Tag: ನದಿ

  • ನದಿಗಿಳಿದು ಡೇರ್‌ ರಿಪೋರ್ಟಿಂಗ್‌ – ಲೈವ್‌ ಮಾಡ್ತಿದ್ದಾಗಲೇ ಬಾಲಕಿ ಮೃತದೇಹದ ಮೇಲೆ ಕಾಲಿಟ್ಟ ಪತ್ರಕರ್ತ!

    ನದಿಗಿಳಿದು ಡೇರ್‌ ರಿಪೋರ್ಟಿಂಗ್‌ – ಲೈವ್‌ ಮಾಡ್ತಿದ್ದಾಗಲೇ ಬಾಲಕಿ ಮೃತದೇಹದ ಮೇಲೆ ಕಾಲಿಟ್ಟ ಪತ್ರಕರ್ತ!

    ಬ್ರೆಜಿಲಿಯಾ: ಪ್ರತಿಯೊಂದು ಕ್ಷೇತ್ರದ ಬೆಳವಣಿಗೆಗಳ ಕುರಿತು ಮಾಹಿತಿ, ವಸ್ತುನಿಷ್ಠ ವರದಿಗಳ ಮೂಲಕ ಜನತೆಯ ವಿಶ್ವಾಸ ಗಳಿಸಿಕೊಳ್ಳುವ ಉದ್ದೇಶದಿಂದ ಪತ್ರಕರ್ತರು (Journalists) ಇನ್ನಿಲ್ಲದ ಸಾಹಸಗಳಿಗೆ ಮುಂದಾಗುತ್ತಾರೆ. ಆ ಮೂಲಕ ಕಟು ಸತ್ಯವನ್ನು ಬಯಲಿಗೆಳೆದಿರುವ ಸಂಗತಿಗಳು ಅನೇಕ. ಅದೇ ರೀತಿಯ ಪ್ರಕರಣವೊಂದು ಈಗ ಬ್ರೆಜಿಲ್‌ನಲ್ಲಿ ಬೆಳಕಿಗೆ ಬಂದಿದೆ.

    ಹೌದು. 13 ವರ್ಷದ ಬಾಲಕಿ ನಾಪತ್ತೆಯಾಗಿದ್ದ (The girl Missing) ಸ್ಥಳದಲ್ಲಿ ವರದಿಗಾರಿಕೆ ಮಾಡುವಾಗ ಟಿವಿ ವರದಿಗಾರನೊಬ್ಬ ಆಕಸ್ಮಿಕವಾಗಿ ಆಕೆಯ ಮೃತದೇಹದ ಮೇಲೆ ಕಾಲಿಟ್ಟ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಮೃತ ಬಾಲಕಿಯನ್ನ ರೈಸಾ ಗುರುತಿಸಲಾಗಿದೆ. ಈಶಾನ್ಯ ಬ್ರೆಜಿಲ್‌ನ ಬಕಾಬಲ್‌ನಲ್ಲಿರುವ ಮೀರಿನ್‌ ನದಿಯಲ್ಲಿ (Mearin River) ದುರಂತ ಸಂಭವಿಸಿದ್ದು, ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಮಳೆ ಆರ್ಭಟ; ಪ್ರಮುಖ ರಸ್ತೆಗಳು ಜಲಾವೃತ – ಸಂಚಾರ ಅಸ್ತವ್ಯಸ್ತ

    38 ಸೆಕೆಂಡುಗಳ ವಿಡಿಯೋನಲ್ಲಿ ಏನಿದೆ?
    ಪತ್ರಕರ್ತ ಲೆನಿಲ್ಡೊ ಫ್ರಾಜಾವೊ (Lenildo Fraza) ಬಾಲಕಿ ಕಣ್ಮರೆಯಾಗಿದ್ದ ಸ್ಥಳದಲ್ಲಿ ನದಿಯ ನಿಖರ ಆಳ ತೋರಿಸಲು ನದಿಗೆ ಇಳಿದಿದ್ದರು. ಅಲ್ಲದೇ ಸಾವಿಗೂ ಮುನ್ನ ಆ ಕ್ಷಣದಲ್ಲಿ ಬಾಲಕಿ ಸ್ಥಿತಿ ಏನಿತ್ತು ಅನ್ನೋದನ್ನ ಲೈವ್‌ನಲ್ಲಿ ವಿವರಿಸುತ್ತಿದ್ದರು. ಈ ಸಮಯದಲ್ಲಿ ನದಿ ನೀರಿನ ಆಳ ಎದೆಮಟ್ಟದಷ್ಟಿತ್ತು. ಹೀಗಿರುವಾಗ ಘಟನೆ ವಿವರಿಸುತ್ತಲೇ ಒಂದು ಹೆಜ್ಜೆ ಮುಂದಿಟ್ಟಾಗ ಮುಗ್ಗರಿಸಿದಂತಾಗುತ್ತದೆ.

    ತಕ್ಷಣ ಇಲ್ಲಿನ ತಳದಲ್ಲಿ ಏನೋ ಇದೆ ಅನ್ನಿಸುತ್ತಿದೆ ಎಂದು ತನ್ನ ಸಹ ಸಿಬ್ಬಂದಿಗೆ ಹೇಳ್ತಾರೆ. ಸ್ವಲ್ಪ ಸಮಯದ ಬಳಿಕ ನಾನಿನ್ನೂ ಮುಂದೆ ಹೋಗಲ್ಲ, ನನಗೆ ಭಯ ಆಗ್ತಿದೆ, ಅದು ಮನುಷ್ಯನ ತೋಳಿನಂತೆ ಕಾಣ್ತಿತ್ತು. ಒಂದು ವೇಳೆ ಅದು ನಾಪತ್ತೆಯಾದ ಬಾಲಕಿಯದ್ದೇ ಆಗಿರಬಹುದಾ ಅಂತ ಸಂಶಯ ವ್ಯಕ್ತಪಡಿಸ್ತಾರೆ. ಮತ್ತೊಂದು ಕಡೆ ಅದು ಮೀನು ಕೂಡ ಆಗಿರಬಹುದಲ್ವಾ? ಏನೋ ಗೊತ್ತಿಲ್ಲ ಅಂತ ಹೇಳ್ತಾರೆ. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್‌ – ಇಂದು ಮತ್ತೆ ವಿಚಾರಣೆ, FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಬೈರತಿ ಬಸವರಾಜ್

    ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಬಳಿಕ ಪೊಲೀಸರು ರಕ್ಷಣಾ ತಂಡದ ಸಹಾಯದಿಂದ ಪತ್ರಕರ್ತ ವರದಿ ಮಾಡುತ್ತಿದ್ದ ನಿಖರ ಸ್ಥಳದಲ್ಲೇ ಮೃತದೇಹವನ್ನ ಹೊರತೆಗೆಯುತ್ತಾರೆ. ಇನ್ನೂ ಈ ಘಟನೆ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದ್ದು, ವರದಿಗಾರನನ್ನೂ ತನಿಖೆಗೆ ಒಳಪಡಿಸುವಂತೆ ಕೆಲವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅವಳ ಮೂಗಿನ ತುದಿ ಕೋಪ ನಂಗಿಷ್ಟ!

  • ಪತಿಯನ್ನ ಪತ್ನಿ ನದಿಗೆ ತಳ್ಳಿದ್ದ ಆರೋಪ ಪ್ರಕರಣಕ್ಕೆ ಟ್ವಿಸ್ಟ್ – ಪತಿ ವಿರುದ್ಧ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲು

    ಪತಿಯನ್ನ ಪತ್ನಿ ನದಿಗೆ ತಳ್ಳಿದ್ದ ಆರೋಪ ಪ್ರಕರಣಕ್ಕೆ ಟ್ವಿಸ್ಟ್ – ಪತಿ ವಿರುದ್ಧ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲು

    ರಾಯಚೂರು: ಜಿಲ್ಲೆಯ ಗುರ್ಜಾಪುರ ಬ್ಯಾರೇಜ್ ಬಳಿ ನಡೆದಿದ್ದ ಫೋಟೊ ತೆಗೆಯುವ ನೆಪದಲ್ಲಿ ಪತಿಯನ್ನ ಪತ್ನಿ ನದಿಗೆ ತಳ್ಳಿದ ಆರೋಪ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತಿ ತಾತಪ್ಪ ವಿರುದ್ದ ಪ್ರಕರಣ ದಾಖಲಾಗಿದೆ.

    15 ವರ್ಷ, 8 ತಿಂಗಳ ಅಪ್ರಾಪ್ತೆಯನ್ನ ತಾತಪ್ಪ ಬಾಲ್ಯ ವಿವಾಹವಾಗಿರುವುದು ದೃಢವಾದ ಹಿನ್ನೆಲೆ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ತಾತಪ್ಪ ಹಾಗೂ ಆತನ ತಾಯಿ ಮತ್ತು ಅಪ್ರಾಪ್ತೆಯ ತಾಯಿ ಸೇರಿ ಒಟ್ಟು ಮೂರು ಜನರ ವಿರುದ್ದ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಫೋಟೊ ತೆಗೆಯುವ ನೆಪದಲ್ಲಿ ಪತಿಯನ್ನು ನದಿಗೆ ತಳ್ಳಿದ ಕೇಸ್‌ಗೆ ಟ್ವಿಸ್ಟ್‌ – 16ರ ಬಾಲಕಿ ಮದುವೆಯಾಗಿದ್ದ ತಾತಪ್ಪ

    ಜುಲೈ 19 ರಂದು ತಾತಪ್ಪನ ಕುಟುಂಬಸ್ಥರ ವಿಚಾರಣೆ ನಡೆಸಿದ್ದ ಅಧಿಕಾರಿಗಳ ತಂಡ ಮದುವೆ ಆಮಂತ್ರಣ ಪತ್ರಿಕೆ ಹಾಗೂ ಶಾಲಾ ದಾಖಲಾತಿ ಪರಿಶೀಲನೆ ವೇಳೆ ಅಪ್ರಾಪ್ತೆ ವಯಸ್ಸು ಬೆಳಕಿಗೆ ಬಂದಿದೆ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ರಾಯಚೂರು ಹಾಗೂ ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪ್ರಕರಣ ದಾಖಲಿಸಲು ಸೂಚನೆ ನೀಡಿತ್ತು. ಈಗ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ. ದೇವಸುಗೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ದೂರು ದಾಖಲಿಸಿದ್ದಾರೆ.

    ಯುವಕನ ಮನೆಯವರಿಗೆ ಅಪ್ರಾಪ್ತೆ ವಯಸ್ಸಿನ ಬಗ್ಗೆ ಸೂಕ್ತ ದಾಖಲೆಗಳನ್ನ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಆದರೆ, ದಾಖಲೆಗಳನ್ನ ಸಲ್ಲಿಸಿದ ಹಿನ್ನೆಲೆ ಮೂವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಯಾದಗಿರಿ ಮಕ್ಕಳಾ ರಕ್ಷಣಾ ಘಟಕದಿಂದ ಈಗಾಗಲೇ ಅಪ್ರಾಪ್ತೆಯ ರಕ್ಷಣೆ ಮಾಡಲಾಗಿದ್ದು, ಯಾದಗಿರಿ ಜಿಲ್ಲಾ ಬಾಲಕಿಯರ ಬಾಲಮಂದಿರಕ್ಕೆ ಅಪ್ರಾಪ್ತೆಯನ್ನ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ರಾಯಚೂರು ಮಹಿಳಾ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಫೋಟೋ ತೆಗೆಯುವ ನೆಪದಲ್ಲಿ ಪತಿಯನ್ನ ಪತ್ನಿ ನದಿಗೆ ತಳ್ಳಿದ ಆರೋಪ ಕೇಸ್‌ – ಪರಸ್ಪರ ವಿಚ್ಛೇದನಕ್ಕೆ ಮುಂದಾದ ದಂಪತಿ

  • ಘಟಪ್ರಭಾ ತಟದಲ್ಲಿ ಪ್ರವಾಹ ಭೀತಿ – ಮುಧೋಳ ತಾಲೂಕಿನ ಸೇತುವೆಗಳು ಜಲಾವೃತ ಸಾಧ್ಯತೆ

    ಘಟಪ್ರಭಾ ತಟದಲ್ಲಿ ಪ್ರವಾಹ ಭೀತಿ – ಮುಧೋಳ ತಾಲೂಕಿನ ಸೇತುವೆಗಳು ಜಲಾವೃತ ಸಾಧ್ಯತೆ

    ಬಾಗಲಕೋಟೆ: ಘಟಪ್ರಭಾ ನದಿಗೆ (Ghataprabha River) ಅಪಾರ ನೀರು ಹರಿದುಬರುತ್ತಿದ್ದು, ಮುಧೋಳ (Mudhol) ತಾಲೂಕಿನ ಸೇತುವೆಗಳು ಜಲಾವೃತವಾಗುವ ಸಾಧ್ಯತೆ ಇದೆ.

    ಮಹಾರಾಷ್ಟ್ರ, ಬೆಳಗಾವಿ ಜಿಲ್ಲೆಯಲ್ಲಿ (Belagavi District) ಸುರಿಯುತ್ತಿರುವ ಭಾರೀ ಮಳೆಯಿಂದ (Rain) ಘಟಪ್ರಭಾ ನದಿ ಮೈದುಂಬಿ ಹರಿಯು ತ್ತಿದೆ. ಬೆಳಗಾವಿ ಜಿಲ್ಲೆಯಿಂದ ನದಿಗೆ 17 ಸಾವಿರ ಕ್ಯೂಸೆಕ್‌ ನೀರು ಹರಿದುಬರುತ್ತಿದೆ. ಇದನ್ನೂ ಓದಿ: ಕೃಷ್ಣೆಯಲ್ಲಿ ಒಳ ಹರಿವು ಹೆಚ್ಚಳ – ನದಿ ತೀರದಲ್ಲಿ ಪ್ರವಾಹ ಭೀತಿ

     

    ಬುಧವಾರ 10 ಸಾವಿರ ಕ್ಯೂಸೆಕ್‌ ಬರುತ್ತಿದ್ದರೆ ಗುರುವಾರ ಇದು 17 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದೆ. ಸದ್ಯ ನಂದಗಾಂವ ಸೇತುವೆ ಜಲಾವೃತವಾಗಿದ್ದು, ಮಿರ್ಜಿ ಬಳಿಯ ಸೇತುವೆ ಜಲಾವೃತವಾಗುವ ಸಾಧ್ಯತೆಯಿದೆ. ಮುಧೋಳ ತಾಲೂಕಿನ 12 ಸೇತುವೆಗಳಲ್ಲಿ ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿದೆ.

    ಘಟಪ್ರಭಾ ನದಿಗೆ 25 ಸಾವಿರ ಕ್ಯುಸೆಕ್‌ಗಿಂತ ಹೆಚ್ಚಿನ ನೀರು ಹರಿದುಬಂದರೆ ಎರಡ್ಮೂರು ದಿನಗಳಲ್ಲಿ ಪ್ರವಾಹ ಎದುರಾಗಲಿದೆ. ಮಾಚಕನೂರ, ಮಿರ್ಜಿ, ಚನಾಳ, ಜಾಲಿಬೇರಿ, ಯಡಹಳ್ಳಿ, ಇಂಗಳಗಿ ಗ್ರಾಮ ಗಳು ಮೊದಲ ಹಂತದಲ್ಲಿ ಜಲಾವೃತವಾಗಲಿವೆ. ತಾಲೂಕು ಆಡಳಿತದಿಂದ ನೀರಿನ ಮಟ್ಟದ ಮೇಲೆ ನಿಗಾ ವಹಿಸಲಾಗಿದ್ದು, ಪ್ರವಾಹ ಸ್ಥಿತಿ ಎದುರಿಸಲು ಸಿದ್ಧತೆ ಕೈಗೊಳ್ಳಲಾಗಿದೆ.

  • ನದಿಯಲ್ಲಿ ಈಜಲು ಹೋದ ಇಬ್ಬರು ಹುಡುಗರು ನೀರುಪಾಲು

    ನದಿಯಲ್ಲಿ ಈಜಲು ಹೋದ ಇಬ್ಬರು ಹುಡುಗರು ನೀರುಪಾಲು

    ಮೈಸೂರು: ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಹುಡುಗರು ನೀರುಪಾಲಾಗಿರುವ ಘಟನೆ ಮೈಸೂರು (Mysuru) ಜಿಲ್ಲೆ ಟಿ.ನರಸೀಪುರ ( T.Narasipura) ತಾಲೂಕಿನ ಮೇದಿನಿ ಗ್ರಾಮದಲ್ಲಿ ನಡೆದಿದೆ.

    ಕೊಳ್ಳೇಗಾಲ ಪಟ್ಟಣದ ನಿವಾಸಿಗಳಾದ ಭರತ್ (17), ಲಿಖಿತ್ (18) ಮೃತರು. ಇದನ್ನೂ ಓದಿ: ತ್ರಿಬಲ್ ಮರ್ಡರ್ ಮಾಡಿದ್ದ ಆರೋಪಿಗಳು ಅರೆಸ್ಟ್ – ಹೆಣ್ಣಿನ ವಿಚಾರಕ್ಕೆ ಬಿತ್ತು ಮೂರು ಹೆಣ

    ಮೇದಿನಿ ಗ್ರಾಮದ ರಾಮಕಟ್ಟೆ ಬಳಿ ಈಜಲು ಐವರು ತೆರಳಿದ್ದರು. ಈ ವೇಳೆ ಭರತ್ ಹಾಗೂ ಲಿಖಿತ್ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದು, ಉಳಿದ ಮೂವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: Tumakuru | ಬಸ್, ಬೈಕ್ ನಡುವೆ ಅಪಘಾತ – ಯುಗಾದಿಗೆ ಊರಿಗೆ ತೆರಳುತ್ತಿದ್ದ ಇಬ್ಬರು ಸಾವು

    ನೀರಿನಲ್ಲಿ ಕೊಚ್ಚಿ ಹೋಗಿರುವ ಭರತ್ ಹಾಗೂ ಲಿಖಿತ್ ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ತಲಕಾಡು ಪೊಲೀಸ್ ಠಾಣೆಯಲ್ಲಿ (Talakadu Police Station) ಪ್ರಕರಣ ದಾಖಲಾಗಿದೆ.

  • ಅಡಿಗೆ 10 ರೂ. ಬದಲು 1,000 ರೂ. ವಸೂಲಿ – ಕಿವಿ ಓಲೆ ಅಡ ಇಟ್ಟು ಸುಂಕ ಕಟ್ಟಿದ ಅಜ್ಜಿ

    ಅಡಿಗೆ 10 ರೂ. ಬದಲು 1,000 ರೂ. ವಸೂಲಿ – ಕಿವಿ ಓಲೆ ಅಡ ಇಟ್ಟು ಸುಂಕ ಕಟ್ಟಿದ ಅಜ್ಜಿ

    ಚಿಕ್ಕಬಳ್ಳಾಪುರ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ನಂದಿ ಗ್ರಾಮದ ಭೋಗನಂದೀಶ್ವರ ಜಾತ್ರೆಯಲ್ಲಿ (Bhoganandishwara) ಬಡಪಾಯಿ ವ್ಯಾಪಾರಸ್ಥರ ಬಳಿ ಸುಂಕದ ಹೆಸರಲ್ಲಿ ಸಾವಿರಾರು ರೂಪಾಯಿ ಸುಲಿಗೆ ಮಾಡಲಾಗಿದೆ.

    ಜಾತ್ರೆಯಲ್ಲಿ ದೇವಾಲಯದ ಹೊರಭಾಗದ ಪ್ರಮುಖ ರಸ್ತೆಯಲ್ಲಿ ಇಡುವ ಅಂಗಡಿ ಮಳಿಗೆಗಳ ಬಳಿ ಸುಂಕ ವಸೂಲಿಯ ಗುತ್ತಿಗೆಯನ್ನ ಹರಾಜು ಪ್ರಕ್ರಿಯೆಯಲ್ಲಿ ನಂದಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆಯ ಮಗ ಹಿತೇಶ್ ಗೌಡ ಪಡೆದುಕೊಂಡಿದ್ದ. ಹರಾಜು ಸುಂಕ ವಸೂಲಿ ನಿಬಂಧನೆಗಳ ಪ್ರಕಾರ 1 ಅಡಿ ರನ್ನಿಂಗ್ ಫೀಟ್‌ಗೆ 10 ರೂ. ವಸೂಲಿ ಮಾಡಬೇಕು. ಆದರೆ ಹಿತೇಶ್ ಗೌಡ 1 ಅಡಿಗೆ 10 ರೂ. ಬದಲು 1,000 ರೂ. ವಸೂಲಿ ಮಾಡಿದ್ದಾನೆ ಎಂದು ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮುದ್ದಿನ ಬೆಕ್ಕು ಸಾವು – ಮೃತದೇಹದ ಜೊತೆ 2 ದಿನ ಕಳೆದು ಮಹಿಳೆ ನೇಣಿಗೆ ಶರಣು

    ಹಿತೇಶ್ ಗೌಡ ಮನಸ್ಸೋ ಇಚ್ಛೆ ತಾನು ಹೇಳಿದ್ದೇ ರೇಟ್ ಎಂದು ಸಾವಿರಾರು ರೂ. ವಸೂಲಿ ಮಾಡಿದ್ದಾನೆ. ಬಡಪಾಯಿ ವ್ಯಾಪಾರಿಗಳ ಬಳಿ ಒಂದೊಂದು ಅಂಗಡಿಗೆ 7,000 ರೂ. ಇಂದ 50,000 ರೂ.ವರೆಗೂ ವಸೂಲಿ ಮಾಡಿದ್ದಾನೆ. ಸುಂಕ ವಸೂಲಿ ನಿಯಮಗಳನ್ನು ಲೆಕ್ಕಕ್ಕೆ ಇಡದೇ ಸಾವಿರಾರು ರೂ. ವಸೂಲಿ ಮಾಡಲಾಗಿದ್ದು, ಸುಂಕದ ದರ ಪ್ರಶ್ನೆ ಮಾಡಿದವರ ಮೇಲೆ ದೌರ್ಜನ್ಯ ದರ್ಪ ತೋರಿದ ಆರೋಪವೂ ಕೇಳಿಬಂದಿದೆ. ಹೆಣ್ಣು ಮಕ್ಕಳು ಎನ್ನದೇ ಕೀಳಾಗಿ ಮಾತನಾಡಿದ್ದಾರೆ ಎಂದು ಮಹಿಳಾ ವ್ಯಾಪಾರಸ್ಥರು ನೊಂದುಕೊಂಡಿದ್ದಾರೆ. ಇದನ್ನೂ ಓದಿ: ಕನ್ನಡ ಚಿತ್ರರಂಗದವರು ಜೀತದಾಳುಗಳೇ? ಅಧಿಕಾರಕ್ಕೆ ಕಾಂಗ್ರೆಸ್‌ ಮಾಡಿದ ಪಾದಯಾತ್ರೆಗೆ ಯಾಕೆ ಭಾಗವಹಿಸಬೇಕು: ಮುನಿರತ್ನ

    ಕಿವಿ ಒಲೆ ಅಡ ಇಟ್ಟು ಸುಂಕ ಕಟ್ಟಿದ ಅಜ್ಜಿ:
    ಇನ್ನು ಜಾತ್ರೆಯಲ್ಲಿ ವ್ಯಾಪಾರಕ್ಕೆ ಬಂದ ಒಬ್ಬೊಬ್ಬರದ್ದು ಒಂದೊಂದು ಅಳಲು. ಸ್ಟೀಲ್ ಪಾತ್ರೆ ಸಾಮಾನು ಮಾರಾಟ ಮಾಡಲು ಬಂದ ಅಜ್ಜಿ ಸಾವಿತ್ರಮ್ಮ ಕೇಳಿದಷ್ಟು ಸುಂಕ ಕಟ್ಟಲು ಸಾಧ್ಯವಾಗದೇ 5,000 ರೂ.ಗೆ ಕಿವಿ ಓಲೆ ಅಡ ಇಟ್ಟು ಸುಂಕ ಕಟ್ಟಿದ್ದಾಳೆ. ಕೇವಲ 7 ಅಡಿ ಜಾಗದಲ್ಲಿ ಅಂಗಡಿ ಇಟ್ಟುಕೊಂಡಿರುವ ಸಾವಿತ್ರಮ್ಮ ಅಡಿಗೆ ಸಾವಿರ ರೂ.ನಂತೆ 7,000 ರೂ. ಕಟ್ಟಿದ್ದಾಳೆ. ಯಾಕೆ ಇಷ್ಟು ಅಂತ ಪ್ರಶ್ನೆ ಮಾಡಿದರೇ ಇಟ್ರೇ ಇಡಿ ಇಲ್ಲ ಅಂದ್ರೆ ಅಂಗಡಿ ಎತ್ತುವಂತೆ ಅವಾಜ್ ಹಾಕುತ್ತಾನೆ ಎಂದು ಹಲವು ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೀರೋಗಳು ಜೀರೋ ಆಗಿದ್ದಾರೆ.. ಗುಂಪುಗಾರಿಕೆ, ಜಾತಿ ರಾಜಕಾರಣ ಬಿಟ್ ಬಿಡಿ: ಕಾಂಗ್ರೆಸ್ ನಾಯಕರಿಗೆ ಡಿಕೆಶಿ ವಾರ್ನ್

  • ಭಾರೀ ಮಳೆಗೆ ಉಡುಪಿ ತತ್ತರ – ಉಕ್ಕಿ ಹರಿದ ಇಂದ್ರಾಣಿ ತೀರ್ಥ, 150ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಭಾರೀ ಮಳೆಗೆ ಉಡುಪಿ ತತ್ತರ – ಉಕ್ಕಿ ಹರಿದ ಇಂದ್ರಾಣಿ ತೀರ್ಥ, 150ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಉಡುಪಿ: ಮುಂಗಾರು ಮಳೆ (Monsoon Rain) ಉಡುಪಿ ನಗರದ ಹಲವೆಡೆ ನೆರೆ ಸೃಷ್ಟಿಸಿದೆ. ಇಂದ್ರಾಣಿ ತೀರ್ಥ ಉಕ್ಕಿ ಹರಿದ ಪರಿಣಾಮ ನದಿ ಪಾತ್ರದ ಸ್ಥಳಗಳೆಲ್ಲ ಜಲಾವೃತಗೊಂಡಿದೆ.

    ಸುಮಾರು ಮೂರು ಗಂಟೆ ಸುರಿದ ರಣ ಮಳೆಗೆ ಉಡುಪಿ ನಗರ (Udupi CIty) ತತ್ತರವಾಗಿದೆ. ಮಣಿಪಾಲ ಪರ್ಕಳ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ಭಾರೀ ಪ್ರಮಾಣದಲ್ಲಿ ಉಡುಪಿಯತ್ತ ನೀರು ಹರಿದು ಬಂದಿದೆ. ಗದ್ದೆ, ನಗರ ಪ್ರದೇಶ, ಲೇಔಟ್‌ ಒಳಗಡೆ  ಕೆಸರು ನೀರು ನುಗ್ಗಿದೆ.

    ಗುಂಡಿಬೈಲು, ಪಾಡಿಗಾರು, ಮಠದಬೆಟ್ಟು, ಕರಂಬಳ್ಳಿ, ಕಲ್ಸಂಕ ಬೈಲಕೆರೆ, ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ, ಮೂಡನಿಡಂಬೂರು, ನಿಟ್ಟೂರು, ಮಲ್ಪೆ, ಮಣಿಪಾಲ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, 150ಕ್ಕೂ ಅಧಿಕ ಮನೆಗಳು ಜಲ ದಿಗ್ಭಂಧನಕ್ಕೆ ಒಳಗಾಗಿವೆ. ಕೆಲ ಕಡೆ ಅಂಗಡಿಗಳ ಒಳಗಡೆ ನೀರು ನುಗ್ಗಿದೆ.

    ಇಂದ್ರಾಣಿ ತೀರ್ಥ (Indrani Theertha) ಹರಿಯುವಲ್ಲೆಲ್ಲಾ ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಮಳೆ (Heavy Rain) ಬಿದ್ದಾಗ ಎಲ್ಲಾ ಕಾಲುವೆಗಳು ತುಂಬಿಕೊಂಡಿರುವುದೇ ಈ ಸಮಸ್ಯೆಗೆ ಕಾರಣ. ಒಳಚರಂಡಿ ಅವ್ಯವಸ್ಥೆಯ ಬಗ್ಗೆ ನೆರೆಪೀಡಿತ ಪ್ರದೇಶದ ಮಹಿಳೆ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಚಕ್ರ ತೀರ್ಥ ಸಗ್ರಿ ವ್ಯಾಪ್ತಿಯಿಂದ ಎಂಟು ಜನರ ರಕ್ಷಣೆ ಮಾಡಲಾಗಿದೆ. ಅಗ್ನಿಶಾಮಕ ದಳದ ಕಾರ್ಯಾಚರಣೆ ಮುಂದುವರೆದಿದೆ. ಜಲಾವೃತವಾದ ಮನೆಗಳಿಂದ ಮಹಿಳೆಯರು ಮಕ್ಕಳು ವೃದ್ಧರನ್ನ ಕರೆತರಲಾಯಿತು.

     

    ಅಗ್ನಿಶಾಮಕ ದಳದ ಬೋಟ್ ನಲ್ಲಿ ಜನರನ್ನು ರಕ್ಷಣೆ ಮಾಡಲಾಗಿದೆ. ಮಹಿಳೆಯರು ಮಕ್ಕಳನ್ನು ಎತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ನಗರಸಭೆ, ಅಗ್ನಿಶಾಮಕದಳ, ಪೊಲೀಸರು ಮತ್ತು ಸ್ಥಳೀಯರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

    ಬೆಳಗ್ಗೆ ಸುರಿದ ಮಳೆಗೆ ಕರಾವಳಿ ಅಂಡರ್ ಪಾಸ್ ಜಲಾವೃತವಾಗಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಭಾರೀ ಪ್ರಮಾಣದ ಮಳೆ ನೀರು ತುಂಬಿಕೊಂಡು ವಾಹನ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ದ್ವಿಚಕ್ರ ವಾಹನ ಕಾರು ಬಸ್ಸುಗಳು ಕೃತಕ ನೆರೆ ನೀರಿನಲ್ಲಿ ಓಡಾಟ ಮಾಡುತ್ತಿದೆ.

     

  • ಆತ್ಮಹತ್ಯೆಗೆ ಯತ್ನಿಸಿ ಕುಮಾರಧಾರಾ ನದಿ ಮಧ್ಯೆ ಸಿಲುಕಿದ್ದ ವ್ಯಕ್ತಿಯ ರಕ್ಷಣೆ

    ಆತ್ಮಹತ್ಯೆಗೆ ಯತ್ನಿಸಿ ಕುಮಾರಧಾರಾ ನದಿ ಮಧ್ಯೆ ಸಿಲುಕಿದ್ದ ವ್ಯಕ್ತಿಯ ರಕ್ಷಣೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ನಡುವೆ ಕುಮಾರಧಾರಾ ನದಿ ಮಧ್ಯೆ ಸಿಲುಕಿದ್ದ ವ್ಯಕ್ತಿಯೊಬ್ಬರನ್ನು ರಕ್ಷಿಸಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೋಡಿಂಬಾಳದ ಪುಳಿಕುಕ್ಕು ಬಳಿ ಹರಿಯುತ್ತಿರುವ ಕುಮಾರಧಾರಾ ನದಿಯಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ ರವಿಕುಮಾರ್ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.

