Tag: ನಟ

  • ಹುಟ್ಟುಹಬ್ಬದಂದೇ ಉಪ್ಪಿಯಿಂದ ಹೊಸ ಪಕ್ಷ ಲಾಂಚ್

    ಹುಟ್ಟುಹಬ್ಬದಂದೇ ಉಪ್ಪಿಯಿಂದ ಹೊಸ ಪಕ್ಷ ಲಾಂಚ್

    ಬೆಂಗಳೂರು: ಇಂದು ರಿಯಲ್ ಸ್ಟಾರ್ ಉಪೇಂದ್ರಗೆ 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಶುಭ ಸಂದರ್ಭದಲ್ಲೇ ಉಪ್ಪಿ ಹೊಸ ಪಕ್ಷ ಲಾಂಚ್ ಮಾಡಿದ್ದಾರೆ.

    ಹೌದು. ನಟ ಉಪೇಂದ್ರ ಅವರು ಇಂದು `ಉತ್ತಮ ಪ್ರಜಾಕೀಯ ಪಕ್ಷ’ ಎಂಬ ಹೊಸ ಪಕ್ಷವನ್ನು ಲೋಕಾರ್ಪಣೆ ಮಾಡಿದ್ದಾರೆ. ವಿನೂತನವಾಗಿ ಪಕ್ಷವನ್ನು ಲಾಂಚ್ ಮಾಡಿದ ಅವರು, ಇನ್ಮುಂದೆ ನನ್ಮ ಬರ್ತ್ ಡೇ ಯುಪಿಪಿ ಬರ್ತ್ ಡೇ ಆಗಲಿದೆ ಅಂತ ಹೇಳಿದ್ರು.

    ವೇದಿಕೆ ಮೇಲೆ ಯುಪಿಪಿಐ ಎಂಬ ಪದಗಳನ್ನಿಟ್ಟು ಅದರಲ್ಲಿ ಐ ಎಂಬ ಪದಕ್ಕೆ ಬೆಂಕಿ ಹಚ್ಚಿ ಉಪ್ಪಿ ಹೆಸರಿನಲ್ಲಿ ಯುಪಿಪಿ ಮಾತ್ರ ಉಳಿದುಕೊಂಡಿದ್ದು ಐ(ನಾನು) ಅನ್ನೋದು ಹೋಗಬೇಕು. 15-20 ವರ್ಷದಿಂದ ನಾನು ಅನ್ನೋದನ್ನು ಕಿತ್ತೊಕೊಳ್ಳೋಕೆ ಇಂದು ದಿನ ಬಂತು. ಇನ್ಮೇಲೆ ಉಪ್ಪಿ ಬರ್ತ್ ಡೇ ಇರಲ್ಲ. ಇಷ್ಟು ವರ್ಷಗಳ ಕಾಲ ಅಭಿಮಾನಿಗಳು ಬರ್ತ್ ಡೇ ಯನ್ನು ಆಚರಿಸಿಕೊಂಡು ಬಂದ್ರು. ಹೀಗಾಗಿ ಇಂದು ಅಭಿಮಾನಿಳಿಗೋಸ್ಕರ ಯುಪಿಪಿ ಎಂಬ ವೇದಿಕೆಯೊಂದನ್ನು ಸಿದ್ಧಪಡಿಸಿದ್ದೇನೆ ಇನ್ಮೇಲಿಂದ ಸೆಪ್ಟೆಂಬರ್ 18ರಂದು ಯುಪಿಪಿ ಬರ್ತ್ ಡೇ ಆಗುತ್ತೆ ಅಂತ ಹೇಳಿದ್ರು.

    ಒಂದು ವರ್ಷದ ಹಿಂದೆ ಪ್ರಜಾಕೀಯ ಎಂಬ ಕಲ್ಪನೆಯಿಟ್ಟುಕೊಂಡು ಬಂದಿದ್ದೆವು. ಆ ಬಳಿಕ ಏನೇನೋ ಆಗೋಯ್ತು. ಹೀಗಾಗಿ ಇನ್ನೊಂದು ಪಕ್ಷದ ಜೊತೆ ಸೇರಿ ಕೋಳ್ಳೋ ಪರಿಸ್ಥಿತಿ ಎದುರಾಯ್ತು. ಹೀಗಾಗಿ ಕಳೆದ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗಿಲ್ಲ. ಆಗೋದೆಲ್ಲ ಒಳ್ಳೆಯದೇ ಅನ್ನುವಂತೆ ಎಲ್ಲವೂ ಒಳ್ಳೆದಾಗಿದೆ. ಸದ್ಯ ನಮ್ಮದೇ ಒಂದು ಪಕ್ಷವನ್ನು ರಿಜಿಸ್ಟಾರ್ ಮಾಡಿದ್ದೇವೆ. ಅದೇ ಉತ್ತಮ ಪ್ರಜಾಕೀಯ ಪಕ್ಷ ಅಂದ್ರು

    ಪಕ್ಷ ಹೇಗೆ ಕೆಲಸ ಮಾಡುತ್ತೆ?:
    1. ವ್ಯಾಪಾರೀ ರಾಜಕೀಯದಿಂದ ವೃತ್ತಿಪರ ಪ್ರಜಾಕೀಯದ ಕಡೆಗೆ
    2. ಆಕಾಂಕ್ಷಿಗಳು ಮಾಡಿಕೋಳ್ಳಬೇಕಾದ ಪೂರ್ವ ಸಿದ್ಧತೆಗಳು

    ಗ್ರಾಮಪಂಚಾಯತ್ ಚುನಾವಣೆಗೆ ನಿಲ್ಲಬೇಕಂದ್ರೆ ಗ್ರಾಮದ ಪ್ರತಿಯೊಂದು ಸಮಸ್ಯೆಗಳನ್ನು ವಿಡಿಯೋ ದಾಖಲೆಗಳನ್ನು ಮಾಡಿಕೊಂಡು ಬಳಿಕ ಅವರ ಕಲ್ಪನೆಗಳನ್ನು(ಸಿಟಿಗೂ ಅನ್ವಯಿಸುತ್ತೆ) ಮಾಡಿಕೊಂಡು ಇವುಗಳನ್ನು ಅಲ್ಲಿನ ಗ್ರಾಮದ ಜನರೊಂದಿಗೆ ಚರ್ಚೆ ನಡೆಸಿ ನಂತರ ತಜ್ಞರೊಂದಿಗೆ ಚರ್ಚಿಸಿ ಬಜೆಟ್ ಮತ್ತು ಸಮಯ ನಿಗದಿ ಮಾಡಿಕೊಂಡು ಅದನ್ನು ನಮಗೆ www.prajakeeya.org ಎಂಬ ವೆಬ್‍ಸೈಟ್ ಗೆ ವಿಡಿಯೋವನ್ನು ಕಳುಹಿಸಬೇಕು. ಶಾಸಕರು, ಸಂಸದರು ಕೂಡ ಇದೇ ರೀತಿ ಕಲ್ಪನೆಗಳನ್ನಿಟ್ಟುಕೊಂಡು ನಂತರ ತಜ್ಞರ ಜೊತೆ ಚರ್ಚಿಸಬೇಕು. ಫೈನಲ್ ಆದ ಬಳಿಕ ನಮಗೆ ವಿಡಿಯೋವನ್ನು ಕಳುಹಿಸಿಕೊಡಬೇಕು ಅಂತ ವಿವರಿಸಿದ್ರು.

    ಯುಪಿಪಿ ಪಕ್ಷದ ಉದ್ಘಾಟನೆಗೆ ನೂರಾರು ಅಭಿಮಾನಿಗಳು ಆಗಮಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡಬ್ಬಿಂಗ್ ಮಾಡೋರಿಗೆ ಲಾಸ್ ಆಗಿರ್ಬೇಕು, ಅದಕ್ಕೆ  ದಂಡ ಹಾಕ್ಸಿದ್ದಾರೆ: ಜಗ್ಗೇಶ್

    ಡಬ್ಬಿಂಗ್ ಮಾಡೋರಿಗೆ ಲಾಸ್ ಆಗಿರ್ಬೇಕು, ಅದಕ್ಕೆ ದಂಡ ಹಾಕ್ಸಿದ್ದಾರೆ: ಜಗ್ಗೇಶ್

    ಬೆಂಗಳೂರು: ಡಬ್ಬಿಂಗ್ ಮಾಡುವವರಿಗೆ ನಷ್ಟ ಆಗಿರಬೇಕು, ಹೀಗಾಗಿ ದಂಡ ಹಾಕಿಸಿದ್ದಾರೆ ಎನ್ನುವ ಮೂಲಕ ಡಬ್ಬಿಂಗ್ ವಿರುದ್ಧ ಹೋರಾಟಕ್ಕೆ ಬಿದ್ದ ದಂಡಕ್ಕೆ ನಟ ಜಗ್ಗೇಶ್ ವ್ಯಂಗ್ಯವಾಗಿ ಕಿಡಿಕಾರಿದ್ದಾರೆ.

    ಡಬ್ಬಿಂಗ್ ವಿಚಾರವಾಗಿ ಹೋರಾಟ ನಡೆಸಿದ್ದ ನಟ ಜಗ್ಗೇಶ್‍ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ದಂಡ ವಿಧಿಸಿತ್ತು. ಈ ಕುರಿತು ತಮ್ಮ 8 ಎಂಎಂ ಸಿನಿಮಾದ ಆಡಿಯೋ ರಿಲೀಸಿಂಗ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಉದ್ಯಮಕ್ಕೋಸ್ಕರ ಹೋರಾಟ ಮಾಡಿದ್ದೇನೆಯೇ ಹೊರತು, ಜಗ್ಗೇಶ್‍ಗಾಗಿ ಅಲ್ಲ. ಕನ್ನಡ ಫಿಲ್ಮ್ ಚೇಂಬರ್ ಕರೆದಿದ್ದಕ್ಕೆ ನಾನು ಹೋಗಿದ್ದೆ. ಯಾವುದೇ ಸ್ವಾರ್ಥವಿಟ್ಟುಕೊಂಡು ಹೋರಾಟಕ್ಕೆ ಹೋಗಿರಲಿಲ್ಲ ಎಂದರು.

    ಡಬ್ಬಿಂಗ್ ಮಾಡುವವರಿಗೆ ತುಂಬಾ ಲಾಸ್ ಆಗಿರುವ ಹಾಗೆ ಕಾಣುತ್ತಿದೆ. ಹೀಗಾಗಿ ದಂಡ ಹಾಕಿಸಿದ್ದಾರೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಈ ಕುರಿತು ನಾನು ಹೋರಾಟ ಮಾಡುತ್ತೇನೆ. ಶೀಘ್ರವೇ ಮೇಲ್ಮನವಿ ಸಲ್ಲಿಸುತ್ತೇನೆ. ನಾನು ಕೋರ್ಟ್ ಆದೇಶ ಬರುವುದಕ್ಕೂ ಮೊದಲೇ ಡಬ್ಬಿಂಗ್ ವಿರುದ್ಧ ಮಾತನಾಡಿದ್ದೆ, ಆದೇಶ ಬಂದ ಮೇಲೆ ಮಾತನಾಡಿಲ್ಲವೆಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಡಬ್ಬಿಂಗ್ ಚಿತ್ರ ಬಿಡುಗಡೆಯಾದ್ರೆ ಆ ಚಿತ್ರಮಂದಿರಕ್ಕೆ ಬೆಂಕಿ: ಜಗ್ಗೇಶ್

    ಏನಿದು ಪ್ರಕರಣ?
    ತಮಿಳು ನಟ ಅಜಿತ್ ಅಭಿನಯದ ತಮಿಳಿನ `ಎನ್ನೈ ಎರಿಂದಲ್’ ಚಿತ್ರವನ್ನು ಕನ್ನಡಕ್ಕೆ ಸತ್ಯದೇವ್ ಐಪಿಎಸ್ ಮೂಲಕ ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ತಯಾರಿ ನಡೆದಿತ್ತು. ಇದರ ವಿರುದ್ಧ ಕರ್ನಾಟಕ ಚಲನಚಿತ್ರ ಮಂಡಳಿ, ನಟ ಜಗ್ಗೇಶ್, ನಿರ್ಮಾಪಕ ಸಾರಾ ಗೋವಿಂದ್ ಹಾಗೂ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆದಿತ್ತು. ಚಿತ್ರ ಬಿಡುಗಡೆಗೆ ಅಡ್ಡಿಪಡಿಸಿದ್ದರ ಕುರಿತು ಚಿತ್ರದ ವಿತರಕರು ಸಿಸಿಐಗೆ ದೂರು ನೀಡಿದ್ದರು. ದೂರಿನ ವಿಚಾರಣೆ ನಡೆಸಿದ ಸಿಸಿಐ ಕರ್ನಾಟಕ ಚಲನಚಿತ್ರ ಮಂಡಳಿಗೆ 9,72,943 ರೂ.  ನಟ ಜಗ್ಗೇಶ್ ಗೆ 2,71,286 ರೂ. ಹಾಗೂ ನಿರ್ಮಾಪಕ ಸಾರಾ ಗೋವಿಂದು ಅವರಿಗೆ 15,121 ರೂ. ದಂಡವನ್ನು ವಿಧಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೆಚ್ಚಿನ ನಟನನ್ನು ಭೇಟಿ ಮಾಡಲು ಆಗಲಿಲ್ಲವೆಂದು ಅಭಿಮಾನಿ ಆತ್ಮಹತ್ಯೆ

    ನೆಚ್ಚಿನ ನಟನನ್ನು ಭೇಟಿ ಮಾಡಲು ಆಗಲಿಲ್ಲವೆಂದು ಅಭಿಮಾನಿ ಆತ್ಮಹತ್ಯೆ

    ಹೈದರಾಬಾದ್: ತನ್ನ ನೆಚ್ಚಿನ ನಟನನ್ನು ಭೇಟಿ ಮಾಡಲು ಆಗಲಿಲ್ಲವೆಂದು ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

    ತಾವು ಪ್ರೀತಿಸೋ ಆರಾಧಿಸುವ ಸ್ಟಾರ್ ಗಳನ್ನು ಜೀವನದಲ್ಲಿ ಒಮ್ಮೆಯಾದರೂ ಭೇಟಿ ಮಾಡಬೇಕು ಎನ್ನುವ ಆಸೆ ಪ್ರತಿಯೊಬ್ಬ ಅಭಿಮಾನಿಗೂ ಇರುತ್ತೆ. ಆದರೆ ಪವನ್‍ ಕಲ್ಯಾಣ್‍ರನ್ನು ಭೇಟಿ ಮಾಡೋಕೆ ಸಾಧ್ಯವಾಗದ ಕಾರಣ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಅನಿಲ್‍ಕುಮಾರ್ ನಟ ಪವನ್‍ಕಲ್ಯಾಣ್ ಅವರ ಅಪ್ಪಟ ಅಭಿಮಾನಿ. ಅನಿಲ್ ಕುಮಾರ್ ಒಮ್ಮೆಯಾದರೂ ತನ್ನ ನೆಚ್ಚಿನ ನಟ ಪವನ್ ಕಲ್ಯಾಣ್ ಅವರನ್ನು ನೇರವಾಗಿ ಭೇಟಿ ಆಗಬೇಕೆಂದು ಆಸೆಯನ್ನು ಹೊಂದಿದ್ದ. ಸಾಕಷ್ಟು ಬಾರಿ ಭೇಟಿ ಮಾಡಲಿಕ್ಕೆ ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ.

    ಹೀಗಾಗಿ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ. ಅಂತಿಮ ಸಂಸ್ಕಾರಕ್ಕೆ ಪವನ್‍ಕಲ್ಯಾಣ್ ಬರಬೇಕೆಂದು ಡೆತ್‍ನೋಟ್‍ನಲ್ಲಿ ಬರೆದಿಟ್ಟಿದ್ದಾನೆ. ಸದ್ಯ ಈ ಬಗ್ಗೆ ಸತ್ಯನಾರಾಯಣಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡಬಲ್ ಮೀನಿಂಗ್ ಡೈಲಾಗ್ ಇಷ್ಟವಿಲ್ಲ, ಅದು ನನ್ನ ಸಂಸ್ಕೃತಿಯಲ್ಲ- ನೀನಾಸಂ ಸತೀಶ್

    ಡಬಲ್ ಮೀನಿಂಗ್ ಡೈಲಾಗ್ ಇಷ್ಟವಿಲ್ಲ, ಅದು ನನ್ನ ಸಂಸ್ಕೃತಿಯಲ್ಲ- ನೀನಾಸಂ ಸತೀಶ್

    – ಉತ್ತರ ಕರ್ನಾಟಕದ ಹಳ್ಳಿ ದತ್ತು ಪಡೆಯಲು ಚಿಂತನೆ

    ಧಾರವಾಡ: ನನಗೆ ಡಬಲ್ ಮೀನಿಂಗ್ ಡೈಲಾಗ್ ಇಷ್ಟವಿಲ್ಲ, ನನ್ನ ಕುಟುಂಬ ನನಗೆ ಅದನ್ನ ಕಲಿಸಿಲ್ಲ ಎಂದು ಚಿತ್ರ ನಟ ನಿನಾಸಂ ಸತೀಶ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ ಗ್ರೆಡ್ ತರಹದ ಸಿನೆಮಾ ಮಾಡಿ ನನಗೆ ಗೆಲ್ಲೊದು ಬೇಕಾಗಿಲ್ಲ. ಪರಿಶುದ್ಧ ಸಿನೆಮಾ ಮಾಡಬೇಕು ಎಂದಿದ್ದ ನನಗೆ ಇದೇ ಪರಿಶುದ್ಧ ಗೆಲುವು ಎಂದು ಹೇಳಿದರು.

    ಡಬಲ್ ಮೀನಿಂಗ್ ಸಿನಿಮಾ ತರಲು ನನಗೆ ಇಷ್ಟ ಆಗಲ್ಲ. ಅದು ನನ್ನ ಸಂಸ್ಕೃತಿ ಅಲ್ಲ. ನನ್ನ ಕುಟುಂಬದವರು ನನಗೆ ಅದನ್ನು ಕಲಿಸಿಲ್ಲ. ಆ ತರದ ಡೈಲಾಗ್ ಗಳು ಬಂದಾಗ ನನಗೆ ಅಸಹ್ಯ ಆಗುತ್ತೆ. ಹೀಗಾಗಿ ಎಷ್ಟು ಸಾಧ್ಯವಾಗುತ್ತೋ ಅಷ್ಟು ಅವುಗಳನ್ನು ನಿರಾಕರಿಸುತ್ತೀನಿ. ಆದ್ರೆ ಪ್ರಾಕೃತಿಕವಾಗಿ ಆ ಕಥೆಯೊಳಗಡೆ ಇದ್ದರೆ ಮಾತ್ರ ಅಂತಹ ಸೀನ್ ಗಳನ್ನು ಬಳಸಲು ಒಪ್ಪಿಗೆ ಕೊಡುತ್ತೇನೆ. ಅದು ಬಿಟ್ಟರೆ ಡಬಲ್ ಮೀನಿಂಗ್ ಡೈಲಾಗ್ ಮೂಲಕ ಜನರನ್ನು ರಂಜಿಸಲು ನಾನು ಹೋಗುವುದಿಲ್ಲ. ಒಂದು ಪರಿಶುದ್ಧವಾದ ಸಿನಿಮಾ ಮಾಡಿ ಗೆಲ್ಲಿಸಿಕೊಳ್ಳೋಣ. ಅದಕ್ಕೆ ಜನ ಸಪೋರ್ಟ್ ಮಾಡಬೇಕು ಅಂತ ಹೇಳಿದ್ರು.

    ಹಳ್ಳಿ ದತ್ತು:
    ಬರುವ ವರ್ಷ ಉತ್ತರ ಕರ್ನಾಟಕ ಭಾಗದಲ್ಲಿ ತೀರಾ ಕಡು ಪರಿಸ್ಥಿತಿಯಲ್ಲಿರುವ ಹಳ್ಳಿಯನ್ನು ದತ್ತು ತೆಗೆದುಕೊಳ್ಳುತ್ತೇನೆ. ಈ ಮೂಲಕ ಉಳ್ಳವರಿಗೆ, ಕೋಟ್ಯದೀಶ್ವರರು ಎಚ್ಚೆತ್ತುಕೊಳ್ಳಲಿ. ನಾವೆಲ್ಲರೂ ಸಮಾಜದ ಜೊತೆ ಇರೋಣ. ನಾವು ತಿನ್ನೋಣ, ಅವರೂ ತಿನ್ನಲಿ. ಹೀಗೆ ಎಲ್ಲರೂ ನೆಮ್ಮದಿಯಾಗಿ ಬದುಕಲು ನಾವೆಲ್ಲರೂ ಸೇರಿ ಅವಕಾಶ ಮಾಡಿಕೊಡಬೇಕು. ಯಾವ ಊರನ್ನು ದತ್ತು ತೆಗೆದುಕೊಳ್ಳಬಹುದೆಂಬ ಲಿಸ್ಟ್ ಮಾಡಿ ಚರ್ಚೆ ನಡೆಸಿ ನನಗೆ ತಿಳಿಸಿ. ಬಳಿಕ ನಾನೇ ಆ ಊರಿಗೆ ಬಂದು ತೆಗೆದುಕೊಳ್ಳುತ್ತೇನೆ ಅಂತ ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ- ನಟ ಧರ್ಮನನ್ನು ಬಂಧಿಸದ ಪೊಲೀಸರು

    ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ- ನಟ ಧರ್ಮನನ್ನು ಬಂಧಿಸದ ಪೊಲೀಸರು

    ಬೆಂಗಳೂರು: ನಟ ಧರ್ಮ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸದಂತೆ ಒತ್ತಡ ಹೇರಲಾಗುತ್ತಿದೆ. ಅಲ್ಲದೇ ದೂರು ದಾಖಲಾಗಿ ಒಂದು ತಿಂಗಳಾದರೂ ಪೊಲೀಸರು ವಿಚಾರಣೆ ನಡೆಸಲಿಲ್ಲ.

    ಖ್ಯಾತ ನಟ ಧಮೇಂದ್ರ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಹಿಳೆಗೆ ತಂಪು ಪಾನೀಯದಲ್ಲಿ ಮತ್ತು ಬರೋ ಔಷಧಿ ಕುಡಿಸಿ, ಆಕೆಯ ಜೊತೆಯಿದ್ದ ಅಶ್ಲೀಲ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದಕ್ಕೆ ಧರ್ಮೇಂದ್ರ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದರು.

    ದೂರು ದಾಖಲಾಗಿ ಒಂದು ತಿಂಗಳಾದರೂ ಪೊಲೀಸರು ವಿಚಾರಣೆ ನಡೆಸಲಿಲ್ಲ. ಅಲ್ಲದೇ ಧರ್ಮನನ್ನು ಬಂಧಿಸದಂತೆ ಪೊಲೀಸರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ತನ್ನನ್ನು ಬಂಧಿಸದಂತೆ ಧರ್ಮ ಪ್ರಭಾವಿಗಳಿಂದ ಒತ್ತಡ ತರುತ್ತಿದ್ದಾರೆ. ಹಾಗಾಗಿ ಪೊಲೀಸರು ದೂರು ದಾಖಲಾದ ಬಳಿಕ ಧರ್ಮ ಪರಾರಿಯಾಗಿದ್ದಾನೆ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‍ವುಡ್ ನಟ ಧರ್ಮೇಂದ್ರ ವಿರುದ್ಧ ದೂರು ದಾಖಲಿಸಿದ ಸಂತ್ರಸ್ತೆ

    ಏನಿದು ಘಟನೆ?
    ಧರ್ಮೇಂದ್ರ ಸಿನಿಮಾದಲ್ಲಿ ಚಾನ್ಸ್ ಕೊಡಿಸೋದಾಗಿ ಮಹಿಳೆಯನ್ನು ಕರೆಸಿಕೊಂಡಿದ್ದ. ಬಳಿಕ ಶೂಟಿಂಗ್ ಕ್ಯಾನ್ಸಲ್ ಆಗಿದೆ ಎಂದು ಹೇಳಿ ಊಟಕ್ಕೆ ಹೋಟೆಲ್‍ಗೆ ಕರೆಸಿಕೊಂಡಿದ್ದಾನೆ. ಆರ್.ಆರ್ ನಗರದ ಹೋಟೆಲ್‍ಗೆ ಕಾರು ಚಾಲಕ ನವೀನ್ ಮೂಲಕ ಮಹಿಳೆಯನ್ನು ಧರ್ಮೇಂದ್ರ ಕರೆಸಿಕೊಂಡಿದ್ದಾನೆ. ಊಟದ ಬಳಿಕ ಧರ್ಮೇಂದ್ರ ಕೂಲ್‍ಡ್ರಿಂಕ್ಸ್ ನಲ್ಲಿ ಮತ್ತು ಬರೋ ಔಷಧಿ ಕುಡಿಸಿದ್ದಾನೆ. ಮಹಿಳೆಯೊಂದಿಗಿದ್ದ ಅಶ್ಲೀಲ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ನಿಮ್ಮ ಕುಟುಂಬಕ್ಕೆ ಈ ವಿಡಿಯೋ ತೋರಿಸೋದಾಗಿ ಬೆದರಿಕೆ ಹಾಕಿ 14 ಲಕ್ಷ ಹಣ ಸುಲಿಗೆ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದರು.

    ಈ ಬಗ್ಗೆ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

     

  • ವಿಮಾನದಲ್ಲಿ ಸಿಕ್ಕ ನಟನಿಗೆ ಸಮೀರ್ ಆಚಾರ್ಯ ಮನವಿ

    ವಿಮಾನದಲ್ಲಿ ಸಿಕ್ಕ ನಟನಿಗೆ ಸಮೀರ್ ಆಚಾರ್ಯ ಮನವಿ

    ಬೆಂಗಳೂರು: ಬಿಗ್ ಬಾಸ್ ಸೀಸನ್- 5 ಸ್ಪರ್ಧಿ ಸಮೀರ್ ಆಚಾರ್ಯ ಅವರು ಇತ್ತೀಚೆಗೆ ವಿಮಾನದಲ್ಲಿ ಕಿಚ್ಚ ಸುದೀಪ್ ಅವರನ್ನು ಆಕಸ್ಮಿಕವಾಗಿ ಭೇಟಿ ಮಾಡಿ ಮಹದಾಯಿಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಸಮೀರ್ ಆಚಾರ್ಯ ತನ್ನ ಪತ್ನಿ ಜೊತೆ ಹೈದರಾಬಾದ್‍ಗೆ ಪ್ರಯಾಣ ಬೆಳೆಸುತ್ತಿದ್ದರು. ಈ ವೇಳೆ ವಿಮಾನದಲ್ಲಿ ಸಮೀರ್ ಆಚಾರ್ಯ, ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೇ ವಿಮಾನದಲ್ಲಿ ಮೂವರು ಒಟ್ಟಿಗೆ ಕುಳಿತುಕೊಂಡು ಪ್ರಯಾಣದುದ್ದಕ್ಕೂ ಮಾತುಕತೆ ನಡೆಸಿದ್ದಾರೆ.

    ವಿಮಾನದಲ್ಲಿ ಸುದೀಪ್ ಜೊತೆ ಪ್ರಯಾಣ ಬೆಳೆಸುವಾಗ ಸಮೀರ್ ಮಹದಾಯಿ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಸುದೀಪ್ ರೈತರಿಗೆ ಸದಾ ನಮ್ಮ ಬೆಂಬಲ ಇರುತ್ತದೆ ಎಂದು ತಿಳಿಸಿದ್ದಾರೆ.

    ಸಮೀರ್ ಬಿಗ್ ಬಾಸ್ ಮನೆಯಲ್ಲಿದ್ದಾಗ ತಮ್ಮ ಊರಿನಲ್ಲಿ ಸ್ವಂತ ಎರಡು ಶಾಲೆಗಳನ್ನು ಆರಂಭ ಮಾಡಬೇಕು ಎಂದು ಹೇಳುತ್ತಿದ್ದರು. ಅಲ್ಲದೇ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಅವರು ರೈತರ ಹಾಗೂ ಸೈನಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆಯನ್ನು ಆರಂಭಿಸಿದ್ದಾರೆ.

    ಸದ್ಯ ಸಮೀರ್ ಆಚಾರ್ಯ ಟಾಲಿವುಡ್ ಕಿರುತೆರೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದಿಂದ ಇಂದು ನನಗೆ ಸಾಕಷ್ಟು ಉಪಯೋಗವಾಗಿದೆ. ನನ್ನ ತಂದೆ, ತಾಯಿ, ಹಾಗೂ ಪತ್ನಿ ಸಹಾಯದಿಂದ ಈ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಸಮೀರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

  • ತನ್ನ ಆತ್ಮಚರಿತ್ರೆಯ ಸಿನಿಮಾದಲ್ಲಿ ಮಿ. ಪರ್ಫೆಕ್ಟ್ ನಟಿಸಬೇಕು: ದ್ರಾವಿಡ್

    ತನ್ನ ಆತ್ಮಚರಿತ್ರೆಯ ಸಿನಿಮಾದಲ್ಲಿ ಮಿ. ಪರ್ಫೆಕ್ಟ್ ನಟಿಸಬೇಕು: ದ್ರಾವಿಡ್

    ಮುಂಬೈ: ಮಾಜಿ ಕ್ರಿಕೆಟಿಗ ಆಲ್ ರೌಂಡರ್ ರಾಹುಲ್ ದ್ರಾವಿಡ್ ತಮ್ಮ ಆತ್ಮಚರಿತ್ರೆ ಸಿನಿಮಾದಲ್ಲಿ ಬಾಲಿವುಡ್ ಮಿ. ಪರ್ಫೆಕ್ಟ್ ಅಮಿರ್ ಖಾನ್ ನಟಿಸಬೇಕೆಂಬ ತಮ್ಮ ಇಚ್ಛೆಯನ್ನು ಹೊರ ಹಾಕಿದ್ದರು.

    ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ರಾಹುಲ್ ಅವರನ್ನು ನಿಮ್ಮ ಆತ್ಮಚರಿತ್ರೆಯಲ್ಲಿ ಯಾವ ನಟ ನಟಿಸಬೇಕೆಂದು ಪ್ರಶ್ನೆಯನ್ನು ಕೇಳಿದ್ದರು. ಆಗ ರಾಹುಲ್ ನಗುತ್ತಾ ಬಾಲಿವುಡ್ ಮಿ. ಪರ್ಫೆಕ್ಟ್ ಅಮಿರ್ ಖಾನ್ ಅವರ ಹೆಸರನ್ನು ಹೇಳಿದ್ದಾರೆ.

    ಇಎಸ್‍ಪಿಎನ್ ಕ್ರಿಕ್ ಇನ್ಫೋದಲ್ಲಿ ರಾಹುಲ್ ಅವರಿಗೆ 25 ಪ್ರಶ್ನೆಗಳನ್ನು ಕೇಳಲಾಗಿತ್ತು. ಆಗ ಅವರ ಬಯೋಪಿಕ್ ಚಿತ್ರದ ಬಗ್ಗೆಯೂ ಪ್ರಶ್ನಿಸಲಾಗಿತ್ತು. ಅಲ್ಲದೇ ತಮ್ಮ ಕ್ರಿಕೆಟ್ ಕೆರಿಯರ್ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿತ್ತು.

    ನೀವು ಇಷ್ಟು ವರ್ಷ ಆಡಿದ ಕ್ರಿಕೆಟ್ ಪಂದ್ಯದಲ್ಲಿ ಯಾವ ಬ್ಯಾಟ್ಸ್‍ಮೆನ್ ಜೊತೆ ಆಡಲು ಇಷ್ಟಪಡುತ್ತಿದ್ದೀರಿ ಎಂದು ಕೇಳಿದ್ದರು. ಆಗ ರಾಹುಲ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರನ್ನು ಹೇಳಿದ್ದರು.

    ಸದ್ಯ ಈಗಾಗಲೇ ಬಾಲಿವುಡ್‍ನಲ್ಲಿ ಮಾಜಿ ನಾಯಕ ಎಂ.ಎಸ್ ಧೋನಿ, ಸಚಿನ್ ತೆಂಡೂಲ್ಕರ್ ಹಾಗೂ ಮೊಹಮದ್ ಅಜರುದ್ದೀನ್ ಅವರ ಆತ್ಮಚರಿತ್ರೆ ಸಿನಿಮಾ ಬಂದಿದೆ.

  • ವೈರಲ್ ಆಯ್ತು ಜಾಕಿ ಶ್ರಾಫ್ ಟ್ರಾಫಿಕ್ ಕ್ಲಿಯರ್: ವಿಡಿಯೋ ನೋಡಿ

    ವೈರಲ್ ಆಯ್ತು ಜಾಕಿ ಶ್ರಾಫ್ ಟ್ರಾಫಿಕ್ ಕ್ಲಿಯರ್: ವಿಡಿಯೋ ನೋಡಿ

    ಲಕ್ನೋ: ಬಾಲಿವುಡ್‍ನ ಹಿರಿಯ ನಟ ಜಾಕಿ ಶ್ರಾಫ್ ರವರು ಸ್ವತಃ ರಸ್ತೆಗಿಳಿದು ಟ್ರಾಫಿಕ್ ಕ್ಲಿಯರ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಬಾಲಿವುಡ್ ನ ಹಿರಿಯ ನಟರಾದ 61 ವರ್ಷದ ಜಾಕಿ ಶ್ರಾಫ್ ರವರು ಲಕ್ನೋ ದ ಜನದಟ್ಟಣೆ ಪ್ರದೇಶದಲ್ಲಿ ಸಂಚಾರ ಪೊಲೀಸರ ರೀತಿ ರಸ್ತೆಗಿಳಿದು ವಾಹನ ದಟ್ಟಣೆಯಿಂದ ಕೂಡಿದ್ದ ರಸ್ತೆಯನ್ನು ಸಂಚಾರಕ್ಕೆ ಮುಕ್ತ ಮಾಡಿ ಅಲ್ಲಿಂದ ತಮ್ಮ ಕಾರನ್ನು ಏರಿ ತೆರಳಿದ್ದಾರೆ.

    ಈ ವಿಡಿಯೋವನ್ನು ಜಾಕಿ ಶ್ರಾಫ್ ಕಾರಿನಲ್ಲಿದ್ದವರು ಸೆರೆ ಹಿಡಿದಿದ್ದು, ನಂತರ ಜಾಕಿಶ್ರಾಫ್ ರವರು ತಮ್ಮ ಟ್ವಿಟ್ಟರ್ ನಲ್ಲಿ ಲಕ್ನೋ ಟ್ರಾಫಿಕ್ ಕಂಟ್ರೋಲ್ ಎಂದು ಬರೆದು ತಮ್ಮ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ನಟ ಜಾಕಿ ಶ್ರಾಫ್ ರವರ ಸಾಮಾಜಿಕ ಕಳಕಳಿಗೆ ಲಕ್ಷಾಂತರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

     

  • ಸ್ಯಾಂಡಲ್‍ವುಡ್ ಬಾಸ್ ಹೆಸರಲ್ಲಿ 10 ಕೋಟಿ ರೂ. ವಂಚನೆ!

    ಸ್ಯಾಂಡಲ್‍ವುಡ್ ಬಾಸ್ ಹೆಸರಲ್ಲಿ 10 ಕೋಟಿ ರೂ. ವಂಚನೆ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹಾಯಕ ಕಾರ್ಯದರ್ಶಿ 10 ಕೋಟಿ ರೂ. ಸಾಲ ಮಾಡಿ ಪರಾರಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಮಲ್ಲಿ ಅಲಿಯಾಸ್ ಮಲ್ಲಿಕಾರ್ಜುನ್ ಬಿ ಸಂಕನಗೌಡರ್ ನಾಪತ್ತೆಯಾದ ಸಹಾಯಕ ಕಾರ್ಯದರ್ಶಿ. ನಟ ದರ್ಶನ್ ಹೆಸರು ಹೇಳಿಕೊಂಡು ಮಲ್ಲಿಕಾರ್ಜುನ್ ವಿವಿಧ ಕಡೆಗಳಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡುತ್ತಿದ್ದರು ಎನ್ನುವ ಆರೋಪ ಇವರ ಮೇಲಿದೆ.

    ದರ್ಶನ್ ಸಹೋದರ ದಿನಕರ್ ಅವರನ್ನು ಮಲ್ಲಿಕಾರ್ಜುನ್ ಪರಿಚಯ ಮಾಡಿಕೊಂಡಿದ್ದರು. ಇದಾದ ಕೆಲವು ದಿನಗಳ ನಂತರ ದರ್ಶನ್ ಅವರಿಗೆ ಹತ್ತಿರವಾಗಿದ್ದರು. ಅಷ್ಟೇ ಅಲ್ಲದೆ ಅವರ ಹಣಕಾಸಿನ ವ್ಯವಹಾರನ್ನು ನೋಡಿಕೊಳ್ಳುತ್ತಿದ್ದರು. ಅನೇಕ ವರ್ಷಗಳಿಂದ ದರ್ಶನ್ ಅವರನ್ನು ಸಂಪರ್ಕಿಸಲು ಮಲ್ಲಿಕಾರ್ಜುನ್ ಅವರಿಂದ ಮೊದಲು ಒಪ್ಪಿಗೆ ಪಡೆಯಬೇಕಾಗಿತ್ತು. ಹೀಗಾಗಿ ದರ್ಶನ್ ಅವರ ಹೆಸರಿನ ಬಲದಿಂದಲೇ ಮಲ್ಲಿಕಾರ್ಜುನ್ ಬರೋಬ್ಬರಿ 10 ಕೋಟಿ ರೂ. ಸಾಲ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

    ಈ ವಿಚಾರದ ಬಗ್ಗೆ ದರ್ಶನ್ ಸಹೋದರ ದಿನಕರ್ ತೂಗುದೀಪ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಏನು ವಂಚನೆ ನಡೆದಿದೆ ಗೊತ್ತಿಲ್ಲ. ದರ್ಶನ್‍ಗೆ ಆರ್ಥಿಕ ಸಮಸ್ಯೆ ಇದೆ ಎಂದರೆ ಹಣ ನೀಡುವ ಮೊದಲು ದರ್ಶನ್ ಅವರನ್ನೇ ಸಂಪರ್ಕಿಸಬೇಕು. ಯಾರು ಈ ರೀತಿ ಆರೋಪ ಮಾಡುತ್ತಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. 10 ದಿನಗಳ ಹಿಂದೆ ನನ್ನ ಜೊತೆ ಮಾತನಾಡಿದ್ದಾಗ ನಾನು ಕಷ್ಟದಲ್ಲಿದ್ದೇನೆ ಎಂದು ಹೇಳಿದ್ದರು. ಈಗ ನಾನು ಅವರಿಗೆ ಫೋನ್ ಮಾಡಿದ್ದರೂ ಸ್ವಿಚ್ ಆಫ್ ಆಗಿದೆ. ಈ ವಿಚಾರದಲ್ಲಿ ದರ್ಶನ್ ಹೆಸರು ಯಾಕೆ ಬಂತು ಎನ್ನುವುದೇ ತಿಳಿಯುತ್ತಿಲ್ಲ ಎಂದು ಅವರು ಹೇಳಿದರು.

     

  • ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಬೆಳಗಾವಿಯಿಂದ ಅಭಿಮಾನಿ ಸೈಕಲ್ ಯಾತ್ರೆ!

    ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಬೆಳಗಾವಿಯಿಂದ ಅಭಿಮಾನಿ ಸೈಕಲ್ ಯಾತ್ರೆ!

    ಬೆಳಗಾವಿ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇದೇ ಜುಲೈ 12ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಲು ಕುಂದಾ ನಗರಿ ಬೆಳಗಾವಿಯಿಂದ ಅಭಿಮಾನಿಯೊಬ್ಬರು ಸೈಕಲ್ ಯಾತ್ರೆ ಆರಂಭಿಸಿದ್ದಾರೆ.

    ಭಾನುವಾರ ಬೆಳಗಾವಿ ಚನ್ನಮ್ಮ ವೃತ್ತದಿಂದ ಫಕೀರಪ್ಪ ಯಾತ್ರೆ ಆರಂಭಿಸಿದ್ದರು. ಕಳೆದ ಮೂರು ವರ್ಷಗಳಿಂದ ಸೈಕಲ್ ಯಾತ್ರೆ ನಡೆಸುತ್ತಿರುವ ಫಕೀರಪ್ಪ ಈ ಬಾರಿ ಕೂಡ ಇದನ್ನು ಮುಂದುವರಿಸಿದ್ದಾರೆ. ಇನ್ನೂ ಯಾತ್ರೆ ಬಳಸುತ್ತಿರುವ ಸೈಕಲ್ ಮೇಲೆ ಶಿವರಾಜ್ ಕುಮಾರ್ ಅಭಿನಯದ ಎಲ್ಲಾ ಚಿತ್ರಗಳ ಹೆಸರನ್ನು ಬರೆಸಿದ್ದಾರೆ.

    ಈ ಬಾರಿಯು ತಮ್ಮ ನೆಚ್ಚಿನ ನಟ ಶಿವರಾಜ್‍ಕುಮಾರ್ ಹುಟ್ಟು ಹಬ್ಬಕ್ಕೆ ಹೋಗಿ ವಿಶ್ ಮಾಡುವ ಉದ್ದೇಶ ಹೊಂದಿದ್ದಾರೆ.