Tag: ನಮ್‌ ಗಣಿ ಬಿಕಾಂ ಪಾಸ್‌

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಅಭಿಷೇಕ್ ಶೆಟ್ಟಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಅಭಿಷೇಕ್ ಶೆಟ್ಟಿ

    ‘ಆರಾಮ್ ಅರವಿಂದ ಸ್ವಾಮಿ’ ಡೈರೆಕ್ಟರ್ ಅಭಿಷೇಕ್ ಶೆಟ್ಟಿ (Abhishek Shetty) ಅವರು ಸಾಕ್ಷಾ ಶೆಟ್ಟಿ (Saksha Shetty) ಇಂದು (ನ.28) ವೈವಾಹಿಕ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ಹಂಚಿಕೊಂಡು, ನಮ್ಮನ್ನು ಹಾರೈಸಿ ಎಂದು ಫ್ಯಾನ್ಸ್‌ಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಟೀಸರ್ ಅಲ್ಲ, ಟ್ರೈಲರ್ ಅಲ್ಲ; ಡಿ.2ಕ್ಕೆ ಬರಲಿದೆ ‘ಯುಐ’ ವಾರ್ನರ್

    ನವಜೋಡಿ ಅಭಿಷೇಕ್ ಮತ್ತು ಸಾಕ್ಷಾ ಶೆಟ್ಟಿ ಗೋಲ್ಡನ್ ಕಲರ್ ಉಡುಗೆಯಲ್ಲಿ ಮಿಂಚಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಇರಲಿ ಕೆಲಸದ ಒತ್ತಡದಿಂದಾಗಿ ಎಲ್ಲರನ್ನೂ ಕರೆಯೋಕೆ ಆಗಿಲ್ಲ ಎಂದಿನಂತೆ ಪ್ರೀತಿ ಆಶೀರ್ವಾದ ಇರಲಿ ಎಂದು ಅಭಿಷೇಕ್ ಶೆಟ್ಟಿ ಮದುವೆಯ ಫೋಟೋ ಹಂಚಿಕೊಂಡಿದ್ದಾರೆ.

    ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಫೈನಾನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸಾಕ್ಷಾ ಜೊತೆ ಅಭಿಷೇಕ್ ಜೊತೆ ಕುಂದಾಪುರದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ನಟನಿಗೆ ಅಭಿಮಾನಿಗಳು ಇದೀಗ ಶುಭಹಾರೈಸುತ್ತಿದ್ದಾರೆ.

    ನಮ್ ಗಣಿ ಬಿಕಾಂ ಪಾಸ್, ಗಜಾನನ & ಗ್ಯಾಂಗ್ ಚಿತ್ರದಲ್ಲಿ ನಟನೆಯ ಜೊತೆ ನಿರ್ದೇಶಕನಾಗಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ‘ಆರಾಮ್ ಅರವಿಂದ ಸ್ವಾಮಿ’ ಚಿತ್ರಕ್ಕೆ ಅಭಿಷೇಕ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದು, ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಅನೀಶ್- ಮಿಲನಾ ನಟಿಸಿದರು.

  • ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ನಿರ್ದೇಶಕ ಅಭಿಷೇಕ್ ಶೆಟ್ಟಿ

    ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ನಿರ್ದೇಶಕ ಅಭಿಷೇಕ್ ಶೆಟ್ಟಿ

    ಸ್ಯಾಂಡಲ್‌ವುಡ್ ನಟ ಕಮ್ ನಿರ್ದೇಶಕ ಅಭಿಷೇಕ್ ಶೆಟ್ಟಿ (Abhishek Shetty) ಅವರು ಎಂಗೇಜ್‌ಮೆಂಟ್ ಸಂಭ್ರಮದಲ್ಲಿದ್ದಾರೆ. ಸಾಕ್ಷಾ ಶೆಟ್ಟಿ (Saksha Shetty) ಜೊತೆ ಅಭಿಷೇಕ್ ಶೆಟ್ಟಿ ಎಂಗೇಜ್ ಆಗಿದ್ದಾರೆ. ನಿಶ್ಚಿತಾರ್ಥದ (Engagement) ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