    ರವಿಕುಮಾರ್ ಅವರು ನದಿ ಮಧ್ಯೆ ಪೊದೆ ಹಿಡಿದುಕೊಂಡು ನಿಂತಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಈ ವಿಚಾರವನ್ನು ಕೂಡಲೇ ಅವರು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಕಡಬ ಎಸ್‍ಐ ಅಭಿನಂದನ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿನಿ ನೇಣಿಗೆ ಶರಣು

    ಕಡಬ ಪೊಲೀಸ್, ಅಗ್ನಿಶಾಮಕ ದಳ, ಶೌರ್ಯ ತಂಡದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ವ್ಯಕ್ತಿಯನ್ನು ರಕ್ಷಣೆ ಮಾಡಿ ಕಡಬ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕಡಬ ಆಸ್ಪತ್ರೆಗೆ ತಹಶಿಲ್ದಾರ್ ಪ್ರಭಾಕರ್ ಖಜೂರೆ ಭೇಟಿ ನೀಡಿದ್ದಾರೆ.

  • ನದಿಗೆ ಸ್ನಾನಕ್ಕೆ ತೆರಳಿದ್ದ ವ್ಯಕ್ತಿ ಮೊಸಳೆ ಬಾಯಿಗೆ ಸಿಕ್ಕಿ ಸಾವು!

    ನದಿಗೆ ಸ್ನಾನಕ್ಕೆ ತೆರಳಿದ್ದ ವ್ಯಕ್ತಿ ಮೊಸಳೆ ಬಾಯಿಗೆ ಸಿಕ್ಕಿ ಸಾವು!

    ಚಿಕ್ಕೋಡಿ: ನದಿಗೆ ಸ್ನಾನಕ್ಕೆ ತೆರಳಿದ್ದ ವ್ಯಕ್ತಿ ಮೊಸಳೆ (Crocodile) ಬಾಯಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ (Chikkodi) ತಾಲ್ಲೂಕಿನ ಸದಲಗಾ ಪಟ್ಟಣದ ಬಳಿ ದೂಧಗಂಗಾ ನದಿಯಲ್ಲಿ ನಡೆದಿದೆ.

    ಮಹಾದೇವ ಪುನ್ನಪ್ಪ ಖುರೆ (72) ಎಂಬುವರು ಮೊಸಳೆ ಬಾಯಿಗೆ ಸಿಲುಕಿ, ಮೃತಪಟ್ಟಿರುವ ದುರ್ದೈವಿ. ಮೃತ ಮಹಾದೇವ ಪುನ್ನಪ್ಪ ಖುರೆಯವರಿಗೆ ಈಜಲು ಬರುತ್ತಿರಲಿಲ್ಲ. ಹೀಗಾಗಿ ನದಿ (River) ದಡದಲ್ಲಿ ಕುಳಿತು ಸ್ನಾನ ಮಾಡುತ್ತಿದ್ದರು. ಇದನ್ನೂ ಓದಿ: ನಾವಿಕನಿಲ್ಲದ ದೋಣಿಯಲ್ಲಿ ಮುಳುಗಿದ ಡೆಲ್ಲಿ – ಆರ್‌ಸಿಬಿಗೆ 47 ರನ್‌ಗಳ ಜಯ; ಪ್ಲೇ ಆಫ್‌ ಕನಸು ಜೀವಂತ!

    ಸ್ನಾನ ಮಾಡುತ್ತಿದ್ದ ಸಂಧರ್ಭದಲ್ಲಿ ಮಹಾದೇವ ಖುರೆಯವರನ್ನು ಮೊಸಳೆ ಎಳೆದುಕೊಂಡು ಹೋಗಿ ತೀವ್ರವಾಗಿ ಗಾಯಮಾಡಿದೆ. ಪರಿಣಾಮ ಮಹಾದೇವ ಖುರೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಬಳಿಕ ನದಿಯಲ್ಲಿ ಶವ ಕಂಡ ಬಳಿಕ ಸ್ಥಳೀಯರು ಶವವನ್ನ ಹೊರತೆಗೆದಿದ್ದು ಮರೋಣತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗಿದೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಜ್ಯದ ಇತಿಹಾಸದಲ್ಲೇ 2ನೇ ಅತಿದೊಡ್ಡ ಗಾಂಜಾ ಬೇಟೆ – 15 ಕೋಟಿ ಮೌಲ್ಯದ ಗಾಂಜಾ ಸೀಜ್!

  • ಹೆಂಡ್ತಿಯನ್ನ ಕ್ರೂರವಾಗಿ ಕೊಂದು, 200 ತುಂಡುಗಳಾಗಿ ಕತ್ತರಿಸಿ ನದಿಗೆ ಎಸೆದ ಹಂತಕ!

    ಹೆಂಡ್ತಿಯನ್ನ ಕ್ರೂರವಾಗಿ ಕೊಂದು, 200 ತುಂಡುಗಳಾಗಿ ಕತ್ತರಿಸಿ ನದಿಗೆ ಎಸೆದ ಹಂತಕ!

    – ಮೃತದೇಹ ವಿಲೇವಾರಿಗೆ 50 ಡಾಲರ್‌ ಕೊಟ್ಟಿದ್ದ – ಪಾಪಿ ಪತಿ ಸಿಕ್ಕಿಬಿದ್ದದ್ದು ಹೇಗೆ?

    ಲಂಡನ್‌: ಯುಕೆನಲ್ಲಿ ಬೆಚ್ಚಿ ಬೀಳಿಸುವ ಪ್ರಕರಣವೊಂದು (UK Murder Case) ಬೆಳಕಿಗೆ ಬಂದಿದೆ. 28 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನ ಚಾಕುವಿನಿಂದ ಹಿರಿದು ಕೊಂದಿರುವ ಘಟನೆ ನಡೆದಿದೆ. ಹತ್ಯೆಗೈದ ಬಳಿಕ ಆಕೆಯ ದೇಹವನ್ನು 200ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ, ಒಂದು ವಾರ ಅಡುಗೆಮನೆಯಲ್ಲಿಟ್ಟು, ಬಳಿಕ ತನ್ನ ಸ್ನೇಹಿತನ ಸಹಾಯದಿಂದ ನದಿಗೆ ಎಸೆದಿದ್ದಾನೆ.

