Tag: ನದಿ

  • ಸ್ನಾನಕ್ಕೆ ನದಿಗಿಳಿದು ಅಪಾಯಕ್ಕೆ ಸಿಲುಕಿದ ವ್ಯಕ್ತಿ ಬದುಕುಳಿದಿದ್ದೆ ರೋಚಕ

    ಸ್ನಾನಕ್ಕೆ ನದಿಗಿಳಿದು ಅಪಾಯಕ್ಕೆ ಸಿಲುಕಿದ ವ್ಯಕ್ತಿ ಬದುಕುಳಿದಿದ್ದೆ ರೋಚಕ

    ಮಂಡ್ಯ: ಸ್ನಾನ ಮಾಡಲು ನದಿಗೆ ಇಳಿದಿದ್ದ ವ್ಯಕ್ತಿ ನೀರಿನ ಮಧ್ಯ ಸಿಲುಕಿ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ವ್ಯಕ್ತಿಯನ್ನು ರಕ್ಷಣೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ಶಿಂಷಾ ನದಿಯಲ್ಲಿ ಜರುಗಿದೆ.

    ತಮಿಳುನಾಡು ಮೂಲದ ಏಳುಮಲೈ ಎಂಬ ವ್ಯಕ್ತಿ ನಿನ್ನೆ ಸಂಜೆ ಶಿಂಷಾ ನದಿಯಲ್ಲಿ ಸ್ನಾನ ಮಾಡಲು ನದಿಗೆ ಇಳಿದಿದ್ದಾನೆ. ಸ್ನಾನ ಮುಗಿಸಿ ನದಿಯಿಂದ ಹೊರಗೆ ಬರುವ ಹೊತ್ತಿಗೆ ನದಿಯಲ್ಲಿ ಇದ್ದಕ್ಕಿದ್ದ ಹಾಗೆ ನೀರಿನ ಪ್ರಮಾಣ ಹೆಚ್ಚಾಗಿದೆ. ಈ ವೇಳೆ ಗಾಬರಿಗೊಂಡ ಏಳುಮಲೈ ಬಂಡೆ ಕಲ್ಲಿನ ಮೇಲೆ ನಿಂತು ರಕ್ಷಣೆ ಮಾಡುವಂತೆ ಕೂಗಿಕೊಂಡಿದ್ದಾನೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ – ಶಿಕ್ಷಕ ಅರೆಸ್ಟ್

    ಈ ದೃಶ್ಯಕಂಡ ಸ್ಥಳೀಯರು ಈ ವಿಷಯವನ್ನು ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಿ ಹಗ್ಗ ಹಾಗೂ ಏಣಿಯ ಮೂಲಕ ಏಳುಮಲೈಯನ್ನು ರಕ್ಷಣೆ ಮಾಡಿದ್ದಾರೆ. ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾಗಿರುವ ಹಿನ್ನೆಲೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಲು ಕಾರಣ ಎನ್ನಲಾಗಿದೆ. ಇದನ್ನೂ ಓದಿ:  ಕೋವಿಡ್ ಲಸಿಕೆಯ ಡಬಲ್ ಡೋಸ್‍ನಿಂದ 1 ವರ್ಷಕ್ಕಿಂತ ಹೆಚ್ಚಿನ ಸುರಕ್ಷೆ

  • ಫೋಟೋ ಶೂಟ್ ಮಾಡಿಸಲು ಹೋಗಿ ನದಿಯೊಳಗೆ ಬಿದ್ದ ಮಹಿಳೆ – ವೀಡಿಯೋ ವೈರಲ್

    ಫೋಟೋ ಶೂಟ್ ಮಾಡಿಸಲು ಹೋಗಿ ನದಿಯೊಳಗೆ ಬಿದ್ದ ಮಹಿಳೆ – ವೀಡಿಯೋ ವೈರಲ್

    ದಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳಲು ಹೋಗಿ ಮಹಿಳೆ ನೀರಿನೊಳಗೆ ಬಿದ್ದಿರುವ ಹಾಸ್ಯಮಯ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    Photoshoot

    ಮಹಿಳೆಯೊಬ್ಬರು ನದಿಯ ದಡದಲ್ಲಿ ಸುಂದರವಾದ ಪಿಂಕ್ ಕಲರ್ ಲಾಂಗ್ ಡ್ರೆಸ್ ಅನ್ನು ಧರಿಸಿ, ಹೇರ್ ಸ್ಟೈಲ್ ಮಾಡಿಸಿಕೊಂಡು ತೂಗಾಡುವ ಉಯ್ಯಾಲೆಯ ಮೇಲೆ ಕುಳಿತುಕೊಂಡಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಪ್ರಾಕೃತಿಕ ವಿಕೋಪಕ್ಕೆ ಚೆನ್ನೈ ತತ್ತರ – ಹಿಂದಿಗಿಂತ 5.5 ಪಟ್ಟು ಹೆಚ್ಚು ಮಳೆ

    ಈ ಉಯ್ಯಾಲೆಯನ್ನು ಮರದ ಹಲಗೆಯಿಂದ ಸಿದ್ಧಪಡಿಸಲಾಗಿದ್ದು, ಅದನ್ನು ಹಗ್ಗದಿಂದ ನೇತಾಡುವಂತೆ ಕಟ್ಟಲಾಗಿತ್ತು. ನಂತರ ಫೋಟೋ ಶೂಟ್ ಮಾಡಿಸಲು ಮಹಿಳೆ ಉಯ್ಯಾಲೆ ಮೇಲೆ ಕುಳಿತು ಸ್ಟೈಲ್ ಆಗಿ ಕ್ಯಾಮೆರಾಗೆ ಪೋಸ್ ನೀಡುತ್ತಿರುತ್ತಾರೆ. ಅಲ್ಲದೇ ಫೋಟೋ ಸೆರೆಹಿಡಿಯುವ ವೇಳೆ ಮಹಿಳೆಯ ಲಾಂಗ್ ಡ್ರೆಸ್ ಅನ್ನು ದೂರದಿಂದ ವ್ಯಕ್ತಿಯೊಬ್ಬರು ಕೈಯಲ್ಲಿ ಹಿಡಿದು ಗಾಳಿಯಲ್ಲಿ ಅಲುಗಾಡಿಸಲು ಪ್ರಯತ್ನಿಸುತ್ತಾರೆ. ಆಗ ಮಹಿಳೆಯ ತೂಕಕ್ಕೆ ಉಯ್ಯಾಲೆ ಮುರಿದು ನೀರಿನಲ್ಲಿ ಬೀಳುತ್ತದೆ. ಇದೇ ವೇಳೆ ಉಯ್ಯಾಲೆ ಜೊತೆ ನೀರಿನೊಳಗೆ ಬಿದ್ದ ಮಹಿಳೆ ನೀರಿನಿಂದ ಮೇಲಕ್ಕೆ ಎದ್ದು ಸ್ವತಃ ತಾವೇ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಇದನ್ನೂ ಓದಿ: ನನ್ನ ಸಾವಿಗೆ ಪಕ್ಷದ ಮುಖಂಡರೇ ಕಾರಣ – ಪಟ್ಟಣ ಪಂಚಾಯ್ತಿ ಸದಸ್ಯೆ ಆತ್ಮಹತ್ಯೆಗೆ ಯತ್ನ

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ 5,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಜೊತೆಗೆ ಅನೇಕ ಲೈಕ್ಸ್ ಹಾಗೂ ಕಾಮೆಂಟ್‍ಗಳು ಹರಿದುಬಂದಿದೆ.

  • 3 ತಿಂಗಳ ಮಗುವನ್ನು ಕತ್ತು ಹಿಸುಕಿ ಕೊಂದ ಕ್ರೂರಿ ತಾಯಿ

    3 ತಿಂಗಳ ಮಗುವನ್ನು ಕತ್ತು ಹಿಸುಕಿ ಕೊಂದ ಕ್ರೂರಿ ತಾಯಿ

    ಮುಂಬೈ: ಮೂರು ತಿಂಗಳ ಮಗುವನ್ನು ತಾಯಿಯೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಪುಣೆಯ ಯರವಾಡ ಪ್ರದೇಶದಲ್ಲಿ ನಡೆದಿದೆ.

    ಆರೋಪಿ ತಾಯಿಯನ್ನು ಪಲ್ಲವಿ ಭೋಂಗೆ ಎಂದು ಗುರುತಿಸಲಾಗಿದ್ದು, ಪಲ್ಲವಿ ಮತ್ತು ಆಕೆಯ 13 ವರ್ಷದ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅಲ್ಪಸಂಖ್ಯಾತ ವ್ಯಕ್ತಿ ಅನ್ನೋ ಕಾರಣಕ್ಕೆ ಸಲೀಂ ಮೇಲೆ ಕ್ರಮ ಕೈಗೊಂಡ್ರು: ಜಗದೀಶ್ ಶೆಟ್ಟರ್

    ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ವೇಳೆ ಆರೋಪಿ ಮೂಲತಃ ಬುಲ್ಧಾನ ನಿವಾಸಿಯಾಗಿದ್ದು, ಈಕೆ ನುಕ್ಷನ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ದಿನಗೂಲಿಕಾರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೇರೆ ಮನೆ ಮಾಡಲು ಒಪ್ಪದ ಪತಿ -ಕಂದನನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ

    ಈಗಾಗಲೇ ಮಹಿಳೆ ತನ್ನ ಪತಿಯಿಂದ ದೂರ ವಾಸಿಸುತ್ತಿದ್ದು, ಆಕೆ ಅಕ್ರಮ ಸಂಬಂಧ ಹೊಂದಿ ಗರ್ಭಧಾರಣೆ ಮಾಡಿದ್ದಾಳೆ ಎಂಬ ವಿಚಾರ ಗ್ರಾಮದಲ್ಲಿ ಎಲ್ಲರಿಗೂ ತಿಳಿದಿತ್ತು. ಆದರೆ 3 ತಿಂಗಳ ನಂತರ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ನಂತರ ಮಗುವನ್ನು ಕೊಂದು ಮಹಿಳೆ ತನ್ನ 13 ವರ್ಷದ ಮಗನಿಗೆ ಶವವನ್ನು ತಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿರುವ ನದಿಯಲ್ಲಿ ಎಸೆದು ಬರುವಂತೆ ತಿಳಿಸಿದ್ದಾಳೆ.

    ಈ ಕುರಿತಂತೆ ವಿಚಾರಣೆ ವೇಳೆ ಬಾಲಕ ತಪ್ಪನ್ನು ಒಪ್ಪಿಕೊಂಡಿದ್ದಾನೆ. ನಂತರ ಆತನನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಈ ವೇಳೆ ಕಲ್ಲಿನ ಕೆಳಗೆ ಮಗುವನ್ನು ಹೂತಿದ್ದ ಚೀಲವೊಂದನ್ನು ಪತ್ತೆಯಾಗಿದೆ.

  • ಚಿಕ್ಕಬಳ್ಳಾಪುರದಲ್ಲಿ ಭಾರೀ ಮಳೆ – ಜನಜೀವನ ಅಸ್ತವ್ಯಸ್ತ

    ಚಿಕ್ಕಬಳ್ಳಾಪುರದಲ್ಲಿ ಭಾರೀ ಮಳೆ – ಜನಜೀವನ ಅಸ್ತವ್ಯಸ್ತ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

    chikkaballapura rain

    ನಗರದ ಎಂಜಿ ರಸ್ತೆಯಲ್ಲಿ ಭಾರೀ ಪ್ರಮಾಣದ ನೀರು ತುಂಬಿದ್ದು ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ ಮತ್ತು ಪ್ರತಿಷ್ಠಿತ ಡಿವೈನ್ ಸಿಟಿ ಲೇಔಟ್‍ನಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಜನ ರಾತ್ರಿ ಪೂರ್ತಿ ಜಾಗರಣೆ ಮಾಡಿದ್ದಾರೆ. ಅಲ್ಲದೇ ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡುವಂತಾಗಿತ್ತು.

    chikkaballapura rain

    ಚಿಕ್ಕಬಳ್ಳಾಪುರದಿಂದ ಮಂಚನಬಲೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್‍ನಲ್ಲಿ ಮೂರಡಿಗೂ ಹೆಚ್ಚು ನೀರು ನಿಂತಿದ್ದು, ಈ ಅವಾಂತರ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸದಸ್ಯತ್ವ ಬೇಕಾದ್ರೆ ಷರತ್ತು ಅನ್ವಯ

    chikkaballapura rain

    ಮಳೆರಾಯನ ಆರ್ಭಟಕ್ಕೆ ಮಂಚೇನಹಳ್ಳಿ-ತೊಂಡೆಬಾವಿ ಸೇತುವೆ ಬಳಿ ಇರುವ ಪಿನಾಕಿನ ನದಿ ದಶಕಗಳ ನಂತರ ಮೈದುಂಬಿ ಉಕ್ಕಿ ಹರಿಯುತ್ತಿದೆ. ಇನ್ನೂ ಮುಷ್ಟೂರು ಕೆರೆ ಕೋಡಿ ಹರಿದ ಹಿನ್ನೆಲೆ ಮುಷ್ಟೂರು ಗ್ರಾಮ ಜಲಾವೃತಗೊಂಡಿದೆ. ಜೊತೆಗೆ ಅಮಾನಿ ಭೈರಸಾಗರ ಕೆರೆ ಕೂಡ ಉಕ್ಕಿ ಹರಿಯುತ್ತಿದ್ದು, ಇದೇ ಸಮಯದಲ್ಲಿ ತುರ್ತು ಜಿಲ್ಲಾಸ್ಪತ್ರೆಗೆ ರೋಗಿಯನ್ನು ಕರದೊಯ್ಯುತ್ತಿದ್ದ ಅಂಬ್ಯುಲೆನ್ಸ್ ಅರ್ಧದಲ್ಲಿಯೇ ಆಫ್ ಆಗಿದೆ. ಈ ವೇಳೆ ಅಲ್ಲಿಯೇ ಇದ್ದ ಸ್ಥಳೀಯರು ವಾಹನವನ್ನು ತಳ್ಳಿ ಚಾಲಕನಿಗೆ ಸಹಾಯ ಮಾಡಿದ್ದಾರೆ. ದನ್ನೂ ಓದಿ: ಮೊಬೈಲ್ ಸ್ಟುಡಿಯೋ ಉದ್ಘಾಟಸಿದ ದುನಿಯಾ ವಿಜಯ್

  • ರೈತರ ಕೈ ಸೇರದ ಬೆಳೆ ಹಾನಿ ಪರಿಹಾರ – ಸಾಲದ ಸುಳಿಯಲ್ಲಿ ರೈತರು

    ರೈತರ ಕೈ ಸೇರದ ಬೆಳೆ ಹಾನಿ ಪರಿಹಾರ – ಸಾಲದ ಸುಳಿಯಲ್ಲಿ ರೈತರು

    ರಾಯಚೂರು: ಜಿಲ್ಲೆಯ ರೈತರು ಅತಿವೃಷ್ಟಿ ಅನಾವೃಷ್ಟಿಯಿಂದ ಪ್ರತೀ ವರ್ಷ ತತ್ತರಿಸಿ ಹೋಗುತ್ತಿದ್ದಾರೆ. ಈ ವರ್ಷವೂ ಸಾಕಷ್ಟು ಮಳೆ ಹಾನಿ ಸಂಭವಿಸಿದೆ. ಆದರೆ 2019ರ ಭೀಕರ ಪ್ರವಾಹಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ಬೆಳೆ ಕಳೆದುಕೊಂಡಿದ್ದ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ವರ್ಷದ ಬೆಳೆಹಾನಿಗೆ ಯಾವಾಗ ಪರಿಹಾರ ಸಿಗುತ್ತೋ ಅನ್ನೋ ಆತಂಕ ರೈತರನ್ನು ಕಾಡುತ್ತಿದೆ.

    2019 ಕೃಷ್ಣಾ ಹಾಗೂ ಭೀಮಾ ನದಿಯ ಭೀಕರ ಪ್ರವಾಹಕ್ಕೆ ಸಿಲುಕಿ ರಾಯಚೂರು ಜಿಲ್ಲೆ ಅಕ್ಷರಶಃ ನಲುಗಿ ಹೋಗಿತ್ತು. ಜಿಲ್ಲೆಯ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಹತ್ತಿ, ಭತ್ತ, ತೊಗರಿ ಸೇರಿದಂತೆ ನದಿ ಪಾತ್ರದ ಬಹುತೇಕ ಬೆಳೆಗಳು ಜಲಾವೃತವಾಗಿ ಬೆಳೆ ಹಾಳಾಗಿತ್ತು. ಆದರೆ ರೈತರು ಬೆಳೆ ಕಳೆದುಕೊಂಡು ಎರಡು ವರ್ಷಗಳು ಕಳೆದರೂ ಇದುವರೆಗೂ ರೈತರಿಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಬೆಳೆ ಚೆನ್ನಾಗಿ ಬಂದಾಗಲೇ ಪ್ರವಾಹ ಬಂದು ಬೆಳೆಗಳು ಸಂಪೂರ್ಣ ಹಾಳಾಗುತ್ತಿದೆ ಎಂದು ರೈತರು ತಮ್ಮ ಕಷ್ಟ ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಭಾರೀ ಮಳೆ – ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

    ರಾಯಚೂರು ತಾಲೂಕಿನ ಡೊಂಗರಾಂಪುರ ಗ್ರಾಮ ಒಂದರಲ್ಲೇ ನದಿ ಪಾತ್ರದ 500ಕ್ಕೂ ಅಧಿಕ ಹೆಕ್ಟೇರ್ ನಲ್ಲಿ ಬೆಳೆದ ಭತ್ತ ನೀರು ಪಾಲಾಗಿತ್ತು. ಪ್ರವಾಹಕ್ಕೆ ಸಿಲುಕಿ ಬೆಳೆ ಕಳೆದುಕೊಂಡಿದ್ದ ಅರ್ಧಕರ್ದ ರೈತರಿಗೆ ಇದುವರೆಗೂ ಪರಿಹಾರ ಮಾತ್ರ ಸಿಕ್ಕಿಲ್ಲ. ಪ್ರವಾಹ ಬಂದು ಎರಡು ವರ್ಷಗಳು ಕಳೆದ್ರೂ ಪರಿಹಾರ ಸಿಗದ ಕಾರಣ, ಇತ್ತ ಬೆಳೆಯೂ ಕಳೆದುಕೊಂಡು, ಪರಿಹಾರವೂ ಕೈ ಸೇರದ್ದಕ್ಕೆ ರೈತರು ಕಂಗಾಲಾಗಿದ್ದಾರೆ.

    ಪ್ರತೀ ಬಾರಿಯೂ ಕೃಷ್ಣಾ ನದಿ ಪ್ರವಾಹ ಬಂದಾಗಲೆಲ್ಲಾ ನದಿ ಪಾತ್ರದ ರೈತರು ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ತಡವಾಗಿ ಬರುವ ಅಧಿಕಾರಿಗಳು ಜಮೀನುಗಳನ್ನು ಸರ್ವೆ ಮಾಡಿ, ಜಿಪಿಎಸ್ ಮಾಡಿಕೊಂಡು ಹೋಗಿದ್ದರು. ಸರ್ಕಾರ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡಿದ್ರೂ ನಿಜವಾದ ಎಷ್ಟೋ ಫಲಾನುಭವಿಗಳಿಗೆ ಮಾತ್ರ ಪರಿಹಾರ ಸಿಕ್ಕಿಲ್ಲ. ರೈತರ ಸಂಕಷ್ಟ ಕುರಿತು ಪ್ರಶ್ನಿಸಿದರೆ ಅಧಿಕಾರಿಗಳು ಪುನಃ ಸರ್ವೆ ಮಾಡುವುದಾಗಿ ಹೇಳುತ್ತಾರೆ. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಮಾತ್ರ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಪದೇ ಪದೇ ಬದಲಾಗುತ್ತಿದ್ದರೆ ಸಮಸ್ಯೆ ಕೇಳುವವರು ಯಾರು ಎಂದು ಜಿಲ್ಲೆಯ ಜನ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಮಧ್ಯರಾತ್ರಿ ಸಿಎಂಗೆ ಝೀರೋ ಟ್ರಾಫಿಕ್‌ – ಅರ್ಧಗಂಟೆ ಸರ್ವಿಸ್‌ ರಸ್ತೆಯಲ್ಲಿ ನಿಂತ ವಾಹನಗಳು

    ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಕೃಷ್ಣಾ ನದಿಯ ಪ್ರವಾಹಕ್ಕೆ ಸಿಲುಕಿ ನದಿ ಪಾತ್ರದ ರೈತರು ಬೆಳೆಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ರೆ ಅಧಿಕಾರಿಗಳು ಸಮರ್ಪಕವಾಗಿ ಸರ್ವೆ ಮಾಡಿ, ಸಂಕಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಕೊಡಿಸುವಲ್ಲಿ ಮಾತ್ರ ತಾರತಮ್ಯ ಮಾಡುತ್ತಿದ್ದಾರೆ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಭಾರೀ ಮಳೆ – ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

    ಭಾರೀ ಮಳೆ – ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

    ಮೈಸೂರು: ಸತತ 10 ದಿನಗಳಿಂದ ಬಿದ್ದ ಭಾರೀ ಮಳೆಯ ಪರಿಣಾಮ ಬುಧವಾರ ರಾತ್ರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ ಉಂಟಾಗಿದೆ.

    ಚಾಮುಂಡಿ ಬೆಟ್ಟದಿಂದ ನಂದಿಗೆ ಹೋಗುವ ಮಾರ್ಗದಲ್ಲಿ ಈ ಗುಡ್ಡ ಕುಸಿತ ಸಂಭವಿಸಿದೆ. ಹೆಚ್ಚು ಕಡಿಮೆ 60 ಅಡಿಗಳಷ್ಟು ಗುಡ್ಡ ಕುಸಿದಿದೆ. ಗುಡ್ಡ ಕುಸಿತದಿಂದ ಪ್ರವಾಸಿಗರ ಸಂಚಾರಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಇದನ್ನೂ ಓದಿ: ಮಧ್ಯರಾತ್ರಿ ಸಿಎಂಗೆ ಝೀರೋ ಟ್ರಾಫಿಕ್‌ – ಅರ್ಧಗಂಟೆ ಸರ್ವಿಸ್‌ ರಸ್ತೆಯಲ್ಲಿ ನಿಂತ ವಾಹನಗಳು

    ಮೈಸೂರಿನಲ್ಲಿ ಧಾರಾಕಾರ ಮಳೆ ಬಂದಿದ್ದು ಕಳೆದ 10 ದಿನಗಳಿಗೆ ಹೋಲಿಸಿದರೆ ನಿನ್ನೆ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಗುಡ್ಡ ಕುಸಿತವಾಗಿದೆ. ಎರಡು ವರ್ಷದ ಹಿಂದೆಯೂ ಇದೇ ಮಾರ್ಗದ ಮತ್ತೊಂದು ಭಾಗದಲ್ಲಿ ಗುಡ್ಡ ಕುಸಿತವಾಗಿತ್ತು. ಇದನ್ನೂ ಓದಿ: ಮರದ ಜೊತೆ ನಟಿ ನಯನತಾರಾ ಮದುವೆ

    ಕಳೆದ ಕೆಲದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಬೆಂಗಳೂರು ಸಹಿತ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ಹಿಂಗಾರು ಮಾರುತಗಳಿಂದ ಅಕ್ಟೋಬರ್ ಕೊನೆಯ ವಾರದಲ್ಲಿ ಮತ್ತೆ ದಕ್ಷಿಣ ಕರ್ನಾಟಕದ ಭಾಗಗಳಲ್ಲಿ  ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  • IPL ಬೆಟ್ಟಿಂಗ್- ಸಾಲ ಮಾಡಿ ನದಿಗೆ ಹಾರಿ ಜೀವ ಬಿಟ್ಟ

    IPL ಬೆಟ್ಟಿಂಗ್- ಸಾಲ ಮಾಡಿ ನದಿಗೆ ಹಾರಿ ಜೀವ ಬಿಟ್ಟ

    ಬಾಗಲಕೋಟೆ: ಐಪಿಎಲ್ ಬೆಟ್ಟಿಂಗ್ ನಿಂದ ಸಾಲ ಮಾಡಿಕೊಂಡು ನದಿಗೆ ಹಾರಿದ ಯುವಕ ಇಂದು ಶವವಾಗಿ ಪತ್ತೆಯಾಗಿದ್ದಾನೆ.

    ಸೈಯದ್ ವಾಳೆ( 38) ಮೃತನಗಿದ್ದಾನೆ. ಹಣ್ಣಿನ ವ್ಯಾಪಾರಿಯಾಗಿರುವ ಈತ ಸಾಲ ಮಾಡಿಕೊಂಡು ನದಿಗೆ ಹಾರಿ ಪ್ರಾನ ಬಿಟ್ಟಿದ್ದಾನೆ. ಮೃತನು ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ನಿವಾಸಿಯಾಗಿದ್ದನು. ಈತನ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಕಾತರಕಿ ಗ್ರಾಮದ ಬಳಿಯ ಘಟಪ್ರಭಾ ನದಿಗೆ ಹಾರಿ ಸಾವನ್ನಪಿದ್ದಾನೆ. ಇದನ್ನೂ ಓದಿ:  ಸರಳ ದಸರಾ – ಅರಮನೆಗೆ ಬಂದ ಜಂಬೂಸವಾರಿ

    ಈತನಿಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ, ಮೀನುಗಾರರರು ಹುಡುಕಾಟ ನಡೆಸಿದ್ದರು. ಆದರೆ ಮೃತ ಸಯ್ಯದ್ ಪತ್ರೆಯಾಗಿರಲಿಲ್ಲ. ಇಂದು ಬೆಳಿಗ್ಗೆ ನದಿಯಲ್ಲಿ ಶವ ಪತ್ತೆಯಾಗಿದೆ. ಸೈಯದ್ ಐಪಿಎಲ್‍ನಲ್ಲಿ ಲಕ್ಷ ಲಕ್ಷ ಬೆಟ್ಟಿಂಗ್ ಆಡಿ ಸೋತಿದ್ದ. ಹೀಗಾಗಿ 20 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸಚಿವ ಎಸ್.ಟಿ ಸೋಮಶೇಖರ್‌ರಿಂದ ಡೋಲು ಬಡಿತ, ವೀರಗಾಸೆ ಕುಣಿತ

    ಈ ಹಿನ್ನೆಲೆ ಸಾಲ ಕೊಟ್ಟವರ ಕಿರಿಕಿರಿ ಬೆದರಿಕೆ ಹಾಗೂ ಪಡೆದ ಸಾಲ ತೀರಿಸಲಾಗದೆ ಮನನೊಂದು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಕಲಾದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜೈಲೂಟ ತಿನ್ನಲು ಆರ್ಯನ್ ಪರದಾಟ – ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಕಳುಹಿಸಿದ ಶಾರೂಖ್

  • ನೆಲ್ಯಾಡಿಯ ಉದನೆ ತೂಗು ಸೇತುವೆಯಲ್ಲಿ ಬ್ಯಾಗ್, ಚಪ್ಪಲಿ ಪತ್ತೆ- ಆತ್ಮಹತ್ಯೆ ಶಂಕೆ

    ನೆಲ್ಯಾಡಿಯ ಉದನೆ ತೂಗು ಸೇತುವೆಯಲ್ಲಿ ಬ್ಯಾಗ್, ಚಪ್ಪಲಿ ಪತ್ತೆ- ಆತ್ಮಹತ್ಯೆ ಶಂಕೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉದನೆ ತೂಗು ಸೇತುವೆ ಮೇಲೆ ಪುರುಷರ ಒಂದು ಜೊತೆ ಚಪ್ಪಲ್ ಹಾಗೂ ಬ್ಯಾಗ್ ಪತ್ತೆಯಾಗಿದ್ದು, ಯಾರೋ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.

    ಇಂದು ಬೆಳಗ್ಗೆ ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಗ್‍ನಲ್ಲಿ ಡ್ರೈವಿಂಗ್ ಲೈಸನ್ಸ್ ಪತ್ತೆಯಾಗಿದ್ದು, ಅದರಲ್ಲಿ ಆಂಧ್ರ ಪ್ರದೇಶದ ಪುಟ್ಟಪರ್ತಿಯ ಸುಬ್ರಹ್ಮಣ್ಯಂ ಎಂಬವರ ಮಗ ರಮಣ ಎಂದಿದೆ. ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿದ್ದ ಡೆತ್‍ ನೋಟ್ ಸಹ ಪತ್ತೆಯಾಗಿದೆ. ಇದನ್ನೂ ಓದಿ: ಜೋಡೆತ್ತುಗಳ ಮೇಲೆ ತಡರಾತ್ರಿ ಮಾರಣಾಂತಿಕ ಹಲ್ಲೆ: ದುಷ್ಕರ್ಮಿಗಳಿಗಾಗಿ ಪೊಲೀಸರ ಶೋಧ

    ಅಲ್ಲದೆ ಸೆ.15ರಂದು ಧರ್ಮಸ್ಥಳದಿಂದ ಉದನೆಗೆ ಬಸ್ಸಿನಲ್ಲಿ ಪ್ರಯಾಣಿಸಿರುವ ಬಸ್ ಟಿಕೆಟ್ ಸಹ ಪತ್ತೆಯಾಗಿದೆ. ನೆಲ್ಯಾಡಿ ಹೊರಠಾಣೆ ಎಎಸ್‍ಐ ಸೀತಾರಾಮ ಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ, ಬ್ಯಾಗ್ ಪರಿಶೀಲನೆ ನಡೆಸಿ, ವಶಕ್ಕೆ ಪಡೆದುಕೊಂಡಿದ್ದಾರೆ.

  • ಹಿಮ್ಮುಖವಾಗಿ ಹರಿದ ಮಿಸಿಸಿಪ್ಪಿ ನದಿ- ವೀಡಿಯೋ ನೋಡಿ

    ಹಿಮ್ಮುಖವಾಗಿ ಹರಿದ ಮಿಸಿಸಿಪ್ಪಿ ನದಿ- ವೀಡಿಯೋ ನೋಡಿ

    ವಾಷಿಂಗ್ಟನ್: ಅಮೆರಿಕದ ನ್ಯೂ ಒರ್ಲಿಯನ್ಸ್​ ಕರಾವಳಿ ತೀರದಲ್ಲಿ ಎದ್ದಿರುವ ಇಡಾ ಚಂಡಮಾರುತದ  ಪರಿಣಾಮವಾಗಿ ಮಿಸಿಸಿಪ್ಪಿ ನದಿ ಹಿಮ್ಮುಖವಾಗಿ ಹರಿಯುತ್ತಿದೆ.

    ಅಮೆರಿಕದಲ್ಲಿ ಚಂಡಮಾರುತಕ್ಕೆ ಇಡಾ (Hurricane Ida) ಎಂದು ಹೆಸರಿಡಲಾಗಿದೆ. ಚಂಡಮಾರುತ ಅಬ್ಬರದ ಜೊತೆಗೆ ಭೂಕುಸಿತವೂ ಉಂಟಾಗುತ್ತಿದೆ. ಮಿಸಿಸಿಪ್ಪಿ ನದಿ ಹಿಮ್ಮುಖವಾಗಿ ಹರಿಯುತ್ತಿದೆ. ಈ ಬಾರಿ ಎದ್ದಿರುವ ಇಡಾ ಚಂಡಮಾರುತ ಭಾರೀ ಅಪಾಯದಿಂದ ಕೂಡಿದ್ದು, ಮಿಸಿಸಿಪ್ಪಿ ನದಿ ದಕ್ಷಿಣದಿಂದ ಉತ್ತರ ದಿಕ್ಕಿನತ್ತ ಹರಿಯಲಾರಂಭಿಸಿದೆ. ಇದನ್ನೂ ಓದಿ: ಬಿಕಿನಿಯಲ್ಲಿ ಪ್ರಿಯಾಂಕಾ ಚೋಪ್ರಾ – ಚಾಕು ಹಿಡಿದ ನಿಕ್

    ಮಿಸಿಸಿಪ್ಪಿ ನದಿ ವಿರುದ್ಧ ದಿಕ್ಕಿನಲ್ಲಿ ಹರಿಯುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಮುದ್ರದಲ್ಲಿ ಭೀಕರ ಚಂಡಮಾರುತ ಎದ್ದಿರುವುದರಿಂದ ನದಿ ಹಿಮ್ಮುಖವಾಗಿ ಹರಿಯತೊಡಗಿದೆ. ಅಮೆರಿಕದ ನ್ಯೂ ಒರ್ಲಿಯನ್ಸ್ ಕರಾವಳಿ ತೀರದಲ್ಲಿ ಎದ್ದಿರುವ ಈ ಚಂಡಮಾರುತದಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಅನೇಕ ಮನೆಗಳು ನಾಶವಾಗಿವೆ. ನ್ಯೂ ಒರ್ಲಿಯನ್ಸ್ ಭಾಗದಲ್ಲಿ ಉಂಟಾಗಿರುವ ಇಡಾ ಚಂಡಮಾರುತದಿಂದ ಲೂಸಿಯಾನದ ರಾಜಧಾನಿ ಬ್ರಾಟನ್ ರೂಜ್ ಸುತ್ತಮುತ್ತ ಜನಜೀವನ ಅಸ್ತವ್ಯಸ್ತವಾಗಿದೆ. ಈ ಭಾಗದಲ್ಲಿ ಗಂಟೆಗೆ 240 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ.

    3,02,000 ಮನೆಗಳು ಹಾಗೂ ಕಾರ್ಖಾನೆ, ಕಂಪನಿಗಳಲ್ಲಿ ವಿದ್ಯುತ್ ಪೂರೈಕೆ ಕಡಿತಗೊಂಡಿದೆ. ಈ ಚಂಡಮಾರುತದ ಅಬ್ಬರಕ್ಕೆ ಜನರು ತತ್ತರಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಉಂಟಾಗಿರುವ ಅತಿ ಪ್ರಬಲ ಚಂಡಮಾರುತ ಇದಾಗಿದೆ. ಇಡಾ ಚಂಡಮಾರುತದ ಅಬ್ಬರ ಮೂರ್ನಾಲ್ಕು ದಿನ ಇರುವ ಸಾಧ್ಯತೆಯಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.

  • ರಣ ಮಳೆಗೆ ಮಹಾರಾಷ್ಟ್ರದಲ್ಲಿ 100 ಮಂದಿ ಬಲಿ- 1,000ಕ್ಕೂ ಹೆಚ್ಚು ಮಂದಿ ಸ್ಥಳಾಂತರ

    ರಣ ಮಳೆಗೆ ಮಹಾರಾಷ್ಟ್ರದಲ್ಲಿ 100 ಮಂದಿ ಬಲಿ- 1,000ಕ್ಕೂ ಹೆಚ್ಚು ಮಂದಿ ಸ್ಥಳಾಂತರ

    ಮುಂಬೈ: ಮಹಾರಾಷ್ಟ್ರದಲ್ಲಿ ಎಡಬಿಡದೇ ಸುರಿಯುತ್ತಿರುವ ರಣ ಮಳೆಗೆ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸಾವಿರಾರು ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ ಮತ್ತು ಹಲವಾರು ಜಿಲ್ಲೆಗಳಲ್ಲಿ ಭೂ ಕುಸಿತ ಮತ್ತು ಪ್ರವಾಹ ಸಂಭವಿಸಿದೆ.

    ಸಶಸ್ತ್ರ ಪಡೆಗಳು ಮತ್ತು ಎನ್‍ಆರ್‍ಎಫ್ ತಂಡ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ತಕ್ಷಣಕ್ಕೆ ಮಳೆ ನಿಲ್ಲುವಂತೆ ಕಾಣಿಸುತ್ತಿಲ್ಲ. ಅಲ್ಲದೇ ಮಹಾರಾಷ್ಟ್ರದ ಕರಾವಳಿ ಕೊಂಕಣ, ಪುಣೆಯ ರಾಯಗಡ, ರತ್ನಾಗಿರಿ, ಸಿಂಧುದುರ್ಗ್, ಪಶ್ಚಿಮ ಮಹಾರಾಷ್ಟ್ರದ ಸತಾರಾ ಮತ್ತು ಕೊಲ್ಹಾಪುರದಲ್ಲಿ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆಗಳಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹವಾಮಾನ ಇಲಾಖೆ ಈ ಆರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

    ಶನಿವಾರ ಬೆಳಗ್ಗೆ ಸುರಿದ ಭಾರೀ ಮಳೆಯಿಂದಾಗಿ ದಕ್ಷಿಣ ಗೋವಾದ ದೂಧ್ ಸಾಗರ್ ಮತ್ತು ಸೋನೌಲಿಮ್ ನಡುವಿನ ಪ್ಯಾಸೆಂಜರ್ ರೈಲು ಮತ್ತು ವಶಿಷ್ಠಿ ನದಿ ಉಕ್ಕಿ ಹರಿದ ಪರಿಣಾಮ ಮಹಾರಾಷ್ಟ್ರದ ಚಿಪ್ಲುನ್ ಮತ್ತು ಕಾಮಥೆ ನಡುವಿನ ಪ್ಯಾಸೆಂಜರ್ ರೈಲು ಹಳಿ ತಪ್ಪಿದೆ.

    ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಲವೆಡೆ ಭೂಕುಸಿತ ಮತ್ತು ಪ್ರವಾಹ ಉಂಟಾಗಿದ್ದು, ಸುಮಾರು 136 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿಯೂ ರಾಯಗಡ ಹಾಗೂ ಸತಾರಾ ಜಿಲ್ಲೆಯಲ್ಲಿ ಹೆಚ್ಚಿನ ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಶ್ವಾನದ ಸವಿನೆನಪಿಗೆ ಕಂಚಿನ ಪ್ರತಿಮೆ – ಬಿಡಿಸಲಾಗದ ಮಾಲೀಕ, ಶ್ವಾನದ ನಂಟು