಿಸಿದ್ದಾರೆ. ತಮಿಳು, ತೆಲುಗು,  ಕನ್ನಡ ಸಿನಿಮಾಗಳ ಬಗ್ಗೆ ಸುದ್ದಿ ಆಗುತ್ತಿದ್ದರೂ, ಯಾವುದಕ್ಕೂ ಪ್ರತಿಕ್ರಿಯಿಸದೆ ಬರುತ್ತಿರುವ ಸುದ್ದಿಗಳನ್ನು ಓದಿಕೊಂಡು ಸುಮ್ಮನಾಗಿದ್ದಾರೆ. ಆದರೂ, ಸುದ್ದಿಗಳು ಮಾತ್ರ ನಿಲ್ಲುತ್ತಿಲ್ಲ.

    ಈವರೆಗೂ ನರ್ತನ್ ನಿರ್ದೇಶನದ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎಂದು ಸುದ್ದಿ ಆಗಿತ್ತು. ಆ ಸಿನಿಮಾಗಾಗಿಯೇ ಯಶ್ ತಯಾರಿ ಆಗುತ್ತಿದ್ದಾರೆ ಎಂದೂ ಹೇಳಲಾಗಿತ್ತು. ಯಶ್ ಆಪ್ತರು ಕೂಡ ಈ ಸುದ್ದಿಯನ್ನು ಖಚಿತ ಪಡಿಸಿದ್ದರು. ಆದರೆ, ಒಂದು ವಾರದಿಂದ ನರ್ತನ್ ಸಿನಿಮಾದಲ್ಲಿ ಯಶ್ ನಟಿಸುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ನರ್ತನ್ ಸಿನಿಮಾಗೂ ಮುಂಚೆ, ಮತ್ತೊಂದು ಭಾರೀ ಬಜೆಟ್ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

    ಈ ನಡುವೆ ನರ್ತನ್ ಮಾಧ್ಯಮವೊಂದರ ಜೊತೆ ಮಾತನಾಡಿ, ಸಿನಿಮಾ ರಂಗ ಅಂದರೆ, ಅಲ್ಲಿ ವದಂತಿಗಳು, ಗಾಸಿಪ್ ಗಳು ಇರಲೇಬೇಕು. ಯಶ್ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದು ಒಂದು ವಾರದೊಳಗೆ ಗೊತ್ತಾಗಲಿದೆ. ಬಹುಶಃ ಒಂದು ವಾರದಲ್ಲಿ ಸಿನಿಮಾ ಬಗ್ಗೆ ಕ್ಲ್ಯಾರಿಟಿ ಸಿಗಬಹುದು ಎಂದು ಹೇಳಿದ್ದಾರೆ. ಅಲ್ಲಿಗೆ ಒಂದು ವಾರದಲ್ಲಿ ಯಶ್ ಅವರ ಹೊಸ ಸಿನಿಮಾದ ಅಪ್ ಡೇಟ್ ಏನಾದರೂ ಸಿಗಬಹುದಾ ಕಾದುನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಮುಂದಿನ ಚಿತ್ರಕ್ಕಾಗಿ 15 ಕೆಜಿ ತೂಕ ಇಳಿಸಿಕೊಳ್ಳಲಿದ್ದಾರೆ ಯಶ್

    ಮುಂದಿನ ಚಿತ್ರಕ್ಕಾಗಿ 15 ಕೆಜಿ ತೂಕ ಇಳಿಸಿಕೊಳ್ಳಲಿದ್ದಾರೆ ಯಶ್

    ಕೆಜಿಎಫ್ 2 ಸೂಪರ್ ಹಿಟ್ ನಂತರ ಯಶ್ ಕುರಿತು ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಸುದ್ದಿಗಳು ಎಷ್ಟೇ ದೊಡ್ಡದಾಗಿ ಸದ್ದು ಮಾಡಿದರೂ, ಯಶ್ ಆಗಲಿ ಅಥವಾ ಅವರ ಟೀಮ್ ಆಗಲಿ ಯಾವುದನ್ನೂ ಖಚಿತಪಡಿಸುವುದಿಲ್ಲ. ಹಾಗಾಗಿ ಮತ್ತೆ ಮತ್ತೆ ಹೊಸ ಹೊಸ ಸುದ್ದಿಗಳು ಹುಟ್ಟುತ್ತಲೇ ಇವೆ. ಮೊನ್ನೆಯಷ್ಟೇ ಯಶ್ ಬಳಿ ಐದು ಸಿನಿಮಾಗಳಿಗೆ ಎಂದು ಸುದ್ದಿ ಆಗಿತ್ತು. ಶಂಕರ್ ಸೇರಿದಂತೆ ಹಲವು ನಿರ್ದೇಶಕರು ಯಶ್ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರೆ ಎಂದೂ ಹೇಳಲಾಗಿದೆ.

