Tag: ನಮೋ ಭಾರತ್

  • ಕಲಬುರಗಿ ಜಿಲ್ಲಾಡಳಿತಕ್ಕೆ ಭಾರೀ ಮುಖಭಂಗ – ಸೂಲಿಬೆಲೆಯ ಚಿತ್ತಾಪುರ ಕಾರ್ಯಕ್ರಮಕ್ಕೆ ಅನುಮತಿ

    ಕಲಬುರಗಿ ಜಿಲ್ಲಾಡಳಿತಕ್ಕೆ ಭಾರೀ ಮುಖಭಂಗ – ಸೂಲಿಬೆಲೆಯ ಚಿತ್ತಾಪುರ ಕಾರ್ಯಕ್ರಮಕ್ಕೆ ಅನುಮತಿ

    ಕಲಬುರಗಿ: ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರ ನಮೋ ಭಾರತ್‌ (Namo Bharat) ಕಾರ್ಯಕ್ರಮ ನಿರ್ಬಂಧ ಹೇರಿದ್ದ ಕಲಬುರಗಿ ಜಿಲ್ಲಾಡಳಿತಕ್ಕೆ ಭಾರೀ ಮುಖಭಂಗವಾಗಿದೆ. ಚಕ್ರವರ್ತಿ ಸೂಲಿಬೆಲೆ ಅವರ ಪ್ರವೇಶಕ್ಕೆ  ಜಿಲ್ಲಾಡಳಿತ ಹೇರಿದ್ದ ನಿರ್ಬಂಧವನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠ (High Court of Karnataka, Kalaburagi Bench) ತೆರವುಗೊಳಿಸಿದೆ.

    ಗುರುವಾರ ಸಂಜೆ 6 ಗಂಟೆಗೆ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಪ್ರತಿನಿಧಿಸುವ ಚಿತ್ತಾಪುರ (Chittapur) ಪಟ್ಟಣದ ಬಾಪುರಾವ್ ಪಾಟೀಲ್ ಕಲ್ಯಾಣ ಮಂಟಪದಲ್ಲಿ ನಮೋ ಭಾರತ್‌ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿಯನ್ನು ರಾತ್ರೋರಾತ್ರಿ ಜಿಲ್ಲಾಡಳಿತ ರದ್ದು ಮಾಡಿ ಸೂಲಿಬೆಲೆ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು.  ಇದನ್ನೂ ಓದಿ: ಮೋದಿ ಸಾಧನೆ ಬಗ್ಗೆ ಮಾತಾಡೋದನ್ನ ಸಹಿಸೋಕಾಗದೆ ಕಾರ್ಯಕ್ರಮ ಕ್ಯಾನ್ಸಲ್: ಸೂಲಿಬೆಲೆ ಕಿಡಿ

    ಸೂಲಿಬೆಲೆ ಜಿಲ್ಲೆ ಪ್ರವೇಶಿಸಿದರೆ ಶಾಂತಿ ಕದಡುತ್ತಾರೆ ಹಾಗೂ ಕಾನೂನು ವ್ಯವಸ್ಥೆ ಹಾಳಾಗಬಹುದು ಎಂಬ ನಿಟ್ಟಿನಲ್ಲಿ ಕಲಬುರಗಿ ಸಹಾಯಕ ಆಯುಕ್ತರು ಫೆ.‌29 ರಿಂದ ಮಾರ್ಚ್‌ 4ರವರೆಗೆ ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರು.  ಇದನ್ನೂ ಓದಿ: 200ಕ್ಕೂ ಅಧಿಕ ಪೊಲೀಸರಿಂದ ಭದ್ರತೆ – ಅಲ್ದೂರಿನಲ್ಲಿ ಸೂಲಿಬೆಲೆಯ ನಮೋ ಭಾರತ್ ಕಾರ್ಯಕ್ರಮ ಯಶಸ್ವಿ

     

