Tag: ನನ್ನರಸಿ ರಾಧೆ

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ನನ್ನರಸಿ ರಾಧೆ’ ನಟಿ ಕೌಸ್ತುಭ ಮಣಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ನನ್ನರಸಿ ರಾಧೆ’ ನಟಿ ಕೌಸ್ತುಭ ಮಣಿ

    ಕಿರುತೆರೆ ನಟಿ ಕೌಸ್ತುಭ ಮಣಿ (Kaustubha Mani) ಅದ್ಧೂರಿಯಾಗಿ ಇಂದು (ಏ.26) ಮದುವೆಯಾಗಿದ್ದಾರೆ. ಸಿದ್ಧಾಂತ್ ಸತೀಶ್ (Sidhanth Satish) ದಾಂಪತ್ಯ (Wedding) ಜೀವನಕ್ಕೆ ನಟಿ ಕಾಲಿಟ್ಟಿದ್ದಾರೆ. ಮದುವೆ ಸಂಭ್ರಮದಲ್ಲಿರುವ ನಟಿಗೆ ಅಭಿಮಾನಿಗಳು ಶುಭಕೋರಿದ್ದಾರೆ.

    ಕೌಸ್ತುಭ ಮದುವೆ ಫೋಟೋ ವೈರಲ್ ಆಗಿದ್ದು, ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ವರ ಸಿದ್ಧಾಂತ್ ಪಂಚೆ ಮತ್ತು ಶಲ್ಯ ಧರಿಸಿದ್ದಾರೆ. ನಟಿಯ ಮದುವೆಯಲ್ಲಿ ಕುಟುಂಬಸ್ಥರು, ಆಪ್ತರಷ್ಟೇ ಭಾಗಿಯಾಗಿದ್ದರು.

    ಪ್ರಿ ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಲಿಪ್‌ಲಾಕ್ ಫೋಟೋ ಶೇರ್ ಮಾಡುವ ಮೂಲಕ ಈ ಜೋಡಿ ಗಮನ ಸೆಳೆದಿತ್ತು. ಪುಟ್ಟ ವಿಮಾನದಲ್ಲಿ ರೊಮ್ಯಾಂಟಿಕ್ ಆಗಿ ಫೋಟೋಶೂಟ್ ಮಾಡಿಸಿದ್ದರು. ಇದನ್ನೂ ಓದಿ:ದ್ವೇಷದ ವಿರುದ್ಧ ಮತ ಹಾಕಿದ್ದೇನೆ: ನಟ ಪ್ರಕಾಶ್ ರೈ ವಿಡಿಯೋ ವೈರಲ್

    ಅಂದಹಾಗೆ, ಕೌಸ್ತುಭ ಮಣಿ ಅವರದ್ದು ಅರೇಂಜ್ ಮ್ಯಾರೇಜ್. ಸಿದ್ಧಾಂತ್ ಸತೀಶ್ ಅವರು ಸಾಪ್ಟ್ವೇರ್ ಡೆವಲಪರ್ ಆಗಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿದ್ಧಾಂತ್ ಅವರು ಕೆನಡಾದ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಿದ್ದರು. ಇತ್ತೀಚೆಗೆ ನಟಿಯ ಎಂಗೇಜ್‌ಮೆಂಟ್ ಅದ್ಧೂರಿಯಾಗಿ ನಡೆದಿತ್ತು.

    ನನ್ನರಸಿ ರಾಧೆ, ಗೌರಿ ಶಂಕರ ಸೀರಿಯಲ್‌ನಲ್ಲಿ ಕೌಸ್ತುಭ ನಟಿಸಿದ್ದಾರೆ. ಅರ್ಜುನ್ ಜನ್ಯ ನಿರ್ದೇಶನದ ’45’ ಸಿನಿಮಾದಲ್ಲಿ ಶಿವಣ್ಣ ಮತ್ತು ರಾಜ್ ಬಿ ಶೆಟ್ಟಿ ಜೊತೆ ನಟಿ ತೆರೆಹಂಚಿಕೊಂಡಿದ್ದಾರೆ.

  • ಲಿಪ್‌ಲಾಕ್ ಫೋಟೋ ಹಂಚಿಕೊಂಡ ಕೌಸ್ತುಭ ಮಣಿ

    ಲಿಪ್‌ಲಾಕ್ ಫೋಟೋ ಹಂಚಿಕೊಂಡ ಕೌಸ್ತುಭ ಮಣಿ

    ಕಿರುತೆರೆ ನಟಿ ಕೌಸ್ತುಭ ಮಣಿ (Kaustubha Mani) ಮನೆಯಲ್ಲಿ ಮದುವೆ (Wedding) ಸಂಭ್ರಮ ಮನೆ ಮಾಡಿದೆ. ಭಾವಿ ಪತಿ ಜೊತೆ ಲಿಪ್‌ಲಾಕ್ ಮಾಡುತ್ತಾ ರೊಮ್ಯಾಂಟಿಕ್ ಮೂಡ್‌ಗೆ ನಟಿ ಜಾರಿದ್ದಾರೆ. ಪ್ರಿ ವೆಡ್ಡಿಂಗ್ ಫೋಟೋಶೂಟ್ ಅನ್ನು ರೊಮ್ಯಾಂಟಿಕ್ ಆಗಿ ಮಾಡಿಸಿದ್ದಾರೆ. ಇಬ್ಬರ ಸುಂದರ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಕೌಸ್ತುಭ ಮಣಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಈಗಾಗಲೇ ಮೆಹೆಂದಿ ಶಾಸ್ತ್ರ ಕೂಡ ಜರುಗಿದೆ. ಸದ್ಯ ಪ್ರಿ ವೆಡ್ಡಿಂಗ್ ಶೂಟ್ ಅನ್ನು ಪುಟ್ಟ ವಿಮಾನದಲ್ಲಿ ಮಾಡಿಸಿದ್ದಾರೆ. ಲೈಟ್ ಬಣ್ಣದ ಧಿರಿಸಿನಲ್ಲಿ ಇಬ್ಬರೂ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ.

    ವಿಮಾನದ ಬಳಿ ಭಾವಿ ಪತಿ ಜೊತೆ ಲಿಪ್‌ಲಾಕ್ ಮಾಡಿರುವ ಫೋಟೋವನ್ನು ನಟಿ ಶೇರ್ ಮಾಡಿದ್ದಾರೆ. ಇಬ್ಬರ ಫೋಟೋಗೆ ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ಗಳನ್ನು ಶೇರ್ ಮಾಡಿದ್ದಾರೆ.‌ ಇದನ್ನೂ ಓದಿ:ಎರಡೂ ಕೈ ಮುರಿದುಕೊಂಡಿದ್ದ ನಟಿ ಮನೆಗೆ ವಾಪಸ್ಸು

    ಅಂದಹಾಗೆ, ಕೌಸ್ತುಭ ಮಣಿ ಅವರದ್ದು ಅರೇಂಜ್ ಮ್ಯಾರೇಜ್. ಸಿದ್ಧಾಂತ್ ಸತೀಶ್ ಅವರು ಸಾಪ್ಟ್‌ವೇರ್ ಡೆವಲಪರ್ ಆಗಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿದ್ಧಾಂತ್ ಅವರು ಕೆನಡಾದ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಿದ್ದರು. ಇತ್ತೀಚೆಗೆ ನಟಿಯ ಎಂಗೇಜ್‌ಮೆಂಟ್‌ ಅದ್ಧೂರಿಯಾಗಿ ನಡೆದಿತ್ತು.

    ನನ್ನರಸಿ ರಾಧೆ (Nanrasi Radhe), ಗೌರಿ ಶಂಕರ ಸೀರಿಯಲ್‌ನಲ್ಲಿ ಕೌಸ್ತುಭ ನಟಿಸಿದ್ದಾರೆ. ಅರ್ಜುನ್ ಜನ್ಯ ನಿರ್ದೇಶನದ ’45’ ಸಿನಿಮಾದಲ್ಲಿ ಶಿವಣ್ಣ ಮತ್ತು ರಾಜ್ ಬಿ ಶೆಟ್ಟಿ ಜೊತೆ ನಟಿ ತೆರೆಹಂಚಿಕೊಂಡಿದ್ದಾರೆ.

