Tag: ನತಾಶಾ ಸ್ಟಾಂಕೋವಿಕ್

  • Divorce Rumours: ಪತ್ನಿ ನತಾಶಾಗೆ ವಿಚ್ಛೇದನ ನೀಡಿದ್ರೆ 70% ಕರಗಲಿದೆ ಪಾಂಡ್ಯ ಸಂಪತ್ತು!

    Divorce Rumours: ಪತ್ನಿ ನತಾಶಾಗೆ ವಿಚ್ಛೇದನ ನೀಡಿದ್ರೆ 70% ಕರಗಲಿದೆ ಪಾಂಡ್ಯ ಸಂಪತ್ತು!

    ಮುಂಬೈ: 2024ರ ಐಪಿಎಲ್‌ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಅವರು ಇಡೀ ತಂಡದ ಕಳಪೆ ಪ್ರದರ್ಶನದಿಂದ ಸೋಲಿನೊಂದಿಗೆ ಆವೃತ್ತಿಗೆ ವಿದಾಯ ಹೇಳಿದ್ದರು. ಇದೀಗ ವೈಯಕ್ತಿಕ ಜೀವನದಲ್ಲಿ ಬಿರುಗಾಳಿಯೇ ಎದ್ದಿದೆ. ಹಾರ್ದಿಕ್‌ ಪಾಂಡ್ಯ ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್‌ಗೆ ವಿಚ್ಛೇದನ ನೀಡುವುದು ಬಹುತೇಕ ಖಚಿತವಾಗಿದೆ. ಅಧಿಕೃತ ಘೊಷಣೆಯೊಂದೇ ಬಾಕಿಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾರ್ದಿಕ್‌ ಪಾಂಡ್ಯ ಅವರು ಪತ್ನಿಗೆ ವಿಚ್ಛೇದನ (Divorce) ನೀಡಿದ್ದೇ ಆದಲ್ಲಿ ಅವರ 70% ಆಸ್ತಿ ಪತ್ನಿ ನತಾಶಾಗೆ ಸೇರಲಿದೆ ಎಂದು ವರದಿಯಾಗಿದೆ.

    ಪಾಂಡ್ಯ ಮತ್ತು ನತಾಶಾ ದೀರ್ಘಕಾಲದಿಂದ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇಬ್ಬರೂ ಕೊನೆಯದ್ದಾಗಿ ಫೆ.14ರಂದು ಇನ್‌ಸ್ಟಾದಲ್ಲಿ ಫೋಟೋವೊಂದನ್ನ ಹಂಚಿಕೊಂಡಿದ್ದರು. ಇದಾದ ನಂತರ ಇಬ್ಬರೂ ಅಂತರ ಕಾಯ್ದುಕೊಂಡಿದ್ದರು. ಕಳೆದ ಮಾರ್ಚ್‌ 4 ರಂದು ನತಾಶಾ ಅವರ ಹುಟ್ಟುಹಬ್ಬದ ದಿನವೂ ಪಾಂಡ್ಯ ಒಂದು ಸ್ಟೇಟಸ್‌ ಸಹ ಹಂಚಿಕೊಂಡಿರಲಿಲ್ಲ. ಜೊತೆಗೆ ಪಾಂಡ್ಯ ಅವರ ನಾಯಕತ್ವದಲ್ಲಿ ನಡೆದ ಯಾವುದೇ ಪಂದ್ಯ ನೋಡುವುದಕ್ಕೂ ನತಾಶಾ (Natasa Stankovic) ಸ್ಟೇಡಿಯಂಗಳಿಗೆ ಬರಲಿಲ್ಲ. ಸರ್ಬಿಯಾದ ಮಾಡೆಲ್‌ ಸಹ ಆಗಿದ್ದ ಸ್ಟಾಂಕೋವಿಕ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ʻಪಾಂಡ್ಯʼ ಉಮನಾಮ ತೆಗೆದುಹಾಕಿ ನತಾಶಾ ಸ್ಟಾಂಕೋವಿಕ್ ಎಂದು ಬದಲಾಯಿಸಿಕೊಂಡಿದ್ದಾರೆ. ಹೀಗಾಗಿ ಇವರಿಬ್ಬರ ವಿಚ್ಛೇದನ ಖಚಿತವಾಗಿದೆ ಎಂಬ ವದಂತಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