    ಆರೋಪಿ (Accused) ನಿಕೋಲಸ್‌ ಮೆಟ್ಸನ್‌ (28), ತನ್ನ ಪತ್ನಿ ಹಾಲಿ ಬ್ರಾಮ್ಲಿ (26)ಯನ್ನ ಕಳೆದ ಮಾರ್ಚ್‌ 26 ರಂದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ವಯನಾಡ್ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿ ಮೃತದೇಹ ಪತ್ತೆ ಪ್ರಕರಣ – 29 ಗಂಟೆಗಳ ಕಾಲ ನಿರಂತರ ಹಲ್ಲೆ

    ತುಂಡು ದೇಹ ವಿಲೇವಾರಿಗೆ 50 ಡಾಲರ್‌ ಕೊಟ್ಟಿದ್ದ:
    ತನ್ನ ಹೆಂಡತಿಯನ್ನ ಕ್ರೂರವಾಗಿ ಹತ್ಯೆಗೈದಿದ್ದ ಮೆಟ್ಸನ್‌, ಬಳಿಕ ಸ್ನಾನದ ಕೋಣೆಯಲ್ಲಿ ಆಕೆಯ ಮೃತದೇಹವನ್ನ 200 ತುಂಡುಗಳಾಗಿ ಕತ್ತರಿಸಿ, ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಟ್ಟಿದ್ದ. ದೇಹ ದುರ್ವಾಸನೆ ಬೀರದಂತೆ ನೋಡಿಕೊಳ್ಳಲು ತಂಪಾದ ಪ್ರದೇಶದಲ್ಲಿ ಇಟ್ಟಿದ್ದ, ಜೊತೆಗೆ ರೂಮ್‌ ಸ್ಪ್ರೇ ಸಿಂಪಡಣೆ ಮಾಡುತ್ತಿದ್ದ. ಮೃತ ಮಹಿಳೆಯ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಒಂದು ವಾರದ ಬಳಿಕ ವಿಚಾರಣೆಗಾಗಿ ಹಂತಕನ ಮನೆಗೆ ಬಂದಿದ್ದರು. ಆದ್ರೆ ಭೂಪ ಮೆಟ್ಸನ್‌ ಅದಕ್ಕೂ ಮುನ್ನವೇ ತನ್ನ ಸ್ನೇಹಿತನಿಗೆ 50 ಡಾಲರ್‌ ಕೊಟ್ಟು ತುಂಡು ದೇಹವನ್ನ ವಿಲೇವಾರಿ ಮಾಡಿಸಿದ್ದ. ತಾನು ಪ್ರಕರಣದಲ್ಲಿ ಸಿಕ್ಕ ಬಳಿಕವೇ ಈ ಸತ್ಯವನ್ನು ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು (UK Police) ತಿಳಿಸಿದ್ದಾರೆ. ಇದನ್ನೂ ಓದಿ: ಹದಿಹರೆಯದ ಹುಡುಗರೇ ಇವಳ ಟಾರ್ಗೆಟ್‌ – ಸೆಕ್ಸ್‌ಗಾಗಿ 14 ವರ್ಷದ ಹುಡುಗಿಯಂತೆ ನಟಿಸಿದ್ದ ಮಾಯಗಾತಿ ಅರೆಸ್ಟ್‌!

    ನದಿಯಲ್ಲಿ ತುಂಡು ದೇಹ ಸಿಕ್ಕಿದ್ದು ಹೇಗೆ?
    ತನ್ನ ಸ್ನೇಹಿತ ಸಹಾಯದಿಂದ ಮೆಟ್ಸನ್‌ ಮೃತ ಹೆಂಡತಿಯ ತುಂಡು ದೇಹವನ್ನು ನದಿಯಲ್ಲಿ ಬಿಸಾಡಿದ ಮರುದಿನ ಬೆಳಗ್ಗೆ ಅಲ್ಲೇ ವಾಕಿಂಗ್‌ ಮಾಡುತ್ತಿದ್ದ ಸ್ಥಳೀಯರು ತೇಲುತ್ತಿದ್ದ ಪ್ಲಾಸ್ಟಿಕ್‌ ಚೀಲವೊಂದನ್ನು ಗಮನಿಸಿದರು. ಅನುಮಾನಗೊಂಡು, ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಬಳಿಕ ಚೀಲವನ್ನು ತೆಗೆದು ನೋಡಿದಾಗ ಅದರಲ್ಲಿ ಮಹಿಳೆಯ ಕೈ-ಕಾಲುಗಳು, ತಲೆ, ದೇಹದ ಇತರ ತುಂಡಾಗಿರುವ 200ಕ್ಕೂ ಹೆಚ್ಚು ಬಿಡಿ ಭಾಗಗಳು ಕಂಡುಬಂದಿತು. ಪೊಲೀಸರಿಗೆ ಮೃಹ ದೇಹ ಯಾರದ್ದು ಅಂತಾ ಗುರುತಿಸೋದಕ್ಕೆ ಕೆಲ ದಿನಗಳು ಬೇಕಾಯಿತು. ಕಳೆದ ಮಾರ್ಚ್‌ 24 ರಂದು ಲಿಂಕನ್‌ಶೈರ್ ಪೊಲೀಸರು ಬ್ರಾಮ್ಲಿ ಅವರ ನಿವಾಸಕ್ಕೆ ವಿಚಾರಣೆಗೆ ತೆರಳಿದ್ದರು. ಈ ವೇಳೆ ಮೆಟ್ಸನ್‌ ಮಾತುಗಳಿಂದ ಅನುಮಾನಗೊಂಡ ಪೊಲೀಸರು ಆತನನ್ನ ವಶಕ್ಕೆ ಪಡೆದು ತನಿಖೆ ನಡೆಸಿದಾಗ ತಾನೇ ಕೊಂದಿರುವುದಾಗಿ ಸತ್ಯ ಒಪ್ಪಿಕೊಂಡನು. ಬಳಿಕ ಆತನನ್ನ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಗಂಡ-ಹೆಂಡತಿ ನಡುವೆ ಕೌಟುಂಬಿಕ ಕಲಹ ನಡೆದಿತ್ತು ಎಂಬ ವಿಚಾರವನ್ನು ಮೆಟ್ಸನ್‌ ನ್ಯಾಯಾಲಯಕ್ಕೆ ತಿಳಿಸಿದ್ದನು.