  • ‌’ನನ್ನರಸಿ ರಾಧೆ’ ನಟಿ ಕೌಸ್ತುಭ ಮಣಿ ಮದುವೆ ಡೇಟ್‌ ಫಿಕ್ಸ್

    ‌’ನನ್ನರಸಿ ರಾಧೆ’ ನಟಿ ಕೌಸ್ತುಭ ಮಣಿ ಮದುವೆ ಡೇಟ್‌ ಫಿಕ್ಸ್

    ಕಿರುತೆರೆ ಬ್ಯೂಟಿ ಕೌಸ್ತುಭ ಮಣಿ (Kaustubha Mani) ಅವರು ಇತ್ತೀಚೆಗೆ ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಮೂಲಕ ಪಡ್ಡೆಹುಡುಗರಿಗೆ ಶಾಕ್ ಕೊಟ್ಟಿದ್ದರು. ಇದೀಗ ನಟಿಯ ಮದುವೆ (Wedding) ಡೇಟ್ ಫಿಕ್ಸ್ ಆಗಿದೆ. ಏಪ್ರಿಲ್‌ನಲ್ಲಿ ಸಿದ್ಧಾಂತ್ ಸತೀಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ತಮ್ಮ ಬದುಕಿನ ಹೊಸ ಜರ್ನಿ ಶುರು ಮಾಡಲು ‘ನನ್ನರಸಿ ರಾಧೆ’ ನಟಿ ಎದುರುನೋಡ್ತಿದ್ದಾರೆ. ಗುರುಹಿರಿಯರ ಸಮ್ಮತಿಯ ಮೇರೆಗೆ ಮುಂದಿನ ತಿಂಗಳು ಹಸೆಮಣೆ ಏರೋದಕ್ಕೆ ರೆಡಿಯಾಗಿದ್ದಾರೆ. ಈ ಮದುವೆಗೆ ತಮ್ಮ ಕುಟುಂಬದ ಜೊತೆ ಆಪ್ತರು, ಸ್ನೇಹಿತರಿಗಷ್ಟೇ ಆಹ್ವಾನವಿರಲಿದೆ. ಮಾರ್ಚ್ ಮೊದಲ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಆಗಿರುವ ಬಗ್ಗೆ ನಟಿ ಗುಡ್ ನ್ಯೂಸ್ ಹಂಚಿಕೊಂಡಿದ್ದರು.

    ಇತ್ತೀಚೆಗೆ ‘ಗೌರಿ ಶಂಕರ’ ಎಂಬ ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. ಮದುವೆ ನಿಶ್ಚಯವಾಗಿದೆ ಎಂಬ ಕಾರಣಕ್ಕೆ ನಟಿ ಸೀರಿಯಲ್‌ನಿಂದ ಹೊರಬಂದಿದ್ದರು. ಈ ವಿಚಾರ ಫ್ಯಾನ್ಸ್‌ಗೆ ನಿರಾಸೆ ಮೂಡಿಸಿತ್ತು. ಇದನ್ನೂ ಓದಿ:ನಾಯಕಿಯ ಅಮ್ಮನ ಕಣ್ಣಲ್ಲಿ ಕಳೆಗಟ್ಟಿದ ಕೆರೆಬೇಟೆ!

    ‘ರಾಮಾಚಾರಿ 2.0’ ಸಿನಿಮಾದಲ್ಲಿ ನಾಯಕಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಗೆ ಜೋಡಿಯಾಗಿ ನಟಿಸಿದ್ದಾರೆ. ಶಿವಣ್ಣ, ಉಪೇಂದ್ರ, ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರದ ರಿಲೀಸ್ ಬಗ್ಗೆ ಮಾಹಿತಿ ಸಿಗಲಿದೆ.