    70% ಆಸ್ತಿ ನತಾಶಾ ಪಾಲು:
    ವದಂತಿಗಳ ಪ್ರಕಾರ ಪಾಂಡ್ಯ ಅವರು ಪತ್ನಿಯಿಂದ ವಿಚ್ಛೇದನ ಪಡೆದರೆ ಜೀವನಾಂಶ ಕಾರಣದಿಂದ 70% ಆಸ್ತಿಯನ್ನು ನತಾಶಾಗೆ ನೀಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಹಾರ್ದಿಕ್‌ ಪಾಂಡ್ಯ ಒಟ್ಟಾರೆ 165 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಮುಂಬೈನಲ್ಲಿ 30 ಕೋಟಿ ರೂ.ಗೆ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಇದರೊಂದಿಗೆ ಅವರು ವಡೋದರಾದಲ್ಲಿ ದುಬಾರಿ ಬೆಲೆಯ ವಿಲ್ಲಾ ಹೊಂದಿದ್ದಾರೆ. ವಿಚ್ಛೇದನ ಪಡೆದರೆ ಅವರು 70% ಆಸ್ತಿಯನ್ನು (70% Property) ಪತ್ನಿಗೆ ಬಿಟ್ಟುಕೊಡಬೇಕಾಗುತ್ತದೆ ಎಂದು ಹೇಳಲಾಗಿದೆ. ಆದ್ರೆ ಈ ಬಗ್ಗೆ ಹಾರ್ದಿಕ್ ಅಥವಾ ಅವರ ಪತ್ನಿ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

    ಸೋಷಿಯಲ್‌ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ:
    ಹಾರ್ದಿಕ್‌ ಪಾಂಡ್ಯ ಅವರ ವಿಚ್ಛೇದಿತ ವಿಷಯ ಬೆಳಕಿಗೆ ಬರುತ್ತಿದ್ದಂತೆ ಎಕ್ಸ್‌ ಜಾಲತಾಣದಲ್ಲಿ ಪರ ವಿರೋಧಗಳು ಚರ್ಚೆಯಾಗುತ್ತಿವೆ. ಕೆಲವರು ಹಾರ್ದಿಕ್‌ ಪಾಂಡ್ಯ ಪರ ಬ್ಯಾಟ್‌ ಬೀಸಿದ್ದು, ಪುರುಷರಿಗಾಗಿ ನಮ್ಮ ಸಮಾಜದ ನಿಯಮಗಳು ಯಾವಾಗಲೂ ಕಠಿಣವಾಗಿರುತ್ತವೆ ಎಂದು ಹೇಳಿದ್ದಾರೆ. ಮತ್ತೊಬ್ಬರು ʻಹಾರ್ದಿಕ್‌ ಬ್ರೋ ನೀವು ಈಗಲೇ ಎಲ್ಲಾ ಆಸ್ತಿಯನ್ನು ನಿಮ್ಮ ತಾಯಿ ಹೆಸರಿಗೆ ವರ್ಗಾವಣೆ ಮಾಡಿಬಿಡಿʼ ಎಂಬ ಸಲಹೆಯನ್ನೂ ನೀಡಿದ್ದಾರೆ.

    ಹಾರ್ದಿಕ್ ಪಾಂಡ್ಯ ಅವರು 2020ರ ಜನವರಿ 20 ರಂದು ತಮ್ಮ ವಿಹಾರ ನೌಕೆಯಲ್ಲಿ ನತಾಶಾಗೆ ಪ್ರಪೋಸ್‌ ಮಾಡಿದ್ದರು. ಮೊದಲ ಮಗುವಿನ ನಂತರ ಪ್ರೇಮಿಗಳ ದಿನದಂದು ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  • ಮಗುವಾದ ನಂತರ ಅದ್ಧೂರಿ ಮದುವೆ ಆಗುತ್ತಿದ್ದಾರೆ ಕ್ರಿಕೆಟ್ ಹಾರ್ದಿಕ್ ಪಾಂಡ್ಯ