    ಹಂತಕನಿಗೆ ಮಾನಸಿಕ ಕಾಯಿಲೆ ಇರೋದು ನಿಜವೇ?
    ಸದ್ಯ ಆರೋಪಿ ಮತ್ತು ವಕೀಲರ ವಾದ-ಪ್ರತಿವಾದಗಳನ್ನು ಆಲಿಸಿದ ಕೋರ್ಟ್‌ ಮೆಟ್ಸನ್‌ನನ್ನ ಅಪರಾಧಿ ಎಂದು ಪರಿಗಣಿಸಿದೆ. ಈ ನಡುವೆ ಹಂತಕನ ಪರ ವಕೀಲರು ಮೆಟ್ಸನ್‌ ಆಟಿಸಂ ಸ್ಪೆಕ್ಟ್ರಮ್ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ಮಾನಸಿಕವಾಗಿ ಒತ್ತಡ ಉಂಟಾಗಿದ್ದರಿಂದ ಅವನು ಹಾಗೆ ಮಾಡಿರಬಹುದು ಎಂದು ವಾದಿಸಿದ್ದಾರೆ.‌ ಈ ಹಿನ್ನೆಲೆಯಲ್ಲಿ ಕೋರ್ಟ್‌ ಮೆಟ್ಸನ್‌ಗೆ ಶಿಕ್ಷೆಯನ್ನು ಕಾಯ್ದಿರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜನರ ಸಮಸ್ಯೆ ಏನೇ ಇದ್ರೂ ಸಹಾಯಕ್ಕೆ ಬರೋದು ನಾವೇ, ದೆಹಲಿಯಿಂದ ಯಾರೂ ಬರಲ್ಲ: ಡಿಕೆಶಿ

  • ಹಡಗು ಡಿಕ್ಕಿಯಾಗಿ ಕುಸಿದ ಸೇತುವೆ- ಬಸ್‌ ನದಿಗೆ ಉರುಳಿ ಇಬ್ಬರ ದುರ್ಮರಣ

    ಹಡಗು ಡಿಕ್ಕಿಯಾಗಿ ಕುಸಿದ ಸೇತುವೆ- ಬಸ್‌ ನದಿಗೆ ಉರುಳಿ ಇಬ್ಬರ ದುರ್ಮರಣ

    ಬೀಜಿಂಗ್:‌ ಕಂಟೈನರ್ ಹಡಗೊಂದು (Container Ship) ಡಿಕ್ಕಿ ಹೊಡೆದ ಪರಿಣಾಮ ಸೇತುವೆಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಇಬ್ಬರು ದುರ್ಮರಣಕ್ಕೀಡಾದ ಘಟನೆ ನಡೆದಿದೆ.

    ಈ ಘಟನೆಯು ಚೀನಾದ (China) ಹಾಂಗ್ ಕಾಂಗ್‌ನ ವಾಯುವ್ಯಕ್ಕೆ ಸುಮಾರು 90 ಕಿಲೋಮೀಟರ್ ದೂರದಲ್ಲಿರುವ ಗುವಾಂಗ್‌ಝೌದಲ್ಲಿ ಸಂಭವಿಸಿದೆ. ಮುಂಜಾನೆ ಗುವಾಂಗ್‌ಝೌವಿನ ನನ್ಶಾ ಜಿಲ್ಲೆಯ ಲಿಕ್ಸಿನ್ಶಾ ಸೇತುವೆಗೆ ಖಾಲಿ ಕಂಟೈನರ್ ಹಡಗು ಡಿಕ್ಕಿ ಹೊಡೆದು ಸೇತುವೆಯ ಒಂದು ಭಾಗ ಕುಸಿದಿದೆ ಎಂದು ಹೇಳಲಾಗುತ್ತಿದೆ.

    ಘಟನೆಯ ವೇಳೆ ಇದೇ ಸೇತುವೆ ಮೇಲೆ ಬಸ್ಸೊಂದು ಚಲಿಸುತ್ತಿದ್ದು, ನದಿಗೆ ಉರುಳಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿ, ಮೂವರು ನಾಪತ್ತೆಯಾಗಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಜೊತೆಗೆ ಅವಘಡದಿಂದಾಗಿ ಐದು ವಾಹನಗಳಿಗೂ ಹಾನಿಯಾಗಿದೆ. ಇದನ್ನೂ ಓದಿ: ಮಾ.22 ರಿಂದ IPL ಶುರು; ಉದ್ಘಾಟನಾ ಪಂದ್ಯದಲ್ಲೇ ಚೆನ್ನೈ-ಆರ್‌ಸಿಬಿ ನಡುವೆ ಹೈವೋಲ್ಟೇಜ್‌ ಕದನ!

    ಬೀಜಿಂಗ್ ಮಾಧ್ಯಮಗಳ ಪ್ರಕಾರ, ಅವಘಡಕ್ಕೆ ಸಂಬಂಧಿಸಿದಂತೆ ಹಡಗಿನ ಕ್ಯಾಪ್ಟನ್‌ ನನ್ನು ಬಂಧಿಸಲಾಗಿದೆ. ಅಪಘಾತದ ಕಾರಣ ಮತ್ತು ಸಾವು- ನೋವುಗಳ ಸಂಖ್ಯೆ ಪ್ರಸ್ತುತ ತನಿಖೆಯಲ್ಲಿದೆ. ಕಂಟೈನರ್‌ ಸೇತುವೆಗೆ ಡಿಕ್ಕಿಯಾದ ಸಮಯದಲ್ಲಿ ಬಸ್ ಸೇತುವೆಯ ಮೇಲೆ ಹಾದು ಹೋಗುತ್ತಿದ್ದು, ನದಿಗೆ ಬಿದ್ದಿದೆ. ಹಡಗಿನಲ್ಲಿ ಎಷ್ಟು ಮಂದಿ ಇದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ತಂಡಗಳು ಕಾರ್ಯನಿರ್ವಹಿಸುತ್ತಿವೆ.

    ಸಂಚಾರ ಸ್ಥಗಿತ: ರಕ್ಷಣಾ ತಂಡಗಳು ಘಟನಾ ಸ್ಥಳದಲ್ಲಿವೆ. ಆದರೆ ಇತರ ಸಾವು-ನೋವುಗಳ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ. ಘಟನೆಯ ನಂತರ ಸೇತುವೆಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ನಿವಾಸಿಗಳಿಗೆ ಪ್ರಯಾಣಿಸಲು ದೋಣಿ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಾಗಿದೆ.