ಮಂಗಳೂರು: ಚಲಿಸುತ್ತಿದ್ದ ರೈಲಿನಿಂದ (Train) ನದಿಗೆ (River) ಹಾರಿ ಯುವತಿ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ನೇತ್ರಾವತಿ ನದಿಯ ರೈಲ್ವೆ ಓವರ್ ಬ್ರಿಡ್ಜ್ನಲ್ಲಿ ನಡೆದಿದೆ.
ತುಮಕೂರು (Tumakur) ಜಿಲ್ಲೆ ಮಧುಗಿರಿ (Madhugiri) ತಾಲೂಕಿನ ಮಿಡಿಗೇಶಿಯ ಪಡಸಾಕೆಹಟ್ಟಿ ನಿವಾಸಿ ನಯನಾ ಎಂ.ಜಿ (27) ಆತ್ಮಹತ್ಯೆ ಮಾಡಿಕೊಂಡ ಯುವತಿ. ಕಣ್ಣೂರು-ಬೆಂಗಳೂರು-ಮಂಗಳೂರು ರೈಲಿನಲ್ಲಿ ಚಲಿಸುತ್ತಿದ್ದ ಸಂದರ್ಭ ತಾನು ಕುಳಿತಿದ್ದ ಸೀಟ್‌ನಲ್ಲಿ ಬ್ಯಾಗ್ ಬಿಟ್ಟು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಕೊಂದ ಕೇಸ್‌ನಲ್ಲಿ ಜಾಮೀನು ಪಡೆದು ಕೇರಳಕ್ಕೆ ಪರಾರಿಯಾಗಿದ್ದ ಆರೋಪಿ ಬಂಧನ
ರಾಮನಗರ: ಪಾಪಿ ತಾಯಿಯೊಬ್ಬಳು (Mother) ಹೆತ್ತ ಮಗುವನ್ನೇ (Baby) ನದಿಗೆ (River) ಎಸೆದ ಘಟನೆ ರಾಮನಗರ (Ramanagara) ಜಿಲ್ಲೆ ಚನ್ನಪಟ್ಟಣ (Channaptna) ತಾಲೂಕಿನ ಕಾಲಿಕೆರೆ ಗ್ರಾಮದಲ್ಲಿ ನಡೆದಿದೆ.
ಭಾಗ್ಯಾ ಹೆತ್ತ ಮಗುವನ್ನು ನದಿಗೆ ಎಸೆದ ತಾಯಿ. ಕಳೆದ 2 ವರ್ಷದಿಂದ ಭಾಗ್ಯಾ ತಾಯಿ ಮನೆಯಲ್ಲೇ ವಾಸವಿದ್ದಳು. ಭಾಗ್ಯಾ ಹಾಗೂ ಶ್ರೀನಿವಾಸ್ ದಂಪತಿಯ 1 ವರ್ಷ 6 ತಿಂಗಳ ಹಸುಗೂಸನ್ನು ಭಾಗ್ಯಾ ಮಂಗಳವಾರ ರಾತ್ರಿ ಕೊಂಡಾಪುರ ಬಳಿಯ ಕಣ್ವ ನದಿಗೆ ಎಸೆದಿದ್ದಾಳೆ. ಇಂದು ಬೆಳಗ್ಗೆ ಕುಟುಂಬಸ್ಥರು ಮಗು ಎಲ್ಲಿ ಎಂದು ಕೇಳಿದಾಗ ನದಿಗೆ ಎಸೆದಿರುವುದಾಗಿ ಭಾಗ್ಯಾ ಹೇಳಿದ್ದಾಳೆ. ಇದನ್ನೂ ಓದಿ: ಹೃದಯಾಘಾತದಿಂದ 7 ತರಗತಿ ವಿದ್ಯಾರ್ಥಿನಿ ಸಾವು
ಹಿರಿಯ ನಟಿ ಲೀಲಾವತಿ (Leelavathi) ಅವರಿಗೆ ಸಿಗಬೇಕಾದ ಗೌರವ, ಪ್ರಶಸ್ತಿಗಳು ಸಿಗದೇ ಇದ್ದರೂ ಮೂರು ದಿನಗಳ ಹಿಂದೆಯಷ್ಟೇ ಪ್ರತಿಷ್ಠಿತ ನಂದಿ ಅವಾರ್ಡ್ ಅವರಿಗೆ ಒಲಿದು ಬಂದಿತ್ತು. ಈಗಷ್ಟೇ ಶುರು ಮಾಡಿರುವ ನಂದಿ (Nandi) ಪ್ರಶಸ್ತಿ ಸಂಸ್ಥೆಯು ಲೀಲಾವತಿ ಅವರಿಗೆ ಲೆಜೆಂಡರಿ ಆಕ್ಟ್ರೆಸ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಅವರಿಗೆ ಅನಾರೋಗ್ಯದ ಕಾರಣದಿಂದಾಗಿ ಪುತ್ರ ವಿನೋದ್ ರಾಜ್ ಆ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
ಕನ್ನಡ ಚಿತ್ರರಂಗದಲ್ಲಿ (Sandalwood) ಮೊದಲ ಬಾರಿಗೆ ನಂದಿ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಒರಿಯನ್ ಮಾಲ್‌ನಲ್ಲಿ ಜರುಗಿತ್ತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಟ ರವಿಚಂದ್ರನ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಇನ್ನೂ ಹಲವು ತಾರೆಯರು ಭಾಗಿಯಾಗಿದ್ದಾರೆ. ಜೊತೆಗೆ ಹಿರಿಯ ನಟ ಶ್ರೀನಾಥ್, ನಟಿ ಪ್ರೇಮ, ವಿನೋದ್ ರಾಜ್, ಅನುಪ್ರಭಾಕರ್, ಉಮಾಶ್ರೀ ಇನ್ನೂ ಹಲವು ನಟ-ನಟಿಯರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದು ಮೊದಲ ನಂದಿ ಫಿಲಂ ಅವಾರ್ಡ್ ಆಗಿದ್ದು ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ನಟ ರವಿಚಂದ್ರನ್ ಮಾತನಾಡಿ, ‘ನಂದಿ ಪ್ರಶಸ್ತಿ ನೀಡುತ್ತಿರುವುದು ಬಹಳ ಖುಷಿಯಾಗಿದೆ. ಪ್ರಶಸ್ತಿ ಬಹಳ ಭಾರವಾಗಿದೆ ಅದು ನನಗೆ ಖುಷಿ ಕೊಟ್ಟಿತು, ನನ್ನಂಥಹಾ ಶಿವ ಭಕ್ತನಿಂದ ನಂದಿ ಪ್ರಶಸ್ತಿ ಕೊಡಿಸುತ್ತಿದ್ದೀರ. ಎಲ್ಲರ ಮನೆಗಳಿಗೂ ನಂದಿ ಸೇರುತ್ತದೆ ಎಂಬುದು ನನಗೆ ಖುಷಿ’ ಎಂದರು. ನಟ ಶ್ರೀನಾಥ್ ಅವರಿಗೆ ಜೀವನಮಾನ ಸಾಧನೆಗೆ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ಕೂಡ ನೀಡಲಾಗಿತ್ತು.
ಲೀಲಾವತಿ ಅವರಿಗೆ ಈಗಾಗಲೇ ಜೀವಮಾನ ಸಾಧನೆಗಾಗಿ ಕರ್ನಾಟಕ ಸರಕಾರವು ಡಾ.ರಾಜಕುಮಾರ್ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಅಲ್ಲದೇ, ತುಮಕೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ. ಸಿನಿಮಾ ನಟನೆಗಾಗಿ ಹತ್ತು ಹಲವು ಪ್ರಶಸ್ತಿಗಳನ್ನೂ ಅವರು ಪಡೆದಿದ್ದಾರೆ.
ಧಾರವಾಡ: ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಇದರ ಜೊತೆಗೆ ಧಾರವಾಡ (Dharwad) ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿಯೂ ಅಭಾವ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮಲಪ್ರಭಾ (Malaprabha) ಜಲಾಶಯದಿಂದ 1 ಟಿಎಂಸಿ ನೀರು (Water) ಧಾರವಾಡ ಜಿಲ್ಲೆಗೆ ಬಿಡುಗಡೆಯಾಗಿದ್ದು, ಇಂದಿನಿಂದ 9 ದಿನಗಳ ಕಾಲ ಮಲಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಯಲಿದೆ.
ಧಾರವಾಡ ಜಿಲ್ಲೆಯ ಕುಂದಗೋಳ, ಅಣ್ಣಿಗೇರಿ, ನವಲಗುಂದ ಹಾಗೂ ಹುಬ್ಬಳ್ಳಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆ ಎದುರಾಗಿದೆ. ಸದ್ಯ ಬಿಡುಗಡೆಯಾಗುತ್ತಿರುವ 1 ಟಿಎಂಸಿ ನೀರಿನಿಂದ ಈ ನೀರಿನ ಅಭಾವ ಇರುವ ಪ್ರದೇಶಗಳಲ್ಲಿ ಕೆರೆ ತುಂಬಿಸಿಕೊಳ್ಳಲು ಅನುಕೂಲವಾಗಲಿದೆ.
ಈ ಹಿಂದೆ ಮಲಪ್ರಭಾ ನೀರಿನಿಂದ ಜಿಲ್ಲೆಯ 81 ಕೆರೆಗಳನ್ನು ತುಂಬಿಸಲಾಗಿತ್ತು. ಅದರಲ್ಲಿ ಸುಮಾರು 50 ಕೆರೆಗಳಲ್ಲಿ ಅರ್ಧದಷ್ಟು ನೀರು ಇನ್ನೂ ಇದೆ. 32 ಕೆರೆಗಳು ಅರ್ಧಕ್ಕಿಂತಲೂ ಕಡಿಮೆ ನೀರು ಹೊಂದಿವೆ ಎಂದು ಕೆರೆಗಳಿಗೆ ನೀರು ತುಂಬಿಸಲು ಈಗ ಆದ್ಯತೆ ನೀಡಲಾಗಿದೆ. ಇದರಿಂದ 5-6 ತಿಂಗಳವರೆಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಇದನ್ನೂ ಓದಿ: ಆದಾಯ ಮೀರಿ ಆಸ್ತಿ – ಸಿಬಿಐ ಅರ್ಜಿ ವಿಚಾರಣೆ ಶುಕ್ರವಾರಕ್ಕೆ ಮುಂದೂಡಿಕೆ
ಸದ್ಯ ಕೃಷಿಗೆ ನೀರು ಬಿಡುವುದಿಲ್ಲ. ಈಗ ಬಿಡುವ ನೀರು ಕೇವಲ ಕುಡಿಯುವುದಕ್ಕಾಗಿ ಮಾತ್ರ ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಕಾಲುವೆಗೆ ಹರಿದು ಬರುವ ನೀರನ್ನು ಯಾರೂ ಕೃಷಿಗೆ ಬಳಸುವಂತಿಲ್ಲ. ಇದರ ಬಗ್ಗೆ ನಿಗಾ ವಹಿಸಲು ತಂಡವನ್ನು ಕೂಡಾ ರಚನೆ ಮಾಡಲಾಗಿದೆ. ಕಂದಾಯ, ಆರ್‌ಡಿಪಿಆರ್ ಮತ್ತು ಪೊಲೀಸ್ ಇಲಾಖೆ ಈ ತಂಡದಲ್ಲಿದ್ದು, ಕುಡಿಯಲು ಬರುವ ನೀರನ್ನು ಕೃಷಿಗೆ ಬಳಸುವವರ ಮೇಲೆ ಕ್ರಮ ಕೈಗೊಳ್ಳಲಿದೆ. ಇದನ್ನೂ ಓದಿ: ಕೆಇಎ ಪರೀಕ್ಷಾ ಅಕ್ರಮದ ಕಿಂಗ್‌ಪಿನ್ ಬೆನ್ನಿಗೆ ಎಟಿಎಂ ಸರ್ಕಾರ ನಿಂತಿದೆ: ಆರೋಪಿ ಟ್ರೋಲ್ ಮಿನಿಸ್ಟರ್ ಖರ್ಗೆ ಆಪ್ತ ಎಂದ ಬಿಜೆಪಿ
ಖಾನ್ ಡ್ರಗ್ಸ್ ಮಾರಾಟ ಮಾಡುತ್ತಿದ್ದಾನೆ ಎಂಬ ಆರೋಪ ಹೊರಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಭಾನುವಾರ ಮಧ್ಯಾಹ್ನದ ಬಳಿಕ ಆತನನ್ನು ಭಮದಿಸಲೆಂದು ತೆರಳಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಖಾನ್ ನೇರವಾಗಿ ನದಿಗೆ ಜಿಗಿದಿದ್ದಾನೆ. ಅಲ್ಲದೆ ಬೇರೆಕಡೆ ಈಜುತ್ತಾ ತೆರಳಿದ್ದಾನೆ. ಈ ಮೂಲಕ ಅಧಿಕಾರಿಗಳ ಕೈಯಿಂದ ತಪ್ಪಿಸಿಕೊಂಡಿದ್ದಾನೆ.
