Tag: ನಯನತಾರ

  • ‘ಅನ್ನಪೂರ್ಣಿ’ಗೆ ಸಖತ್ ರೆಸ್ಪಾನ್ಸ್ : ನಯನತಾರಾ ನಟನೆಯ 75ನೇ ಚಿತ್ರ

    ‘ಅನ್ನಪೂರ್ಣಿ’ಗೆ ಸಖತ್ ರೆಸ್ಪಾನ್ಸ್ : ನಯನತಾರಾ ನಟನೆಯ 75ನೇ ಚಿತ್ರ

    ಲೇಡಿ ಸೂಪರ್ ಸ್ಟಾರ್ ನಯನತಾರಾ ನಟನೆಯ 75ನೇ ಸಿನಿಮಾದ ಟೀಸರ್ (Teaser) ರಿಲೀಸ್ ಆಗಿದೆ. ಅನ್ನಪೂರ್ಣಿ (Annapurni) ಹೆಸರಿನಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ನಯನತಾರಾ ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಅವರ ಗೆಟಪ್ ಕಂಡು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಪಕ್ಕಾ ಸಂಪ್ರದಾಯಸ್ಥ ಕುಟುಂಬದ ಹುಡುಗಿಯಾಗಿ ನಯನತಾರಾ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

    ಸಿನಿಮಾದಿಂದ ಸಿನಿಮಾಗೆ ನಯನತಾರಾ ಸಾಕಷ್ಟು ಬ್ಯೂಸಿಯಾಗುತ್ತಿದ್ದಾರೆ. ಪ್ರತಿ ಸಿನಿಮಾದಲ್ಲೂ ಸಕ್ಸಸ್ ಕಾಣುತ್ತಿದ್ದಾರೆ. ಹಾಗಾಗಿಯೇ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಸಲೀಸಾಗಿ ಎಲ್ಲ ಪಾತ್ರಗಳನ್ನೂ ಒಪ್ಪಿಕೊಳ್ಳದ ಈ ನಟಿ, ಆಯ್ಕೆಯ ಪಾತ್ರಗಳಿಗಷ್ಟೇ ಬಣ್ಣ ಹಚ್ಚುತ್ತಾರೆ.

    ಖ್ಯಾತ ನಟ ಕಮಲ್ ಹಾಸನ್ ಅವರ ಹೊಸಕ್ಕೂ ನಯನತಾರಾ (Nayanthara) ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ಇದೇ ಸಿನಿಮಾಗೆ ತ್ರಿಷಾ ನಾಯಕಿ ಎಂದು ಹೇಳಲಾಗಿತ್ತು. ತ್ರಿಷಾ ಬದಲಾಗಿ ಇದೀಗ ನಯನತಾರಾ ಹೆಸರು ಕೇಳಿ ಬಂದಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಈ ಜೋಡಿಯನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಈಗಲೇ ಕಾತರದಿಂದ ಕಾಯುವಂತಾಗಿದೆ.

    ಭಾರತೀಯ ಸಿನಿಮಾ ರಂಗದ ಇಬ್ಬರು ದಂತಕಥೆಗಳು ಬರೋಬ್ಬರಿ 36 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ. ನಿರ್ದೇಶಕ ಮಣಿರತ್ನಂ (Mani Ratnam) ಮತ್ತು ಕಮಲ್ ಹಾಸನ್ (Kamal Haasan) ‘ನಾಯಗನ್’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆನಂತರ ಈ ಜೋಡಿ ಮತ್ತೆ ಒಟ್ಟಾಗಿ ಕೆಲಸ ಮಾಡಲೇ ಇಲ್ಲ. ಇದೀಗ ಮೂರುವರೆ ದಶಕದ ಬಳಿಕ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಕಮಲ್ ಹಾಸನ್ ನಟನೆಯ 234ನೇ ಚಿತ್ರಕ್ಕೆ ಮಣಿರತ್ನಂ ನಿರ್ದೇಶನ ಮಾಡುತ್ತಿದ್ದಾರೆ.