  • ನಿಶ್ಚಿತಾರ್ಥ ಸಂಭ್ರಮದಲ್ಲಿ ಕೌಸ್ತುಭ ಮಣಿ

    ನಿಶ್ಚಿತಾರ್ಥ ಸಂಭ್ರಮದಲ್ಲಿ ಕೌಸ್ತುಭ ಮಣಿ

    ಕಿರುತೆರೆ ನಟಿ ಕೌಸ್ತುಭ ಮಣಿ (Kaustubha Mani) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಗೌರಿ ಶಂಕರ’ (Gowri Shankara) ಸೀರಿಯಲ್‌ನಿಂದ ಹೊರಬರುತ್ತಿದ್ದಂತೆ ನಟಿ ಎಂಗೇಜ್‌ಮೆಂಟ್ (Engagement) ಮಾಡಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ.

    ‘ನನ್ನರಸಿ ರಾಧೆ’ ಸೀರಿಯಲ್ ಮೂಲಕ ಟಿವಿ ಪರದೆಗೆ ರಾಧೆಯಾಗಿ ಪರಿಚಿತರಾದ ಕೌಸ್ತುಭ ಇದೀಗ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಸಿದ್ಧಾಂತ್ ಸತೀಶ್ ಎಂಬುವವರ ಜೊತೆ ನಿಶ್ಚಿತಾರ್ಥ ನಡೆದಿದೆ. ಇದೀಗ ಮದುವೆಯಾಗುವ ಹುಡುಗನ ಜೊತೆ ಚೆಂದದ ಫೋಟೋಶೂಟ್ ಶೇರ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.

    ಇತ್ತೀಚೆಗೆ ‘ಗೌರಿ ಶಂಕರ’ ಎಂಬ ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. ಮದುವೆ ನಿಶ್ಚಯವಾಗಿದೆ ಎಂಬ ಕಾರಣಕ್ಕೆ ನಟಿ ಸೀರಿಯಲ್‌ನಿಂದ ಹೊರಬಂದಿದ್ದರು. ಈ ವಿಚಾರ ಫ್ಯಾನ್ಸ್‌ಗೆ ನಿರಾಸೆ ಮೂಡಿಸಿತ್ತು. ಇದನ್ನೂ ಓದಿ:ರವಿಚಂದ್ರನ್ ನಟನೆಯ ಹೊಸ ಸಿನಿಮಾದ ಪೋಸ್ಟರ್ ರಿಲೀಸ್

    ‘ರಾಮಾಚಾರಿ 2.0’ ಸಿನಿಮಾದಲ್ಲಿ ನಾಯಕಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಗೆ ಜೋಡಿಯಾಗಿ ನಟಿಸಿದ್ದಾರೆ. ಶಿವಣ್ಣ, ಉಪೇಂದ್ರ, ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರದ ರಿಲೀಸ್ ಬಗ್ಗೆ ಮಾಹಿತಿ ಸಿಗಲಿದೆ.

  • ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಬಿಗ್ ಬಾಸ್’ ತೇಜಸ್ವಿನಿ ಪ್ರಕಾಶ್

    ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಬಿಗ್ ಬಾಸ್’ ತೇಜಸ್ವಿನಿ ಪ್ರಕಾಶ್

