Tag: ನದಿ

  • ಮೀನು ಹಿಡಿಯಲು ತೆರಳಿದ್ದ ಅಣ್ಣ, ತಮ್ಮ ಕಾವೇರಿ ನದಿಯಲ್ಲಿ ಮುಳುಗಿ ದುರ್ಮರಣ

    ಮೀನು ಹಿಡಿಯಲು ತೆರಳಿದ್ದ ಅಣ್ಣ, ತಮ್ಮ ಕಾವೇರಿ ನದಿಯಲ್ಲಿ ಮುಳುಗಿ ದುರ್ಮರಣ

    ಮಡಿಕೇರಿ: ಮೀನು (Fish) ಹಿಡಿಯಲು ತೆರಳಿದ್ದ ಬಾಲಕರು ಕಾವೇರಿ ನದಿಯಲ್ಲಿ (Kaveri River) ಮುಳುಗಿ ಮೃತಪಟ್ಟ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ.

    ಪೃಥ್ವಿ (7), ಪ್ರಜ್ವಲ್ (4) ಮೃತ ಬಾಲಕರು. ಮೃತ ದುರ್ವೈವಿಗಳು ಇಂದು (ಭಾನುವಾರ) ಬೆಳಗ್ಗೆ ಕೂಡ್ಲುರು ಗ್ರಾಮದ ಬಳಿ ಮಾವಿನತೋಪು ಸಮೀಪ ಕಾವೇರಿ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದರು. ಈ ಸಂದರ್ಭ ಆಕಸ್ಮಿಕವಾಗಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಕೂಡ್ಲುರು ನಿವಾಸಿ ಕೂಲಿ ಕಾರ್ಮಿಕ ನಾಗರಾಜ್ ಎಂಬವರ ಪುತ್ರ ಪೃಥ್ವಿ, ಆಟೋ ಚಾಲಕ ಸತೀಶ್ ಎಂಬವರ ಪುತ್ರ ಪ್ರಜ್ವಲ್ ಇಬ್ಬರು ಸಂಬಂಧದಲ್ಲಿ ಸಹೋದರರಾಗಿದ್ದರು. ಇದನ್ನೂ ಓದಿ: ವಿದ್ಯಾರ್ಥಿ ಮೇಲೆ ಆವಾಹನೆಯಾಯ್ತು ಪಂಜುರ್ಲಿ ದೈವ!

    ಮನೆಯ ಸಮೀಪ ಜಮೀನಿಗೆ ಹೊಂದಿಕೊಂಡಂತೆ ಇದ್ದ ಕಾವೇರಿ ನದಿಯಲ್ಲಿ ಭಾನುವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಕುಶಾಲನಗರ ಪೊಲೀಸರು ಭೇಟಿ ನೀಡಿ ಕಾವೇರಿಯಲ್ಲಿ ಮುಳುಗಿದ್ದ ಮೃತ ಬಾಲಕರ ದೇಹವನ್ನು ನದಿ ಹೊರತೆಗೆದಿದ್ದಾರೆ. ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ಮೃತ ದೇಹಗಳನ್ನು ರವಾನೆ ಮಾಡಲಾಗಿದೆ. ಘಟನೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ʼಸುಪ್ರೀಂʼ ನಿವೃತ್ತ ನ್ಯಾಯಾಧೀಶ ಕನ್ನಡಿಗ ಅಬ್ದುಲ್‌ ನಜೀರ್‌ ಆಂಧ್ರಪ್ರದೇಶ ರಾಜ್ಯಪಾಲರಾಗಿ ನೇಮಕ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ನೀರುಪಾಲು

    ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ನೀರುಪಾಲು

    ವಿಜಯಪುರ: ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ನೀರುಪಾಲಾದ ಘಟನೆ ಮುದ್ದೇಬಿಹಾಳ (Muddebihal) ತಾಲೂಕಿನಲ್ಲಿ ನಡೆದಿದೆ.

    ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಬಳಿ ಕೆ.ಬಿ.ಜೆ.ಎನ್.ಎಲ್ ಕಾಲುವೆಯಲ್ಲಿ ಘಟನೆ ನಡೆದಿದೆ. ರಸೂಲ್ ಮಾಲದಾರ (25) ಹಾಗೂ ಸಮಿವುಲ್ಲಾ ಗೊಳಸಂಗಿ (10) ಮೃತ ದುರ್ದೈವಿಗಳಾಗಿದ್ದಾರೆ. ಮೃತರು ಬಾಗಲಕೋಟೆ (Bagalakote) ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದವರಾಗಿದ್ದಾರೆ. ಇದನ್ನೂ ಓದಿ: ಶರಾವತಿ ಸಂತ್ರಸ್ತರಿಗೆ ಜಮೀನು ಹಕ್ಕುಪತ್ರ ನೀಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ: ಬಿಎಸ್‌ವೈ

    ಮೃತರು ಕೂಲಿ ಕಾರ್ಮಿಕರಾಗಿದ್ದು, ಮುದ್ದೇಬಿಹಾಳದ ಚಿಕನ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು (Police) ಹಾಗೂ ಸ್ಥಳೀಯರು ಕಾಲುವೆಯಿಂದ ಶವ ಹೊರಕ್ಕೆ ತೆಗೆದಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ. ಇದನ್ನೂ ಓದಿ: ಟಿಕೆಟ್ ಗೊಂದಲ ನಿವಾರಣೆಗೆ ಅಖಾಡಕ್ಕಿಳಿದ ಕುಮಾರಸ್ವಾಮಿ – ತಿಂಗಳಾಂತ್ಯಕ್ಕೆ ಹಾಸನದಲ್ಲಿ ಸಭೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾವೇರಿ ಕೊಳ್ಳದಲ್ಲಿ ಭರ್ಜರಿ ಮಳೆ – ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ನಾಲ್ಕೂವರೆ ಪಟ್ಟು ಅಧಿಕ ನೀರು ಬಿಡುಗಡೆ

    ಕಾವೇರಿ ಕೊಳ್ಳದಲ್ಲಿ ಭರ್ಜರಿ ಮಳೆ – ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ನಾಲ್ಕೂವರೆ ಪಟ್ಟು ಅಧಿಕ ನೀರು ಬಿಡುಗಡೆ

    ಚಾಮರಾಜನಗರ: ರಾಜ್ಯದ ಕಾವೇರಿ ಕಣಿವೆಯಲ್ಲಿ (Kaveri River) ಭರ್ಜರಿ ಮಳೆಯಾಗಿರುವ (Rain) ಹಿನ್ನೆಲೆ ತಮಿಳುನಾಡಿಗೆ (Tamil Nadu) ನಿಗಧಿತ ಪ್ರಮಾಣಕ್ಕಿಂತ ನಾಲ್ಕೂವರೆ ಪಟ್ಟು ಅಧಿಕ ನೀರು ಬಿಡುಗಡೆಯಾಗಿದೆ. ಸುಪ್ರೀಂ ಕೋರ್ಟ್ (Supreme Court) ಆದೇಶದ ಪ್ರಕಾರ ಪ್ರಸಕ್ತ ಜಲವರ್ಷ ಜೂನ್‌ನಿಂದ ಸೆಪ್ಟೆಂಬರ್ ವರೆಗೆ 101 ಟಿಎಂಸಿ ನೀರು ಬಿಡುಗಡೆ ಮಾಡಬೇಕಿತ್ತು. ಆದರೆ ಈ ಅವಧಿಯಲ್ಲಿ 452.5 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ.

    1974ರ ನಂತರ ಇದೇ ಮೊದಲ ಬಾರಿಗೆ ಅತ್ಯಧಿಕ ಪ್ರಮಾಣದಲ್ಲಿ ತಮಿಳುನಾಡಿಗೆ ನೀರನ್ನು ಬಿಡುಗಡೆ ಮಾಡಲಾಗಿದೆ. ಬಿಳಿಗುಂಡ್ಲು ಜಲಮಾಪನ ಕೇಂದ್ರದಲ್ಲಿ ನೀರಿನ ಪ್ರಮಾಣ ದಾಖಲಾಗಿದೆ. ಜೂನ್‌ನಲ್ಲಿ 16.46 ಟಿಎಂಸಿ, ಜುಲೈ ತಿಂಗಳಿನಲ್ಲಿ 106.93 ಟಿಎಂಸಿ, ಆಗಸ್ಟ್ 223.57 ಟಿಎಂಸಿ ಹಾಗೂ ಸೆಪ್ಟೆಂಬರ್‌ನಲ್ಲಿ 105.52 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಅಗ್ನಿಶಾಮಕ ದಳಕ್ಕೆ ಸೇರ್ಪಡೆಯಾಯ್ತು 90 ಮೀಟರ್ ಏರುವ ಏರಿಯಲ್ ಲ್ಯಾಡರ್ ವಾಹನ

    ಕಳೆದ 4 ವರ್ಷಗಳಿಂದಲೂ ತಮಿಳುನಾಡಿಗೆ ನಿಗದಿಂತ ಅಧಿಕ ಪ್ರಮಾಣದ ನೀರು ಹರಿದು ಹೋಗಿದೆ. 2018-19 ರ ಜಲವರ್ಷದಲ್ಲಿ ನಿಗಧಿತ ಪ್ರಮಾಣಕ್ಕಿಂತ 228 ಟಿಎಂಸಿ, 2019-20 ರಲ್ಲಿ 97 ಟಿಎಂಸಿ, 2020-21 ರಲ್ಲಿ 34 ಟಿಎಂಸಿ, 2021-22 ರಲ್ಲಿ 103 ಟಿಎಂಸಿ ಅಧಿಕ ನೀರು ಬಿಡುಗಡೆ ಮಾಡಲಾಗಿದೆ. ಆದರೆ ಈ ವರ್ಷ ಜಲವಿವಾದಕ್ಕೆ ವರುಣ ಅವಕಾಶ ನೀಡಿಲ್ಲ. ಇದನ್ನೂ ಓದಿ: ಅಗ್ನಿ ದುರಂತಗಳಿಂದ ಜನರನ್ನು ರಕ್ಷಿಸುವ ಸಾಮರ್ಥ್ಯ ಹೆಚ್ಚಳ: ಬೊಮ್ಮಾಯಿ

    ಮೆಟ್ಟೂರು ಜಲಾಶಯದಿಂದ ನದಿ ಮೂಲಕ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದ್ದು, ಹೆಚ್ಚುವರಿ ನೀರನ್ನು ಸಂಗ್ರಹಿಸಲು ಮೇಕೆದಾಟು ಯೋಜನೆ ಸಹಕಾರಿಯಾಗಿದೆ. ಮೇಕೆದಾಟು ಯೋಜನೆ ಜಾರಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ.

    Live Tv

    [brid partner=56869869 player=32851 video=960834 autoplay=true]

  • ಬೈಕ್ ಸಮೇತ ನದಿಯಲ್ಲಿ ಕೊಚ್ಚಿ ಹೋದ ಸವಾರರು- ಓರ್ವ ಸಾವು

    ಬೈಕ್ ಸಮೇತ ನದಿಯಲ್ಲಿ ಕೊಚ್ಚಿ ಹೋದ ಸವಾರರು- ಓರ್ವ ಸಾವು

    ಚಿಕ್ಕಬಳ್ಳಾಪುರ: ನದಿಯಲ್ಲಿ (River) ಬೈಕ್ ಸಮೇತ ಸವಾರರು ಕೊಚ್ಚಿ ಹೋಗಿದ್ದು, ಅವರಲ್ಲಿ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವನನ್ನು ರಕ್ಷಣೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗೌರಿಬಿದನೂರು ತಾಲೂಕಿನ ಇಡಗೂರು -ಜಾಲಹಳ್ಳಿ ಗ್ರಾಮಗಳ ಮಧ್ಯೆ ನಡೆದಿದೆ.

    ತುಮಕೂರು (Tumakuru) ಜಿಲ್ಲೆಯ ಕಡಬಗೆರೆ ಗ್ರಾಮದ ಬಸವರಾಜು (30) ಮೃತ ವ್ಯಕ್ತಿ. ಮೃತ ಬಸವರಾಜು ಗೌರಿಬಿದನೂರು ತಾಲೂಕು ಆನುಡಿ ಗ್ರಾಮದ ಸಂಬಂಧಿಕರಾದ ಪ್ರಶಾಂತ್ ಮನೆಗೆ ಆಗಮಿಸಿದ್ದ. ಹೀಗಾಗಿ ಶುಕ್ರವಾರ ಸಂಜೆ ಪ್ರಶಾಂತ್ ಜೊತೆ ಬೈಕಿನಲ್ಲಿ ಬಸವರಾಜು ತೆರಳುತ್ತಿದ್ದ ವೇಳೆ ಇಬ್ಬರು ಬೈಕ್ ಸಮೇತ ನದಿಯಲ್ಲಿ ಕೊಚ್ಚಿ ಹೋಗಿದ್ದರು. ವಿಷಯ ತಿಳಿದು ಸ್ಥಳೀಯ ಗ್ರಾಮಸ್ಥರೆಲ್ಲರೂ ಸೇರಿ ಪ್ರಶಾಂತ್‌ನನ್ನು ರಕ್ಷಿಸಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ದಾಖಲೆ ಮಳೆ – 92 ವಾರ್ಡ್‍ಗಳಲ್ಲಿ ವರುಣಾರ್ಭಟ