     

    ಈ ಸಿನಿಮಾ ಶುರುವಾಗುವುದಕ್ಕೆ ಇನ್ನೂ ಹಲವು ತಿಂಗಳು ಬೇಕು. ಅದಕ್ಕೂ ಮುನ್ನ ಅನೇಕ ವಿಷಯಗಳು ಹೊರ ಬಂದಿವೆ. ಈ ಸಿನಿಮಾದಲ್ಲಿ ಸ್ಟಾರ್ ನಟರೇ ದಂಡೇ ಇರಲಿದ್ದು, ತ್ರಿಷಾ (Trisha) ನಾಯಕಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು, ಇದೀಗ ನಯನತಾರಾ ಹೆಸರು ಸೇರ್ಪಡೆ ಆಗಿದೆ. ಅಲ್ಲದೇ, ದುಲ್ಕರ್ ಸಲ್ಮಾನ್ (Dulquer Salmaan) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳ ತಾಯಿಯಾದ ನಯನತಾರ

    ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳ ತಾಯಿಯಾದ ನಯನತಾರ

    ದುವೆಯಾದ ಮೂರೇ ತಿಂಗಳಿಗೆ ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan), ನಟಿ ನಯನತಾರಾ (Nayanthara) ದಂಪತಿ ಅಭಿಮಾನಿಗಳಿಗಾಗಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಯನತಾರ ಅವಳಿ ಮಕ್ಕಳ ತಾಯಿ ಎಂದು ಇನ್ಸ್ಟಾದಲ್ಲಿ ದಂಪತಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅರೇ, ಮದುವೆಯಾದ ಮೂರೇ ತಿಂಗಳಿಗೆ ಇದು ಹೇಗೆ ಸಾಧ್ಯ ಎನ್ನುವವರಿಗೆ ಉತ್ತರವನ್ನೂ ಕೊಟ್ಟಿರುವ ದಂಪತಿ, ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳ ಪಾಲಕರಾಗಿದ್ದಾರೆ ಈ ಜೋಡಿ.

     

    View this post on Instagram

     

    A post shared by Vignesh Shivan (@wikkiofficial)

    ಮದುವೆಗೂ ಮುನ್ನ ವಿಘ್ನೇಶ್ ಶಿವನ್ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ನಯನತಾರ ನನ್ನ ಮಕ್ಕಳ ತಾಯಿ ಆಗಲಿದ್ದಾರೆ ಎಂದು ಸುಳಿವು ನೀಡಿದ್ದರು. ಅಲ್ಲಿಗೆ ನಯನತಾರ ಮತ್ತು ವಿಘ್ನೇಶ್ ಶಿವನ್ ಮದುವೆ ಆಗಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಅದರಂತೆ ಕಳೆದ ಜೂನ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ಇವರು ಹಸೆಮಣೆ ಏರಿದ್ದರು. ತಾವಿಷ್ಟಪಟ್ಟ ಗಣ್ಯರು ಈ ಮದುವೆಗೆ ಸಾಕ್ಷಿ ಆಗಿದ್ದರು. ಇದನ್ನೂ ಓದಿ: ಪವನ್ ಕುಮಾರ್-ಫಾಸಿಲ್ ಕಾಂಬಿನೇಷನ್‌ನ ‘ಧೂಮ್ʼ ಚಿತ್ರದ ಅದ್ಧೂರಿ ಮುಹೂರ್ತ