    ಸ್ಯಾಂಡಲ್‌ವುಡ್ (Sandalwood) ನಟಿ ತೇಜಸ್ವಿನಿ ಪ್ರಕಾಶ್ (Tejaswini Prakash) ಅವರು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮನೆಗೆ ಹೊಸ ಅತಿಥಿ ಆಗಮನ ಆಗುತ್ತಿರೋ ಸಂಭ್ರಮದಲ್ಲಿದ್ದಾರೆ. ಈ ಗುಡ್ ನ್ಯೂಸ್ ಬಗ್ಗೆ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಪನಿ ವರ್ಮಾ ಜೊತೆ ತೇಜಸ್ವಿನಿ ಕಳೆದ ವರ್ಷ ಮಾರ್ಚ್ 20ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆ ಜರುಗಿತ್ತು. ಮದುವೆಯಾಗಿ 1 ವರ್ಷ ಕಳೆದಿದ್ದು, ಇದೀಗ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಮಸಣದ ಮಕ್ಕಳು, ಗಜ(Gaja), ಈ ಪ್ರೀತಿ ಏಕೆ ಭೂಮಿ ಮೇಲಿದೆ, ಸವಿ ಸವಿ ನೆನಪು, ಬಂಧು ಬಳಗ, ಅರಮನೆ, ಜೊತೆಯಾಗಿ ಹಿತವಾಗಿ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ವಿಜಯ್ ನಟನೆಯ ‘ಲಿಯೋ’ ಚಿತ್ರದ ಕನ್ನಡ ಪೋಸ್ಟರ್ ಬಿಡುಗಡೆ

    2017ರಲ್ಲಿ ಕನ್ನಡದ ಬಿಗ್ ಬಾಸ್ ಶೋನಲ್ಲಿ (Bigg Boss Kannada) ಕಾಣಿಸಿಕೊಂಡಿದ್ದರು. ಬಳಿಕ ‘ನನ್ನರಸಿ ರಾಧೆ’ ಸೀರಿಯಲ್‌ನಲ್ಲಿ ಲಾವಣ್ಯ ಎಂಬ ಪಾತ್ರದಲ್ಲಿ ವಿಲನ್ ಆಗಿ ಬಣ್ಣ ಹಚ್ಚಿದ್ದರು. ಈ ಸೀರಿಯಲ್ ತೇಜಸ್ವಿನಿ ನಟಿಸಿದ ಕೊನೆಯ ಪ್ರಾಜೆಕ್ಟ್ ಆಗಿದೆ. ಸದ್ಯ ವೈಯಕ್ತಿಕ ಜೀವನದಲ್ಲಿ ನಟಿ ಬ್ಯುಸಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ನನ್ನರಸಿ ರಾಧೆ’ ನಟಿ ಸಹನಾ ಶೆಟ್ಟಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ನನ್ನರಸಿ ರಾಧೆ’ ನಟಿ ಸಹನಾ ಶೆಟ್ಟಿ

    ಕಿರುತೆರೆಯ ಜನಪ್ರಿಯ ಧಾರಾವಾಹಿ ‘ನನ್ನರಸಿ ರಾಧೆ’ (Nanarasi Radhe) ಖ್ಯಾತಿಯ ಸಹನಾ ಶೆಟ್ಟಿ (Sahana Shetty)  ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಸಹನಾ ಮದುವೆಗೆ ಟಿವಿ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ:ಮಕ್ಕಳು ಜನಿಸಿದಾಗ ಪ್ರೇಮ್ ಪರಿಸ್ಥಿತಿ ಹೇಗಿತ್ತು? ಕಷ್ಟದ ದಿನಗಳ ಬಗ್ಗೆ ನಟನ ಮಾತು

    ‘ನನ್ನರಸಿ ರಾಧೆ’ (Nanarasi Radhe) ಸೀರಿಯಲ್ ಮೂಲಕ ಅಭಿಮಾನಿಗಳಿಗೆ ಪರಿಚಿತರಾದ ನಟಿ ಸಹನಾ, ಹೀರೋ ಅಗಸ್ತ್ಯ ರಾಥೋಡ್ ಸಹೋದರಿಯಾಗಿ ನಟಿಸಿದ್ದರು. ಊರ್ವಿ ಪಾತ್ರದಲ್ಲಿ ನಟಿ ಬಣ್ಣ ಹಚ್ಚಿದ್ದರು.

    ಗುರುಹಿರಿಯರು ನಿಶ್ಚಿಯಿಸಿದ ವರ ಪ್ರತಾಪ್ ಶೆಟ್ಟಿ ಜೊತೆ ಹೊಸ ಬಾಳಿಗೆ ಸಹನಾ ಶೆಟ್ಟಿ ಕಾಲಿಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಸಹನಾ- ಪ್ರತಾಪ್ ಸೋಮವಾರ (ಮೇ.8)ರಂದು ಮದುವೆಯಾಗಿದ್ದಾರೆ.

    ಸಹನಾ ಶೆಟ್ಟಿ ಮದುವೆಗೆ, ‘ಗೀತಾ’ ಸೀರಿಯಲ್ ಜೋಡಿ ಭವ್ಯಾ ಗೌಡ- ಧನುಷ್ ಗೌಡ, ನಟಿ ಅಮೂಲ್ಯ, ಬಿಗ್ ಬಾಸ್ ಜಯಶ್ರೀ ಆರಾಧ್ಯ ಸೇರಿದಂತೆ ಹಲವರು ಭಾಗವಹಿಸಿ ನವಜೋಡಿಗೆ ಶುಭಕೋರಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ‘ನನ್ನರಸಿ ರಾಧೆ’ ನಟಿ

    ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ‘ನನ್ನರಸಿ ರಾಧೆ’ ನಟಿ

    ‘ನನ್ನರಸಿ ರಾಧೆ’ (Nanarasi Radhe) ಖ್ಯಾತಿಯ ಸಹನಾ ಶೆಟ್ಟಿ (Sahana Shetty) ಅವರು ತಮ್ಮ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ನೀಡಿದ್ದಾರೆ. ನಟಿ ಸಹನಾ ಅವರು ಸದ್ಯ ಎಂಗೇಜ್ ಆಗಿದ್ದು, ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ.

    ಕಿರುತೆರೆಯ ಜನಪ್ರಿಯ ಧಾರಾವಾಹಿ ‘ನನ್ನರಸಿ ರಾಧೆ’ (Nanarasi Radhe) ಸೀರಿಯಲ್‌ನಲ್ಲಿ ಹೀರೋ ಅಗಸ್ತ್ಯನ (Agastya) ತಂಗಿ ಊರ್ವಿ (Urvi) ರೋಲ್‌ನಲ್ಲಿ ಸಹನಾ ಶೆಟ್ಟಿ ಕಾಣಿಸಿಕೊಂಡಿದ್ದರು. ಅಗಸ್ತ್ಯ- ಊರ್ವಿ ಕಾಂಬೋ ಎಲ್ಲರನ್ನೂ ಮೋಡಿ ಮಾಡಿತ್ತು. ಮೊದಲ ಸೀರಿಯಲ್‌ನಲ್ಲೇ ಸಹನಾ ಗಮನ ಸೆಳೆದಿದ್ದರು.

    ನಟಿ ಸಹನಾ ಶೆಟ್ಟಿ ಅವರು ಸದ್ಯದಲ್ಲೇ ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಈ ವರ್ಷ ಫೆ.14 ಪ್ರೇಮಿಗಳ ದಿನದಂದು ತಾವು ಎಂಗೇಜ್ ಆಗಿರೋದಾಗಿ ನಟಿ ತಿಳಿಸಿದ್ದರು. ಎಂಗೇಜ್‌ಮೆಂಟ್ (Engagement) ವೀಡಿಯೋ ಕೂಡ ಹಂಚಿಕೊಂಡಿದ್ದರು. ಇದೀಗ ಪ್ರಿ-ವೆಡ್ಡಿಂಗ್ ಫೋಟೋಶೂಟ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

    ಸಹನಾ ಮದುವೆಯಾಗುತ್ತಿರುವ ಹುಡುಗನ ಹೆಸರು ಪ್ರತಾಪ್ ಶೆಟ್ಟಿ, ಸದ್ಯದಲ್ಲೇ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ. ಫೋಟೋಶೂಟ್ ಕಪ್ಪು ಬಣ್ಣದ ಉಡುಗೆಯಲ್ಲಿ ಸಹನಾ-ಪ್ರತಾಪ್ ಮಿಂಚಿದ್ದಾರೆ.