Tag: ನರಸಾಪುರ

  • Kolar | ಶಾಲೆಗೆ ಹೋದ ವಿದ್ಯಾರ್ಥಿನಿಯರು ನಾಪತ್ತೆ

    Kolar | ಶಾಲೆಗೆ ಹೋದ ವಿದ್ಯಾರ್ಥಿನಿಯರು ನಾಪತ್ತೆ

    ಕೋಲಾರ: ಶಾಲೆಗೆಂದು (School) ಹೋದ ಇಬ್ಬರು ವಿದ್ಯಾರ್ಥಿನಿಯರು (Students) ನಾಪತ್ತೆಯಾಗಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ನರಸಾಪುರ ಗ್ರಾಮದ ಶರಣ್ಯ ಹಾಗೂ ದೇವಿ ನಾಪತ್ತೆಯಾದ ವಿದ್ಯಾರ್ಥಿನಿತರು. ಶುಕ್ರವಾರ ಬೆಳಗ್ಗೆ ಶಾಲೆಗೆಂದು ಹೋದ ಇಬ್ಬರು ವಿದ್ಯಾರ್ಥಿಗಳು ಇದುವರೆಗೂ ಪತ್ತೆಯಾಗಿಲ್ಲ. ಇತ್ತ ಶಾಲೆಗೂ ಹೋಗದೆ ಮನೆಗೂ ಬಾರದೆ ಕಣ್ಮರೆಯಾಗಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಇನ್ನೂ ಬೆಳಗ್ಗೆ ಶಾಲೆಗೆ ಹೋದವರು ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆ ಆತಂಕಗೊಂಡ ಪೋಷಕರು ಶುಕ್ರವಾರ ಇಡೀ ದಿನ ಮಕ್ಕಳಿಗಾಗಿ ಹುಡಕಾಟ ನಡೆಸಿದ್ದಾರೆ. ಇದನ್ನೂ ಓದಿ: ಸ್ನೇಹಿತೆಯ ಖಾಸಗಿ ವೀಡಿಯೋ ಕದ್ದು ಹಂಚಿ ಬ್ಲ್ಯಾಕ್‌ಮೇಲ್‌ ಆರೋಪ; ಕಿರುತೆರೆ ನಟಿ ವಿರುದ್ಧ FIR

    ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆ ಮಕ್ಕಳನ್ನ ಹುಡುಕಿಕೊಡಿ ಎಂದು ಕೋಲಾರದ ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇನ್ನೂ ಇಬ್ಬರು ವಿದ್ಯಾರ್ಥಿನಿಯರು ಹತ್ತನೇ ತರಗತಿ ಓದುತ್ತಿದ್ದು, ಎಲ್ಲಿಗೆ ಹೋಗಿದ್ದಾರೆ ಅನ್ನೋ ಮಾಹಿತಿ 24 ಗಂಟೆಯಾದರೂ ಇನ್ನೂ ಲಭ್ಯವಾಗಿಲ್ಲ. ಹೀಗಾಗಿ ಪೋಷಕರು ಹಾಗೂ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಇದನ್ನೂ ಓದಿ: Mysuru | ಬಾತ್‌ರೂಂನಲ್ಲಿ ಗ್ಯಾಸ್ ಗೀಸರ್ ಸೋರಿಕೆ; ಉಸಿರುಗಟ್ಟಿ ಅಕ್ಕ-ತಂಗಿ ಸಾವು

  • ಕೋಲಾರಕ್ಕೆ 376 ಕೋಟಿ ರೂ. ಅನುದಾನ, ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಸಿದ್ಧವಿದೆ: ಬೈರತಿ ಸುರೇಶ್

    ಕೋಲಾರಕ್ಕೆ 376 ಕೋಟಿ ರೂ. ಅನುದಾನ, ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಸಿದ್ಧವಿದೆ: ಬೈರತಿ ಸುರೇಶ್

    ಕೋಲಾರ: ರಾಜ್ಯದಲ್ಲಿನ ಕಾಂಗ್ರೆಸ್ (Congress) ಸರ್ಕಾರದಿಂದ ಕಳೆದ ಒಂದು ವರ್ಷದಲ್ಲೇ ಕೋಲಾರ (Kolar) ವಿಧಾನಸಭಾ ಕ್ಷೇತ್ರಕ್ಕೆ 376 ಕೋಟಿ ರೂ. ಅನುದಾನ ಕೊಟ್ಟಿದ್ದೇವೆ. ಅಭಿವೃದ್ಧಿಯ ದೃಷ್ಟಿಯಿಂದ ಇನ್ನೂ ಕೇಳಿದಷ್ಟು ಅನುದಾನ ಕೊಡಲು ಸರ್ಕಾರವು ಸಿದ್ಧವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ (Byrathi Suresh) ತಿಳಿಸಿದರು.

    ಜಿಲ್ಲೆಯ ನರಸಾಪುರ (Narasapura) ಗ್ರಾಮದಲ್ಲಿ ನಾಲ್ಕು ಪಥದ ರಸ್ತೆಗೆ 7 ಕೋಟಿ ರೂ., ರಾಷ್ಟ್ರೀಯ ಹೆದ್ದಾರಿಯಿಂದ ಖಾಜಿಕಲ್ಲಹಳ್ಳಿ ಮಾರ್ಗದ ರಸ್ತೆಗೆ 5 ಕೋಟಿ ರೂ. ಹಾಗೂ ನರಸಾಪುರ ಸೊಸೈಟಿಯ ನೂತನ ಕಟ್ಟಡಕ್ಕೆ 1.5 ಕೋಟಿ ರೂ. ಸೇರಿದಂತೆ ಒಟ್ಟು 13.5 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೆರೆಸಿದರು.ಇದನ್ನೂ ಓದಿ: ಶನಿವಾರ ದೆಹಲಿ ಮುಖ್ಯಮಂತ್ರಿಯಾಗಿ ಅತಿಶಿ ಪ್ರಮಾಣ ವಚನ

    ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಲ್ಕು ಪಥದ ರಸ್ತೆಗೆ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಸರಮಾಲೆಯೇ ನಡೆಯುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಆಡಳಿತ ಪಕ್ಷದ ಮೇಲೆ ಹಣ ಖಾಲಿಯಾಗಿದೆ ಎಂದು ಗೂಬೆ ಕೂರಿಸಲು ಹೊರಟಿದ್ದಾರೆ. ಆದರೆ ಜನಕ್ಕೆ ಕಣ್ಣಾಮುಂದೆಯೇ ಅಭಿವೃದ್ಧಿಯಾಗುವುದು ಕಾಣುತ್ತಿದೆ ಎಂದರು.

    ಹಿಂದಿನ ಬಿಜೆಪಿ (BJP) ಸರ್ಕಾರದಲ್ಲಿ 40% ಕಮಿಷನ್‌ನಿಂದ ಅಭಿವೃದ್ಧಿ ಶೂನ್ಯವಾಗಿತ್ತು. ನಮ್ಮ ಸರಕಾರವು ಯಾರಪ್ಪನ ಮನೆಯಿಂದ ಕೂಡ ಹಣ ತಂದಿಲ್ಲ. ಜನರ ದುಡ್ಡನ್ನೇ ಜನರಿಗೆ ಕೊಡುತ್ತಿದ್ದೇವೆ. ಜೆಡಿಎಸ್ ಮತ್ತು ಬಿಜೆಪಿ ಸರ್ಕಾರದಲ್ಲಿ ಅವರಿಗೆ ತಿನ್ನಲು ಸಾಕಾಗಲಿಲ್ಲ. ಅದಕ್ಕೆ ಅಭಿವೃದ್ಧಿ ಶೂನ್ಯವಾಗಿತ್ತು. ನಾವು ರಾಜಕಾರಣವನ್ನು ಹೊಟ್ಟೆಪಾಡಿಗೆ, ವ್ಯಾಪಾರಕ್ಕೆ ಮಾಡಲು ಬಂದಿಲ್ಲ. ಜನರ ಸೇವೆ ಮಾಡಲು ಬಂದಿದ್ದು, ಅಭಿವೃದ್ಧಿಯೇ ನಮ್ಮ ಗುರಿ ಮತ್ತು ಉದ್ದೇಶವಾಗಿದೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆದಿದ್ದೇವೆ. ಬಡವರ, ಜನಸಾಮಾನ್ಯರ ಏಳಿಗೆಗಾಗಿ ಐದು ಗ್ಯಾರಂಟಿಗಳನ್ನು ಕೊಡುತ್ತಿದ್ದೇವೆ. ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷದವರು ಹೇಳಿದ ಸುಳ್ಳಿನ ಸರಪಳಿಯನ್ನು ತುಂಡರಿಸಿದ್ದೇವೆ. ಜನ 136 ಸ್ಥಾನ ಕೊಟ್ಟು ಆಶೀರ್ವಾದ ಮಾಡಿದ್ದಾರೆ. ಸರ್ಕಾರವು ಬಿದ್ದು ಹೋಗುತ್ತದೆ ಎಂದು ಬಿಜೆಪಿ ಸುಳ್ಳು ಹೇಳುತ್ತಿದ್ದಾರೆ. ಜನಕ್ಕೆ ಅಭಿವೃದ್ಧಿ ಯಾರ ಮಾಡಿದ್ದಾರೆ ಎಂಬುದು ಗೊತ್ತಿದೆ ಕಿಡಿಕಾರಿದ್ದಾರೆ.

    ಇದೇ ವೇಳೆ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತನಾಡಿ, ಅಭಿವೃದ್ಧಿಯನ್ನು ಜನರಿಗೆ ಅನುಕೂಲವಾಗುವಂತೆ ಮಾಡಿದ್ದೇವೆ. ಜನರೇ ಕೆಲಸ ಸರಿಯಾಗಿ ನಡೆಯುತ್ತಿದೆಯೇ ಇಲ್ಲವೇ ಎಂಬುದರ ಗುಣಮಟ್ಟದ ಪರೀಕ್ಷೆಯನ್ನು ಗಮನಿಸಬೇಕು. ಕಳಪೆ ಕೆಲಸವಾದರೆ ದೂರು ನೀಡಬೇಕು. ಮಾಧ್ಯಮದವರ ಗಮನಕ್ಕೆ ತರಬೇಕು ಎಂದರು.

    ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ತಾರತಮ್ಯ ಮತ್ತು ರಾಜಕೀಯ ಮಾಡಬಾರದು. ಜನರಿಂದ ಆಯ್ಕೆಯಾದ ಕಾಂಗ್ರೆಸ್ ಸರಕಾರವು ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡತ್ತಿದ್ದು, ಇನ್ನೂ ಕೆಲವು ಕಡೆಗಳಲ್ಲಿ ಟೆಂಡರ್ ನಡೆದಿದೆ. ಉಳಿದ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಹೇಳಿದರು.ಇದನ್ನೂ ಓದಿ: ಜಮ್ಮು & ಕಾಶ್ಮೀರದಲ್ಲಿ ಮತ್ತೊಂದು ಪೀಳಿಗೆಯನ್ನು ನಾಶ ಮಾಡಲು ಬಿಡುವುದಿಲ್ಲ: ಮೋದಿ ಪ್ರತಿಜ್ಞೆ

    ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಜಿಲ್ಲಾಧಿಕಾರಿ ಅಕ್ರಂ ಪಾಷ, ಎಸ್ಪಿ ಬಿ.ನಿಖಿಲ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ನರಸಾಪುರ ಗ್ರಾಪಂ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷೆ ಪದ್ಮಮ್ಮ, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಕೋಚಿಮುಲ್ ನಿರ್ದೇಶಕ ಶಂಶೀರ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಮಂಜುನಾಥ್, ಎಂಟಿಬಿ ಶ್ರೀನಿವಾಸ್, ಶ್ರೀರಾಮಪ್ಪ, ಜಾಲಿ ಬಾಬು ಜನಪನಹಳ್ಳಿ ನವೀನ್ ಕುಮಾರ್, ಮುಂತಾದವರು ಇದ್ದರು.