Tag: ನಮ್ಮ ಮನೆ ಎಕ್ಸ್ ಪೋ

  • 2ನೇ ದಿನಕ್ಕೆ ಪಬ್ಲಿಕ್ ಟಿವಿ ‘ನಮ್ಮ ಮನೆ ಎಕ್ಸ್ ಪೋ’- ಇಂದೇ ಕೊನೆಯ ದಿನ, ತಪ್ಪದೇ ಬನ್ನಿ

    2ನೇ ದಿನಕ್ಕೆ ಪಬ್ಲಿಕ್ ಟಿವಿ ‘ನಮ್ಮ ಮನೆ ಎಕ್ಸ್ ಪೋ’- ಇಂದೇ ಕೊನೆಯ ದಿನ, ತಪ್ಪದೇ ಬನ್ನಿ

    – ಮೊದಲ ದಿನ ಎಕ್ಸ್ ಪೋಗೆ ಭರ್ಜರಿ ರೆಸ್ಪಾನ್ಸ್

    ಬೆಂಗಳೂರು: ಪಬ್ಲಿಕ್ ಟಿವಿ ಆಯೋಜನೆಯ ನಮ್ಮ ಮನೆ ಎಕ್ಸ್ ಪೋಗೆ ಈಗಾಗಲೇ ಚಾಲನೆ ಸಿಕ್ಕಿದ್ದು, ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸಾವಿರಾರು ಮಂದಿ ಗ್ರಾಹಕರು ಕನಸಿನ ಮನೆ ನಿರ್ಮಾಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇಂದು ಎಕ್ಸ್ ಪೋಗೆ ಕಡೆಯ ದಿನ. ನಿಮ್ಮ ಕನಸಿನ ಮನೆ ನನಸು ಮಾಡಿಕೊಳ್ಳಲು ಮಿಸ್ ಮಾಡದೇ ಎಕ್ಸ್ ಪೋಗೆ ಬನ್ನಿ.

    ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುವ ಎಂಕೆಬಿ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ನ ನಮ್ಮ ಮನೆ ಎಕ್ಸ್ ಪೋಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಮೊದಲ ದಿನವಾದ ಶನಿವಾರ ಸಾವಿರಾರು ಮಂದಿ ಮಲ್ಲೇಶ್ವರಂನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿರುವ ನಮ್ಮ ಮನೆ ಎಕ್ಸ್ ಪೋಗೆ ಬಂದಿದ್ದರು. ಸೈಟ್, ಮನೆ ಕೊಳ್ಳುವ ಸದಾವಕಾಶವನ್ನು ಮಿಸ್ ಮಾಡಿಕೊಳ್ಳಲಿಲ್ಲ. ಕೆಲವರಂತೂ ಮನೆ ಮಂದಿ ಸಮೇತವಾಗಿ ಎಕ್ಸ್ ಪೋಗೆ ಬಂದು ನಮ್ಮ ಮನೆ ಕನಸನ್ನು ನನಸು ಮಾಡಿಕೊಳ್ಳಲು ನೋಡಿದರು.

    ಪ್ರಸಿದ್ಧ ರಿಯಲ್ ಎಸ್ಟೇಟ್ ಕಂಪನಿಗಳಿಂದ ಎಲ್ಲಿ ಸೈಟ್ ಕೊಂಡರೆ ಒಳ್ಳೆಯದು, ಮನೆ ಬೆಸ್ಟಾ ಅಥವಾ ಸೈಟ್ ಖರೀದಿ ಬೆಸ್ಟಾ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು. ಬ್ಯಾಂಕ್‍ ಗಳ ಸ್ಟಾಲ್‍ ಗಳ ಬಳಿಯೂ ಗೃಹ ಸಾಲ ಬಡ್ಡಿ ಎಷ್ಟು, ಸೈಟ್‍ ಗೆ ಸಾಲದ ಬಡ್ಡಿ ದರ ಏನು, ಏನೆಲ್ಲ ಸವಲತ್ತುಗಳಿವೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು.

    ನಿನ್ನೆ ಬೆಳಗ್ಗೆ ಜ್ಯೋತಿ ಬೆಳಗಿಸುವ ಮೂಲಕ ಎಕ್ಸ್ ಪೋಗೆ ನಟಿ ತಾನ್ಯ ಹೋಪ್ ಚಾಲನೆ ನೀಡಿದರು. ಉದ್ಘಾಟನೆ ವೇಳೆ ಪಬ್ಲಿಕ್ ಟಿವಿ ನಿರ್ದೇಶಕರಾದ ಜಿ.ಮನೋಹರ್ ನಾಯ್ಡು, ಎಂಕೆಬಿ ಡೆವಲಪರ್ಸ್ ನ ಸಿಇಓ ನಾಗರತ್ನ, ಪಬ್ಲಿಕ್ ಟಿವಿ ಸಿಇಓ ಅರುಣ್ ಕುಮಾರ್ ಮತ್ತು ಸಿಓಓ ಸಿಕೆ ಹರೀಶ್ ಉಪಸ್ಥಿತರಿದ್ದರು. ಬಳಿಕ ನಟಿ ತಾನ್ಯ ಹೋಪ್ ಮಾತನಾಡಿ, ಮನೆ ಕನಸು ನನಸಾಗಿಸಿಕೊಳ್ಳಲು ಪಬ್ಲಿಕ್ ಟಿವಿ ಒಂದು ಉತ್ತಮ ಅವಕಾಶ ಕಲ್ಪಿಸಿದೆ. ಎಲ್ಲರೂ ಭಾಗವಹಿಸಿ ಎಂದು ಶುಭ ಹಾರೈಸಿದರು.

    ನಮ್ಮ ಮನೆ ಎಕ್ಸ್ ಪೋಗೆ ಇಂದೇ ಕೊನೆಯ ದಿನವಾಗಿದೆ. ನಿಮ್ಮ ಕನಸು ನನಸು ಮಾಡಲು 40ಕ್ಕೂ ಹೆಚ್ಚು ಡೆವಲಪರ್ಸ್ ಮತ್ತು ಪ್ರಮೋಟರ್ಸ್ ಇದ್ದಾರೆ. ಹೀಗಾಗಿ ವೀಕೆಂಡ್‍ ನಲ್ಲಿ ಮನೆಯಲ್ಲಿ ಕುಳಿತುಕೊಳ್ಳದೇ ಮಲ್ಲೇಶ್ವರಂ ಶಾಲಾ ಮೈದಾನದ ಕಡೆ ಬನ್ನಿ. ನಮ್ಮ ಮನೆ ಎಕ್ಸ್ ಪೋದಲ್ಲಿ ಪಾಲ್ಗೊಂಡು, ನಮ್ಮ ಮನೆ ಕನಸನ್ನು ನನಸು ಮಾಡಿಕೊಳ್ಳಿ. ಪ್ರವೇಶ ಉಚಿತವಿದೆ. ಜೊತೆಗೆ ಎಂಕೆಬಿ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ವತಿಯಿಂದ ಪ್ರತಿ ಅರ್ಧಗಂಟೆಗೊಮ್ಮೆ ಲಕ್ಕಿ ಡಿಪ್ ಮೂಲಕ ಗ್ರಾಹಕರನ್ನು ಆಯ್ಕೆ ಮಾಡಿ ಬೆಳ್ಳಿ ನಾಣ್ಯ ವಿತರಣೆ ಮಾಡಲಾಗುತ್ತಿದೆ.

    ಬೆಳಗ್ಗೆ 10 ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ನಮ್ಮ ಮನೆ ಎಕ್ಸ್ ಪೋ ನಡೆಯಲಿದೆ. ಮತ್ತೆ ಇನ್ಯಾಕೆ ತಡ.. ಬನ್ನಿ ನಮ್ಮ ಮನೆ ಎಕ್ಸ್ ಪೋದಲ್ಲಿ ಪಾಲ್ಗೊಳ್ಳಿ. ನಿಮ್ಮ ಕನಸು ನನಸು ಮಾಡಿಕೊಳ್ಳಿ.

  • ಮತ್ತೆ ಬಂದಿದೆ ‘ನಮ್ಮ ಮನೆ’ ಎಕ್ಸ್ ಪೋ-ಒಂದೇ ಸೂರಿನಡಿ ವಿಲ್ಲಾ, ಮನೆಗಳ ಮಾಹಿತಿ

    ಮತ್ತೆ ಬಂದಿದೆ ‘ನಮ್ಮ ಮನೆ’ ಎಕ್ಸ್ ಪೋ-ಒಂದೇ ಸೂರಿನಡಿ ವಿಲ್ಲಾ, ಮನೆಗಳ ಮಾಹಿತಿ

    -‘ನಮ್ಮ ಮನೆ’ ಹಬ್ಬಕ್ಕೆ ಪ್ರವೇಶ ಉಚಿತ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದು ಸೈಟ್ ತಗೆದುಕೊಳ್ಳಬೇಕು. ಒಂದು ಒಳ್ಳೆಯ ಮನೆ ಕಟ್ಟಿಸಬೇಕು ಅನ್ನೋದು ಎಲ್ಲರ ಕನಸು. ಈಗ ನಿಮ್ಮ ಕನಸನ್ನ ನನಸು ಮಾಡೋಕೆ ಪಬ್ಲಿಕ್ ಟಿವಿ ವೇದಿಕೆ ಕಲ್ಪಿಸಿದೆ. ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುವ ಎಂಕೆಬಿ ಡೆವಲಪರ್ಸ್ ನಮ್ಮ ಮನೆ ಎಕ್ಸ್ ಪೋ ಮತ್ತೆ ಬಂದಿದೆ.

    ಮನೆ ಕೊಳ್ಳುವವರಿಗೆ, ಸೈಟ್ ಖರೀದಿ ಮಾಡೋರಿಗೆ ಇದು ಸುವರ್ಣಾವಕಾಶ. ಕಾರಣ ಎಲ್ಲವೂ ಒಂದೇ ಸೂರಿನಡಿ ಸಿಗೋ ನಮ್ಮ ಮನೆ ಎಕ್ಸ್ ಪೋ ಮತ್ತೆ ಬಂದಿದೆ. ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರುವ ಎಂಕೆಬಿ ಡೆವಲಪರ್ಸ್ ‘ನಮ್ಮ ಮನೆ’ ಎಕ್ಸ್ ಪೋ ಮೊದಲ ಆವೃತ್ತಿ ಸಾವಿರಾರು ಮಂದಿಗೆ ಸೂರು ಕಲ್ಪಿಸಿತ್ತು. ಈಗ ನಮ್ಮ ಮನೆ ಎಕ್ಸ್ ಪೋ ಮತ್ತೆ ಬಂದಿದೆ. ಇಂದು ಮತ್ತು ನಾಳೆ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ ಮುಂಭಾಗದ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಮ್ಮ ಮನೆ ಎಕ್ಸ್ ಪೋ ಕಾರ್ಯಕ್ರಮ ನಡೆಯಲಿದೆ.

    ಎರಡನೇ ಆವೃತ್ತಿಯ ನಮ್ಮ ಮನೆ ಎಕ್ಸ್ ಪೋಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಗಂತ ಎಕ್ಸ್ ಪೋಗೆ ಹೋಗಲು ಎಂಟ್ರಿ ಫೀಸ್ ಕೊಡಬೇಕು ಅನ್ನೋ ಟೆನ್ಶನ್ ಬೇಡ. ಇಂದಿನಿಂದ ಎರಡು ದಿನಗಳ ಕಾಲ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೂ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

    ನಮ್ಮ ಮನೆ ಎಕ್ಸ್ ಪೋ ವಿಶೇಷತೆ
    * ಒಂದೇ ಸೂರಿನಡಿ 40ಕ್ಕೂ ಹೆಚ್ಚು ಪ್ರಸಿದ್ಧ ಡೆವಲಪರ್ಸ್, ಬಿಲ್ಡರ್ಸ್
    * ಕೈಗೆಟುಕುವ ದರದಲ್ಲಿ ಸೈಟ್, ಫ್ಲ್ಯಾಟ್, ಮನೆ, ವಿಲ್ಲಾ ಪ್ರದರ್ಶನ
    * ಬೆಂಗಳೂರು ಮಾತ್ರವಲ್ಲ ರಾಜ್ಯದ ಇತರೆಡೆಯ ‘ನಮ್ಮ ಮನೆ’ ಮಾಹಿತಿ
    * ಬಿಡಿಎ, ಬಿಎಂಆರ್‍ಡಿಎ ಅನುಮೋದಿಸಲ್ಪಟ್ಟ ಫ್ಲ್ಯಾಟ್ ಬಗ್ಗೆ ಮಾಹಿತಿ
    * ಎಕ್ಸ್ ಪೋಗೆ ಬಂದವರಿಗೆ ಸೈಟ್, ಫ್ಲ್ಯಾಟ್ ವೀಕ್ಷಣೆಗೆ ಉಚಿತ ಅವಕಾಶ
    * ಸ್ಥಳದಲ್ಲೇ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ
    * ಹೊಸ ಯೋಜನೆಗಳಿಗೆ ದಸರಾ ಹಬ್ಬದ ವಿಶೇಷ ಕೊಡುಗೆ
    * ನೋಂದಾಯಿಸಲ್ಪಟ್ಟ ಗ್ರಾಹಕರಿಗೆ ಪ್ರತಿ ಅರ್ಧ ಗಂಟೆಗೆ ಲಕ್ಕಿ ಡಿಪ್
    * ಲಕ್ಕಿ ಡಿಪ್‍ನಲ್ಲಿ ಆಯ್ಕೆಯಾದವರಿಗೆ ಎಂಕೆಬಿ ಡೆವಲ್ಲಪರ್ಸ್‍ನಿಂದ ಬೆಳ್ಳಿ ನಾಣ್ಯ ಗಿಫ್ಟ್

    ಒಟ್ಟಿನಲ್ಲಿ ಮನೆ ಕೊಳ್ಳುವವರಿಗೆ ಇದು ಸುವರ್ಣಾವಕಾಶ. ಎಲ್ಲವೂ ಒಂದೇ ಕಡೆ ಮಾಹಿತಿ ಸಿಗಲಿದ್ದು ಸಾಲಕ್ಕಾಗಿ ಬೇರೆಡೆ ಅಲೆದಾಡಬೇಕೆನ್ನುವ ಸಮಸ್ಯೆ ಬೇಡ. ಯಾಕಂದ್ರೆ ಸಾಲ ಸೌಲಭ್ಯನೂ ಇಲ್ಲೇ ಸಿಗಲಿದೆ. ಅಲ್ಲದೇ ಎಕ್ಸ್ ಪೋದಲ್ಲಿ ನೋಂದಾಯಿಸಲ್ಪಟ್ಟ ಗ್ರಾಹಕರು ಗಿಫ್ಟ್ ಕೂಡ ತಮ್ಮದಾಗಿಸಿಕೊಳ್ಳಬಹುದು. ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರುವ ಎಂಕೆಬಿ ಡೆವಲಪರ್ಸ್ ‘ನಮ್ಮ ಮನೆ ಎಕ್ಸ್ ಪೋಗೆ ಬನ್ನಿ.

    ನಮ್ಮ ಎಕ್ಸ್ ಪೋ ನಡೆಯುವ ವಿಳಾಸ:
    ಮಲ್ಲೇಶ್ವರಂ ಸರ್ಕಾರಿ ಶಾಲೆಯ ಆಟದ ಮೈದಾನ,
    ಕೆಸಿ ಜನರಲ್ ಆಸ್ಪತ್ರೆ ಮುಂಭಾಗ,
    ಬೆಂಗಳೂರು.