    POLICE JEEP

    ಇಂದು ಬೆಳಗ್ಗೆ ಬಸವರಾಜು ಅವರ ಮೃತ ದೇಹ ನದಿ ಪಾತ್ರದ ಪೊದೆಯೊಂದರಲ್ಲಿ ಪತ್ತೆಯಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಮೃತ ದೇಹವನ್ನು ಹೊರ ತೆಗೆದಿದ್ದು, ಸದ್ಯ ಗೌರಿಬಿದನೂರು ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನೆಯಲ್ಲಿ ಕೊಚ್ಚಿ ಹೋದ ಬೈಕ್ ಇನ್ನೂ ಪತ್ತೆಯಾಗಿಲ್ಲ. ಇದನ್ನೂ ಓದಿ: ಮುರುಘಾ ಮಠದಲ್ಲಿ ಮಗು ಪತ್ತೆ – ಮಗುವಿನ ಹಿನ್ನೆಲೆ ಬಗ್ಗೆ ರೋಚಕ ಟ್ವಿಸ್ಟ್

    Live Tv
    [brid partner=56869869 player=32851 video=960834 autoplay=true]

  • ಮೊಸಳೆಯನ್ನು ಹಿಡಿದು ಕ್ಲಾಸ್‌ ರೂಮಿನಲ್ಲಿ ಕೂಡಿ ಹಾಕಿದ ಗ್ರಾಮಸ್ಥರು

    ಮೊಸಳೆಯನ್ನು ಹಿಡಿದು ಕ್ಲಾಸ್‌ ರೂಮಿನಲ್ಲಿ ಕೂಡಿ ಹಾಕಿದ ಗ್ರಾಮಸ್ಥರು

    ಲಕ್ನೋ: ಸರ್ಕಾರಿ ಶಾಲೆಯ ಆವರಣದಲ್ಲಿ ಮೊಸಳೆ (Crocodile) ಕಾಣಿಸಿಕೊಂಡು, ವಿದ್ಯಾರ್ಥಿಗಳು (Student) ಆತಂಕ ಉಂಟಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಖಾಸಿಂಪುರ ಗ್ರಾಮದ ಶಾಲೆಯಲ್ಲಿ (School) ಈ ಘಟನೆ ನಡೆದಿದೆ. ಮೊಸಳೆಯನ್ನು ಕಂಡ ನಂತರ ಮಕ್ಕಳು ಹಾಗೂ ಸಿಬ್ಬಂದಿ ಎಚ್ಚೆತ್ತಿದ್ದಾರೆ. ಇದರಿಂದಾಗಿ ಗ್ರಾಮಸ್ಥರಿಗೆ ಹಾಗೂ ಅಧಿಕಾರಿಗೆ ತಿಳಿಸಿದ್ದಾರೆ. ಕೂಡಲೇ ಗ್ರಾಮಸ್ಥರು ಧಾವಿಸಿ ಮೊಸಳೆಯನ್ನು ಹಿಡಿದು ತರಗತಿಯಲ್ಲಿ (ClassRoom) ಕೂಡಿ ಹಾಕಿ ಬೀಗ ಹಾಕಿದರು. ಇದನ್ನೂ ಓದಿ: ಶಶಿ ತರೂರ್‌ಗೆ ಕೇರಳದಲ್ಲೇ ಸಿಕ್ತಿಲ್ಲ ಬೆಂಬಲ – ರಾಹುಲ್ ಸ್ಪರ್ಧಿಸುವಂತೆ ಒತ್ತಾಯ

    ನಂತರ ಜಿಲ್ಲಾ ಅಧಿಕಾರಿಗಳು ಮತ್ತು ರಾಜ್ಯ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ. ಅದಾದ ಬಳಿಕ ಶಾಲೆಯಲ್ಲಿದ್ದ ಮೊಸಳೆಯನ್ನು ಗಂಗಾ ನದಿಗೆ ಬಿಡಲಾಯಿತು. ಗ್ರಾಮದ ಕೆರೆಯಲ್ಲಿ ಹಲವಾರು ಮೊಸಳೆಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಹಲವು ಬಾರಿ ಸ್ಥಳೀಯ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಶಾಲೆಯ ಸಿಬ್ಬಂದಿ ಕಿಡಿಕಾರಿದರು. ಇದನ್ನೂ ಓದಿ: ಉಗ್ರ ಸಂಘಟನೆ ಜೊತೆ ಸಂಪರ್ಕ-10 ರಾಜ್ಯಗಳ SDPI, PFI ಕಚೇರಿ, ನಾಯಕರ ಮನೆ ಮೇಲೆ NIA ದಾಳಿ

    Live Tv
    [brid partner=56869869 player=32851 video=960834 autoplay=true]

  • ಸೆಲ್ಫಿ ಕ್ರೇಜ್‍- ಕಾಲುಜಾರಿ ನೀರಿಗೆ ಬಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಶವವಾಗಿ ಪತ್ತೆ

    ಸೆಲ್ಫಿ ಕ್ರೇಜ್‍- ಕಾಲುಜಾರಿ ನೀರಿಗೆ ಬಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಶವವಾಗಿ ಪತ್ತೆ

    ರಾಯಚೂರು: ಸೆಲ್ಫಿ (Selfie) ಕ್ರೇಜ್‍ನಿಂದ ಕಾಲುಜಾರಿ ನೀರಿಗೆ ಬಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು (Student) ಶವವಾಗಿ ಪತ್ತೆಯಾದ ಘಟನೆ ರಾಯಚೂರು (Raichur) ಜಿಲ್ಲೆಯಲ್ಲಿ ನಡೆದಿದೆ.

    ರಾಯಚೂರು ತಾಲೂಕಿನ ಕಲಮಲಾ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆ ಹೈಡ್ರಲ್ ಪ್ರಾಜೆಕ್ಟ್‌ನಲ್ಲಿ ಈ ಘಟನೆ ನಡೆದಿದೆ. ರಾಯಚೂರಿನ ಬೆಸ್ಟ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಸುಜಿತ್(16) ಮತ್ತು ವೈಭವ (16) ಮೃತರು. ಪಿಕ್ನಿಕ್‍ಗಾಗಿ ಬಂದಿದ್ದ ವೇಳೆ ವಿದ್ಯಾರ್ಥಿಗಳು ಸೆಲ್ಫಿ ತೆಗೆಯುವಾಗ ಕಾಲುವೆಗೆ ಬಿದ್ದಿದ್ದಾರೆ. ಅದಾದ ಬಳಿಕ ನಾಪತ್ತೆ ಆಗಿದ್ದರು. ಇದನ್ನೂ ಓದಿ: ಇಂದಿನಿಂದ ಬೆಂಗಳೂರಲ್ಲಿ ಮತ್ತೆ ಆಪರೇಷನ್‌ ಬುಲ್ಡೋಜರ್‌ – ದೊಡ್ಡ ಕಟ್ಟಡಗಳು, ವಿಲ್ಲಾಗಳನ್ನು ಕೆಡವುತ್ತಾ BBMP?

    crime

    ನಿನ್ನೆ ಸಂಜೆ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಇಂದು ಎನ್‍.ಆರ್. ಶೆಟ್ಟಿಯ ಮುಚ್ಚಿರುವ ಹೈಡ್ರಲ್ ಪ್ರಾಜೆಕ್ಟ್‌ನಲ್ಲಿ ಶವವಾಗಿ ಪತ್ತೆ ಆಗಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತದೇಹಗಳನ್ನು ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಜಮೀರ್ ಸಿಎಂ ಆಗ್ತಾರೆ ಎಂದ ಚರ್ಚ್ ಫಾದರ್

    Live Tv
    [brid partner=56869869 player=32851 video=960834 autoplay=true]

  • ಗಣಪತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು

    ಗಣಪತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು

    ಹಾಸನ: ಗಣಪತಿ ವಿಸರ್ಜನೆ ವೇಳೆ ವ್ಯಕ್ತಿಯೊಬ್ಬ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹಾಸನದ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

    ಯತೀಶ್ (55) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಡೇಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯತೀಶ್ ಬಾಗೆ ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ. ಇದನ್ನೂ ಓದಿ: ನೆಲಮಂಗಲದಲ್ಲಿ ಹೆದ್ದಾರಿಗೆ ನುಗ್ಗಿದ ನೀರು – ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್

    POLICE JEEP

    ಗಣೇಶ ಮೂರ್ತಿ ವಿಸರ್ಜನೆ ವೇಳೆ ಯತೀಶ್ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿ ಯತೀಶ್ ಶವಕ್ಕಾಗಿ ಅಗ್ನಿಶಾಮಕ ದಳದಿಂದ ಶೋಧಕಾರ್ಯ ಮುಂದುವರಿಸಿದ್ದಾರೆ. ಅಷ್ಟೇ ಅಲ್ಲದೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಜಮೀರ್ `ಗಣೇಶ’ ಅಸ್ತ್ರ – ಇಷ್ಟು ದಿನ ಇಲ್ಲದ್ದು ಈಗ್ಯಾಕೆ? ಶಾಸಕರ ನಡೆಗೆ ಸ್ಥಳೀಯರಿಂದ ಆಕ್ರೋಶ

    Live Tv
    [brid partner=56869869 player=32851 video=960834 autoplay=true]

  • ನದಿಗೆ ಬಿದ್ದ 20 ರೈತರಿದ್ದ ಟ್ರ್ಯಾಕ್ಟರ್ – ಹಲವರು ನಾಪತ್ತೆ

    ನದಿಗೆ ಬಿದ್ದ 20 ರೈತರಿದ್ದ ಟ್ರ್ಯಾಕ್ಟರ್ – ಹಲವರು ನಾಪತ್ತೆ

    ಲಕ್ನೋ: 20ಕ್ಕೂ ಹೆಚ್ಚು ರೈತರು ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್ ಒಂದು ನದಿಗೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಹರ್ಡೋಯಿ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

    ಘಟನೆ ನಡೆದ ವೇಳೆ 13 ಮಂದಿ ನದಿಯನ್ನು ಈಜಿ ಪಾರಾಗಿದ್ದಾರೆ. ಆದರೆ ಉಳಿದವರು ನಾಪತ್ತೆಯಾಗಿದ್ದು, ಅವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವಿನಾಶ್ ಕುಮಾರ್ ತಿಳಿಸಿದ್ದಾರೆ.

    ರೈತರು ತಾವು ಬೆಳೆದಿದ್ದ ಸೌತೆಕಾಯಿಯನ್ನು ಸಮೀಪದ ಮಂಡಿ ಗ್ರಾಮದಲ್ಲಿ ಮಾರಾಟ ಮಾಡಿ, ತಮ್ಮ ಗ್ರಾಮಕ್ಕೆ ಮರಳುತ್ತಿದ್ದರು. ಈ ವೇಳೆ ಪಾಲಿ ಪ್ರದೇಶದ ಗರ್ರಾ ನದಿಯ ಸೇತುವೆಯ ಮೇಲೆ ಟ್ರ‍್ಯಾಕ್ಟರ್ ಚಕ್ರವೊಂದು ಕಳಚಿ ಬಿದ್ದಿದೆ. ಟ್ರ‍್ಯಾಕ್ಟರ್ ಪಲ್ಟಿಯಾಗಿ ಟ್ರಾಲಿ ಸಮೇತ ರೈತರು ನೀರಿಗೆ ಬಿದ್ದಿರುವುದಾಗಿ ಪ್ರತ್ಯಕ್ಷದರ್ಶಿ ಶ್ಯಾಮ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಸಂಘದ ಚುನಾವಣೆ – ಯುವತಿಯರ ಕಾಲಿಗೆ ಬಿದ್ದು ವೋಟು ಕೇಳಿದ ಯುವಕ

    ನದಿಗೆ ಬಿದ್ದಿರುವ ಟ್ರ್ಯಾಕ್ಟರ್ ಇನ್ನೂ ಪತ್ತೆಯಾಗಿಲ್ಲ. ಅದಕ್ಕಾಗಿ ಕ್ರೇನ್ ಅನ್ನು ತರಿಸಲಾಗಿದೆ. ಸೇತುವೆಯ ಕೆಳಗಡೆ ಬಲೆಗಳನ್ನೂ ಇಡಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಗ್ರಾಮಸ್ಥರೂ ಶಾಮೀಲಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ನಾವು ರಾಜ್ಯ ವಿಪತ್ತು ಪಡೆಗೆ ಕರೆ ನೀಡಿದ್ದು, ಅವರು ಶೀಘ್ರವೇ ಆಗಮಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನಿ ನುಸುಳುಕೋರನ ಬಂಧಿಸಿದ ಬಿಎಸ್‌ಎಫ್‌

    Live Tv
    [brid partner=56869869 player=32851 video=960834 autoplay=true]

  • ನೀರಿನಲ್ಲಿ ಕೊಚ್ಚಿಹೋದ ಲಾರಿ – ಓರ್ವ ನಾಪತ್ತೆ, ಐವರ ರಕ್ಷಣೆ

    ನೀರಿನಲ್ಲಿ ಕೊಚ್ಚಿಹೋದ ಲಾರಿ – ಓರ್ವ ನಾಪತ್ತೆ, ಐವರ ರಕ್ಷಣೆ

    ಕಾರವಾರ: ತಾತ್ಕಾಲಿಕ ಸೇತುವೆಯ ಮೇಲೆ ಸಾಗುತ್ತಿದ್ದ ಲಾರಿಯೊಂದು ನದಿ ನೀರಿನ ರಭಸಕ್ಕೆ ಕೊಚ್ಚಿ ಹೋದ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಪಣಸಗುಳಿಯಲ್ಲಿ ಬುಧವಾರ ಸಂಜೆ ನಡೆದಿದೆ.

    ಲಾರಿಯಲ್ಲಿದ್ದ ಐವರನ್ನು ರಕ್ಷಣೆ ಮಾಡಲಾಗಿದ್ದು, ಓರ್ವ ನಾಪತ್ತೆಯಾಗಿದ್ದಾನೆ. ರಾಜೇಶ್ ಹರಿಕಂತ್ರ, ಸುನೀಲ್, ರಾಜು, ಶಿವಾನಂದ, ದಿನೇಶ್ ರಕ್ಷಣೆಗೊಳಗಾದವರಾಗಿದ್ದು, ಸಂದೀಪ್ ಕಾಣೆಯಾದ ವ್ಯಕ್ತಿ. ಆತನ ಪತ್ತೆಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

    ಅಂಕೋಲಾದ ಪಣಸಗುಳಿ ಗ್ರಾಮಕ್ಕೆ ಚಿರೇಕಲ್ಲನ್ನು ಲಾರಿಯಲ್ಲಿ ತುಂಬಿ ಅನ್‌ಲೋಡ್ ಮಾಡಿ ಮರಳಿ ಬರುವಾಗ ಈ ಘಟನೆ ನಡೆದಿದೆ. ಸೇತುವೆ ಮೇಲೆ ಗಂಗಾವಳಿ ನದಿ ನೀರು ಹರಿದಿದ್ದು, ಅದರಲ್ಲಿಯೇ ದಾಟಲು ಹೋಗಿ, ರಭಸದ ನೀರಿನ ಹರಿವಿನಿಂದ ಲಾರಿ ನೀರಿನಲ್ಲಿ ಸಿಲುಕಿ ಕೊಚ್ಚಿ ಹೋಗಿದೆ. ಇದನ್ನೂ ಓದಿ: ಮದರಸಾಗಳಿಗಾಗಿ ವಿಶೇಷ ಮಂಡಳಿ ರಚನೆಗೆ ಪ್ಲಾನ್- ತಜ್ಞರ ವರದಿ ಕೇಳಿದ ಸಚಿವ ನಾಗೇಶ್

    ಲಾರಿ ಮುಳುಗುತ್ತಿದ್ದಂತೆ ಅದರಲ್ಲಿದ್ದವರು ಹೇಗೋ ಮಾಡಿ ಲಾರಿ ಮೇಲೆ ನಿಂತು ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಈ ವೇಳೆ ಗುಳ್ಳಾಪುರದ ಸ್ಥಳೀಯ ಬೋಟ್ ಸಹಾಯದಿಂದ ಐವರ ರಕ್ಷಣೆ ಮಾಡಲಾಗಿದೆ. ನಾಪತ್ತೆಯಾಗಿರುವ ಸಂದೀಪ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿಂದು 1,255 ಮಂದಿಗೆ ಕೊರೊನಾ – ಮೂವರು ಸಾವು

    Live Tv
    [brid partner=56869869 player=32851 video=960834 autoplay=true]

  • ನದಿ, ಕೆರೆಗಳಲ್ಲಿ ಸ್ನಾನ ಮಾಡೋ ಮುನ್ನ ಹುಷಾರ್ – ವಿದೇಶದಲ್ಲಿ ಪತ್ತೆಯಾಗಿದೆ ಮೆದುಳು ತಿನ್ನುವ ಡೆಡ್ಲಿ ವೈರಸ್

    ನದಿ, ಕೆರೆಗಳಲ್ಲಿ ಸ್ನಾನ ಮಾಡೋ ಮುನ್ನ ಹುಷಾರ್ – ವಿದೇಶದಲ್ಲಿ ಪತ್ತೆಯಾಗಿದೆ ಮೆದುಳು ತಿನ್ನುವ ಡೆಡ್ಲಿ ವೈರಸ್

    ವಾಷಿಂಗ್ಟನ್: ಕೆರೆ, ಕೊಳ್ಳ ಹಾಗೂ ನದಿಗಳಲ್ಲಿ ಸ್ನಾನ ಮಾಡುವ ಮುನ್ನ ಜನರು ಎಚ್ಚರ ವಹಿಸಬೇಕಾಗಿದೆ. ಏಕೆಂದರೆ ಅಪರೂಪದ ಅಮೀಬಾ ಡೆಡ್ಲಿ ವೈರಸ್ ಅಮೆರಿಕದಲ್ಲಿ ಪತ್ತೆಯಾಗಿದ್ದು, ಇದು ನೇರವಾಗಿ ಮೆದುಳು ನಾಶಗೊಳಿಸುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ನದಿಗೆ ಸ್ನಾನ ಮಾಡಲು ಹೋಗಿದ್ದ ಬಾಲಕನ ದೇಹಕ್ಕೆ `ಅಮೀಬಾ’ ಹೆಸರಿನ ವೈರಸ್ ಸೇರಿದ್ದು ಬಾಲಕ ಮೃತಪಟ್ಟಿರುವ ಪೂರ್ವ ಅಮೆರಿಕದಲ್ಲಿ ನಡೆದಿದೆ.

    ಪೂರ್ವ ಅಮೆರಿಕದ ಅಮೆರಿಕದ ನೆಬ್ರಸ್ಕಾದ ಎಲ್ಖೋರ್ನ್ ನದಿಯಲ್ಲಿ ಬಾಲಕ ಸ್ನಾನ ಮಾಡಲು ಹೋದಾಗ ವೈರಸ್ ದೇಹ ಸೇರಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಕಾರ್ಯಕರ್ತರೇ ತಮ್ಮ ನಾಯಕರ ಮೇಲೆ ಅಟ್ಟಹಾಸ ಮೆರೆಯುತ್ತಿದ್ದಾರೆ: ಸುಧಾಕರ್

    ಬಾಲಕನು ಆಗಸ್ಟ್ 8 ರಂದು ಈ ನದಿಯಲ್ಲಿ ಈಜುತ್ತಿದ್ದನು. ನಂತರ ಸ್ನಾನ ಮಾಡುತ್ತಿರುವಾಗ ಅಮೀಬಾ ವೈರಸ್ ದೇಹ ಪ್ರವೇಶಿಸಿದೆ. 5 ದಿನಗಳ ನಂತರ ರೋಗ ಲಕ್ಷಣಗಳು ಕಂಡುಬಂದಿದೆ. ರೋಗಲಕ್ಷಣಗಳು ಕಾಣಿಸಿಕೊಂಡ 48 ಗಂಟೆಗಳ ಬಳಿಕ ಪೋಷಕರು ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಗೆ ದಾಖಲಾದ 10 ದಿನಗಳ ನಂತರ ಬಾಲಕ ಮೃತಪಟ್ಟಿದ್ದಾನೆ ಎಂದು ಯುಎಸ್ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

    ಸೋಂಕು ಹರಡೋದು ಹೇಗೆ?
    ಮೆದುಳು ತಿನ್ನುವ ಈ ಅಮೀಬಾ ಹೆಸರಿನ ವೈರಸ್ `ನೇಗ್ಲೇರಿಯಾ ಫೌಲೆರಿ’ಯಿಂದ ಬರುತ್ತದೆ. ಮಗುವಿನ ಮೆದುಳಿನ ಸುತ್ತಲೂ ಹರಿಯುವ ಸೆರೆಬ್ರೊಸ್ಪೈನಲ್‌ ದ್ರವದಲ್ಲಿ ನೇಗ್ಲೇರಿಯಾ ಫೌಲೆರಿ ಕಂಡುಬಂದಿದೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ದೃಢಪಡಿಸಿದೆ. ಇದನ್ನೂ ಓದಿ: ಅಜಾದ್‌ ಬೆನ್ನಲ್ಲೇ ಕಾಂಗ್ರೆಸ್‌ನ ಮಹತ್ವದ ಹುದ್ದೆಗೆ ಆನಂದ್‌ ಶರ್ಮಾ ರಾಜೀನಾಮೆ

    ಸಿಡಿಸಿ ಹೇಳುವಂತೆ ಅಮೀಬಾ ನೀರಿನಲ್ಲಿದ್ದಾಗ ಮೂಗಿನ ಮೂಲಕ ದೇಹವನ್ನು ಪ್ರವೇಶಿಸಬಹುದು. ಮೂಗಿನ ಮೂಲಕ ಮೆದುಳಿಗೆ ಚಲಿಸಿ ದಾಳಿ ಮಾಡುತ್ತದೆ. ಇಂತಹ ವೈರಸ್ ಸಿಹಿನೀರಿನ ಸರೋವರಗಳು, ನದಿಗಳು, ಕಾಲುವೆಗಳು ಹಾಗೂ ಕೊಳಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ ಎಂದು ಹೇಳಿದೆ.

    Live Tv
    [brid partner=56869869 player=32851 video=960834 autoplay=true]