Tag: ನಯಾಗರಾ ಫಾಲ್ಸ್

  • ನ್ಯೂಯಾರ್ಕ್ | 54 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಪಲ್ಟಿ – ಭಾರತೀಯರು ಸೇರಿ ಐವರು ಸಾವು

    ನ್ಯೂಯಾರ್ಕ್ | 54 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಪಲ್ಟಿ – ಭಾರತೀಯರು ಸೇರಿ ಐವರು ಸಾವು

    ಆಲ್ಬನಿ: ನಯಾಗರಾ ಫಾಲ್ಸ್ (Niagara Falls) ವೀಕ್ಷಿಸಿ ನ್ಯೂಯಾರ್ಕ್‌ಗೆ (New York) ಹಿಂತಿರುಗುತ್ತಿದ್ದ ಬಸ್‌ವೊಂದು ಪಲ್ಟಿ ಹೊಡೆದ ಪರಿಣಾಮ ಭಾರತೀಯರು (Indians) ಸೇರಿ ಐದು ಜನರು ಸಾವನ್ನಪ್ಪಿರುವ ಘಟನೆ ಪೆಂಬ್ರೋಕ್‌ನಲ್ಲಿ ನಡೆದಿದೆ.

    ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಐವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.ಇದನ್ನೂ ಓದಿ: ಕೊಲ್ಲಾಪುರದಲ್ಲಿ ಅನ್ಯಕೋಮಿನ ಗುಂಪುಗಳ ನಡುವೆ ಘರ್ಷಣೆ – 10ಕ್ಕೂ ಹೆಚ್ಚು ಮಂದಿಗೆ ಗಾಯ

    ಅಪಘಾತದಲ್ಲಿ ಮೃತಪಟ್ಟವರೆಲ್ಲರು ವಯಸ್ಕರಾಗಿದ್ದಾರೆ. ಬಸ್ ಪಲ್ಟಿಯಾದಾಗ ಕೆಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಬಳಿಕ ಹೆಲಿಕಾಪ್ಟರ್ ಹಾಗೂ ಆಂಬ್ಯುಲೆನ್ಸ್ ಮೂಲಕ 40ಕ್ಕೂ ಹೆಚ್ಚು ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ನ್ಯೂಯಾರ್ಕ್ ಪೊಲೀಸರು ತಿಳಿಸಿದ್ದಾರೆ.

    ಸ್ಟೇಟನ್ ಐಲ್ಯಾಂಡ್‌ನ ಎಂ&ವೈ ಟೂರ್ ಲಿಂಕ್ ನಿರ್ವಹಿಸುತ್ತಿದ್ದ ಈ ಬಸ್, ಕಳೆದ ಎರಡು ವರ್ಷಗಳಲ್ಲಿ ಯಾವುದೇ ಅಪಘಾತಗಳ ದಾಖಲೆಯನ್ನು ಹೊಂದಿರಲಿಲ್ಲ ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಶ್ರಾವಣ ಕೊನೆ ಶನಿವಾರ – ಅಂಜನಾದ್ರಿಗೆ ಹರಿದು ಬಂದ ಭಕ್ತ ಸಾಗರ

  • ನಯಾಗರಾ ಫಾಲ್ಸ್ ಮೇಲೆ ತ್ರಿವರ್ಣ- ಸ್ಟೇ ಸ್ಟ್ರಾಂಗ್ ಇಂಡಿಯಾ ಎಂದ ಕೆನಡಾ

    ನಯಾಗರಾ ಫಾಲ್ಸ್ ಮೇಲೆ ತ್ರಿವರ್ಣ- ಸ್ಟೇ ಸ್ಟ್ರಾಂಗ್ ಇಂಡಿಯಾ ಎಂದ ಕೆನಡಾ

    ನವದೆಹಲಿ: ಭಾರತದಲ್ಲಿನ ಕೊರೊನಾ ಪರಿಸ್ಥಿತಿ ಕಂಡು ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಾವು ಭಾರತದ ಜೊತೆಗಿದ್ದೇವೆ ಎಂದು ಧೈರ್ಯ ತುಂಬಲು ಹಲವು ರಾಷ್ಟ್ರಗಳು ವಿಶೇಷ, ವಿಭಿನ್ನವಾಗಿ ಕಾಳಜಿ ತೋರಿಸುತ್ತಿವೆ. ದೇಶದ ಪ್ರತಿಷ್ಠಿತ ಕಟ್ಟಡಗಳು, ಸ್ಥಳಗಳಲ್ಲಿ ಭಾರತದ ತ್ರಿವರ್ಣ ಧ್ವಜದ ಬಣ್ಣ ಹಾಗೂ ಸ್ಟೇ ಸ್ಟ್ರಾಂಗ್ ಇಂಡಿಯಾ ಎಂದು ಹೇಳುತ್ತಿವೆ. ಇದೀಗ ಕೆನಡಾ ಸಹ ಇದೇ ರೀತಿ ವಿಶೇಷ ಸಂದೇಶ ಸಾರಿದ್ದು, ವಿಶ್ವವಿಖ್ಯಾತ ನಯಾಗರಾ ಜಲಪಾತದಲ್ಲಿ ತ್ರಿವರ್ಣ ಧ್ವಜದ ಲೈಟಿಂಗ್ಸ್ ಮೂಲಕ ಗಮನ ಸೆಳೆದಿದೆ.

    ಕೆನಡಾದ ಒಂಟಾರಿಯೊದಲ್ಲಿನ ನಯಾಗರಾ ಫಾಲ್ಸ್ ಗೆ ತ್ರಿವರ್ಣ ಧ್ವಜದ ಬಣ್ಣದ ಲೈಟಿಂಗ್ಸ್ ಮೂಲಕ ಭಾರತದ ಜೊತೆಗಿದ್ದೇವೆ ಎಂಬ ಸಂದೇಶ ಸಾರಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 4 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುವ ಮೂಲಕ ಭಾರತ ಜಾಗತಿಕ ದಾಖಲೆ ಬರೆದಿದೆ. ಭಾರತದೊಟ್ಟಿಗೆ ಇದ್ದೇವೆ ಎಂದು ಭರವಸೆ ಪ್ರದರ್ಶನ ಮಾಡಲು ನಯಾಗರಾ ಫಾಲ್ಸ್‍ಗೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ದೀಪಗಳನ್ನು ಬೆಳಗಿಸಲಾಯಿತು. ಸ್ಟೇ ಸ್ಟ್ರಾಂಗ್ ಇಂಡಿಯಾ ಎಂದು ಹೇಳುವ ಮೂಲಕ ನಯಾಗರಾ ಪಾಕ್ರ್ಸ್ ಗಮನಸೆಳೆದಿದೆ.

    ನಯಾಗರಾ ಪಾರ್ಕ್ಸ್ ಈ ಕುರಿತು ಟ್ವೀಟ್ ಮಾಡುತ್ತಿದ್ದಂತೆ ಹಲವರು ರೀ ಟ್ವೀಟ್ ಮಾಡಿದ್ದು, ಲೈಕ್, ಶೇರ್, ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಧನ್ಯವಾದಗಳನ್ನು ಸಹ ತಿಳಿಸಿದ್ದಾರೆ.

    ಇತ್ತೀಚೆಗೆ ಯುಎಇನ ದುಬೈನ ಬುರ್ಜ್ ಖಲಿಫಾದ ಮೇಲೆ ಸಹ ಭಾರತದ ತ್ರಿವರ್ಣ ಧ್ವಜದ ಬಣ್ಣದ ಲೈಟಿಂಗ್ಸ್ ಮಾಡಲಾಗಿತ್ತು. ಈ ಮೂಲಕ ಕೊರೊನಾ ಸಂದರ್ಭದಲ್ಲಿ ಭಾರತದ ಜೊತಿಗಿದ್ದೇವೆ ಎಂಬ ಸಂದೇಶ ಸಾರಲಾಗಿತ್ತು.

    ಭಾರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಒಂದೇ ದಿನ 4 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಯಲ್ಲಿ ಬರೋಬ್ಬರಿ 4,01,993 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಈ ಮೂಲಕ ಇದೀಗ ದೇಶದಲ್ಲಿ ಸೋಂಕಿತರ ಸಂಖ್ಯೆ 1,91,64,969ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ 3,523 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಇದುವರೆಗೆ 2,11,853 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.

    ಸದ್ಯ ದೇಶದಲ್ಲಿ 32,68,710 ಸಕ್ರಿಯ ಪ್ರಕರಣಗಳಿವೆ. 1,56,84,406 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 15,49,89,635 ಮಂದಿ ಮುಂಜಾಗ್ರತಾ ಕ್ರಮವಾಗಿ ವಾಕ್ಸಿನ್ ಪಡೆದುಕೊಂಡಿದ್ದಾರೆ.