    ಮಾರ್ಚ್‌ನಲ್ಲಿ ಈ ಜೋಡಿ ಇನ್ನೂ ಮದುವೆ ಆಗದೇ ಇದ್ದರೂ, ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದುಕೊಳ್ಳುವ ಪ್ಲ್ಯಾನ್ ಮಾಡಲಿದ್ದಾರೆ ಎಂಬುದು ತಮಿಳು ಸಿನಿಮಾ ರಂಗದಲ್ಲಿ ಜೋರಾಗಿಯೇ ಸುದ್ದಿ ಆಗಿತ್ತು. ಅದು ಕೂಡ ಇದೀಗ ನಿಜವಾಗಿದೆ. ಮದುವೆಗೂ ಮುನ್ನ ಬಾಡಿಗೆ ತಾಯಿಯನ್ನು ಫಿಕ್ಸ್ ಮಾಡಿಯೇ ಇವರು ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅವಳಿ ಮಕ್ಕಳ ದಂಪತಿ ಆಗುವ ಮೂಲಕ ಅದನ್ನೂ ನಿಜ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಈ ದಂಪತಿ ಹನಿಮೂನ್‌ಗೆ ಹೋದಾಗಲೂ ಮಗುವಿನ ಪಾದಗಳಿರುವ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಆಗಲೂ ಕೂಡ ಅಷ್ಟೇ ಕುತೂಹಲಕ್ಕೆ ಕಾರಣವಾಗಿತ್ತು ಆ ಪೋಸ್ಟ್. ಇದೀಗ ಅದು ಕೂಡ ನಿಜವಾಗಿದೆ. ಅಭಿಮಾನಿಗಳು ಮತ್ತು ಆಪ್ತರು ಈ ಜೋಡಿಗೆ ಶುಭಾಶಯ ಹೇಳುತ್ತಿದ್ದಾರೆ. ಇದನ್ನೂ ಓದಿ: `ಗಂಧದಗುಡಿ’ ಪ್ರೀ ರಿಲೀಸ್ ಇವೆಂಟ್‌ಗೆ ಭರ್ಜರಿ ತಯಾರಿ

    Live Tv
    [brid partner=56869869 player=32851 video=960834 autoplay=true]

  • ಥೇಟ್ ನಯನತಾರಾ ರೀತಿಯೇ ಕಂಗೊಳಿಸಿದ ‘ಸತ್ಯ’ ಧಾರಾವಾಹಿಯ ಗೌತಮಿ

    ಥೇಟ್ ನಯನತಾರಾ ರೀತಿಯೇ ಕಂಗೊಳಿಸಿದ ‘ಸತ್ಯ’ ಧಾರಾವಾಹಿಯ ಗೌತಮಿ

    ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿ ಜನಪ್ರಿಯತೆಯಲ್ಲೂ ಮುಂದಿದೆ. ಸತ್ಯಳ ಧೈರ್ಯ, ಅವಳ ಸಾಹಸಗಾಥೆ, ಹೇರ್ ಸ್ಟೈಲ್, ಅವಳ ಮ್ಯಾನರಿಸಂ ಹೀಗೆ ಸಾಕಷ್ಟು ರೀತಿಯಲ್ಲಿ ಪ್ರೇಕ್ಷಕರು ಸತ್ಯಳನ್ನು ಅನುಕರಿಸುತ್ತಾರೆ. ಆದರೆ, ಇದೇ ಸತ್ಯ  ಇದೀಗ ತಮಿಳಿನ ಖ್ಯಾತ ನಟಿ ನಯನತಾರಾ ಅವರನ್ನು ಫಾಲೋ ಮಾಡಿದ್ದಾರೆ. ಗೌತಮಿಯ ಫೆವರೇಟ್ ನಟಿ ನಯನತಾರಾ ಆಗಿರುವುದರಿಂದ ಅದೇ ರೀತಿಯಲ್ಲಿ ಫೋಟೋ ಶೂಟ್ ಅನ್ನು ಮಾಡಿಸಿಕೊಂಡಿದ್ದಾರೆ.