    ಮಗುವಾದ ನಂತರ ಅದ್ಧೂರಿ ಮದುವೆ ಆಗುತ್ತಿದ್ದಾರೆ ಕ್ರಿಕೆಟ್ ಹಾರ್ದಿಕ್ ಪಾಂಡ್ಯ

    ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಫೆ.14ರಂದು ಉದಯ್ ಪುರದಲ್ಲಿ ಅದ್ಧೂರಿಯಾಗಿ ಮದುವೆ ಆಗುತ್ತಿದ್ದಾರೆ. ಇಂದಿನಿಂದ ಮದುವೆ ಕಾರ್ಯಕ್ರಮಗಳು ಆರಂಭವಾಗಲಿವೆ ಎಂದು ವರದಿಯಾಗಿದೆ. ಈಗಾಗಲೇ ಅವರು ನತಾಶಾ ಸ್ಟಾಂಕೋವಿಕ್ ರನ್ನು ಮದುವೆಯಾಗಿದ್ದು, ಈ ದಂಪತಿಗೆ ಒಂದು ಮಗು ಕೂಡ ಇದೆ. ಹಾಗಾದರೆ, ನತಾಶಾಗೆ ಹಾರ್ದಿಕ್ ಡಿವೋರ್ಸ್ ಕೊಟ್ಟು ಮತ್ತೊಂದು ಮದುವೆ ಆಗುತ್ತಿದ್ದಾರೆ ಎನಿಸಿದರೆ, ಅದು ತಪ್ಪು.

    ಹಾರ್ದಿಕ್ ಪಾಂಡೆ ಮತ್ತು ನತಾಶಾ ಸ್ಟಾಂಕೋವಿಕ್ ಮೂರು ವರ್ಷಗಳ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2020ರ ಮೇ 31ರಂದು ಅವರು ವಿವಾಹ ಕೂಡ ಆಗಿದ್ದರು. ಈ ದಂಪತಿಯ ಮಗುವಿಗೆ ಜುಲೈಗೆ ಮೂರು ವರ್ಷ ತುಂಬುತ್ತಿದೆ. ಆದರೆ, ಇದೀಗ ಅವರಿಗೆ ಅದ್ಧೂರಿಯಾಗಿ ಮದುವೆ ಆಗಬೇಕು ಅನಿಸಿದೆಯಂತೆ. ಹಾಗಾಗಿ ಅದೇ ನತಾಶಾ ಜೊತೆ ಫೆ.14ರಂದು ಅವರು ಎಲ್ಲರ ಸಮ್ಮುಖದಲ್ಲಿ ಮತ್ತೊಂದು ಬಾರಿ ಮದುವೆ ಆಗುತ್ತಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಗಟ್ಟಿಮೇಳ’ ನಟಿ ಪ್ರಿಯಾ- ಸಿದ್ದು ಮೂಲಿಮನಿ

    ರೆಜಿಸ್ಟರ್ ಮದುವೆ ಸಂದರ್ಭದಲ್ಲಿ ಕೋವಿಡ್. ಹಾಗಾಗಿ ಆಪ್ತರಿಗಷ್ಟೇ ಮದುವೆಗೆ ಆಹ್ವಾನಿಸಿದ್ದರು. ಇದೀಗ ಎಲ್ಲರ ಸಮ್ಮುಖದಲ್ಲಿ ಅವರು ಸತಿಪತಿಗಳಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಇಂದಿನಿಂದ ಫೆ.16ರವರೆಗೂ ಹಾರ್ದಿಕ್ ಮದುವೆ ಕಾರ್ಯಕ್ರಮಗಳು ಜರುಗಲಿವೆ ಎಂದು ಅವರ ಆಪ್ತರು ತಿಳಿಸಿದ್ದಾರೆ. ಕ್ರಿಕೆಟ್ ತಂಡದ ಬಹುತೇಕ ಸದಸ್ಯರು ಹಾಗೂ ಈ ದಂಪತಿಯ ಸ್ನೇಹಿತರು ಮತ್ತು ಆಪ್ತರು ಮದುವೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