    ಈ ನಡುವೆ ತಮ್ಮ ಪಾಡಿಗೆ ತಾವು ದೇಹವನ್ನು ಉರಿಗೊಳಿಸಿಕೊಳ್ಳುವಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಮುಂದಿನ ಸಿನಿಮಾವನ್ನು ಕನ್ನಡದಲ್ಲೇ ಮಾಡುವುದು ಪಕ್ಕಾ ಆಗಿರುವುದರಿಂದ ಮತ್ತು ಆ ಸಿನಿಮಾವನ್ನು ನರ್ತನ್ ನಿರ್ದೇಶನ ಮಾಡುತ್ತಿರುವುದರಿಂದ ಆ ಚಿತ್ರಕ್ಕಾಗಿ ಯಶ್ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಜಿಮ್ ತರಬೇತುದಾರ ಪಾನಿಪುರಿ ಕಿಟ್ಟ ಅವರ ಗರಡಿಯಲ್ಲಿ ಯಶ್ ದೇಹ ಹುರಿಗೊಳಿಸಿಕೊಳ್ಳುತ್ತಿದ್ದು 15 ಕೆಜಿ ತೂಕ ಇಳಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಬಹಿರಂಗವಾಗಿ ಕ್ಷಮೆ ಕೇಳಿದ ಮಲಯಾಳಂ ಖ್ಯಾತ ನಟ ಪೃಥ್ವಿ ಸುಕುಮಾರನ್

    ನರ್ತನ್ ನಿರ್ದೇಶನದ ಸಿನಿಮಾದಲ್ಲಿ ಯಶ್ ಮತ್ತೊಂದು ಬಗೆಯ ಪಾತ್ರವನ್ನು ಮಾಡಬೇಕಾಗಿರುವುದರಿಂದ ಕೆಜಿಎಫ್ ರಾಕಿಭಾಯ್ ತರಹವೇ ಈ ಪಾತ್ರವು ಕಾಣಬಾರದು ಎನ್ನುವ ಉದ್ದೇಶದಿಂದ ತೂಕವನ್ನು ಇಳಿಸಿಕೊಳ್ಳುವ ಕಸರತ್ತಿಗೆ ಕೈ ಹಾಕಿದ್ದಾರಂತೆ ಯಶ್. ಈಗಾಗಲೇ ಹಲವು ದಿನಗಳಿಂದ ಇದೇ ಕೆಲಸದಲ್ಲಿ ಯಶ್ ನಿರತರಾಗಿದ್ದಾರೆ ಎಂದು ಹೇಳುತ್ತಾರೆ ಅವರು ಆಪ್ತರು.

    Live Tv
    [brid partner=56869869 player=32851 video=960834 autoplay=true]

  • ಟ್ವಿಟ್ಟರ್‌ನಲ್ಲಿ ಯಶ್ ಹೆಸರು ಟ್ರೆಂಡಿಂಗ್: ಯಶ್ 19ನೇ ಚಿತ್ರದ ಅಪ್‌ಡೇಟ್ ಇಲ್ಲಿದೆ

    ಟ್ವಿಟ್ಟರ್‌ನಲ್ಲಿ ಯಶ್ ಹೆಸರು ಟ್ರೆಂಡಿಂಗ್: ಯಶ್ 19ನೇ ಚಿತ್ರದ ಅಪ್‌ಡೇಟ್ ಇಲ್ಲಿದೆ

    ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ಯಶ್ ಮುಂದಿನ ನಡೆ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಅದರಲ್ಲೂ `ಕೆಜಿಎಫ್ 2′ ಸಿನಿಮಾ 1‌,500 ಕೋಟಿ ಬಾಚಿದ ಮೇಲಂತೂ ಯಶ್ ಮುಂದಿನ ಹೆಜ್ಜೆ ಹುಷಾರಾಗಿ ಇಡಬೇಕಿದೆ. ರಾಕಿಭಾಯ್ ಮುಂದಿನ 19ನೇ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಅಭಿಮಾನಿಗಳಿಗೆ ಹುಟ್ಟು ಹಾಕಿದೆ.

    ಯಶ್ ತಮ್ಮ ಕೆರಿಯರ್‌ನ ಶುರುವಿನಲ್ಲೇ ಸಾಕಷ್ಟು ಕಠಿಣ ದಾರಿಯನ್ನ ದಾಟಿಯೇ ಇಲ್ಲಿವರೆಗೆ ಬಂದಿದ್ದಾರೆ. ಯಶಸ್ಸು ಅಷ್ಟು ಸುಲಭಕ್ಕೆ ಸಿಗುವುದಿಲ್ಲ ಎಂಬುದನ್ನ ಅರಿತಿದ್ದಾರೆ. ಹಾಗಾಗಿ ಯಶ್ ಮುಂದಿನ ಸಿನಿಮಾ ಸೆಲೆಕ್ಷನ್‌ನಲ್ಲಿ ಸಖತ್ ಚ್ಯೂಸಿಯಾಗಿದ್ದಾರೆ. ಆದರೆ ಯಶ್ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಭರ್ಜರಿ ವರ್ಕೌಟ್, ಡಯೆಟ್ ಮಾಡುತ್ತಾ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ನಿತ್ಯಾನಂದನನ್ನ ಮದುವೆ ಆಗೋಕೆ ರೆಡಿ ಎಂದ ನಟಿ: ಸುದ್ದಿಯ ಕುರಿತು ಸ್ಪಷ್ಟನೆ ನೀಡಿದ ಪ್ರಿಯಾ ಆನಂದ್

    ದಿನ ಕಳೆಯುತ್ತಿದ್ದ ಹಾಗೆ ಯಶ್ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿದೆ. ಯಶ್ ಅಭಿಮಾನಿಗಳು ತಾವೇ ಸಿನಿಮಾ ಪೋಸ್ಟರ್ ಮತ್ತು ಟೈಟಲ್ ಲಾಂಚ್ ಬಗ್ಗೆ ಪೋಸ್ಟ್‌ಗಳನ್ನ ಹಾಕುತ್ತಿದ್ದಾರೆ. ಈ ಹಿಂದೆ ಜೂನ್‌ನಲ್ಲಿಯೇ ಯಶ್ 19ನೇ ಚಿತ್ರ ಸೆಟ್ಟೇರಲಿದೆ ಎನ್ನಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಹಾಗಾಗಿ ಚಿತ್ರದ ಟೈಟಲ್ ಬಗ್ಗೆ, ಲಾಂಚ್ ದಿನಾಂಕದ ಬಗ್ಗೆ ಅಭಿಮಾನಿ ಬಳಗದಲ್ಲಿ ಚರ್ಚೆ ಶುರುವಾಗಿದೆ. ಈ ಬೆನ್ನಲ್ಲೇ ಟ್ವಿಟ್ಟರ್‌ನಲ್ಲಿ ನಟ ಯಶ್ ಹೆಸರು ಟ್ರೆಂಡಿಂಗ್ ಲಿಸ್ಟ್ ಸೇರಿದೆ.

    ಇನ್ನು ಯಶ್ ಮುಂದಿನ ಸಿನಿಮಾ, ನಿರ್ದೇಶಕ ನರ್ತನ್ ಜತೆ ಎಂದು ಹೇಳಲಾಗುತ್ತಿದ್ದು, ಖ್ಯಾತ ನಿರ್ಮಾಣ ಕೆವಿಎನ್ ಸಂಸ್ಥೆ ಬಂಡವಾಳ ಹೂಡಲಿದೆ ಎನ್ನಲಾಗುತ್ತಿದೆ. ಎಲ್ಲದಕ್ಕೂ ಅಧಿಕೃತ ಮಾಹಿತಿಗಾಗಿ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಐದು ವರ್ಷ ಯಶ್ ಖಾಲಿ ಇಲ್ಲ : ಅವರಿಗಾಗಿ ಕಾದಿವೆ ಭಾರೀ ಬಜೆಟ್ ಚಿತ್ರಗಳು

    ಐದು ವರ್ಷ ಯಶ್ ಖಾಲಿ ಇಲ್ಲ : ಅವರಿಗಾಗಿ ಕಾದಿವೆ ಭಾರೀ ಬಜೆಟ್ ಚಿತ್ರಗಳು

    ಕೆಜಿಎಫ್ ಸಿನಿಮಾದ ನಂತರ ಯಶ್ ನಡೆ ಏನು ಎನ್ನುವುದು ಈವರೆಗೂ ಕುತೂಹಲಕಾರಿಯಾಗಿಯೇ ಉಳಿದುಕೊಂಡಿದೆ. ಕೆಜಿಎಫ್ 2 ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ರಾಕಿ ಭಾಯ್, ಮುಂದೆ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದೂ ಕೂಡ ಸಸ್ಪೆನ್ಸ್. ಕನ್ನಡದಲ್ಲಿ ಈಗಾಗಲೇ ಒಂದು ಸಿನಿಮಾದ ಹೆಸರು ಓಡಾಡುತ್ತಿದ್ದರೆ ತಮಿಳು, ತೆಲುಗು ಮತ್ತು ಬಾಲಿವುಡ್ ನಲ್ಲೂ ಸಿನಿಮಾ ಮಾಡಲಿದ್ದಾರೆ ಎಂದೂ ಸುದ್ದಿ ಆಗಿದೆ. ಹಾಗಾಗಿ ಯಶ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ.

    ಯಶ್ ಅವರ ಆಪ್ತರ ಪ್ರಕಾರ ಈಗಾಗಲೇ ಅವರಿಗಾಗಿ ನಾಲ್ಕು ಸಿನಿಮಾಗಳು ಕಾಯುತ್ತಿವೆಯಂತೆ. ಅಲ್ಲಿಗೆ ಬರೋಬ್ಬರಿ ಐದು ವರ್ಷಗಳ ಕಾಲ ಯಶ್ ಬುಕ್ ಆಗಿದ್ದಾರೆ ಎನ್ನುವ ಸುದ್ದಿಯೂ ಇದೆ. ಈ ನಾಲ್ಕು ಸಿನಿಮಾಗಳು ಯಾವಾಗೆಲ್ಲ ಬರಬೇಕು ಎನ್ನುವುದು ಕೂಡ ಪಕ್ಕಾ ರೆಡಿಯಾಗಿದೆಯಂತೆ. ಹಾಗಾಗಿ, ಯಶ್ ಯಾವುದೇ ಕಾರಣಕ್ಕೂ ಅವಸರ ಮಾಡುತ್ತಿಲ್ಲವಂತೆ. ಪಕ್ಕಾ ಪ್ಲ್ಯಾನ್ ಜೊತೆಗೆ ಅವರು ಮುಂದಿನ ನಡೆಯನ್ನು ಇಡಲಿದ್ದಾರಂತೆ. ಇದನ್ನೂ ಓದಿ:ತೆಲುಗಿನ ಮಹೇಶ್ ಬಾಬುಗೆ ತಂದೆಯಾಗಿ ನಟಿಸ್ತಾರಾ ರಿಯಲ್ ಸ್ಟಾರ್ ಉಪೇಂದ್ರ

    ಮೊದಲು ಕನ್ನಡದಲ್ಲೇ ಸಿನಿಮಾ ಮಾಡಲಿದ್ದು, ಈ ಚಿತ್ರಕ್ಕೆ ನರ್ತನ್ ನಿರ್ದೇಶನವಿದೆ. ಬಹುತೇಕ ಸ್ಕ್ರಿಪ್ಟ್ ಕೂಡ ರೆಡಿಯಿದೆಯಂತೆ. ಮೊದಲು ಇದೇ ಸಿನಿಮಾದಲ್ಲಿ ನಟಿಸಲಿದ್ದಾರಂತೆ ಯಶ್. ನಂತರ ದಿಲ್ ರಾಜುಗಾಗಿ ಒಂದು ಸಿನಿಮಾವನ್ನು ಮಾಡಲಿದ್ದಾರಂತೆ. ಈ ಎರಡೂ ಸಿನಿಮಾಗಳು ಮುಗಿದ ನಂತರ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಗಾಗಿ ಯಶ್ ಸಿನಿಮಾ ಮಾಡಲಿದ್ದಾರಂತೆ. ಈ ಮೂರು ಸಿನಿಮಾಗಳ ನಂತರ ಕೆಜಿಎಫ್ 3 ಸಿನಿಮಾ ಬರಲಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ.

