Tag: ನಮ್ರತಾ

  • ರೈತ ಸಂಘ ಕಡೆಯಿಂದ ದರ್ಶನ್‌ಗೆ ‘ಭೂಮಿ ಪುತ್ರ’ ಬಿರುದು

    ರೈತ ಸಂಘ ಕಡೆಯಿಂದ ದರ್ಶನ್‌ಗೆ ‘ಭೂಮಿ ಪುತ್ರ’ ಬಿರುದು

    ರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾ ಸಕ್ಸಸ್ ಕಂಡಿದೆ. ಇದೇ ಖುಷಿಯಲ್ಲಿ ಪಾಂಡವಪುರದಲ್ಲಿ ‘ಕಾಟೇರ’ ಚಿತ್ರದ ಸಕ್ಸಸ್ ಕಾರ್ಯಕ್ರಮ ನಡೆದಿದೆ. ರೈತರ ಕುರಿತು ‘ಕಾಟೇರ’ ಚಿತ್ರದ ಮೂಲಕ ತಿಳಿಸಿದಕ್ಕೆ ದರ್ಶನ್‌ಗೆ ಕರ್ನಾಟಕ ರಾಜ್ಯ ರೈತ ಸಂಘದ ಪರವಾಗಿ ‘ಭೂಮಿ ಪುತ್ರ’ ಎಂದು ಬಿರುದು ನೀಡಿದ್ದಾರೆ. ಇದನ್ನೂ ಓದಿ:ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ, ಗಾಯಕಿ ವಿಧಿವಶ

    ದರ್ಶನ್, ಆರಾಧನಾ ರಾಮ್ ನಟನೆಯ ‘ಕಾಟೇರ’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪಾಂಡವಪುರದಲ್ಲಿ ಕಾಟೇರ ಸಿನಿಮಾ ಸಕ್ಸಸ್ ಅನ್ನು ಚಿತ್ರತಂಡ ಅದ್ಧೂರಿಯಾಗಿ ಆಚರಿಸಿದೆ. ಈ ಚಿತ್ರದಲ್ಲಿ ರೈತರ ಬಗ್ಗೆ ಹಲವು ವಿಚಾರಗಳನ್ನು ದರ್ಶನ್ ಮಾತನಾಡಿದ್ದಾರೆ.

    ರೈತರ ಕುರಿತು ಜನರಿಗೆ ಹಲವು ವಿಷಯಗಳನ್ನು ತಲುಪಿಸಿದಕ್ಕೆ ಮತ್ತು ನಟನೆಗೆ ದರ್ಶನ್ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ಪರವಾಗಿ ‘ಭೂಮಿ ಪುತ್ರ’ ಎಂದು ಬಿರುದು ನೀಡಿ ಸನ್ಮಾನ ಮಾಡಲಾಗಿದೆ.

    ಈ ಸಮಾರಂಭದಲ್ಲಿ ದರ್ಶನ್ ಜೊತೆ ರೈತ ಮುಖಂಡ ಕೆ.ಎಸ್ ಪುಟ್ಟಣ್ಣಯ್ಯ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ನಟಿ ಆರಾಧನಾ ರಾಮ್ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತುಂಬಿದ್ದು, `ಬಿಗ್ ಬಾಸ್’ ಖ್ಯಾತಿಯ ನಮ್ರತಾ ಗೌಡ, ಮಾನ್ವಿತಾ ಕಾಮತ್ (Manvitha Kamath), ಹರ್ಷಿಕಾ ಪೂಣಚ್ಚ ಭಾಗಿಯಾಗಿ ತಮ್ಮ ನೃತ್ಯದ ಮೂಲಕ ಮನರಂಜನೆ ನೀಡಿದ್ದರು.

  • ನಮ್ರತಾ ‘ಬಿಗ್ ಬಾಸ್’ ಜರ್ನಿ ಬಲು ರೋಚಕ

    ನಮ್ರತಾ ‘ಬಿಗ್ ಬಾಸ್’ ಜರ್ನಿ ಬಲು ರೋಚಕ

    ‘ಪುಟ್ಟಗೌರಿ ಮದುವೆ’ ಧಾರಾವಾಹಿಯ ಮೂಲಕ ನಟನೆಗೆ ಕಾಲಿಟ್ಟ ನಮ್ರತಾ ಗೌಡ (Namrata), ಬಿಗ್‌ ಬಾಸ್‌ (Bigg Boss Kannada) ವೇದಿಕೆಗೆ ಕಾಲಿಟ್ಟಿದ್ದು ‘ಡೊಂಟ್ ಯು ನೋ… ಐ ಆಮ್ ವೆರಿ ಸೆಕ್ಸಿ’ ಎಂದು ಹಾಡುತ್ತ… ಸೌಂದರ್ಯ, ಆತ್ಮವಿಶ್ವಾಸ ಮತ್ತು ಸ್ಪಷ್ಟತೆಯ ಹದವಾದ ಮಿಶ್ರಣದಂತೆ ಕಾಣಿಸಿದ್ದ ನಮ್ರತಾ ಅವರಿಗೆ ಪ್ರೀಮಿಯರ್ ವೇದಿಕೆಯಲ್ಲಿ ಶೇಕಡಾ ಮತಗಳು ಬಂದಿದ್ದವು. ಈ ಸೀಸನ್‌ನ ಮೊದಲ ಸ್ಪರ್ಧಿಯಾಗಿ ಅವರು ಬಿಗ್‌ಬಾಸ್‌ ಮನೆಯೊಳಗೆ ಕಾಲಿಟ್ಟಿದ್ದರು. ‘ಹ್ಯಾಪಿ ಬಿಗ್‌ಬಾಸ್‌’ ಎಂಬ ಟ್ಯಾಗ್‌ಲೈನ್‌ ಅನ್ನು ತಮ್ಮ ವ್ಯಕ್ತಿತ್ವಕ್ಕೂ ನೇತುಹಾಕಿಕೊಂಡಂತಿದ್ದ ನಮ್ರತಾ ಅವರು ಸದಾ ನಗುನಗುತ್ತಲೇ ಎಲ್ಲರ ಗಮನ ಸೆಳೆದಿದ್ದರು.

    ಬಿಗ್‌ಬಾಸ್ ಮನೆಯೊಳಗೆ ದಿನಗಳನ್ನು ಕಳೆಯಲಾರಂಭಿಸಿದಂತೆ, ವಿನಯ್, ತುಕಾಲಿ ಸಂತೋಷ್, ಇಶಾನಿ, ಮೈಕಲ್, ಸ್ನೇಹಿತ್‌, ಗೌರಿಶ್ ಮತ್ತು ಸಿರಿ ಅವರ ಜೊತೆಗೆ ಆಪ್ತರಾಗಿದ್ದರು. ‘ಶಾಡೋ’, ‘ಚಮಚ’ ‘ಇನ್‌ಪ್ಲ್ಯೂಯೆನ್ಸ್‌ ಆಗುವವರು’ ಪದೇ ಪದೇ ಇಂಥ ಮಾತುಗಳನ್ನು ಕೇಳುತ್ತಲೇ ಬಂದ ನಮ್ರತಾ, ಬಿಗ್‌ಬಾಸ್‌ ಮನೆಯಲ್ಲಿ ಹದಿನೈದು ವಾರಗಳನ್ನು ಉಳಿದುಕೊಂಡಿರುವುದೇ ಈ ಎಲ್ಲವಕ್ಕೂ ಉತ್ತರದಂತಿತ್ತು.

    ಈ ಸೀಸನ್‌ನಲ್ಲಿ ಹಲವು ಏಳುಬೀಳುಗಳನ್ನು ಹಾದು ಅಂತಿಮ ಹಂತಕ್ಕೆ ಒಂದೇ ಹೆಜ್ಜೆ ಉಳಿದಿರುವಾಗ ನಮ್ರತಾ ಮನೆಯಿಂದ ಹೊರಬಿದ್ದಿದ್ದಾರೆ. ಕೊನೆಕೊನೆಯ ದಿನಗಳಲ್ಲಿ ಅವರ ಆಟದ ವೈಖರಿಯನ್ನು ಕಂಡು ಹಿಂದೆ ಜರಿದವರೇ ಅವರನ್ನು ಹೊಗಳಿದ್ದು ಅವರ ಸಾಮರ್ಥ್ಯಕ್ಕೆ ಸಾಕ್ಷಿ. ಅವರ ಜರ್ನಿಯ JioCinemaದಲ್ಲಿ ಕಂಡ ಒಂದು ಕಿರುನೋಟ ಇಲ್ಲಿದೆ. ಜಿಯೊ ಸಿನಿಮಾ ಫನ್‌ ಫ್ರೈಡೆ ಟಾಸ್ಕ್‌ಗಳಲ್ಲಿ ನಮ್ರತಾ ಅವರ ಕಾಂಟ್ರಿಬ್ಯೂಷನ್ ದೊಡ್ಡದಿದೆ. ‘ಹೂಂ ಅಂತಿಯಾ ಊಹೂಂ’ ಅಂತಿಯಾ ಟಾಸ್ಕ್‌ನಲ್ಲಿ ಆನೆಗೆ ನಿಖರವಾಗಿ ಬಾಲ ಬಿಡಿಸುವುದರ ಮೂಲಕ ಅವರು ಗಮನಸೆಳೆದಿದ್ದರು. ಗೇಮ್‌ ಆಡುವುದು, ಜೊತೆಗೆ ಆಡುವ ಆಟಗಾರರಿಗೆ ಪ್ರೋತ್ಸಾಹಿಸುವುದು ಈ ಎರಡರಲ್ಲಿಯೂ ನಮ್ರತಾ ಅವರದ್ದು ಎತ್ತಿದ ಕೈ. ‘ಹುಡುಕಿ ತಂದವರೇ ಮಹಾಶೂರ’ ಟಾಸ್ಕ್‌ನಲ್ಲಿ ಅವರು ತೋರಿದ ಚಾಕಚಕ್ಯತೆ ಅವರ ತಂಡಕ್ಕೆ ದೊಡ್ಡ ಬಲ ತಂದಿತ್ತಿತ್ತು.

    ತನಿಷಾ ಜೊತೆಗೆ ಕ್ಲಾಶ್‌

    ಈ ಸೀಸನ್‌ನ ಆರಂಭದ ದಿನಗಳಲ್ಲಿ ನಮ್ರತಾ ವಿನಯ್ ಮತ್ತು ಇಶಾನಿ ಅವರನ್ನು ಸಾಕಷ್ಟು ಹಚ್ಚಿಕೊಂಡಿದ್ದರು. ಅದರಲ್ಲಿಯೂ ವಿನಯ್‌ ಅವರ ಜೊತೆಗಿನ ಅವರ ಬಾಂಧವ್ಯ ಕೊನೆಯ ದಿನದವರೆಗೂ ಕಿಂಚಿತ್ ಊನಗೊಳ್ಳದೆ ಬೆಳೆದುಕೊಂಡು ಬಂದಿತ್ತು. ಕ್ರಿಕೆಟ್‌ ಟಾಸ್ಕ್‌ನಲ್ಲಿ ತನಿಷಾ ಜೊತೆಗೆ ನಡೆದ ಮಾತಿನ ಚಕಮಕಿ ನಮ್ರತಾ ಅವರ ವ್ಯಕ್ತಿತ್ವದ ಮತ್ತೊಂದು ಸ್ಟ್ರಾಂಗ್ ಆಯಾಮವನ್ನು ಜನರೆದುರು ತೆರೆದಿಟ್ಟಿತ್ತು. ಹಾಗೆಯೇ ‘ಹಳ್ಳಿಮನೆ’ ಟಾಸ್ಕ್‌ನಲ್ಲಿಯೂ ತನಿಷಾ ಜೊತೆಗೆ ನಮ್ರತಾ ಮಾತಿನ ಚಕಮಕಿ ಜೋರಾಗಿಯೇ ನಡೆದಿತ್ತು. ಈ ಚಕಮಕಿ ಬೆಂಕಿಯಾಗಿ ಹೊತ್ತಿಕೊಂಡು ಮನೆಯ ನೆಮ್ಮದಿಯನ್ನೇ ಕೆಡಿಸಿದ್ದು, ಬಿಗ್‌ಬಾಸ್ ಮನೆಯ ಆಚೆಗೂ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಸಂಗೀತಾ ಮತ್ತು ತನಿಷಾ ಜೊತೆಗೆ ಅಂದು ಹುಟ್ಟಿಕೊಂಡಿದ್ದ ಭಿನ್ನಾಭಿಪ್ರಾಯದ ಕಿಡಿ ಆರಲು ಸಾಕಷ್ಟು ದಿನಗಳನ್ನೇ ತೆಗೆದುಕೊಂಡಿತು. ತನಿಷಾ ಮನೆಯಿಂದ ಹೊರಗೆ ಹೋಗುವ ಹೊತ್ತಿನಲ್ಲಿಯೂ ನಮ್ರತಾ ಅವರನ್ನೇ ನಾಮಿನೇಟ್ ಮಾಡಿದ್ದು ಇದಕ್ಕೊಂದು ಉದಾಹರಣೆ. ಆದರೆ ಸಂಗಿತಾ ಜೊತೆಗಿನ ಅವರ ಹಳಸಿದ್ದ ಸಂಬಂಧ ಕೊನೆದಿನಗಳಲ್ಲಿ ಸರಿಹೋಗಿತ್ತು. ನಮ್ರತಾ ಹಲವು ಸಲ ಕುಗ್ಗಿದಾಗ ಸಂಗೀತಾ ಹೆಗಲೆಣೆಯಾಗಿ ನಿಂತು ಸಂತೈಸಿದ್ದರು.

    ಸ್ನೇಹಿತ್ ಜೊತೆಗಿನ ಮಧುರ ಬಾಂಧವ್ಯ

    ಈ ಸೀಸನ್‌ನಲ್ಲಿ ನಮ್ರತಾ ನಂತರ ಮನೆಯೊಳಗೆ ಹೊಕ್ಕಿದ್ದು ಸ್ನೇಹಿತ್‌. ಮನೆಯೊಳಗೆ ಪರಸ್ಪರ ಎಲ್ಲರಿಗಿಂತ ಮೊದಲು ಮೀಟ್ ಆಗಿದ್ದ ಅವರ ನಡುವಿನ ಬಾಂಧವ್ಯ ನಂತರದ ದಿನಗಳಲ್ಲಿಯೂ ಮುಂದುವರಿದಿತ್ತು. ಅದರಲ್ಲಿಯೂ ಸ್ನೇಹಿತ್ ಅವರಂತೂ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ, ‘ನಿಮ್ಮ ಬಗ್ಗೆ ನನಗೆ ಸೀರಿಯಸ್‌ ಆಗಿ ಒಲವಿದೆ’ ಎಂಬರ್ಥದ ಮಾತುಗಳನ್ನು ಆಡಿಯೂ ಇದ್ದರು. ಸದಾ ಕಾಲ ನಮ್ರತಾ ಹಿಂದೆ ಸುತ್ತುತ್ತ, ಸಮಯ ಸಿಕ್ಕಾಗೆಲ್ಲ ಅವರನ್ನು ಹೊಗಳುತ್ತ, ಅವರಿಗೆ ಸಹಾಯ ಮಾಡುತ್ತ ಕೆಲವೊಮ್ಮೆ ಕಿರಿಕಿರಿಯಾಗುಷ್ಟು ಜೊತೆಗಿದ್ದರು ಸ್ನೇಹಿತ್. ನಮ್ರತಾ ಮಾತ್ರ ಅವರನ್ನು ತಮಾಷೆಯಾಗಿಯೇ ನೋಡುತ್ತ, ಅವರ ಮಾತಿಗೆಲ್ಲ ನಗುನಗುತ್ತಲೇ ಹಾರಿಕೆಯ ಉತ್ತರ ನೀಡುತ್ತಿದ್ದರು.

     

    ತಾವು ಎಲಿಮಿನೇಟ್ ಆಗುವ ವಾರದಲ್ಲಿ ಪಡೆದ ವಿಶೇಷ ಅಧಿಕಾರವನ್ನೂ ಸ್ನೇಹಿತ್, ನಮ್ರತಾ ಅವರನ್ನು ಇಂಪ್ರೆಸ್ ಮಾಡುವ ರೀತಿಯಲ್ಲಿಯೇ ಉಪಯೋಗಿಸಿದ್ದು ಮನೆಯ ಉಳಿದವರ ಅಸಮಧಾನಕ್ಕೂ ಕಾರಣವಾಗಿತ್ತು. ಆದರೆ ಸ್ನೇಹಿತ್ ಎಲಿಮಿನೇಟ್ ಆಗುವ ಸುದ್ದಿ ಕೇಳುತ್ತಿದ್ದ ಹಾಗೆಯೇ ನಮ್ರತಾ ಬಿಕ್ಕಿ ಬಿಕ್ಕಿ ಅತ್ತಿದ್ದರು. ಹೋಗುವಾಗ ‘ಇನ್ನು ಮೇಲೆ ನೀವು ನಿಮಗೊಬ್ಬರಿಗೆ ಮಾತ್ರವಲ್ಲ, ನನ್ನ ಪರವಾಗಿಯೂ ಆಡುತ್ತಿದ್ದೀರಿ. ಆಡಿ ಗೆದ್ದು ಬನ್ನಿ’ ಎಂದು ಹೇಳಿಯೇ ಸ್ನೇಹಿತ್ ಹೊರಗೆ ಹೋಗಿದ್ದರು. ಸ್ನೇಹಿತ್ ಅವರ ನೆನಪಿಗಾಗಿ ಅವರು ಕಾಫಿ ಕುಡಿಯುತ್ತಿದ್ದ ಕಪ್ ಅನ್ನು ನಮ್ರತಾ ಉಳಿಸಿಕೊಂಡಿದ್ದರು. ಅಲ್ಲದೆ, ಮನೆಯಲ್ಲಿದ್ದಾಗ ಅವರ ಜೊತೆಗೆ ನಡೆದುಕೊಂಡು ರೀತಿಯ ಬಗ್ಗೆ ಪಶ್ಚಾತ್ತಾಪದಿಂದ ಮಾತಾಡಿದ್ದರು. ತಾವು ಕ್ಯಾಪ್ಟನ್ ಆದಾಗಲೂ ಅದನ್ನು ಸ್ನೇಹಿತ್‌ ಅವರಿಗೆ ಅರ್ಪಿಸಿದ್ದರು.

  • ಫಿನಾಲೆಗೆ ಜಸ್ಟ್ ಮಿಸ್ – ದೊಡ್ಮನೆಯಿಂದ ನಮ್ರತಾ ಔಟ್

    ಫಿನಾಲೆಗೆ ಜಸ್ಟ್ ಮಿಸ್ – ದೊಡ್ಮನೆಯಿಂದ ನಮ್ರತಾ ಔಟ್

    ಬಿಗ್ ಬಾಸ್ (Bigg Boss) ಮನೆಯ ಆಟ ಇದೀಗ ಫಿನಾಲೆ ದಿನದತ್ತ ಸಾಗುತ್ತಿದೆ. ಇನ್ನೇನು ಫಿನಾಲೆ ವಾರಕ್ಕೆ ಕಾಲಿಡಬೇಕು ಎನ್ನುವಾಗಲೇ ನಮ್ರತಾ (Namratha Gowda) ಔಟ್ ಆಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.

    ಫಿನಾಲೆಗೆ ಮೊದಲು ಟಿಕೆಟ್ ಗಿಟ್ಟಿಸಿಕೊಂಡವರು ಸಂಗೀತಾ. ಬಳಿಕ ತುಕಾಲಿ 2ನೇ ಫೈನಲಿಸ್ಟ್ ಆಗಿ ಫಿನಾಲೆಗೆ ಹೋದರು. ವರ್ತೂರು ಸಂತೋಷ್, ವಿನಯ್, ಡ್ರೋನ್ ಪ್ರತಾಪ್ ಅವರು ಟಾಪ್ ಸ್ಥಾನಗಳನ್ನ ಅಲಂಕರಿಸಿದ್ದರು. ಟಾಪ್ 6ರಲ್ಲಿ ಕಾರ್ತಿಕ್ ಮತ್ತು ನಮ್ರತಾ ನಡುವೆ ಟಫ್ ಫೈಟ್ ಇತ್ತು. ಇದೀಗ ಕಾರ್ತಿಕ್ ಸೇವ್ ಆಗಿ ನಮ್ರತಾ ಎಲಿಮಿನೇಟ್ ಆಗಿದ್ದಾರೆ.‌ ಇದನ್ನೂ ಓದಿ: Bigg Boss: ಟೀಕಿಸಿದ ನಮ್ರತಾ, ಸಂಗೀತಾಗೆ ತಿರುಗೇಟು ಕೊಟ್ಟ ಕಾರ್ತಿಕ್

    ವಿನಯ್ ಚಮಚ, ಶ್ಯಾಡೋ ಎಂದೇ ಬಿಂಬಿತರಾಗಿದ್ದ ನಮ್ರತಾ ಇತ್ತೀಚಿನ ಈ ಆರೋಪಗಳನ್ನು ತಮ್ಮ ಆಟದ ಮೂಲಕ ಸುಳ್ಳು ಎಂದು ಸಾಬೀತು ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ನಮ್ರತಾ ಸಖತ್ ಆಗಿ ಆಟ ಆಡುತ್ತಿದ್ದರು‌. ಎಲಿಮಿನೇಷನ್ ಆಗಿರೋದು ನಮ್ರತಾಗೇ ಸ್ವತಃ ಶಾಕ್ ಕೊಟ್ಟಿದೆ.

    ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಮ್ರತಾ, ಆಕಾಶದೀಪ, ಪುಟ್ಟಗೌರಿ ಮದುವೆ, ನಾಗಿಣಿ-2 ಸೀರಿಯಲ್ ನಮ್ರತಾ ನಟಿಸಿ ಗಮನ ಸೆಳೆದಿದ್ದಾರೆ‌. ಇದನ್ನೂ ಓದಿ: ನೀವಿಲ್ಲ ಅಂದ್ರೆ ಈ ಸೀಸನ್ ಅಪೂರ್ಣ- ಸಂಗೀತಾ, ವಿನಯ್‌ಗೆ ಕಿಚ್ಚನ ಚಪ್ಪಾಳೆ

  • Bigg Boss: ಟೀಕಿಸಿದ ನಮ್ರತಾ, ಸಂಗೀತಾಗೆ ತಿರುಗೇಟು ಕೊಟ್ಟ ಕಾರ್ತಿಕ್

    Bigg Boss: ಟೀಕಿಸಿದ ನಮ್ರತಾ, ಸಂಗೀತಾಗೆ ತಿರುಗೇಟು ಕೊಟ್ಟ ಕಾರ್ತಿಕ್

    ದೊಡ್ಮನೆಯಲ್ಲಿ ಕಾರ್ತಿಕ್ ಮಹೇಶ್ (Karthik Mahesh) ಅವರು ಸ್ಟ್ರಾಂಗ್‌ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಕಾರ್ತಿಕ್ ಆಟದಲ್ಲಿ ಎಡವಿದ್ದಾರೆ. ಹಾಗಾಗಿಯೇ ವೀಕೆಂಡ್ ಪಂಚಾಯಿತಿಯಲ್ಲಿ ಕಾರ್ತಿಕ್ ಕುಗ್ಗಿದ್ದಾರಾ? ಎಂಬ ಪ್ರಶ್ನೆಯನ್ನು ಸುದೀಪ್ ಮನೆ ಮಂದಿಗೆ ಕೇಳಿದ್ದಾರೆ. ಕಾರ್ತಿಕ್‌ ಆಟಕ್ಕೆ ಸಂಗೀತಾ- ನಮ್ರತಾ (Namratha) ಹೌದು ಅವರು ಕುಗ್ಗಿದ್ದಾರೆ ಎಂದು ಟೀಕಿಸಿದ್ದಾರೆ. ಅದಕ್ಕೆ, ಕಾರ್ತಿಕ್ ಕೂಡ ಖಡಕ್ ಆಗಿ ಉತ್ತರಿಸಿದ್ದಾರೆ.

    ಬಿಗ್ ಬಾಸ್ (Bigg Boss Kannada 10) ಆಟ ಶುರುವಾದಾಗ ಸಂಗೀತಾ (Sangeetha Sringeri) ಜೊತೆ ಕಾರ್ತಿಕ್ ಅವರು ಆಪ್ತವಾಗಿದ್ದರು. ಅನೇಕ ಟಾಸ್ಕ್‌ಗಳಲ್ಲಿ ಸಂಗೀತಾ-ಕಾರ್ತಿಕ್ ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತಿದ್ದರು. ಇಬ್ಬರ ನಡುವೆ ಆದ ಮನಸ್ತಾಪದ ಬಳಿಕ ಕಾರ್ತಿಕ್ ಅವರು ನಮ್ರತಾ ಜೊತೆ ಸ್ನೇಹ ಬೆಳೆಸಿದರು. ಈಗ ಆ ಸ್ನೇಹ ಕೂಡ ಅಂತ್ಯವಾಗಿದೆ. ಈ ವಿಚಾರದಲ್ಲಿ ಕಾರ್ತಿಕ್ ಅವರನ್ನು ಸಂಗೀತಾ ಮತ್ತು ನಮ್ರತಾ ಟೀಕಿಸಿದ್ದಾರೆ. ಲಾಭಕ್ಕಾಗಿ ನನ್ನ ಸ್ನೇಹ ಬಳಸಿಕೊಂಡರು ಎಂದು ನಮ್ರತಾ ನೇರವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:ನೀವಿಲ್ಲ ಅಂದ್ರೆ ಈ ಸೀಸನ್ ಅಪೂರ್ಣ- ಸಂಗೀತಾ, ವಿನಯ್‌ಗೆ ಕಿಚ್ಚನ ಚಪ್ಪಾಳೆ

    ದೊಡ್ಮನೆಯಲ್ಲಿ ಒಬ್ಬರ ಜೊತೆ ಸ್ನೇಹ ಮೂಡುವುದು, ಬಳಿಕ ಆ ಸ್ನೇಹ ಅಂತ್ಯವಾಗುವುದು ಸಹಜ. ಆದರೂ ಅವರ ವರ್ತನೆಯನ್ನು ಸಂಗೀತಾ, ನಮ್ರತಾ ಮಾತಿನ ಮೂಲಕ ತಿವಿದಿದ್ದಾರೆ. ಕಾರ್ತಿಕ್‌ಗೆ ಒಂಟಿಯಾಗಿ ಇರಲು ಸಾಧ್ಯವಿಲ್ಲ ಎಂದು ಸಂಗೀತಾ ಮತ್ತು ನಮ್ರತಾ ಹೇಳಿದ್ದಾರೆ. ಒಂದು ವೇಳೆ ಒಂಟಿಯಾಗಿದ್ದರೆ ಯಾರ ಜೊತೆಯೂ ಸೇರುವುದಿಲ್ಲ ಎಂಬ ಕಾರಣ ನೀಡಿ ನಾಮಿನೇಟ್ ಮಾಡುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಜೊತೆಗೆ ಇದ್ದರೂ ಕಷ್ಟ, ಒಬ್ಬರೇ ಇದ್ದರೂ ಕಷ್ಟ ಎಂಬ ಪರಿಸ್ಥಿತಿ ಕಾರ್ತಿಕ್ ಅವರದ್ದಾಗಿದೆ ಎಂದಿದ್ದಾರೆ.

    ನಾನು ಕುಗ್ಗಿದ್ದು ನಿಜ. ಆದರೆ ದೈಹಿಕವಾಗಿ ಅಲ್ಲ, ಮಾನಸಿಕವಾಗಿ ಅಷ್ಟೇ. ಆಟದಿಂದ ನಾನು ಡೈವರ್ಟ್ ಆಗಿಲ್ಲ. ಆದರೆ ಅವರ ಆಟ ಕುಗ್ಗಿದಾಗ ನಾನು ನಾಮಿನೇಟ್ ಮಾಡೋದು ಸಹಜ ಎಂದು ಕಾರ್ತಿಕ್ ಖಡಕ್‌ ಆಗಿ ಮಾತನಾಡಿದ್ದಾರೆ. ಸಂಗೀತಾ, ನಮ್ರತಾ, ತನಿಷಾ ಜೊತೆಗಿನ ಸ್ನೇಹ ಅಂತ್ಯವಾದ ಬಳಿಕ ಕಾರ್ತಿಕ್ ಅವರು ತುಕಾಲಿ ಸಂತೋಷ್- ವರ್ತೂರು ಸಂತೋಷ್ ಜೊತೆ ಹೆಚ್ಚು ಕಾಲ ಕಳೆಯಲು ಆರಂಭಿಸಿದ್ದಾರೆ.

  • ಬಿಗ್ ಬಾಸ್ ಮನೆಯಿಂದ ಹೊರ ಬರೋದು ಯಾರು?

    ಬಿಗ್ ಬಾಸ್ ಮನೆಯಿಂದ ಹೊರ ಬರೋದು ಯಾರು?

    ಬಿಗ್ ಬಾಸ್ (Bigg Boss Kannada) ಮನೆ ಈ ವಾರ ಅಕ್ಷರಶಃ ಯುದ್ಧ ಭೂಮಿಯಂತೆ ಕಾಣುತ್ತಿದೆ. ಫಿನಾಲೆಗೆ ಒಂದು ವಾರವಷ್ಟೇ ಬಾಕಿ. ಮನೆಯಲ್ಲಿ ಇರೋದು ಏಳು ಜನ. ಈಗಾಗಲೇ ಸಂಗೀತಾ ಶೃಂಗೇರಿ ಡೈರೆಕ್ಟ್ ಆಗಿ ಫಿನಾಲೆಗೆ ಆಯ್ಕೆಯಾಗಿದ್ದಾರೆ. ತುಕಾಲಿ ಸಂತು ಅವರು ನಾಮಿನೇಷನ್ ತೂಗುಕತ್ತಿಯಿಂದ ತಪ್ಪಿಸಿಕೊಂಡಿದ್ದಾರೆ. ಹಾಗಾಗಿ ವರ್ತೂರು ಸಂತೋಷ, ವಿನಯ್, ಕಾರ್ತಿಕ್, ಡ್ರೋನ್ ಪ್ರತಾಪ್ (Drone Pratap) ಮತ್ತು ನಮ್ರತಾ ಸೆಣೆಸಾಡೋದು ಅನಿವಾರ್ಯವಾಗಿದೆ.

    ಮಿಡ್ ವೀಕ್ ಎಲಿಮಿನೇಷನ್ (Elimination) ಅಂತ ಈಗಾಗಲೇ ತನಿಷಾ ಕುಪ್ಪಂಡ ಅವರನ್ನು ಮನೆಯಿಂದ ಕಳುಹಿಸಲಾಗಿದೆ. ಫಿನಾಲೆ ವೇದಿಕೆಯ ಮೇಲೆ ಐದೇ ಐದು ಜನರು ಇರುವ ಕಾರಣದಿಂದಾಗಿ ಇನ್ನೂ ಇಬ್ಬರನ್ನೂ ಮನೆಯಿಂದ ಹೊರ ಕಳುಹಿಸಬೇಕಿದೆ. ಹಾಗಾಗಿ ಈ ವಾರ ಮತ್ತ್ಯಾರು ಮನೆಯಿಂದ ಹೊರ ಬರುತ್ತಾರೆ ಎನ್ನುವ ಕುತೂಹಲ ಶುರುವಾಗಿದೆ. ಕಳೆದ ಸುದೀಪ್ ಅವರು ವರ್ತೂರು ಸಂತೋಷ್ ಅಥವಾ ತುಕಾಲಿ ಸಂತು ಇಬ್ಬರಲ್ಲಿ ಒಬ್ಬರು ಮನೆಯಿಂದ ಆಚೆ ಹೋಗಲು ರೆಡಿಯಾಗಿ ಎಂದು ಹೇಳುವ ಮೂಲಕ ಶಾಕ್ ನೀಡಿದ್ದರು. ಈ ಬಾರಿ ತುಕಾಲಿ ಬಚಾವ್ ಆಗಿದ್ದಾರೆ.

    ಸದ್ಯ ನಾಮಿನೇಟ್ ಆಗಿರುವ ಕಂಟೆಸ್ಟೆಂಟ್ ಗಳ ಪೈಕಿ ವಿನಯ್, ಕಾರ್ತಿಕ್ ಹಾಗೂ ಡ್ರೋನ್ ಪ್ರತಾಪ್ ಸ್ಟ್ರಾಂಗ್ ಕಂಟೆಸ್ಟೆಂಟ್ ಗಳು ಅನಿಸಿಕೊಂಡಿದ್ದಾರೆ. ಉಳಿದಿರೋದು ವರ್ತೂರು ಸಂತೋಷ್ ಮತ್ತು ನಮ್ರತಾ. ಇಬ್ಬರಲ್ಲಿ ಒಬ್ಬರು ಈ ವಾರ ಆಚೆ ಬರಬಹುದಾ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಹೊರ ಬಂದರೆ ಈ ಇಬ್ಬರಲ್ಲಿ ಒಬ್ಬರು ಗ್ಯಾರಂಟಿ ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ. ಕಳೆದ ವಾರವೇ ವರ್ತೂರು ಆಚೆ ಬರಲಿದ್ದಾರೆ ಎಂದು ಹೇಳಲಾಗಿತ್ತು. ಈ ವಾರ ಅದೇನಾದರೂ ರಿಪೀಟ್ ಆಗಬಹುದಾ? ಗೊತ್ತಿಲ್ಲ.

    ಮತ್ತೊಂದು ಕಿಚ್ಚನ ಪಂಚಾಯತಿ ಎಂದು ನಡೆಯುತ್ತಿದೆ. ಈ ಪಂಚಾಯತಿಯಲ್ಲಿ ಏನೆಲ್ಲ ಸಂಗತಿಗಳು ನಡೆಯಲಿವೆ ಎನ್ನುವ ಚರ್ಚೆ ಕೂಡ ಆಗುತ್ತಿದೆ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯನ್ನು ಕಿಚ್ಚ ಇಂದು ಮಾಡುತ್ತಾರಾ ಅಥವಾ ನಾಳೆ ಮಾಡುತ್ತಾರಾ ಎನ್ನುವುದು ಇಂದು ರಾತ್ರಿಗೆ ಅಂದಾಜು ಸಿಗಲಿದೆ.

  • ಸ್ನೇಹಿತ್ ಜೊತೆ ಯಾವತ್ತೂ ಮಾತನಾಡಲ್ಲ: ನಮ್ರತಾ ಶಪಥ

    ಸ್ನೇಹಿತ್ ಜೊತೆ ಯಾವತ್ತೂ ಮಾತನಾಡಲ್ಲ: ನಮ್ರತಾ ಶಪಥ

    ದ್ಯ ಬಿಗ್ ಬಾಸ್ (Bigg Boss Kannada) ಮನೆಯಲ್ಲಿರುವ ನಮ್ರತಾ, ದೊಡ್ಮನೆಯಲ್ಲೇ ಶಪಥವೊಂದನ್ನು ಮಾಡಿದ್ದಾರೆ. ಜೀವನದಲ್ಲಿ ಇನ್ನಾವತ್ತೂ ತಾವು ಸ್ನೇಹಿತ್ (Snehith) ಜೊತೆ ಮಾತನಾಡಲ್ಲ ಎಂದು ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪ್ರಣಯ ಹಕ್ಕಿಗಳು ಎಂದೇ ಖ್ಯಾತರಾಗಿತ್ತು ಸ್ನೇಹಿತ್ ಮತ್ತು ನಮ್ರತಾ (Namrata) ಜೋಡಿ. ಆದರೆ, ಈಗ ವೈರತ್ವ ಬೆಳೆದುಕೊಂಡಿದೆ.

    ಸ್ನೇಹಿತ್ ಬಿಗ್ ಬಾಸ್ ಮನೆಯಿಂದ ಹೊರ ಬಂದಾಗ ಕಣ್ಣೀರು ಇಟ್ಟಿದ್ದರು ನಮ್ರತಾ. ಈ ಮನೆಯಲ್ಲಿ ಸ್ನೇಹಿತ್ ನನ್ನು ತುಂಬಾ ಮಿಸ್ ಮಾಡ್ಕೋತಿದ್ದೀನಿ ಅಂತ ಹಲವಾರು ಬಾರಿ ಹೇಳಿದ್ದೂ ಇದೆ. ಇದ್ದಕ್ಕಿದ್ದಂತೆ ಈ ವೈರತ್ವ ಬೆಳೆಯೋಕೆ ಕಾರಣ, ಮೊನ್ನೆ ಸ್ನೇಹಿತ್ ಬಿಗ್ ಬಾಸ್ ಮನೆ ಒಳಗೆ ಹೋಗಿದ್ದರು. ಅಲ್ಲಿ ಅವರ ವಿನಯ್ ಅವರನ್ನು ಬೆಂಬಲಿಸಿದ್ದರು.

    ಈ ಬಾರಿ ಬಿಗ್ ಬಾಸ್ ಟೈಟಲ್ ಅನ್ನು ಯಾರು ಗೆಲ್ಲಬೇಕು ಎನ್ನುವ ವಿಚಾರವಾಗಿ ಸ್ನೇಹಿತ್ ಮಾತನಾಡಿದ್ದರು. ನಮ್ರತಾ ಬದಲು ವಿನಯ್ ಅವರು ಗೆಲ್ಲುಬೇಕು ಎಂದು ಹೇಳಿದ್ದರು. ಈ ವಿಚಾರ ನಮ್ರತಾ ಅವರ ಕೋಪಕ್ಕೆ ಕಾರಣವಾಗಿತ್ತು. ಅವತ್ತೆ ಅವರು ಸ್ನೇಹಿತ್ ಜೊತೆ ಜಗಳವನ್ನೂ ಮಾಡಿದ್ದರು.

     

    ನಾನು ನಿನಗೆ ಏನೂ ಅಲ್ಲವಾ? ಹಾಗಾದರೆ, ನಾನು ಬಿಗ್ ಬಾಸ್ ಗೆಲ್ಲೋದು ಬೇಡವಾ? ನಿನಗೆ ಇಷ್ಟ ಇಲ್ಲವಾ? ಎಂದು ಹಲವಾರು ಪ್ರಶ್ನೆಗಳನ್ನು ಸ್ನೇಹಿತ್ ಅವರಿಗೆ ಕೇಳಿದ್ದರು ನಮ್ರತಾ. ಇದೀಗ ಮಾತು ಬಿಡುವುದಾಗಿ ಹೇಳಿಕೊಂಡಿದ್ದಾರೆ.

  • ಕಾರ್ತಿಕ್‌ಗೆ ಹುಡುಗಿ ಇದ್ದಾಳೆ, ಗೊತ್ತಿದ್ರು ಬೀಳಲು ನಾನು ಬಕ್ರನಾ- ಸ್ನೇಹಿತ್‌ಗೆ ನಮ್ರತಾ ಪ್ರಶ್ನೆ

    ಕಾರ್ತಿಕ್‌ಗೆ ಹುಡುಗಿ ಇದ್ದಾಳೆ, ಗೊತ್ತಿದ್ರು ಬೀಳಲು ನಾನು ಬಕ್ರನಾ- ಸ್ನೇಹಿತ್‌ಗೆ ನಮ್ರತಾ ಪ್ರಶ್ನೆ

    ಬಿಗ್ ಬಾಸ್ ಮನೆಯಲ್ಲಿ (Bigg Boss House) ಸ್ನೇಹಿತ್ (Snehith) ಎಲಿಮಿನೇಷನ್ ನಂತರ ಕಾರ್ತಿಕ್ ಜೊತೆ ನಮ್ರತಾ ಒಡನಾಟ ಹೊಂದಿದ್ದರು. ಇದೀಗ ಬಿಗ್ ಮನೆಯ ಮಾಜಿ ಸ್ಪರ್ಧಿಗಳು ಮನೆಗೆ ಬಂದ ಬೆನ್ನಲ್ಲೇ ನಮ್ರತಾಗೆ ಆಗಿರೋ ಕೆಟ್ಟ ಟ್ರೋಲ್ ಬಗ್ಗೆ ತಿಳಿದಿದೆ. ಈ ಬಗ್ಗೆ ಸ್ನೇಹಿತ್ ಮುಂದೆ ನಮ್ರತಾ (Namratha Gowda) ಕಣ್ಣೀರು ಸುರಿಸಿದ್ದಾರೆ. ಕಾರ್ತಿಕ್‌ಗೆ ಹುಡುಗಿ ಇದ್ದಾಳೆ, ಗೊತ್ತಿದ್ರೂ ಬೀಳಲು ನಾನು ಬಕ್ರನಾ ಎಂದು ಕೇಳಿದ್ದಾರೆ.

    ಕಾರ್ತಿಕ್ (Karthik Mahesh) ಹಾಗೂ ನಮ್ರತಾ (Namratha) ತಮಾಷೆಗೆ ಫ್ಲರ್ಟ್ ಮಾಡುತ್ತಿರುವ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ (Troll) ಆಗಿರುವುದನ್ನ ನಮ್ರತಾಗೆ ಸ್ನೇಹಿತ್ ತಿಳಿಸಿದ್ದಾರೆ. ಇದರಿಂದ ಬೇಸರಗೊಂಡ ನಮ್ರತಾ ಕಣ್ಣೀರು ಸುರಿಸಿದ್ದಾರೆ. ನನಗೆ ಇಲ್ಲಿರೋಕೆ ಇಷ್ಟವಿಲ್ಲ. ನನ್ನ ಕ್ಯಾರೆಕ್ಟರ್‌ನ ನಾನು ರಿಸ್ಕ್ ಮಾಡಿಕೊಳ್ಳಲ್ಲ. ಪ್ಲೀಸ್ ನನ್ನ ಮನೆಗೆ ಕರ್ಕೊಂಡು ಹೋಗಿ ಎಂದು ಸ್ನೇಹಿತ್ ಮುಂದೆ ನಮ್ರತಾ ಕಣ್ಣೀರಿಟ್ಟಿದ್ದಾರೆ.

    ಬಿಗ್ ಬಾಸ್‌ಗೆ ಬಂದ ಕೂಡಲೆ ವಿನಯ್, ಸಂಗೀತಾ, ವರ್ತೂರು ಸಂತೋಷ್, ತುಕಾಲಿ ಸಂತು ಮುಂತಾದವರೊಂದಿಗೆಲ್ಲಾ ಸ್ನೇಹಿತ್ ಮಾತನಾಡಿದರು. ಆದರೆ, ಈ ಹಿಂದೆ ಇದ್ದಂತೆ ನಮ್ರತಾ ಜೊತೆಗೆ ಸ್ನೇಹಿತ್ ಆತ್ಮೀಯವಾಗಿ ನಡೆದುಕೊಳ್ಳಲಿಲ್ಲ. ಹೀಗಾಗಿ ನಮ್ರತಾ ಮಂಕಾಗಿದ್ದರು. ಇದನ್ನೇ ತನಿಷಾ ಪ್ರಶ್ನೆ ಮಾಡಿದರು. ಯಾಕೆ ನೀವು ಅವರೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ? ಪಾಪ ಅವರು ಕಾಯ್ತಿದ್ದಾರೆ. ಬೇಸರ ಮಾಡಿಕೊಂಡಿದ್ದಾರೆ ಎಂದು ತಿಳಿ ಹೇಳಿದ್ದರು. ಇದನ್ನೂ ಓದಿ:ಅಭಿಮಾನಿಗಳ ಸಾವಿನ ನೋವಲ್ಲೇ ಇದ್ದಾರೆ ಯಶ್: ಆಪ್ತರ ಮಾತು

    ಕೆಟ್ಟ ಟ್ರೋಲ್ ವಿಚಾರ ಅರಿತ ಮೇಲೆ ನನ್ನನ್ನ ಮನೆಗೆ ಕರ್ಕೊಂಡ್ ಹೋಗಿ. ಇಲ್ಲಿರೋದು ನನಗೆ ಇಷ್ಟ ಆಗ್ತಿಲ್ಲ. ಏನು ಆಗ್ತಾ ಇದೆ ಅಂತ ನನಗೆ ಗೊತ್ತಿಲ್ಲ. ನಾನು ಇಲ್ಲಿ ಯಾರಿಗೂ ಅಟ್ಯಾಚ್ಡ್ ಆಗಿಲ್ಲ. ಕಾರ್ತಿಕ್ ಜೊತೆ ನಾನು ನಿಮ್ಮಷ್ಟೂ ಅಟ್ಯಾಚ್ಡ್ ಆಗಿಲ್ಲ. ಕಾರ್ತಿಕ್ ನನ್ನ ಕೈಹಿಡಿದುಕೊಳ್ಳುತ್ತಾರೆ ಅಷ್ಟೇ. ನನಗೇನೂ ಅನ್‌ಕಮ್ಫರ್ಟಬಲ್ ಅನಿಸೋದಿಲ್ಲ. ಒಮ್ಮೊಮ್ಮೆ ತುಂಬಾ ಲೋನ್ಲಿ ಫೀಲ್ ಆಗುತ್ತದೆ. ಬಹುಶಃ ಫ್ಲರ್ಟ್ ಮಾಡಿರೋದನ್ನ ನೋಡಿ ಯಾರೋ ಏನೋ ಅಂದುಕೊಂಡಿರಬೇಕು. ಅದು ಪ್ರಾಂಕ್ ಅಷ್ಟೇ. 60 ದಿನಗಳಾದ್ಮೇಲೆ ಯಾರಿಗೋ ಬೀಳೋಕೆ ನಾನೆಂಥ ಫೂಲ್ ಅಲ್ವಾ? ಎಂದು ಹೇಳುತ್ತಾ ನಮ್ರತಾ ಕಣ್ಣೀರು ಸುರಿಸಿದರು.

    ಬಳಿಕ ವಿನಯ್, ಸ್ನೇಹಿತ್ ಬಳಿ ನಾನು ನಟಿ. ಸಾವಿರ ಜನ ಸಾವಿರ ತರಹ ಮಾತಾಡ್ತಾರೆ. ನನಗೆ ಇಲ್ಲಿರೋಕೆ ಇಷ್ಟವಿಲ್ಲ. ಕಾರ್ತಿಕ್ ಜಸ್ಟ್ ಫ್ರೆಂಡ್ ಅಷ್ಟೇ. ಅವನು ನನಗೆ ಅನ್‌ಕಮ್ಫರ್ಟಬಲ್ ಫೀಲ್ ಮಾಡಿಲ್ಲ. ನಾವು ಪ್ರಾಂಕ್ ಮಾಡಿದ್ವಿ ಅಷ್ಟೇ. ಕಾರ್ತಿಕ್‌ಗೆ ಹೊರಗಡೆ ಹುಡುಗಿ ಇದ್ದಾರೆ. ಆದರೂ ಅವರನ್ನ ಇಷ್ಟಪಡೋಕೆ ನಾನು ಅಂತಹ ಫೂಲಾ? ಎಂದ ನಮ್ರತಾಗೆ ಇಂತಹ ವಿಚಾರದಲ್ಲಿ ಪ್ರಾಂಕ್ ಮಾಡೋದು ಅಷ್ಟು ಸರಿಯಲ್ಲ ಎಂದು ಸ್ನೇಹಿತ್ ಕಿವಿಹಿಂಡಿದ್ದಾರೆ.

  • ಕಾರ್ತಿಕ್ ಜೊತೆ ಕ್ಲೋಸ್‌ ಆಗಿದ್ದಕ್ಕೆ ಸ್ನೇಹಿತ್ ಉರ್ಕೊಂಡಿದ್ದಾರಾ? ನೀತುಗೆ ನಮ್ರತಾ ಪ್ರಶ್ನೆ

    ಕಾರ್ತಿಕ್ ಜೊತೆ ಕ್ಲೋಸ್‌ ಆಗಿದ್ದಕ್ಕೆ ಸ್ನೇಹಿತ್ ಉರ್ಕೊಂಡಿದ್ದಾರಾ? ನೀತುಗೆ ನಮ್ರತಾ ಪ್ರಶ್ನೆ

    ಬಿಗ್‌ ಬಾಸ್ ಮನೆಯ (Bigg Boss Kannada 10) ಸದಸ್ಯರಿಗೆ ‘ಬಿಗ್‌ಬಾಸ್’ ಒಂದು ಸೂಪರ್ ಸರ್ಪ್ರೈಸ್ ನೀಡಿದ್ದಾರೆ. ಆ ಸರ್ಪ್ರೈಸ್ ಮನೆಮಂದಿಗೆ ಖುಷಿ ಕೊಟ್ಟಿದೆ.  ಆ ಸರ್ಪ್ರೈಸ್ ಹೇಗಿದೆ ಎಂಬುದು ಜಿಯೋ ಸಿನಿಮಾ ಇಂದಿನ ಪ್ರೋಮೋದಲ್ಲಿ ಝಲಕ್ ಜಾಹೀರಾಗಿದೆ.‌ ಕಾರ್ತಿಕ್ ಜೊತೆಗಿನ ಒಡನಾಟಕ್ಕೆ ಸ್ನೇಹಿತ್ ಉರ್ಕೊಂಡಿದ್ದಾರಾ? ನೀತುಗೆ ನಮ್ರತಾ ಪ್ರಶ್ನೆ ಕೇಳಿರೋದು ಹೈಲೆಟ್‌ ಆಗಿದೆ.

    ನಿಮಗಾಗಿ ಒಂದು ಸರ್ಪೈಸ್ ಕಾದಿದೆ. ಗಾರ್ಡನ್ ಏರಿಯಾಗೆ ಹೋಗಿ ಎಂದು ಬಿಗ್‌ಬಾಸ್ ಮನೆಯ ಸದಸ್ಯರಿಗೆ ಆದೇಶಿಸಿದ್ದಾರೆ. ಅಲ್ಲಿ ಒಂದು ಟೇಬಲ್ ಮೇಲೆ ಬಲೂನ್, ಕೇಕ್ ಜೊತೆಗೆ ಎರಡು ಬಾಕ್ಸ್‌ಗಳನ್ನು ಇರಿಸಲಾಗಿದೆ. ತುಕಾಲಿ ಸಂತೋಷ್ ಅವರು ಒಂದು ಬಾಕ್ಸ್ ಅನ್ನು ಎತ್ತುವಾಗ ಹೆದರಿ ಹಿಂದಕ್ಕೆ ಜಿಗಿದಿದ್ದಾರೆ. ಉಳಿದವರು ಭಯದಿಂದ ಕಿರುಚಿದ್ದಾರೆ. ಯಾಕೆಂದರೆ ಆ ಬಾಕ್ಸ್ ಒಳಗಿರುವುದು ಒಂದು ತಲೆ.

    ಇದೇನು ಬಿಗ್‌ಬಾಸ್ ಮನೆಯೊಳಗೆ ಕ್ರೈಂ ಸೀನ್ ಎಂದು ಕಣ್ಣುಜ್ಜಿಕೊಂಡು ನೋಡಿದರೆ ತಲೆ ಅಲುಗಾಡುತ್ತಿದೆ. ಕಣ್ಣುಗಳು ತೆರೆಯುತ್ತಿವೆ. ಮುಖದಲ್ಲಿ ನಗುವಿದೆ. ಅದು ಮತ್ಯಾರೂ ಅಲ್ಲ, ಬಿಗ್‌ಬಾಸ್ ಹಳೆಯ ಸ್ಪರ್ಧಿ ಇಶಾನಿ. ಟೇಬಲ್ ಕೆಳಗೆ ಅವಿತಿಟ್ಟುಕೊಂಡು ಬರೀ ತಲೆಯನ್ನಷ್ಟೇ ಟೇಬಲ್‌ನಿಂದ ಹೊರಗೆ ಹಾಕಿ ಸಖತ್ ಶಾಕ್ ಕೊಟ್ಟಿದ್ದಾರೆ.

    ಅವರ ಜೊತೆಗೆ ರಕ್ಷಕ್, ಸ್ನೇಹಿತ್ ಮತ್ತು ನೀತು, ಭಾಗ್ಯಶ್ರೀ, ಮೈಕಲ್, ಸಿರಿ ಕೂಡ ಬಿಗ್‌ಬಾಸ್ ಮನೆಯೊಳಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಎಲ್ಲ ಸ್ಪರ್ಧಿಗಳ ಜೊತೆಗೂ ಮಾತಾಡುತ್ತ ಅವರಿಗೆ ಕಿವಿಮಾತು ಹೇಳುತ್ತಿದ್ದಾರೆ. ಇದನ್ನೂ ಓದಿ:‘ಜೋಡಿಹಕ್ಕಿ’ ಹೀರೋ ತಾಂಡವ್ ಈಗ ‘ದೇವನಾಂಪ್ರಿಯ’- ಫಸ್ಟ್ ಲುಕ್ ರಿಲೀಸ್

    ಪ್ರತಾಪ್ ಬಳಿ ಮಾತನಾಡುವಾಗ ನೀತು ನಿನಗೆ ಸಪೋರ್ಟ್ ಅಂತ ನಿಂತಿದ್ದೇ ಸಂಗೀತಾ. ಅದೇ ಬ್ರೇಕ್ ಆಗಿಬಿಟ್ಟರೆ ಏನು ಕಥೆ? ಎಂದು ಪ್ರಶ್ನಿಸಿದ್ದಾರೆ. ನಮ್ರತಾ (Namratha) ನಾನು ಮನೆಯೊಳಗೆ ಕಾರ್ತಿಕ್ (Karthik) ಜೊತೆಗೆ ನಡೆದುಕೊಳ್ಳುತ್ತಿರುವುದನ್ನು ನೋಡಿ ಸ್ನೇಹಿತ್ (Snehith Gowda) ಉರ್ಕೊಂಡಿದ್ದಾರಾ? ಎಂದು ನೀತುಗೆ ಕೇಳುತ್ತಿದ್ದ ಹಾಗೆಯೇ ಸ್ನೇಹಿತ್, ಕಿಚನ್‌ನಲ್ಲಿ ಪ್ರತ್ಯಕ್ಷರಾಗಿ, ಹಲೋ ನಮ್ರತಾ ಎಂದು ನಮ್ರತಾಗೆ ಕೈಮುಗಿದಿದ್ದಾರೆ.

    ಒಟ್ಟಾರೆ ಹಳೆಯ ಸ್ಪರ್ಧಿಗಳ ಎಂಟ್ರಿ ಮನೆಯೊಳಗೆ ಸಖತ್ ವೈಬ್ರೇಷನ್ ಕ್ರಿಯೇಟ್ ಮಾಡಿದೆ. ಇದರಿಂದ ಯಾರಿಗೆ ಅನುಕೂಲ, ಯಾರಿಗೆ ಅನಾನುಕೂಲ ಎಂಬುದು ಈ ವಾರಾಂತ್ಯದ ಹೊತ್ತಿಗೆ ತಿಳಿಯಲಿದೆ.

  • ಕೆಟ್ಟದಾಗಿ ಟ್ರೋಲ್ ಮಾಡಿದ್ದಕ್ಕೆ ನಮ್ರತಾ ಪರ ಸ್ನೇಹಿತ್ ಮನವಿ

    ಕೆಟ್ಟದಾಗಿ ಟ್ರೋಲ್ ಮಾಡಿದ್ದಕ್ಕೆ ನಮ್ರತಾ ಪರ ಸ್ನೇಹಿತ್ ಮನವಿ

    ಬಿಗ್ ಬಾಸ್ (Bigg Boss Kannada 10) ಮನೆಯಲ್ಲಿ ಇದ್ದಾಗ ಸ್ನೇಹಿತ್ (Snehith Gowda) ಮತ್ತು ನಮ್ರತಾ (Namratha Gowda) ಆತ್ಮೀಯರಾಗಿದ್ದರು. ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆದಿತ್ತು. ಸಾಕಷ್ಟು ಬಾರಿ ನಮ್ರತಾಗೆ ಸ್ನೇಹಿತ್ ಗೌಡ ಪ್ರೇಮ ನಿವೇದನೆ ಮಾಡಿದ್ದರು. ಆದರೆ ಎಂದಿಗೂ ಸ್ನೇಹಿತ್ ಪ್ರಪೋಸಲ್‌ಗೆ ನಮ್ರತಾ ಒಪ್ಪಿಗೆ ನೀಡಿರಲಿಲ್ಲ. ಇದೀಗ ಕಾರ್ತಿಕ್ ಜೊತೆ ಒಡನಾಟ ಹೊಂದಿರೋ ನಮ್ರತಾ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದೆ. ಸ್ನೇಹಿತ್‌ಗೆ ನಮ್ರತಾ ಕೈ ಕೊಟ್ಟು ಕಾರ್ತಿಕ್ (Karthik Mahesh) ಜೊತೆ ಸ್ನೇಹ ಬೆಳೆಸಿದ್ದಾರೆ ಎಂದೇ ಸುದ್ದಿಯಾಗುತ್ತಿದೆ. ಸ್ನೇಹಿತ್ ಇದೀಗ ನಮ್ರತಾ ಪರವಾಗಿ ಮನವಿವೊಂದನ್ನ ಮಾಡಿದ್ದಾರೆ.

    ದೊಡ್ಮನೆಯಲ್ಲಿ ಲವ್ ಬರ್ಡ್ಸ್ ಆಗಿದ್ದ ಸ್ನೇಹಿತ್- ನಮ್ರತಾ ಜೋಡಿ ಅಭಿಮಾನಿಗಳ ಫೇವರೇಟ್ ಆಗಿದ್ದರು. ಸ್ನೇಹಿತ್ ಎಲಿಮಿನೇಷನ್ ಆದಾಗ ನಮ್ರತಾ ಬಿಕ್ಕಿ ಬಿಕ್ಕಿ ಅತ್ತಿದ್ದರು. ಸ್ನೇಹಿತ್‌ನ ಮಿಸ್ ಮಾಡಿಕೊಳ್ತಿದ್ದೀನಿ ಅಂತ ಅವರ ಕಪ್ ಮತ್ತು ಫೋಟೋವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಇಷ್ಟೇಲ್ಲಾ ಮಾಡಿರೋ ನಮ್ರತಾ, ಸ್ನೇಹಿತ್ ಲವ್ ಇದೆ ಅಂತಲೇ ಫ್ಯಾನ್ಸ್ ಭಾವಿಸಿದ್ದರು. ಈಗ ಕಾರ್ತಿಕ್ ಜೊತೆ ಹೊಸ ಲವ್ ಸ್ಟೋರಿ ಶುರು ಆಗಿರೋ ಕಾರಣ, ಸ್ನೇಹಿತ್‌ಗೆ ನಮ್ರತಾ ಕೈ ಕೊಟ್ಟಿದ್ದಾರೆ ಅಂತಲೇ ಟ್ರೋಲ್ ಆಗ್ತಿದ್ದಾರೆ. ಅದಕ್ಕಾಗಿ ಸ್ನೇಹಿತ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ಕ್ಲ್ಯಾರಿಟಿ ಕೊಟ್ಟಿದ್ದಾರೆ.

