Tag: ನಮೋ

  • ಬಿಜೆಪಿ ಭದ್ರಕೋಟೆಯಲ್ಲಿ ನಮೋ ರೋಡ್‌ ಶೋ- ಮೋದಿ ಕಂಡು ಕುಡ್ಲದ ಜನತೆ ಫುಲ್‌ ಖುಷ್‌

    ಬಿಜೆಪಿ ಭದ್ರಕೋಟೆಯಲ್ಲಿ ನಮೋ ರೋಡ್‌ ಶೋ- ಮೋದಿ ಕಂಡು ಕುಡ್ಲದ ಜನತೆ ಫುಲ್‌ ಖುಷ್‌

    ಮಂಗಳೂರು: ಮೈಸೂರಿನ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಬಿಜೆಪಿ ಭದ್ರಕೋಟೆ ಮಂಗಳೂರಿಗೆ ಆಗಮಿಸಿದ್ದಾರೆ. ದೇಶದ ಪ್ರಧಾನಿಯನ್ನು ಕಂಡ ಕಡಲನಗರಿ ಮಂಗಳೂರಿನ ಜನ ಫುಲ್‌ ಖುಷಿಯಾಗಿದ್ದಾರೆ.

    ನಾರಾಯಣ ಗುರು ಸರ್ಕಲ್ ಗೆ ಆಗಮಿಸಿದ ಮೋದಿಯವರು ಚಪ್ಪಲಿ ಕಳಚಿಟ್ಟು ಸರ್ಕಲ್ ಹತ್ತಿ ನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಲ್ಲದೇ ಸರ್ಕಲ್ ಮೇಲೆ ನಿಂತು ಅಭಿಮಾನಿಗಳಿಗೆ ಕೈ ಬೀಸಿದರು. ಬಳಿಕ ತೆರೆದ ವಾಹನದಲ್ಲಿ ರೋಡ್‌ ಶೋ ಆರಂಭಿಸಿದರು.

    ರೋಡ್‌ ಶೋ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ನೆರೆದಿತ್ತು. ಮೋದಿ ಸಂಚರಿಸುತ್ತಿದ್ದಾಗ ರಸ್ತೆಯ ಎರಡೂ ಬದಿಯಿಂದಲೂ ಪುಷ್ಪವೃಷ್ಟಿಗೈಯಲಾಯಿತು. ಪ್ರಧಾನಿಯವರು ಜನರತ್ತ ಕೈ ಬೀಸಿ ನಗು ಬೀರಿದರು. ಮೋದಿ ಮುಖವಾಡ ಧರಿಸಿ ಅಭಿಮಾನಿಗಳು ಘೋಷಣೆ ಕೂಗಿದರು. ಅಭಿಮಾನಿಗಳ ಪ್ರೀತಿ ಕಂಡು ಪುಳಕಿತರಾದ ನರೇಂದ್ರ ಮೋದಿ, ಕಾರ್ಯಕರ್ತರತ್ತ ಹೂ ಎಸೆದು ಖುಷಿ ವ್ಯಕ್ತಪಡಿಸಿದರು. ಜೊತೆಗೆ ಕಮಲದ ಚಿಹ್ನೆ ತೋರಿಸಿ ಕಾರ್ಯಕರ್ತರಿಗೆ ಹುರುಪು ತುಂಬಿದರು.

    ಲಾಲ್ ಬಾಗ್ ನಲ್ಲಿ ಹುಲಿವೇಷ ಕುಣಿತ ವೀಕ್ಷಿಸಿದರು. ಜೊತೆಗೆ ಕಲಾವಿದರಿಗೆ ನಮೋ ವಿಶ್ ಮಾಡಿದರು. ರಸ್ತೆಯುದ್ಧಕ್ಕೂ ಹುಲಿವೇಷ, ಯಕ್ಷಗಾನ, ಕಂಬಳ, ಭರತನಾಟ್ಯ ಹೀಗೆ ತುಳು ಸಂಸ್ಕೃತಿಗಳ ಅನಾವರಣವಾಯಿತು. ಇದನ್ನೂ ಓದಿ: ಮಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ- ನಮೋ ನೋಡಲು ಜನಸಾಗರ

    ಪ್ರಧಾನಿಯವರಿಗೆ ಎರಡು ಕ್ಷೇತ್ರಗಳ ಅಭ್ಯರ್ಥಿಗಳು ಸಾಥ್‌ ನೀಡಿದರು. ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಜೇಶ್ ಚೌಟ ಹಾಗೂ ಉಡುಪಿ- ಚಿಕ್ಕಮಗಳೂರು ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಯವರು ಪ್ರಧಾನಿಗೆ ಜೊತೆಯಾದರು. ನವಭಾರತ್‌ ಸರ್ಕಲ್‌ನಿಂದ ಹಂಪನಕಟ್ಟೆವರೆಗೂ ತೆರಳಿ ಅಲ್ಲಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಮೋದಿ ಹೊರಟರು.

    ಈ ಹಿಂದೆ ವಿಧಾನಸಭಾ ಚುನಾವಣೆಯ ಪ್ರಚಾರದ ಸಭೆಗಾಗಿ ಪ್ರಧಾನಿಯವರು ಮಂಗಳೂರಿಗೆ ಆಗಮಿಸಿದ್ದರು. ಆದರೆ ಈ ವೇಳೆ ರೋಡ್‌ ಶೋ ಹಮ್ಮಿಕೊಂಡಿರಲಿಲ್ಲ. ಆದರೂ ಮೋದಿ ನೋಡಲು ಬಂದ ಜನಸ್ತೋಮ ಕಂಡು ಪ್ರಧಾನಿಯವರು ದಿಗ್ಭ್ರಮೆಗೊಂಡಿದ್ದರು.

  • KR Puram to Whitefield ಮೆಟ್ರೋ ಸಂಚಾರಕ್ಕೆ ಶನಿವಾರ ಮೋದಿ ಚಾಲನೆ

    KR Puram to Whitefield ಮೆಟ್ರೋ ಸಂಚಾರಕ್ಕೆ ಶನಿವಾರ ಮೋದಿ ಚಾಲನೆ

    – ನಮೋ ಆಗಮನ ಹಿನ್ನೆಲೆ ಹೈ ಅಲರ್ಟ್
    – ಉದ್ಘಾಟನೆ ಬಳಿಕ ಮೆಟ್ರೋದಲ್ಲಿ ಪ್ರಧಾನಿ ಸಂಚಾರ

    ಬೆಂಗಳೂರು: ಬಹುನೀರಿಕ್ಷಿತ ಕೆಆರ್ ಪುರಂ ಮತ್ತು ವೈಟ್‍ಫೀಲ್ಡ್ ನಡುವಿನ ಮೆಟ್ರೋ ಸಂಚಾರ ಆರಂಭಕ್ಕೆ ಕೌಂಟ್‍ಡೌನ್ ಶುರುವಾಗಿದೆ. ನಾಳೆ ಮಧ್ಯಾಹ್ನ ನೂತನ ಮಾರ್ಗದ ಸಂಚಾರಕ್ಕೆ ಪ್ರಧಾನಿಗಳು ಹಸಿರು ನಿಶಾನೆ ತೋರುವ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ.

    ಕೆ.ಆರ್ ಪುರಂ (KR Puram) ಮತ್ತು ವೈಟ್‍ಫೀಲ್ಡ್ ನಡುವಿನ ಮೆಟ್ರೋ (Namma Metro) ಉದ್ಘಾಟನೆ ಕಾಯುವಿಕೆಗೆ ಕೊನೆಗೂ ಫುಲ್‍ಸ್ಟಾಪ್ ಇಡುವ ಸಂದರ್ಭ ಬಂದಿದೆ. ಬಹುನಿರೀಕ್ಷಿತ ಹೊಸ ಮಾರ್ಗಕ್ಕೆ ನಾಳೆ ಚಾಲನೆ ಸಿಗಲಿದ್ದು, ಉದ್ಘಾಟನೆಯ ಅಂತಿಮ ತಯಾರಿ ಭರದಿಂದ ಸಾಗಿದೆ.

    ನಾಳೆ ಮಧ್ಯಾಹ್ನ 13.55ಕ್ಕೆ ಪ್ರಧಾನಿಗಳು ಎಚ್‍ಎಎಲ್‍ (HAL) ನಿಂದ ರಸ್ತೆ ಮೂಲಕ ನೇರವಾಗಿ ವೈಟ್‍ಫಿಲ್ಡ್ ನ ಕಾಡುಗೋಡಿ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 1 ಗಂಟೆಯಿಂದ 1.35ರ ಒಳಗೆ 13.71 ಕಿ.ಮೀ ಉದ್ದ ಮೆಟ್ರೋ ಮಾರ್ಗವನ್ನ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಅದೇ ಮೆಟ್ರೋದಲ್ಲಿ ಮೋದಿ ಸಂಚಾರ ಮಾಡಲಿದ್ದಾರೆ. ವೈಟ್‍ಫಿಲ್ಡ್‍ನ ಕಾಡುಗೋಡಿ ನಿಲ್ದಾಣದಿಂದ ಒಂದು ಕಿ.ಮೀ ದೂರದಲ್ಲಿರುವ ಚೆನ್ನಸಂದ್ರ ಮೆಟ್ರೋ ನಿಲ್ದಾಣದವರೆಗೆ ಹೊಸ ಮಾರ್ಗದಲ್ಲಿ ಸಂಚಾರ ಮಾಡಿ ಅಲ್ಲಿಂದ ನೇರವಾಗಿ ಮತ್ತೆ ಎಚ್‍ಎಎಲ್‍ಗೆ ತೆರಳಿ ಅಲ್ಲಿಂದ ದಾವಣಗೆರೆಗೆ ಪ್ರಯಾಣ ಬೆಳೆಸಲಿದ್ದಾರೆ. ಇದನ್ನೂ ಓದಿ: ಚಾಮರಾಜನಗರಕ್ಕೆ ಭೇಟಿ ಕೊಟ್ರೆ ಅಧಿಕಾರ ಹೋಗುತ್ತೆ – ಮೌಢ್ಯಕ್ಕೆ ಸೆಡ್ಡು ಹೊಡೆದ ಸಿದ್ದರಾಮಯ್ಯ, ಬೊಮ್ಮಾಯಿ‌

    ಪ್ರಧಾನಿಗಳ ಆಗಮನ ಹಿನ್ನೆಲೆ ವೈಟ್‍ಫಿಲ್ಡ್ ಕಾಡುಗೋಡಿ ಮತ್ತು ಚೆನ್ನಸಂದ್ರ ಮೆಟ್ರೋ ನಿಲ್ದಾಣದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬೆಳಗ್ಗೆಯಿಂದಲೇ ಸ್ಥಳದಲ್ಲಿ ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ತಂಡಗಳು ತಪಾಸಣೆ ಆರಂಭಿಸಿವೆ. ಇನ್ನೂ ಪ್ರಧಾನಿಗಳು ಸಂಚರಿಸುವ ಎರಡು ನಿಲ್ದಾಣಗಳನ್ನ ಈಗಾಗಲೇ ಎಸ್‌ ಪಿಜೆ ಪಡೆಗಳು ಸಂಪೂರ್ಣ ಕಂಟ್ರೋಲ್ ತೆಗೆದುಕೊಂಡು ಭದ್ರತೆ ಪರಿಶೀಲನೆ ನಡೆಸಿವೆ. ಇನ್ನೂ ಪ್ರಧಾನಿಗಳು ಎಚ್‍ಎಎಲ್‍ನಿಂದ ಆಗಮಿಸುವ ಮಾರ್ಗ ಮಧ್ಯೆ ಕೂಡ ಬಿಜೆಪಿ ಬಾವುಟ, ಫ್ಲೆಕ್ಸ್ ಗಳ ಭರಾಟೆ ಜೋರಾಗಿದೆ. ನಮೋ ಸ್ವಾಗತಕ್ಕಾಗಿ ರಸ್ತೆಯ ಎರಡು ಬದಿಯಲ್ಲೂ ಬ್ಯಾರಿಕೇಡ್ ಹಾಕಿ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ನಿಂತು ನೋಡಲು ವ್ಯವಸ್ಥೆ ಮಾಡಲಾಗಿದೆ.

    ಒಟ್ಟಾರೆ ಹಲವು ದಿನಗಳಿಂದ ಜಟಾಯು ಪಕ್ಷಿಗಳಂತೆ ಕಾಯುತ್ತಿದ್ದ ಈ ಭಾಗದ ಜನರ ಬಹುದಿನದ ಕನಸು ಈಡೇರುತ್ತಿದ್ದು, ಇನ್ಮೇಲೆ ಸವಾರರಿಗೆ ಸ್ವಲ್ಪಮಟ್ಟಿಗಾದ್ರು ಟ್ರಾಫಿಕ್ ಕಿರಿಕಿರಿ ತಪ್ಪಲಿದೆ.

     

  • ಮೋದಿಗೆ ಸಕ್ಕರೆ ನಾಡಿನ ಸ್ಪೆಷಲ್ ಸಾಂಗ್ ಗಿಫ್ಟ್

    ಮೋದಿಗೆ ಸಕ್ಕರೆ ನಾಡಿನ ಸ್ಪೆಷಲ್ ಸಾಂಗ್ ಗಿಫ್ಟ್

    ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನೆಲೆ ಸಕ್ಕರೆ ನಾಡು ಮಂಡ್ಯದ ಅಭಿಮಾನಿಗಳು ಅವರಿಗಾಗಿ ಒಂದು ಸ್ಪೆಷಲ್ ಸಾಂಗ್ ರಚಿಸಿ ಅದನ್ನು ಗಿಫ್ಟ್ ಆಗಿ ನೀಡುತ್ತಿದ್ದಾರೆ.

    ಇಂದು ಮೋದಿ ಹುಟ್ಟುಹಬ್ಬವಾಗಿರುವುದರಿಂದ ಮಂಡ್ಯದ ಅಭಿಮಾನಿಗಳು ಚಪ್ಪಾಳೆ ಗೀತೆಗೆ ವಿಶೇಷ ಸಾಹಿತ್ಯ ರಚನೆ ಮಾಡಿದ್ದು, ಅದಕ್ಕೆ ‘ನಮೋ’ ಎಂದು ಹೆಸರಿಟ್ಟಿದ್ದಾರೆ. ಆ ಗೀತೆಗೆ ನಾಗರಾಜ್ ಮೂರ್ತಿ ಅವರು ಸಾಹಿತ್ಯವನ್ನು ರಚಿಸಿದ್ದು, ಆರ್.ಶಂಕರ್ ಈ ಸ್ಪೆಷಲ್ ಸಾಂಗ್ ಗೆ ಧ್ವನಿ ನೀಡಿದ್ದಾರೆ. ಅನಿಲ್ ಮರೀಗೌಡ ಸಹಾಯದಲ್ಲಿ ಈ ವಿಶೇಷ ಗೀತೆ ಮೂಡಿಬರುತ್ತಿದೆ. ಇದನ್ನೂ ಓದಿ: ನರೇಂದ್ರ ಮೋದಿ ಹುಟ್ಟುಹಬ್ಬ- ಶುಭ ಕೋರಿದ ಎಚ್‍ಡಿಡಿ, ಎಚ್‍ಡಿಕೆ

    ಈ ‘ನಮೋ’ ಗೀತೆ 3 ನಿಮಿಷ 40 ಸೆಕೆಂಡ್ ಇದ್ದು, ಮೈಸೂರಿನ ಎಂಡ್ಯೂರೆನ್ಸ್ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲಾಗಿದೆ. ಮಂಡ್ಯದ ಪಾಲನೇತ್ರ ಅವರು ಈ ಗೀತೆಯ ಸಂಕಲನ ಮಾಡಿದ್ದಾರೆ. ಇದನ್ನೂ ಓದಿ:   ಪಾಯಸ ವಿತರಿಸಿ ಮೋದಿ ಹುಟ್ಟುಹಬ್ಬ ಆಚರಿಸಿದ ಉಡುಪಿಯ ಕಿಣಿ ಹೋಟೆಲ್

    ಮೋದಿ ಹುಟ್ಟುಹಬ್ಬ ಇರುವುದರಿಂದ ಈ ವಿಶೇಷ ಗೀತೆಯನ್ನು ಟ್ವಿಟರ್, ಇಮೇಲ್, ಸ್ಪೀಡ್ ಪೋಸ್ಟ್ ಮೂಲಕ ಪ್ರಧಾನಿ ಕಚೇರಿಗೆ ರವಾನೆ ಮಾಡಲಾಗುತ್ತಿದೆ.

  • ಹಾಡುಗಳ ಮೂಲಕ ಮೋಡಿ ಮಾಡಿದ ‘ನಮೋ’ ಈ ವಾರ ತೆರೆಗೆ!

    ಹಾಡುಗಳ ಮೂಲಕ ಮೋಡಿ ಮಾಡಿದ ‘ನಮೋ’ ಈ ವಾರ ತೆರೆಗೆ!

    ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮಿನಲ್ಲಿ ಸದ್ದು ಮಾಡೋ ಚಿತ್ರಗಳೆಲ್ಲವೂ ಸಾಲು ಸಾಲಾಗಿ ಗೆದ್ದು ಬೀಗುತ್ತಿವೆ. ಟ್ರೇಲರ್, ಟೀಸರ್, ಹಾಡು ಮುಂತಾದವುಗಳ ಮೂಲಕ ವೈರಲ್ ಆಗುವ ಸಿನಿಮಾಗಳತ್ತು ಪ್ರೇಕ್ಷಕ ವರ್ಗವೂ ಮೋಹಗೊಳ್ಳುತ್ತಿದೆ. ಅಂಥಾದ್ದೊಂದು ಸಕಾರಾತ್ಮಕ ವಾತಾವರಣವನ್ನು ತನ್ನದಾಗಿಸಿಕೊಂಡಿರುವ ಚಿತ್ರ ‘ನಮೋ’. ಪುಟ್ಟರಾಜ ಸ್ವಾಮಿ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರುವ ಈ ಚಿತ್ರ ಮೊದಲು ಪ್ರೇಕ್ಷಕರ ಆಸಕ್ತಿ ಸೆಳೆದುಕೊಂಡಿದ್ದು ಟೈಟಲ್ಲಿನ ಮೂಲಕ. ಆ ನಂತರದಲ್ಲಿ ಪ್ರಚಾರದ ಅಬ್ಬರ ತೋರಿಸಿದ್ದು ಚೆಂದದ ಹಾಡುಗಳ ಮೂಲಕ.

    ಸಾಮಾನ್ಯವಾಗಿ ಒಂದು ಸಿನಿಮಾದಲ್ಲಿ ಒಂದು ಜವಾಬ್ದಾರಿಯನ್ನು ನಿರ್ವಹಿಸುವುದೇ ಕಷ್ಟದ ಕೆಲಸ. ಅಂಥಾದ್ದರಲ್ಲಿ ಪುಟ್ಟರಾಜ ಸ್ವಾಮಿಯವರು ಈ ಸಿನಿಮಾವನ್ನು ನಿರ್ದೇಶನ ಮಾಡಿರೋದು ಮಾತ್ರವಲ್ಲದೆ ನಾಯಕನಾಗಿಯೂ ನಟಿಸಿದ್ದಾರೆ. ಅದೆರಡೂ ಜವಾಬ್ದಾರಿಯನ್ನವರು ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆಂಬುದಕ್ಕೆ ಟೀಸರ್, ಟ್ರೇಲರ್ ಮತ್ತು ಹಾಡುಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಈ ಸಿನಿಮಾ ನರೇಂದ್ರ ಮೋದಿ ಬಗೆಗಿನದ್ದಾ ಎಂಬಂಥಾ ಅನುಮಾನ ಹೊಂದಿದ್ದವರಿಗೆಲ್ಲ ಈ ಹಾಡುಗಳೇ ಕಥೆಯ ಬಗ್ಗೆ ನಾನಾ ದಿಕ್ಕುಗಳನ್ನೂ ತೋರಿಸಿವೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ನಮೋ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿರುವುದು ಸಾಯಿ ಸರ್ವೇಶ್. ಈ ಸಿನಿಮಾದ ಕಥೆಯ ಓಘ, ಹೊಸತನಕ್ಕೆ ಅನುಗುಣವಾಗಿಯೇ ಸಂಗೀತದ ಪಟ್ಟುಗಳನ್ನು ಹಾಕಿ ಪ್ರೇಕ್ಷಕರಿಗೆ ಹೊಸಾ ಫೀಲ್ ಕೊಡೋದರಲ್ಲಿ ಸರ್ವೇಶ್ ಗೆದ್ದಿದ್ದಾರೆ. ಒಂದು ಪಾರ್ಟಿ ಸಾಂಗ್ ಮತ್ತು ರೊಮ್ಯಾಂಟಿಕ್ ಹಾಡುಗಳಂತೂ ಈಗೊಂದಷ್ಟು ಕಾಲದಿಂದ ಟ್ರೆಂಡಿಂಗ್‍ನಲ್ಲಿದೆ. ಈ ಮೂಲಕ ಸದರಿ ಚಿತ್ರದಲ್ಲಿ ಅಪರೂಪದ ಪ್ರೇಮಕಥೆ ಮತ್ತು ಮಜವಾದ ಕಥಾ ಹೂರಣವಿದೆ ಎಂಬ ವಿಚಾರ ಸಮರ್ಥವಾಗಿಯೇ ಪ್ರೇಕ್ಷಕರತ್ತ ದಾಟಿಕೊಂಡಿದೆ. ಸುಲಭದಲ್ಲಿ ಕಾಸು ಮಾಡಬೇಕೆಂಬ ಹಂಬಲದಿಂದ ಶಾರ್ಟ್ ಕಟ್ ಹುಡುಕೋ ಮನಸ್ಥಿತಿಯ ಸುತ್ತಾ ಈ ಕಥೆ ಹೆಣೆಯಲ್ಪಟ್ಟಿದೆಯಂತೆ. ಹೀಗೆ ಒಂದಷ್ಟು ಮಾಹಿತಿಗಳನ್ನು ಚಿತ್ರತಂಡ ಬಿಟ್ಟುಕೊಟ್ಟರೂ ಕುತೂಹಲವೆಂಬುದು ನಾನಾ ಸ್ವರೂಪದಲ್ಲಿ ಗಿರಕಿ ಹೊಡೆಯುತ್ತಲೇ ಇದೆ. ಅದೆಲ್ಲವೂ ಪರಿಹಾರವಾಗಿ ನಮೋ ಚಿತ್ರದ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುವ ಕ್ಷಣಗಳು ಹತ್ತಿರಾಗಿವೆ.

  • ‘ನಮೋ’ ಮೇಲೆ ಪ್ರಧಾನಿಯ ನೆರಳಿದೆಯಾ?

    ‘ನಮೋ’ ಮೇಲೆ ಪ್ರಧಾನಿಯ ನೆರಳಿದೆಯಾ?

    ಕೆಲ ಸಿನಿಮಾಗಳು ಪ್ರೇಕ್ಷಕರ ವಲಯದಲ್ಲಿ ಗುರುತುಳಿಸಿಕೊಳ್ಳುವುದಕ್ಕೆ ಯಾವುದೇ ಪ್ರಚಾರದ ಪಡಿಪಾಟಲುಗಳೂ ಬೇಕಾಗುವುದಿಲ್ಲ. ಅವುಗಳ ಶೀರ್ಷಿಕೆಯೇ ಆ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಿ ಬಿಡುತ್ತವೆ. ಈ ವಾರ ಬಿಡುಗಡೆಗೊಳ್ಳಲಿರುವ ಪುಟ್ಟರಾಜ ಸ್ವಾಮಿ ನಿರ್ದೇಶನದ ‘ನಮೋ’ ಚಿತ್ರ ಕೂಡಾ ಅಂಥಾ ಸಿನಿಮಾಗಳ ಯಾದಿಗೆ ಸೇರಿಕೊಳ್ಳುವಂಥಾದ್ದು. ಈ ಚಿತ್ರದ ಟೈಟಲ್ ಅನೌನ್ಸ್ ಆದ ಕ್ಷಣದಿಂದಲೇ ತಾನೇ ತಾನಾಗಿ ಪ್ರಚಾರ ಪರ್ವ ಶುರುವಾಗಿತ್ತು. ಅದಕ್ಕೆ ಕಾರಣವಾಗಿರೋದು ನಮೋ ಎಂಬ ನಾಮಧೇಯ!

    ನಮೋ ಎಂಬ ಹೆಸರು ಕೇಳಿದಾಕ್ಷಣವೇ ಅಪ್ರಯತ್ನಪೂರ್ವಕವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೆನಪಾಗುತ್ತಾರೆ. ಅಷ್ಟಕ್ಕೂ ಜನಪ್ರಿಯ ನಾಯಕರಾಗಿ ಹಿಒರ ಹೊಮ್ಮಿರುವ ಮೋದಿ ಜೀವನಾಧಾರಿತ ಚಿತ್ರಗಳ ಬಗ್ಗೆ ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ಮಾತುಗಳು ಕೇಳಿ ಬರುತ್ತಲೇ ಇವೆ. ನಮೋ ಎಂಬ ಟೈಟಲ್ ಅನೌನ್ಸ್ ಆದಾಕ್ಷಣವೇ ಇದು ನರೇಂದ್ರ ಮೋದಿಯವರ ಬಯೋಪಿಕ್ ಇರಬಹುದಾ ಎಂಬ ಕುತೂಹಲ ಎಲ್ಲರನ್ನೂ ಕಾಡಿತ್ತು. ಅದನ್ನೇ ಈ ಸಿನಿಮಾದೆಡೆಗಿನ ಪ್ರಧಾನ ಆಕರ್ಷಣೆಯಾಗಿ ಮಾರ್ಪಾಟು ಮಾಡಿಕೊಳ್ಳುವಲ್ಲಿ ಚಿತ್ರತಂಡ ಅಮೋಘ ಗೆಲುವನ್ನೇ ದಾಖಲಿಸಿ ಬಿಟ್ಟಿದೆ.

    ನಮೋ ಅಂದರೆ ಈಗ ನರೇಂದ್ರ ಮೋದಿ ಎಂಬಂಥಾ ವಾತಾವರಣವಿದ್ದರೂ ಅದಕ್ಕೆ ಕತ್ತಲಿಂದ ಬೆಳಕಿನೆಡೆಗೆ ಸಾಗುವಂಥಾ ಅಮೋಘ ಅರ್ಥವೂ ಇದೆ. ಇಲ್ಲಿನ ಕಥೆಯ ಪಥ ಅದೇ ದಿಕ್ಕಿನತ್ತ ಸಾಗುತ್ತದೆಯಂತೆ. ಹಾಗಾದರೆ ಈ ಸಿನಿಮಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೂ ಯಾವ ಸಂಬಂಧವೂ ಇಲ್ಲವೇ ಎಂಬ ಪ್ರಶ್ನೆ ಮುಂದಿಟ್ಟರೆ ಚಿತ್ರ ತಂಡ ಮತ್ತದೇ ಜಾಣ್ಮೆಯನ್ನು ಪ್ರದರ್ಶಿಸುತ್ತದೆ. ಅದಕ್ಕೆ ಸಿನಿಮಾ ಬಿಡುಗಡೆಯಾದ ನಂತರವಷ್ಟೇ ಉತ್ತರ ಸಿಗಲಿದೆ ಎಂಬ ಮಾತೂ ಕೂಡಾ ಚಿತ್ರ ತಂಡದ ಕಡೆಯಿಂದ ತೂರಿ ಬರುತ್ತದೆ. ಅಂದಹಾಗೆ ಸಿನಿಮಾವನ್ನು ನಿರ್ದೇಶನ ಮಾಡಿರುವ ಪುಟ್ಟರಾಜಸ್ವಾಮಿ ಅವರೇ ನಾಯಕನಾಗಿಯೂ ನಟಿಸಿದ್ದಾರೆ. ಈ ಸಿನಿಮಾ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

  • `ದಿಗು’ ಎಂದರೆ `ದಿಕ್ಕೆಟ್ಟ ಗುಲಾಮ’ – ಗುಂಡೂರಾವ್‍ಗೆ ಬಿಜೆಪಿಯಿಂದ ತಿರುಗೇಟು

    `ದಿಗು’ ಎಂದರೆ `ದಿಕ್ಕೆಟ್ಟ ಗುಲಾಮ’ – ಗುಂಡೂರಾವ್‍ಗೆ ಬಿಜೆಪಿಯಿಂದ ತಿರುಗೇಟು

    ಬೆಂಗಳೂರು: ನಮೋ ಎಂದರೆ ನಮಗೆ ಮೋಸ ಎಂದಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಬಿಜೆಪಿ ದಿಕ್ಕೆಟ್ಟ ಗುಲಾಮ ಎಂದು ಕರೆಯುವ ಮೂಲಕ ತಿರುಗೇಟು ನೀಡಿದೆ.

    ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಸೀದಾ ರುಪಯ್ಯ ಸರ್ಕಾರ್’ ಎಂದು ಲೇವಡಿ ಮಾಡಿದ್ದ ವಿಚಾರವನ್ನು ಪ್ರಸ್ತಾಪಿಸಿದ ಗುಂಡೂರಾವ್, ನಮೋ ಎಂದರೆ ‘ನಮಗೆ ಮೋಸ’ ಎಂದರ್ಥ. ನೋಟ್ ಬ್ಯಾನ್ ಕ್ರಮ, ನೀರವ್ ಮೋದಿ ಮತ್ತು ಇತರರಿಂದ ಬ್ಯಾಂಕ್ ಲೂಟಿಯಾದ್ದರಿಂದ ದೇಶದ ಜನತೆಗೆ ಮೋಸವಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.

    ಇದಕ್ಕೆ ಟಾಂಗ್ ಎನ್ನುವಂತೆ ಬಿಜೆಪಿ ‘ದಿಗು’ ಎಂದರೆ ‘ದಿಕ್ಕೆಟ್ಟ ಗುಲಾಮ’ ಎಂದು ಕರೆದಿದೆ. ಈ ಸಂಬಂಧ ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿ, ‘ದಿಗು’ ರವರೆ, ಗಾಂಧಿ ಕುಟುಂಬದ ಗುಲಾಮಗಿರಿ ಬಿಟ್ಟು, ಕನ್ನಡಿಗರಂತೆ ಸ್ವಾಭಿಮಾನದಿಂದ ಬದುಕುವುದನ್ನು ಕಲಿಯಿರಿ. ಇನ್ನೂ ನೀವೊಬ್ಬ ಯುವ ನಾಯಕ ಎಂಬ ಭ್ರಮೆಯಿಂದ ಹೊರಬಂದು ಪ್ರಬುದ್ಧ ರಾಜಕೀಯವನ್ನು ಇನ್ನಾದರೂ ಕಲಿಯಿರಿ ಎಂದು ಬರೆದು ತಿರುಗೇಟು ನೀಡಿದೆ.