    ಕುಂದಾಪುರದಲ್ಲಿ ಫೆ.4ರಂದು ಸಾಕ್ಷಾ ಶೆಟ್ಟಿ ಜೊತೆ ಅಭಿಷೇಕ್ ಎಂಗೇಜ್‌ಮೆಂಟ್ ಅದ್ಧೂರಿಯಾಗಿ ನಡೆದಿದೆ. ಗುರುಹಿರಿಯರು ನಿಶ್ಚಯಿಸಿದ ಅರೇಂಜ್ ಮ್ಯಾರೇಜ್ ಇದಾಗಿದ್ದು, ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಅಭಿಷೇಕ್ ಶೆಟ್ಟಿ ನಿಶ್ಚಿತಾರ್ಥ ನಡೆದಿದೆ. ಇದನ್ನೂ ಓದಿ:ಸಂಭಾವನೆ ಬಗ್ಗೆ ಮಾತನಾಡಿದವರಿಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ

    ಸಾಕ್ಷಾ ಅವರು ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಫೈನಾನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವರ್ಷ ಡಿಸೆಂಬರ್ 8ರಂದು ಅಭಿಷೇಕ್- ಸಾಕ್ಷಾ ಮದುವೆ ಕುಂದಾಪುರದಲ್ಲಿ ಜರುಗಲಿದೆ. ಸದ್ಯ ಎಂಗೇಜ್ ಆಗಿರುವ ಹೊಸ ಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

    ನಮ್ ಗಣಿ ಬಿಕಾಂ ಪಾಸ್, ಗಜಾನನ & ಗ್ಯಾಂಗ್ ಚಿತ್ರದಲ್ಲಿ ನಟನೆಯ ಜೊತೆ ನಿರ್ದೇಶಕನಾಗಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ‘ಆರಾಮ್ ಅರವಿಂದ ಸ್ವಾಮಿ’ ಚಿತ್ರಕ್ಕೆ ಅಭಿಷೇಕ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದು, ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಅನೀಶ್- ಮಿಲನಾ ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರ ರಿಲೀಸ್‌ ಆಗಲಿದೆ.

  • ಅಭಿಷೇಕ್ ಶೆಟ್ಟಿ ಸಹೋದರಿಯ ಕೈ ಹಿಡಿದ ತೆಲುಗಿನ ನಟ ನಾಗ ಶೌರ್ಯ

    ಅಭಿಷೇಕ್ ಶೆಟ್ಟಿ ಸಹೋದರಿಯ ಕೈ ಹಿಡಿದ ತೆಲುಗಿನ ನಟ ನಾಗ ಶೌರ್ಯ

    ಟಾಲಿವುಡ್‌ನಲ್ಲಿ ಸದ್ಯ ತೆಲುಗಿನ ನಟ ನಾಗ ಶೌರ್ಯ ಮತ್ತು ಕನ್ನಡತಿ ಅನುಷಾ ಶೆಟ್ಟಿ ಅವರದ್ದೇ ಸುದ್ದಿ. ಸೌತ್ ನಟ ನಾಗ್ ಕನ್ನಡದ ಹುಡುಗಿಯನ್ನ ಮದುವೆಯಾಗಿರುವ ಬೆನ್ನಲ್ಲೇ ಮತ್ತೊಂದು ಇಂಟರೆಸ್ಟಿಂಗ್ ಸುದ್ದಿಯೊಂದು ಹೊರಬಿದ್ದಿದೆ. ನಾಗ್ ಪತ್ನಿ ಅನುಷಾ ಕನ್ನಡದ ಹುಡುಗಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷ್ಯ. ಆದರೆ ಅನುಷಾ ಯಾರ ಸಹೋದರಿ ಎಂಬುದು ಹಲವರಿಗೆ ತಿಳಿದಿಲ್ಲ.

    ಕನ್ನಡದ ಪ್ರತಿಭಾನ್ವಿತ ನಟ ಕಮ್ ನಿರ್ದೇಶಕ ಅಭಿಷೇಕ್ ಶೆಟ್ಟಿ `ನಮ್ ಗಣಿ ಬಿಕಾಂ ಪಾಸ್’ ಚಿತ್ರದ ಮೂಲಕ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರು. ಇತ್ತೀಚೆಗಷ್ಟೇ `ಗಜಾನನ ಗ್ಯಾಂಗ್’ ಸಿನಿಮಾಗೆ ನಿರ್ದೇಶನ ಕೂಡ ಮಾಡಿದ್ದರು. ಸದ್ಯದ ವಿಷ್ಯ, ಅಭಿಷೇಕ್‌ ಅವರ ಅಕ್ಕ ಅನುಷಾ ಶೆಟ್ಟಿ ಜೊತೆ ತೆಲುಗಿನ ನಟ ನಾಗ ಶೌರ್ಯ ಮದುವೆ ನಡೆದಿದೆ.

    ಅಭಿಷೇಕ್ ಶೆಟ್ಟಿ ಮತ್ತು ಅನುಷಾ ಮೂಲತಃ ಕುಂದಾಪುರದವರು. ಇಬ್ಬರು ಒಂದೇ ಕುಟುಂಬದವರು. ಅಭಿಷೇಕ್ ಸಿನಿರಂಗದಲ್ಲಿ ಸುದ್ದಿ ಮಾಡಿದ್ರೆ, ಅನುಷಾ ಶೆಟ್ಟಿ ಇಂಟೀರಿಯರ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ಅನುಷಾ ಮತ್ತು ನಾಗ್ ಒಬ್ಬರನ್ನೊಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕುಟುಂಬಸ್ಥರನ್ನ ಒಪ್ಪಿಸಿ, ಇಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ದಕ್ಷಿಣ ಭಾರತದ ಶೈಲಿಯಲ್ಲಿ ನಾಗ್‌, ಅನುಷಾ ವಿವಾಹ ನಡೆದಿದೆ. ಈ ಮೂಲಕ ನಾಗ ಶೌರ್ಯ ಕರ್ನಾಟಕದ ಅಳಿಯ ಆಗಿದ್ದಾರೆ.

    ಸಹೋದರಿ ಅನುಷಾ ಶೆಟ್ಟಿ ಮದುವೆಯಲ್ಲಿ ನಿರ್ದೇಶಕ ಅಭಿಷೇಕ್ ಶೆಟ್ಟಿ ಮಿಂಚಿದ್ದಾರೆ. ನವಜೋಡಿಗೆ ಶುಭಹಾರೈಸಿ, ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ವೀಡಿಯೋ ಸಖತ್ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಕನ್ನಡತಿ ಅನುಷಾ ಶೆಟ್ಟಿ ಜೊತೆ ಹಸೆಮಣೆ ಏರಿದ ತೆಲುಗು ನಟ ನಾಗಶೌರ್ಯ

    ಇನ್ನೂ ಅಭಿಷೇಕ್ ಶೆಟ್ಟಿ ನಿರ್ದೇಶನದ `ಆರಾಮ್ ಅರವಿಂದ್ ಸ್ವಾಮಿ’ ಚಿತ್ರದಲ್ಲಿ ಅನೀಶ್ ತೇಜೇಶ್ವರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಪ್ರಮುಖ ಅಪ್‌ಡೇಟ್ ಅನ್ನು ಮುಂದಿನ ಡಿಸೆಂಬರ್‌ನಲ್ಲಿ ಚಿತ್ರತಂಡ ಅನೌನ್ಸ್ ಮಾಡಲಿದೆ.

    Live Tv
    [brid partner=56869869 player=32851 video=960834 autoplay=true]