Tag: ನರಿಸಿಂಗ್ ಯಾದವ್

  • ಕೈ ಪರ ಪ್ರಚಾರ – ಕುಸ್ತಿಪಟು ನರಸಿಂಗ್ ಯಾದವ್ ವಿರುದ್ಧ ಎಫ್‍ಐಆರ್

    ಕೈ ಪರ ಪ್ರಚಾರ – ಕುಸ್ತಿಪಟು ನರಸಿಂಗ್ ಯಾದವ್ ವಿರುದ್ಧ ಎಫ್‍ಐಆರ್

    ಮುಂಬೈ: ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದ ಖ್ಯಾತ ಕುಸ್ತಿಪಟು ನರಿಸಿಂಗ್ ಯಾದವ್ ವಿರುದ್ಧ ಮಹಾರಾಷ್ಟ್ರದ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ನರಸಿಂಗ್ ಯಾದವ್ ಅವರು ಮಹಾರಾಷ್ಟ್ರದಲ್ಲಿ ಸಹಾಯಕ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅವರು ಕಾಂಗ್ರೆಸ್ ನಾಯಕ, ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಂಜಯ್ ನಿರೂಪಮ್ ಅವರ ಪರವಾಗಿ ಭಾನುವಾರ ರಾತ್ರಿ ಪ್ರಚಾರ ಮಾಡಿದ್ದರು. ಸರ್ಕಾರಿ ಉದ್ಯೋಗದಲ್ಲಿದ್ದುಕೊಂಡು ವ್ಯಕ್ತಿ, ಒಂದು ಪಕ್ಷದ ಪರ ಪ್ರಚಾರ ಮಾಡುವುದು ಅಪರಾಧ. ಹೀಗಾಗಿ ನರಸಿಂಗ್ ಯಾದವ್ ವಿರುದ್ಧ ಪ್ರಕರಣ ದಾಖಲಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು, ನರಸಿಂಗ್ ಯಾದವ್ ಅವರು ಕಾಂಗ್ರೆಸ್ ನಾಯಕರ ಜೊತೆಗೆ ವೇದಿಕೆ ಹಂಚಿಕೊಂಡಿದ್ದರು. ಕಾನೂನು ಪ್ರಕಾರ ಸರ್ಕಾರಿ ಅಧಿಕಾರಿಗಳು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುವಂತಿಲ್ಲ. ನರಸಿಂಗ್ ಯಾದವ್ ಅವರು ಕಾಂಗ್ರೆಸ್ ಪಕ್ಷದ ವೇದಿಕೆಯ ಮೇಲೆ ಕಾಣಿಸಿಕೊಂಡ ಕುರಿತು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವು. ಜೊತೆಗೆ ಚುನಾವಣಾ ಆಯೋಗಕ್ಕೂ ವರದಿ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

    ನರಸಿಂಗ್ ಯಾದವ್ ಅವರು ನವದೆಹಲಿಯಲ್ಲಿ ನಡೆದ 2010ರ ಕಾಮನ್‍ವೆಲ್ತ್ ಗೇಮ್‍ನಲ್ಲಿ 74 ಕೆಜಿ ವಿಭಾಗದಿಂದ ಸ್ಪರ್ಧಿಸಿ ಚಿನ್ನದ ಪದಕ ಗಳಿಸಿದ್ದರು. 2010ರಲ್ಲಿ ದೆಹಲಿ ಹಾಗೂ 2015ರಲ್ಲಿ ಕತಾರ್ ರಾಜಧಾನಿ ದೋಹಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಕ್ರಮವಾಗಿ ಚಿನ್ನ ಹಾಗೂ ಕಂಚಿನ ಪದ ಪಡೆದಿದ್ದರು. 2014ರಲ್ಲಿ ಏಷ್ಯನ್ ಗೇಮ್ಸ್ ಹಾಗೂ 2015ರ ವಲ್ರ್ಡ್ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕ ಪಡೆದ ಸಾಧನೆ ಮಾಡಿದ್ದಾರೆ.