Tag: ನದಿ

  • ಚಿತ್ರಾವತಿ ನದಿಯಲ್ಲಿ ಆಟೋ ಸಮೇತ ಕೊಚ್ಚಿ ಹೋದ ಚಾಲಕ

    ಚಿತ್ರಾವತಿ ನದಿಯಲ್ಲಿ ಆಟೋ ಸಮೇತ ಕೊಚ್ಚಿ ಹೋದ ಚಾಲಕ

    ಚಿಕ್ಕಬಳ್ಳಾಪುರ: ಚಿತ್ರಾವತಿ ನದಿಯ ಅಬ್ಬರಕ್ಕೆ ಆಟೋ ಸಮೇತ ಚಾಲಕ ಕೊಚ್ಚಿ ಹೋಗಿ ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ. ಶಾನಗಾನಪಲ್ಲಿಯ ವಿಶೇಷ ಚೇತನ ಆಟೋ ಚಾಲಕ ಶಂಕರ್(40) ಮೃತ ದುರ್ದೈವಿ.

    ಕಳೆದ 2 ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಈಗಾಗಲೇ ತುಂಬಿದ್ದ ಬಾಗೇಪಲ್ಲಿ ತಾಲೂಕು ಪರಗೋಡು ಬಳಿಯ ಚಿತ್ರಾವತಿ ಜಲಾಶಯ ಮತ್ತೆ ಕೋಡಿ ಹರಿದಿದೆ. ಪರಿಣಾಮ ಚಿತ್ರಾವತಿ ನದಿ ಭೋರ್ಗೆರೆಯುತ್ತಿದ್ದು, ಆಂಧ್ರಪ್ರದೇಶಕ್ಕೆ ಯಥೇಚ್ಛವಾದ ನೀರು ಹರಿದು ಹೋಗುತ್ತಿದೆ. ಇದನ್ನೂ ಓದಿ: ರಾಖಿ ಕಟ್ಟಿದ ಸಹೋದರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ ಗಿಫ್ಟ್‌ ಕೊಡಲು ಕಳ್ಳತನ ಮಾಡುತ್ತಿದ್ದ ಯುವಕ ಬಂಧನ

    ಸುಬ್ಬಾರಾಯನಪೇಟೆ ಗ್ರಾಮದ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದ್ದರಿಂದ, ಅದರಲ್ಲಿ ಆಟೋ ಮೂಲಕ ರಸ್ತೆ ದಾಟಲು ಹೋದ ಶಂಕರ್ ಆಟೋ ಸಮೇತ ಕೊಚ್ಚಿ ಹೋಗಿದ್ದಾರೆ. ಬಳಿಕ ಗಿಡಗಂಟಿಗಳ ಮಧ್ಯೆ ಶಂಕರ್ ಮೃತದೇಹ ಪತ್ತೆಯಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ನಿಲ್ಲದ ಪ್ಲಾಸ್ಟಿಕ್ ಬಳಕೆ- ದಂಡದ ರೂಪದಲ್ಲಿ ಪಾಲಿಕೆ ಖಜಾನೆಗೆ ಹರಿದು ಬಂತು 21,48,600 ರೂ.!

    ಚಿತ್ರಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಆಂಧ್ರಪ್ರದೇಶದ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜನರಿಗೆ ನದಿ ಪಾತ್ರದತ್ತ ತೆರಳದಂತೆ ಸೂಚನೆ ನೀಡಿದ್ದಾರೆ. ಅಲ್ಲಿನ ಕೆಲ ತಗ್ಗು ಪ್ರದೇಶದ ಗ್ರಾಮಗಳಿಗೆ ನೀರು ನುಗ್ಗಿರುವ ವರದಿಗಳು ಕೇಳಿಬಂದಿವೆ.

    Live Tv
    [brid partner=56869869 player=32851 video=960834 autoplay=true]

  • ಸೇತುವೆ ಮೇಲೆ ಸ್ಕೂಟಿ ನಿಲ್ಲಿಸಿ ನದಿಗೆ ಹಾರಿದ ವಿದ್ಯಾರ್ಥಿನಿ

    ಸೇತುವೆ ಮೇಲೆ ಸ್ಕೂಟಿ ನಿಲ್ಲಿಸಿ ನದಿಗೆ ಹಾರಿದ ವಿದ್ಯಾರ್ಥಿನಿ

    ಕಲಬುರಗಿ: ಕಾಲೇಜ್ ವಿದ್ಯಾರ್ಥಿನಿಯೋರ್ವಳು ಶಹಾಬಾದ ಸಮೀಪದ ಕಾಗಿಣಾ ನದಿ ಮೇಲೆ ಸ್ಕೂಟಿ ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯನ್ನು ಭಾಗ್ಯಶ್ರೀ (21) ಹೊಸಳ್ಳಿ ಎಂದು ಗುರುತಿಸಲಾಗಿದೆ. ಭಾಗ್ಯಶ್ರೀ ಚಿತ್ತಾಪೂರ ತಾಲೂಕಿನ ಗುಂಡುಗುರ್ತಿ ಗ್ರಾಮದ ನಿವಾಸಿಯಾಗಿದ್ದು, ಕಲಬುರಗಿ ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ವ್ಯಾಸಂಗ ಮಾಡುತ್ತಿದ್ದಳು. ಇಂದು ಮಧ್ಯಾಹ್ನ ಭಾಗ್ಯಶ್ರೀ ಸ್ಕೂಟಿಯನ್ನು ಸೇತುವೆ ಮೇಲೆ ನಿಲ್ಲಿಸಿ ಏಕಾಏಕಿ ನದಿಗೆ ಜಿಗಿದಿದ್ದಾಳೆ, ಈ ವೇಳೆ ಅಲ್ಲಿದ್ದ ಪ್ರತ್ಯಕ್ಷ ದರ್ಶಿಗಳು ಓಡಿ ಬಂದು ನೋಡುವಷ್ಟರಲ್ಲೇ ಭಾಗ್ಯಶ್ರೀ ನೀರಿನಲ್ಲಿ ಮುಳುಗಿದ್ದಳು. ಆ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜೀವನಾಂಶ ಕೇಳಿದ್ದಕ್ಕೆ ಅಕ್ರಮ ಸಂಬಂಧಕ್ಕೆ ಅಡ್ಡಿ – ಪತ್ನಿಯನ್ನೆ ಬರ್ಬರವಾಗಿ ಕೊಂದ ಪತಿ

    ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಶಹಾಬಾದ ನಗರ ಠಾಣೆಯ ಪೊಲೀಸರು, ಬೈಕ್ ಸಂಖ್ಯೆಯಿಂದ ನದಿಗೆ ಹಾರಿದ ಯುವತಿ ಭಾಗ್ಯಶ್ರೀ ಎಂದು ಖಚಿತ ಪಡೆಸಿದ್ದಾರೆ. ಇದೀಗ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಭಾಗ್ಯಶ್ರೀಗಾಗಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸಾರ್ವಜನಿಕರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಟೋಲ್‍ಗೇಟ್‍ನಲ್ಲಿ ಅಂಬುಲೆನ್ಸ್ ಅಪಘಾತ ಪ್ರಕರಣ- ಸಾವಿನ ಸಂಖ್ಯೆ 4ಕ್ಕೆ ಏರಿಕೆ

    Live Tv
    [brid partner=56869869 player=32851 video=960834 autoplay=true]

  • ಉಕ್ಕಿ ಹರಿಯುವ ತುಂಗಭದ್ರಾ ನದಿಯಲ್ಲಿ ಪ್ರವಾಸಿಗರ ಮೋಜುಮಸ್ತಿ – ಮಿತಿಮೀರಿದ ಹುಚ್ಚಾಟ

    ಉಕ್ಕಿ ಹರಿಯುವ ತುಂಗಭದ್ರಾ ನದಿಯಲ್ಲಿ ಪ್ರವಾಸಿಗರ ಮೋಜುಮಸ್ತಿ – ಮಿತಿಮೀರಿದ ಹುಚ್ಚಾಟ

    ರಾಯಚೂರು: ಜಿಲ್ಲೆಯಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದರೂ ಯಾವುದೇ ಭಯವಿಲ್ಲದೆ ಪ್ರವಾಸಿಗರು ನದಿ ತಟದಲ್ಲಿ ಮೋಜುಮಸ್ತಿಗೆ ಮುಂದಾಗಿದ್ದಾರೆ.

    ಮಾನ್ವಿ ತಾಲೂಕಿನ ರಾಜಲಬಂಡಾ ಗ್ರಾಮದಲ್ಲಿ ಜನರು ಸೆಲ್ಫಿ ಕ್ಲಿಕ್ಕಿಸಿ ಹಾಗೂ ಹರಿಯುವ ನೀರಿಗೆ ಧುಮುಕಿ ಈಜುವ ಮೂಲಕ ಹುಚ್ಚಾಟ ಮೆರೆಯುತ್ತಿದ್ದಾರೆ. ರಾಜಲಬಂಡಾ ತಿರುವು ಯೋಜನೆ ಆಣೆಕಟ್ಟು ಬಳಿ ನೂರಾರು ಪ್ರವಾಸಿಗರಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇದನ್ನೂ ಓದಿ: ವರದಾ, ತುಂಗಭದ್ರಾ ನದಿಯಲ್ಲಿ ಹೆಚ್ಚಿದ ನೀರು – ಮೆಕ್ಕೆಜೋಳ ಸೇರಿ ವಿವಿಧ ಬೆಳೆ ಜಲಾವೃತ

    ತುಂಗಭದ್ರಾ ಜಲಾಶಯದಿಂದ 1,55,920 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದ್ದು, ಭಾರೀ ಪ್ರಮಾಣದ ನೀರಲ್ಲಿ ಸೆಲ್ಫಿಗೋಸ್ಕರ ಜನರು ನದಿಗೆ ಇಳಿಯುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ಅಪಾಯವಾಗುವ ಸಾಧ್ಯತೆಯ ನಡುವೆಯೇ ರಾಜಲಬಂಡಾ ಆಣೆಕಟ್ಟು ನೋಡಲು ಆಗಮಿಸುತ್ತಿರುವ ನೂರಾರು ಪ್ರವಾಸಿಗರು ಹುಚ್ಚಾಟ ಮಾಡುತ್ತಿದ್ದಾರೆ. ಇದನ್ನೂ ಓದಿ: ಯಾವುದೇ ಧರ್ಮ, ಜಾತಿಯವರಿಗೆ ಸಿಎಂ ಸ್ಥಾನ ಮೀಸಲು ಅಲ್ಲ: ಡಿಕೆಶಿಗೆ ಆರ್. ಅಶೋಕ್ ತಿರುಗೇಟು

    ಮೀನು ಹಿಡಿಯಲು ದೂರದ ಊರುಗಳಿಂದ ಬರುತ್ತಿರುವ ಜನರು ನದಿ ತಟದಲ್ಲೇ ಕಾಲ ಕಳೆಯುತ್ತಿದ್ದಾರೆ. ಕ್ರೇಜ್‌ಗಾಗಿ ಮೀನು ಹಿಡಿಯಲು ಜನ ಮುಂದಾಗಿದ್ದಾರೆ. ಸ್ಥಳದಲ್ಲಿ ಯಾವೊಬ್ಬ ಅಧಿಕಾರಿ, ಸಿಬ್ಬಂದಿ ಇಲ್ಲದಿರುವುದರಿಂದ ಜನರ ಮೋಜು ಮಸ್ತಿ ಹೆಚ್ಚಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕುಟುಂಬ ಪ್ರವಾಸ ದುರಂತ ಅಂತ್ಯ – ದೋಣಿ ಮುಳುಗಿ 8 ಮಂದಿ ಸಾವು

    ಕುಟುಂಬ ಪ್ರವಾಸ ದುರಂತ ಅಂತ್ಯ – ದೋಣಿ ಮುಳುಗಿ 8 ಮಂದಿ ಸಾವು

    ರಾಂಚಿ: ಪ್ರವಾಸಕ್ಕೆಂದು ದೋಣಿಯಲ್ಲಿ ತೆರಳಿದ್ದ ಒಂದೇ ಕುಟುಂಬದ 8 ಸದಸ್ಯರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

    ಜಾರ್ಖಂಡ್‌ನ ಕೊಡೆರ್ಮಾ ಜಿಲ್ಲೆಯ ಪಂಚಖೆರೋ ಅಣೆಕಟ್ಟಿನಲ್ಲಿ ಭಾನುವಾರ ದೋಣಿ ಮುಳುಗಿದ್ದು, ಒಂದೇ ಕುಟುಂಬದ 8 ಜನರು ಸಾವನ್ನಪ್ಪಿದ್ದಾರೆ. ದೋಣಿಯನ್ನು ಬಾಡಿಗೆ ಪಡೆದು ವಿಹಾರಕ್ಕೆ ತೆರಳಿದ್ದ ಕುಟುಂಬ ದುರಂತ ಅಂತ್ಯ ಕಂಡಿದೆ. ಇದನ್ನೂ ಓದಿ: ಕುಡಿದು ವಾಹನ ಚಲಾಯಿಸಿದ್ರೆ ರಕ್ತದಾನ ಮಾಡುವ ಶಿಕ್ಷೆ

    ದೋಣಿಯಲ್ಲಿ ತೆರಳಿದ್ದ 9 ಜನರ ಪೈಕಿ ಕೇವಲ ಒಬ್ಬರು ಮಾತ್ರವೇ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ. ಶಿವಂ ಸಿಂಗ್(17), ಪಾಲಕ್ ಕುಮಾರಿ(14), ಸೀತಾರಾಮ್ ಯಾದವ್(40), ಸೇಜಲ್ ಕುಮಾರಿ(16), ಹರ್ಷಲ್ ಕುಮಾರ್(8), ಭಾವಾ(5), ರಾಹುಲ್ ಕುಮಾರ್(16) ಹಾಗೂ ಅಮಿತ್ ಕುಮಾರ್(14) ಸಾವನ್ನಪ್ಪಿದ್ದು, ಪ್ರದೀಪ್ ಕುಮಾರ್ ಈಜಿ ದಡ ಸೇರಿದ್ದಾರೆ. ಇದನ್ನೂ ಓದಿ: ಸ್ಪೈಸ್‌ಜೆಟ್ ವಿಮಾನ ಹಾರಾಟ ನಿಲ್ಲಿಸಿ – ದೆಹಲಿ ಹೈಕೋರ್ಟ್‌ನಲ್ಲಿ ಮನವಿ

    ಈಜಿ ದಡ ಸೇರಿದ ಪ್ರದೀಪ್ ಘಟನೆ ಬಗ್ಗೆ ಸ್ಥಳೀಯರಲ್ಲಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಹಾಗೂ ಶೋಧ ಕಾರ್ಯ ನಡೆಸಿದೆ. ಘಟನೆ ಬಗ್ಗೆ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ ಸಂತಾಪ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 11 ಪ್ರಯಾಣಿಕರಿದ್ದ ಕಾರು ನದಿಗೆ – 9 ಮಂದಿ ದುರ್ಮರಣ

    11 ಪ್ರಯಾಣಿಕರಿದ್ದ ಕಾರು ನದಿಗೆ – 9 ಮಂದಿ ದುರ್ಮರಣ

    ಡೆಹ್ರಾಡೂನ್: 11 ಪ್ರಯಾಣಿಕರಿದ್ದ ಕಾರು ನದಿಗೆ ಬಿದ್ದ ಪರಿಣಾಮ 9 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ರಾಮನಗರ ಪ್ರದೇಶದಲ್ಲಿ ನಡೆದಿದೆ. ಕಾರಿನಲ್ಲಿದ್ದ ಕೇವಲ ಇಬ್ಬರನ್ನು ರಕ್ಷಿಸಲಾಗಿದೆ.

    ರಾಮನಗರ ಕೋಟ್‌ದ್ವಾರ ರಸ್ತೆಯಲ್ಲಿರುವ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಧೇಲಾ ವಲಯದಲ್ಲಿ ಘಟನೆ ನಡೆದಿದ್ದು, ಪ್ರಯಾಣಿಕರೆಲ್ಲರೂ ಪಂಜಾಬ್ ಮೂಲದವರು ಎಂದು ತಿಳಿದುಬಂದಿದೆ. ಘಟನೆ ನಡೆದ ತಕ್ಷಣ ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‌ಡಿಆರ್‌ಎಫ್), ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದೆ. ಇದನ್ನೂ ಓದಿ: ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿ – 10 ಮಂದಿಗೆ ಗಾಯ

    ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ ಮುಂಜಾನೆ 5 ಗಂಟೆಯ ಹೊತ್ತಿಗೆ ಕಾರು ಕಾರ್ಬೆಟ್ ಕಡೆ ಹೋಗುತ್ತಿತ್ತು. ನದಿಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದ ಕಾರಣ ಕಾರು ಪ್ರವಾಹದೊಂದಿಗೆ ಕೊಚ್ಚಿಕೊಂಡು ಹೋಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಕನಸಿನ ಬುಲೆಟ್ ಟ್ರೈನ್ ಯೋಜನೆ ಮುಖ್ಯಸ್ಥ ಸತೀಶ್ ಅಗ್ನಿಹೋತ್ರಿ ವಜಾ

    ಎಲ್ಲಾ ಮೃತರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ. ಘಟನೆಯಲ್ಲಿ ರಕ್ಷಿಸಲ್ಪಟ್ಟವರನ್ನು ರಾನಮಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿಂದೆಯೂ ಆ ಪ್ರದೇಶದಲ್ಲಿ ಇಂತಹ ಘಟನೆಗಳು ನಡೆದಿತ್ತು ಎನ್ನಲಾಗಿದ್ದು, ಸೇತುವೆ ನಿರ್ಮಾಣದ ಕುರಿತು ಹಲವು ಬಾರಿ ಆಡಳಿತದಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನೀರುಪಾಲಾದ ಯುವಕನ ಕುಟುಂಬಕ್ಕೆ ರೇಣುಕಾಚಾರ್ಯ 1 ಲಕ್ಷ ಪರಿಹಾರ

    ನೀರುಪಾಲಾದ ಯುವಕನ ಕುಟುಂಬಕ್ಕೆ ರೇಣುಕಾಚಾರ್ಯ 1 ಲಕ್ಷ ಪರಿಹಾರ

    ದಾವಣಗೆರೆ: ಸ್ನಾನ ಮಾಡಲು ಹೋಗಿ ನೀರುಪಾಲಾದ ಯುವಕನ ಕುಟುಂಬಕ್ಕೆ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು 1 ಲಕ್ಷ ಪರಿಹಾರವನ್ನು ನೀಡಿದ್ದಾರೆ.

    ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಜೊತೆ ರೇಣುಕಾಚಾರ್ಯ ಭೇಟಿ ನೀಡಿದರು. ಇದೇ ವೇಳೆ ಯುವಕನ ಕುಟುಂಬಕ್ಕೆ ಒಂದು ಲಕ್ಷ ವೈಯಕ್ತಿಕ ಪರಿಹಾರ ನೀಡಿದರು. ಅಲ್ಲದೆ ಯುವಕನ ತಾಯಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದರು. ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆಯನ್ನು ಕುಡ ರೇಣುಕಾಚಾರ್ಯ ನೀಡಿದರು.

    ಹೊನ್ನಾಳಿಯ ಬಳಿ ಇರುವ ತುಂಗಭದ್ರಾ ನದಿಯಲ್ಲಿ ಮಾದನಬಾವಿ ಗ್ರಾಮದ ಯುವಕ ಗಜೇಂದ್ರ (28) ಈಜಲು ತೆರಳಿದ್ದನು. ನದಿಯಲ್ಲಿ ಸ್ನಾನ ಮಾಡಲು ಹೋಗಿ ನೀರುಪಾಲಾಗಿದ್ದನು. ಈಜು ತಜ್ಞರು ಅಗ್ನಿ ಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ವಿಕ್ಟೋರಿಯಾ ಆಸ್ಪತ್ರೆಯ ಸಿ ಬ್ಲಾಕ್ ಮುಂಭಾಗ ವಿದ್ಯುತ್ ಭಾಗ್ಯ

  • ಕಾಲು ಜಾರಿ ಉಕ್ಕಿ ಹರಿಯುತ್ತಿರೋ ನದಿಗೆ ಬಿದ್ರೂ ಈಜಿ ದಡ ಸೇರಿದ ಗಟ್ಟಿಗ!

    ಕಾಲು ಜಾರಿ ಉಕ್ಕಿ ಹರಿಯುತ್ತಿರೋ ನದಿಗೆ ಬಿದ್ರೂ ಈಜಿ ದಡ ಸೇರಿದ ಗಟ್ಟಿಗ!

    ಬಳ್ಳಾರಿ: ಕಾಲು ಜಾರಿ ನದಿಗೆ ಬಿದ್ದ ವ್ಯಕ್ತಿಯೊಬ್ಬ ಅದೃಷ್ಟವಶಾತ್ ಭಾರೀ ಅಪಾಯದಿಂದ ಪಾರಾದ ಘಟನೆ ನಗರದ ಸಿರಗುಪ್ಪಾ ತಾಲೂಕಿನ ರಾರಾವಿ ಬಳಿ ನಡೆದಿದೆ.

    ಸಿರಗುಪ್ಪಾ ನಿವಾಸಿ ಮಲ್ಲಿಕಾರ್ಜುನ ಕಾಲು ಜಾರಿ ನದಿಗೆ ಬಿದ್ದ ವ್ಯಕ್ತಿ. ರಾಜ್ಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ನದಿ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಕಾಲುವೆ ಮೇಲೆ ಹರಿಯುತ್ತಿರುವ ನದಿಯನ್ನು ದಾಟಲು ಹೋಗಿ ಮಲ್ಲಿಕಾರ್ಜುನ ಕಾಲು ಜಾರಿ ರಾರಾವಿ ಬಳಿಯ ವೇದಾವತಿ ನದಿಯಲ್ಲಿ ಬಿದ್ದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 124 ಮಂದಿಗೆ ಕೊರೊನಾ -159 ಮಂದಿ ಡಿಸ್ಚಾರ್ಜ್

    ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ನದಿಯನ್ನು ದಾಟಲು ಮುಂದಾಗಿದ್ದರು. ಅದೇ ಸಮಯದಲ್ಲಿ ಸೇತುವೆ ಮೇಲೆ ಭಾರೀ ವಾಹನವೊಂದು ಸಾಗಿದೆ. ಹೀಗಾಗಿ ನದಿಯ ರಭಸಕ್ಕೆ ಸಿಲುಕಿ ಕಾಲು ಜಾರಿ ನದಿಗೆ ಬಿದಿದ್ದಾರೆ. ಆದರೂ ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಧೈರ್ಯದಿಂದ ಈಜಿ ದಡ ಸೇರಿದ್ದಾರೆ. ಇದೇ ವೇಳೆಯಲ್ಲಿ ಸ್ಥಳೀಯರು ಸಹಾಯ ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸನ್ನಿ ಲಿಯೋನ್: ಮಂಡ್ಯ ಫ್ಯಾನ್ಸ್ ಪ್ರೀತಿಗೆ ಧನ್ಯವಾದ ತಿಳಿಸಿದ ಸನ್ನಿ

  • ಮುಳುಗುತ್ತಿದ್ದ ಕಾರಿನ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ಮಹಿಳೆ

    ಮುಳುಗುತ್ತಿದ್ದ ಕಾರಿನ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ಮಹಿಳೆ

    ಒಟ್ಟಾವಾ: ಸೆಲ್ಫಿಗೀಳು ಯಾವ ಮಟ್ಟದಲ್ಲಿ ಇರುತ್ತದೆ ಎಂದರೆ ಕೆಲವರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಸೆಲ್ಫಿ ಕ್ಲಿಕ್ಕಿಸುತ್ತಾರೆ. ಇಂತಹ ಘಟನೆ ಕೆನಡಾದಲ್ಲಿ ನಡೆದಿದೆ.

    ಕಾರು ನಿಯಂತ್ರಣ ತಪ್ಪಿ ಮಂಜುಗಡ್ಡೆಯಿಂದ ತುಂಬಿದ ರಿದಾಯ ನದಿಗೆ ಬಿದ್ದಿದೆ. ಕಾರು ನಿಧಾನವಾಗಿ ಮಂಜುಗಡ್ಡೆ ಒಳಗೆ ಮುಳುಗುತ್ತಿದ್ದರೆ ಕಾರು ಚಲಾಯಿಸುತ್ತಿದ್ದ ಮಹಿಳೆ ಮಾತ್ರ ಕಾರಿನ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು. ಇದನ್ನು ಗಮನಿಸಿದ ಜನರು ಆಕೆಯನ್ನು ರಕ್ಷಿಸಿದ್ದಾರೆ. ಆಕೆ ಸೆಲ್ಫಿ ತೆಗೆದುಕೊಳ್ಳುತ್ತೀರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:  ಪತಿ ಕೊಂದು ಕತ್ತರಿಸಿದ ತಲೆ ಠಾಣೆಗೆ ತಂದು ಶರಣಾದಳು

    ಸ್ಥಳೀಯರು ಮಹಿಳೆಯನ್ನು ರಕ್ಷಿಸಿ ಸುರಕ್ಷಿತವಾಗಿ ಕರೆದೊಯ್ದಿದ್ದಾರೆ. ಘಟನೆಯಲ್ಲಿ ಕಾರು ಚಾಲನೆ ಮಾಡುತ್ತಿದ್ದ ಮಹಿಳೆಗೆ ಯಾವುದೇ ಗಾಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಜನರು ಅವಳಿಗೆ ಸಹಾಯ ಮಾಡಲು ಆತುರದಿಂದ ಮತ್ತು ಚಿಂತಿತರಾಗಿದ್ದಾಗ ಅವಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾಳೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: 1200 ಕೋಟಿ ರೂ. ವೆಚ್ಚದ ಶಿರಾಡಿ ಘಾಟ್ ಚತುಷ್ಪಥ ರಸ್ತೆಗೆ ಕೇಂದ್ರ ಅನುಮೋದನೆ

     

  • ಭಾರತಕ್ಕೆ ಕ್ರಾಂತಿಯ ಅವಶ್ಯಕತೆ ಇಲ್ಲ, ಬದಲಾಗಿ ವಿಕಾಸದ ಅಗತ್ಯವಿದೆ: ಮೋದಿ

    ಭಾರತಕ್ಕೆ ಕ್ರಾಂತಿಯ ಅವಶ್ಯಕತೆ ಇಲ್ಲ, ಬದಲಾಗಿ ವಿಕಾಸದ ಅಗತ್ಯವಿದೆ: ಮೋದಿ

    ನವದೆಹಲಿ: ದೇಶಕ್ಕೆ ಕ್ರಾಂತಿಯ ಬದಲು ವಿಕಾಸದ ಅಗತ್ಯವಿದೆ. ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ದೇಶದ ಇತಿಹಾಸವನ್ನು ಉಳಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ವರ್ಚುವಲ್ ಕಾನ್ಫರೆನ್ಸಿಂಗ್ ಮೂಲಕ ಅಖಿಲ ಭಾರತ ಮೇಯರ್‌ಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ವಿಕಾಸವನ್ನು ನಂಬಬೇಕು. ಭಾರತಕ್ಕೆ ಕ್ರಾಂತಿಯ ಅಗತ್ಯವಿಲ್ಲ, ಆದರೆ ವಿಕಾಸದ ಅಗತ್ಯವಿದೆ. ನಾವು ನಮ್ಮಲ್ಲಿರುವ ಎಲ್ಲವನ್ನು ರಕ್ಷಿಸಬೇಕು ಮತ್ತು ತಾಂತ್ರಿಕ ಉನ್ನತೀಕರಣದತ್ತ ಸಾಗಬೇಕು ಎಂದಿದ್ದಾರೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಸೋಂಕಿತರಿಬ್ಬರು ಎಸ್ಕೇಪ್ ಆಗಲು ಯತ್ನ- ಹಿಡಿದು ಆಸ್ಪತ್ರೆಗೆ ಸೇರಿಸಿದ ಪೊಲೀಸರು!

    ಭಾರತದ ಇತಿಹಾಸ ಮತ್ತು ಸಾಂಪ್ರದಾಯವು ಅಭಿವೃದ್ಧಿಯ ಜೊತೆಯಲ್ಲಿ ಸಾಗಬೇಕು. ನಮ್ಮ ದೇಶದ ಬಹುತೇಕ ನಗರಗಳು ಸಾಂಪ್ರದಾಯಿಕ ನಗರಗಳಾಗಿದ್ದು, ಸಂಪ್ರದಾಯಿಕ ರೀತಿಯಲ್ಲಿ ಅಭಿವೃದ್ಧಿ ಹೊಂದಿದ್ದು, ಆಧುನೀಕರಣದ ಈ ಯುಗದಲ್ಲಿ ಈ ನಗರಗಳ ಪ್ರಾಚೀನತೆಯೂ ಅಷ್ಟೇ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ವಾರಣಾಸಿ ಮಾರ್ಗಸೂಚಿಗಳು ನಮಗೆ ಹೇಗೆ ದೇಶವನ್ನು ಅಭಿವೃದ್ಧಿಗೊಳಿಸಬಹುದು ಎಂಬುವುದಕ್ಕೆ ಸಾಕಷ್ಟು ಐಡಿಯಾ ನೀಡುತ್ತದೆ ಎಂದು ಉದಾಹರಣೆ ನೀಡಿದ ಅವರು, ಇಲ್ಲಿನ ನದಿಗಳ ಸ್ವಚ್ಛತೆಯ ಮಹತ್ವವದ ಬಗ್ಗೆ ಕೂಡ ತಿಳಿಸಿದರು.

    ಪ್ರಪಂಚದಾದ್ಯಂತ ಪ್ರವಾಸಿಗರು ಗಂಗಾ ಘಾಟ್‍ಗೆ ಆಗಮಿಸುತ್ತಾರೆ. ಕಾಶಿಯ ಆರ್ಥಿಕತೆಯನ್ನು ನಿಭಾಯಿಸುವಲ್ಲಿ ಗಂಗಾ ಮಾತೆಯ ಮಹತ್ವದ ಕೊಡುಗೆ ಹೊಂದಿದ್ದೇವೆ. ನಾವೆಲ್ಲರೂ ನಮ್ಮ ನಗರಗಳಲ್ಲಿನ ನದಿಯ ಬಗ್ಗೆ ಸೂಕ್ಷ್ಮವಾದ ವಿಧಾನವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಭಾರತದ ಸ್ಪರ್ಧಿ ಸೇರಿ 17 ಮಂದಿಗೆ ಕೊರೊನಾ- Miss World 2021 ಫೈನಲ್‌ ಮುಂದೂಡಿಕೆ

    ಪ್ರತಿ ವರ್ಷ ನಮ್ಮ ನಗರಗಳಲ್ಲಿ ಏಳು ದಿನಗಳ ಕಾಲ ನದಿಯ ಹಬ್ಬವನ್ನು ಆಚರಿಸಬೇಕು. ಈ ಹಬ್ಬದಂದು ಇಡೀ ನಗರದ ಜನರೆಲ್ಲಾ ಸೇರಿ ನದಿಯನ್ನು ಸ್ವಚ್ಛಗೊಳಿಸಬೇಕು ಮತ್ತು ಅದರ ವಿಶೇಷತೆಯ ಬಗ್ಗೆ ಗಮನ ಹರಿಸಬೇಕು ಎಂದರು.

  • ಲಾಕಪ್‍ನಿಂದ ತಪ್ಪಿಸಿಕೊಂಡವ ಠಾಣೆಯ ಪಕ್ಕದಲ್ಲಿದ್ದ ನದಿಗೆ ಹಾರಿ ಪ್ರಾಣ ಬಿಟ್ಟ

    ಲಾಕಪ್‍ನಿಂದ ತಪ್ಪಿಸಿಕೊಂಡವ ಠಾಣೆಯ ಪಕ್ಕದಲ್ಲಿದ್ದ ನದಿಗೆ ಹಾರಿ ಪ್ರಾಣ ಬಿಟ್ಟ

    ತಿರುವನಂಪುರಂ: ತೊಡುಪುಳ ಠಾಣೆಯಲ್ಲಿ ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಲಾಕಪ್‍ನಿಂದ ತಪ್ಪಿಸಿಕೊಂಡು ಹೋಗುವ ವೇಳೆ ಪಕ್ಕದ ನದಿಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

    ಶಫೀ(35) ಮೃತ ದುರ್ದೈವಿಯಾಗಿದ್ದಾನೆ. ಪೊಲೀಸ್ ಠಾಣೆಯ ಪಕ್ಕದಲ್ಲಿ ತೊಡುಪುಳ ನದಿ ಹರಿಯುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

    ಲಾಕ್‍ಅಪ್ ಅನ್ನು ಸರಿಯಾಗಿ ಲಾಕ್ ಮಾಡಿರಲಿಲ್ಲ. ಹೀಗಾಗಿ ಆರೋಪಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ನದಿಗೆ ಹಾರಿದ್ದ ಶಫಿಯನ್ನು ಸ್ಥಳೀಯರೊಂದಿಗೆ ಸೇರಿ ಪೊಲೀಸರು ದಡದ ಮೂಲಕ ಅಟ್ಟಿಸಿಕೊಂಡು ಹೋಗಿದ್ದರು. ಈ ವೇಳೆ ಸುಮಾರು ಒಂದು ಕಿಲೋಮೀಟರ್ ಈಜಿದನು. ಅಷ್ಟರಲ್ಲಿ ಅಲ್ಲಿಗೆ ಅಗ್ನಿಶಾಮಕ ದಳವೂ ಬಂದಿತ್ತು. ನಾವೆಲ್ಲರೂ ಅವನನ್ನು ದಡಕ್ಕೆ ಬರುವಂತೆ ಮನವಿ ಮಾಡಿದ್ದೇವು. ಆದರೆ ಅವನು ನಿರಾಕರಿಸಿದನು. ಸ್ವಲ್ಪ ಸಮಯದ ನಂತ ನೀರಿನಲ್ಲಿ ಮುಳುಗಿದನು ಎಂದು ಪೊಲೀಸರು ಹೇಳಿದರು. ಇದನ್ನೂ ಓದಿ: ಓಮಿಕ್ರಾನ್ ಬಗ್ಗೆ ಆತಂಕ ಬೇಡ- ಸೋಂಕಿತನ ಅಭಯ

    ಶಫಿ ವಿರುದ್ಧ ಸುಮಾರು 18 ಅಥವಾ 19 ಪ್ರಕರಣಗಳು ದಾಖಲಾಗಿದ್ದು, ಹಲ್ಲೆ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಐ ಡೋಂಟ್ ಕೇರ್, ಐ ಡೋಂಟ್ ಲೈಕ್ – ಲಸಿಕೆ ಬೇಡವೆಂದು ಹಠ ಹಿಡಿದ ವೃದ್ಧ