Tag: ನರಸಿಂಹಲು

  • ಚಿತ್ರರಂಗ ಕೇಳಿದ್ದೆಲ್ಲಾ ಸಿಎಂ ಕೊಡುತ್ತಲೇ ಬಂದಿದ್ದಾರೆ: ನರಸಿಂಹಲು

    ಚಿತ್ರರಂಗ ಕೇಳಿದ್ದೆಲ್ಲಾ ಸಿಎಂ ಕೊಡುತ್ತಲೇ ಬಂದಿದ್ದಾರೆ: ನರಸಿಂಹಲು

    ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳಿಗೆ ನನ್ನ ಧನ್ಯವಾದಗಳು. ಚಿತ್ರರಂಗದ ಮೇಲೆ ಅವರಿಗೆ ಪ್ರೀತಿಯಿದೆ. ಅವರು ಕೇಳಿದ್ದೆಲ್ಲಾ ಕೊಡುತ್ತಲೇ ಬಂದಿದ್ದಾರೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು (Narasimhalu) ಕೃತಜ್ಞತೆ ಸಲ್ಲಿಸಿದರು.

    ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪ ಟಿಕೆಟ್ ದರ ನಿಗದಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 2 ಬಾರಿ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆವು. ಬಜೆಟ್‌ನಲ್ಲಿ ಅನೌನ್ಸ್ ಮಾಡಿದ್ದಾರೆ. ತುಂಬಾ ಸಂತೋಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಾಲಿನ ದರ 5 ರೂ. ಹೆಚ್ಚಳಕ್ಕೆ ಚಿಂತನೆ: ಭೀಮಾನಾಯ್ಕ್

    1000 ರಿಂದ 1500 ರೂ. ಟಿಕೆಟ್ ದರ ಇದ್ದಾಗ ಸಾಮಾನ್ಯ ಜನ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಸಿಂಗಲ್ ಸ್ಕ್ರೀನ್‌ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಒಂದೇ ರೇಟ್ ಆದರೆ ಎಲ್ಲರಿಗೂ ನ್ಯಾಯ ಒದಗಿಸಿದಂತಾಗುತ್ತದೆ. ಏಕರೂಪ ಟಿಕೆಟ್ ದರ ನೆರೆ ರಾಜ್ಯಗಳಲ್ಲಿ ಈ ಮೊದಲೇ ಇತ್ತು. ನಮ್ಮ ರಾಜ್ಯದಲ್ಲಿ ಈಗ ಜಾರಿಗೆ ಬರುತ್ತಿದೆ. ಮೈಸೂರಿನಲ್ಲಿ ಫಿಲ್ಮ್ ಸಿಟಿ ಅನೌನ್ಸ್ ಮಾಡಿದ್ದಾರೆ. ಇಡೀ ಚಿತ್ರರಂಗ ಸಿಎಂಗೆ ಅಭಿನಂದನೆ ಸಲ್ಲಿಸುತ್ತದೆ ಎಂದರು. ಇದನ್ನೂ ಓದಿ: ಮೈಸೂರಲ್ಲಿ ವಿಶ್ವದರ್ಜೆಯ ಫಿಲ್ಮ್ ಸಿಟಿ ನಿರ್ಮಾಣಕ್ಕೆ 500 ಕೋಟಿ ಮೀಸಲು – ತವರು ಜಿಲ್ಲೆಗೆ ಸಿಎಂ ಭರ್ಜರಿ ಗಿಫ್ಟ್

    ರಾಜ್ಯದಲ್ಲಿರುವ ಎಲ್ಲಾ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುವ ಪ್ರತಿ ಪ್ರದರ್ಶನಕ್ಕೆ ಟಿಕೆಟ್ ದರ 200 ರೂ.ಗಳಿಗೆ ಸೀಮಿತಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

  • ಡಿಸಿಎಂ ಅಧಿಕಾರ ದರ್ಪದಿಂದ ಹೇಳಿರಬಹುದು- ಡಿಕೆಶಿ ನಟ್ಟು, ಬೋಲ್ಟು ಹೇಳಿಕೆಗೆ ಫಿಲ್ಮ್ಂ ಚೇಂಬರ್ ಅಧ್ಯಕ್ಷ ಅಸಮಾಧಾನ

    ಡಿಸಿಎಂ ಅಧಿಕಾರ ದರ್ಪದಿಂದ ಹೇಳಿರಬಹುದು- ಡಿಕೆಶಿ ನಟ್ಟು, ಬೋಲ್ಟು ಹೇಳಿಕೆಗೆ ಫಿಲ್ಮ್ಂ ಚೇಂಬರ್ ಅಧ್ಯಕ್ಷ ಅಸಮಾಧಾನ

    ಸ್ಯಾಂಡಲ್‌ವುಡ್ ನಟರಿಗೆ ಡಿಸಿಎಂ ಡಿಕೆಶಿ (Dk Shivakumar) ವಾರ್ನಿಂಗ್ ವಿಚಾರಕ್ಕೆ ಫಿಲ್ಮ್ಂ ಚೇಂಬರ್ ಅಧ್ಯಕ್ಷ (Film Chamber President) ನರಸಿಂಹಲು (Narasimhalu) ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರ ನೆಟ್ಟು, ಬೋಲ್ಟು ಹೇಳಿಕೆಗೆ ಅಧಿಕಾರ ದರ್ಪದಿಂದ ಹಾಗಂದಿರಬಹುದು ಎಂದು ಫಿಲ್ಮ್ಂ ಚೇಬರ್ ಅಧ್ಯಕ್ಷ ಕೌಂಟರ್ ಕೊಟ್ಟಿದ್ದಾರೆ.

    ಫಿಲ್ಮ್ಂ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡಿ, ಡಿಕೆ ಶಿವಕುಮಾರ್ ಅವರು ಅಧಿಕಾರ ದರ್ಪದಿಂದ ಹಾಗಂದಿರಬಹುದು. ಆದರೆ ನಮ್ಮ ಕಡೆಯಿಂದನೂ ತಪ್ಪಾಗಿದೆ. ಮನೆಯ ಹಬ್ಬಕ್ಕೆ ಕಲಾವಿದರು ಬರಬೇಕಾಗಿತ್ತು. ಆದ್ರೆ ಆಮಂತ್ರಣ ಸಿಕ್ಕಿಲ್ಲ ಅಂತಾ ಬಂದಿಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ:ಅದ್ಧೂರಿಯಾಗಿ 2ನೇ ಮದುವೆಯಾದ ಚೈತ್ರಾ ವಾಸುದೇವನ್

    ಡಿಕೆ ಶಿವಕುಮಾರ್ ಮಾತನ್ನು ಸರಿ ಅಂತಾನೂ ಹೇಳೋಕೆ ಆಗಲ್ಲ ತಪ್ಪು ಅಂತಾನೂ ಹೇಳೋಕೆ ಆಗಲ್ಲ. ಆದರೆ ನಟ್ಟು ಬೋಲ್ಟ್ ಸರಿ ಮಾಡುತ್ತೇವೆ ಎನ್ನುವ ಪದ ಅಧಿಕಾರ ದರ್ಪದಿಂದ ಹೇಳಿರಬಹುದು ಎಂದು ಕೌಂಟರ್ ಕೊಟ್ಟಿದ್ದಾರೆ. ಇನ್ನೂ ಸಿನಿಮಾಗಳಿಗೆ ಅನುಮತಿ ಪ್ರತ್ಯೇಕ ನಿಯಮ ಇರುತ್ತದೆ. ಸಿನಿಮಾ ಶೂಟಿಂಗ್‌ಗೆ ಅನುಮತಿ ನೀಡಲ್ಲ ಎಂಬ ಹೇಳಿಕೆಯನ್ನೆಲ್ಲ ನಾವು ಗಂಭೀರವಾಗಿ ತೆಗೆದುಕೊಳ್ಳಲ್ಲ ಎಂದು ಡಿಕೆಶಿ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ.

    ಅಂದಹಾಗೆ, ನಿನ್ನೆ ನಡೆದ 16ನೇ ಅಂತಾರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಡಿಕೆ ಶಿವಕುಮಾರ್ ಮಾತನಾಡಿ, ಸಿನಿಮಾಗೆ ಯಾವುದೇ ಎಲ್ಲೆ ಇಲ್ಲ. ಎಲ್ಲಿ ಬೇಕಾದರೂ ಬೆಳೆಯಬಹುದು. ನೀವೆಲ್ಲ ಬಣ್ಣ ಹಾಕಿಕೊಂಡು ಸಿನಿಮಾ ಮಾಡ್ತೀರಾ. ನಾವು ಬಣ್ಣ ಹಾಕದೇ ಸಿನಿಮಾ ಮಾಡ್ತೀವಿ ಅಷ್ಟೆ ಎಂದು ರಾಜಕೀಯದ ಬಗ್ಗೆ ಹೇಳಿದರು.

    ನನಗೆ ಚಲನಚಿತ್ರ ವಾಣಿಜ್ಯ ಮಂಡಳಿ, ಈ ಸಿನಿಮಾ ನಟರ ಬಗ್ಗೆ ನನಗೆ ಬಹಳ ಸಿಟ್ಟು ಬಂದುಬಿಟ್ಟಿದೆ, ಏಕೆಂದರೆ, ಕೋವಿಡ್ ಮುಗಿದ ಸಮಯದಲ್ಲಿ ನಾವು ನಮ್ಮ ಜಲ ನಮ್ಮ ಹಕ್ಕು ಎಂಬ ಜಾಥಾ ಮಾಡಿದ್ದೆವು, ನಮ್ಮ ಜನರಿಗೆ ನೀರು ಕೊಡುವ ಉದ್ದೇಶದಿಂದಾಗಿ ನಾವು, ಸಿದ್ದರಾಮಯ್ಯನವರು ಪಾದಯಾತ್ರೆ ಮಾಡಿದ್ದೆವು. ಆದರೆ ಆಗ ಯಾವ ನಟರೂ ಸಹ ನಮಗೆ ಬೆಂಬಲ ಕೊಡಲಿಲ್ಲ, ಸಾಧು ಕೋಕಿಲ ಮತ್ತು ದುನಿಯಾ ವಿಜಿ ಬಿಟ್ಟರೆ ಇನ್ಯಾರೂ ಸಹ ನಮಗೆ ಬೆಂಬಲ ಕೊಡಲಿಲ್ಲ. ಅನುಮತಿ ಕೊಡಲಿಲ್ಲ ಅಂದ್ರೆ ಶೂಟಿಂಗ್ ಮಾಡೋಕೆ ಆಗಲ್ಲ, ಯಾರು ಯಾರಿಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಅಂತ ಗೊತ್ತಿದೆ ಎಂದು ಕಾರ್ಯಕ್ರಮದಲ್ಲಿ ಎಚ್ಚರಿಕೆ ನೀಡಿದ್ದರು.