ಸದ್ಯ ಆರೋಪಿ ನದಿಗೆ ಜಿಗಿದು ಈಜುತ್ತಾ ತಪ್ಪಿಸಿಕೊಳ್ಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸರು ಪದೇ ಪದೇ ಮನವಿ ಮಾಡಿದರೂ ಆರೋಪಿ ನದಿಯಿಂದ ಹೊರಬರಲು ನಿರಾಕರಿಸಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.
ಖಾನ್, ಮಾದಕವಸ್ತು ಮಾರಾಟದ ಆರೋಪ ಹೊತ್ತಿದ್ದಾನೆ. ಅಲ್ಲದೆ ಈತನ ಮೇಲೆ ಸೆಕ್ಷನ್ 110 (ಪ್ರಚೋದನೆಯ ಶಿಕ್ಷೆ) ಸೇರಿದಂತೆ ಹಲವಾರು ಇತರ ಕೆಸ್‍ಗಳು ದಾಖಲಾಗಿವೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕ್ರಿಮಿನಲ್‍ಗಳನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ. ಸದ್ಯ ಖಾನ್‍ಗಾಗಿ ಹುಡುಕಾಟ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ರಾಮನಗರ: ಸ್ನೇಹಿತರ ಜೊತೆ ನದಿಯಲ್ಲಿ ಈಜಲು (Swimming) ಹೋಗಿದ್ದ ಬಾಲಕನೋರ್ವ ನೀರುಪಾಲಾದ ಘಟನೆ ರಾಮನಗರ (Ramanagara) ತಾಲೂಕಿನ ದ್ಯಾವರಸನೇಗೌಡನದೊಡ್ಡಿ ಬಳಿ ನಡೆದಿದೆ.
ರಾಮನಗರ ಟೌನ್‌ನ ವಿನಾಯಕನಗರ ನಿವಾಸಿ ಕಿಶೋರ್ (14) ಮೃತ ಬಾಲಕ. ಎಂಟನೇ ತರಗತಿ ಓದುತ್ತಿದ್ದ ಕಿಶೋರ್ ಭಾನುವಾರ ಮಧ್ಯಾಹ್ನ ಸ್ನೇಹಿತರ ಜೊತೆ ಈಜಲು ಹೋಗಿದ್ದ. ಅರ್ಕಾವತಿ ನದಿಯಲ್ಲಿ (River) ಈಜುತ್ತಿದ್ದ ಕಿಶೋರ್ ನೀರಿನಲ್ಲಿ ಮುಳುಗಿ (Drown) ನಾಪತ್ತೆಯಾಗಿದ್ದಾನೆ. ಇದರಿಂದ ಭಯಗೊಂಡ ಸ್ನೇಹಿತರು ಸ್ಥಳದಿಂದ ಜಾಗ ಖಾಲಿ ಮಾಡಿದ್ದಾರೆ. ಇದನ್ನೂ ಓದಿ: ಶಂಕಿತ ಉಗ್ರ ಅಬ್ದುಲ್ ಮತೀನ್ ತಂದೆ ನಿಧನ
ಕಿಶೋರ್ ನೀರಿನಲ್ಲಿ ಮುಳುಗಿರುವುದನ್ನು ಆತನ ಸ್ನೇಹಿತರು ಮನೆಯವರಿಗೂ ತಿಳಿಸಿರಲಿಲ್ಲ. ಇತ್ತ ಮಗನಿಗಾಗಿ ಹುಡುಕಾಡಿದ್ದ ಪೋಷಕರು ಮಗ ಕಾಣೆಯಾಗಿದ್ದಾನೆ ಎಂದು ರಾಮನಗರದ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆ ಸೊಮವಾರ ಕಿಶೋರ್ ಬಗ್ಗೆ ಸ್ನೇಹಿತರ ಬಳಿ ಪೊಲೀಸರು ವಿಚಾರಿಸಿದಾಗ ನೀರಿನಲ್ಲಿ ಮುಳುಗಿ ಹೋಗಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ಸಾಲ ನೀಡುವುದಾಗಿ ಹೇಳಿ ವ್ಯಕ್ತಿಯ ಖಾತೆಯಲ್ಲಿದ್ದ ಹಣ ಲಪಟಾಯಿಸಿದ ವಂಚಕರು
ವಿಷಯ ಅರಿತ ಬಳಿಕ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅರ್ಕಾವತಿ ನದಿಯಿಂದ ಕಿಶೋರ್ ಮೃತ ದೇಹವನ್ನು ಹೊರತೆಗೆದಿದ್ದಾರೆ. ಈ ಸಂಬಂಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ – ಇಬ್ಬರ ಸಾವು
ವಿಜಯನಗರ: ಕಲ್ಯಾಣ-ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ (Tungabhadra Dam) ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯ 59,500 ಕ್ಯೂಸೆಕ್ ನೀರು ಒಳಹರಿವಿದ್ದು, ಕಳೆದ 24 ಗಂಟೆಯಲ್ಲಿ 5 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿದೆ.
ಸಂಪೂರ್ಣ ಖಾಲಿಯಾಗಿದ್ದ ಜಲಾಶಯ ನೀರಿನಿಂದ ಭರ್ತಿಯಾಗಿರುವುದು ಕಂಡು ಜನರು ಹರ್ಷಗೊಂಡಿದ್ದಾರೆ. ಒಂದೇ ದಿನದಲ್ಲಿ ತುಂಗಭದ್ರಾ ಜಲಾಶಯಕ್ಕೆ 5 ಟಿಎಂಸಿಗೂ ಅಧಿಕ ಪ್ರಮಾಣದ ನೀರು (Water Level) ಹರಿದುಬಂದಿದೆ. ಇದನ್ನೂ ಓದಿ: ತುಂಬಿ ಹರಿಯುತ್ತಿದ್ದ ಸೇತುವೆಯಲ್ಲೇ ಪಿಕಪ್ ಚಾಲನೆ!
ಶನಿವಾರ 16.649 TMCನಷ್ಟಿದ್ದ ನೀರಿನ ಸಂಗ್ರಹ ಭಾನುವಾರವಾದ ಇಂದು 21.356 ಟಿಎಂಸಿಗೆ ಏರಿಕೆಯಾಗಿದೆ. ಒಳಹರಿವಿನ ಪ್ರಮಾಣವೂ ಹೆಚ್ಚಾಗಿದ್ದು, ಕಳೆದ 24 ಗಂಟೆಗಳಲ್ಲಿ 54,657 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬಂದಿದೆ. ಪ್ರತಿ ದಿನ 41,572 ಕ್ಯೂಸೆಕ್ ನೀರು ಸದ್ಯ ಜಲಾಶಯ ಹರಿದು ಬರುತ್ತಿದೆ. ಇದನ್ನೂ ಓದಿ: ಭಾರೀ ಮಳೆ – ತುಂಬಿ ಹರಿಯುತ್ತಿದೆ ಮೂಕನಮನೆ ಜಲಪಾತ; ನೀರಿನಲ್ಲಿ ಸಿಲುಕಿದ್ದ ಪ್ರವಾಸಿಗನ ರಕ್ಷಣೆ
ಇನ್ನೂ ಕಲ್ಯಾಣ ಕರ್ಣಾಟಕದ ಜೀವನಾಡಿಯಾಗಿರುವ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ (Rain) ಸುರಿಯುತ್ತಿದ್ದು, ಆದಷ್ಟು ಬೇಗ ನೀರು ಹರಿದು ಜಲಾಶಯ ತುಂಬಬೇಕು ಎನ್ನುವುದು ರೈತರ ಆಶಯ. ಜಲಾಶಯ ಪೂರ್ಣಗೊಂಡರೆ ಇಲ್ಲಿನ ಕೃಷಿ ಚಟುವಟಿಕೆಗಳು ಗರಿಗೆದರಲಿವೆ. ಹೀಗಾಗಿ ಇನ್ನೂ ಹೆಚ್ಚಿನ ಮಳೆಯಾಗಬೇಕೆನ್ನುವುದು ರೈತರ ಆಶಯವಾಗಿದೆ.
ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯ (Harangi Reservoir) ಬಹುತೇಕ ಭರ್ತಿಯಾಗಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚಾದ ಕಾರಣ ಜಲಾಶಯದ ಅಣೆಕಟ್ಟೆಯ 4 ಕ್ರೆಸ್ಟ್ ಗೇಟ್ ಗಳ ಮೂಲಕ ಶನಿವಾರ ಸಂಜೆ ಕಾವೇರಿ ನದಿಗೆ ನೀರು ಹರಿಸಲಾಗಿದೆ.
ಮಳೆ ಹೆಚ್ಚಾದ ಕಾರಣ ಏಕಾಏಕಿ ಜಲಾಶಯಕ್ಕೆ 20,000 ಕ್ಯೂಸೆಕ್ ಪ್ರಮಾಣದ ನೀರು ಒಳಹರಿವು ಬಂದ ಹಿನ್ನೆಲೆಯಲ್ಲಿ ಹಾರಂಗಿ ನದಿಗೆ 5,000 ಕ್ಯೂಸೆಕ್ ನೀರು ಹರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ನೀರನ್ನು ಹರಿಸಲಾಗುವುದು ಎಂದು ಎಂಜಿನಿಯರ್‌ಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೈಕೊಟ್ಟ ಮುಂಗಾರು – ಭೂಮಿ ಹದ ಮಾಡಿ ಕಾದು ಕುಳಿತ ಕೋಲಾರದ ರೈತರು
ಇನ್ನೂ ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು, ಉತ್ತರಕನ್ನಡದಲ್ಲಿ ಒಂದೇ ದಿನ 277 ಮಿಲಿಮೀಟರ್ ಮಳೆ ಆಗಿದೆ. ಆಗುಂಬೆಯಲ್ಲಿ 163 ಮಿಲಿಮೀಟರ್ ಮಳೆ ಬಿದ್ದಿದೆ. ಕೊಡಗಿನಲ್ಲಿ ಉತ್ತಮ ಮಳೆ ಆಗ್ತಿದೆ. ಕೇರಳದ ವಯನಾಡಿನಲ್ಲಿ 153 ಮಿಲಿಮೀಟರ್ ವರ್ಷಧಾರೆಯಾಗಿದೆ. ಪರಿಣಾಮ ಕಾವೇರಿ ಕೊಳ್ಳದ ಜಲಾಶಯಗಳಿಗೆ ಒಳಹರಿವು ಹೆಚ್ಚುತ್ತಿದೆ. ಶನಿವಾರ ಕೆಆರ್‌ಎಸ್‌ಗೆ 7,900, ಕಬಿನಿಗೆ 7,000, ಹಾರಂಗಿಗೆ 20,000, ಹೇಮಾವತಿಗೆ 9,362 ಕ್ಯೂಸೆಕ್ ನೀರಿನ ಒಳಹರಿವು ಬಂದಿದೆ. ಹಾರಂಗಿ ಭರ್ತಿಗೆ ಕೆಲವೇ ಅಡಿ ಬಾಕಿ ಇರುವ ಕಾರಣ ಡ್ಯಾಂನ 2 ಕ್ರಸ್ಟ್ ಗೇಟ್ ಓಪನ್ ಮಾಡಲಾಗಿದೆ. 5 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗ್ತಿದೆ.
KRS ನಿಂದ 10 ದಿನಗಳ ಮಟ್ಟಿಗೆ ನಾಲೆಗಳಿಗೆ ಇವತ್ತಿನಿಂದ ನೀರು ಹರಿಸಲಾಗುತ್ತಿದೆ. ಮತ್ತೊಂದೆಡೆ ಮಹಾರಾಷ್ಟ್ರದಲ್ಲಿ ಕೊಯ್ನಾ ಜಲಾನಯನ ಪ್ರದೇಶದಲ್ಲಿ 140 ಮಿಲಿಮೀಟರ್ ಮಳೆ ಆಗಿದ್ದು, ಕೃಷ್ಣಾನದಿಯ ಒಳಹರಿವೂ ಹೆಚ್ಚಾಗಿದೆ. ಆಲಮಟ್ಟಿಗೆ 83,000 ಕ್ಯೂಸೆಕ್ ಒಳಹರಿವಿದೆ. ದೂದ್‌ಗಂಗಾ ತುಂಬಿ ಹರಿದ ಪರಿಣಾಮ ಕಾರದಗಾ ಗ್ರಾಮದ ಬಂಗಾಲಿ ಬಾಬಾ ಮಂದಿರ ಎಂದಿನಂತೆ ಜಲಾವೃತಗೊಂಡಿದೆ. ಬೀದರ್‌ನ ಖತರಗಾಂವ್ ಸೇತುವೆ ಮುಳುಗಡೆಯಾಗಿದೆ. ಚಿಂಚೋಳಿಯ ಬೆನಕನಹಳ್ಳಿ ಜಲಾವೃತವಾಗಿದೆ.
ಕಲಬುರಗಿಯಲ್ಲಿ 15 ಮನೆ ಕುಸಿದಿವೆ. ಯಾದಗಿರಿಯಲ್ಲಿ ಭೀಮಾನದಿ ಅಪಾಯದ ಮಟ್ಟ ಮೀರಿದ್ದು, ವೀರಾಂಜನೇಯ, ಕಂಗಳೇಸ್ವರ ದೇಗುಲ ಮುಳುಗಡೆ ಆಗಿವೆ. ಮಡಿಕೇರಿಯಲ್ಲಿ ಅಬ್ಬಿ ಫಾಲ್ಸ್ ಮತ್ತು ಮಾಂದಲ್‌ಪಟ್ಟಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಚಿಕ್ಕಮಗಳೂರಿನಲ್ಲಿ ಭದ್ರಾ ಅಬ್ಬರಕ್ಕೆ ಹೆಬ್ಬಾಳೆ ಸೇತುವೆ ಮುಳುಗಡೆ ಹಂತ ತಲುಪಿದೆ. ಹಾಸನದ ಶಿರಾಡಿಘಾಟ್ ರಸ್ತೆಯಲ್ಲಿ ಭೂಕುಸಿತ ಉಂಟಾಗಿದೆ.
ಬೆಳಗಾವಿ: ಆಯತಪ್ಪಿ ಬೈಕ್ ಮೇಲಿಂದ ಬಿದ್ದು ಇಬ್ಬರು ನದಿಪಾಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೃತದೇಹ ಪತ್ತೆಯಾಗಿದೆ. ಮೃತದೇಹಗಳನ್ನು ಎಸ್‌ಡಿಆರ್‌ಎಫ್ (SDRF) ತಂಡದ ಸಿಬ್ಬಂದಿ ಹೊರತೆಗೆದಿದ್ದಾರೆ.
ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ (Mudalagi) ತಾಲೂಕಿನ ಅವರಾದಿ ಗ್ರಾಮದ ಬಳಿಯ ಘಟಪ್ರಭಾ ನದಿ ಸೇತುವೆ ದಾಟುವ ಸಂದರ್ಭ ಆಯತಪ್ಪಿ ಇಬ್ಬರು ಸವಾರರು ನದಿಗೆ ಬಿದ್ದಿದ್ದರು. ಚನ್ನಪ್ಪ ಹರಿಜನ (38), ದುರ್ಗಾಣಿ ಹರಿಜನ (35) ಮೃತ ದುರ್ದೈವಿಗಳಾಗಿದ್ದು, ನದಿಯಿಂದ ಮೃತದೇಹವನ್ನು ಹೊರತೆಗೆಯಲಾಗಿದೆ. ಇದನ್ನೂ ಓದಿ: ಜೈನಮುನಿ ಹತ್ಯೆ ಕೇಸ್ ತನಿಖೆ ಚುರುಕು- 7 ದಿನ ಹಂತಕರು ಪೊಲೀಸ್ ಕಸ್ಟಡಿಗೆ
ಕೆಲಸದ ನಿಮಿತ್ತ ಅವರಾದಿ ಗ್ರಾಮದಿಂದ ಮಹಾಲಿಂಗಪುರಕ್ಕೆ (Mahalingapura) ತೆರಳುತ್ತಿದ್ದಾಗ ಘಟನೆ ನಡೆದಿತ್ತು. ನಿರಂತರ ಕಾರ್ಯಾಚರಣೆ ನಡೆಸಿ ಮಂಗಳವಾರ ಚನ್ನಪ್ಪ ಹರಿಜನ ಮೃತದೇಹ ಎಸ್‌ಡಿಆರ್‌ಎಫ್ ತಂಡದ ಸಿಬ್ಬಂದಿ ಹೊರತೆಗೆದಿದ್ದರು. ಇಂದು ಮುಂಜಾನೆಯೇ ನದಿಗಿಳಿದು ಕಾರ್ಯಾಚರಣೆ ನಡೆಸಿ ದುರ್ಗಾಣಿ ಅವರ ಮೃತದೇಹವನ್ನೂ ಹೊರತೆಗೆದಿದ್ದಾರೆ. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಡಹಗಲೇ ಡಬಲ್ ಮರ್ಡರ್!
ಶಿಮ್ಲಾ: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ (Himachal Pradesh) ಬಿಯಾಸ್ ನದಿ ತುಂಬಿ ಹರಿಯುತ್ತಿದ್ದು ಪ್ರವಾಹ ಉಂಟಾಗಿದೆ.
VIDEO | A car was swept away in Beas river near Kullu, Himachal Pradesh earlier today as water level has increased in the river following heavy rains. pic.twitter.com/K9QE3H0OUu
ಬಿಯಾಸ್ ನದಿಯ (Beas River) ನೀರಿನ ಮಟ್ಟ ಹೆಚ್ಚಳದಿಂದಾಗಿ ಮಂಡಿ ಜಿಲ್ಲೆಯ ಸೇತುವೆಯ ಮೇಲೆ ನೀರು ಹರಿಯುತ್ತಿದೆ. ಕುಲು ಬಳಿ ಬಿಯಸ್ ನದಿಯ ಪ್ರವಾಹಕ್ಕೆ ಕಾರೊಂದು ಕೊಚ್ಚಿಕೊಂಡು ಹೋಗಿದೆ.ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ನದಿ ಬಳಿ ನಿರ್ಮಿಸಿದ ಅಂಗಡಿಗಳು ಕುಸಿದು ಬಿದ್ದಿವೆ. ರಾಷ್ಟ್ರೀಯ ಹೆದ್ದಾರಿ ಕೊಚ್ಚಿಹೋಗಿದೆ. ಇದನ್ನೂ ಓದಿ: ಗುಡ್‌ನ್ಯೂಸ್ – 24 ಗಂಟೆಗಳಲ್ಲಿ KRSನಲ್ಲಿ 2.50 ಅಡಿ ನೀರು ಭರ್ತಿ
Visuals from Manali – Chandigarh National Highway at 17 Mile #Manali
— Weatherman Shubham (@shubhamtorres09) July 9, 2023
ರೈಲ್ವೇ ಹಳಿಗಳ ಮೇಲೆ ಗುಡ್ಡ ಜರಿದ ಪರಿಣಾಮ ಸಂಚಾರ ಸ್ಥಗಿತಗೊಂಡಿದೆ. ಬಿಯಾಸ್ ನದಿಯ ನೀರಿನ ಮಟ್ಟವು ವೇಗವಾಗಿ ಏರಿದ ನಂತರ ನದಿಯ ಸಮೀಪ ಮನೆಯಲ್ಲಿ ಸಿಲುಕಿಕೊಂಡಿದ್ದ 6 ಜನರನ್ನು ಎಸ್‌ಡಿಆರ್‌ಎಫ್ ರಕ್ಷಿಸಿದೆ.
ಕುಲು, ಮನಾಲಿಯಲ್ಲಿ (Kullu Manali) ಬಹಳಷ್ಟು ಸಮಸ್ಯೆ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವೀಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ.