Tag: ನರೋತ್ತಮ್ ಮಿಶ್ರಾ

  • ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ನರೋತ್ತಮ ಮಿಶ್ರಾ

    ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ನರೋತ್ತಮ ಮಿಶ್ರಾ

    ಭೋಪಾಲ್: ಮಧ್ಯಪ್ರದೇಶದಲ್ಲಿ (Madhya Pradesh Election Result) ಬಿಜೆಪಿ ಅಧಿಕಾರಕ್ಕೆ ಬರುತ್ತೆ. ನಾವು ಮತ್ತೆ ರಾಜ್ಯದಲ್ಲಿ ಅಧಿಕಾರ ನಡೆಸುತ್ತೇವೆ ಎಂದು ಸಚಿವ, ಬಿಜೆಪಿ ನಾಯಕ ನರೋತ್ತಮ್ ಮಿಶ್ರಾ (Narottam Mishra) ಹೇಳಿದ್ದಾರೆ.

    ಚುನಾವಣಾ ಫಲಿತಾಂಶಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು. ಬೆಳಗ್ಗೆ 8 ಗಂಟೆಯಿಂದ ಮತಣಿಕೆ ನಡೆಯಲಿದೆ ಎಂದರು.

    ಈ ಬಾರಿಯ ಚುನಾವಣೆಯಲ್ಲಿ ನಾವು 125 ರಿಂದ 150 ಮತಗಳೊಂದಿಗೆ ಭರ್ಜರಿ ಜಯಗಳಿಸುತ್ತೇವೆ. ಈ ಮೂಲಕ ರಾಜ್ಯದಲ್ಲಿ ನಾವು ಮತ್ತೆ ಆಡಳಿತ ನಡೆಸುತ್ತೇವೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ: ಬಿಜೆಪಿ ಸರ್ಕಾರವಿರೋ ಮಧ್ಯಪ್ರದೇಶದಲ್ಲಿ ಈ ಬಾರಿಗೆ ಗೆಲುವು ಯಾರಿಗೆ?

    ಒಟ್ಟಿನಲ್ಲಿ ಸದ್ಯ ಬಿಜೆಪಿ ಸರ್ಕಾರವಿರುವ ಮಧ್ಯಪ್ರದೇದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ನೆಕ್ ಟು ನೆಕ್ ಫೈಟ್ ಇರಲಿದೆ ಎಂಬುದಾಗಿ ಬಹುತೇಕ ಸಮೀಕ್ಷೆಗಳು ತಿಳಿಸಿದ್ದು, ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎಂಬುದನ್ನು ಕಾದುನೋಡಬೇಕು. ಕೆಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುಂದಿದ್ದರೆ, ಇನ್ನು ಕೆಲವು ಸಮೀಕ್ಷೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

  • ಹೇಮ ಮಾಲಿನಿಯೇ ನೃತ್ಯ ಮಾಡುವಂತೆ ಮಾಡಿದೆ- ವಿವಾದಕ್ಕೀಡಾದ ನರೋತ್ತಮ್ ಮಿಶ್ರಾ ಹೇಳಿಕೆ

    ಹೇಮ ಮಾಲಿನಿಯೇ ನೃತ್ಯ ಮಾಡುವಂತೆ ಮಾಡಿದೆ- ವಿವಾದಕ್ಕೀಡಾದ ನರೋತ್ತಮ್ ಮಿಶ್ರಾ ಹೇಳಿಕೆ

    ಭೋಪಾಲ್: ಬಿಜೆಪಿ ಶಾಸಕ (BJP MLA) ಹಾಗೂ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra) ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ಇದೀಗ ಫಜೀತಿಗೆ ಸಿಲುಕಿದ್ದಾರೆ.

    ದಾಟಿಯಾದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹೇಳಿಕೆಯೊಂದನ್ನು ನೀಡುವ ಮೂಲಕ ವಿವಾದಕ್ಕೀಡಾಗಿದ್ದಾರೆ. ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದಾಗ ಹೇಮಮಾಲಿನಿ ಹೆಸರನ್ನು ಪ್ರಸ್ತಾಪಿಸಿದ್ದಾರೆ. ದಾಟಿಯಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡಿದ್ದಲ್ಲದೇ ಹೇಮಮಾಲಿನಿಯೂ ಡ್ಯಾನ್ಸ್ ಮಾಡುವಷ್ಟು ಅಭಿವೃದ್ಧಿಯನ್ನು ಇಲ್ಲಿ ನಾನು ಮಾಡಿದ್ದೇನೆ ಎಂದು ಹೇಳಿದ್ದಾರೆ.

    ಸದ್ಯ ಮಿಶ್ರಾ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಮೂಲಕ ಅವರ ಹೇಳಿಕೆ ಭಾರೀ ಚರ್ಚೆಯಾಗುತ್ತಿದೆ. ಇದನ್ನೂ ಓದಿ: ರಾಮಮಂದಿರ ಲೋಕಾರ್ಪಣೆಗೆ ಮೋದಿಗೆ ಮಾತ್ರ ಯಾಕೆ ಆಹ್ವಾನ – ಸಲ್ಮಾನ್ ಖುರ್ಷಿದ್ ಪ್ರಶ್ನೆ

    ಈ ಸಂಬಂಧ ಜನತಾ ದಳದ ಎಕ್ಸ್ ಖಾತೆಯಲ್ಲಿ, ವ್ಯಕ್ತಿತ್ವ ಮತ್ತು ನೋಟವನ್ನು ಟೀಕಿಸುವ ನಾಚಿಕೆಯಿಲ್ಲದ ಬಿಜೆಪಿ ಸದಸ್ಯರ ನೈಜತೆಯನ್ನು ನೋಡಿ. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ತಮ್ಮದೇ ಪಕ್ಷದ ಸಂಸದೆ ಹೇಮಾ ಮಾಲಿನಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದೆ.

    ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದಿಂದ (Datia Vidhanasabha Constituency) ನರೋತ್ತಮ್ ಮಿಶ್ರಾ 4 ನೇ ಬಾರಿ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ 2008, 2023 ಹಾಗೂ 2018ರಲ್ಲಿ ಸ್ಪರ್ಧೆ ಮಾಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಊಟಕ್ಕಾಗಿ ಬಿಜೆಪಿಯಿಂದ ಜನರ ಕೋಟಿ-ಕೋಟಿ ಹಣ ಲೂಟಿ: ಜೀತು ಪಟ್ವಾರಿ

    ಊಟಕ್ಕಾಗಿ ಬಿಜೆಪಿಯಿಂದ ಜನರ ಕೋಟಿ-ಕೋಟಿ ಹಣ ಲೂಟಿ: ಜೀತು ಪಟ್ವಾರಿ

    ಭೋಪಾಲ್: ಬಿಜೆಪಿ (BJP) ರಾಜ್ಯ ಸರ್ಕಾರವು ಮುಖ್ಯಮಂತ್ರಿಗಳ (Chief Minister) ಮನೆಯಲ್ಲಿ ನಡೆದ ಪಕ್ಷದ ಸಭೆಗಳಲ್ಲಿ ಮಧ್ಯಾಹ್ನದ ಊಟ, ಚಹಾ ಮತ್ತು ರಾತ್ರಿಯ ಊಟಕ್ಕಾಗಿ 40 ಕೋಟಿ ರೂ. ಸಾರ್ವಜನಿಕ ಹಣವನ್ನು ಖರ್ಚು ಮಾಡಿದೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ (Congress) ಶಾಸಕ ಜೀತು ಪಟ್ವಾರಿ (Jitu Patwari) ಆರೋಪಿಸಿದ್ದಾರೆ.

    ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸುವ ವೇಳೆ ಮಾತನಾಡಿದ ಅವರು, 2014-18ರ ಅವಧಿಯಲ್ಲಿ ಆಡಳಿತ ಪಕ್ಷದ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡುವುದಕ್ಕಾಗಿಯೇ ಸರ್ಕಾರ ಕೋಟಿಗಟ್ಟಲೇ ಸಾರ್ವಜನಿಕ ಹಣ ಖರ್ಚು ಮಾಡಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan), ಆಡಳಿತ ಪಕ್ಷದ ಅಧಿಕಾರಿಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ 90 ಬಾರಿ ಊಟದ ವ್ಯವಸ್ಥೆ ಮಾಡಲು ಹಣವನ್ನು ಖರ್ಚು ಮಾಡಿದ್ದಾರೆ ಎಂದು ದೂರಿದ್ದಾರೆ.

    ಬಿಜೆಪಿ (BJP) ಈ ಆರೋಪವನ್ನು ತಳ್ಳಿಹಾಕಿದ್ದು, ಇದು ಶುದ್ಧ ಸುಳ್ಳು. ಸುಳ್ಳು ಹೇಳಿಕೆ ನೀಡಿರುವುದರ ವಿರುದ್ಧ `ಪ್ರಶ್ನಾ ಔರ್ ಸಂಬಂಧ ಸಮಿತಿ’ಗೆ (ಸದನದ ಉಲ್ಲೇಖ ಸಮಿತಿ) ದೂರು ಸಲ್ಲಿಸುವುದಾಗಿ ಹೇಳಿದೆ. ಇದನ್ನೂ ಓದಿ: ಮೆಸ್ಕಾಂ ಕಚೇರಿಯಲ್ಲಿದ್ದ ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿ ಏಟು – ದಲಿತ ಸಂಘಟನೆಗಳ ಆಕ್ರೋಶ

    ಸದನದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಈ ಕುರಿತು ಉತ್ತರ ನೀಡುತ್ತಿದ್ದಂತೆ, ಪಟ್ವಾರಿ ದಾಖಲೆಗಳನ್ನು ಪ್ರಸ್ತುತಪಡಿಸಿದ್ದಾರೆ. ಊಟದ ವ್ಯವಸ್ಥೆ ಪಡೆಯುವುದಕ್ಕೆ ಬಿಜೆಪಿ ಕಚೇರಿ ಎಂದು ನಮೂದು ಮಾಡಿರುವ ರಶೀದಿಗಳನ್ನ ಸಲ್ಲಿಸಿದ್ದಾರೆ. ಅದರಲ್ಲಿ ಒಂದು ಕಪ್ ಚಹಾ 400 ರೂ.ಗೆ ಹಾಗೂ ಒಂದು ಪ್ಲೇಟ್ ಊಟಕ್ಕೆ 2 ಸಾವಿರ ರೂ. ವಿಧಿಸಲಾಗಿದೆ. ಒಂದು ವೇಳೆ ಸಲ್ಲಿಸಿರುವ ದಾಖಲೆಗಳು ನಕಲಿ ಎಂದು ಕಂಡುಬಂದರೆ ಅವರ ಸದನದ ಸದಸ್ಯತ್ವವನ್ನು ರದ್ದುಪಡಿಸಬಹುದು. ನಿಜವಾಗಿದ್ದರೆ, ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ನೀವು ಸದನವನ್ನು ದಾರಿ ತಪ್ಪಿಸುತ್ತಿದ್ದೀರಿ. ಬಿಜೆಪಿ ಕಾರ್ಯಕರ್ತರಿಗೆ ಊಟ ಬಡಿಸಲು ಸರ್ಕಾರದ ಒಂದು ಪೈಸೆಯೂ ಖರ್ಚು ಮಾಡಿಲ್ಲ ಎಂದು ನಾನು ಸಂಪೂರ್ಣ ಜವಾಬ್ದಾರಿಯಿಂದ ಹೇಳಬಲ್ಲೆ ಎಂದು ಹೇಳಿದರು. ಇದನ್ನೂ ಓದಿ: ವಿದೇಶಕ್ಕೆ Made In India ಪೋನ್- 110 ಪಟ್ಟು ಹೆಚ್ಚಳ, ಶೇ.40 ಐಫೋನ್‌ ರಫ್ತು

    ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra) ಮಾತನಾಡಿ, ಪಟ್ವಾರಿ ಅವರ ಹೇಳಿಕೆ ಮಹಾ ಸುಳ್ಳು. ಬಿಜೆಪಿಗೆ ಧಕ್ಕೆ ತರಲು ಈ ರೀತಿ ಹೇಳಿಕೆಗಳನ್ನೂ ನೀಡಲಾಗುತ್ತಿದೆ. ಈ ಹಿಂದೆ ಕಮಲ್ ನಾಥ್ ಅವರು ಮುಖ್ಯಮಂತ್ರಿಯಾಗಿದ್ದಾಗ (ಡಿಸೆಂಬರ್ 2018 ಮತ್ತು ಮಾರ್ಚ್ 2020ರ ನಡುವೆ) ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನಡೆದ್ದ 131 ಕೋಟಿ ಹಗರಣದಿಂದ ಜನರ ಗಮನ ಬೇರೆಡೆ ಸೆಳೆಯಲು ಈ ತಂತ್ರ ರೂಪಿಸಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರವಾದಿ ಮೊಹಮ್ಮದ್ ಬಗ್ಗೆ ಸಿನಿಮಾ ಮಾಡಿದ್ರೆ ವಿಶ್ವದಾದ್ಯಂತ ರಕ್ತಪಾತ ಆಗುತ್ತೆ – ಗಿರೀಶ್ ಗೌತಮ್

    ಪ್ರವಾದಿ ಮೊಹಮ್ಮದ್ ಬಗ್ಗೆ ಸಿನಿಮಾ ಮಾಡಿದ್ರೆ ವಿಶ್ವದಾದ್ಯಂತ ರಕ್ತಪಾತ ಆಗುತ್ತೆ – ಗಿರೀಶ್ ಗೌತಮ್

    ಭೋಪಾಲ್: ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra) ನಂತರ, ರಾಜ್ಯದ ವಿಧಾನಸಭಾ ಸ್ಪೀಕರ್ ಗಿರೀಶ್ ಗೌತಮ್ (Girish Gautam) ಅವರು ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ (Deepika Padukone) ನಟನೆಯ `ಪಠಾಣ್’ (Pathan) ಸಿನಿಮಾದ `ಬೇಷರಂ ರಂಗ್’ ಹಾಡಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಚಿತ್ರಮಂದಿರದಲ್ಲಿ ಪಠಾಣ್ ಸಿನಿಮಾ (Cinema) ನಿಷೇಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಶಾರುಖ್ (Shah Rukh Khan) ಈ ಚಿತ್ರವನ್ನು ತನ್ನ ಮಗಳೊಂದಿಗೆ ನೋಡಬೇಕು. ಮಗಳ ಜೊತೆಗಿನ ಫೋಟೋ ಅಪ್‌ಲೋಡ್ ಮಾಡಿ, ಈ ಸಿನಿಮಾವನ್ನು ತನ್ನ ಮಗಳ ಜೊತೆ ನೋಡುತ್ತಿದ್ದೇನೆ ಎಂದು ಜಗತ್ತಿಗೇ ಹೇಳಬೇಕು ಎಂದು ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ‘ಪಠಾಣ್’ ಬಿಕಿನಿ ವಿವಾದ: ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿಡಿಯೋ ವೈರಲ್

    ನಾನು ಮುಕ್ತವಾಗಿ ಹೇಳಬಯಸುತ್ತೇನೆ. ಪ್ರವಾದಿ ಮೊಹಮ್ಮದ್ (Prophet Muhammad) ಅವರ ಮೇಲೆ ಅಂತಹ ಒಂದು ಚಲನಚಿತ್ರವನ್ನು ಮಾಡಿ, ಅದನ್ನು ಅಭಿವ್ಯಕ್ತಿ ಸ್ವಾತಂತ್ರ‍್ಯದ ಹೆಸರಿನಲ್ಲಿ ಬಿಡುಗಡೆ ಮಾಡಿ ನೋಡೋಣ? ವಿಶ್ವದಾದ್ಯಂತ ರಕ್ತಪಾತವಾಗುತ್ತದೆ ಎಂದು ಹೇಳಿದ್ದಾರೆ.

    ವಿರೋಧ ಪಕ್ಷದ ನಾಯಕ ಡಾ.ಗೋವಿಂದ್ ಸಿಂಗ್ ಹಾಗೂ ಮಾಜಿ ಕೇಂದ್ರ ಸಚಿವ ಸುರೇಶ್ ಪಚೌರಿ ಸೇರಿದಂತೆ ಹಿರಿಯ ಕಾಂಗ್ರೆಸ್ (Congress) ನಾಯಕರು ಈ ಚಿತ್ರದ ಹಾಡನ್ನು ವಿರೋಧಿಸಿದ್ದಾರೆ. ಇದು ನಮ್ಮ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ

    ಇದಕ್ಕೆ ದನಿಗೂಡಿಸಿರುವ ಸುರೇಶ್ ಪಚೌರಿ, ವಿರೋಧ ಇರುವುದು ಪಠಾಣ್ ಸಿನಿಮಾ ಬಗ್ಗೆ ಅಲ್ಲ, ಹಾಡಿನಲ್ಲಿ ಧರಿಸಿರೋ ಬಟ್ಟೆಯ ಬಗ್ಗೆ. ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ, ಮುಸ್ಲಿಂ ಅಥವಾ ಯಾವುದೇ ಧರ್ಮದ ಅನುಯಾಯಿಗಳಿರಲಿ, ಮಹಿಳೆ ಅಂತಹ ಬಟ್ಟೆಗಳನ್ನು ಧರಿಸುವುದು ಹಾಗೂ ಅಂತಹ ದೃಶ್ಯವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ಯಾರೂ ಅನುಮತಿಸೋದಿಲ್ಲ ಎಂದು ಹೇಳಿದ್ದಾರೆ.

    `ಪಠಾಣ್’ ಸಿನಿಮಾದ `ಬೇಷರಂ ರಂಗ್’ ಹಾಡನ್ನು ಬಿಡುಗಡೆಗೊಳಿಸಿದ ಎರಡು ದಿನಗಳ ನಂತರ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ಹೇಳಿಕೆ ನಂತರ ಕೇಸರಿ ವಿವಾದದ ಅಲೆ ಜೋರಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಂವಿಧಾನ ಉಳಿಸಲು ಮೋದಿ ಹತ್ಯೆ ಮಾಡಿ – ಕಾಂಗ್ರೆಸ್ ಮಾಜಿ ಸಚಿವ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ

    ಸಂವಿಧಾನ ಉಳಿಸಲು ಮೋದಿ ಹತ್ಯೆ ಮಾಡಿ – ಕಾಂಗ್ರೆಸ್ ಮಾಜಿ ಸಚಿವ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ

    ಭೋಪಾಲ್: ಮಧ್ಯಪ್ರದೇಶದ (MadyaPradesh) ಮಾಜಿ ಸಚಿವ ಹಾಗೂ ಕಾಂಗ್ರೆಸ್ (Congress) ನಾಯಕ ಆಗಿರುವ ರಾಜಾ ಪಟೇರಿಯಾ (Raja Pateria), ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ.

    ಸರಳ ಸಭೆಯೊಂದರಲ್ಲಿ ಪಟೇರಿಯಾ ಮಾತನಾಡಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಸದ್ದು ಮಾಡುತ್ತಿದೆ. ಸಭೆಯಲ್ಲಿ ಮಾತನಾಡುತ್ತಾ, `ಪ್ರಧಾನಿ ಮೋದಿ (Narendra Modi) ಅವರು ಧರ್ಮದ ಆಧಾರದ ಮೇಲೆ ಜನರನ್ನ ವಿಭವಿಸುತ್ತಿದ್ದಾರೆ. ಮೋದಿ ಅವರ ಆಡಳಿತದಲ್ಲಿ ದಲಿತರು (Dalits) ದೊಡ್ಡ ಬೆದರಿಕೆ ಎದುರಿಸುತ್ತಿದ್ದಾರೆ. ನೀವು ಸಂವಿಧಾನ ಉಳಿಸಲು ಮೋದಿಯನ್ನು ಕೊಲ್ಲಲು ಸಿದ್ಧರಾಗಬೇಕು. ಕೊಲ್ಲುವುದೆಂದರೆ ಹತ್ಯೆ ಮಾಡುವುದಲ್ಲ. ಅವರನ್ನು ಸೋಲಿಸಬೇಕು’ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ದಲಿತರ ಹೆಸರಲ್ಲಿ ಅಧಿಕಾರ ಅನುಭವಿಸಿದ್ದು ಮರೆತು ಹೋಯ್ತಾ? – ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ

    ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಮಾಜಿ ಸಚಿವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ನಂತರ ಇದಕ್ಕೆ ಸ್ಪಷ್ಟನೆ ನೀಡಿರುವ ಪಟೇರಿಯಾ, ನನ್ನ ಅಭಿಪ್ರಾಯವನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಗಾಂಧಿಯನ್ನು ನಂಬುವ ವ್ಯಕ್ತಿ, ಈ ರೀತಿ ಮಾತನಾಡಲಾರೆ. ಸಂವಿಧಾನ (Constitution Of India) ಉಳಿಸಲು ಮೋದಿ ಅವರನ್ನು ಸೋಲಿಸಬೇಕು ಅನ್ನೋ ಅರ್ಥದಲ್ಲಿ ಮಾತನಾಡಿದ್ದೇನೆ. ದಲಿತರು, ಆದಿವಾಸಿಗಳನ್ನು ರಕ್ಷಿಸಲು ಹಾಗೂ ನಿರುದ್ಯೋಗ ಸಮಸ್ಯೆಯನ್ನು ತೊಡೆದುಹಾಕಲು ಮೋದಿಯನ್ನು ಸೋಲಿಸುವುದು ಅವಶ್ಯಕ ಎಂಬ ಅರ್ಥದಲ್ಲಿ ಹೇಳಿದ್ದೇನೆ. ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 200 ಸಂತರ ಸಮ್ಮುಖದಲ್ಲಿ ಇಂದು ಗುಜರಾತ್‍ನ 18ನೇ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣ ವಚನ ಸ್ವೀಕಾರ

    ಕಾಂಗ್ರೆಸ್ ನಾಯಕನ ಹೇಳಿಕೆಯಿಂದ ಬಿಜೆಪಿ ಪಾಳಯ ಕೆಂಡಾಮಂಡಲವಾಗಿದೆ. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra) ಅವರು, ಕೇಸ್ ದಾಖಲಿಸುವಂತೆ ಪನ್ನಾ ಪೊಲೀಸ್ ಠಾಣೆಗೆ ಸೂಚಿಸಿದ್ದಾರೆ. ನಾನು ಪಟೇರಿಯಾ ಹೇಳಿಕೆಯನ್ನ ಕೇಳಿದ್ದೇನೆ. ಈ ಕಾಂಗ್ರೆಸ್ ಪಕ್ಷವು ಮಹಾತ್ಮ ಗಾಂಧಿಯವರದ್ದಲ್ಲ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಆದ್ದರಿಂದ `ಈ ಕಾಂಗ್ರೆಸ್ ಇಟಲಿಗೆ ಸೇರಿದ್ದು, ಅದರ ಸಿದ್ಧಾಂತ ಮುಸಲೋನಿಯದ್ದು’ ಎಂದು ಎಫ್‌ಐಆರ್ ದಾಖಲಿಸುವಂತೆ ಎಸ್‌ಪಿಗೆ ಸೂಚನೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಗಾಲ್ವಾನ್ ಹಾಯ್’ ಎಂದ ನಟಿಗೆ ಚಳಿ ಬಿಡಿಸಿದ ಸಚಿವ – ಕಾನೂನು ಕ್ರಮಕ್ಕೆ ಚಿಂತನೆ

    `ಗಾಲ್ವಾನ್ ಹಾಯ್’ ಎಂದ ನಟಿಗೆ ಚಳಿ ಬಿಡಿಸಿದ ಸಚಿವ – ಕಾನೂನು ಕ್ರಮಕ್ಕೆ ಚಿಂತನೆ

    ಭೋಪಾಲ್: `ಗಾಲ್ವಾನ್ ಹಾಯ್’ ಎಂದು ಟ್ವೀಟ್ ಮಾಡುವ ಮೂಲಕ ಭಾರತೀಯ ಸೇನೆಗೆ (Indian Army) ಅಪಮಾನ ಮಾಡಿದ್ದಾರೆಂದು ಟೀಕೆಗೆ ಗುರಿಯಾಗಿರುವ ನಟಿ ರಿಚಾ ಚಡ್ಡಾಗೆ (Richa Chadha) ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra) ಚಳಿ ಬಿಡಿಸಿದ್ದಾರೆ. ಅಲ್ಲದೇ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

    ರೀಲ್ ಲೈಫ್ – ರಿಯಲ್ ಲೈಫ್‌ಗೂ ವ್ಯತ್ಯಾಸ ಇರೋದನ್ನ ಅರ್ಥ ಮಾಡಿಕೊಳ್ಳಬೇಕು. ಇದು ಸೇನೆಯೇ ಹೊರತು ಸಿನಿಮಾವಲ್ಲ ಎಂದು ನಟಿಯನ್ನು ತರಾಟೆಗೆ ತೆಗದುಕೊಂಡಿದ್ದಾರೆ. ಇದನ್ನೂ ಓದಿ: ಭಾರತೀಯ ಸೈನ್ಯಕ್ಕೆ ಅಪಮಾನ: ನಟಿ ರಿಚಾ ಚಡ್ಡಾ ಕ್ಷಮೆಯಾಚನೆ

    ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಸೇನೆ ಸಿದ್ಧವಾಗಿದೆ ಎಂದು ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ (General Dwivedi) ಹೇಳಿಕೆ ನೀಡಿದ್ದರು. ಅದನ್ನು ಅವಮಾನಿಸುವಂತೆ ರಿಚಾ ಟ್ವೀಟ್ ಮಾಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಯಿತು. ಅಕ್ಷಯ್ ಕುಮಾರ್ ಸೇರಿದಂತೆ ಹಲವರು ರಿಚಾ ನಡೆಯನ್ನು ಖಂಡಿಸಿದ್ದರು. ಇದರ ಬೆನ್ನಲ್ಲೇ ನಟಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ಇದರ ಹೊರತಾಗಿಯೂ ಮಿಶ್ರಾ ಅವರು ರಿಚಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಚಡ್ಡಾ ಹೇಳಿಕೆಯಿಂದ ಹಲವು ದೇಶಭಕ್ತರಿಗೆ ನೋವಾಗಿದೆ. ನಿಮ್ಮ ವಿರುದ್ಧ ದೂರುಗಳು ಕೇಳಿಬಂದಿದೆ. ಆದ್ದರಿಂದ ಸೂಕ್ತ ಕ್ರಮಕ್ಕಾಗಿ ಕಾನೂನು ತಜ್ಞರ ಅಭಿಪ್ರಾಯ ತೆಗೆದುಕೊಳ್ಳುತ್ತಿದ್ದೇವೆ ಎಂದು ಮಿಶ್ರಾ ಹೇಳಿದ್ದಾರೆ. ಇದನ್ನೂ ಓದಿ: ವಸಿಷ್ಠ ಸಿಂಹ ಜೊತೆ ಹಸೆಮಣೆ ಏರಲು ಸಜ್ಜಾದ ಹರಿಪ್ರಿಯಾ – ಸೂಪರ್‌ ಜೋಡಿ ಅಂದ್ರು ಫ್ಯಾನ್ಸ್‌

    ರಿಚಾ ಜೀ ಅದು ಸಿನಿಮಾ (Cinema) ಅಲ್ಲ, ಸೈನ್ಯ. ಕೆಲವೊಮ್ಮೆ ಮೈನಸ್ 30 ರಿಂದ 45 ಡಿಗ್ರಿ ಸೆಲ್ಸಿಯಸ್ ಇರುತ್ತೆ. ಇನ್ನೂಮ್ಮೆ 45 ಡಿಗ್ರಿ ತಾಪಮಾನ ಇರುತ್ತೆ, ನಿಮಗೆ ಸಾಮರ್ಥ್ಯವಿದ್ದರೆ ಅಲ್ಲಿ ಉಳಿಯಲು ಪ್ರಯತ್ನಿಸಿ. ಆಗ ನಿಮಗೆ ರೀಲ್ ಲೈಫ್ – ರಿಯಲ್ ಲೈಫ್‌ಗೂ ವ್ಯತ್ಯಾಸ ತಿಳಿಯುತ್ತದೆ. ಸೈನಿಕರ ಶ್ರಮ ಮತ್ತು ತ್ಯಾಗ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ. ಈ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಹುಬಲಿ ನಟ ಪ್ರಭಾಸ್ ಅಂಡ್ ಟೀಮ್ ಗೆ ಗೃಹ ಸಚಿವರ ಎಚ್ಚರಿಕೆ: ಹನುಮನಿಗೆ ಅವಮಾನ

    ಬಾಹುಬಲಿ ನಟ ಪ್ರಭಾಸ್ ಅಂಡ್ ಟೀಮ್ ಗೆ ಗೃಹ ಸಚಿವರ ಎಚ್ಚರಿಕೆ: ಹನುಮನಿಗೆ ಅವಮಾನ

    ಪ್ರಭಾಸ್ (Prabhas) ನಟಿಸಿರುವ ‘ಆದಿಪುರುಷ್’ (Aadi Purush) ಸಿನಿಮಾದಲ್ಲಿ ರಾಮಾಯಣಕ್ಕೆ ಅಪಮಾನ ಮಾಡಿದ್ದಾರೆಂದು ಹಿಂದೂ ಪರ ಸಂಘಟನೆಗಳು ಆರೋಪಿಸಿವೆ. ರಾಮಾಯಣದ ಪಾತ್ರಗಳನ್ನು ತಮಗಿಷ್ಟ ಬಂದಂತೆ ಪ್ರೆಸೆಂಟ್ ಮಾಡಿರುವುದಕ್ಕಾಗಿ ಭಾರೀ ಆಕ್ರೋಶ ವ್ಯಕ್ಯವಾಗುತ್ತಿದೆ. ಟೀಸರ್ ಕೂಡ ಕಳಪೆ ಮಟ್ಟದ್ದಾಗಿದೆ ಎಂದು ಟ್ರೋಲಿಗರು ಸಿನಿಮಾ ಬೆನ್ನು ಬಿದ್ದಿದ್ದಾರೆ. ಈ ನಡುವೆ ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಚಿತ್ರತಂಡಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

    ಆದಿಪುರುಷ್ ಸಿನಿಮಾದಲ್ಲಿ ಹಿಂದೂಗಳ ಭಾವನೆ ಧಕ್ಕೆ ಮಾಡಲಾಗಿದೆ ಎಂದು ಗೃಹ ಸಚಿವರು ಆರೋಪಿಸಿದ್ದು, ಈಗಾಗಲೇ ಬಿಡುಗಡೆಗೊಂಡ ಟೀಸರ್ ನಲ್ಲಿ ಹನುಮಂತ ಪಾತ್ರಧಾರಿಗೆ ಲೆದರ್ ಬಟ್ಟೆಗಳನ್ನು ತೊಡಿಸಲಾಗಿದೆ. ಹನುಮನ ಸೈನಕ್ಕೂ ಲೆದರ್ ಬಟ್ಟೆ ಇದೆ. ಹೀಗಾಗಿ ಹನುಮ ದೇವರಿಗೆ ಅಪಮಾನ ಮಾಡಲಾಗಿದೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra) ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅದನ್ನು ಸರಿ ಮಾಡದೇ ಇದ್ದರೆ ಪರಿಣಾಮ ಸರಿ ಇರಲ್ಲ ಎಂದು ಚಿತ್ರತಂಡಕ್ಕೆ ತಿಳಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಮಿಶ್ರಾ, ಲೆದರ್ ಬಟ್ಟೆಗಳನ್ನು ಹಾಕಿರುವ ಕುರಿತು ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಪತ್ರ ಬರೆಯುವುದಾಗಿ ತಿಳಿಸಿರುವ ಅವರು, ಒಂದು ವೇಳೆ ಆ ದೃಶ್ಯಗಳನ್ನು ತಗೆದು ಹಾಕದೇ ಇದ್ದರೆ ಕಾನೂನು ಕ್ರಮಕ್ಕೂ ತಾವು ಹಿಂಜರಿಯುವುದಿಲ್ಲ ಎನ್ನುತ್ತಾರೆ.  ಇಂತಹ ಅಪಮಾನಗಳನ್ನು ಯಾವತ್ತಿಗೂ ಹಿಂದೂಗಳ ಸಹಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ನಾನು ಲವ್ ಮಾಡೋಕೆ ಬಂದಿಲ್ಲ: ಗೊಬ್ಬರಗಾಲಗೆ ಕಾವ್ಯಶ್ರೀ ವಾರ್ನಿಂಗ್

    ಆದಿ ಪುರುಷ್ ಟೀಸರ್ (Teaser) ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಸ್ವತಃ ಪ್ರಭಾಸ್ ಕೂಡ ಕೋಪ ಮಾಡಿಕೊಂಡಿದ್ದಾರೆ. ಟೀಸರ್ ಬಿಡುಗಡೆ ಸಮಾರಂಭ ಮುಗಿದ ನಂತರ ನಿರ್ದೇಶಕರನ್ನು ತಮ್ಮ ರೂಮ್ ಗೆ ಕರೆದು ಬೈದಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಸೈಫ್ ಅಲಿ ಖಾನ್ (Saif Ali Khan) ಅವರಿಗೆ ರಾವಣನ ಪಾತ್ರ ಕೊಟ್ಟಿದ್ದಕ್ಕೂ ಹಲವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರಾವಣನ ರೀತಿಯಲ್ಲಿ ಅವರು ಕಾಣುತ್ತಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • KGF ಸಿನಿಮಾ ಸ್ಫೂರ್ತಿ – ದಿಢೀರ್ ಫೇಮಸ್ ಆಗಲು ನಾಲ್ವರನ್ನು ಚಚ್ಚಿಕೊಂದ ಯುವಕ

    KGF ಸಿನಿಮಾ ಸ್ಫೂರ್ತಿ – ದಿಢೀರ್ ಫೇಮಸ್ ಆಗಲು ನಾಲ್ವರನ್ನು ಚಚ್ಚಿಕೊಂದ ಯುವಕ

    ಭೋಪಾಲ್: ಕೆಜಿಎಫ್ ಸಿನಿಮಾ ಹಾಗೂ ಜಾಲತಾಣದಲ್ಲಿ ಹಲವಾರು ಹತ್ಯೆಯ ವೀಡಿಯೋಗಳನ್ನು ನೋಡಿ ಸ್ಫೂರ್ತಿ ಪಡೆದಿದ್ದ ಯುವಕನೊಬ್ಬ ದಿಢೀರ್ ಫೇಮಸ್ ಆಗಬೇಕು ಅಂತಾ ನಾಲ್ವರು ಭದ್ರತಾ ಸಿಬ್ಬಂದಿಯನ್ನು ವಿವಿಧ ಸುತ್ತಿಗೆ, ರಾಡ್, ಕಲ್ಲಿನಿಂದ ಚಚ್ಚಿ ಕೊಂದಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.

    KGF 2 Yash (4)
    ಸಾಂದರ್ಭಿಕ ಚಿತ್ರ

    ಘಟನೆಗೆ ಸಂಬಂಧಿಸಿದಂತೆ ಶಿವಪ್ರಸಾದ್ (19) ನನ್ನು ಭೋಪಾಲ್ ಪೊಲೀಸರು ಬಂಧಿಸಿದ್ದಾರೆ. ಶಿವಪ್ರಸಾದ್ ದುರ್ವೆ ಎಂದು ಗುರುತಿಸಲಾಗಿದ್ದು, ಕೆಜಿಎಫ್ ಸಿನಿಮಾ ನಟನ ಮಾದರಿಯಲ್ಲಿ ಹೆಸರುವಾಸಿಯಾಗಲು ಈ ಕೃತ್ಯ ಎಸಗಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದ 31 ಪ್ರಾಥಮಿಕ, ಹೈಸ್ಕೂಲ್ ಶಿಕ್ಷಕರಿಗೆ `ಉತ್ತಮ ಶಿಕ್ಷಕ’ ಪ್ರಶಸ್ತಿ – ಯಾವ ಜಿಲ್ಲೆಯ ಯಾರಿಗೆ ಪ್ರಶಸ್ತಿ?

    ಸೆಕ್ಯುರಿಟಿ ಗಾರ್ಡ್ಗಳು ಮಲಗಿದ್ದ ಸಂದರ್ಭ ಶಿವಪ್ರಸಾದ್ ಹತ್ಯೆ ಮಾಡಿದ್ದಾನೆ. ಸಾಗರ ಜಿಲ್ಲೆಯಲ್ಲಿ ಮೂವರು ಮತ್ತು ಭೋಪಾಲ್‌ನಲ್ಲಿ ಒಬ್ಬರನ್ನು ಹತ್ಯೆ ಮಾಡಿದ್ದಾನೆ. ಈ ಪೈಕಿ ಒಂದು ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದರಲ್ಲಿ ಆರೋಪಿಯು ಸೆಕ್ಯುರಿಟಿ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ, ಕಲ್ಲಿನಿಂದ ಚಚ್ಚಿ ಭೀಕರವಾಗಿ ಕೊಂದಿರುವುದು ಜನರನ್ನು ಬೆಚ್ಚಿ ಬೀಳಿಸಿದೆ.

    ಆರೋಪಿ ನಾಲ್ಕನೇ ಹತ್ಯೆಯನ್ನು ಭೋಪಾಲ್‌ನಲ್ಲಿ ನಡೆಸಿದ ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಲಾಗಿದೆ. ಹತ್ಯೆಯಾದ ಸೆಕ್ಯುರಿಟಿಯೊಬ್ಬರ ಮೊಬೈಲ್ ಕಸಿದಿದ್ದ ಆರೋಪಿ ಅದರ ಟವರ್ ಲೊಕೇಶನ್ ಮೂಲಕವೇ ಸಿಕ್ಕಿಬಿದ್ದಿದ್ದಾನೆ. ತನಿಖೆ ವೇಳೆ ನಾಲ್ಕೂ ಹತ್ಯೆಗಳನ್ನು ತಾನೇ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ. ಇದನ್ನೂ ಓದಿ: 1.5 ಕೋಟಿ ರೂ. ನೀಡಿ ನೀರಜ್ ಚೋಪ್ರಾರ ಜಾವೆಲಿನ್ ಖರೀದಿಸಿದ ಬಿಸಿಸಿಐ

    ಆರೋಪಿ ಶಿವಪ್ರಸಾದ್ ಸೆಕ್ಯೂರಿಟಿ ಗಾರ್ಡ್ಗಳನ್ನೇ ಹುಡುಕಿ ಕೊಲ್ಲುವ ಪ್ರೌವೃತ್ತಿ ಬೆಳೆಸಿಕೊಂಡಿದ್ದ, ಅಲ್ಲದೇ ಪೊಲೀಸ್ ಠಾಣೆ ಸಿಬ್ಬಂದಿಯನ್ನೂ ಕೊಲ್ಲೋದಕ್ಕೆ ಯೋಜಿಸಿದ್ದ ಎಂದು ಹೇಳಲಾಗಿದೆ.

    ಶಿವಪ್ರಸಾದ್ ನಿನ್ನೆ ತಡರಾತ್ರಿ ಭದ್ರತಾ ಸಿಬ್ಬಂದಿಯಾಗಿದ್ದ ಸೋನು ವರ್ಮಾ (23) ಎಂಬ ಯುವಕನನ್ನು ಭೋಪಾಲ್‌ನಲ್ಲಿ ಮಾರ್ಬಲ್ ರಾಡ್‌ನಿಂದ ಹೊಡೆದು ಕೊಂದಿದ್ದಾನೆ. ಇದಕ್ಕೂ ಮುನ್ನ ಸಾಗರ್‌ನಲ್ಲಿ ಕಾರ್ಖಾನೆಯೊಂದರ ಭದ್ರತಾ ಸಿಬ್ಬಂದಿ ಕಲ್ಯಾಣ್ ಲೋಧಿ ಅವರನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ಮರುದಿನ ರಾತ್ರಿಯೇ 60 ವರ್ಷದ ಕಾಲೇಜು ಭದ್ರತಾ ಸಿಬ್ಬಂದಿ ಶಂಬು ನಾರಾಯಣ ದುಬೆ ಅವರನ್ನ ಕಲ್ಲಿನಿಂದ ಚಚ್ಚಿ ಕೊಂದಿದ್ದಾನೆ. ಈ ಹತ್ಯೆಗಳು ಮಧ್ಯಪ್ರದೇಶದಲ್ಲಿ ಭಯೋತ್ಪಾದನೆಯ ಭೀತಿ ಹೆಚ್ಚಿಸಿದ್ದು, ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಂದಿ ಸಿನಿಮಾ ಬಾಯ್ಕಾಟ್: ಪ್ರೇಕ್ಷಕರನ್ನು ಬೆದರಿಸುತ್ತಿದ್ದಾರಂತೆ ನಟ ಅರ್ಜುನ್ ಕಪೂರ್

    ಹಿಂದಿ ಸಿನಿಮಾ ಬಾಯ್ಕಾಟ್: ಪ್ರೇಕ್ಷಕರನ್ನು ಬೆದರಿಸುತ್ತಿದ್ದಾರಂತೆ ನಟ ಅರ್ಜುನ್ ಕಪೂರ್

    ಬಾಲಿವುಡ್ ಸಿನಿಮಾಗಳ, ಅದರಲ್ಲೂ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಬಾಯ್ಕಾಟ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಒತ್ತಡ ಹಾಕಿದವರ ಮೇಲೆ ನಟ ಅರ್ಜುನ್ ಕಪೂರ್ ಗರಂ ಆಗಿದ್ದರು. ಇಂತಹ ಶಕ್ತಿಗಳನ್ನು ಬೆಳೆಯಲು ಬಿಡಬಾರದು, ಬೆಳೆಯುತ್ತಿರುವಾಗಲೇ ಕಿತ್ತು ಬೀಸಾಕಬೇಕು ಎಂದು ಹೇಳಿದ್ದರು. ಅರ್ಜುನ್ ಕಪೂರ್ ಈ ಹೇಳಿಕೆ ಭಾರೀ ಚರ್ಚೆಗೂ ಗ್ರಾಸವಾಗಿತ್ತು. ಹಾಗಾಗಿ ಬಿಜೆಪಿ ಮುಖಂಡರು ಅರ್ಜುನ್ ಮಾತಿಗೆ ತಮ್ಮದೇ ಆದ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.

    ಬಿ.ಜೆ.ಪಿ ಮುಖಂಡ, ಮಧ್ಯ ಪ್ರದೇಶದ ಗೃಹ ಸಚಿವ ಡಾ.ನರೋತ್ತಮ್ ಮಿಶ್ರಾ ಮಾತನಾಡಿ, ಬಾಲಿವುಡ್ ನಟ ಅರ್ಜುನ್ ಕಪೂರ್ ಪ್ರೇಕ್ಷಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಭಯ ಹುಟ್ಟಿಸುತ್ತಿದ್ದಾರೆ. ಯಾವ ಕಾರಣಕ್ಕೆ ಸಿನಿಮಾಗಳನ್ನು ಬಾಯ್ಕಾಟ್ ಮಾಡಲಾಗುತ್ತಿದೆ ಎನ್ನುವುದನ್ನು ಅರ್ಜುನ್ ಅರಿಯಲಿ ಎಂದು ಅವರು ಹೇಳಿಕೆ ನೀಡಿದ್ದಾರೆ. ಯಾವುದೇ ರೀತಿಯಲ್ಲಿ ನೀವು ಹೆದರಿಸಿದರೂ, ಪ್ರೇಕ್ಷಕರು ಹೆದರುತ್ತಾರೆ ಎಂಬ ತಪ್ಪು ಕಲ್ಪನೆ ಇದ್ದರೆ ಕೈ ಬಿಡಿ ಎಂದಿದ್ದಾರೆ ಮಿಶ್ರಾ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆರ್ಯವರ್ಧನ್ ಗುರೂಜಿ

    ಲಾಲ್ ಸಿಂಗ್ ಚಡ್ಡಾ ಸೇರಿದಂತೆ ಹಲವು ಬಾಲಿವುಡ್ ಸಿನಿಮಾಗಳನ್ನು ಬಾಯ್ಕಾಟ್ ಮಾಡಬೇಕೆಂದು ಹಲವರು ಕರೆ ನೀಡಿದ್ದಾರೆ. ಅದರಲ್ಲೂ ಹಿಂದೂ ವಿರೋಧಿ ನಟ, ನಟಿಯರ ಹಾಗೂ ನಿರ್ದೇಶಕರ ಚಿತ್ರಗಳನ್ನು ನೋಡಬಾರದು ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿರುವ ಕುರಿತು ಅರ್ಜುನ್ ಕಪೂರ್ ಬೇಸರ ವ್ಯಕ್ತ ಪಡಿಸಿದ್ದರು. ಇಂತಹ ಶಕ್ತಿಗಳನ್ನು ತಡೆಯಬೇಕು ಎಂದು ಅವರು ಕರೆ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಹನುಮಾನ್‌ ಚಾಲೀಸಾ ಪಠಿಸಿದ ವಿದ್ಯಾರ್ಥಿಗಳಿಗೆ ದಂಡ – ಗೃಹ ಸಚಿವ ಕಿಡಿ

    ಹನುಮಾನ್‌ ಚಾಲೀಸಾ ಪಠಿಸಿದ ವಿದ್ಯಾರ್ಥಿಗಳಿಗೆ ದಂಡ – ಗೃಹ ಸಚಿವ ಕಿಡಿ

    ಭೋಪಾಲ್: ಅನುಮತಿಯಿಲ್ಲದೇ ಭೋಪಾಲ್‌ನ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ಗುಂಪೊಂದು ಹನುಮಾನ್‌ ಚಾಲೀಸಾ ಪಠಿಸಿದ್ದಕ್ಕಾಗಿ ಆಡಳಿತ ಮಂಡಳಿ ದಂಡ ವಿಧಿಸಿತ್ತು. ಆದರೆ ಇದಕ್ಕೆ ಮಧ್ಯಪ್ರದೇಶ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ದಂಡ ವಿಧಿಸದಂತೆ ಖಡಕ್‌ ಸೂಚನೆ ನೀಡಿದೆ.

    ಹಿಂದೂಸ್ತಾನದಲ್ಲಿ ಅಲ್ಲದೇ ಬೇರೆಲ್ಲಿ ವಿದ್ಯಾರ್ಥಿಗಳು ಹನುಮಾನ್‌ ಚಾಲೀಸಾ ಪಠಿಸಬೇಕು ಎಂದು ಮಧ್ಯಪ್ರದೇಶ ಸರ್ಕಾರದ ಗೃಹ ಸಚಿವ ನರೋತ್ತಮ್‌ ಮಿಶ್ರಾ ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಆಲ್ಟ್‌ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ ಜಾಮೀನು

    hanuman statue

    ಭೋಪಾಲ್‌ನಿಂದ ಸುಮಾರು 60 ಕಿಮೀ ದೂರದಲ್ಲಿರುವ ಕೊತ್ರಿ ಕಲಾನ್‌ನಲ್ಲಿರುವ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.

    ಅನುಮತಿಯಿಲ್ಲದೇ ವಿದ್ಯಾರ್ಥಿಗಳು ಗುಂಪುಗೂಡಿ ಹನುಮಾನ್‌ ಚಾಲೀಸಾ ಪಠಿಸಿದ್ದರು. ಹೀಗಾಗಿ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ದಂಡ ವಿಧಿಸಿತ್ತು. ಸುಮಾರು 20 ವಿದ್ಯಾರ್ಥಿಗಳು ಜಮಾಯಿಸಿದ್ದರು. ಕಾಲೇಜು ಅವರ ಪೈಕಿ ಏಳು ಮಂದಿಗೆ ತಲಾ 5,000 ರೂ. ದಂಡ ವಿಧಿಸಿತ್ತು. ಇದನ್ನೂ ಓದಿ: 11 ಪ್ರಯಾಣಿಕರಿದ್ದ ಕಾರು ನದಿಗೆ – 9 ಮಂದಿ ದುರ್ಮರಣ

    ವಿದ್ಯಾರ್ಥಿಗಳಿಗೆ ದಂಡ ವಿಧಿಸದಂತೆ ಕಾಲೇಜಿಗೆ ಗೃಹ ಸಚಿವರು ಸೂಚನೆ ನೀಡಿದ್ದಾರೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನಲ್ಲಿ ವಿಚಾರಣೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]