    Live Tv
    [brid partner=56869869 player=32851 video=960834 autoplay=true]

  • ತಮಿಳು ಸಿನಿಮಾ ಮಾಡ್ತಾರಾ ಅಥವಾ ಕನ್ನಡದ ನಿರ್ದೇಶಕನಿಗೆ ಮಣೆ ಹಾಕ್ತಾರಾ ಯಶ್?

    ತಮಿಳು ಸಿನಿಮಾ ಮಾಡ್ತಾರಾ ಅಥವಾ ಕನ್ನಡದ ನಿರ್ದೇಶಕನಿಗೆ ಮಣೆ ಹಾಕ್ತಾರಾ ಯಶ್?

    ಶ್ ಸಿನಿಮಾ ವಿಚಾರದಲ್ಲಿ ದಿನಕ್ಕೊಂದು ಸುದ್ದಿ ಹರಿದಾಡುತ್ತಿವೆ. ಮೊನ್ನೆಯಷ್ಟೇ ಯಶ್ ಗಾಗಿ ಖ್ಯಾತ ನಿರ್ಮಾಪಕ ದಿಲ್ ರಾಜು ಸಿನಿಮಾವೊಂದನ್ನು ನಿರ್ಮಾಣ ಮಾಡಲು ಮುಂದೆ ಬಂದಿದ್ದು, 100 ಕೋಟಿ ರೂಪಾಯಿ ಆಫರ್ ಮಾಡಿದ್ದಾರೆ ಎಂದು ಸುದ್ದಿ ಆಯಿತು.  ಅದಕ್ಕೂ ಮುನ್ನ ಕೆವಿಎನ್ ಪ್ರೊಡಕ್ಷನ್ ಹೌಸ್ ಕಡೆಯಿಂದ  ಯಶ್ ಮುಂದಿನ ಸಿನಿಮಾ ನಿರ್ಮಾಣ ಅಂತಾಯಿತು. ತೆಲುಗು ಸಿನಿಮಾ ನಿರ್ದೇಶಕರಿಗೂ ಯಶ್ ಕಾಲ್ ಶೀಟ್ ಕೊಟ್ಟಿದ್ದಾರೆ  ಅನ್ನುವ ಸುದ್ದಿಯೂ ಹರಡಿತ್ತು. ಸದ್ಯ ನರ್ತನ್ ಜೊತೆ ಸಿನಿಮಾ ಮಾಡುವ ವಿಚಾರವೂ ಚಾಲ್ತಿಯಲ್ಲಿದೆ. ಇದೀಗ ಮತ್ತೊಂದು ಹೊಸ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ.

    ರಜನಿಕಾಂತ್ ಸೇರಿದಂತೆ ಹಲವು ಖ್ಯಾತ ನಟರಿಗೆ ಅದ್ಭುತವಾದ ಸಿನಿಮಾಗಳನ್ನು ಕಟ್ಟಿಕೊಟ್ಟಿರುವ ಖ್ಯಾತ ನಿರ್ದೇಶಕ ಶಂಕರ್ ಜೊತೆ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಶಂಕರ್ ಕೂಡ ತಮ್ಮ ಸಿನಿಮಾದ ಮೂಲಕ ಸಾವಿರಾರು ಕೋಟಿ ಬಾಚಿದವರು. ಯಶ್ ನಟನೆಯ ಕೆಜಿಎಫ್ 2 ಚಿತ್ರ ಕೂಡ ಸಾವಿರ ಕೋಟಿ ಹಣ ಗಳಿಸಿದೆ. ಹಾಗಾಗಿ ಸಾವಿರದ ಸರದಾರರು ಒಟ್ಟಾಗಿ ಸಿನಿಮಾ ಮಾಡಲಿದ್ದಾರೆ ಎನ್ನುವುದು ಲೆಟೆಸ್ಟ್ ನ್ಯೂಸ್. ಇದನ್ನೂ ಓದಿ:ಶಾರುಖ್ ಖಾನ್ ನಟನೆಯ `ಜವಾನ್’ ಚಿತ್ರೀಕರಣದಲ್ಲಿ ನಯನತಾರಾ

    ಹಾಗಂತ ಯಾವುದೇ ತಂಡದಿಂದ ಬಂದಿರುವ ಹೇಳಿಕೆ ಇವಲ್ಲ. ಗಾಸಿಪ್ ರೀತಿಯಲ್ಲೂ ಹರಡಿರಬಹುದು. ಅಥವಾ ದಿಲ್ ರಾಜು ನಿರ್ಮಾಣದಲ್ಲಿ ಮೂಡಿ ಬರಲಿರುವ ಚಿತ್ರಕ್ಕೆ ಶಂಕರ್ ನಿರ್ದೇಶನ ಮತ್ತು ಯಶ್ ನಟ ಅಂತಾನೂ ಆಗಬಹುದು. ಒಟ್ಟಿನಲ್ಲಿ ಯಶ್ ಅವರ ಸಿನಿಮಾ ವಿಚಾರದಲ್ಲಿ ದಿನಕ್ಕೊಂದು ಸುದ್ದಿಗಳು ಹರಡುತ್ತಿವೆ. ಅಭಿಮಾನಿಗಳಿಗಂತೂ ಆ ಸುದ್ದಿಗಳು ಥ್ರಿಲ್ ನೀಡುತ್ತಿವೆ.

    Live Tv

  • ತೆಲುಗು ಸಿನಿಮಾದಲ್ಲಿ ನಟಿಸಲು ಯಶ್ ಗೆ 100 ಕೋಟಿ ಆಫರ್ ಕೊಟ್ಟ ದಿಲ್ ರಾಜು?

    ತೆಲುಗು ಸಿನಿಮಾದಲ್ಲಿ ನಟಿಸಲು ಯಶ್ ಗೆ 100 ಕೋಟಿ ಆಫರ್ ಕೊಟ್ಟ ದಿಲ್ ರಾಜು?

    ಶ್ ಮುಂದಿನ ಸಿನಿಮಾ ಬಗ್ಗೆ ಏನೆಲ್ಲ ಸುದ್ದಿಗಳು ಹರಡಿದರೂ, ಅವರು ಮಾತ್ರ ಯಾವುದೇ ಮಾಹಿತಿ ಕೊಡದೇ ಕುತೂಹಲದ ಮೇಲೆ ಕುತೂಹಲ ಹುಟ್ಟಿಸುತ್ತಿದ್ದಾರೆ. ಮುಂದಿನ ಚಿತ್ರವನ್ನು ಅವರು ಮಫ್ತಿ ಸಿನಿಮಾದ ನಿರ್ದೇಶಕ ನರ್ತನ್ ಜೊತೆ ಮಾಡುವುದು ಪಕ್ಕಾವಾದರೂ, ಅಧಿಕೃತವಾಗಿ ಅವರು ಯಾವುದೇ ಮಾಹಿತಿ ನೀಡಿಲ್ಲ. ಈ ಸಿನಿಮಾದ ನಿರ್ಮಾಪಕರು ಕೆವಿಎನ್ ಪ್ರೊಡಕ್ಷನ್ ಎಂದು ಗೊತ್ತಾಗಿದ್ದರೂ, ಅವರು ಕೂಡ ಮಾಹಿತಿ ಬಿಟ್ಟು ಕೊಡುತ್ತಿಲ್ಲ.