    ಜಿಲ್ಲಾಡಳಿತದ ಆದೇಶವನ್ನ ಪ್ರಶ್ನಿಸಿ ನಮೋ ಬ್ರಿಗೇಡ್ ಮತ್ತು ಬಿಜೆಪಿ ಹೈಕೋರ್ಟ್ ಮೊರೆ ಹೋಗಿತ್ತು ಅರ್ಜಿಯನ್ನು ಮಾನ್ಯ ಮಾಡಿದ ನ್ಯಾ. ಶ್ರೀಶಾನಂದ ಅವರಿದ್ದ ಪೀಠ, ಈ ಹಿಂದೆ ಕಾರ್ಯಕ್ರಮ ನಡೆಸಲು ಪೊಲೀಸರು ನೀಡಿದ್ದ ಅನುಮತಿಯನ್ನು ನೀಡಬೇಕು. ಪೊಲೀಸರು ನೀಡಿದ್ದ ನಿಯಮಾವಳಿಗೆ ಅನುಗುಣವಾಗಿ ಕಾರ್ಯಕ್ರಮ ಆಯೋಜಿಸಬೇಕು. ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ ಎಂದು ಹೇಳಿ ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧವನ್ನು ತೆರವು ಮಾಡಿತು.

    ಕೋರ್ಟ್‌ ತೀರ್ಪು ಬಂದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಸೂಲಿಬೆಲೆ, ಅಂಬೇಡ್ಕರ್‌ ನೀಡಿದ ಸಂವಿಧಾನದಿಂದ ಧೈರ್ಯವಾಗಿ ಪ್ರಶ್ನೆ ಮಾಡಿ ನಾವು ಕಾರ್ಯಕ್ರಮಕ್ಕೆ ಅನುಮತಿ ಪಡೆದಿದ್ದೇವೆ. ದೇಶ ಭಕ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ತಾಪುರಕ್ಕೆ ಬರಬೇಕು ಎಂದು ಅವರು ಮನವಿ ಮಾಡಿದರು.

     

  • ಮೋದಿ ಸಾಧನೆ ಬಗ್ಗೆ ಮಾತಾಡೋದನ್ನ ಸಹಿಸೋಕಾಗದೆ ಕಾರ್ಯಕ್ರಮ ಕ್ಯಾನ್ಸಲ್: ಸೂಲಿಬೆಲೆ ಕಿಡಿ

    ಮೋದಿ ಸಾಧನೆ ಬಗ್ಗೆ ಮಾತಾಡೋದನ್ನ ಸಹಿಸೋಕಾಗದೆ ಕಾರ್ಯಕ್ರಮ ಕ್ಯಾನ್ಸಲ್: ಸೂಲಿಬೆಲೆ ಕಿಡಿ

    ಬೀದರ್: ನಮೋ ಭಾರತ್ ಕಾರ್ಯಕ್ರಮವನ್ನು ಅನೇಕ ಕಡೆ ತಡೆಯುವಂತಹ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಪ್ರಿಯಾಂಕ್ ಖರ್ಗೆ (Priyank Kharge) ಕ್ಷೇತ್ರ ಚಿತ್ತಾಪುರದಲ್ಲಿ ಕಾರ್ಯಕ್ರಮ ತಡೆಯುವ ಕೆಲಸ ಆಗಿದ್ದು, ಅವರ ಕ್ಷೇತ್ರದಲ್ಲಿ ಪ್ರಧಾನಿ ಮೋದಿ (Narendra Modi) ಸಾಧನೆ ಬಗ್ಗೆ ಮಾತಾಡೋದನ್ನು ಅವರಿಂದ ಸಹಿಸೋಕೆ ಆಗುತ್ತಿಲ್ಲ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಕಿಡಿಕಾರಿದ್ದಾರೆ.

    ಬೀದರ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಧಿಕಾರದ ಮದ, ಆತಂಕದಿಂದ ಚಿತ್ತಾಪುರದಲ್ಲಿ ಕಾರ್ಯಕ್ರಮ ನಡೆಯದಂತೆ ಪ್ಲ್ಯಾನ್ ಮಾಡಿದ್ದಾರೆ. ಬುಧವಾರ ತಡರಾತ್ರಿ ತಹಶೀಲ್ದಾರ್ ಕಡೆಯಿಂದ ಪತ್ರಕೊಟ್ಟು, ನಿಮ್ಮ ಕಾರ್ಯಕ್ರಮ ಕ್ಯಾನ್ಸಲ್ ಮಾಡಲಾಗಿದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಬಳಿಕ ಜಿಲ್ಲೆಯ ಗಡಿಯಲ್ಲಿ ಯಾವ ಆದೇಶ ಇಲ್ಲದೇ ತಡೆಯುವ ಕೆಲಸ ಮಾಡಿದ್ದಾರೆ. ಮಧ್ಯರಾತ್ರಿವರೆಗೂ ಅಲ್ಲೇ ಇದ್ದು, ಆದೇಶ ಪ್ರತಿ ಕೊಡುವ ತನಕ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದೆ. ರಾತ್ರಿ 1 ಗಂಟೆಗೆ ಆದೇಶ ಪ್ರತಿ ಕೊಟ್ಟರು ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: BBMP Budget 2024: ಪಾಲಿಕೆಯ ಶಾಲಾ/ಕಾಲೇಜು ವಿದ್ಯಾರ್ಥಿಗಳು, ಪೋಷಕರಿಗೆ ‘ಆಯುಷ್ಮಾನ್‌ ಭಾರತ್‌’ ವಿಮೆ!