    ನಯನತಾರಾ ಮದುವೆಯಲ್ಲಿ ವಿಶೇಷ ಕಾಸ್ಟ್ಯೂಮ್ ನಲ್ಲಿ ಕಂಗೊಳಿಸಿದ್ದರು. ಮದುವೆಯಲ್ಲಿ ತೊಟ್ಟಿದ್ದ ಕೆಂಪು ಸೀರೆಗೆ ಅನೇಕರು ಫಿದಾ ಆಗಿದ್ದರು. ಆ ಕಡು ಕೆಂಪು ಬಣ್ಣದ ಸೀರೆಯ ಜೊತೆಗೆ ಹಸಿರು ಬಣ್ಣದ ಜ್ಯುವೆಲರಿ ಕೂಡ ಎಲ್ಲರ ಗಮನ ಸೆಳೆದಿತ್ತು. ಆ ಸೀರೆಯ ಬೆಲೆ ಮತ್ತು ಜ್ಯುವೆಲರಿಯ ಡಿಸೈನ್ ಮೆಚ್ಚುಗೆಗೆ ಪಾತ್ರವಾಗಿತ್ತು. ಹೊಯ್ಸಳ ಕಾಲದ ಲುಕ್ ಹೊಂದಿದ್ದರಿಂದ ಇತಿಹಾಸವನ್ನೂ ಕೆದುಕುವ ಪ್ರಯತ್ನ ಮಾಡಲಾಗಿತ್ತು. ಅದೇ ಸೀರೆಗೆ ಗೌತಮಿ ಫಿದಾ ಆಗಿದ್ದಾರೆ. ಇದನ್ನೂ ಓದಿ: ಮುಗ್ದ ಗಂಡದಿಂದರ ಪಾಲಿಗೆ ಉಡುಗೊರೆಯಾಗಲಿದೆಯಾ ಈ ವೆಡ್ಡಿಂಗ್ ಗಿಫ್ಟ್?

    ಗೌತಮಿ ಕೂಡ ಕಡು ಕೆಂಪು ಬಣ್ಣದ ಸೀರೆ ಮತ್ತು ಹಸಿರು ಬಣ್ಣದ ಜ್ಯುವೆಲರ್ ಹಾಕಿಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ಅವರು ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಆ ಫೋಟೋಗಳು ಇದೀಗ ಸಖತ್ ವೈರಲ್ ಕೂಡ ಆಗಿದೆ. ಸತ್ಯಳನ್ನು ಫಾಲೋ ಮಾಡುತ್ತಿದ್ದವರು, ಸತ್ಯಳ ನೆಚ್ಚಿನ ನಟಿಯ ಬಗ್ಗೆ ತಿಳಿದುಕೊಂಡು, ಇಬ್ಬರನ್ನೂ ಫಾಲೋ ಮಾಡುವುದಾಗಿ ಕೆಲವರು ಕಾಮೆಂಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದುವೆಗೂ ಮುನ್ನ ನಯನತಾರಾ ಮತ್ತು ವಿಘ್ನೇಶ್ ಶಿವನ್ ಟೆಂಪಲ್ ರನ್

    ಮದುವೆಗೂ ಮುನ್ನ ನಯನತಾರಾ ಮತ್ತು ವಿಘ್ನೇಶ್ ಶಿವನ್ ಟೆಂಪಲ್ ರನ್

    ಕ್ಷಿಣ ಭಾರತದ ಕ್ಯೂಟೆಸ್ಟ್ ಜೋಡಿಗಳಲ್ಲಿ ನಟಿ ನಯನತಾರ ಮತ್ತು ವಿಘ್ನೇಶ್ ಶಿವನ್ ಕೂಡ ಒಬ್ಬರು. ಈ ಜೋಡಿ ತಮ್ಮ ಗುರಿಯನ್ನು ಸಾಧಿಸುವವರೆಗೂ ಎಂದಿಗೂ ಹಿಂದೆ ಸರಿಯುವುದಿಲ್ಲ. ಸದ್ಯ ಈ ಮುದ್ದಾದ ಜೋಡಿಯ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌದು, ವಿಘ್ನೇಶ್ ಶಿವನ್ ಹಾಗೂ ನಯನತಾರಾ ತಿರುಪತಿಗೆ ಭೇಟಿ ನೀಡಿ ತಿಪ್ಪಮ್ಮನ ದರ್ಶನ ಪಡೆದಿದ್ದಾರೆ. ಈ ವೇಳೆ ದೇವಾಲಯದ ಬಳಿ ಇಬ್ಬರೂ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಈ ಫೋಟೋವನ್ನು ಅಭಿಮಾನಿಗಳೊಂದಿಗೆ ವಿಘ್ನೇಶ್ ಶಿವನ್ ಹಂಚಿಕೊಂಡಿದ್ದಾರೆ.

    ಇತ್ತೀಚೆಗಷ್ಟೇ ವಿಘ್ನೇಶ್ ಶಿವನ್ ಆ್ಯಕ್ಷನ್ ಕಟ್ ಹೇಳಿದ್ದ, ಕಾಮಿಡಿ ಕಮ್ ರೋಮ್ಯಾಂಟಿಕ್ ‘ಕಾತು ವಾಕುಲಾ ರೆಂಡು ಕಾದಲ್’ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆ ವಿಘ್ನೇಶ್ ಶಿವನ್, ನಯನತಾರಾ ಜೊತೆಗೆ ತಿರುಪತಿಗೆ ತೆರಳಿ ತಿಮ್ಮಪ್ಪನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೇ ಖುಷಿಯಲ್ಲಿ ದೇವಾಲಯದ ಆವರಣದಲ್ಲಿ ನಯನತಾರಾ ಕೈ ಹಿಡಿದು ವಿಘ್ನೇಶ್ ಶಿವನ್ ಫೋಟೋಗೆ ಮಗುಳುನಗೆ ಬೀರುತ್ತಾ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ವಿಜಯ್ ಸೇತುಪತಿ ಒಲಿಯುವುದು ನಯನತಾರಾಗಾ ಅಥವಾ ಸಮಂತಗಾ?: ಹೆಚ್ಚಿದ ಕುತೂಹಲ

     

    View this post on Instagram

     

    A post shared by Vignesh Shivan (@wikkiofficial)

    ಈ ಫೋಟೋ ಜೊತೆಗೆ ಸಿನಿಮಾ ಬ್ಲಾಕ್‍ಬಾಸ್ಟರ್ ಆಗಲಿ ಎಂದು ಈ ಮುನ್ನ ತಿರುಪತಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೆವು. ಅದರಂತೆ ವೆಂಕಟೇಶ್ವರ ಸ್ವಾಮಿ, ತಿರುಮಲ, ತಿರುಪತಿ, ಏಳುಮಲೈಯಾನ್ ಕೋರಿದ್ದನ್ನು ನೀಡಿದ್ದಾನೆ. ನಿಮ್ಮ ಪ್ರೀತಿ, ಬೆಂಬಲ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಮುನ್ನ ಶಿರಡಿಗೆ ಭೇಟಿ ನೀಡಿದ್ದ ಈ ಜೋಡಿ ಅಲ್ಲೂ ಕೂಡ ಫೋಟೋ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದನ್ನೂ ಓದಿ: ವಿಜಯ್ ಸೇತುಪತಿ, ಸಂದೀಪ್ ಕಿಶನ್ ‘ಮೈಕಲ್’ ಚಿತ್ರದ ಫಸ್ಟ್ ಲುಕ್ ರಿಲೀಸ್

     

    View this post on Instagram

     

    A post shared by Vignesh Shivan (@wikkiofficial)

    ಕಾತು ವಾಕುಲಾ ರೆಂಡು ಕಾದಲ್ ಸಿನಿಮಾದಲ್ಲಿ ಕಾಲಿವುಡ್ ನಟ ವಿಜಯ್ ಸೇತುಪತಿ ನಾಯಕನಾಗಿ ಕಾಣಿಸಿಕೊಂಡಿದ್ದು, ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಹಾಗೂ ಟಾಲಿವುಡ್ ಕ್ಯೂಟ್ ನಟಿ ಸಮಂತಾ ರುತ್ ಪ್ರಭು ನಾಯಕಿಯರಾಗಿ ಮಿಂಚಿದ್ದಾರೆ. ಇದೊಂದು ತ್ರಿಕೋನ ಪ್ರೇಮಕಥೆ ಹೊಂದಿರುವ ಸಿನಿಮಾವಾಗಿದೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದು, ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣವಿದೆ.

  • ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರ ಬಳಿ ಇರುವ ಆಸ್ತಿ ಎಷ್ಟು ಗೊತ್ತಾ?

    ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರ ಬಳಿ ಇರುವ ಆಸ್ತಿ ಎಷ್ಟು ಗೊತ್ತಾ?

    ಚೆನ್ನೈ: ದಕ್ಷಿಣ ಭಾರತದ ಟಾಪ್ ನಟಿಯಾಗಿರುವ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರ ಅತೀ ಹೆಚ್ಚು ಶ್ರೀಮಂತ ನಟಿ ಎಂಬ ಸುದ್ದಿಯೊಂದು ಬಹಿರಂಗಗೊಂಡಿದೆ. ಹಲವಾರು ವರ್ಷಗಳಿಂದ ಸಿನಿಮಾಗಳಲ್ಲಿ ಅಭಿನಯಿಸಿರುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ನಟಿ ನಯನತಾರಗೆ ಅತೀ ಹೆಚ್ಚು ಫ್ಯಾನ್ಸ್ ಫಾಲೋವರ್ಸ್ ಕೂಡ ಇದ್ದಾರೆ.

    ಕಾಲಿವುಡ್, ಟಾಲಿವುಡ್, ಮಾಲಿವುಡ್, ಸ್ಯಾಂಡಲ್‍ವುಡ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ನಯನತಾರರವರು ಖಾಸಗಿ ಜೀವನದಲ್ಲಿಯೂ ಸಾಕಷ್ಟು ಏಳು-ಬೀಳುಗಳನ್ನು ನೋಡಿದ್ದಾರೆ. ಅಲ್ಲದೆ ಅನೇಕ ಟೀಕೆ, ವಿವಾದಗಳಿಗೂ ಒಳಗಾಗಿದ್ದರು. ಹೀಗಿದ್ದರೂ ನಯನತಾರ ಮಾತ್ರ ಯಾವುದಕ್ಕೂ ಕುಗ್ಗದೇ ಸೌತ್ ಸಿನಿ ಜಗತ್ತಿನಲ್ಲಿ ಮಿಂಚುತ್ತಿದ್ದಾರೆ.

    ಸದ್ಯ ನಯನತಾರ ದಕ್ಷಿಣ ಭಾರತದ ಶ್ರೀಮಂತ ನಟಿ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸುತ್ತಾಡಲು ಪ್ರೈವೇಟ್ ವಿಮಾನವನ್ನೇ ಹೊಂದಿರುವ ಇವರ ಬಳಿ ಸುಮಾರು 70 ಕೋಟಿ ಆಸ್ತಿ ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ನಯನತಾರ ಬಳಿ 80 ಲಕ್ಷದ ಆಡಿ ಕ್ಯೂ 7 ಕಾರು, 75.21 ಲಕ್ಷದ ಬಿಎಂಡಬ್ಲೂ ಎಕ್ಸ್ 5 ಎರಡು ದುಬಾರಿ ವೆಚ್ಚದ ಕಾರುಗಳಿದೆ.

    ಒಂದು ಸಿನಿಮಾದಲ್ಲಿ ಅಭಿನಯಿಸಲು ನಯನತಾರರವರು ಸುಮಾರು 3 ಕೋಟಿ ಸಂಭಾವನೆ ಪಡೆಯುತ್ತಾರೆ. 2019ರಲ್ಲಿ 7 ಸಿನಿಮಾಗಳಲ್ಲಿ ನಟಿಸಿರುವ ನಯನತಾರ, 2020ರಲ್ಲಿ 2 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ನೆಟ್ರಿಕಣ್, ಅಣ್ಣಾತ್ತೆ ಹಾಗೂ ವಿಜಯ್ ಸೇತುಪತಿ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

    ಮೂಲತಃ ಕೇರಳದವರಾಗಿರುವ ನಟಿ ನಯನತಾರ ಸದ್ಯ ಚೆನ್ನೈನ ಅಪಾರ್ಟ್‍ಮೆಂಟ್‍ನಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಲೀವಿಂಗ್ ಟೂ ಗೆದರ್ ರಿಲೇಷನ್ ಶಿಪ್‍ನಲ್ಲಿದ್ದಾರೆ.