Tag: ನಫ್ತಾಲಿ ಬೆನೆಟ್

  • ರಷ್ಯಾ ವಿದೇಶಾಂಗ ಸಚಿವನ ವಿವಾದಿತ ಹೇಳಿಕೆ – ಇಸ್ರೇಲ್ ಪ್ರಧಾನಿಗೆ ಪುಟಿನ್ ಕ್ಷಮೆ

    ರಷ್ಯಾ ವಿದೇಶಾಂಗ ಸಚಿವನ ವಿವಾದಿತ ಹೇಳಿಕೆ – ಇಸ್ರೇಲ್ ಪ್ರಧಾನಿಗೆ ಪುಟಿನ್ ಕ್ಷಮೆ

    ಮಾಸ್ಕೋ: ರಷ್ಯಾದ ವಿದೇಶಾಂಗ ಸಚಿವ ಸರ್ಗೇಯ್ ಲಾವ್ರೋನ ವಿವಾದಿತ ಹೇಳಿಕೆಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌ಗೆ ಕ್ಷಮೆ ಕೋರಿದ್ದಾರೆ.

    ನಫ್ತಾಲಿ ಬೆನೆಟ್ ಉಕ್ರೇನ್ ಮೇಲಿನ ತಮ್ಮ ಕಾರ್ಯಾಚರಣೆ ಕುರಿತು ವಿವರಿಸುವ ಸಂದರ್ಭ ಹಿಟ್ಲರ್ ಯಹೂದಿ ಪರಂಪರೆಯನ್ನು ಹೊಂದಿದ್ದ ಎಂದು ವಿವಾದಿತ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ಸಂಬಂಧ ಹದಗೆಡಬಾರದೆಂದು ಪುಟಿನ್ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ: ನಮಗೆ ನಿಮ್ಮ ಸಲಹೆ ಬೇಡ: ನೆದರ್ಲೆಂಡ್‌ಗೆ ತಿರುಗೇಟು ನೀಡಿದ ಭಾರತ

    ಸರ್ಗೇಯ್ ಲಾವ್ರೋ ಸಂದರ್ಶನವೊಂದರಲ್ಲಿ ಯುದ್ಧದ ಬಗ್ಗೆ ರಷ್ಯಾದ ನಿಲುವನ್ನು ವಿವರಿಸುತ್ತಿರುವಾಗ ಹಿಟ್ಲರ್‌ನಲ್ಲಿ ಯಹೂದಿಗಳ ರಕ್ತವಿತ್ತು ಎಂದು ವಿವಾದಿತ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆಗೆ ಇಸ್ರೇಲ್ ಸೇರಿದಂತೆ ಹಲವಾರು ಪಾಶ್ಚಿಮಾತ್ಯ ದೇಶಗಳು ಲಾವ್ರೋ ಹೇಳಿಕೆಯನ್ನು ಖಂಡಿಸಿದ್ದವು. ಇದನ್ನೂ ಓದಿ: ಟ್ವಿಟ್ಟರ್‌ಗೆ ಎಲಾನ್‌ ಮಸ್ಕ್‌ ತಾತ್ಕಾಲಿಕ CEO?

    ಇಸ್ರೇಲ್ ತನ್ನ 74ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬೆನೆಟ್ ಹಾಗೂ ಪುಟಿನ್ ನಡುವೆ ಮಾತುಕತೆ ನಡೆದಿದ್ದು, ಈ ವೇಳೆ ಪುಟಿನ್ ಕ್ಷಮೆ ಕೋರಿದ್ದಾರೆ. ರಷ್ಯಾ ಹಾಗೂ ಇಸ್ರೇಲ್ ಉತ್ತಮ ಸಂಬಂಧ ಹೊಂದಿದ್ದು, ಬೆನೆಟ್ ಮಾಸ್ಕೋ ಪ್ರವಾಸದಲ್ಲಿ ಉಕ್ರೇನ್ ಮೇಲಿನ ಯುದ್ಧವನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ.

  • ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ರದ್ದು – ಸರ್ಕಾರಕ್ಕೆ ಮಾಹಿತಿ ರವಾನೆ

    ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ರದ್ದು – ಸರ್ಕಾರಕ್ಕೆ ಮಾಹಿತಿ ರವಾನೆ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ರಾಜ್ಯ ಪ್ರವಾಸ ಏಪ್ರಿಲ್ 5ರಂದು ನಿಗದಿಯಾಗಿತ್ತು. ಇದೀಗ ರಾಜ್ಯ ಪ್ರವಾಸ ರದ್ದುಗೊಂಡಿದೆ.

    ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ರಾಜ್ಯ ಪ್ರವಾಸಕ್ಕೆ ದಿನ ನಿಗದಿಯಾಗಿತ್ತು. ಇದೀಗ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರಿಗೆ ಕೋವಿಡ್ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ಮೋದಿ ರಾಜ್ಯ ಭೇಟಿ ರದ್ದುಗೊಳಿಸಲಾಗಿದೆ ಎಂದು ಪ್ರಧಾನಿ ಕಚೇರಿಯಿಂದ ಕರ್ನಾಟಕ ಸರ್ಕಾರಕ್ಕೆ ಮಾಹಿತಿ ರವಾನೆಯಾಗಿದೆ. ಇದನ್ನೂ ಓದಿ: ಏಪ್ರಿಲ್‍ನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಇಸ್ರೇಲ್ ಪ್ರಧಾನಿ

    ಇಸ್ರೇಲ್ ಪ್ರಧಾನಿ ಬೆನೆಟ್ ಜೊತೆಗೆ ಮೋದಿ, ಏಪ್ರಿಲ್ 5 ರಂದು ಕರ್ನಾಟಕದಲ್ಲಿ 3 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನಿರ್ಧರಿಸಲಾಗಿತ್ತು. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಲೋಕಾರ್ಪಣೆ, ಟಾಟಾ ಸಹಭಾಗಿತ್ವದಲ್ಲಿ ಮೇಲ್ದರ್ಜೆಗೇರಿಸಿದ 150 ಐಟಿಐ ಉದ್ಘಾಟನೆ ಮತ್ತು ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಶಂಕು ಸ್ಥಾಪನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳ ಬೇಕಿತ್ತು. ಇದೀಗ ಇದು ಮುಂದೂಡಲಾಗಿದೆ. ಇದನ್ನೂ ಓದಿ: ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ – ಬಿಎಸ್‍ವೈ ವಿರುದ್ಧ ಎಸಿಬಿಗೆ ದೂರು

  • ಏಪ್ರಿಲ್‍ನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಇಸ್ರೇಲ್ ಪ್ರಧಾನಿ

    ಏಪ್ರಿಲ್‍ನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಇಸ್ರೇಲ್ ಪ್ರಧಾನಿ

    ನವದೆಹಲಿ: ಇಂಡೋ-ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 30ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ.

    ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ 2022ರ ಏಪ್ರಿಲ್ 2ರಂದು ಭಾರತಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ನಫ್ತಾಲಿ ಬೆನೆಟ್ ಅವರು ವಿದೇಶಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ಭೇಟಿಯು ಎರಡು ದೇಶಗಳ ನಾಯಕರ ನಡುವಿನ ಪ್ರಮುಖ ಸಂಪರ್ಕವನ್ನು ಪುನರುಚ್ಚರಿಸುತ್ತದೆ ಮತ್ತು ಇಸ್ರೇಲ್ ಮತ್ತು ಭಾರತದ ನಡುವಿನ ಸಂಬಂಧಗಳ ಸ್ಥಾಪನೆಯ 30 ನೇ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಸೇನಾ ನೆಲೆಯಲ್ಲಿ ಭಾರೀ ಸ್ಫೋಟ

    ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಮೈತ್ರಿಯನ್ನು ಮುನ್ನಡೆಸುವುದು. ಬಲಪಡಿಸುವುದು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ ಎಂದಿದ್ದಾರೆ. ಬೆನೆಟ್ ಮತ್ತು ಮೋದಿ ಅವರು ನಾವೀನ್ಯತೆ, ಆರ್ಥಿಕತೆ, ಸಂಶೋಧನೆ ಮತ್ತು ಅಭಿವೃದ್ಧಿ, ಕೃಷಿ ಮತ್ತು ಹೆಚ್ಚಿನವು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಬಗ್ಗೆ ಚರ್ಚಿಸಲಿದ್ದಾರೆ. ಇದನ್ನೂ ಓದಿ: ಕುಲಪತಿಗಳ ಸರ್ಕಾರಿ ಬಂಗಲೆಗೆ ಬೇಕಾಬಿಟ್ಟಿ ಖರ್ಚು – ಕುಲಪತಿ ಮೇಲೆ ಗಂಭೀರ ಆರೋಪ