    ಕಾರ್ಯಕ್ರಮದ ಪರವಾನಿಗೆ, ಮೈಕ್ ಪರವಾನಗಿ ಕ್ಯಾನ್ಸಲ್ ಮಾಡಿ ಕಾಂಗ್ರೆಸ್ (Congress) ನನಗೆ ವಿನಾಕಾರಣ ಕಿರುಕುಳ ನೀಡಿದೆ. ತುರ್ತಾಗಿ ಕಮಿಷನರ್ ಬಳಿ ಆದೇಶ ಪ್ರತಿ ತಂದು ಕಾರ್ಯಕ್ರಮ ಕ್ಯಾನ್ಸಲ್ ಮಾಡಿದ್ದಾರೆ. ಸರ್ಕಾರದ ಸೂತ್ರ ಹಿಡಿದ ಈ ಜನ ಪ್ರಜಾಪ್ರಭುತ್ವದ ಬಗ್ಗೆ ಮಾತಾಡಿ, ಸಂವಿಧಾನ ಉಳಿಸಿ ಎಂದು ಹೇಳುತ್ತಾರೆ. ಮತ್ತೊಂದೆಡೆ ವ್ಯಕ್ತಿಯೊಬ್ಬನ ಹಕ್ಕು ತಡೆಯುವ ಈ ಪ್ರಯತ್ನ ಮಾಡುತ್ತಾರೆ. ಈ ನಡೆ ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕದಲ್ಲಿ ನಾವು ಹಾಕಿದ ಒಂದು ಮತ ರಾಜ್ಯದಲ್ಲಿ ಇಂತಹ ಸರ್ಕಾರವನ್ನು ತಂದಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ‘ಜೈ ಸೀತಾರಾಮ್‌’ ಎಂದು ಘೋಷಣೆ ಕೂಗಿದ ಸಿದ್ದರಾಮಯ್ಯ; ಬಿಜೆಪಿಗೆ ಠಕ್ಕರ್

  • 200ಕ್ಕೂ ಅಧಿಕ ಪೊಲೀಸರಿಂದ ಭದ್ರತೆ – ಅಲ್ದೂರಿನಲ್ಲಿ ಸೂಲಿಬೆಲೆಯ ನಮೋ ಭಾರತ್ ಕಾರ್ಯಕ್ರಮ ಯಶಸ್ವಿ

    200ಕ್ಕೂ ಅಧಿಕ ಪೊಲೀಸರಿಂದ ಭದ್ರತೆ – ಅಲ್ದೂರಿನಲ್ಲಿ ಸೂಲಿಬೆಲೆಯ ನಮೋ ಭಾರತ್ ಕಾರ್ಯಕ್ರಮ ಯಶಸ್ವಿ

    ಚಿಕ್ಕಮಗಳೂರು: ಬಿಗಿ ಪೊಲೀಸ್‌ ಭದ್ರತೆ ಮಧ್ಯೆ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರ (Chakravarty Sulibele) ನಮೋ ಭಾರತ್‌ ಕಾರ್ಯಕ್ರಮ ಆಲ್ದೂರು (Aldur) ಪಟ್ಟಣದಲ್ಲಿ ಯಶಸ್ವಿಯಾಗಿ ಮುಕ್ತಾಯವಾಗಿದೆ.

    ಚಿಕ್ಕಮಗಳೂರು ನಗರದಲ್ಲಿ ನಮೋ ಭಾರತ್‌ (Namo Bharat) ಕಾರ್ಯಕ್ರಮ ನಡೆದಾಗ ಯೂತ್ ಕಾಂಗ್ರೆಸ್ (Youth Congress) ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಆಲ್ದೂರು ಚಿಕ್ಕಮಗಳೂರು ಜಿಲ್ಲೆಯ ಸೂಕ್ಷ್ಮ ಪಟ್ಟಣವಾಗಿದ್ದ ಕಾರಣ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇದನ್ನೂ ಓದಿ: 70 ವರ್ಷಗಳ ಕಾಂಗ್ರೆಸ್ ದುರಾಡಳಿತದಿಂದ ಭಾರತ ಪ್ರಗತಿ ಕಂಡಿಲ್ಲ: ಜಗದೀಶ್ ಶೆಟ್ಟರ್

    ಒಬ್ಬರು ಎಸ್‌ಪಿ, ಐದು ಪಿಎಸ್‌ಐ, ಇಬ್ಬರು ಇನ್ಸ್‌ಪೆಕ್ಟರ್‌, 200ಕ್ಕೂ ಅಧಿಕ ಪೊಲೀಸರ ಭದ್ರತೆಯಲ್ಲಿ ನಮೋ ಭಾರತ್ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.  ಇದನ್ನೂ ಓದಿ: ವಿರುಷ್ಕಾ ದಂಪತಿ ಪುತ್ರ ‘ಅಕಾಯ್‌’ ಹೆಸರಿನ ಅರ್ಥವೇನು ಗೊತ್ತಾ?

    ಚಿಕ್ಕಮಗಳೂರಿನಲ್ಲಿ ಕಾರ್ಯಕ್ರಮ ನಡೆದಾಗ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶಿಸಿ, ಚಕ್ರವರ್ತಿ ಸೂಲೆಬೆಲೆ ವಿರುದ್ಧ ಅವಹೇಳನಕಾರಿ ಬ್ಯಾನರ್ ಹಾಕಿದ್ದರು. ಸೂಲಿಬೆಲೆ ಭಾಷಣದ ಹಿಂಭಾಗದಲ್ಲಿ ಬ್ಯಾನರ್ ಹಾಕಿದ್ದರಿಂದ ನೋಡ ನೋಡುತ್ತಿದ್ದಂತೆಯೇ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿ ಕಾರ್ಯಕರ್ತರು ಉದ್ರಿಕ್ತರಾಗಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿದ್ದರು‌. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

    ಈ ಘಟನೆಯಿಂದ ಎಚ್ಚೆತ್ತ ಜಿಲ್ಲಾ ಪೊಲೀಸ್‌ ಒಬ್ಬರು ಎಎಸ್‌ಪಿ, ಪಿಎಸ್ಐ, ಸಿಪಿಐ, ಡಿವೈಎಸ್‌ಪಿ ಸೇರಿ 200ಕ್ಕೂ ಅಧಿಕ ಪೊಲೀಸರನ್ನು ಕಾರ್ಯಕ್ರಮಕ್ಕೆ ನಿಯೋಜನೆ ಮಾಡಿತ್ತು.

     

  • ಸೂಲಿಬೆಲೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಅಡ್ಡಿ – ವಿರೋಧದ ನಡ್ವೆ ಯಶಸ್ವಿಯಾದ ನಮೋ ಭಾರತ್‌

    ಸೂಲಿಬೆಲೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಅಡ್ಡಿ – ವಿರೋಧದ ನಡ್ವೆ ಯಶಸ್ವಿಯಾದ ನಮೋ ಭಾರತ್‌

    ಚಿಕ್ಕಮಗಳೂರು: ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆಯ ನಮೋ ಭಾರತ್ ಕಾರ್ಯಕ್ರಮಕ್ಕೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು ಗಲಾಟೆ ಮಧ್ಯೆಯೇ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಗಿದೆ.

    ನಗರದ ವಿಜಯಪುರದಲ್ಲಿ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರ ನಮೋ ಭಾರತ್‌ (Namo Bharat) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಯುಪಿಎ 10 ವರ್ಷಗಳಲ್ಲಿ ಆರ್ಥಿಕತೆಯನ್ನು ನಿಷ್ಕ್ರಿಯಗೊಳಿಸಿತ್ತು: ಶ್ವೇತಪತ್ರ ಹೊರಡಿಸಿದ ಮೋದಿ ಸರ್ಕಾರ

    ಚಕ್ರವರ್ತಿ ಸೂಲಿಬೆಲೆ ಬರುವ ಮಾರ್ಗದಲ್ಲೇ 17 ಯೂತ್ ಕಾಂಗ್ರೆಸ್ (Youth Congress) ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರೆ, ಇನ್ನೊಂದು ತಂಡ ರಸ್ತೆ ಮಧ್ಯೆ ಅರೆ ಬೆತ್ತಲೆಯಾಗಿಯಾಗಿ ಪ್ರತಿಭಟಿಸಿತು. ಮತ್ತೊಂದು ತಂಡ ಕಾರ್ಯಕ್ರಮದ ವೇದಿಕೆಯ ಹಿಂಭಾಗ ಚಕ್ರವರ್ತಿ ಸೂಲಿಬೆಲೆ ಭಾಷಣದ ಮೇಲೆ ಮಹಡಿ ಮೇಲಿನಿಂದ ಕಪ್ಪು ಬಾವುಟದಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅವಹೇಳನಕಾರಿಯಾಗಿ ಬರೆದು  ಜೋತುಬಿಟ್ಟರು.  ಇದನ್ನೂ ಓದಿ: ಮತ್ತೆ ಮೋದಿ ಸರ್ಕಾರ; ಎನ್‌ಡಿಎಗೆ 335, ಇಂಡಿಯಾ ಮೈತ್ರಿಕೂಟಕ್ಕೆ 166

    ಕ್ಷಣಾರ್ಧದಲ್ಲಿ ನೋಡ ನೋಡುತ್ತಿದ್ದಂತೆ ವೇದಿಕೆ ಹಿಂಭಾಗದಲ್ಲಿ ಉದ್ವಿಗ್ನದ ಪರಿಸ್ಥಿತಿ ನಿರ್ಮಾಣವಾಯ್ತು. ಕಾಂಗ್ರೆಸ್ ಕಾರ್ಯಕರ್ತರು ಬಾವುಟವನ್ನು ಜೋತು ಬಿಡುತ್ತಿದ್ದಂತೆ 200ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಮಹಡಿ ಮೇಲೆ ಹತ್ತಲು, ಕಾಂಗ್ರೆಸ್ ಕಾರ್ಯಕರ್ತರಿಗೆ ಧರ್ಮದೇಟು ನೀಡಲು ಯತ್ನಿಸಿದರು. ಆದರೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

    ಮಾಜಿ ಶಾಸಕ ಸಿಟಿ ರವಿ (CT Ravi) ಕೂಡ ವೇದಿಕೆ ಮುಂಭಾಗದಿಂದ ಬಂದು ಬಾವುಟ ಪ್ರದರ್ಶಿಸಿದವರ ವಿರುದ್ಧ ಅಸಮಾಧಾನ ಹೊರ ಹಾಕಿದರು. ಸುಮಾರು ಅರ್ಧ ಗಂಟೆಗಳ ಕಾಲ ಸ್ಥಳದಲ್ಲಿ ಉದ್ವಿಗ್ನತೆಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಸರ್ಪಗಾವಲಿನಲ್ಲಿ ಬಾವುಟ ಪ್ರದರ್ಶಿಸಿದ ಮೂವರು ಯುವಕರನ್ನು ಕರೆದೊಯ್ದರು.

    ಕಾರ್ಯಕ್ರಮದ ಬಳಿಕ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ನನಗೆ ಇದೇನೋ ಹೊಸದಲ್ಲ. ಕಾಂಗ್ರೆಸ್ಸಿಗರ ಆರೋಪಕ್ಕೆ ನಾನು ಉತ್ತರ ನೀಡಿದ್ದೇನೆ. ನನ್ನ ಉತ್ತರ ಕಾಂಗ್ರೆಸ್‌ಗಳಿಗೆ ಭಯ ತರಿಸಿದೆ. ಕಾಂಗ್ರೆಸ್ಸಿಗರು ಹೆಚ್ಚು ಆರೋಪ ಮಾಡಿದಷ್ಟು ನಮಗೆ ಲಾಭ. ಪ್ರಿಯಾಂಕ್‌ ಖರ್ಗೆ ಹಾಗೂ ಮಧು ಬಂಗಾರಪ್ಪ ಈ ರೀತಿಯ ಮಾತುಗಳನ್ನು ಆಡಿದ್ದಾರೆ. ಅವರ ಹೇಳಿಕೆಗಳು ನನಗೆ ಖುಷಿ ಕೊಡುತ್ತೆ.‌ ನಾಳೆಯಿಂದ ಇಡೀ ರಾಜ್ಯದ ಪ್ರವಾಸ ಮಾಡುತ್ತೇನೆ ಎಂದು ಹೇಳಿದರು.

     

  • ನಮೋ ಭಾರತ್ ಕಾರ್ಯಕರ್ತೆಗೆ ಜೆಡಿಎಸ್ ಯುವಕನಿಂದ ನಿಂದನೆ

    ನಮೋ ಭಾರತ್ ಕಾರ್ಯಕರ್ತೆಗೆ ಜೆಡಿಎಸ್ ಯುವಕನಿಂದ ನಿಂದನೆ

    ತುಮಕೂರು: ಜೆಡಿಎಸ್ ಕಾರ್ಯಕರ್ತರು ನಮೋ ಭಾರತ್ ಕಾರ್ಯಕರ್ತತೆಯನ್ನು ಟ್ವಿಟ್ಟರ್ ಖಾತೆಯಲ್ಲಿ ಅಶ್ಲೀಲ ಪದಗಳಿಂದ ನಿಂದಿಸಿ ಟ್ರೋಲ್ ಮಾಡಿದ್ದಾರೆ.

    ತುಮಕೂರಿನ ನಮೋಭಾರತ್ ಕಾರ್ಯಕರ್ತೆ ಶಕುಂತಲಾ ರಾಜ್ ಎಂಬವರಿಗೆ ಅಶ್ಲೀಲ ಪದಗಳಿಂದ ನಿಂದನೆ ಮಾಡಲಾಗಿದೆ. ಶಕುಂತಲಾ ರಾಜ್ ತುಮಕೂರು ಬಿಜೆಪಿ ಅಭ್ಯರ್ಥಿ ವೈ.ಬಸವರಾಜು ಅವರ ಗೆಲುವಿನ ವಿಜಯೋತ್ಸವದಲ್ಲಿ ಡಾನ್ಸ್ ಮಾಡಿದ ದೃಶ್ಯಾವಳಿಗಳನ್ನ ಟ್ವಿಟ್ಟರ್ ರಲ್ಲಿ ಹಾಕಿಕೊಂಡಿದ್ದರು. ಇದಕ್ಕೆ ಕಾಮೆಂಟ್ ಮಾಡುವ ನೆಪದಲ್ಲಿ ಮಂಡ್ಯ ಮೂಲದ ಪರಿಕ್ಷೀತ್ ಗೌಡ ಹಾಗೂ ಪ್ರಿಯದರ್ಶಿನಿ ಗೌಡ ಎಂಬವವರು ಅಶ್ಲೀಲ ಪದಗಳಿಂದ ಅವಹೇಳನ ಮಾಡಿದ್ದಾರೆ. ಅಲ್ಲದೆ ಅದನ್ನ ಟ್ರೋಲ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಟ್ರೋಲ್ ಮಾಡಿದ್ದರಿಂದ ನೊಂದಿರುವ ಶಕುಂತಲಾ ರಾಜ್ ಎಸ್‍ಪಿ ಅವರಿಗೆ ದೂರು ಸಲ್ಲಿಸಿದ್ದಾರೆ.

    ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಶಕುಂತಲಾ ರಾಜ್, ವಿಜಯೋತ್ಸವದ ಸಂದರ್ಭದಲ್ಲಿ ಎಲ್ಲ ಕಾರ್ಯಕರ್ತೆಯರೊಂದಿಗೆ ಹೆಜ್ಜೆ ಹಾಕಿರುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದೆ. ಅಂದು ರಾತ್ರಿ ಸುಮಾರು ಎರಡು ಗಂಟೆಯವರೆಗೂ ಮಂಡ್ಯದ ಮೂಲಕ ಯುವಕ ಸೇರಿದಂತೆ ಹಲವರು ಅಸಂವಿಧಾನಿಕ ಪದ ಬಳಸಿ ನನ್ನನ್ನು ನಿಂದಿಸಿದ್ದಾರೆ. ಇವುಗಳಲ್ಲಿ ಕೆಲ ಖಾತೆಗಳು ಫೇಕ್ ಆಗಿದೆ. ಈ ಸಂಬಂಧ ದೂರು ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.