Tag: ನಟ

  • ಪ್ರಕಾಶ್ ರೈ ಎಲ್ಲಿ ಉಳಿದುಕೊಳ್ಳುತ್ತಾನೆ- ಕಾರ್ ಚಾಲಕನಿಗೆ ಧಮ್ಕಿ

    ಪ್ರಕಾಶ್ ರೈ ಎಲ್ಲಿ ಉಳಿದುಕೊಳ್ಳುತ್ತಾನೆ- ಕಾರ್ ಚಾಲಕನಿಗೆ ಧಮ್ಕಿ

    ಮಂಗಳೂರು: ನಟ ಪ್ರಕಾಶ್ ರೈ ಅವರಿಗೆ ನಗರದ ವಿಮಾನ ನಿಲ್ದಾಣದಲ್ಲಿ ನಾಲ್ವರು ಬೆದರಿಕೆ ಹಾಕಿರೋ ಘಟನೆಯೊಂದು ನಡೆದಿರುಬವ ಬಗ್ಗೆ ಬೆಳಕಿಗೆ ಬಂದಿದೆ.

    ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾರ್ ಡ್ರೈವರ್ ಬಳಿ ಬಂದ ನಾಲ್ವರು ಕೆಲ ಪ್ರಶ್ನೆಗಳನ್ನು ಹಾಕಿದ್ದಾರೆ. ಪ್ರಕಾಶ್ ರೈ ಎಲ್ಲಿ ಉಳಿದುಕೊಳ್ಳುತ್ತಾರೆ ಅಂತ ಹೇಳಿ ಕಾರ್ ಡ್ರೈವರ್ ಗೆ ಧಮ್ಕಿ ಹಾಕಿದ್ದಾರೆ. ಪೊಲೀಸರು ಬಂದ ಬಳಿಕ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದರಿಂದ ಇಲ್ಲಿ ನನಗೆ ಆತಂಕದ ವಾತಾವರಣ ನಿರ್ಮಾಣವಾಗಿದೆ ಅಂತ ರೈ ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

    ನನ್ನ ಹೇಳಿಕೆಯನ್ನು ಸದಾ ತಿರುಚಲಾಗುತ್ತದೆ. ನಾನು ರಾಜಕೀಯ ಪಕ್ಷದಿಂದ ಬೆಳೆದಿಲ್ಲ. ರಾಜಕೀಯದಲ್ಲಿ ಆತಂಕದ ವಾತಾವರಣ ಇದೆ. ನಾನು ಆಳುವ ಪಕ್ಷದ ವಿರೋಧಿಯಾಗಿದ್ದೇನೆ. ಒಬ್ಬ ಪ್ರಜೆ, ಪ್ರಜೆಯಾಗಿರೋದಕ್ಕೆ ಸಾಧ್ಯವಾಗುತ್ತಿಲ್ಲ. ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. #just asking ಅಭಿಯಾನ ನಿರಂತರವಾಗಿರುತ್ತದೆ ಅಂತ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪ್ರತಾಪ್ ಸಿಂಹ ಜೊತೆ ದ್ವೇಷವಿಲ್ಲ: ನಾನು ಯಾವುದೇ ಚುನಾವಣಾ ಪ್ರಚಾರಕ್ಕೆ ಹೋಗಲ್ಲ. ಆದ್ರೆ ಕೆಲ ಪಕ್ಷಗಳ ವಿರುದ್ಧ ಮಾತನಾಡುತ್ತೇನೆ. ಬಿಜೆಪಿ ಕೋಮುವಾದದ ಬಗ್ಗೆ ಮಾತನಾಡ್ತೇನೆ. ಬಿಜೆಪಿ ಕೋಮುವಾದ ದೇಶದ ಸಾಮರಸ್ಯ ಹಾಳು ಮಾಡುತ್ತದೆ. ಸಂಸದ ಪ್ರತಾಪ್ ಸಿಂಹ ಬಗ್ಗೆ ನನಗೆ ದ್ವೇಷ ಇಲ್ಲ. ಅವರು ಮುಖವಾಡ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸೊಂಟದ ಕೆಳಗಿನ ಭಾಷೆ ಬಳಕೆ ಮಾಡ್ತಾರೆ. ನಾನು ಒಬ್ಬ ಪ್ರಜೆಯಾಗಿ ಪ್ರತಾಪ್ ಸಿಂಹ ವಿರುದ್ಧ ಕೇಸ್ ಹಾಕಿದ್ದೇನೆ ಅಂತ ಅವರು ಹೇಳಿದ್ರು.

    ಆರೋಪಿಗಳ ಖುಲಾಸೆಗೆ ವಿಷಾದ: ಪಬ್ ದಾಳಿ ಆರೋಪಿಗಳಿಗೆ ಕೋರ್ಟ್ ಖುಲಾಸೆ ವಿಚಾರದ ಕುರಿತು ಇದೇ ವೇಳೆ ಮಾತನಾಡಿದ ಅವರು, ಕೋರ್ಟ್ ಸಾಕ್ಷ್ಯಾಧಾರ ಇಲ್ಲ ಅಂತ ಹೇಳಿದೆ. ಕಾರ್ಯಕರ್ತರು ಹೊಡೆದಿರುವ ವಿಡಿಯೋ ಕೂಡಾ ಇದೆ. ಕೋರ್ಟ್ ಆಜ್ಞೆ ಜನಸಾಮಾನ್ಯರನ್ನು ಗೊಂದಲ ಮಾಡಿದೆ. ಕೋರ್ಟ್ ಆರ್ಡರ್ ಕೊಟ್ಟಿದ್ದು ನ್ಯಾಯನಾ? ಆಡಳಿತರೂಢ ಕಾಂಗ್ರೆಸ್ ಇದರ ಬಗ್ಗೆ ಪ್ರಶ್ನೆ ಮಾಡಬಹುದಿತ್ತು. ಪ್ರಶ್ನೆ ಮಾಡಿದ್ರೆ ವಿರೋಧಿಯಾಗ್ತಿವಿ ಎಂಬ ಭಯ ಇದೆ. ಕಾಂಗ್ರೆಸ್ ರಾಜಕೀಯ ಪ್ರದರ್ಶನ ಮಾಡುತ್ತಿದೆ ಅಂದ್ರು.

  • ನಟ ಪ್ರಕಾಶ್ ರೈಗೆ 9 ರೂ. ಡಿಡಿ ಕಳುಹಿಸಿದ ಪ್ರತಾಪ್ ಸಿಂಹ ಅಭಿಮಾನಿ

    ನಟ ಪ್ರಕಾಶ್ ರೈಗೆ 9 ರೂ. ಡಿಡಿ ಕಳುಹಿಸಿದ ಪ್ರತಾಪ್ ಸಿಂಹ ಅಭಿಮಾನಿ

    ಮೈಸೂರು: ಸಂಸದ ಪ್ರತಾಪದ ಸಿಂಹ ಅಭಿಮಾನಿಯೊಬ್ಬರು ನಟ ಪ್ರಕಾಶ್ ರೈ ಗೆ 9 ರೂಪಾಯಿ ಡಿಡಿ ಕಳುಹಿಸಿದ್ದಾರೆ.

    ಪ್ರತಾಪ್ ಸಿಂಹ ವಿರುದ್ಧ ನಟ ಪ್ರಕಾಶ್ ರೈ 1 ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿರುವುದಕ್ಕೆ ಅಭಿಮಾನಿ ಸಂದೇಶ್ ಎಂಬವರು ಈ ಡಿಡಿಯನ್ನು ಕಳುಹಿಸಿದ್ದಾರೆ. ತಮಿಳು ಚಿತ್ರರಂಗದ ನಿರ್ಮಾಪಕರ ಸಂಘದ ಉಪಾಧ್ಯಕ್ಷರ ಕಚೇರಿ ವಿಳಾಸಕ್ಕೆ ಡಿಡಿ ಕಳುಹಿಸಲಾಗಿದೆ. ಪ್ರಕಾಶ್ ರೈ ತಮಿಳು ಚಿತ್ರರಂಗದ ನಿರ್ಮಾಪಕರ ಸಂಘದ ಉಪಾಧ್ಯಕ್ಷ ಆಗಿರೋ ಕಾರಣ ಈ ವಿಳಾಸಕ್ಕೆ ಡಿಡಿ ಕಳುಹಿಸಲಾಗಿದೆ. ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಪ್ರಕಾಶ್ ರೈ

    ನೀವು ಒಂದು ರುಪಾಯಿ ಕೇಳಿದ್ದೀರಿ. ನಾನು ನಿಮಗೆ 9 ರೂಪಾಯಿ ಕಳುಹಿಸಿದ್ದೇನೆ ತೆಗೆದುಕೊಳ್ಳಿ. ನಿಮ್ಮ ಮೌಲ್ಯ 1 ರೂಪಾಯಿ ಅಷ್ಟೆ ಅಂತಾ ನೀವೇ ಹೇಳಿದ್ದೀರಿ. ಆದರೆ, ನಾನು ಅದನ್ನು ಸ್ಪಲ್ಪ ಹೆಚ್ಚು ಮಾಡಿ 9 ರೂಪಾಯಿ ಕಳುಹಿಸಿದ್ದೇನೆ ಎಂದು ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ. ಇದನ್ನೂ ಓದಿ: ನಾನು ಪ್ರಕಾಶ್ ರೈ ಅವರನ್ನ ತುಂಬು ಹೃದಯದಿಂದ ಅಭಿನಂದಿಸುತ್ತೇನೆ- ನಟರಿಗೆ ಪ್ರತಾಪ್ ಸಿಂಹ ತಿರುಗೇಟು

    ಮಾನನಷ್ಟ ಹೂಡಿದ್ದು ಯಾಕೆ?
    ಅಕ್ಟೋಬರ್ 2 ರಂದು ಪ್ರತಾಪ್ ಸಿಂಹ ವೆಬ್‍ಸೈಟ್ ಒಂದರಲ್ಲಿ ಬಂದಿದ್ದ ಸುದ್ದಿಯನ್ನು ಟ್ವೀಟ್ ಮಾಡಿದ್ದರು. “ಮಗನ ಸಾವಿನ ದು:ಖದಲ್ಲಿದ್ದ ಹೆಂಡತಿಯನ್ನು ಬಿಟ್ಟು ಡ್ಯಾನ್ಸರ್ ಹಿಂದೆ ಓಡಿದ ರೈಯಂತಹವನು ಮೋದಿ? ಯೋಗಿಗೆ ಹೇಳುವಷ್ಟು ಯೋಗ್ಯತೆಯಿರುವವನಾ?” ಎನ್ನುವ ಹೆಡ್‍ಲೈನ್ ಈ ಸುದ್ದಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಪ್ರಕಾಶ್ ರೈ ಅವರು 1 ರೂ. ಪರಿಹಾರ ಕೋರಿ ಮೈಸೂರಿನ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

  • ಕೇಳದೆ ಕೊಡುವ ಸರ್ಕಾರ ಮುಂದಿನ ದಿನಗಳಲ್ಲಿ ಬರಬೇಕಿದೆ: ನಟ ಚೇತನ್

    ಕೇಳದೆ ಕೊಡುವ ಸರ್ಕಾರ ಮುಂದಿನ ದಿನಗಳಲ್ಲಿ ಬರಬೇಕಿದೆ: ನಟ ಚೇತನ್

    ಮಡಿಕೇರಿ: ಬಸವನಹಳ್ಳಿಯಲ್ಲಿ ಸರ್ಕಾರದ ವತಿಯಿಂದ ಆದಿವಾಸಿಗಳಿಗೆ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ನಟ ಚೇತನ್ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿರುವ ಬಸವನಹಳ್ಳಿಯಲ್ಲಿ ಆದಿವಾಸಿಗಳಿಗೆಂದೇ ನಿರ್ಮಾಣವಾಗುತ್ತಿರುವ ಮನೆಗಳಿಗೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋರಾಟ ಮಾಡಿದ್ದಕ್ಕೆ ಪ್ರತಿಫಲ ದೊರೆಯುತ್ತಿದೆ. ಇದು ನನಗೆ ತೃಪ್ತಿ ತಂದಿದೆ ಎಂದು ಹೇಳಿದ್ದಾರೆ.

    ಯಾವುದೇ ಸರ್ಕಾರ ಬಂದ್ರೂ ಕೇಳಿ ಪಡೆದುಕೊಳ್ಳಲು ಬಿಡಬಾರದು. ಕೇಳದೇ ಕೊಡುವ ಸರ್ಕಾರ ಮುಂದಿನ ದಿನಗಳಲ್ಲಿ ನಮಗೆ ಬೇಕು ಎಂದು ತಮ್ಮ ಅಭಿಪ್ರಾಯನ್ನು ಹಂಚಿಕೊಂಡರು. ಬಳಿಕ ಆದಿವಾಸಿಗಳ ಜೊತೆ ಕೆಲಕಾಲ ಬಸವನಹಳ್ಳಿಯಲ್ಲಿ ಕಾಲಕಳೆದ್ರು. ಇದನ್ನೂ ಓದಿ: ನಮ್ಮ ಅಧಿಕೃತ ಬಾವುಟ ಹಳದಿ, ಕೆಂಪು: ಸರ್ಕಾರ,ಸಾಹಿತಿಗಳ ವಿರುದ್ಧ ವಾಟಾಳ್ ಕಿಡಿ

    ಆದಿವಾಸಿಗಳಿಗೆ ನ್ಯಾಯ ಸಿಗಬೇಕು ಅಂತ ಭಾರೀ ಹೋರಾಟದ ಬಳಿಕ ರಾಜ್ಯ ಸರ್ಕಾರ ಸರ್ಕಾರ ಸುಮಾರು 528 ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಲು ಮುಂದಾಗಿದೆ. ಹೀಗಾಗಿ ಆದಿವಾಸಿಗಳಿಗೆ ಮನೆ ನಿರ್ಮಾಣವಾಗುತ್ತಿದೆ. ದಿಡ್ಡಳಿ ಹೋರಾಟ ನಡಸಿ ರಾಜ್ಯ ಸರ್ಕಾರ ಗಮನ ಸೆಳೆದ ಆದಿವಾಸಿಗಳು ಇಡೀ ಸರ್ಕಾರವನ್ನೇ ತಮ್ಮ ಬಳಿ ಬರುವಂತೆ ಉಗ್ರವಾಗಿ ಹೋರಾಟ ಮಾಡಿದ್ರು. ಈ ಹೋರಾಟದಲ್ಲಿ ಅನೇಕ ಹೋರಾಟಗಾರರು ಭಾಗಿಯಾಗಿದ್ದರು. ಆದಿವಾಸಿಗಳಿಗೆ ನ್ಯಾಯ ಸಿಗಬೇಕು. ಅವರಿಗೆ ಪುನರ್ ವಸತಿ ಲಭ್ಯವಾಗಬೇಕು ಎಂದು ಚೇತನ್ ಕೂಡ ಹೋರಾಟ ನಡೆಸಿದ್ದರು.

  • ಅಪರೂಪದ ಕಾಯಿಲೆಯಿಂದ ಬಳಲುತ್ತಿರೋ ಬಗ್ಗೆ ಸುಳಿವು ನೀಡಿದ ಬಾಲಿವುಡ್ ನಟ ಇರ್ಫಾನ್ ಖಾನ್

    ಅಪರೂಪದ ಕಾಯಿಲೆಯಿಂದ ಬಳಲುತ್ತಿರೋ ಬಗ್ಗೆ ಸುಳಿವು ನೀಡಿದ ಬಾಲಿವುಡ್ ನಟ ಇರ್ಫಾನ್ ಖಾನ್

    ಮುಂಬೈ: ಬಾಲಿವುಡ್ ನಟ ಇರ್ಫಾನ್ ಖಾನ್ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಅದರ ವಿರುದ್ಧ ಹೋರಾಟ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಈ ಕುರಿತು ಸ್ವತಃ ಇರ್ಫಾನ್ ಖಾನ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ದೀಪಿಕಾ ಪಡುಕೋಣೆ ಹಾಗೂ ಇರ್ಫಾನ್ ನಟನೆಯ ಸಿನಿಮಾ ಚಿತ್ರೀಕರಣವನ್ನು ಮುಂದೂಡಲಾಗಿದೆ ಎಂದು ಕಳೆದ ತಿಂಗಳಷ್ಟೇ ನಿರ್ಮಾಪಕ ವಿಶಾಲ್ ಭಾರದ್ವಾಜ್ ತಿಳಿಸಿದ್ದರು. ಕೆಲ ತಿಂಗಳ ಮಟ್ಟಿಗೆ ಚಿತ್ರದ ಚಿತ್ರೀಕರಣವನ್ನು ಮುಂದೂಡುತ್ತಿದ್ದೇನೆ. ಯಾಕಂದ್ರೆ ಚಿತ್ರದಲ್ಲಿ ನಟಿಸುವ ಪ್ರಮುಖ ನಟರೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜಾಂಡೀಸ್ ಕಾಯಿಲೆಯಿಂದ ನಟ ಇರ್ಫಾನ್ ಖಾನ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಅಂತ ಹೇಳಿದ್ದರು. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಸ್ವತಃ ಇರ್ಫಾನ್ ಖಾನ್ ಟ್ವೀಟ್ ಮಾಡುವ ಮೂಲಕ ತಾವು ಅನಾರೋಗ್ಯಕ್ಕೀಡಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ.

    `ಕೆಲವೊಂದು ಬಾರಿ ನಿಮ್ಮ ಜೀವನವನ್ನೇ ಘಾಸಿಗೊಳಿಸುವಂತಹ ಘಟನೆಗಳು ನಡೆಯುತ್ತವೆ. ಕಳೆದ 15 ದಿನಗಳಲ್ಲಿ ನನ್ನ ಜೀವನ ನಿಗೂಢ ಕಥೆಯಂತಾಗಿದೆ ಅಪರೂಪದ ಕಥೆಯನ್ನು ಹುಡುಕಲು ಹೊರಟ ನನಗೆ ಅಪರೂಪದ ರೋಗದ ಬಗ್ಗೆ ತಿಳಿಯುವಂತಾಗುತ್ತದೆ ಎಂದುಕೊಂಡಿರಲಿಲ್ಲ. ನಾನು ನನ್ನ ಜೀವನದಲ್ಲಿ ನನಗೆ ಬೇಕಾದ್ದನ್ನು ಹಠಕ್ಕೆ ಬಿದ್ದು ಪಡೆಯುತ್ತಿದ್ದೆ. ಹೀಗಾಗಿ ಎಂದಿಗೂ ಸೋತಿಲ್ಲ ಮತ್ತು ಹಾಗೆಯೇ ಇರಲು ಬಯಸುತ್ತೇನೆ. ನನ್ನ ಕುಟುಂಬದವರು ಮತ್ತು ಸ್ನೇಹಿತರು ನನ್ನ ಜೊತೆಗಿದ್ದಾರೆ. ಇನ್ನು 8-10 ದಿನಗಳಲ್ಲಿ ನನ್ನ ಆರೋಗ್ಯದ ಬಗ್ಗೆ ನಾನೇ ಇನ್ನಷ್ಟು ಮಾಹಿತಿಗಳನ್ನು ನೀಡುತ್ತೇನೆ. ಅಲ್ಲಿಯವರೆಗೆ ಯಾವುದೇ ರೀತಿಯ ಅನುಮಾನಗಳು ಬೇಡ. ನನಗೆ ಒಳ್ಳೆಯದನ್ನು ಬಯಸಿ ಅಂತ ಬರೆದುಕೊಂಡಿದ್ದಾರೆ.

  • ಪತಿಯ ಹೊಸ ಪಕ್ಷ ಸ್ಥಾಪನೆ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೀಗಂದ್ರು

    ಪತಿಯ ಹೊಸ ಪಕ್ಷ ಸ್ಥಾಪನೆ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೀಗಂದ್ರು

    ಬೆಂಗಳೂರು: ತಾನು ಸ್ಥಾಪಿಸಿದ ಕೆಪಿಜೆಪಿ ಪಕ್ಷಕ್ಕೆ ನಟ ಉಪೇಂದ್ರ ಅವರು ಈಗಾಗಲೇ ರಾಜೀನಾಮೆ ನೀಡಿದ್ದು, ಈ ಕುರಿತು ಪತ್ನಿ ಪ್ರಿಯಾಂಕಾ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಘಟನೆಯಿಂದ ಸಾಕಷ್ಟು ಬೇಸರವಾಗಿದೆ. ಉಪೇಂದ್ರರವರ ಇಮೇಜ್ ಗೆ ಧಕ್ಕೆ ಆಗುತ್ತೇನೋ ಅನ್ನೋ ಬೇಸರವಾಗಿತ್ತು. ಉಪ್ಪಿ ಹೊಸ ಪಕ್ಷದ ನಿರ್ಧಾರ ಒಳ್ಳೆಯದೇ ಆಯ್ತು. ಮಹೇಶ್ ಗೌಡ ಚೆನ್ನಾಗಿಯೇ ಇದ್ರು. ನಮ್ಮ ಕುಟುಂಬದವರ ಜೊತೆ ಇದ್ದು, ಉಪ್ಪಿಗೆ ಹಾಗೂ ನನಗೆ ಜೀವನದಲ್ಲಿ ದೊಡ್ಡ ಪಾಠ ಕಲಿಸಿದ್ರು ಅಂತ ಬೇಸರ ವ್ಯಕ್ತಪಡಿಸಿದ್ರು.

    ಉಪ್ಪಿ ಸೇರಿದಕ್ಕೆ ಕೆಪಿಜೆಪಿ ಪಕ್ಷದ ಹೆಸರಿಗೆ ಪಬ್ಲಿಸಿಟಿ ಸಿಕ್ತು. ಉಪ್ಪಿ ಇಲ್ಲದೇ ಇದ್ರೆ ಆ ಪಕ್ಷದ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ ಬಿಡಿ. ಸಜೆಷನ್ ಕೊಟ್ಟಿದ್ದನ್ನೇ ಸರ್ವಾಧಿಕಾರಿ ಅಂತಾ ತಿಳ್ಕೊಂಡ್ರೇ ಹೇಗೆ? ಎಲೆಕ್ಷನ್ ಹತ್ರ ಬರುವ ದಿನಗಳಲ್ಲಿಯೇ ಈ ರೀತಿ ವರ್ತನೆ ಎಷ್ಟರ ಮಟ್ಟಿಗೆ ಸರಿ? ಉಪ್ಪಿ ಅಭ್ಯರ್ಥಿಗಳನ್ನ ಪಕ್ಷೇತರವಾಗಿ ನಿಲ್ಲಿಸುವ ಯೋಚನೆ ಕೂಡ ಮಾಡಿದ್ದರು. ಅಭ್ಯರ್ಥಿಗಳು ಈಗಾಗಲೇ ರೆಡಿಯಾಗಿದ್ದಾರೆ ಅಂತ ಅವರು ತಿಳಿಸಿದ್ರು. ಇದನ್ನೂ ಓದಿ: ಕೆಪಿಜೆಪಿಗೆ ನಟ ಉಪೇಂದ್ರ ರಾಜೀನಾಮೆ – ಹೊಸ ಪಕ್ಷ ಸ್ಥಾಪನೆಗೆ ನಿರ್ಧಾರ

    ನಾನು ಕಂಟೆಸ್ಟ್ ಮಾಡಲ್ಲ: ಉಪ್ಪಿಗೆ ಎಲ್ಲಾ ರಾಷ್ಟ್ರೀಯ ಪಕ್ಷದಲ್ಲೂ ಸ್ನೇಹಿತರಿದ್ದಾರೆ. ಕಾಂಗ್ರೆಸ್, ಬಿಜೆಪಿಯಿಂದಲೂ ಆಹ್ವಾನ ಇತ್ತು. ಆದ್ರೆ ಹೊಸ ಪಕ್ಷದ ಕನಸು ಅವರಿಗಿದೆ. ಇನ್ನು ಮುಂದೆ ನಾವು ಕೇರ್ ಫುಲ್ ಆಗಿರ್ತೀವಿ. ನಾನು ಕಂಟೆಸ್ಟ್ ಮಾಡಲ್ಲ, ಹೊಸ ಪಕ್ಷಕ್ಕೆ ಎಲ್ಲ ಸಪೋರ್ಟ್ ಕೊಡ್ತೀನಿ ಅಂತ ಪ್ರಿಯಾಂಕಾ ಸ್ಪಷ್ಟಪಡಿಸಿದ್ರು.

    https://www.youtube.com/watch?v=RBF3GyZURh4

  • ರೌಡಿ ನಲಪಾಡ್ ಹೊಗಳಿ ಈಗ ಅಭಿಮಾನಿಗಳ ಜೊತೆ ಕ್ಷಮೆ ಕೇಳಿದ ಪ್ರಕಾಶ್ ರೈ

    ರೌಡಿ ನಲಪಾಡ್ ಹೊಗಳಿ ಈಗ ಅಭಿಮಾನಿಗಳ ಜೊತೆ ಕ್ಷಮೆ ಕೇಳಿದ ಪ್ರಕಾಶ್ ರೈ

    ಮೈಸೂರು: ಇನ್ಮುಂದೆ ಯಾರನ್ನಾದರೂ ಹೊಗಳುವ ಮುನ್ನ ಎಚ್ಚರ ವಹಿಸುತ್ತೇನೆ. ಅವರ ಪೂರ್ವ ಪರ ತಿಳಿದು ಮಾತನಾಡುತ್ತೇನೆ. ನನ್ನನ್ನ ಪ್ರೀತಿಸುತ್ತಿರುವ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ತಿಳಿಸಿದ್ದಾರೆ.

    ನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ಗ್ರಾಮ ತೆಗೆದುಕೊಳ್ಳಲು ಹ್ಯಾರಿಸ್ ಪುತ್ರ ನಲಪಾಡ್ ಹಣ ನೀಡಿದ್ದರು. ಆ ಕ್ಷಣದಲ್ಲಿ ಈ ರೀತಿಯ ಯುವಕರು ಇರಬೇಕು ಎಂದಿದ್ದೆ. ಅಲ್ಲದೇ ಈ ರೀತಿಯ ಗುಣ ಬೆಳೆಸಿಕೊಳ್ಳಬೇಕು ಎಂದಿದ್ದೆ. ಆದ್ರೆ ಆತನ ಮನದಲ್ಲಿ ರಾಕ್ಷಸ ಇದ್ದಾನೆಂದು ಗೊತ್ತಿರಲಿಲ್ಲ ಅಂತ ಹೇಳಿದ್ರು. ಇದನ್ನೂ ಓದಿ: ಅಭಿಮಾನಿಗಳ ಜೊತೆ ಕ್ಷಮೆ ಕೇಳಿದ ಸೆಹ್ವಾಗ್

    ಹಿರಿಯ ಗೌರಿಯ ಸಾವು ನನ್ನನ್ನು ತುಂಬಾ ಡಿಸ್ಟರ್ಬ್ ಮಾಡಿತು. ಹೀಗಾಗಿ, ಕಂಫರ್ಟ್ ಲೈಫ್ ಬಿಟ್ಟು ಹೋರಾಟದ ದಾರಿಗೆ ಇಳಿದು ಪ್ರಶ್ನೆ ಕೇಳುತ್ತಿದ್ದೇನೆ. ನಾನು ಪ್ರಜೆಯಾಗಿ ಮಾತಾಡುತ್ತಿದ್ದೇನೆ. ನಾನೂ ಎಡಪಂಥೀಯನಾಗಿ ಧ್ವನಿ ಎತ್ತಿದ್ದು ನಿಜ. ಯಾವುದು ತಪ್ಪು ಎನಿಸುತ್ತಿದೆಯೋ ಅದರ ವಿರುದ್ಧ ಹೋರಾಟಕ್ಕೆ ಇಳಿದಿದ್ದೇನೆ. ನಾನೂ ಧೋರಣೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದೇನೆ. ನಾನೂ ರೈಟೂ ಅಲ್ಲ ಲೆಫ್ಟೂ ಅಲ್ಲ. ನಾನೂ ಮೂರನೇ ಸಿದ್ದಾಂತಕ್ಕೆ ಸೇರಿದವನು ಅಂತ ಅಂದ್ರು.

    ಅಂದು ರೈ ಏನ್ ಹೇಳಿದ್ರು?: ಜನವರಿಯಲ್ಲಿ ಬೆಂಗಳೂರಿನ ಶಾಂತಿನಗರದಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪ್ರಕಾಶ್ ರೈ ಅವರು, ಮಹಮ್ಮದ್ ನಲಪಾಡ್ ನನ್ನು ವೇದಿಕೆಯ ಮೇಲೆ ಕರೆದು, ಈತ ನಲಪಾಡ್ ಅಂತ. ಎಂಎಲ್ ಎ ಹ್ಯಾರಿಸ್ ಮಗ. ಹ್ಯಾರಿಸ್ ಮಕ್ಕಳನ್ನು ಬೆಳೆಸಿದ ಹಾಗೆ ಎಲ್ಲರೂ ತಮ್ಮ ಮಕ್ಕಳನ್ನು ಬೆಳೆಸಬೇಕು ಅಂತ ವೇದಿಕೆಯ ಮೇಲೆಯೇ ಹೇಳುವ ಮೂಲಕ ಮಹಮ್ಮದ್ ನಲಪಾಡ್ ನ ಬೆನ್ನು ತಟ್ಟಿದ್ದರು.

    ಈತ ಸಣ್ಣ ಹುಡುಗ. ಒಂದು ಕಾರ್ಯಕ್ರಮವಿದೆ. ನೀವು ಬರಬೇಕು ಅಂತ ಹೇಳಿದ. ನೀವು ಬಹಳ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೀರಿ. ಹೀಗಾಗಿ ಆ ಕಾರ್ಯಕ್ರಮಕ್ಕೆ ನಾನು ಬರ್ತಿನಿ ಅಂತ ಹೇಳಿದೆ. ನನ್ನದೊಂದು ಪ್ರಕಾಶ್ ರಾಜ್ ಫೌಂಡೇಶನ್ ಅನ್ನೊದೊಂದಿದೆ. ಅದರಲ್ಲಿ ಒಂದಷ್ಟು ಹಳ್ಳಿಗಳನ್ನು ದತ್ತು ತೆಗೆದುಕೊಂಡು ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಅಂದೆ. ಆ ಸಂದರ್ಭದಲ್ಲಿ ಈ ಹುಡುಗ ನನಗೆ ಸಹಾಯ ಮಾಡಿದ್ದ. ತನ್ನ ಕ್ಷೇತ್ರವಲ್ಲದೇ, ನಾನು ದತ್ತು ತೆಗೆದುಕೊಳ್ಳುವ ಚಿತ್ರದುರ್ಗದ ಒಂದು ಹಳ್ಳಿಯಲ್ಲಿ ಒಂದು ಪುಟ್ಟ ಮನೆ ಬಡವನಿಗಾಗಿ ಕಟ್ಟಿ, ಅಲ್ಲಿ ಒಬ್ಬ ರೈತನಿಗೆ ಸಹಾಯ ಮಾಡಿದಿದ್ದಿದ್ರೆ, ಅದು ಈ ಹುಡುಗ ಅಂತ ಹೇಳಿ ನೆರೆದ ಜನರ ಮುಂದೆ ಬೆನ್ನು ತಟ್ಟಿದ್ರು.

    https://www.youtube.com/watch?v=G06kEeDdJ2U&feature=youtu.be

    https://www.youtube.com/watch?v=fElPQI1QKLg

  • ವಿದ್ವತ್ ಆರೋಗ್ಯ ವಿಚಾರಿಸಿ ಕಣ್ಣೀರು ಹಾಕಿದ ನಟ ಪುನೀತ್ ರಾಜ್ ಕುಮಾರ್! ವೀಡಿಯೋ ನೋಡಿ

    ವಿದ್ವತ್ ಆರೋಗ್ಯ ವಿಚಾರಿಸಿ ಕಣ್ಣೀರು ಹಾಕಿದ ನಟ ಪುನೀತ್ ರಾಜ್ ಕುಮಾರ್! ವೀಡಿಯೋ ನೋಡಿ

    ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಯುವಕ ವಿದ್ವತ್ ನನ್ನು ನಟ ಪುನೀತ್ ರಾಜ್ ಕುಮಾರ್ ಇಂದು ಭೇಟಿ ಮಾಡಿದ್ದಾರೆ.

    ನಗರದ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ ನಟ ಪುನೀತ್ ಅವರು ವಿದ್ವತ್ ಆರೋಗ್ಯ ವಿಚಾರಿಸಿದ್ದು, ಈ ವೇಳೆ ಅವರು ಕಣ್ಣೀರು ಹಾಕಿದ್ದಾರೆ. ಹಲ್ಲೆಗೊಳಗಾದ ವಿದ್ವತ್, ರಾಘವೇಂದ್ರ ರಾಜ್‍ಕುಮಾರ್ ಪುತ್ರನ ಸ್ನೇಹಿತರಾಗಿದ್ದಾರೆ. ಇದನ್ನೂ ಓದಿ: ಯುಬಿ ಸಿಟಿ ಗಲಾಟೆ ಹೇಗಾಯ್ತು? ಯಾವೆಲ್ಲ ಸೆಕ್ಷನ್ ಹಾಕಲಾಗಿದೆ? ಆರೋಪಿಗಳ ಉದ್ಯೋಗ ಏನು? ನಲಪಾಡ್ ರೌಡಿಸಂ ಫುಲ್ ಡಿಟೇಲ್ ಇಲ್ಲಿದೆ

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪುನೀತ್, ಹಲ್ಲೆಗೊಳಗಾದ ವಿದ್ವತ್ ಫ್ಯಾಮಿಲಿ ಫ್ರೆಂಡ್. ಆತನನ್ನು ನಾನು ಚಿಕ್ಕಂದಿನಿಂದಲೇ ನೋಡಿದ್ದೀನಿ. ಆತನು ನನಗೆ ಪರಿಚಯ. ಸದ್ಯ ಆತ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾನೆ. ವಿದ್ವತ್ ನನ್ನ ತಮ್ಮನ ಹಾಗೆ. ಕಾನೂನಿಗಿಂತ ಯಾರು ದೊಡ್ಡವರಲ್ಲ. ತಪ್ಪಿತಸ್ಥಿರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಮಗ ತಪ್ಪು ಮಾಡಿದ್ರೆ ಅಪ್ಪನ ಮೇಲೆ ಕ್ರಮ ತೆಗೆದುಕೊಳ್ಳಬೇಕು ಅಂತ ಯಾವ ಐಪಿಸಿ ಸೆಕ್ಷನ್ ನಲ್ಲಿದೆ- ಸಚಿವ ಜಾರ್ಜ್ ಪ್ರಶ್ನೆ

    ಏನಿದು ಘಟನೆ?: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಊಟ ಮಾಡುವ ವಿಷಯಕ್ಕಾಗಿ ಕಿರಿಕ್ ತೆಗೆದು ಯುವಕನೋರ್ವನ ಮೇಲೆ ಹಲ್ಲೆ ನಡೆಸಿದ್ದಾನೆ. ಉದ್ಯಮಿ ಲೋಕ್‍ನಾಥ್ ಪುತ್ರ ವಿದ್ವತ್ ಹಲ್ಲೆಗೊಳಗಾದ ಯುವಕನಾಗಿದ್ದು, ಇವರು ಇತ್ತೀಚೆಗೆ ವಿದ್ವತ್ ಸಿಂಗಾಪೂರ್‍ನಲ್ಲಿ ಪದವಿ ಮುಗಿಸಿ ನಗರಕ್ಕೆ ಆಗಮಿಸಿದ್ದರು. ಶನಿವಾರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ಊಟ ಮಾಡುವ ವಿಷಯಕ್ಕಾಗಿ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದರು. ಇದನ್ನೂ ಓದಿ: ನಲಪಾಡ್ ಗೆ ಋಣ ಸಂದಾಯ – ಕಬ್ಬನ್ ಪಾರ್ಕ್ ಪೊಲೀಸರ ಮತ್ತೊಂದು ಅವಾಂತರ ಬಟಾಬಯಲು!

    ಸದ್ಯ ವಿದ್ವತ್ ಮೂಗಿನ ಹೊಳ್ಳೆಗಳು ಒಡೆದಿದ್ದು, ಮೂಗು ಫ್ರಾಕ್ಚರ್ ಆಗಿದೆ. ಬಲಭಾಗದ 5 ಪಕ್ಕೆಲುಬುಗಳು ಮುರಿದಿದ್ದು, ಎಡಭಾಗದ 4 ಪಕ್ಕೆಲುಬುಗಳು ಮುರಿದಿವೆ. ಆದ್ದರಿಂದ ವಿದ್ವತ್ ಸ್ಥಿತಿ ಗಂಭೀರವಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

     

  • ಕಾರು ಅಪಘಾತದಲ್ಲಿ ನಟ ಮಂಡ್ಯ ರಮೇಶ್ ಕೂದಲೆಳೆ ಅಂತರದಲ್ಲಿ ಪಾರು

    ಕಾರು ಅಪಘಾತದಲ್ಲಿ ನಟ ಮಂಡ್ಯ ರಮೇಶ್ ಕೂದಲೆಳೆ ಅಂತರದಲ್ಲಿ ಪಾರು

    ಮಂಡ್ಯ: ಚಿತ್ರ ನಟ ಮಂಡ್ಯ ರಮೇಶ್ ಅವರ ಕಾರು ಅಪಘಾತಕ್ಕೀಡಾಗಿದ್ದು, ಕೂದಲೆಳೆಯ ಅಂತರದಲ್ಲಿ ಹಾಸ್ಯ ನಟ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಲೋಕಪಾವನಿ ಸೇತುವೆ ಬಳಿ ನಡೆದಿದೆ.

    ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ 7.10ರಲ್ಲಿ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಮಜಾ ಟಾಕೀಸ್ ಶೂಟಿಂಗ್ ಮುಗಿಸಿಕೊಂಡು ಮಂಡ್ಯ ರಮೇಶ್ ತಾವೊಬ್ಬರೇ ಕಾರು ಚಲಾಯಿಸಿಕೊಂಡು ಮೈಸೂರಿಗೆ ಬರುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಲಾರಿ ಅಡ್ಡದಿಡ್ಡಿ ಚಲಿಸಿದೆ. ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಕಾರು ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದು, ಹಾರಿ ಮಧ್ಯ ನಿಂತಿದೆ.

    ಘಟನೆಯಿಂದಾಗಿ ಕಾರಿನ ಮುಂಭಾಗ ಜಖಂಗೊಂಡಿದೆ. ಕಾರಿನ ಚಕ್ರಗಳು ಸ್ಫೋಟಗೊಂಡಿವೆ. ಅದೃಷ್ಟವಶಾತ್ ಮಂಡ್ಯ ರಮೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ಗಾಬರಿಗೊಂಡಿದ್ದ ಮಂಡ್ಯ ರಮೇಶ್, ತಮ್ಮ ಶಿಷ್ಯನಿಗೆ ಕರೆ ಮಾಡಿ ದ್ವಿಚಕ್ರ ವಾಹನದಲ್ಲಿ ಮೈಸೂರಿಗೆ ತೆರಳಿದ್ದಾರೆ. ನಂತರ ಕಾರನ್ನು ತೆಗೆದುಕೊಂಡು ಹೋಗಿದ್ದು, ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

    https://www.youtube.com/watch?v=wUwELE27XPI

  • ಸ್ಯಾಂಡಲ್‍ವುಡ್ ನಟನ ಮೇಲೆ ಕಬಡ್ಡಿ ಆಟಗಾರರಿಂದ ಹಲ್ಲೆ

    ಸ್ಯಾಂಡಲ್‍ವುಡ್ ನಟನ ಮೇಲೆ ಕಬಡ್ಡಿ ಆಟಗಾರರಿಂದ ಹಲ್ಲೆ

    ಬೆಂಗಳೂರು: ಕಬಡ್ಡಿ ಸೋತಿದ್ದಕ್ಕೆ ಹತಾಶೆಗೊಂಡು ಸ್ಯಾಂಡಲ್‍ವುಡ್ ನಟನಿಗೆ ಮತ್ತೊಂದು ತಂಡ ಥಳಿಸಿದ ಘಟನೆ ಅನ್ನಪೂರ್ಣೇಶ್ವರಿ ನಗರದ ಬಿಬಿಎಂಪಿ ಪಾರ್ಕ್ ನಲ್ಲಿ ನಡೆದಿದೆ.

    18 ಪ್ಲಸ್ ಸಿನಿಮಾದ ನಾಯಕ ನಟ ಭರತ್ ಮೇಲೆ ಹಲ್ಲೆ ನಡೆಸಲಾಗಿದೆ. ಕಬಡ್ಡಿ ಟೂರ್ನಿಯಲ್ಲಿ ಭಾಗವಹಿಸಿದ್ದ ಭರತ್ ತಂಡ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಫೈನಲ್ ಪಂದ್ಯದಲ್ಲಿ ಸೋತಿದ್ದಕ್ಕೆ ಸಿಟ್ಟಾಗಿ ಕಿಟ್ಟಿ, ಪ್ರೇಮ್, ನಂದು ಎಂಬವರು ನಟ ಭರತ್ ಹಾಗೂ ನವೀನ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ.

    2 ದಿನಗಳ ಹಿಂದೆ ನಟನ ಮೇಲೆ ಹಲ್ಲೆ ನಡೆದಿದೆ. ಹಲ್ಲೆಯ ನಂತರ ಭರತ್ ಮುಖ ಊದಿಕೊಂಡಿದೆ. ಅನ್ನಪೂರ್ಣೆಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • `ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ನಟ ಚಂದ್ರಶೇಖರ್ ಇನ್ನಿಲ್ಲ

    `ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ನಟ ಚಂದ್ರಶೇಖರ್ ಇನ್ನಿಲ್ಲ

    ಬೆಂಗಳೂರು: ಕನ್ನಡದ ಹಿರಿಯ ನಟ ಚಂದ್ರ ಶೇಖರ್ ಅವರು ವಿಧಿವಶರಾಗಿದ್ದಾರೆ. ಕೆನಡಾದಲ್ಲಿ ಅವರಿಗೆ ಹೃದಯಾಘಾತವಾಗಿ ಇಂದು ಮುಂಜಾನೆ 3.30ರ ಸುಮಾರಿಗೆ ಕನ್ನಡದ ನಟ ಕಣ್ಮುಚ್ಚಿದ್ದಾರೆ.

    1973ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕರಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಶಿವಲಿಂಗ, ಅಸ್ತಿತ್ವ, ಕಾರಂಜಿ, ಜೀವ, ಪೂರ್ವಾಪರ, ಮಳೆ ಬಂತು ಮಳೆ, ಮಾನಸ ಸರೋವರ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

    ಡಾ. ರಾಜ ನನ್ನ ರಾಜ ಜೊತೆ ನಟಿಸಿದ್ದರು. ನಂತರ ಸಾಹಸ ಸಿಂಹ ವಿಷ್ಟುವರ್ಧನ್ ಜೊತೆ ವಂಶವೃಕ್ಷ ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು. ಮೃತರು ಪತ್ನಿ ಶೀಲಾ ಹಾಗೂ ಪುತ್ರಿ ತಾನ್ಯರನ್ನು ಅಗಲಿದ್ದಾರೆ.

    ಸದ್ಯ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ರವಾನಿಸಲಾಗುತ್ತದೆಯೋ, ಇಲ್ಲವೋ ಎಂಬುದರ ಬಗ್ಗೆ ಖಚಿತ ಮಾಹಿತಿ ತಿಳಿದಬಂದಿಲ್ಲ.