Tag: ನಭಾ ನಟೇಶ್

  • ಅಮ್ಮನ ಹಳೆಯ ಸೀರೆಯುಟ್ಟು ಮಿಂಚಿದ ವಜ್ರಕಾಯ ಬೆಡಗಿ ನಭಾ ನಟೇಶ್

    ಅಮ್ಮನ ಹಳೆಯ ಸೀರೆಯುಟ್ಟು ಮಿಂಚಿದ ವಜ್ರಕಾಯ ಬೆಡಗಿ ನಭಾ ನಟೇಶ್

    ಪ್ರಾಚೀನ ಶೈಲಿ ಆಗಾಗ ಪುನಾವರ್ತನೆ ಆಗುತ್ತಿರುವ ಕಾಲವಿದು. ಪ್ರಾಚೀನ ಆಭರಣ, ಸೀರೆ ಈಗ ಜನಪ್ರಿಯ ಶೈಲಿಯಾಗಿದೆ. ಇದೀಗ ಹಳೆಯ ಕಾಲದ ಸೀರೆಯಲ್ಲಿ ಹೊಸ ರೂಪದಲ್ಲಿ ಮಿಂಚಿದ್ದಾರೆ ವಜ್ರಕಾಯ ಬೆಡಗಿ ನಭಾ ನಟೇಶ್.

    ಚಿಕ್ಕಮಗಳೂರಿನ ಈ ಚೆಲುವೆ ಸದ್ಯ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ. ವಜ್ರಕಾಯ ಬಳಿಕ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆ್ಯಕ್ಟೀವ್ ಇರುವ ಈ ಚೆಲುವೆ ಇದೀಗ ಅಮ್ಮನ ಹಳೆಯ ಸೀರೆಗೆ ಹೊಸ ಮೆರುಗು ಕೊಟ್ಟು ಈ ದೀಪಾವಳಿ ಹಬ್ಬಕ್ಕಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಅಮ್ಮನ ಹಳೆಯ ಫೋಟೋದೊಂದಿದೆ ತಮ್ಮ ಫೋಟೋವನ್ನ ಸೇರಿಸಿ ಅದರ ವಿಶೇಷತೆಯನ್ನು ಬಿಚ್ಚಿಟ್ಟಿದ್ದಾರೆ. “ಅಮ್ಮನ ಸೀರೆಯುಡೋದ್ರಲ್ಲಿ ಅದೇನೋ ಮ್ಯಾಜಿಕ್ ಇದೆ, ಅದರಲ್ಲೂ ಅಪ್ಪ ಅಮ್ಮನಿಗಾಗಿ ನೀಡಿದ ಮೊದಲ ಉಡುಗೊರೆಯ ಸೀರೆ” ಎಂದಿದ್ದಾರೆ.

    ಹಳೆಯ ಸೀರೆಗೆ ಹೊಸ ಡಿಸೈನರ್ ರವಿಕೆ ಧರಿಸಿ ಪೋಸ್ ಕೊಟ್ಟಿದ್ದಾರೆ ನಭಾ. ಸೋಶಿಯಲ್ ಮೀಡಿಯಾದಲ್ಲಿ ಗ್ಲ್ಯಾಮರ್‌ ಫೋಟೋಗಳನ್ನ ಪೋಸ್ಟ್ ಮಾಡುವ ಮೂಲಕ ಪ್ರಚಲಿತದಲ್ಲಿರುವ ನಭಾ ಇದೀಗ ಸಾಂಪ್ರದಾಯಿಕ ಲುಕ್‌ಗೆ ಆಧುನಿಕತೆ ಟಚ್ ಕೊಟ್ಟು ಮಿಂಚಿದ್ದಾರೆ. ನಭಾ ಸೀರೆಯ ಗುಟ್ಟು ಹಾಗೂ ಲುಕ್ಕು ಎರಡೂ ವೈರಲ್ ಆಗಿದೆ.

  • ಪಿಜ್ಜಾಗಿಂತ ನಿಮ್ಮ ಸೊಂಟನೇ ಹಾಟ್ ಆಗಿದೆ: ‘ವಜ್ರಕಾಯ’ ಬೆಡಗಿಗೆ ನೆಟ್ಟಿಗನ ಕಾಮೆಂಟ್

    ಪಿಜ್ಜಾಗಿಂತ ನಿಮ್ಮ ಸೊಂಟನೇ ಹಾಟ್ ಆಗಿದೆ: ‘ವಜ್ರಕಾಯ’ ಬೆಡಗಿಗೆ ನೆಟ್ಟಿಗನ ಕಾಮೆಂಟ್

    ನ್ನಡದ ‘ವಜ್ರಕಾಯ’ (Vajrakaya) ನಟಿ ನಭಾ ನಟೇಶ್ (Nabha Natesh) ಸದಾ ಹೊಸ ಬಗೆಯ ಫೋಟೋಶೂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಲೇ ಇರುತ್ತಾರೆ. ಈಗ ಪಿಜ್ಜಾ ತಿನ್ನುತ್ತಾ ಬೋಲ್ಡ್ ಫೋಟೋಶೂಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ನೆಟ್ಟಿಗರಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

    ಶೃಂಗೇರಿ ಬೆಡಗಿ ನಭಾ ಸದ್ಯ ತೆಲುಗು ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಅವರು ಹಂಚಿಕೊಂಡಿರುವ ಹೊಸ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಇದನ್ನೂ ಓದಿ:ಸಂಜನಾ ಆನಂದ್ ಜೊತೆಗಿನ 2ನೇ ಮದುವೆ ವದಂತಿಗೆ ತೆರೆ ಎಳೆದ ಚಂದನ್‌ ಶೆಟ್ಟಿ

    ವೈಟ್ ಶಾರ್ಟ್ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಪಿಜ್ಜಾ ತಿನ್ನುತ್ತಾ ವಿವಿಧ ಭಂಗಿಯಲ್ಲಿ ನಭಾ ಪೋಸ್ ನೀಡಿದ್ದಾರೆ. ನಟಿಯ ಹಾಟ್ ಅವತಾರ ನೋಡ್ತಿದ್ದಂತೆ ಪಿಜ್ಜಾಗಿಂತ ನಿಮ್ಮ ಸೊಂಟವೇ ಹಾಟ್ ಆಗಿದೆ ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾರೆ. ಹೀಗೆ ನಟಿಯ ಫೋಟೋಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

    ಇನ್ನೂ ‘ಸ್ವಯಂಭು’ ಎಂಬ ಪ್ಯಾನ್ ಇಂಡಿಯಾ ಚಿತ್ರ ಕೂಡ ನಭಾ ಕೈಯಲ್ಲಿದೆ. ಈ ಸಿನಿಮಾದ ಕೆಲಸ ಕೂಡ ನಡೆಯುತ್ತಿದೆ. ನಿಖಿಲ್ ಸಿದ್ಧಾರ್ಥ್ಗೆ ನಾಯಕಿಯಾಗಿ ನಭಾ ನಟಿಸಿದ್ದಾರೆ.

    ಅಂದಹಾಗೆ, ಕನ್ನಡದ ‘ವಜ್ರಕಾಯ’ ಚಿತ್ರದ ಮೂಲಕ ನಭಾ ಪರಿಚಿತರಾದರು. ಶಿವಣ್ಣಗೆ ಹೀರೋಯಿನ್ ಜನಪ್ರಿಯತೆ ಗಳಿಸಿದರು. ಲೀ, ಸಾಹೇಬ ಸಿನಿಮಾದ ಬಳಿಕ ತೆಲುಗಿನಲ್ಲಿ ಬ್ಯುಸಿಯಾದರು.

  • ಕೈತುಂಬಾ ಅವಕಾಶವಿರುವಾಗಲೇ ನನಗೆ ಆಕ್ಸಿಡೆಂಟ್‌ ಆಯ್ತು: ನಭಾ ನಟೇಶ್

    ಕೈತುಂಬಾ ಅವಕಾಶವಿರುವಾಗಲೇ ನನಗೆ ಆಕ್ಸಿಡೆಂಟ್‌ ಆಯ್ತು: ನಭಾ ನಟೇಶ್

    ಜ್ರಕಾಯ, ಇಸ್ಮಾರ್ಟ್ ಶಂಕರ್ ಖ್ಯಾತಿಯ ನಟಿ ನಭಾ ನಟೇಶ್ (Nabha Natesh) ಮತ್ತೆ ಸಿನಿಮಾಗೆ ಕಮ್‌ಬ್ಯಾಕ್ ಮಾಡಿದ್ದಾರೆ. ‘ಡಾರ್ಲಿಂಗ್’ ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ 2 ವರ್ಷಗಳ ಹಿಂದೆ ತನಗೆ ಆದ ಆಕ್ಸಿಡೆಂಡ್ ಕುರಿತು ನಟಿ ಮಾತನಾಡಿದ್ದಾರೆ. ಕರಾಳ ದಿನಗಳ ನೆನೆದು ನಭಾ ಭಾವುಕರಾಗಿದ್ದಾರೆ.

    2 ವರ್ಷಗಳ ಹಿಂದೆ ನಟಿಗೆ ಅಪಘಾತದಲ್ಲಿ ಎಡಗೈ ಮತ್ತು ಎಡಭುಜಕ್ಕೆ ಪೆಟ್ಟು ಮಾಡಿಕೊಂಡರು. ಶಸ್ತ್ರಚಿಕಿತ್ಸೆಗೆ ಒಳಗಾದ ನಭಾ ಇದರಿಂದ ಚೇತರಿಸಿಕೊಳ್ಳಲು ಒಂದೂವರೆ ವರ್ಷ ಕಳೆಯಿತು. ಅಂದಿನ ಆ ದಿನ ಹೇಗಿತ್ತು? ಎಂದು ನಟಿ ವಿವರಿಸಿದರು. ಕೈ ತುಂಬಾ ಅವಕಾಶ ಇರುವ ಸಮಯದಲ್ಲಿಯೇ ನನಗೆ ಆಕ್ಸಿಡೆಂಟ್ ಆಯಿತು. ಆ ನಂತರ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಆಗ ನನ್ನ ಮನಸ್ಥಿತಿಯೇ ಸಂಪೂರ್ಣ ಬದಲಾಗಿ ಹೋಗಿತ್ತು. ಆಪರೇಷನ್ ಆದ ಹತ್ತು ದಿನಗಳ ನಂತರ ಶೂಟಿಂಗ್ ನಲ್ಲಿ ಭಾಗವಹಿಸಿದ್ದೆ ಆದರೆ ಅದರಿಂದ ಮತ್ತೆ ನನ್ನ ಆರೋಗ್ಯ ಹದಗೆಟ್ಟಿತ್ತು ಎಂದರು. ಆ ನಂತರ ನನಗೆ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದು ನಟಿ ಭಾವುಕರಾಗಿದ್ದಾರೆ.

    ನನ್ನ ದೇಹಕ್ಕೆ ಖಂಡಿತವಾಗಿಯೂ ವಿಶ್ರಾಂತಿ ಬೇಕು. ಆರೋಗ್ಯವಾಗಿದ್ದರೆ ಮಾತ್ರ ಏನು ಬೇಕಾದರೂ ಮಾಡಬಹುದು ಎಂದು ನನಗೆ ಅರಿವು ಆಗಿದ್ದು ಆಗಲೇ ಹೀಗಾಗಿಯೇ ಗ್ಯಾಪ್ ತೆಗೆದುಕೊಂಡು ಆರೋಗ್ಯದ ಕಡೆ ಹೆಚ್ಚೆಚ್ಚು ಗಮನ ವಹಿಸಿದೆ. ಅವಕಾಶಗಳನ್ನು ನಾನು ಮತ್ತೆ ಎದುರು ನೋಡುತ್ತಿದ್ದಾಗ ಸಿಕ್ಕ ಸಿನಿಮಾನೇ ಈ ‘ಡಾರ್ಲಿಂಗ್’ ಎಂದಿದ್ದಾರೆ. ಇದನ್ನೂ ಓದಿ:ಬೀದಿಯಲ್ಲಿ ಕುಡಿದು ತೂರಾಡಿದ ಉರ್ಫಿ ಜಾವೇದ್

    ಇನ್ನೂ ‘ಇಸ್ಮಾರ್ಟ್ ಶಂಕರ್’ ಅಂತಹ ಕಮರ್ಷಿಯಲ್ ಸಿನಿಮಾ ಮಾಡಿದ ನಂತರ, ‘ಡಾರ್ಲಿಂಗ್’ನಂತಹ ಪ್ರಯತ್ನಕ್ಕೆ ಮುಂದಾಗಿದ್ದೇಕೆ ಎಂದು ಅನೇಕರು ಪ್ರಶ್ನಿಸಿದ್ದರು. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಕಥೆಯೇ ಚಿತ್ರಕ್ಕೆ ಬಹುಮುಖ್ಯವಾದದ್ದು ಎಂದಿದ್ದಾರೆ. ನಿರ್ದೇಶಕ ಅಶ್ವಿನ್ ಅವರು ನನ್ನನ್ನು ಸಂಪರ್ಕಿಸಿದ ರೀತಿ ಮತ್ತು ಅವರು ನನ್ನ ಪಾತ್ರವನ್ನು ಹೆಣೆದ ರೀತಿ ಇಷ್ಟವಾಗಿ ಈ ಚಿತ್ರಕ್ಕೆ ನಾನು ಓಕೆ ಎಂದೆ. ನನ್ನ ಪಾತ್ರ ತುಂಬಾ ಡಿಫರೆಂಟ್‌ ಆಗಿದೆ. ನಿಮಗೆಲ್ಲ ಈ ಚಿತ್ರ ಗ್ಯಾರಂಟಿ ಇಷ್ಟವಾಗುತ್ತೆ ಎಂದು ನಭಾ ಭಾವುಕರಾಗಿಯೇ ಮಾತನಾಡಿದ್ದಾರೆ.

    ಅಂದಹಾಗೆ, ‘ಡಾರ್ಲಿಂಗ್’ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಭಾ ನಟಿಸಿದ್ದಾರೆ. ಜು.19ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಈ ಹಿಂದೆ ನಟಿಸಿರುವ ಸಿನಿಮಾಗಳಿಗಿಂತ ಈ ಚಿತ್ರ ಭಿನ್ನವಾಗಿದೆ.

  • ‘ಡಾರ್ಲಿಂಗ್’ ಎನ್ನುತ್ತಾ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟ ನಭಾ ನಟೇಶ್

    ‘ಡಾರ್ಲಿಂಗ್’ ಎನ್ನುತ್ತಾ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟ ನಭಾ ನಟೇಶ್

    ನ್ನಡದ ‘ವಜ್ರಕಾಯ’ ಬೆಡಗಿ ನಭಾ ನಟೇಶ್ (Nabha Natesh) ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಡಾರ್ಲಿಂಗ್ ಎನ್ನುತ್ತಾ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಆಕ್ಸಿಡೆಂಟ್‌ನಿಂದ ಚೇತರಿಸಿಕೊಂಡ ಬಳಿಕ ಹೊಸ ಚಿತ್ರದ ಮೂಲಕ ಬೆಳ್ಳಿಪರದೆಯಲ್ಲಿ ಮಿಂಚಲು ನಟಿ ರೆಡಿಯಾಗಿದ್ದಾರೆ.

    ನಟ ಪ್ರಿಯಾದರ್ಶಿಗೆ ನಾಯಕಿಯಾಗಿ ನಭಾ ಡಾರ್ಲಿಂಗ್ (Darling) ಎಂಬ ಸಿನಿಮಾ ಮಾಡಿದ್ದಾರೆ. ಸದ್ಯ ಚಿತ್ರದ ಪೋಸ್ಟರ್ ಲುಕ್, ಪ್ರೋಮೋ ಝಲಕ್‌ನಿಂದ ಡಾರ್ಲಿಂಗ್ ಸಿನಿಮಾ ಗಮನ ಸೆಳೆಯುತ್ತಿದೆ. ವಿಭಿನ್ನ ಪಾತ್ರದ ಮೂಲಕ ನಟಿ ಮತ್ತೆ ಕಮ್‌ ಬ್ಯಾಕ್ ಮಾಡಿದ್ದಾರೆ. ಈ ಚಿತ್ರವನ್ನು ‘ಹನುಮಾನ್’ ಚಿತ್ರದ ನಿರ್ಮಾಪಕ ನಿರಂಜನ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ:ದರ್ಶನ್ ಬೇಜಾರಿನಲ್ಲಿದ್ದಾರೆ- ಭೇಟಿಯ ಬಳಿಕ ಧನ್ವೀರ್ ರಿಯಾಕ್ಷನ್

    ಇದೊಂದೇ ಸಿನಿಮಾ ಅಲ್ಲ, ‘ಸ್ವಯಂಭು’ ಎಂಬ ಪ್ಯಾನ್ ಇಂಡಿಯಾ ಚಿತ್ರ ಕೂಡ ನಭಾ ಕೈಯಲ್ಲಿದೆ. ಈ ಸಿನಿಮಾದ ಕೆಲಸ ಕೂಡ ನಡೆಯುತ್ತಿದೆ. ನಿಖಿಲ್ ಸಿದ್ಧಾರ್ಥ್ ನಾಯಕಿಯಾಗಿ ನಭಾ ನಟಿಸಿದ್ದಾರೆ. ಇದನ್ನೂ ಓದಿ:ದುಬೈ ಮೂಲದ ಯೂಟ್ಯೂಬರ್ ಜೊತೆ ನಟಿ ಸುನೈನಾ ನಿಶ್ಚಿತಾರ್ಥ?

    ಅಂದಹಾಗೆ, ಕನ್ನಡದ ‘ವಜ್ರಕಾಯ’ ಚಿತ್ರದ ಮೂಲಕ ನಭಾ ಪರಿಚಿತರಾದರು. ಶಿವಣ್ಣಗೆ ಹೀರೋಯಿನ್ ಜನಪ್ರಿಯತೆ ಗಳಿಸಿದರು. ಲೀ, ಸಾಹೇಬ ಸಿನಿಮಾದ ಬಳಿಕ ತೆಲುಗಿನಲ್ಲಿ ಬ್ಯುಸಿಯಾದರು.

  • ಮತ್ತೆ ಬಣ್ಣ ಹಚ್ಚಿದ ವಜ್ರಕಾಯ ಬೆಡಗಿ: ಸ್ವಯಂಭುನಲ್ಲಿ ರಾಣಿಯಾದ ನಭಾ

    ಮತ್ತೆ ಬಣ್ಣ ಹಚ್ಚಿದ ವಜ್ರಕಾಯ ಬೆಡಗಿ: ಸ್ವಯಂಭುನಲ್ಲಿ ರಾಣಿಯಾದ ನಭಾ

    ತೆಲುಗು ನಟ ನಿಖಿಲ್ ಸಿದ್ದಾರ್ಥ್ (Nikhil Siddhartha) ನಟಿಸುತ್ತಿರುವ ಕ್ರೇಜಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಸ್ವಯಂಭು (Swayambhu) ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಸಹಸ್ರಮಾನಗಳ ಹಿಂದಿನ ಕಥೆಯನ್ನೊಳಗೊಂಡಿರುವ ಈ ಚಿತ್ರದ ಮೂಲಕ ವಜ್ರಕಾಯದ ಪಟಾಕ ಕಂಬ್ಯಾಕ್ ಮಾಡುತ್ತಿದ್ದಾರೆ. ಕನ್ನಡತಿ ನಭಾ ನಟೇಶ್ಗೆ (Nabha Natesh) 2023ರಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಈ ವೇಳೆ ಅವರು ಸರ್ಜರಿಗೂ ಒಳಗಾಗಬೇಕಾಯಿತು. ಈಗ ಸಂಪೂರ್ಣ ಚೇತರಿಕೆ ಕಂಡಿರುವ ಶೃಂಗೇರಿ ಸುಂದರಿ ಸ್ವಯಂಭು ಸಿನಿಮಾ ಮೂಲಕ ಬಣ್ಣದ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ.

    ಸ್ವಯಂಭು ಶೂಟಿಂಗ್ ಅಖಾಡಕ್ಕೆ ನಭಾ ಎಂಟ್ರಿ ಕೊಟ್ಟಿದ್ದಾರೆ. ಸಣ್ಣ ಝಲಕ್ ಮೂಲಕ ಚಿತ್ರತಂಡ ಆಕೆಯನ್ನು ಚಿತ್ರಪ್ರೇಮಿಗಳಿಗೆ ಪರಿಚಯಿಸಿದೆ. ರಾಣಿಯಂತೆ  ಕಂಗೊಳಿಸುತ್ತಿರುವ ನಭಾ ಲುಕ್ ರಿವೀಲ್ ಮಾಡಲಾಗಿದೆ. ಆದ್ರೆ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟು ಕೊಟ್ಟಿಲ್ಲ. ಶಿವಣ್ಣ ನಟನೆಯ ವಜ್ರಕಾಯ ಚಿತ್ರದ ಮೂಲಕ ಸಿನಿಮಾ ಲೋಕದಲ್ಲಿ  ಅದೃಷ್ಟ ಪರೀಕ್ಷೆಗಿಳಿದಿದ್ದ ನಭಾ, ಪೂರಿ ಜಗನ್ನಾಥ್ ನಿರ್ದೇಶನದ ಇಸ್ಮಾರ್ಟ್ ಶಂಕರ್ ಮೂಲಕ ಪ್ರಖ್ಯಾತಿ ಗಳಿಸಿದರು.

    ನಿಖಿಲ್ ನಾಯಕ ನಟನಾಗಿರುವ ಸ್ವಯಂಭು ಸಿನಿಮಾದಲ್ಲಿ ಸಂಯುಕ್ತ ಮೆನನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ತಮ್ಮ ಪಾತ್ರಕ್ಕಾಗಿ ಅವರು ತಯಾರಿಯಲ್ಲಿದ್ದಾರೆ. ಅಂದಹಾಗೇ ಭರತ್ ಕೃಷ್ಣಮಾಚಾರಿ ಸ್ವಯಂಭು ಆಕ್ಷನ್ ಕಟ್ ಹೇಳಿದ್ದಾರೆ.

    ಪಿಕ್ಸೆಲ್ ಸ್ಟುಡಿಯೋ ಮೂಲಕ ಭುವನ್ ಹಾಗೂ ಶ್ರೀಕರ್ ಚಿತ್ರ ನಿರ್ಮಾಣ ಮಾಡುತ್ತಿದ್ದು, ಟ್ಯಾಗೋರೆ ಮಧು ಪ್ರಸ್ತುತಪಡಿಸುತ್ತಿದ್ದಾರೆ. ಸ್ವಯಂಭೂ ಎಂದರೆ ಸ್ವಯಂ ಹುಟ್ಟು ಎಂದರ್ಥ. ಈ ಸಿನಿಮಾ ನಿಖಿಲ್ ಸಿದ್ದಾರ್ಥ್ ವೃತ್ತಿಜೀವನದ ಬಿಗ್ ಬಜೆಟ್ ಚಿತ್ರವಾಗಿದೆ. ಮನೋಜ್ ಪರಮಹಂಸ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ, ವಾಸುದೇವ್ ಮುನೆಪ್ಪಗರಿ ಚಿತ್ರಕ್ಕೆ ಸಂಭಾಷಣೆಯನ್ನು ನೀಡಿದ್ದಾರೆ.

  • ಆಕ್ಸಿಡೆಂಟ್ ನಂತರ ಮತ್ತೆ ನಟನೆಗೆ ‘ವಜ್ರಕಾಯ’ ಬೆಡಗಿ ಕಮ್‌ಬ್ಯಾಕ್

    ಆಕ್ಸಿಡೆಂಟ್ ನಂತರ ಮತ್ತೆ ನಟನೆಗೆ ‘ವಜ್ರಕಾಯ’ ಬೆಡಗಿ ಕಮ್‌ಬ್ಯಾಕ್

    ನ್ನಡತಿ ನಭಾ ನಟೇಶ್ (Nabha Natesh) ಅವರು ಟಾಲಿವುಡ್‌ನಲ್ಲಿ (Tollywood) ಗುರುತಿಸಿಕೊಳ್ತಿದ್ದಾರೆ. ಆಕ್ಸಿಡೆಂಟ್ ನಂತರ ಇದೀಗ ಮತ್ತೆ ಬಣ್ಣದ ಲೋಕಕ್ಕೆ ನಟಿ ಎಂಟ್ರಿ ಕೊಡುತ್ತಿದ್ದಾರೆ. ಬಂಪರ್ ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ. ಕೆರಿಯರ್ ಮುಗಿದೇ ಹೋಯ್ತು ಎನ್ನುವಾಗ ನಭಾಗೆ ಗೋಲ್ಡನ್ ಚಾನ್ಸ್ ಸಿಕ್ಕಿದೆ.

    ನಭಾ ನಟೇಶ್‌ಗೆ 2023ರಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಈ ವೇಳೆ ಅವರು ಸರ್ಜರಿಗೂ ಒಳಗಾಗಬೇಕಾಯಿತು. ಈಗ ಸಂಪೂರ್ಣ ಚೇತರಿಕೆ ಕಂಡಿರುವ ಅವರು ನಟನೆಗೆ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ನಿಖಿಲ್ ಸಿದ್ಧಾರ್ಥ್ (Nikhil Siddarth) ಅವರ 20ನೇ ಚಿತ್ರ ‘ಸ್ವಯಂಬು’ ಪ್ರಾಜೆಕ್ಟ್‌ನಲ್ಲಿ ನಭಾ ನಟೇಶ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇವರ ಜೊತೆ ಸಂಯುಕ್ತಾ ಮೆನನ್ ಕೂಡ ಇರಲಿದ್ದಾರೆ. ಇದನ್ನೂ ಓದಿ:ಕಮಲ್ ಹಾಸನ್, ರಜನಿಗೆ ವಾಟಾಳ್ ನಾಗರಾಜ್ ಎಚ್ಚರಿಕೆ

    ನಭಾ ನಟೇಶ್ (Nabha Natesh) ಅವರು ಮತ್ತೊಂದು ಮಹಿಳಾ ಪ್ರಧಾನ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಹನುಮಾನ್’ ನಿರ್ಮಾಪಕರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಭಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಇವೆರಡೂ ಸಿನಿಮಾಗಳು ನಭಾಗೆ ಕೆರಿಯರ್‌ನಲ್ಲಿ ಬಿಗ್ ಬ್ರೇಕ್ ಕೊಡುವ ಸಾಧ್ಯತೆ ಇದೆ.

    ಅಂದಹಾಗೆ, ಶೃಂಗೇರಿ ಬೆಡಗಿ ನಭಾ ನಟೇಶ್ ‘ವಜ್ರಕಾಯ’ (Vajrakaya) ಚಿತ್ರದಲ್ಲಿ ನಟಿಸಿದ್ದರು. ಶಿವರಾಜ್‌ಕುಮಾರ್‌ಗೆ ನಾಯಕಿಯಾಗಿ ಮಿಂಚಿದ್ದರು. ತದನಂತರ ತೆಲುಗಿನಲ್ಲಿ ನಟಿ ಹೈಲೆಟ್ ಆದರು.

  • ಫ್ಲೋರಲ್ ಡ್ರೆಸ್ ನಲ್ಲಿ ನಭಾ ನಟೇಶ್ ಸಖತ್ ಹಾಟ್ ಹಾಟ್

    ಫ್ಲೋರಲ್ ಡ್ರೆಸ್ ನಲ್ಲಿ ನಭಾ ನಟೇಶ್ ಸಖತ್ ಹಾಟ್ ಹಾಟ್

    ‘ವಜ್ರಕಾಯ’ (Vajrakaya) ಸಿನಿಮಾ ಮೂಲಕ ನಭಾ ನಟೇಶ್ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟರು. ಬಳಿಕ ಟಾಲಿವುಡ್‌ನತ್ತ ನಭಾ ಮುಖ ಮಾಡಿದ್ದರು. ಆಕ್ಸಿಡೆಂಟ್ ಬಳಿಕ ವಜ್ರಕಾಯ ಸುಂದರಿಗೆ ಅವಕಾಶ ಕಮ್ಮಿಯಾಗಿದೆ. ಸದ್ಯ ನಯಾ ಫೋಟೋಶೂಟ್‌ನಿಂದ ನಭಾ ಮಿಂಚ್ತಿದ್ದಾರೆ.

    ಫ್ಲೋರಲ್ ಡ್ರೆಸ್ ನಲ್ಲಿ ಕ್ಯೂಟ್ ಆಗಿ ಕಾಣುತ್ತಿರುವ ನಭಾ, ಫುಲ್ ಸ್ಲೀವ್ ಕಟೌಟ್ ಡ್ರೆಸ್ ನಲ್ಲಿ ಮಿರಿಮಿರಿ ಮಿಂಚುತ್ತಿದ್ದಾರೆ. ಕಾಸ್ಟ್ಯೂಮ್ ವಿನ್ಯಾಸವೇ ಹೊಸದಾಗಿದೆ. ಹಾಗಾಗಿ ನೋಡುಗರ ಗಮನ ಸೆಳೆಯುತ್ತಿದೆ.  ಇದನ್ನೂ ಓದಿ:‘ಸಂಜೆ ಮೇಲೆ ಸುಮ್ನೆ ಹಂಗೆ’ ಅಂತಿದ್ದಾರೆ ನೀನಾಸಂ ಸತೀಶ್: ಮ್ಯಾಟ್ನಿ ಹಾಡು ವೈರಲ್

    ಇಂಡಸ್ಟ್ರಿಯಲ್ಲಿ ಶ್ರೀಲೀಲಾ (Sreeleela), ರಶ್ಮಿಕಾ ಮಂದಣ್ಣ(Rashmika Mandanna), ಮೃಣಾಲ್ ಜಮಾನ ನಡೆಯುತ್ತಿದೆ. ಇದರ ಮಧ್ಯೆ ‘ಇಸ್ಮಾರ್ಟ್ ಶಂಕರ್’ (Ismart Shankar) ಬ್ಯೂಟಿ ನಭಾ ಕಡೆ ನಿರ್ಮಾಪಕರು ಕ್ಯಾರೇ ಅನ್ನುತ್ತಿಲ್ಲ. ಕನ್ನಡದ ವಜ್ರಕಾಯ ಚಿತ್ರ ಶಿವಣ್ಣಗೆ ನಾಯಕಿಯಾಗಿ ಅದ್ದೂರಿಯಾಗಿ ನಭಾ ನಟೇಶ್ (Nabha Natesh) ಎಂಟ್ರಿ ಕೊಟ್ಟರು. ಬಳಿಕ ರಾಮ್ ಪೋತಿನೇನಿ, ರವಿತೇಜಾಗೆ ನಾಯಕಿಯಾಗಿ ನಭಾ ಮಿಂಚಿದ್ದರು.

    ಶಿವರಾಜ್‌ಕುಮಾರ್‌ಗೆ (Shivarajkumar) ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಪರಿಚಿತರಾದ ನಟಿ ನಭಾ ಅವರು ಮೊದಲ ಚಿತ್ರದಲ್ಲೇ ತನ್ನ ಅಭಿನಯದ ಮೂಲಕ ಸೈ ಎನಿಸಿಕೊಂಡರು. ಕನ್ನಡದ ಒಂದೆರೆಡು ಚಿತ್ರಗಳಲ್ಲಿ ನಟಿಸಿದ ಈ ಶೃಂಗೇರಿ ಬೆಡಗಿ, ಟಾಲಿವುಡ್‌ನತ್ತ ಮುಖ ಮಾಡಿದ್ರು.

    ‘ಇಸ್ಮಾರ್ಟ್ ಶಂಕರ್’ ಚಿತ್ರದಲ್ಲಿ ರಾಮ್ ಪೋತಿನೇನಿಗೆ ನಭಾ ಜೋಡಿಯಾಗಿ ನಟಿಸಿ ಗಮನ ಸೆಳೆದಿದ್ದರು. ಇದಾದ ಬಳಿಕ ‘ಡಿಸ್ಕೋ ರಾಜಾ’ ಸಿನಿಮಾದಲ್ಲಿ ರವಿ ತೇಜಾ(Ravi Teja) ಜೊತೆ ನಟಿಸಿದ್ದರು. ಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರೋ ನಟಿ ನಭಾ ಅವರು ಹೊಸ ಬಗೆಯ ಪಾತ್ರದ ಹುಡುಕಾಟದಲ್ಲಿದ್ದಾರೆ.

    ಕಳೆದ ವರ್ಷ ತಮಗೆ ಆದ ಆಕ್ಸಿಡೆಂಟ್‌ನಿಂದ ಈಗ ಚೇತರಿಕೊಂಡಿದ್ದೇನೆ ಎಂದು ನಟಿ ನಭಾ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಈ ಮೂಲಕ ಮತ್ತೆ ಸಿನಿಮಾ ಮಾಡೋದಾಗಿ ಹೇಳಿದ್ದರು. ಸಾಲು ಸಾಲು ಫೋಟೋಶೂಟ್‌ನಿಂದ ನಭಾ ಹಾಟ್ ಪೋಸ್ ಕೊಡ್ತಿದ್ದಾರೆ. ಆದರೆ ಅವರಿಗೆ ಯಾವುದೇ ಸಿನಿಮಾ ಚಾನ್ಸ್ ಸಿಗುತ್ತಿಲ್ಲ.

    ಸದ್ಯ ಬಿಳಿ ಬಣ್ಣದ ಉಡುಗೆಯಲ್ಲಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಹಾಟ್ ಲುಕ್‌ನಿಂದ ಪಡ್ಡೆಹುಡುಗರ ದಿಲ್ ಕದ್ದಿದ್ದಾರೆ. ಇನ್ನಾದರೂ ನಭಾಗೆ ಸಿನಿಮಾ ಚಾನ್ಸ್ ಸಿಗುತ್ತಾ? ಶ್ರೀಲೀಲಾ, ರಶ್ಮಿಕಾ, ಮೃಣಾಲ್‌ಗೆ ನಭಾ ಸಿನಿಮಾ ಚಾನ್ಸ್ ಗಿಟ್ಟಿಸಿಕೊಂಡು ಠಕ್ಕರ್ ಕೊಡ್ತಾರಾ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.

     

    2021ರಲ್ಲಿ ಕಡೆಯದಾಗಿ ನಿತಿನ್ ನಾಯಕಿಯಾಗಿ ‘ಮೇಸ್ಟೋ’ ಸಿನಿಮಾದಲ್ಲಿ ನಟಿಸಿದ್ದರು. ನಿತಿನ್, ತಮನ್ನಾ ಜೊತೆ ನಭಾ ನಟೇಶ್ ಕೂಡ ಸಾಥ್ ನೀಡಿದ್ದರು. 2 ವರ್ಷಗಳಿಂದ ನಭಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಹೀಗಿರುವಾಗ ಮತ್ತೆ ಕನ್ನಡ ಸಿನಿಮಾಗೆ ಕಮ್‌ ಬ್ಯಾಕ್‌ ಆಗ್ತಾರಾ ಕಾಯಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಭಾ ನಟೇಶ್ ಹಾಟ್ ಅವತಾರ- ಆದ್ರೂ ಸಿಗದ ಸಿನಿಮಾ ಅವಕಾಶ

    ನಭಾ ನಟೇಶ್ ಹಾಟ್ ಅವತಾರ- ಆದ್ರೂ ಸಿಗದ ಸಿನಿಮಾ ಅವಕಾಶ

    ‘ವಜ್ರಕಾಯ’ (Vajrakaya) ಸಿನಿಮಾ ಮೂಲಕ ನಭಾ ನಟೇಶ್ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟರು. ಬಳಿಕ ಟಾಲಿವುಡ್‌ನತ್ತ ನಭಾ ಮುಖ ಮಾಡಿದ್ದರು. ಆಕ್ಸಿಡೆಂಟ್ ಬಳಿಕ ವಜ್ರಕಾಯ ಸುಂದರಿಗೆ ಅವಕಾಶ ಕಮ್ಮಿಯಾಗಿದೆ. ಸದ್ಯ ನಯಾ ಫೋಟೋಶೂಟ್‌ನಿಂದ ನಭಾ ಮಿಂಚ್ತಿದ್ದಾರೆ.

    ಇಂಡಸ್ಟಿçಯಲ್ಲಿ ಶ್ರೀಲೀಲಾ (Sreeleela), ರಶ್ಮಿಕಾ ಮಂದಣ್ಣ(Rashmika Mandanna), ಮೃಣಾಲ್ ಜಮಾನ ನಡೆಯುತ್ತಿದೆ. ಇದರ ಮಧ್ಯೆ ‘ಇಸ್ಮಾರ್ಟ್ ಶಂಕರ್’ (Ismart Shankar) ಬ್ಯೂಟಿ ನಭಾ ಕಡೆ ನಿರ್ಮಾಪಕರು ಕ್ಯಾರೇ ಅನ್ನುತ್ತಿಲ್ಲ. ಕನ್ನಡದ ವಜ್ರಕಾಯ ಚಿತ್ರ ಶಿವಣ್ಣಗೆ ನಾಯಕಿಯಾಗಿ ಅದ್ದೂರಿಯಾಗಿ ನಭಾ ನಟೇಶ್ (Nabha Natesh) ಎಂಟ್ರಿ ಕೊಟ್ಟರು. ಬಳಿಕ ರಾಮ್ ಪೋತಿನೇನಿ, ರವಿತೇಜಾಗೆ ನಾಯಕಿಯಾಗಿ ನಭಾ ಮಿಂಚಿದ್ದರು.

    ಕಳೆದ ವರ್ಷ ತಮಗೆ ಆದ ಆಕ್ಸಿಡೆಂಟ್‌ನಿಂದ ಈಗ ಚೇತರಿಕೊಂಡಿದ್ದೇನೆ ಎಂದು ನಟಿ ನಭಾ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಈ ಮೂಲಕ ಮತ್ತೆ ಸಿನಿಮಾ ಮಾಡೋದಾಗಿ ಹೇಳಿದ್ದರು. ಸಾಲು ಸಾಲು ಫೋಟೋಶೂಟ್‌ನಿಂದ ನಭಾ ಹಾಟ್ ಪೋಸ್ ಕೊಡ್ತಿದ್ದಾರೆ. ಆದರೆ ಅವರಿಗೆ ಯಾವುದೇ ಸಿನಿಮಾ ಚಾನ್ಸ್ ಸಿಗುತ್ತಿಲ್ಲ. ಇದನ್ನೂ ಓದಿ:ಈ ನಟಿಯರಿಂದ ರಶ್ಮಿಕಾ, ಪೂಜಾ ಹೆಗ್ಡೆ, ಕೃತಿ ಶೆಟ್ಟಿ ಆಫರ್‌ಗೆ ಬಿತ್ತು ಕತ್ತರಿ

    ಸದ್ಯ ಬಿಳಿ ಬಣ್ಣದ ಉಡುಗೆಯಲ್ಲಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಹಾಟ್ ಲುಕ್‌ನಿಂದ ಪಡ್ಡೆಹುಡುಗರ ದಿಲ್ ಕದ್ದಿದ್ದಾರೆ. ಇನ್ನಾದರೂ ನಭಾಗೆ ಸಿನಿಮಾ ಚಾನ್ಸ್ ಸಿಗುತ್ತಾ? ಶ್ರೀಲೀಲಾ, ರಶ್ಮಿಕಾ, ಮೃಣಾಲ್‌ಗೆ ನಭಾ ಸಿನಿಮಾ ಚಾನ್ಸ್ ಗಿಟ್ಟಿಸಿಕೊಂಡು ಠಕ್ಕರ್ ಕೊಡ್ತಾರಾ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.

    2021ರಲ್ಲಿ ಕಡೆಯದಾಗಿ ನಿತಿನ್ ನಾಯಕಿಯಾಗಿ ‘ಮೇಸ್ಟೋ’ ಸಿನಿಮಾದಲ್ಲಿ ನಟಿಸಿದ್ದರು. ನಿತಿನ್, ತಮನ್ನಾ ಜೊತೆ ನಭಾ ನಟೇಶ್ ಕೂಡ ಸಾಥ್ ನೀಡಿದ್ದರು. 2 ವರ್ಷಗಳಿಂದ ನಭಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಹೀಗಿರುವಾಗ ಮತ್ತೆ ಕನ್ನಡ ಸಿನಿಮಾಗೆ ಕಮ್‌ ಬ್ಯಾಕ್‌ ಆಗ್ತಾರಾ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿನಿಮಾ ಚಾನ್ಸ್‌ಗಾಗಿ ನಭಾ ಗ್ಲ್ಯಾಮರಸ್‌ ಫೋಟೋಶೂಟ್‌

    ಸಿನಿಮಾ ಚಾನ್ಸ್‌ಗಾಗಿ ನಭಾ ಗ್ಲ್ಯಾಮರಸ್‌ ಫೋಟೋಶೂಟ್‌

    ನ್ನಡದ ಬ್ಯೂಟಿ ನಭಾ ನಟೇಶ್ ಅವರು ‘ವಜ್ರಕಾಯ’ (Vajrakaya) ಸಿನಿಮಾ ಮೂಲಕ ಚಂದನವನಕ್ಕೆ ಪರಿಚಿತರಾದರು. ಬಳಿಕ ತೆಲುಗಿನಲ್ಲಿ ಬ್ಯುಸಿಯಾದ್ರು. ಸದ್ಯ ಫೋಟೋಶೂಟ್‌ನಲ್ಲಿ ಗ್ಲ್ಯಾಮರಸ್‌ ಆಗಿ ಮಿಂಚ್ತಿರೋ ನಭಾ ನಟೇಶ್ (Nabha Natesh) ಅವರು ಏನ್ಮಾಡ್ತಿದ್ದಾರೆ? ಯಾವ ಸಿನಿಮಾಗಳು ಅವರ ಕೈಯಲ್ಲಿದೆ. ಇದನ್ನೂ ಓದಿ:ತನ್ನ ಅವಳಿ ಮಕ್ಕಳಿಗೆ ‘ಪಠಾಣ್’ ಮತ್ತು ‘ಜವಾನ್’ ಹೆಸರಿಡುವೆ ಎಂದ ಶಾರುಖ್ ಅಭಿಮಾನಿ

    ಶಿವರಾಜ್‌ಕುಮಾರ್‌ಗೆ (Shivarajkumar) ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಪರಿಚಿತರಾದ ನಟಿ ನಭಾ ಅವರು ಮೊದಲ ಚಿತ್ರದಲ್ಲೇ ತನ್ನ ಅಭಿನಯದ ಮೂಲಕ ಸೈ ಎನಿಸಿಕೊಂಡರು. ಕನ್ನಡದ ಒಂದೆರೆಡು ಚಿತ್ರಗಳಲ್ಲಿ ನಟಿಸಿದ ಈ ಶೃಂಗೇರಿ ಬೆಡಗಿ, ಟಾಲಿವುಡ್‌ನತ್ತ ಮುಖ ಮಾಡಿದ್ರು.

    ‘ಇಸ್ಮಾರ್ಟ್ ಶಂಕರ್’ ಚಿತ್ರದಲ್ಲಿ ರಾಮ್ ಪೋತಿನೇನಿಗೆ ನಭಾ ಜೋಡಿಯಾಗಿ ನಟಿಸಿ ಗಮನ ಸೆಳೆದಿದ್ದರು. ಇದಾದ ಬಳಿಕ ‘ಡಿಸ್ಕೋ ರಾಜಾ’ ಸಿನಿಮಾದಲ್ಲಿ ರವಿ ತೇಜಾ(Ravi Teja) ಜೊತೆ ನಟಿಸಿದ್ದರು. ಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರೋ ನಟಿ ನಭಾ ಅವರು ಹೊಸ ಬಗೆಯ ಪಾತ್ರದ ಹುಡುಕಾಟದಲ್ಲಿದ್ದಾರೆ.

    ನಭಾ ನಟೇಶ್ ಅವರು ಕಳೆದ ವರ್ಷ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಹಾಗಾಗಿ ನಟಿ ಯಾವುದೇ ಸಿನಿಮಾ ಒಪ್ಪಿರಲಿಲ್ಲ. ಈಗ ಅಪಘಾತದಿಂದ ಅವರು ಚೇತರಿಕೊಂಡಿದ್ದಾರೆ. ಮತ್ತೆ ಸಿನಿಮಾ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಸೂಕ್ತ ಅವಕಾಶಕ್ಕಾಗಿ ನಭಾ ಕಾಯ್ತಿದ್ದಾರೆ.

    ಅಪಘಾತದ ಬಳಿಕ ಖಾಲಿ ಕುಳಿತಿದ್ದ ನಟಿ ಗುಣಮುಖರಾದ ಮೇಲೂ ಅವಕಾಶ ಸಿಗುತ್ತಿಲ್ಲ. ಸಿನಿಮಾ ಚಾನ್ಸ್‌ಗಾಗಿ ನಭಾ ಬಗೆ ಬಗೆಯ ರೀತಿಯಲ್ಲಿ ಬೋಲ್ಡ್ ಫೋಟೋಶೂಟ್ ಮಾಡಿಸುತ್ತಿದ್ದಾರೆ. ಸದ್ಯ ಸೌತ್ ಸಿನಿಮಾರಂಗದಲ್ಲಿ ರಶ್ಮಿಕಾ, ಶ್ರೀಲೀಲಾ, ಕೃತಿ ಶೆಟ್ಟಿ ಅವರ ಮೂವಿ ಮೇನಿಯಾ ಜೋರಾಗಿದೆ. ಇದರ ನಡುವೆ ನಭಾಗೆ ಒಂದೊಳ್ಳೆಯ ಅವಕಾಶ ಸಿಕ್ಕಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ತಾರಾ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೀರೆಯುಟ್ಟು ಮಿಂಚಿದ `ವಜ್ರಕಾಯ’ ನಟಿ ನಭಾ ನಟೇಶ್

    ಸೀರೆಯುಟ್ಟು ಮಿಂಚಿದ `ವಜ್ರಕಾಯ’ ನಟಿ ನಭಾ ನಟೇಶ್

    ನ್ನಡತಿ ನಭಾ ನಟೇಶ್ (Nabha Natesh) ಅವರು ಅಪಘಾತದಿಂದ ಚೇತರಿಕೊಂಡ ನಂತರ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗಿದ್ದಾರೆ. ಹೊಸ ಬಗೆಯ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ. ಈಗ ಸೀರೆಯುಟ್ಟು ಚೆಂದದ ಫೋಟೋಶೂಟ್ ಮಾಡಿಸಿ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರಾದ ನಟ ಅನಂತ್ ನಾಗ್

    ಕನ್ನಡದ `ವಜ್ರಕಾಯ’ (Vajrakaya) ಸಿನಿಮಾ ಮೂಲಕ ಚಿತ್ರರಂಗಕ್ಕೆ ಲಗ್ಗೆ ಶೃಂಗೇರಿ ಬೆಡಗಿ ನಭಾ ಈಗ ಟಾಲಿವುಡ್‌ನಲ್ಲಿ (Tollywood) ಛಾಪು ಮೂಡಿಸುತ್ತಿದ್ದಾರೆ. ರಾಮ್ ಪೊಥಿನೆನಿ, ನಟ ನಿತಿನ್, ರವಿ ತೇಜಾ ಹೀಗೆ ಸ್ಟಾರ್ ನಟರಿಗೆ ನಭಾ ನಾಯಕಿಯಾಗಿ ನಟಿಸಿದ್ದಾರೆ. ಈಗ ಹೊಸ ಬಗೆಯ ಫೋಟೋಶೂಟ್ ಮಾಡಿಸುವ ಮೂಲಕ ಹೊಸ ಕಥೆಯ ಹುಡುಕಾಟದಲ್ಲಿದ್ದಾರೆ.

    ನಟಿ ನಭಾ ಬಿಳಿ ಬಣ್ಣದ ಸೀರೆಗೆ ಪಿಂಕ್ ಕಲರ್ ಬ್ಲೌಸ್ ಧರಿಸಿ ಮಿರ ಮಿರ ಎಂದು ಮಿಂಚಿದ್ದಾರೆ. ಹಚ್ಚ ಹಸಿರಿನ ಪರಿಸರ ಮಧ್ಯೆ ನಟಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ನಟಿಯ ನ್ಯೂ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.

     

    View this post on Instagram

     

    A post shared by Nabha Natesh (@nabhanatesh)

    ಕಳೆದ ವರ್ಷ ಅಂತ್ಯದಲ್ಲಿ ನಭಾ ನಟೇಶ್‌ಗೆ (Nabha Natesh) ಅಪಘಾತವಾಗಿತ್ತು. ತಾವು ಚೇತರಿಸಿಕೊಂಡಿರುವುದಾಗಿ, ಮತ್ತೆ ಸಿನಿಮಾಗೆ ಬರುವ ಬಗ್ಗೆ ಅಧಿಕೃತ ಪೋಸ್ಟ್ ಮೂಲಕ ನಭಾ ತಿಳಿಸಿದ್ದರು. ಮತ್ತೆ ಬಣ್ಣ ಹಚ್ಚಲು ನಭಾ ತೆರೆಮರೆಯಲ್ಲಿ ಸಖತ್ ತಯಾರಿ ಮಾಡುತ್ತಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k