Tag: ನದಿ

  • ಮಗಳು ಮೃತಪಟ್ಟಿದ್ದಕ್ಕೆ ಒಬ್ಬರ ಕೈಗೆ ಒಬ್ಬರು ವೇಲ್ ಕಟ್ಟಿಕೊಂಡು ಮೂವರು ಆತ್ಮಹತ್ಯೆ

    ಮಗಳು ಮೃತಪಟ್ಟಿದ್ದಕ್ಕೆ ಒಬ್ಬರ ಕೈಗೆ ಒಬ್ಬರು ವೇಲ್ ಕಟ್ಟಿಕೊಂಡು ಮೂವರು ಆತ್ಮಹತ್ಯೆ

    ಚಿಕ್ಕಮಗಳೂರು: ಒಬ್ಬರ ಕೈಗೆ ಒಬ್ಬರು ವೇಲ್ ಬಿಗಿದುಕೊಂಡು ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ನಡೆದಿದೆ.

    ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಕೆಳಪೇಟೆ ನಿವಾಸಿಗಳಾದ ಸುಬ್ಬಮ್ಮ, ಶಶಿಕಲಾ, ಉಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಮೇಶ್ ಹಾಗೂ ಶಶಿಕಲಾ ದಂಪತಿಯಾಗಿದ್ದು, ಸುಬ್ಬಮ್ಮ ಶಶಿಕಲಾಳ ತಾಯಿಯಾಗಿದ್ದಾರೆ.

    ದಂಪತಿಯ 2 ವರ್ಷದ ಮಗಳು ಅಮೂಲ್ಯಳಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದಿದ್ರಿಂದ ಹಾರ್ಟ್ ಆಪರೇಷನ್ ಮಾಡಿಸಿದ್ರು. ಹೀಗಿದ್ದರೂ ಮಗು ಬದುಕದೇ ಯುಗಾದಿ ಹಬ್ಬದಂದು ಸಾವನ್ನಪ್ಪಿತ್ತು. ಇದರಿಂದ ಮನನೊಂದ ಮನೆಯವರು, ಕುಟುಂಬದಲ್ಲಿ ನಾವ್ಯಾರು ಬದುಕಬಾರದೆಂದು ಎಲ್ಲರೂ ಕೈಗೆ ವೇಲ್ ಕಟ್ಟಿಕೊಂಡು ಇಂದು ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

    ನದಿಯಿಂದ ಒಮ್ಮೆಲೆ ಮೂರು ಮೃತದೇಹಗಳನ್ನು ಹೊರತೆಗೆಯುವಾಗ ಸ್ಥಳೀಯರು ಕಣ್ಣಾಲಿಗಳು ತೇವಗೊಂಡು, ನಮ್ಮ ಶತ್ರುಗಳಿಗೂ ಈ ಸ್ಥಿತಿ ಬರಬಾರದೆಂದು ಕಣ್ಣೀರಿಟ್ಟಿದ್ದಾರೆ. ಈ ಬಗ್ಗೆ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಓರ್ವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ನಾಲ್ವರು ನೀರುಪಾಲು

    ಓರ್ವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ನಾಲ್ವರು ನೀರುಪಾಲು

    ಚಿಕ್ಕಮಗಳೂರು: ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನೀರು ಪಾಲಾಗಿರುವ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರದ ತುಂಗಾ ನದಿಯಲ್ಲಿ ನಡೆದಿದೆ.

    ನಾಗೇಂದ್ರ, ಪ್ರದೀಪ್, ರಾಮಣ್ಣ ಮತ್ತು ರತ್ನಾಕರ್ ಮೃತ ದುರ್ದೈವಿಗಳು. ಮೂವರು ಸಂಬಂಧಿಗಳು ರಾಮಣ್ಣ ಮನೆಗೆ ಕಾರ್ಯಕ್ರಮಕ್ಕಾಗಿ ಬಂದಿದ್ದರು. ಹಾಗೆಯೇ ಎಲ್ಲರೂ ಇಂದು ತುಂಗಾ ನದಿಗೆ ಈಜಲು ಹೋಗಿದ್ದಾರೆ. ಆಗ ಪ್ರದೀಪ್ ನದಿಯಲ್ಲಿ ಸುಳಿಗೆ ಸಿಲುಕೊಂಡಿದ್ದಾರೆ. ಇದನ್ನು ಗಮನಿಸಿದ ಮೂವರು ಅವರನ್ನ ರಕ್ಷಿಸಲು ಹೋಗಿದ್ದು, ಪ್ರದೀಪ್ ಜೊತೆ ರಕ್ಷಿಸಲು ಹೋದ ಮೂವರೂ ನೀರು ಪಾಲಾಗಿದ್ದಾರೆ. ರತ್ನಾಕರ್ ಕೊಪ್ಪ ತಾಲೂಕಿನ ಬಾಳೆಹಕ್ಲು ಗ್ರಾಮದವರು ಎನ್ನಲಾಗಿದೆ.

    ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಶೃಂಗೇರಿ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಹಾಗೂ ನುರಿತ ಈಜು ತಜ್ಞರು ಬಂದು ಹುಡುಕಾಟ ಶುರುಮಾಡಿದ್ದಾರೆ. ಸದ್ಯಕ್ಕೆ ಮೂವರ ಮೃತ ದೇಹ ಪತ್ತೆಯಾಗಿದ್ದು, ಇನ್ನೂ ಉಳಿದ ಓರ್ವನ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಈ ಘಟನೆ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಪ್ರೇಮ ವೈಫಲ್ಯದಿಂದ ನದಿಗೆ ಹಾರಿದ ಯುವಕ – ಕೊನೆಗೆ ತಾನೇ ಈಜಿ ದಡ ಸೇರಿದ

    ಪ್ರೇಮ ವೈಫಲ್ಯದಿಂದ ನದಿಗೆ ಹಾರಿದ ಯುವಕ – ಕೊನೆಗೆ ತಾನೇ ಈಜಿ ದಡ ಸೇರಿದ

    ಮಂಗಳೂರು: ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನೊಬ್ಬ ಕೊನೆಗೆ ತಾನೇ ಈಜಿ ದಡ ಸೇರಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಕಾಸರಗೋಡಿನ ಮಂಜೇಶ್ವರ ಬಳಿಯ ತೂಮಿನಾಡು ನಿವಾಸಿ ನೌಫಲ್ (23) ನದಿಗೆ ಹಾರಿದ್ದ ಯುವಕ. ಈತ ಮಂಗಳೂರು – ಉಳ್ಳಾಲ ಸಂಪರ್ಕಿಸುವ ನೇತ್ರಾವತಿ ಸೇತುವೆಯ ಮೇಲ್ಭಾಗದಿಂದ ಹಾರಿದ್ದು ಕೊನೆಯ ಕ್ಷಣದಲ್ಲಿ ಈಜುತ್ತಾ ಸೇತುವೆಯ ಪಿಲ್ಲರ್ ಹತ್ತಿ ಕುಳಿತಿದ್ದಾನೆ.

    ನೌಫಲ್ ತನ್ನ ಸ್ನೇಹಿತನ ಜೊತೆಗೆ ಟೆಂಪೊ ಚಲಾಯಿಸಿಕೊಂಡು ಮಂಗಳೂರು ಕಡೆಗೆ ಹೊರಟಿದ್ದನು. ಆದರೆ ನೇತ್ರಾವತಿ ಸೇತುವೆ ಮಧ್ಯೆ ತಲುಪಿದಾಗ ತನಗೆ ವಾಂತಿ ಬರುತ್ತಿದೆ ಎಂದು ಹೇಳಿ ಟೆಂಪೊ ನಿಲ್ಲಿಸಿದ್ದಾನೆ. ಬಳಿಕ ಸೇತುವೆಯ ಬದಿಗೆ ಹೋದ ನೌಫಾಲ್, ವಾಂತಿ ಮಾಡುವ ನೆಪದಲ್ಲಿ ನೇತ್ರಾವತಿ ನದಿಗೆ ಹಾರಿದ್ದಾನೆ. ನದಿಗೆ ಬಿದ್ದ ಯುವಕ ಕೊನೆಗೆ ನೀರಿನಿಂದ ಮೇಲಕ್ಕೆ ಬರುತ್ತಲೇ ಬದುಕಿದೆಯಾ ಬಡ ಜೀವವೇ ಎನ್ನುತ್ತಾ ಈಜತೊಡಗಿದ್ದು, ಸೇತುವೆಯ ಪಿಲ್ಲರ್ ಬಳಿಗೆ ತೆರಳಿ ಸ್ಲ್ಯಾಬ್ ಹತ್ತಿ ಕುಳಿತಿದ್ದಾನೆ.

