Tag: ನರಸಿಂಹ ಮೂರ್ತಿ

  • ಟೀ ಅಂಗಡಿ ಮುಂದೆ ಕುಳಿತಿದ್ದ ಡಿಎಸ್‌ಎಸ್ ಮುಖಂಡನನ್ನು ಕೊಚ್ಚಿ ಕೊಂದ್ರು!

    ಟೀ ಅಂಗಡಿ ಮುಂದೆ ಕುಳಿತಿದ್ದ ಡಿಎಸ್‌ಎಸ್ ಮುಖಂಡನನ್ನು ಕೊಚ್ಚಿ ಕೊಂದ್ರು!

    ತುಮಕೂರು: ಹಾಡಹಗಲೇ ನಡುರಸ್ತೆಯಲ್ಲಿ ಡಿಎಸ್‌ಎಸ್ ಮುಖಂಡನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

    ಘಟನೆ ಜಿಲ್ಲೆಯ ಗುಬ್ಬಿ ಪಟ್ಟಣದ ಬಿಎಸ್ ರಸ್ತೆಯಲ್ಲಿ ನಡೆದಿದ್ದು, ಡಿಎಸ್‌ಎಸ್ ಸಂಘದ ತಾಲೂಕು ಸಂಚಾಲಕನಾಗಿದ್ದ ನರಸಿಂಹ ಮೂರ್ತಿ ಅಲಿಯಾಸ್ ಕುರಿ ಮೂರ್ತಿ(45) ಕೊಲೆಯಾಗಿದ್ದಾರೆ.

    ಬುಧವಾರ ಮಧ್ಯಾಹ್ನದ ವೇಳೆ ಟೀ ಅಂಗಡಿಯ ಮುಂದೆ ಕುಳಿತಿದ್ದ ಕುರಿ ಮೂರ್ತಿ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದರು. ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಆತ್ಮಹತ್ಯೆ

    ನರಸಿಂಹ ಮೂರ್ತಿ ಮೃತದೇಹವನ್ನು ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಕಳುಹಿಸಲಾಗಿದ್ದು, ನೂರಾರು ಸಂಖ್ಯೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ನೆರೆದಿದ್ದಾರೆ. ಕುರಿ ಮೂರ್ತಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಟಿಎಸ್ ಪ್ರೇಮಾ ಭೇಟಿ ನೀಡಿ, ಮೃತರ ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ. ಇದನ್ನೂ ಓದಿ: ಅಣ್ಣನ ಹೆಸರಿಗೆ ಆಸ್ತಿ ಮಾಡಿಸ್ತಾನೆ ಅಂತ JDS ಕಾರ್ಯಕರ್ತನ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದ

    ಸ್ಥಳಕ್ಕೆ ಗುಬ್ಬಿ ಶಾಸಕ ಎಸ್‌ಆರ್ ಶ್ರೀನಿವಾಸ್ ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಬಳಿಕ ಮಾತನಾಡಿದ ಶ್ರೀನಿವಾಸ್, ಮೂರ್ತಿ ಕೊಲೆ ವೈಯಕ್ತಿಕ ದ್ವೇಶದ ಹಿನ್ನೆಲೆ ಆಗಿರುವ ಸಾಧ್ಯತೆ ಇದೆ. ಗುಬ್ಬಿ ಮೂಲದ ಯಾರೂ ಕೊಲೆ ಮಾಡಿರುವ ಸಾಧ್ಯತೆ ಇಲ್ಲ. ಹೊರಗಿನವರು ಕೊಲೆ ಮಾಡಿರುವ ಶಂಕೆ ಇದೆ ಎಂದು ಹೇಳಿಕೆ ನೀಡಿದರು.

    POLICE JEEP

    ನಿನ್ನೆ ಎಲ್ಲವೂ ಚೆನ್ನಾಗಿಯೇ ಇತ್ತು. ಅವರಿಗೆ ಯಾರೂ ಶತ್ರುಗಳು ಇರಲಿಲ್ಲ. ಆದರೆ ಇತ್ತೀಚೆಗೆ ರಾಜಕೀಯದಲ್ಲಿ ಮುಂದುವರಿದಿದ್ದರಿಂದ ಹೀಗಾಗಿದೆ. ಈ ಕೊಲೆಗೆ ಸರ್ಕಾರದ ವೈಫಲ್ಯವೇ ಕಾರಣ, ಸರ್ಕಾರ ನಮಗೆ ನ್ಯಾಯ ಒದಗಿಸಬೇಕು ಎಂದು ಕಟುಂಬಸ್ಥರು ಆಗ್ರಹಿಸಿದ್ದಾರೆ.

    Live Tv

  • ಶಿವಮೊಗ್ಗದ ಕನ್ನಡಾಭಿಮಾನಿ ಮೂರ್ತಿಯವರ ಇಸ್ತ್ರಿ ಅಂಗಡಿಯಲ್ಲಿ ಕನ್ನಡ ಗ್ರಂಥಾಲಯ!

    ಶಿವಮೊಗ್ಗದ ಕನ್ನಡಾಭಿಮಾನಿ ಮೂರ್ತಿಯವರ ಇಸ್ತ್ರಿ ಅಂಗಡಿಯಲ್ಲಿ ಕನ್ನಡ ಗ್ರಂಥಾಲಯ!

    ಶಿವಮೊಗ್ಗ: ಕನ್ನಡ ಭಾಷೆ ಈಗ ಚುನಾವಣಾ ವಸ್ತುವೂ ಆಗ್ಬಿಟ್ಟಿದೆ. ಕಾಳಜಿ ಮಾತ್ರ ಯಾರಿಗೂ ಇಲ್ಲ. ಆದ್ರೆ, ಶಿವಮೊಗ್ಗದ ಇವತ್ತಿನ ಪಬ್ಲಿಕ್ ಹೀರೋ ಮೂರ್ತಿ ಅನ್ನೋವವರು ತಮ್ಮ ಅಂಗಡಿಯಲ್ಲೇ ಮಿನಿ ಲೈಬ್ರರಿ ನಿರ್ಮಿಸಿದ್ದಾರೆ.

    ಕನ್ನಡ ಕಸ್ತೂರಿ ಇಸ್ತ್ರಿ ಅಂಗಡಿ ಅಂತ ಶಿವಮೊಗ್ಗದ ಹೃದಯ ಭಾಗವಾಗಿರುವ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿದೆ. ಇದರ ಮಾಲೀಕ ನರಸಿಂಹ ಮೂರ್ತಿ. ಬಟ್ಟೆಗಳನ್ನು ಇಸ್ತ್ರೀ ಮಾಡೋದಷ್ಟೇ ಅಲ್ಲದೆ ಭಾಷಾ ಪ್ರೇಮವನ್ನೂ ಸಾರುತ್ತಿದ್ದಾರೆ. 25 ವರ್ಷದಿಂದ ಇಸ್ತ್ರಿ ಅಂಗಡಿ ಇಟ್ಟುಕೊಂಡಿರೋ ಮೂರ್ತಿ, ಹತ್ತು ವರ್ಷದ ಹಿಂದೆ ತನ್ನ ಅಂಗಡಿಗೆ ಕನ್ನಡ ಕಸ್ತೂರಿ ಇಸ್ತ್ರೀ ಅಂಗಡಿ ಅಂತ ಹೆಸರಿಟ್ಟಿದ್ದಾರೆ. ಜ್ಞಾನಪೀಠ ಪುರಸ್ಕೃತರ ಫೋಟೋಗಳು ಅಂಗಡಿ ತುಂಬಾ ರಾರಾಜಿಸ್ತಿವೆ. ಹೀಗಾಗಿ, ಇವರನ್ನ ಕನ್ನಡ ಮೂರ್ತಿ ಅಂತ ಸ್ನೇಹಿತರು ಕರೀತಿದ್ದಾರೆ.

    ಭುವನೇಶ್ವರಿ ಫೋಟೋಗೆ ನಿತ್ಯ ಪೂಜೆ ಮಾಡಿ ನಂತರ ಕೆಲಸ ಶುರು ಮಾಡೋ ನರಸಿಂಹ ಮೂರ್ತಿ, ಅಂಗಡಿಯಲ್ಲಿ ಕನ್ನಡ ಪುಸ್ತಕಗಳನ್ನ ಇಟ್ಟಿದ್ದಾರೆ. ಇಸ್ತ್ರೀಗಾಗಿ ಬಟ್ಟೆ ತಂದವರು ಸುಮ್ಮನೆ ಕಾಯುವ ಬದಲು ಪುಸ್ತಕ ಓದುವಂತೆ ಹೇಳುತ್ತಾರೆ. ಇದಕ್ಕಾಗಿ ಪುಟ್ಟ ಲೈಬ್ರರಿಯನ್ನು ಮಾಡಿದ್ದಾರೆ. ಇನ್ನು ಕನ್ನಡರಾಜ್ಯೋತ್ಸವ, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಗಳನ್ನ ತಪ್ಪದೆ ಆಚರಿಸ್ತಾರೆ.

    ಇವರ ಬಗ್ಗೆ ಮಾಹಿತಿ ಪಡೆದವರು ಬಸ್ ನಿಲ್ದಾಣದಿಂದ ಇಳಿದು ನೇರವಾಗಿ ಇವರ ಕನ್ನಡ ಪ್ರೀತಿ ಬಗ್ಗೆ ಮಾತನಾಡಿಸಿ ಹೋಗ್ತಿದ್ದಾರೆ.

    https://www.youtube.com/watch?v=Lwe1szpDiCA