    ಈ ಮಧ್ಯೆ ತೆಲುಗು ಸಿನಿಮಾ ರಂಗದಿಂದ ಮತ್ತೊಂದು ಖಡಕ್ ಸುದ್ದಿ ಬಂದಿದೆ. ದಕ್ಷಿಣದ ಖ್ಯಾತ ನಿರ್ಮಾಪಕ, ಬಹುಕೋಟಿ ಬಜೆಟ್ ಸಿನಿಮಾ ಮಾಡುವ ದಿಲ್ ರಾಜು ಅವರು ಯಶ್ ಗಾಗಿ ಒಂದು ಸಿನಿಮಾ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಈ ಸಿನಿಮಾವನ್ನು ತೆಲುಗು ನಿರ್ದೇಶಕರೇ ನಿರ್ದೇಶನ ಮಾಡಿದರೂ, ಅದೊಂದು ಪ್ಯಾನ್ ಇಂಡಿಯಾ ಸಿನಿಮಾವಂತೆ. ಹಾಗಾಗಿ ಈ ಚಿತ್ರದಲ್ಲಿ ನಟಿಸಲು ಯಶ್ ಅವರಿಗೆ ದಿಲ್ ರಾಜು 100 ಕೋಟಿ ರೂಪಾಯಿ ಸಂಭಾವನೆಯ ಆಫರ್ ನೀಡಿದ್ದಾರಂತೆ. ಇದನ್ನೂ ಓದಿ: ಹಿರಿಯನಟ ರೈ ಮೋಹನ್ ಶವವಾಗಿ ಮನೆಯಲ್ಲಿ ಪತ್ತೆ

    ಈ ಹಿಂದೆಯೂ ಕೂಡ ಯಶ್ ಅವರು ನೂರಾರು ಕೋಟಿ ರೂಪಾಯಿಯ ಬಾಲಿವುಡ್ ಆಫರ್ ತಿರಸ್ಕರಿಸಿದರು ಎಂಬ ಸುದ್ದಿ ಹರಿದಾಡುತ್ತಿತ್ತು. ಆ ಪ್ರಮಾಣದ ಸಿನಿಮಾವನ್ನು ಅವರು ಬಿಡಲು ಕಾರಣ ಏನು? ಎಂಬ ಪ್ರಶ್ನೆ ಕೂಡ ಮೂಡಿತ್ತು. ಈಗ ಮತ್ತೆ ನೂರು ಕೋಟಿ ರೂಪಾಯಿ ಸಂಭಾವನೆ ವಿಚಾರ ಮುನ್ನೆಲೆಗೆ ಬಂದಿದೆ. ಅಂದುಕಂಡಂತೆ ಆದರೆ, ದಕ್ಷಿಣದಲ್ಲೇ ಈ ಪ್ರಮಾಣದಲ್ಲಿ ಸಂಭಾವನೆ ಪಡೆಯುವ ಬೆರಳಣಿಕೆಯ ನಟರಲ್ಲಿ ಯಶ್ ಕೂಡ ಒಬ್ಬರಾಗಲಿದ್ದಾರೆ. ಆದರೆ, ನರ್ತನ್ ಸಿನಿಮಾವಾದ ನಂತರ ದಿಲ್ ರಾಜು ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.

    Live Tv

  • ಮುಂದಿನ ಚಿತ್ರಕ್ಕಾಗಿ ತೂಕ ಇಳಿಸ್ಕೊತಿರೋ ಯಶ್- ಗಡ್ಡಕ್ಕೂ ಬೀಳಲಿದೆಯಾ ಕತ್ತರಿ?

    ಮುಂದಿನ ಚಿತ್ರಕ್ಕಾಗಿ ತೂಕ ಇಳಿಸ್ಕೊತಿರೋ ಯಶ್- ಗಡ್ಡಕ್ಕೂ ಬೀಳಲಿದೆಯಾ ಕತ್ತರಿ?

    ಕೆಜಿಎಫ್ 2 ಸಿನಿಮಾದ ನಂತರ ಯಶ್ ಯಾರ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವುದು ಕೆಲವರಿಗೂ ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ. ಈಗಾಗಲೇ ಯಶ್ ಅವರು ನರ್ತನ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ಈ ಹಿಂದೆಯೇ ಸುದ್ದಿ ಮಾಡಿದೆ. ಅಧಿಕೃತವಾಗಿ ಸಿನಿಮಾ ಟೀಮ್ ಆಗಲಿ ಅಥವಾ ಯಶ್ ಆಗಲಿ ಹೇಳಿಕೆ ನೀಡದೇ ಇದ್ದರೂ, ಆ ಸುದ್ದಿಯೇ ನಿಜ ಎನ್ನುವಂತೆ ಯಶ್ ಅವರ ಜಿಮ್ ಕೋಚ್ ಕೂಡ ಅಧಿಕೃತ ಮುದ್ರೆ ಎನ್ನುವಂತೆ ಖಚಿತ ಪಡಿಸಿದ್ದಾರೆ.

    ಯಶ್ ಅವರಿಗೆ ಜಿಮ್ ಕೋಚ್ ಆಗಿರುವವರು ಪಾನಿಪುರಿ ಕಿಟ್ಟಿ ಅವರು. ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಾ, ಯಶ್ ಅವರು ಇದೀಗ ತೂಕ ಇಳಿಸಿಕೊಳ್ಳುತ್ತಿದ್ದಾರೆ. ನರ್ತನ್ ಅವರ ಚಿತ್ರದಲ್ಲಿ ಅವರು ಬೇರೆ ರೀತಿಯಲ್ಲೇ ಕಾಣಿಸಿಕೊಳ್ಳಬೇಕಾಗಿದ್ದರಿಂದ ತೂಕ ಇಳಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ ಯಶ್ ಮತ್ತು ನರ್ತನ್ ಕಾಂಬಿನೇಷನ್ ನಲ್ಲೇ ಮುಂದಿನ ಸಿನಿಮಾ ಬರುವುದು ಬಹುತೇಕ ಪಕ್ಕಾ ಆಗಿದೆ. ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳುವುದು ಮಾತ್ರ ಬಾಕಿ ಇದೆ. ಇದನ್ನೂ ಓದಿ: ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಮರನ್ನು ಹತ್ಯೆ ಮಾಡುವುದು, ಕಾಶ್ಮೀರ ಪಂಡಿತರ ಹತ್ಯೆಗೆ ಸಮ: ಸಾಯಿ ಪಲ್ಲವಿ ವೀಡಿಯೋ ವೈರಲ್

    ತೂಕ ಏನೋ ಇಳಿಸಿಕೊಳ್ಳುತ್ತಿದ್ದಾರೆ. ಆದರೆ, ಗಡ್ಡಕ್ಕೆ ಏನು ಮಾಡುತ್ತಾರೆ ಎನ್ನುವ ಕುತೂಹಲ ಹಲವರದ್ದು. ಒಂದು ರೀತಿಯಲ್ಲಿ ಯಶ್ ಗಡ್ಡಕ್ಕೆ ಹೊಂದಿಕೊಂಡು ಹೋಗಿದ್ದಾರೆ. ಗಡ್ಡ ಬಿಟ್ಟು ಅವರನ್ನು ಊಹಿಸಿಕೊಳ್ಳಲು ಸಾಧ್ಯವಾ ಅನ್ನುವಂತೆ ಅದರೊಂದಿಗೆ ಬೆರೆತು ಹೋಗಿದ್ದಾರೆ. ಹಾಗಾಗಿ ಮುಂದಿನ ಸಿನಿಮಾದಲ್ಲಿ ಗಡ್ಡ ಇರತ್ತಾ? ಅಥವಾ ಇಲ್ಲವಾ? ಎನ್ನುವುದು ಕೂಡ ಚರ್ಚೆಗೆ ಆಹಾರವಾಗಿದೆ. ಬಲ್ಲ ಮೂಲಗಳ ಪ್ರಕಾರ, ಗಡ್ಡವನ್ನು ಇಟ್ಟುಕೊಂಡೇ ಕಥೆ ಹೆಣೆದಿದ್ದಾರೆ ಎನ್ನಲಾಗುತ್ತದೆ. ಅದೇ ರಗಡ್ ಲುಕ್ ನಲ್ಲೇ ಈ ಸಿನಿಮಾ ಬರಲಿದೆಯಂತೆ. ಗಡ್ಡ ಉಳಿಸಿಕೊಂಡು, ಒಂದಷ್ಟು ತೂಕ ಮಾತ್ರ ಕಳೆದುಕೊಳ್ಳುತ್ತಿದ್ದಾರಂತೆ ಯಶ್.

    Live Tv