Tag: ನಮ್ಮ ನೀರು ನಮ್ಮ ಹಕ್ಕು

  • ಸರ್ಕಾರಕ್ಕೆ ನಮ್ಮನ್ನು ಬಂಧಿಸುವ ಶಕ್ತಿ ಇಲ್ಲ: ಡಿ.ಕೆ. ಸುರೇಶ್

    ಸರ್ಕಾರಕ್ಕೆ ನಮ್ಮನ್ನು ಬಂಧಿಸುವ ಶಕ್ತಿ ಇಲ್ಲ: ಡಿ.ಕೆ. ಸುರೇಶ್

    ರಾಮನಗರ: ನಮ್ಮ ಪಾದಯಾತ್ರೆ ಕಟ್ಟಿ ಹಾಕುವ ಶಕ್ತಿ ಸರ್ಕಾರಕ್ಕೆ ಇಲ್ಲ. ಜನರ ಆರೋಗ್ಯ ದೃಷ್ಟಿ, ಬೆಂಗಳೂರಿನಲ್ಲಿ ಕೇಸ್ ಹೆಚ್ಚಳವಾಗುತ್ತಿರುವ ಕಾರಣ ಪಾದಯಾತ್ರೆ ರದ್ದು ಮಾಡಿದ್ದೇವೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.

    ರಾಮನಗರದಲ್ಲಿ ಪಬ್ಲಿಕ್ ಟಿವಿ ಪ್ರತಿನಿಧಿ ಜೊತೆ ಮಾತನಾಡಿದ ಅವರು, ಕೋವಿಡ್ ಹೆಚ್ಚಳವಾಗಿದ್ದನ್ನು ನೋಡಿ ನಮ್ಮ ಮೇಲೆ ಕೇಸ್ ಹಾಕಲು ಸರ್ಕಾರ ಪ್ಲ್ಯಾನ್ ಮಾಡಿತ್ತು. ಸರ್ಕಾರದ ವೈಫಲ್ಯದಿಂದ ಕೋವಿಡ್ ಹೆಚ್ಚಾಗಿದೆ. ಇದನ್ನು ಪಾದಯಾತ್ರೆ ಮೇಲೆ ಹಾಕುವ ಯತ್ನ ನಡೆದಿದೆ. ಈ ಕಾರಣ ಪಾದಯಾತ್ರೆ ರದ್ದು ಮಾಡುತ್ತಿದ್ದೇವೆ. ಇದು ಕೊನೆಯಲ್ಲ, ಆರಂಭ ಎಂದರು. ಇದನ್ನೂ ಓದಿ:  5 ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಸಿದ್ದು ಪಕ್ಕ ಪ್ರತ್ಯಕ್ಷ

    ಸರ್ಕಾರ ನಮ್ಮನ್ನು ಬಂಧಿಸುತ್ತದೆ ಎಂದು ಹೆದರಿ ಪಾದಯಾತ್ರೆ ರದ್ದು ಮಾಡುತ್ತಿಲ್ಲ. ಸರ್ಕಾರಕ್ಕೆ ಆ ಶಕ್ತಿಯೂ ಇಲ್ಲ ಎಂದು ರಾಜ್ಯ ಸರ್ಕಾರಕ್ಕೆ ಡಿ.ಕೆ.ಸುರೇಶ್ ಸವಾಲೆಸೆದರು. ಇದನ್ನೂ ಓದಿ: ನೋಟಿಸ್‍ಗೆ ಹೆದರಲ್ಲ, ಜನರ ಹಿತದೃಷ್ಟಿಯಿಂದ ಪಾದಯಾತ್ರೆ ರದ್ದು: ಸಿದ್ದರಾಮಯ್ಯ

  • ಪಾದಯಾತ್ರೆ ಕೈ ಬಿಡುವಂತೆ ಸಿದ್ದರಾಮಯ್ಯ, ಡಿಕೆಶಿಗೆ ಸಿಎಂ ಬೊಮ್ಮಾಯಿ ಪತ್ರ

    ಪಾದಯಾತ್ರೆ ಕೈ ಬಿಡುವಂತೆ ಸಿದ್ದರಾಮಯ್ಯ, ಡಿಕೆಶಿಗೆ ಸಿಎಂ ಬೊಮ್ಮಾಯಿ ಪತ್ರ

    ಬೆಂಗಳೂರು: ಮೇಕೆದಾಟು ಪಾದಯಾತ್ರೆ ಕೈಬಿಡುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದಾರೆ. ಮೇಕೆದಾಟು ಯೋಜನೆಗೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸಿದ್ಧನಿದ್ದೇನೆ ಎಂದು ಸಿಎಂ ಪತ್ರದಲ್ಲಿ ಭರವಸೆ ನೀಡಿದ್ದಾರೆ.

    ಪಾದಯಾತ್ರೆಯನ್ನು ಮುಂದುವರೆಸುವುದನ್ನು ಕೈಬಿಟ್ಟು ನಾವೆಲ್ಲ ಈಗ ಕೊರೊನಾವನ್ನು ಎದುರಿಸಿ ಮುಂಬರುವ ದಿನಗಳಲ್ಲಿ ಒಂದಾಗಿ ಮೇಕೆದಾಟು ಯೋಜನೆ ಅನುಷ್ಠಾನದ ಕುರಿತು ಕ್ರಮ ಕೈಗೊಳ್ಳೋಣ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅನಿವಾರ್ಯತೆ ಬಂದ್ರೆ ಮೇಕೆದಾಟು ಪಾದಯಾತ್ರೆ ನಿಲ್ಲಿಸಿ: ಕೈ ಹೈಕಮಾಂಡ್‌ ಸೂಚನೆ

    ಬೊಮ್ಮಾಯಿ ಬರೆದ ಪತ್ರದಲ್ಲೇನಿದೆ?
    ಸಿದ್ದರಾಮಯ್ಯನವರು, ವಿರೋಧಪಕ್ಷದ ನಾಯಕರು ಹಾಗೂ ಡಿ.ಕೆ.ಶಿವಕುಮಾರ್, ಕೆ.ಪಿ.ಸಿ.ಸಿ ಅಧ್ಯಕ್ಷರು ಇವರಿಗೆ,

    ನಾನು ಮೇಕೆದಾಟು ಯೋಜನೆ ಬಗ್ಗೆ ನಿಮ್ಮೆಲ್ಲರ ವಿಶ್ವಾಸದೊಂದಿಗೆ ಅನುಷ್ಠಾನಕ್ಕಾಗಿ ಬೇಕಾಗಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧನಿದ್ದೇನೆ.

    ಕೊರೊನಾ ಮಹಾಮಾರಿಯ 3ನೇ ಅಲೆ ತೀವ್ರವಾಗಿ ಅಪ್ಪಳಿಸಿದ ಹಿನ್ನೆಲೆಯಲ್ಲಿ ಜನಜೀವನ ವಿಶೇಷವಾಗಿ ಮಕ್ಕಳ ಮೇಲೆ ದುಷ್ಪರಿಣಾಮ ಬೀರಿದೆ. ಈ ಸಂದರ್ಭದಲ್ಲಿ ಹೆಚ್ಚು ಜನರನ್ನು ಸೇರಿಸಿ ಪಾದಯಾತ್ರೆ ಮುಂತಾದವುಗಳನ್ನು ಮಾಡುವುದು ಸಾರ್ವಜನಿಕ ಆರೋಗ್ಯ ದೃಷ್ಠಿಯಿಂದ ಸರಿಯಿರುವುದಿಲ್ಲ. ಈಗಾಗಲೇ ಮಾನ್ಯ ಉಚ್ಛನ್ಯಾಯಾಲಯ ಕೂಡ ಇದರ ಬಗ್ಗೆ ತೀವ್ರವಾದಂತಹ ಅಭಿಪ್ರಾಯ ನೀಡಿದೆ ಮತ್ತು ಇದು ಜನಾಭಿಪ್ರಾಯ ಕೂಡ ಆಗಿದೆ. ಇದನ್ನೂ ಓದಿ: ನಿಮ್ದು ದುರ್ಯೋಧನನ ರೀತಿ ಕೆಟ್ಟ ಹಠ: ಸಿದ್ದು, ಡಿಕೆಶಿಗೆ ಅಶೋಕ್ ಗುದ್ದು

    ಹೀಗಾಗಿ ಪಾದಯಾತ್ರೆಯನ್ನು ಮುಂದುವರೆಸುವುದನ್ನು ಕೈಬಿಟ್ಟು ನಾವೆಲ್ಲ ಈಗ ಕೊರೊನಾವನ್ನು ಎದುರಿಸಿ ಮುಂಬರುವ ದಿನಗಳಲ್ಲಿ ಒಂದಾಗಿ ಮೇಕೆದಾಟು ಯೋಜನೆ ಅನುಷ್ಠಾನದ ಕುರಿತು ಕ್ರಮ ಕೈಗೊಳ್ಳೋಣ ಎಂಬ ಮನವಿಯನ್ನು ತಮ್ಮಲ್ಲಿ ಮಾಡುತ್ತೇನೆ.

    – ಬಸವರಾಜ ಬೊಮ್ಮಾಯಿ

  • ಅನಿವಾರ್ಯತೆ ಬಂದ್ರೆ ಮೇಕೆದಾಟು ಪಾದಯಾತ್ರೆ ನಿಲ್ಲಿಸಿ: ಕೈ ಹೈಕಮಾಂಡ್‌ ಸೂಚನೆ

    ಅನಿವಾರ್ಯತೆ ಬಂದ್ರೆ ಮೇಕೆದಾಟು ಪಾದಯಾತ್ರೆ ನಿಲ್ಲಿಸಿ: ಕೈ ಹೈಕಮಾಂಡ್‌ ಸೂಚನೆ

    ಬೆಂಗಳೂರು/ರಾಮನಗರ: ಕೊನೆಗೂ ಕಾಂಗ್ರೆಸ್‌ ಹೈಕಮಾಂಡ್‌ ಎಚ್ಚೆತ್ತಿದೆ. ಮೇಕೆದಾಟು ಪಾದಯಾತ್ರೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗುವುದು ಬೇಡ, ಅನಿವಾರ್ಯತೆ ಬಂದ್ರೆ ಪಾದಯಾತ್ರೆ ನಿಲ್ಲಿಸಿ ಎಂದು ರಾಜ್ಯ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ.

    ಇಂದು ಬೆಳಿಗ್ಗೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರ ಜೊತೆಗೂ ಕರೆ ಮಾಡಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಮೇಕೆದಾಟು ಪಾದಯಾತ್ರೆಯಿಂದ ರಾಷ್ಟ್ರ ಮಟ್ಟದಲ್ಲಿ ಡ್ಯಾಮೇಜ್ ಆಗಬಹುದು. ಪಾದಯಾತ್ರೆ ಬಗ್ಗೆ ನಾವು ಇಲ್ಲಿ ಉತ್ತರಿಸಬೇಕಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆಗೆ ಕೊರೊನಾ ಪಾಸಿಟಿವ್

    ಕೊರೊನಾ ಸಂದರ್ಭದಲ್ಲಿ ಇಂತಹ ಯಾತ್ರೆ ಸೂಕ್ತವೂ ಅಲ್ಲ. ಪರಿಸ್ಥಿತಿ ನೋಡಿಕೊಂಡು ಪಾದಯಾತ್ರೆ ಮುಂದುವರಿಸಬೇಕಾ ಬೇಡವಾ ಎಂಬ ತೀರ್ಮಾನ ತೆಗೆದುಕೊಳ್ಳಲು ಸೂಚನೆ ನೀಡಿದೆ.

    ನಮ್ಮ ನೀರು, ನಮ್ಮ ಹಕ್ಕು ಎಂಬ ಘೋಷಣೆಯಡಿ ಆರಂಭವಾಗಿರುವ ಕಾಂಗ್ರೆಸ್‌ ಪಾದಯಾತ್ರೆ ನಿನ್ನೆ ರಾತ್ರಿ ರಾಮನಗರ ತಲುಪಿತ್ತು. ಹೈಕೋರ್ಟ್‌ ಪಾದಯಾತ್ರೆ ವಿಚಾರದಲ್ಲಿ ಗರಂ ಆಗಿದ್ದ ಹಿನ್ನೆಲೆಯಲ್ಲಿ ನಿನ್ನೆಯೇ ರಾಜ್ಯ ಸರ್ಕಾರ ಪಾದಯಾತ್ರೆಗೆ ಬ್ರೇಕ್‌ ಹಾಕಿ ಆದೇಶ ಹೊರಡಿಸಿತ್ತು. ಆದರೂ ನಿನ್ನೆ ಕಾಂಗ್ರೆಸ್‌ ನಾಯಕರು ಪಾದಯಾತ್ರೆ ಮುಂದುವರಿಯಲಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಪಾದಯಾತ್ರೆ ತಡೆಯಲು ಯಾರಿಗೆ ಕಾಯುತ್ತಿದ್ದೀರಿ – ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