     

    View this post on Instagram

     

    A post shared by S Snehith (@snehithgowda)

    ನಮ್ರತಾ ನನಗೆ ಮೋಸ ಮಾಡಿದರು ಎಂಬ ಮಾತುಗಳು ಹೇಳುವುದನ್ನು ದಯವಿಟ್ಟು ನಿಲ್ಲಿಸಿ. ನಮ್ರತಾ ಎಂದಿಗೂ ನಿಮ್ಮ ಮೇಲೆ ನನಗೆ ಪ್ರೀತಿ ಎಂದು ನನಗೆ ಹೇಳಿರಲಿಲ್ಲ. ಅವರ ಮೇಲಿರೋ ನನ್ನ ಪ್ರೀತಿ ಒನ್ ಸೈಡೆಡ್ ಅಷ್ಟೆ. ನೀವೇನು ಈಗ ನಮ್ರತಾ ಬಗ್ಗೆ ಟ್ರೋಲ್, ಮೀಮ್‌ಗಳನ್ನು ಮಾಡುತ್ತಿದ್ದೀರೋ ಇದರಿಂದ ಅವರ ಕುಟುಂಬದವರಿಗೆ ಮಾತ್ರವಲ್ಲದೆ ನನಗೂ ಬೇಸರ ತರಿಸಿದೆ. ಈ ಮೀಮ್‌ಗಳನ್ನು, ಟ್ರೋಲ್‌ಗಳಿಂದ ಒಬ್ಬರ ವ್ಯಕ್ತಿತ್ವಕ್ಕೆ ಧಕ್ಕೆ ಆಗುತ್ತಿದೆ ಅದು ಆಗಬಾರದು ಎಂದು ಸ್ನೇಹಿತ್ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಆಶಿಕಾಗೆ ಮನೆ ಊಟ ಕಳುಹಿಸುತ್ತಿದ್ದ ನಾಗಾರ್ಜುನ- ನಟಿ ಭಾವುಕ

    ನನ್ನ- ನಮ್ರತಾ ನಡುವೆ ಏನೇ ನಡೆದಿದ್ದರೂ, ಆ ಮನೆಯಲ್ಲಿ ನಮ್ರತಾ ನನ್ನ ಮೊದಲ ಗೆಳತಿ. ನಮ್ರತಾ ನನಗೆ ಸದಾ ಬೆಂಬಲ, ಸಹಾಯ ಮಾಡಿದ್ದಾರೆ. ಹಸಿದಾಗ ಊಟ ಕೊಟ್ಟಿದ್ದಾರೆ, ಪ್ರೊಟೀನ್ ಕೊಟ್ಟಿದ್ದಾರೆ. ಅದೆಲ್ಲ ಏನೂ ಬದಲಾಗುವುದಿಲ್ಲ. ನನ್ನ, ವಿನಯ್- ನಮ್ರತಾ ಮಧ್ಯೆ ಇದ್ದಿದ್ದ ಗೆಳೆತನ ಅವರು ಮನೆಯಿಂದ ಹೊರಗೆ ಬಂದ ಬಳಿಕವೂ ಮುಂದುವರೆಯಲಿದೆ. ಆದರೆ ಈಗ ನಮ್ರತಾ ವ್ಯಕ್ತಿತ್ವದ ಬಗ್ಗೆ ಮಾಡುತ್ತಿರುವ ಟ್ರೋಲ್, ಮೀಮ್‌ಗಳನ್ನು ನಿಲ್ಲಿಸಿ, ಇದು ನನ್ನ ಕಡೆಯಿಂದ ಎಲ್ಲರಿಗೂ ಮನವಿ ಎಂದು ಸ್ನೇಹಿತ್ ಕೇಳಿಕೊಂಡಿದ್ದಾರೆ.

  • ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡ ಡ್ರೋನ್: ನಿಟ್ಟುಸಿರಿಟ್ಟ ಫ್ಯಾನ್

    ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡ ಡ್ರೋನ್: ನಿಟ್ಟುಸಿರಿಟ್ಟ ಫ್ಯಾನ್

    ಳೆದ ಎರಡು ದಿನಗಳ ಹಿಂದೆ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆ ಪಾಲಾಗಿದ್ದ ಡ್ರೋನ್ ಪ್ರತಾಪ್ ಮತ್ತೆ ಬಿಗ್ ಬಾಸ್ (Bigg Boss Kannada) ಮನೆಗೆ ವಾಪಸ್ಸಾಗಿದ್ದಾರೆ. ಆಸ್ಪತ್ರೆಯಿಂದ ಹೋದ ನಂತರ ಅವರು ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಪ್ರತಾಪ್  (Drone Pratap) ಅವರಿಗೆ ಏನಾಗಿದೆ? ಸರಿಯಾದ ಮಾಹಿತಿ ಕೊಡಿ, ಅವರನ್ನು ಬಿಗ್ ಬಾಸ್ ಮನೆಯಲ್ಲಿ ತೋರಿಸಿ ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಮಾಡಲಾಗಿತ್ತು. ಕೊನೆಗೂ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿರುವ ವಿಡಿಯೋವನ್ನು ವಾಹಿನಿ ರಿಲೀಸ್ ಮಾಡಿದೆ.

    ಡ್ರೋನ್ ಪ್ರತಾಪ್ ಆಸ್ಪತ್ರೆ ಸೇರಿದ್ದಾರೆ ಎನ್ನುವ ವಿಚಾರ ಸಾಕಷ್ಟು ಸಂಚಲವನ್ನುಂಟು ಮಾಡಿತ್ತು. ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದೆಲ್ಲ ಸುದ್ದಿಯಾಗಿತ್ತು. ಸಹಜವಾಗಿಯೇ ಅವರ ಕುಟುಂಬ ಮತ್ತು ಆಪ್ತರು ಆತಂಕಕ್ಕೆ ಒಳಗಾಗಿದ್ದಾರೆ. ಸುದ್ದಿ ವಾಹಿನಿಗಳಲ್ಲಿ ಈ ನ್ಯೂಸ್ ಬರ್ತಿದ್ದಂತೆ ಆಸ್ಪತ್ರೆಯತ್ತ ಪೊಲೀಸರು ಕೂಡ ಧಾವಿಸಿದ್ದರು. ಪೊಲೀಸರು ಆಸ್ಪತ್ರೆಗೆ ಹೋಗುವಷ್ಟರಲ್ಲಿ, ಡ್ರೋನ್ ಪ್ರತಾಪ್ ಅವರನ್ನು ಆಸ್ಪತ್ರೆಯಿಂದ ಕರೆದೊಯ್ಯಲಾಗಿತ್ತು. ಹಾಗಾಗಿ ಸಹಜವಾಗಿಯೇ ಅನುಮಾನ ವ್ಯಕ್ತವಾಗಿತ್ತು.

    ಡ್ರೋನ್ ಪ್ರತಾಪ್ ಆಸ್ಪತ್ರೆಯಲ್ಲಿ ಇಲ್ಲ ಎಂದು ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆಯೇ, ಪೊಲೀಸ್ ಜೀಪ್ ಬಿಗ್ ಬಾಸ್ ಮನೆಗೆ ನುಗ್ಗಿತ್ತು. ಡ್ರೋನ್ ಪ್ರತಾಪ್ ಅವರಿಗೆ ಏನಾಗಿದೆ ಎನ್ನುವ ಪ್ರಶ್ನೆ ಕೇಳಿತ್ತು. ವೈದ್ಯರಿಂದ ಮಾಹಿತಿಯನ್ನೂ ಪಡೆದಿತ್ತು. ಅವರಿಗೆ ಆಹಾರದಲ್ಲಿ ವ್ಯತ್ಯಾಸವಾದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಿಸಾಗಿದೆ ಎನ್ನುವ ಮಾಹಿತಿಯನ್ನೂ ಪಡೆದಿತ್ತು. ಆದರೆ, ಡ್ರೋನ್ ಅಭಿಮಾನಿಗಳು ಮಾತ್ರ ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಅವರನ್ನು ನೋಡಬೇಕು ಎಂದು ಆಗ್ರಹಿಸಿದ್ದರು.

    ಆಸ್ಪತ್ರೆಯಿಂದ ಡ್ರೋನ್ ಡಿಸ್ಚಾರ್ಜ್ ಆದ ಮೇಲೆ ಬಿಗ್ ಬಾಸ್ ಮನೆಯಲ್ಲೇ ಅವರಿಗೆ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ವಿಶ್ರಾಂತಿ ಪಡೆದುಕೊಂಡು ಡ್ರೋನ್, ಬಿಗ್ ಬಾಸ್ ಮನೆಯ ಪ್ರವೇಶ ಮಾಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಂತೆಯೇ ಡ್ರೋನ್ ನನ್ನು ತಬ್ಬಿಕೊಂಡು ನಮ್ರತಾ (Namrata) ಸ್ವಾಗತಿಸಿದ್ದಾರೆ. ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡೆ ಎಂದು ಸಂಗೀತಾ ಭಾವುಕರಾಗಿದ್ದಾರೆ. ಡ್ರೋನ್ ಆರೋಗ್ಯವಾಗಿರಲಿ ಎಂದು ದೊಡ್ಮನೆಯಲ್ಲಿ ಪೂಜೆ ಕೂಡ ಮಾಡಲಾಗಿದೆ. ಇಂದು ಕಿಚ್ಚನ ಪಂಚಾಯತಿಯಲ್ಲಿ ಡ್ರೋನ್ ಗೆ ಸುದೀಪ್ ಏನ್ ಹೇಳ್ತಾರೆ ಎಂದು ಕಾದು ನೋಡಬೇಕಿದೆ.