    ಹಾರ್ದಿಕ್ ಮದುವೆ ಸಮಾರಂಭವನ್ನು ಇದೊಂದು ವಿಶೇಷ ಕಾರ್ಯಕ್ರಮ ಎಂದೇ ಬಣ್ಣಿಸಲಾಗುತ್ತಿದೆ. ಮದುವೆ ಮತ್ತು ಮಗುವಾಗಿ ಈ ರೀತಿಯಲ್ಲಿ ಮದುವೆ ಆಗುತ್ತಿರುವ ಮೊದಲ ಕ್ರಿಕೆಟಿಗೆ ಎನ್ನುವ ಹೆಗ್ಗಳಿಕೆಯೂ ಇವರದ್ದು. ಇದೊಂದು ಮದುವೆನಾ? ಅಥವಾ ವಿವಾಹ ವಾರ್ಷಿಕೋತ್ಸವನಾ ಎಂದು ಕೆಲವರು ಇದನ್ನು ವಿಶ್ಲೇಷಣೆ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗಂಡು ಮಗುವಿನ ತಂದೆಯಾದ ಖುಷಿಯಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ

    ಗಂಡು ಮಗುವಿನ ತಂದೆಯಾದ ಖುಷಿಯಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ

    ಮುಂಬೈ: ಟೀ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಬಿಗ್ ಬಾಸ್‍ನ ಮಾಜಿ ಸ್ಪರ್ಧಿ ಹಾಗೂ ಡಾನ್ಸರ್ ನತಾಶಾ ಸ್ಟಾಂಕೋವಿಕ್ ದಂಪತಿಗೆ ಗಂಡು ಮಗುವಿನ ಜನನವಾಗಿದೆ.

    ತಾನು ಗಂಡು ಮಗುವಿನ ತಂದೆಯಾದ ಖುಷಿಯನ್ನು ಪಾಂಡ್ಯ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನಮಗೆ ಗಂಡು ಮಗುವಿನ ಆಗಮನವಾಗಿದೆ ಎಂದು ಬರೆದುಕೊಂಡಿದ್ದಾರೆ. ಪಾಂಡ್ಯ ತನ್ನ ಮಗುವಿನ ಕೈ ಹಿಡಿದುಕೊಂಡಿದ್ದು, ಪುತ್ರನ ಮುಖ ಕಾಣದಂತೆ ಫೋಟೋ ತೆಗೆಯಲಾಗಿದೆ.

    https://www.instagram.com/p/CDQx8yCF-SX/?utm_source=ig_embed

    ಈ ಹಿಂದೆ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ನತಾಶಾರೊಂದಿಗೆ ಪಾಂಡ್ಯ ಸಮಯ ಕಳೆಯುತ್ತಿದ್ದರು. ನತಾಶಾ ಗರ್ಭಿಣಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಆಗಾಗ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ನತಾಶಾ ಅವರು ವ್ಯಾಯಾಮ ಮಾಡುತ್ತಿರುವ ಫೋಟೋಗಳನ್ನು ಕೂಡ ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಹೀಗೆ ಇಬ್ಬರು ಸಂತೋಷದಿಂದ ಕಾಲಕಳೆಯುತ್ತಿದ್ದರು.

    https://www.instagram.com/p/CCyd9UFA3I9/?utm_source=ig_embed

    ಮೇ 31 ರಂದು ಸೋಶಿಯಲ್ ಮೀಡಿಯಾದ ಮೂಲಕ ಹಾರ್ದಿಕ್ ಪಾಂಡ್ಯ ತಾವು ತಂದೆಯಾಗುತ್ತಿರುವ ಬಗ್ಗೆ ರಿವೀಲ್ ಮಾಡಿದ್ದರು. ಈ ಕುರಿತು ಇನ್‍ಸ್ಟಾದಲ್ಲಿ ಗೆಳತಿ ನತಾಶಾರೊಂದಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದ ಪಾಂಡ್ಯ, “ನತಾಶಾ ಮತ್ತು ನಾನು ಒಟ್ಟಿಗೆ ಉತ್ತಮ ಪ್ರಯಾಣವನ್ನು ಹೊಂದಿದ್ದೇವೆ. ಈ ಬಾಂಧವ್ಯ ಮತ್ತಷ್ಟು ಉತ್ತಮಗೊಳ್ಳುವತ್ತ ಹೊರಟಿದ್ದು, ಶೀಘ್ರವೇ ನಮ್ಮ ಜೀವನಕ್ಕೆ ಹೊಸ ಜೀವವನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆ. ನಮ್ಮ ಜೀವನದ ಈ ಹೊಸ ಹಂತಕ್ಕಾಗಿ ರೋಮಾಂಚನಗೊಂಡಿದ್ದು, ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳನ್ನು ಕೋರುತ್ತೇವೆ” ಎಂದು ಬರೆದುಕೊಂಡಿದ್ದರು.

    https://www.instagram.com/p/CCu87_blItL/?utm_source=ig_embed

    ಬಹು ಸಮಯದಿಂದ ಒಟ್ಟಿಗೆ ಓಡಾಡುತ್ತಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಸರ್ಬಿಯನ್ ಮಾಡೆಲ್, ನಟಿ ನತಾಶಾ ಸ್ಟಾಂಕೋವಿಕ್ ಹೊಸ ವರ್ಷದ ಮೊದಲ ದಿನ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಕುರಿತ ವಿಡಿಯೋ ಹಾಗೂ ಫೋಟೋವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರು.

  • ಮದುವೆಗೂ ಮುನ್ನವೇ ಅಪ್ಪ ಆಗ್ತಿದ್ದಾರೆ ಹಾರ್ದಿಕ್ ಪಾಂಡ್ಯ!

    ಮದುವೆಗೂ ಮುನ್ನವೇ ಅಪ್ಪ ಆಗ್ತಿದ್ದಾರೆ ಹಾರ್ದಿಕ್ ಪಾಂಡ್ಯ!

    ಮುಂಬೈ: ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ತಂದೆಯಾಗುತ್ತಿರುವ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಶೀಘ್ರವೇ ಹೊಸ ಜೀವವನ್ನು ಸ್ವಾಗತಿಸಲು ಉತ್ಸುಕರಾಗಿದ್ದಾಗಿ ತಿಳಿಸಿದ್ದಾರೆ.

    ಈ ಕುರಿತು ಇನ್‍ಸ್ಟಾದಲ್ಲಿ ಗೆಳತಿ ನತಾಶಾರೊಂದಿಗೆ ಇರೋ ಫೋಟೋವನ್ನು ಪೋಸ್ಟ್ ಮಾಡಿರುವ ಹಾರ್ದಿಕ್ ಪಾಂಡ್ಯ, ನತಾಶಾ ಮತ್ತು ನಾನು ಒಟ್ಟಿಗೆ ಉತ್ತಮ ಪ್ರಯಾಣವನ್ನು ಹೊಂದಿದ್ದೇವೆ. ಈ ಬಾಂದವ್ಯ ಮತ್ತಷ್ಟು ಉತ್ತಮಗೊಳ್ಳುವತ್ತ ಹೊರಟಿದ್ದು, ಶೀಘ್ರವೇ ನಮ್ಮ ಜೀವನಕ್ಕೆ ಹೊಸ ಜೀವವನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆ. ನಮ್ಮ ಜೀವನದ ಈ ಹೊಸ ಹಂತಕ್ಕಾಗಿ ರೋಮಾಂಚನಗೊಂಡಿದ್ದು, ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳನ್ನು ಕೋರುತ್ತೇವೆ ಎಂದು ಬರೆದುಕೊಂಡಿದ್ದಾರೆ.

    ಬಹು ಸಮಯದಿಂದ ಒಟ್ಟಿಗೆ ಓಡಾಡುತ್ತಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಸರ್ಬಿಯನ್ ಮಾಡೆಲ್, ನಟಿ ನತಾಶಾ ಸ್ಟಾಂಕೋವಿಕ್ ಹೊಸ ವರ್ಷದ ಮೊದಲ ದಿನ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಕುರಿತ ವಿಡಿಯೋ ಹಾಗೂ ಫೋಟೋವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರು.

    ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ತಂಡಕ್ಕೆ ಕಮ್‍ಬ್ಯಾಕ್ ಮಾಡಿದ್ದರು. ಆದರೆ ಕೊರೊನಾದಿಂದಾಗಿ ಸರಣಿಯನ್ನು ಮುಂದೂಡಲಾಯಿತು. ಆದರೆ ಮುಂಬರುವ ದಿನಗಳಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸ್ಥಾನ ಭದ್ರಪಡಿಸಿಕೊಳ್ಳಲಿದ್ದಾರೆ. ಅಲ್ಲದೇ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸವನ್ನು ಹೊಂದಿದ್ದರು. ಆದರೆ ಕೊರೊನಾ ಕಾರಣದಿಂದ ಐಪಿಎಲ್ ಮುಂದೂಡಲಾಗಿತ್ತು.

     

    View this post on Instagram

     

    Mai tera, Tu meri jaane, saara Hindustan. ???????? 01.01.2020 ❤️ #engaged

    A post shared by Hardik Pandya (@hardikpandya93) on

  • 2020ಕ್ಕೆ ಗೆಳತಿಯನ್ನು ಪರಿಚಯಿಸಿದ ಹಾರ್ದಿಕ್ ಪಾಂಡ್ಯ

    2020ಕ್ಕೆ ಗೆಳತಿಯನ್ನು ಪರಿಚಯಿಸಿದ ಹಾರ್ದಿಕ್ ಪಾಂಡ್ಯ

    ನವದೆಹಲಿ: ಸರ್ಬಿಯನ್ ಮಾಡೆಲ್, ನಟಿ ನತಾಶಾ ಸ್ಟಾಂಕೋವಿಕ್‍ರೊಂದಿಗೆ ಹಲವು ದಿನಗಳಿಂದ ಡೇಟಿಂಗ್ ನಡೆಸಿದ್ದ ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ, ತಮ್ಮ ಬಹುದಿನಗಳ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿದ್ದಾರೆ.

    ಹೊಸ ವರ್ಷದ ಸಂಭ್ರಮದಲ್ಲಿರುವ ವೇಳೆಯೇ ಈ ಕುರಿತು ಸ್ಪಷ್ಟನೆ ನೀಡಿರುವ ಹಾರ್ದಿಕ್, ತಮ್ಮ ಇನ್‍ಸ್ಟಾದಲ್ಲಿ ನತಾಶಾ ಸ್ಟಾಂಕೋವಿಕ್‍ರೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡು ಸ್ಪಷ್ಟನೆ ನೀಡಿದ್ದಾರೆ. ಈ ಬಾರಿಯ ಹೊಸ ವರ್ಷವನ್ನು ತಮ್ಮ ‘ಫೈರ್ ವರ್ಕ್’ನೊಂದಿಗೆ ಆರಂಭಿಸುತ್ತಿರುವುದಾಗಿ ಹೇಳಿದ್ದಾರೆ.

     

    View this post on Instagram

     

    Starting the year with my firework ❣️

    A post shared by Hardik Pandya (@hardikpandya93) on

    ಹಲವು ದಿನಗಳ ಹಿಂದೆಯೇ ಹಾರ್ದಿಕ್ ಪಾಂಡ್ಯ, ನತಾಶಾ ಜೋಡಿ ಮದುವೆಯಾಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಎಲ್ಲಾ ಸುದ್ದಿಗಳಿಗೂ ಹಾರ್ದಿಕ್ ಫುಲ್ ಸ್ಟಾಪ್ ಹಾಕಿದ್ದಾರೆ. ಹಾರ್ದಿಕ್‍ರ ಈ ಪೋಸ್ಟ್ ಗೆ ಅವರ ಕುಟುಂಬ ಸದಸ್ಯರು ಸೇರಿದಂತೆ ಟೀಂ ಇಂಡಿಯಾದ ಹಲವು ಕ್ರಿಕೆಟ್ ಆಟಗಾರರು ಲೈಕ್ ಮಾಡಿ ಕಾಮೆಂಟ್ ಮಾಡಿದ್ದಾರೆ.

    ಹಾರ್ದಿಕ್‍ರ ಈ ಆಪ್‍ಡೇಡ್ ನಿಂದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಕಾಮೆಂಟ್ ಮಾಡಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅಂದಹಾಗೆ, ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾ ತಂಡದಿಂದ ಹೊರಗುಳಿದಿದ್ದು, ಕಮ್ ಬ್ಯಾಕ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಬಳುತ್ತಿದ್ದ ಹಾರ್ದಿಕ್ 2019ರಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಟೆಸ್ಟ್, ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆದಿದ್ದ ಟೂರ್ನಿಗಳಿಗೆ ಅಲಭ್ಯರಾಗಿದ್ದರು.

    2016ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ಹಾರ್ದಿಕ್ ಪಾಂಡ್ಯ ತಮ್ಮ ಆಲ್‍ರೌಂಡ್ ಪ್ರದರ್ಶನದಿಂದ ತಂಡದಲ್ಲಿ ಸ್ಥಾನ ಪಡೆದಿದ್ದರು. 2019ರ ವಿಶ್ವಕಪ್ ಟೂರ್ನಿಯ ತಂಡದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

  • ಸರ್ಬಿಯಾ ಮಾಡೆಲ್‍ನೊಂದಿಗೆ ಹಾರ್ದಿಕ್ ಪಾಂಡ್ಯ ಮದ್ವೆ!

    ಸರ್ಬಿಯಾ ಮಾಡೆಲ್‍ನೊಂದಿಗೆ ಹಾರ್ದಿಕ್ ಪಾಂಡ್ಯ ಮದ್ವೆ!

    ನವದೆಹಲಿ: ಈಗಾಗಲೇ ಹಲವು ಬಾಲಿವುಡ್ ನಟಿಯರೊಂದಿಗೆ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಡೇಟಿಂಗ್ ನಡೆಸಿರುವ ಸುದ್ದಿಗಳು ಸಾಕಷ್ಟು ಕೇಳಿ ಬಂದಿದ್ದು, ಆದರೆ ಸದ್ಯ ಹಾರ್ದಿಕ್ ಸರ್ಬಿಯನ್ ಮಾಡೆಲ್, ನಟಿ ನತಾಶಾ ಸ್ಟಾಂಕೋವಿಕ್ ಮದುವೆಯಾಗಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಈ ಹಿಂದೆಯೇ ನತಾಶಾರೊಂದಿಗೆ ಹಾರ್ದಿಕ್ ಪಾಂಡ್ಯ ಡೇಟಿಂಗ್ ನಡೆಸುತ್ತಿದ್ದರೆ ಎಂಬ ಸುದ್ದಿ ಕೇಳಿ ಬಂದಿತ್ತು. ಅಲ್ಲದೇ ಹಾರ್ದಿಕ್ ತಮ್ಮ ಪೋಷಕರಿಗೆ ನತಾಶಾರನ್ನು ಭೇಟಿ ಮಾಡಿಸಿ ಪರಿಚಯ ಕೂಡ ಮಾಡಿಸಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಇಬ್ಬರು ಯಾವುದೇ ಸ್ಪಷ್ಟನೆಯನ್ನು ನೀಡಿರಲಿಲ್ಲ. ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://www.instagram.com/p/B4W00BRh5ks/?utm_source=ig_embed

    ಅಂದಹಾಗೇ ನತಾಶಾ ಸರ್ಬಿಯಾ ಮೂಲದ ಮಾಡೆಲ್, ಡಾನ್ಸರ್ ಆಗಿದ್ದು, ಬಾಲಿವುಡ್‍ನ ಕೆಲ ಸಿನಿಮಾಗಳಲ್ಲಿ ನಟಿಸುವುದರೊಂದಿಗೆ ಮುಂಬೈನಲ್ಲಿಯೆ ನೆಲೆಸಿದ್ದಾರೆ. ಹಿಂದಿಯ ಬಿಗ್ ಬಾಸ್ 8ನೇ ಆವೃತ್ತಿಯಲ್ಲೂ ನತಾಶಾ ಭಾಗಿಯಾಗಿದ್ದರು. ಈ ವೇಳೆ ಹಾರ್ದಿಕ್ ತಮ್ಮ ಅಭಿಮಾನಿಗಳಿಗೆ ನತಾಶಾ ಪರ ಮತ ಹಾಕುವಂತೆ ಮನವಿ ಕೂಡ ಮಾಡಿದ್ದರು. ನತಾಶಾ, ಶಾರುಖ್ ಖಾನ್‍ರ ‘ಝೀರೋ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಹಿಂದಿ ಡಾನ್ಸ್ ರಿಯಾಲಿಟಿ ಶೋವೊಂದರಲ್ಲಿ ಬ್ಯುಸಿಯಾಗಿದ್ದಾರೆ.

    https://www.instagram.com/p/B4nECKzgVXy/

    https://www.instagram.com/p/By-NR3sgamZ/