    ಇದನ್ನು ವೀಕ್ಷಿಸಲು ಸೇತುವೆಯ ಮೇಲೆ ಕುತೂಹಲಿಗರ ದಂಡೇ ಸೇರಿತ್ತು. ಮಂಗಳೂರು ನಗರ ಟ್ರಾಫಿಕ್ ಪೊಲೀಸರು, ಸಾರ್ವಜನಿಕರ ಸಹಕಾರದಿಂದ ನೌಫಲ್‍ನನ್ನು ಮೇಲ್ಗಡೆ ತಂದು ಬಳಿಕ ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಈ ವೇಳೆ ತಾನು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಆದರೆ ಪ್ರೇಮ ವೈಫಲ್ಯಗೊಂಡ ಕಾರಣ ಸಾಯಲು ನಿರ್ಧರಿಸಿ ನದಿಗೆ ಹಾರಿದ್ದೆ ಎಂದು ಹೇಳಿಕೆ ನೀಡಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ವರ್ಣೆಯ ಒಡಲಲ್ಲಿ ಚಟಪಟ ಸದ್ದು – ಉಡುಪಿಯಲ್ಲಿ ಕೃಷ್ಣಾಂಗಾರಕ ಚತುರ್ದಶಿ ಪವಾಡ

    ಸ್ವರ್ಣೆಯ ಒಡಲಲ್ಲಿ ಚಟಪಟ ಸದ್ದು – ಉಡುಪಿಯಲ್ಲಿ ಕೃಷ್ಣಾಂಗಾರಕ ಚತುರ್ದಶಿ ಪವಾಡ

    ಉಡುಪಿ: ಕೃಷ್ಣಂಗಾರಕ ಚತುರ್ಥಿಯಂದು ಗಂಗಾಸ್ನಾನ ಮಾಡಿದ್ರೆ ಪಾಪ ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಆದ್ರೆ ಪಾಪ ಕಳೆದುಕೊಳ್ಳಲು ಗಂಗಾನದಿಯ ತಟಕ್ಕೆ ಹೋಗುವುದು ಎಲ್ಲರಿಗೂ ಕಷ್ಟಸಾಧ್ಯ. ಹೀಗಾಗಿ ಗಂಗೆ ಉದ್ಭವವಾದ ಉಡುಪಿಯ ಸ್ವರ್ಣೆಯಲ್ಲೇ ಮಿಂದು ನೂರಾರು ಮಂದಿ ಭಕ್ತರು ಇಂದು ಪುನೀತರಾದರು.

    ಗಂಗಾಸ್ನಾನ ತುಂಗಾ ಪಾನ ಎಂಬ ಮಾತಿದೆ. ಗಂಗೆಯಲ್ಲಿ ಸ್ನಾನ ಮಾಡಿದ್ರೆ ಪಾಪ ನಿವಾರಣೆ ಎಂಬ ನಂಬಿಕೆ ಭಕ್ತಕೋಟಿಯದ್ದು. ಈ ಹಿನ್ನೆಲೆಯಲ್ಲಿ ಮುರಳೀಲೋಲನ ನಗರಿ ಉಡುಪಿಯ ಸ್ವರ್ಣ ನದಿಯಲ್ಲಿ ತೀರ್ಥಸ್ನಾನ ಮಾಡಿ ಪುನೀತರಾದರು. ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಗಂಗಾಪೂಜೆ ಮಾಡಿದರು. ಸ್ವರ್ಣಗೆ ಬಾಗಿನ ಅರ್ಪಿಸಿದರು. ಉತ್ತರಾಧಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ನೂರಾರು ಭಕ್ತರೊಂದಿಗೆ ಪ್ರಾತಃಕಾಲದ ಪೂಜೆಯನ್ನು ಸ್ವರ್ಣೆಯ ನದಿ ತಟದಲ್ಲಿ ನೆರವೇರಿಸಿದರು.

    ಬಳಿಕ ಮಾತನಾಡಿದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕೃಷ್ಣಪಕ್ಷ ಚತುರ್ದಶಿ ತಿಥಿ ಮಂಗಳವಾರ ಬಂದ್ರೆ ಅಂದು ಕೃಷ್ಣಾಂಗಾರಕ ಚತುರ್ದಶಿ ಎಂದು ಅರ್ಥ. ಇಂದು ಪವಿತ್ರ ನದಿಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿ ಆಗ್ತದೆ. ಈ ಭಾಗದಲ್ಲಿ ನೀರಲ್ಲಿ ಮುಳುಗು ಹಾಕುವಾಗ ನೀರಲ್ಲಿ ಟಣ್ ಟಣ್ ಸದ್ದು ಬರುತ್ತದೆ. ಪಾಪ ಸುಡುವ ಶಬ್ಧ ಅಂತ ವಾದಿರಾಜ ಸ್ವಾಮಿಗಳೇ ಬಣ್ಣಿಸಿದ್ದರು. ಕಾಡು, ನದಿ, ಬೆಟ್ಟ ಪರ್ವತ ಉಳಿದಷ್ಟು ಕಾಲ ಮನುಷ್ಯ ಸಂತತಿ ಭೂಮಿ ಯ ಮೇಲೆ ಉಳಿಯುತ್ತದೆ. ಹಾಗಾಗಿ ಪರಿಸರದ ರಕ್ಷಣೆ ಎಂದರೆ ನಮ್ಮನ್ನು ನಾವು ರಕ್ಷಿಸಿದಂತೆ. ಇಂತಹ ಆಚರಣೆಯಿಂದ ಪ್ರಾಕೃತಿಕ ಸಂಪತ್ತಿನ ಮೇಲೆ ಒಲವು ಮೂಡಿಸಲು ಸಾಧ್ಯವಿದೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಇಂತಹ ಕಲ್ಪನೆ ಬರಬೇಕು ಎಂದು ಹೇಳಿದರು.

    ಕೃಷ್ಣಂಗಾರಕ ಚತುರ್ಥಿಯ ಹಿನ್ನೆಲೆಯಲ್ಲ ನೂರಾರು ಭಕ್ತರು ನದಿಯಲ್ಲಿ ತೀರ್ಥಸ್ನಾನ ಮಾಡಿದರು. ತೀರ್ಥಸ್ನಾನದ ನಂತರ ಪೇಜಾವರಶ್ರೀ ಶೀಂಬ್ರ ಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸ್ವರ್ಣ ನದಿಯಲ್ಲಿ ಕರಾವಳಿಯ ಭಕ್ತರಿಗಿಂತ ಜಾಸ್ತಿ ರಾಜ್ಯದ ವಿವಿಧ ಭಾಗದ ಮಂದಿಯೇ ಪಾಲ್ಗೊಂಡರು. ಸ್ವರ್ಣ ನದಿಯಲ್ಲಿ ಮುಳುಗು ಹಾಕುವಾಗ ಚಟಪಟ ಎಂಬ ಸದ್ದು ಹೇಳಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಚಟಪಟ ಸದ್ದು ಕೇಳಿದ್ರೆ ಪಾಪಗಳೆಲ್ಲಾ ನಾಶವಾಯ್ತು ಎಂಬ ನಂಬಿಕೆಯಿದೆ. ಇದರ ಹಿಂದಿನ ಗುಟ್ಟು ವಿಜ್ಞಾನಿಗಳಿಂದ ಕಂಡುಹಿಡಿಯಲು ಸಾಧ್ಯವಾಗಿಲ್ಲ.

    ಬೆಂಗಳೂರಿನಿಂದ ತೀರ್ಥಸ್ನಾನ ಮಾಡಲು ಬಂದ ಭಕ್ತೆ ಸಾಕ್ಷಿ ಮಾತನಾಡಿ, ಮೊದಲ ಬಾರಿ ಬಂದು ತೀರ್ಥಸ್ನಾನ ಮಾಡಿದ್ದೇನೆ. ಮನಸ್ಸಿಗೆ ನೆಮ್ಮದಿ ಅನಿಸುತ್ತದೆ. ಪ್ರತೀ ವರ್ಷ ಬರುವ ಆಲೋಚನೆ ಇದೆ. ಪೇಜಾವರ ಕಿರಿಯ ಶ್ರೀಗಳ ಜೊತೆ ತೀರ್ಥಸ್ನಾನ ಮಾಡಿದ್ದು ಪುಣ್ಯದ ಫಲ ಎಂದರು.

    ಒಟ್ಟಿನಲ್ಲಿ ವಿಶೇಷ ದಿನಗಳಲ್ಲಿ ಶೀಂಬ್ರ ಕ್ಷೇತ್ರಕ್ಕೆ ನೂರಾರು ಭಕ್ತರು ಬರುತ್ತಾರೆ. ಆದ್ರೆ ನದಿಸ್ನಾನಕ್ಕೆ ಬರುವ ಭಕ್ತರಿಗೆ ಸ್ನಾನಘಟ್ಟದ ವ್ಯವಸ್ಥೆಯನ್ನು ಪ್ರವಾಸೋದ್ಯಮ ಇಲಾಖೆ ಮಾಡಿದ್ರೆ ದೇವಸ್ಥಾನ ಇನ್ನಷ್ಟು ಅಭಿವೃದ್ಧಿಯಾಗಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆರು ಅಡಿ ಉದ್ದದ ಮೊಸಳೆ ಸೆರೆ

    ಆರು ಅಡಿ ಉದ್ದದ ಮೊಸಳೆ ಸೆರೆ

    ಬಾಗಲಕೋಟೆ: ನದಿ ಒಡಲು ಬತ್ತಿದ್ದರಿಂದ ಆಗಾಗ ನದಿ ಆಚೆ ಬಂದು ಭೀತಿ ಸೃಷ್ಟಿಸಿದ್ದ ಮೊಸಳೆಯನ್ನು ಗ್ರಾಮಸ್ಥರೇ ಸೆರೆ ಹಿಡಿದಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕು ಮಾಚಕನೂರುದಲ್ಲಿ ನಡೆದಿದೆ.

    ಘಟಪ್ರಭಾ ನದಿಯಲ್ಲಿ ಸೋಮವಾರ ನಸುಕಿನ ಜಾವ ಮಾಚಕನೂರು ಗ್ರಾಮದ ಯುವಕರು ಸೇರಿ ಸುಮಾರು ಆರು ಅಡಿ ಉದ್ದದ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ. ಮೊಸಳೆ ನೀರು, ಆಹಾರ ಹುಡುಕಿಕೊಂಡು ಬಂದಿದೆ. ಈ ವೇಳೆ ಯುವಕರು ಹಗ್ಗದ ಸಹಾಯದಿಂದ ಅದನ್ನು ಸೆರೆ ಹಿಡಿದು ಬಳಿಕ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

    ಬೇಸಿಗೆ ಬಂತೆಂದರೆ ಘಟಪ್ರಭಾ ನದಿ ಬತ್ತುತ್ತದೆ. ಹೀಗಾಗಿ ನೀರು, ಆಹಾರ ಅರಸಿಕೊಂಡು ನದಿಯಿಂದ ಮೊಸಳೆಗಳು ಹೊರ ಬರುತ್ತವೆ. ಅನೇಕ ಸಂದರ್ಭದಲ್ಲಿ ಮೊಸಳೆ ದಾಳಿಗೆ ಜನ-ಜಾನುವಾರುಗಳ ಪ್ರಾಣ ಹಾನಿಯೂ ಆಗಿದೆ. ಈಗ ಬೇಸಿಗೆ ಆರಂಭವಾಗುತ್ತಿದ್ದಂತೆಯೇ ನದಿಯಾಚೆ ಮೊಸಳೆಗಳು ಬರುತ್ತಿದ್ದು, ಇದರಿಂದ ಮೊಸಳೆ ಕಂಡು ನದಿ ತೀರದ ಜನರು ಆತಂಕಗೊಂಡಿದ್ದಾರೆ ಎಂದು ಅರಣ್ಯ ಸಿಬ್ಬಂದಿ ಹೇಳಿದ್ದಾರೆ.

    ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದ ಮೊಸಳೆಯನ್ನ ಆಲಮಟ್ಟಿ ಜಲಾಶಯ ಹಿನ್ನೀರಿಗೆ ಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನದಿ ಸ್ನಾನಕ್ಕೆ ತೆರಳಿದ್ದ ಮೂವರ ಬಾಲಕಿಯರ ಸಾವು

    ನದಿ ಸ್ನಾನಕ್ಕೆ ತೆರಳಿದ್ದ ಮೂವರ ಬಾಲಕಿಯರ ಸಾವು

    ಹಾವೇರಿ: ನದಿ ಸ್ನಾನಕ್ಕೆ ಹೋಗಿದ್ದ ಮೂವರು ಬಾಲಕಿಯರು ಸಾವನ್ನಪ್ಪಿದ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕೂಲಿ ಗ್ರಾಮದ ಬಳಿ ನಡೆದಿದೆ. ಗ್ರಾಮದ ಬಳಿ ಇರೋ ಕುಮುದ್ವತಿ ನದಿಯಲ್ಲಿ ಸ್ನಾನಕ್ಕೆ ಬಾಲಕಿಯರು ಹೋಗಿದ್ದರು.

    ಮೃತ ಬಾಲಕಿಯರನ್ನು ಸುಮನ್ ತುಮ್ಮಿನಕಟ್ಟಿ (9), ನಿಶತ್ ಬಾನು ಪಾಟೀಲ (13) ಮತ್ತು ಮುಜನ್ ಮಿಲ್ ತೋಟದ (14) ಎಂದು ಗುರುತಿಸಲಾಗಿದೆ. ಇವತ್ತು ಶಾಲೆಗೆ ರಜೆ ಇದ್ದಿದ್ದರಿಂದ ನದಿಗೆ ಸ್ನಾನಕ್ಕೆಂದು ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸ್ಥಳೀಯರು ಬಾಲಕಿಯರ ಮೃತದೇಹ ಹೊರತೆಗೆದಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ರವಾನಿಸಲಾಗಿದೆ. ಆಸ್ಪತ್ರೆಯ ಮುಂಭಾಗದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದ ಬಹುತೇಕರು ಆಸ್ಪತ್ರೆಯ ಆವರಣದಲ್ಲಿ ಸೇರಿದ್ದಾರೆ. ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಕ್ರಾಂತಿಗೆ ಪ್ರವಾಸಕ್ಕೆ ಬಂದವ ನೀರುಪಾಲಾದ!

    ಸಂಕ್ರಾಂತಿಗೆ ಪ್ರವಾಸಕ್ಕೆ ಬಂದವ ನೀರುಪಾಲಾದ!

    ಕೊಪ್ಪಳ: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಬಂದಿದ್ದ ಯುವಕನೋರ್ವ ನೀರಲ್ಲಿ ಈಜಲು ಹೋಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯ ತುಂಗಭದ್ರಾ ನದಿಯಲ್ಲಿ ನಡೆದಿದೆ.

    ಭರತ್ ಗೌಡ(24) ಮೃತ ದುರ್ದೈವಿ. ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ರಾಗಲಪರ್ವಿ ನಿವಾಸಿಯಾದ ಭರತ್ ಸಂಕ್ರಾಂತಿ ಹಿನ್ನೆಲೆ ಸ್ನೇಹಿತರೊಡನೆ ಆನೆಗುಂದಿ ಬಳಿಯ ತುಂಗಭದ್ರಾ ನದಿ ಬಳಿ ಪ್ರವಾಸಕ್ಕೆ ಬಂದಿದ್ದನು. ಇಂದು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಸ್ನೇಹಿತರೊಡನೆ ಭರತ್ ಹೋಗಿದ್ದಾನೆ. ಆದ್ರೆ ಭರತ್‍ಗೆ ಹರಿಯುತ್ತಿದ್ದ ನೀರಿನಲ್ಲಿ ಈಜುಬಾರದೇ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

    ಮುಳುಗುತ್ತಿದ್ದ ಭರತ್‍ಗೆ ಜೊತೆಗಿದ್ದವರು ಸಹಾಯ ಮಾಡುವಷ್ಟರಲ್ಲಿ ಆತ ಇಹಲೋಕ ತ್ಯಜಿಸಿದ್ದನು. ಯುವಕನ ಮೃತದೇಹವನ್ನು ಸ್ಥಳೀಯ ಮೀನುಗಾರರು ತೆಪ್ಪ ಬಳಸಿ ಹೊರತೆಗೆದಿದ್ದಾರೆ. ನಗುನಗುತ್ತ ಪ್ರವಾಸಕ್ಕೆ ಬಂದಿದ್ದ ಸ್ನೇಹಿತನ ಮೃತದೇಹವನ್ನು ಊರಿಗೆ ತೆಗೆದುಕೊಂಡು ಹೋಗುವ ಸ್ಥತಿ ಬಂತಲ್ಲ ಅಂತ ಯುವಕನ ಜೊತೆಗಿದ್ದವರು ಕಣ್ಣೀರಿಟ್ಟಿದ್ದಾರೆ.

    ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೇತುವೆಯ ಕೆಳಗೆ ನಟಿಯ ಮೃತದೇಹ ಪತ್ತೆ

    ಸೇತುವೆಯ ಕೆಳಗೆ ನಟಿಯ ಮೃತದೇಹ ಪತ್ತೆ

    ಸಂಬಲ್ಪುರ: ಹಲವು ಆಲ್ಬಂ ನಟಿಯ ಮೃತ ದೇಹ ನದಿ ಸೇತುವೆಯೊಂದರ ಕೆಳಗಡೆ ಪತ್ತೆಯಾಗಿರುವ ಘಟನೆ ಒಡಿಶಾದ ಸಂಬಲ್ಪುರ ಜಿಲ್ಲೆಯಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಸ್ಥಳೀಯರು ಯುವತಿಯ ಮೃತ ದೇಹವನ್ನು ಮಹಾನದಿ ಬ್ರಿಡ್ಜ್ ಬಳಿ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ವೇಳೆ ಆಕೆ ಆಲ್ಬಂ ನಟಿ ಸಿಮ್ರಾನ್ ಸಿಂಗ್ ಎಂದು ತಿಳಿದು ಬಂದಿದೆ. ನಟಿ ಮುಖದ ಮೇಲೆ ಕೆಲ ಗಾಯದ ಗುರುತುಗಳು ಕೂಡ ಪತ್ತೆಯಾಗಿದ್ದು, ಆಕೆ ಬಳಕೆ ಮಾಡುತ್ತಿದ್ದ ಬ್ಯಾಗ್ ಕೂಡ ಪಕ್ಕದಲ್ಲೇ ಸಿಕ್ಕಿದೆ.

    ನಟಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿರುವ ಸ್ಥಳೀಯ ಬುರ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ನಟಿಯನ್ನು ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಖಕ್ಕೆ ಮೆತ್ತಿದ್ದ ಕೇಕ್ ತೊಳೆಯಲು ಹೋಗಿ ನೇತ್ರಾವತಿ ನದಿಯಲ್ಲಿ ಯುವಕ ಸಾವು

    ಮುಖಕ್ಕೆ ಮೆತ್ತಿದ್ದ ಕೇಕ್ ತೊಳೆಯಲು ಹೋಗಿ ನೇತ್ರಾವತಿ ನದಿಯಲ್ಲಿ ಯುವಕ ಸಾವು

    -ರಕ್ಷಿಸಲು ಹೋದ ಇಬ್ಬರು ವಿದ್ಯಾರ್ಥಿಗಳು ದುರ್ಮರಣ

    ಮಂಗಳೂರು: ನೇತ್ರಾವತಿ ನದಿಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ.

    ಮಹಮ್ಮದ್ ಸುಹೈದ್, ಸಹೀರ್ ಹಾಗೂ ಫಿರ್ಝಾನ್ ಮೃತಪಟ್ಟ ವಿದ್ಯಾರ್ಥಿಗಳು. ಮೂವರು ವಿದ್ಯಾರ್ಥಿಗಳು ಉಪ್ಪಿನಂಗಡಿ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದರು. ಮೂವರು ವಿದ್ಯಾರ್ಥಿಗಳು ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದರು.

    ಸುಹೈದ್ ತನ್ನ ಹುಟ್ಟುಹಬ್ಬದ ಬಳಿಕ ಮುಖಕ್ಕೆ ಮೆತ್ತಿದ್ದ ಕೇಕ್ ತೊಳೆಯಲು ನದಿಗೆ ಇಳಿದಿದ್ದನು. ಸುಹೈದ್ ನದಿಗೆ ಇಳಿದಾಗ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ನದಿಗೆ ಹಾರಿದ್ದ ಇನ್ನಿಬ್ಬರು ವಿದ್ಯಾರ್ಥಿಗಳು ಕೂಡ ಮೃತಪಟ್ಟಿದ್ದಾರೆ.

    ನೇತ್ರಾವತಿ ನದಿ ಪಕ್ಕದಲ್ಲಿ ಸುಹೈದ್ ಮನೆಯಿದ್ದು, ಇಂದು ಬೆಳಗ್ಗೆ ಆತನ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಈ ವೇಳೆ ಸಹೀರ್ ಹಾಗೂ ಫಿರ್ಝಾನ್ ಅವರನ್ನು ನದಿಯಲ್ಲಿ ಹುಡುಕಾಟ ನಡೆಸುವಾಗ ಅವರ ಮೃತದೇಹ ಕೂಡ ಪತ್ತೆಯಾಗಿದೆ.

    ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೀರಿನಲ್ಲಿ ಮುಳುಗಿ ತಂದೆ ಸೇರಿದಂತೆ ಮೂವರು ಮಕ್ಕಳ ದಾರುಣ ಸಾವು

    ನೀರಿನಲ್ಲಿ ಮುಳುಗಿ ತಂದೆ ಸೇರಿದಂತೆ ಮೂವರು ಮಕ್ಕಳ ದಾರುಣ ಸಾವು

    ಸಾಂದರ್ಭಿಕ ಚಿತ್ರ

    ಕಾರವಾರ: ನದಿಯಲ್ಲಿ ಮುಳುಗಿ ತಂದೆ ಸೇರಿದಂತೆ ಮೂವರು ಮಕ್ಕಳು ಮೃತಪಟ್ಟು, ತಾಯಿ ಅಸ್ವಸ್ಥವಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಬೊಮ್ನಳ್ಳಿ ಬಳಿ ನಡೆದಿದೆ.

    ತಂದೆ ಧೂಳು ಗಾವಡೆ (48) ಮಕ್ಕಳಾದ ಕೃಷ್ಣಾ ಧೂಳು ಗಾವಡೆ (6), ಗಾಯಿತ್ರಿ ಧೂಳು ಗಾವಡೆ (9) ಹಾಗೂ ಸತೀಶ್ ಬೀರು ಗಾವಡೆ (7) ಮೃತ ದುರ್ದೈವಿಗಳು. ಇಂದು ಸಂಜೆ ದಂಪತಿ ಸೇರಿದಂತೆ ಮೂವರು ಮಕ್ಕಳು ಅಂಬಿಕಾನಗರ ಸಮೀಪದ ಬೊಮ್ನಳ್ಳಿ ಬಳಿಯ ಕಾಳಿ ನದಿಗೆ ಬಟ್ಟೆ ತೊಳೆಯಲು ತೆರಳಿದ್ದರು. ಈ ವೇಳೆ ನದಿಯಲ್ಲಿ ಆಟವಾಡುತ್ತಿದ್ದ ಗಾಯಿತ್ರಿ ಮೊದಲು ನದಿಯಲ್ಲಿ ಕೊಚ್ಚಿ ಹೋಗಿದ್ದಾಳೆ. ಬಳಿಕ ಇಬ್ಬರೂ ಮಕ್ಕಳು ಆಕೆಯನ್ನೆ ಹಿಂಬಾಲಿಸಲು ಹೋಗಿ ನದಿಯಲ್ಲಿ ಮುಳುಗಿದ್ದಾರೆ.

    ಮಕ್ಕಳು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ದಂಪತಿ ಏಕಾಏಕಿ ನೀರಿಗೆ ಜಿಗಿದಿದ್ದಾರೆ. ನದಿಯಲ್ಲಿ ನೀರು ಹೆಚ್ಚಿದ್ದರಿಂದ ಇಬ್ಬರೂ ನೀರು ಪಾಲಾಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇನ್ನುಳಿದವರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳಿಗಾಗಿ ನದಿಯಲ್ಲಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಸದ್ಯದ ಮಾಹಿತಿಗಳ ಪ್ರಕಾರ ಗಾಯಿತ್ರಿ ಮಗುವಿನ ಮೃತದೇಹ ಪತ್ತೆಯಾಗಿದೆ.

    ತೀವ್ರವಾಗಿ ಅಸ್ವಸ್ಥಗೊಂಡಿದ್ದ ರಾಮಿ ಬಾಯಿಯವರನ್ನು ಹಳಿಯಾಳದ ಆಸ್ಪತ್ರೆಗೆ ರವಾನಿಸಿಲಾಗಿದೆ. ಘಟನೆ ಸಂಬಂಧ ಅಂಬಿಕಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv