Tag: ನರೇಂದ್ರ ದಾಬೋಲ್ಕರ್

  • ದಾಬೋಲ್ಕರ್ ಹತ್ಯೆಗೆ ಬಳಸಿದ್ದ ಗನ್ ಪತ್ತೆಗೆ 7.5 ಕೋಟಿ ರೂ. ಖರ್ಚು!

    ದಾಬೋಲ್ಕರ್ ಹತ್ಯೆಗೆ ಬಳಸಿದ್ದ ಗನ್ ಪತ್ತೆಗೆ 7.5 ಕೋಟಿ ರೂ. ಖರ್ಚು!

    ಬೆಂಗಳೂರು: ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆಯ ತನಿಖೆಗೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷ್ಯ ಎಂದು ಹೇಳಲಾಗಿರುವ ಪಿಸ್ತೂಲ್ ಅನ್ನು ಸಿಬಿಐ ಅಧಿಕಾರಿಗಳು ವಿಭಿನ್ನ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

    ಸಾಗರ ತೀರದಲ್ಲಿ 40 ಅಡಿ ಆಳದಲ್ಲಿ ಗನ್ ಹುದುಗಿಸಿ ಇಡಲಾಗಿತ್ತು. ದುಬೈ ಮೂಲದ ಕಂಪನಿಯ ಸಹಾಯದೊಂದಿಗೆ ನಾರ್ವೆಯ ಪರಿಕರಗಳನ್ನು ಬಳಸಿ ಮಹಾರಾಷ್ಟ್ರದ ಠಾಣೆ ಬಳಿ ಸಿಬಿಐ ಅಧಿಕಾರಿಗಳು ಗನ್ ವಶಕ್ಕೆ ಪಡೆದಿದ್ದಾರೆ. ಅಂದಹಾಗೆ ಗನ್ ವಶ ಪಡಿಸಿಕೊಳ್ಳುವ ಕಾರ್ಯಾಚರಣೆಗೆ ಒಟ್ಟು 7.5 ಕೋಟಿ ರೂ. ವೆಚ್ಚವಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಜಂಟಿಯಾಗಿ ಇದನ್ನು ಭರಿಸಿವೆ ಎಂಬ ಮಾಹಿತಿ ಲಭ್ಯವಾಗಿದೆ.

    ವಿಚಾರವಾದಿಗಳಾದ ಗೋವಿಂದ ಪನ್ಸಾರೆ, ನರೇಂದ್ರ ದಾಬೋಲ್ಕರ್, ಗೌರಿ ಲಂಕೇಶ್ ಹಾಗೂ ಎಂ.ಎಂ.ಕಲ್ಬುರ್ಗಿಯವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹಂತಕರ ಕಾರ್ಯಶೈಲಿ ನಾಲ್ವರ ಕೇಸ್ ನಲ್ಲೂ ಒಂದೇ ರೀತಿಯಾಗಿತ್ತು. 2013ರ ಆಗಸ್ಟ್ 20 ರಲ್ಲಿ ನಡೆದ ದಾಬೋಲ್ಕರ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಡಿಸಿಪಿ ಎಂ.ಎನ್.ಅನುಚೇತ್ ನೇತೃತ್ವದ ಎಸ್‍ಐಟಿ ತಂಡ ಗೌರಿ ಲಂಕೇಶ್ ಹಾಗೂ ಎಂ.ಎಂ ಕಲ್ಬುರ್ಗಿಯವರ ಹತ್ಯೆಯ ತನಿಖೆ ನಡೆಸುತ್ತಿದೆ.

  • ನಾನೇ ತಲೆಗೆ ಎರಡು ಸುತ್ತು ಗುಂಡು ಹಾರಿಸಿದೆ: ದಾಬೋಲ್ಕರ್ ಹತ್ಯೆ ಕುರಿತು ಆರೋಪಿ ತಪ್ಪೊಪ್ಪಿಗೆ

    ನಾನೇ ತಲೆಗೆ ಎರಡು ಸುತ್ತು ಗುಂಡು ಹಾರಿಸಿದೆ: ದಾಬೋಲ್ಕರ್ ಹತ್ಯೆ ಕುರಿತು ಆರೋಪಿ ತಪ್ಪೊಪ್ಪಿಗೆ

    ನವದೆಹಲಿ: ವಿಚಾರವಾದಿ ದಾಬೋಲ್ಕರ್ ಹತ್ಯೆ ಕುರಿತು ಆರೋಪಿ ಶರದ್ ಕಲಾಸ್ಕರ್ ತಪ್ಪೊಪ್ಪಿಕೊಂಡಿದ್ದು, ದಾಬೋಲ್ಕರ್ ಅವರ ತಲೆಗೆ ನಾನೇ ಎರಡು ಸುತ್ತು ಗುಂಡು ಹಾರಿಸಿದೆ ಎಂದು ಹೇಳಿದ್ದಾನೆ.

    ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ನಡೆದು 6 ವರ್ಷಗಳ ನಂತರ ಇದೀಗ ಆರೋಪಿ ಶರದ್ ಕಲಸ್ಕರ್ ಕರ್ನಾಟಕ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಎರಡು ಸುತ್ತು ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದೇನೆ. ಒಂದು ಬಾರಿ ಹಿಂದಿನಿಂದ, ಇನ್ನೊಂದು ಬಾರಿ ಬಲ ಭಾಗದಿಂದ ಗುಂಡು ಹಾರಿಸಿದ್ದೇನೆ ಎಂದು ಕಲಸ್ಕರ್ ಹೇಳಿಕೊಂಡಿದ್ದಾನೆ.

    ತಪ್ಪೊಪ್ಪಿಗೆ ಸಂದರ್ಭದಲ್ಲಿ ಆರೋಪಿಯೂ ಇನ್ನೂ ಭಯಾನಕವಾದ ಮಾಹಿತಿ ಬಹಿರಂಗ ಪಡಿಸಿದ್ದು, ನರೇಂದ್ರ ದಾಬೋಲ್ಕರ್ ಮಾತ್ರವಲ್ಲದೆ, ವಿಚಾರವಾದಿ ಗೋವಿಂದ್ ಪನ್ಸಾರೆ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿಯೂ ಭಾಗಿಯಾಗಿರುವುದಾಗಿ ಶರದ್ ಕಲಾಸ್ಕರ್ ಬಾಯ್ಬಿಟ್ಟಿದ್ದಾನೆ.

    ಶರದ್ ಕಲಾಸ್ಕರ್‍ನನ್ನು ಕಳೆದ ವರ್ಷ ಕೊಲೆ ಹಾಗೂ ಪಿತೂರಿಗೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ವಿಚಾರವಾದಿ ಹತ್ಯೆಯಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು, ಮೊದಲ ಮೂವರು ವಿಚಾರವಾದಿಗಳು 2013 ಮತ್ತು 2015ರಲ್ಲಿ ಕೊಲೆಯಾಗಿದ್ದಾರೆ. ದಾಬೋಲ್ಕರ್ ಅವರನ್ನು ಆಗಸ್ಟ್ 2013ರಲ್ಲಿ ಪುಣೆಯಲ್ಲಿ, ಗೋವಿಂದ್ ಪನ್ಸಾರೆ ಅವರನ್ನು 2015ರ ಫೆಬ್ರವರಿಯಲ್ಲಿ ಮತ್ತು ಎಂ.ಎಂ.ಕಲಬುರ್ಗಿ ಅವರನ್ನು ಅದೇ ವರ್ಷ ಆಗಸ್ಟ್‍ನಲ್ಲಿ ಕೊಲೆ ಮಾಡಲಾಗಿತ್ತು.

    ಮಹಾರಾಷ್ಟ್ರ ಭದ್ರತಾ ನಿಗ್ರಹ ದಳ ಪಾಲ್ಘರ್ ಜಿಲ್ಲೆಯ ನಲ್ಲಸೋಪುರದ ಪಿಸ್ತೂಲು ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ ವೇಳೆ ಶರದ್ ಕಲಸ್ಕರ್ ನನ್ನು ಬಂಧಿಸಿತ್ತು. ವಿಚಾರಣೆ ವೇಳೆ ಎಲ್ಲ ವಿಚಾರವಾದಿಗಳ ಹತ್ಯೆ ಕುರಿತು ವಿವಿಧ ರಾಜ್ಯಗಳ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಂಡು ತನಿಖೆ ನಡೆಸಬೇಕಿತ್ತು. ಆದರೆ, ಅಧಿಕಾರಿಗಳು ಎಡವಿದ್ದರು. ನಂತರ ಕರ್ನಾಟಕ ಪೊಲೀಸರ ಜೊತೆ ಮಾಹಿತಿ ಹಂಚಿಕೊಂಡರು.

    ಕೆಲ ಬಲಪಂಥೀಯ ಸದಸ್ಯರನ್ನು ಸಂಪರ್ಕಿಸಿ, ಕ್ರ್ಯಾಶ್ ಕೋರ್ಸ್, ಬಂದೂಕುಗಳ ಬಳಕೆ ಹಾಗೂ ಬಾಂಬ್ ತಯಾರಿಸುವ ಪ್ರಕ್ರಿಯೆ ಕುರಿತು ಕಲಿತುಕೊಂಡೆ ಎಂದು ತಪ್ಪೊಪ್ಪಿಗೆ ಪತ್ರದಲ್ಲಿ ಕೊಲೆಗೆ ಕಾರಣಗಳನ್ನು ವಿವರಿಸುವಾಗ ಶರದ್ ಕಲಾಸ್ಕರ್ ತಿಳಿಸಿದ್ದಾನೆ ಎಂದು ವರದಿಯಾಗಿದೆ.

    ಏನು ಹೇಳಿದ್ದಾನೆ?
    ಎಲ್ಲ ವಿಚಾರವಾದಿಗಳ ಕೊಲೆಗೆ ವಿರೇಂದ್ರ ತಾವ್ಡೆ ಸೂತ್ರಧಾರಿ. ತಾವ್ಡೆ ಕೊಲೆ ಮಾಡುವಂತೆ ಯುವಕರನ್ನು ಪ್ರೇರೆಪಿಸುತ್ತಿದ್ದರು. ನಾವು ಕೆಲವು ದುಷ್ಟರನ್ನು ಮುಗಿಸಬೇಕಿದೆ ಎಂದು ವಿರೇಂದ್ರ ತಾವ್ಡೆ ಹೇಳಿದ್ದಾರು. ಅವರೇ ಎಲ್ಲ ರೀತಿಯ ಪಿತೂರಿ ಹೆಣೆದಿದ್ದು, ಯುವಕರನ್ನು ಕೊಲೆಗೆ ಪ್ರೇರೆಪಿಸಿದ್ದಾರೆ.

    ದಾಬೋಲ್ಕರ್ ತಲೆಗೆ ಗುಂಡು ಹಾರಿಸುವಂತೆ ತಾವ್ಡೆ ಅವರೇ ಹೇಳಿದ್ದರು. ಅದರಂತೆ ತಲೆಗೆ ಗುಂಡು ಹಾರಿಸಿದೆವು. ಹೀಗಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ದಾಬೋಲ್ಕರ್ ಬೆಳಗ್ಗೆ ವಾಕಿಂಗ್ ಹೋದಾಗ ತಡೆದು ತಲೆಗೆ ಗುಂಡು ಹಾರಿಸಿದೆವು

    ದಾಬೋಲ್ಕರ್ ಹತ್ಯೆಗೆ ದೇಸಿ ಬಂದೂಕು ಬಳಸಿದ್ದು, ತಲೆಗೆ ಹಿಂದಿನಿಂದ ಒಂದು ಬಾರಿ ಗುಂಡು ಹಾರಿಸಿದ ತಕ್ಷಣ ದಾಬೋಲ್ಕರ್ ಸೇತುವೆ ಮೇಲೆ ಬಿದ್ದರು. ಇನ್ನೊಂದು ಗುಂಡನ್ನು ಬಲದಿಂದ ಹೊಡೆಯಲೆತ್ನಿಸಿದೆ ಆದರೆ, ಅದು ಸಿಲುಕಿಕೊಂಡಿತು. ನಂತರ ಗುಂಡು ತೆಗೆದು ರಕ್ತದ ಮಡುವಿನಲ್ಲಿದ್ದ ದಾಬೋಲ್ಕರ್ ಮುಖದ ಬಲಗಣ್ಣಿನ ಭಾಗಕ್ಕೆ ಹೊಡೆದೆನು. ನಂತರ ಬಂದ ಎರಡನೇ ಶೂಟರ್ ಸಚಿನ್ ಅಂಡುರೆ ಕೂಡ ಗುಂಡು ಹಾರಿಸಿದ.

    ತಪ್ಪೊಪ್ಪಿಗೆ ಪ್ರಕಾರ ವೀರೇಂದ್ರ ತಾವ್ಡೆ ಅವರು ಕಲಾಸ್ಕರ್‍ನನ್ನು ಅಮೋಲ್ ಕಾಳೆಗೆ ಪರಿಚಯಿಸಿದ್ದಾನೆ. ಅಮೋಲ್ ಕಾಳೆಯನ್ನು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಅಲ್ಲದೆ, ಗೌರಿ ಲಂಕೇಶ್ ಹತ್ಯೆ ಯೋಜನೆ ರೂಪಿಸಲು ನಡೆದ ಸಭೆಯಲ್ಲಿ ಭಾಗವಹಿಸಿದ್ದೆ.

    2016ರ ಆಗಸ್ಟ್‍ನಲ್ಲಿ ಬೆಳಗಾವಿಯಲ್ಲಿ ಹಿಂದೂ ಧರ್ಮದ ವಿರುದ್ಧ ಕೆಲಸ ಮಾಡುವ ಜನರನ್ನು ಹೆಸರಿಸಲಾಗಿತ್ತು. ಈ ಸಭೆಯಲ್ಲಿ ಗೌರಿ ಲಂಕೇಶ್ ಹೆಸರೂ ಸಹ ಕೇಳಿಬಂದಿತ್ತು. ಅಲ್ಲಿಯೇ ಗೌರಿ ಲಂಕೇಶ್ ಅವರನ್ನು ಕೊಲೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ನಂತರ 2017ರ ಆಗಸ್ಟ್‍ನಲ್ಲಿ ನಡೆದ ಸಭೆಯಲ್ಲಿ ಯೋಜನೆಗಳನ್ನು ಅಂತಿಮಗೊಳಿಸಿ, ಜವಾಬ್ದಾರಿಗಳನ್ನು ಹಸ್ತಾಂತರಿಸಲಾಯಿತು. ಸಭೆ ನಡೆದು ಒಂದು ತಿಂಗಳ ನಂತರ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಹೇಳಿಕೆ ನೀಡಿದ್ದಾನೆ ಎಂದು ವರದಿಯಾಗಿದೆ.

    ವಿಚಾರಣೆ ವೇಳೆ ಇನ್ನೊಂದು ಭಯಾನಕ ಅಂಶವನ್ನು ಕಲಾಸ್ಕರ್ ಬಹಿರಂಗಪಡಿಸಿದ್ದು, ಬಾಂಬೆ ಹೈ ಕೋರ್ಟ್‍ನ ನಿವೃತ್ತ ನ್ಯಾಯಾಧೀಶ ನ್ಯಾ.ಬಿ.ಜಿ.ಭೋಸ್ಲೆ ಪಾಟೀಲ್ ಅವರನ್ನು ಗುರಿಯಾಗಿಸುವ ಯೋಜನೆ ಇದೆ ಎಂದು ತಿಳಿಸಿದ್ದಾನೆ.

  • ದಾಬೋಲ್ಕರ್ ಹತ್ಯೆ ಪ್ರಕರಣ: ಸನಾತನ ಸಂಸ್ಥೆ ವಕೀಲ ನ್ಯಾಯಾಂಗ ಬಂಧನಕ್ಕೆ

    ದಾಬೋಲ್ಕರ್ ಹತ್ಯೆ ಪ್ರಕರಣ: ಸನಾತನ ಸಂಸ್ಥೆ ವಕೀಲ ನ್ಯಾಯಾಂಗ ಬಂಧನಕ್ಕೆ

    ಪುಣೆ: ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ಆರೋಪಿ ಹಾಗೂ ಸನಾತನ ಸಂಸ್ಥಾದ ವಕೀಲ ಸಂಜೀವ್ ಪುನಲೇಕರ್ ಅವರನ್ನು ಪುಣೆ ನ್ಯಾಯಾಲಯ ಜುಲೈ 6ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

    ವಕೀಲ ಪುನಲೇಕರ್ ಅವರ ಲ್ಯಾಪ್‍ಟಾಪ್‍ನಲ್ಲಿ ಮಹತ್ವದ ದಾಖಲೆಗಳು ಸಿಕ್ಕಿದೆ. ಹೀಗಾಗಿ ಆರೋಪಿಯನ್ನು ವಿಚಾರಣೆ ನಡೆಸಲು ಕಸ್ಟಡಿಗೆ ನೀಡಬೇಕೆಂದು ಸಿಬಿಐ ಮನವಿ ಮಾಡಿತ್ತು. ಮನವಿಯ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶರಾದ ಆರ್.ಎಂ.ಪಾಂಡೆ ಅವರು ಜೂನ್ 23ರ ವರೆಗೆ ಸಿಬಿಐ ಕಸ್ಟಡಿಗೆ ನೀಡಿದ್ದರು.

    ವಿಚಾರಣೆ ಪೂರ್ಣಗೊಳಿಸಿದ ಬಳಿಕ ಸಿಬಿಐ ಜೂನ್ 23 ರಂದು ಮತ್ತೆ ಪುನಲೇಕರ್ ಅವರನ್ನು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಜುಲೈ 6ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.

    ವಕೀಲ ಪುನಲೇಕರ್ ಹಾಗೂ ಈತನ ಸಹಚರ ವಿಕ್ರಮ್ ಭಾವೆಯನ್ನು ಮೇ 25ರಂದು ಸಿಬಿಐ ಬಂಧಿಸಿತ್ತು. ವಿಚಾರವಾದಿ ನರೇಂದ್ರ ದಾಬೋಲ್ಕರ್ ಅವರನ್ನು 2013ರ ಆ.20ರಂದು ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]