Tag: ನಟ

  • ಯಾವುದೇ ಬೆದರಿಕೆ ಕರೆ ನನಗೆ ಬಂದಿಲ್ಲ- ರಾಕಿಂಗ್ ಸ್ಟಾರ್

    ಯಾವುದೇ ಬೆದರಿಕೆ ಕರೆ ನನಗೆ ಬಂದಿಲ್ಲ- ರಾಕಿಂಗ್ ಸ್ಟಾರ್

    -ನನ್ನನ್ನು ಯಾರೂ ಏನೂ ಮಾಡಕ್ಕಾಗಲ್ಲ

    ಬೆಂಗಳೂರು: ಇಂದು ಬೆಳಗ್ಗೆಯಿಂದ ಕೆಲವು ಸುದ್ದಿಗಳು ಬಿತ್ತರವಾಗುತ್ತಿದ್ದು, ಕೆಲವರು ಅನಾವಶ್ಯಕವಾಗಿ ನನ್ನ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬಂಧಿತರ ಮೇಲೆ ದಾಖಲಾದ ಎಫ್‍ಐಆರ್ ನ್ನು ನಾನು ನೋಡಿದ್ದು, ಅಲ್ಲಿಯೂ ಕೇವಲ ನಟ ಎಂಬುವುದು ಮಾತ್ರ ಉಲ್ಲೇಖಿಸಲಾಗಿದೆ. ಈ ರೀತಿ ನನ್ನ ಹೆಸರು ಬಳಕೆ ಮಾಡುವುದರಿಂದ ಆಪ್ತರು ಹಾಗೂ ಕುಟುಂಬಸ್ಥರಲ್ಲಿ ಭಯದ ವಾತಾವರಣ ನಿರ್ಮಾಣ ಆಗುತ್ತಿದೆ ಎಂದು ನಟ ಯಶ್ ಬೇಸರ ವ್ಯಕ್ತಪಡಿಸಿದರು.

    ಈ ಸಂಬಂಧ ನಾನು ಗೃಹಸಚಿವ ಎಂ.ಬಿ.ಪಾಟೀಲ್ ಜೊತೆ ಮಾತನಾಡಿದ್ದು, ಅವರು ಸಹ ಆ ನಟ ನಾನು ಅಲ್ಲ ಎಂಬುವುದನ್ನು ಖಚಿತ ಪಡಿಸಿದ್ದಾರೆ. ನಟನೊಬ್ಬನ ಕೊಲೆಗೆ ಸುಪಾರಿ ನೀಡುವಂತಹ ಕಲಾವಿದರು ನಮ್ಮ ಇಂಡಸ್ಟ್ರಿಯಲ್ಲಿ ಇಲ್ಲ. ಈ ರೀತಿಯ ಸ್ಟೋರಿಗಳಿಂದ ಚಂದನವನದ ವಾತಾವರಣ ಹಾಳಾಗುತ್ತದೆ. ಇಂದು ಬೆಳಗ್ಗೆ ನನಗೆ ನೂರಾರು ಕರೆಗಳು ಬರುತ್ತಿವೆ. ನನ್ನ ಮೇಲಿನ ಕಾಳಜಿಯಿಂದ ಸುದ್ದಿಗಳು ಬಿತ್ತರವಾಗುತ್ತಿವೆ ಎಂದರು.

    ನನಗೆ ಯಾವುದೇ ಬೆದರಿಕೆ ಕರೆಗಳು ಬಂದಿಲ್ಲ. ಪದೇ ಪದೇ ನನ್ನ ಹೆಸರುಗಳನ್ನು ತೇಲಿ ಬಿಡಲಾಗುತ್ತಿದೆ. ನಮಗೆ ಲಭ್ಯವಿರುವ ಮಾಹಿತಿಯ ಮೇಲೆ ಸುದ್ದಿ ಬಿತ್ತರವಾಗಿದೆ ಎಂದು ಹೇಳುತ್ತಿದ್ದಾರೆ. ನನ್ನನ್ನು ಯಾರೂ ಏನು ಮಾಡೋದಕ್ಕೆ ಆಗಲ್ಲ. ನನ್ನ ಹತ್ಯೆ ವಿಚಾರ ಕೇವಲ ಊಹಾಪೋಹ. ಸಿಸಿಬಿ ಡಿಜಿಪಿ ಅಲೋಕ್ ಕುಮಾರ್ ಜೊತೆ ಎರಡು ಗಂಟೆ ಮೊದಲು ಮಾತನಾಡಿದ್ದು, ಇದೊಂದು ಇಂಡಸ್ಟ್ರಿಯ ನಿರ್ಮಾಪಕರ ಜಗಳ ಎಂದು ವೈಯಕ್ತಿಕವಾಗಿ ಹೇಳಿದರು. ಈ ಪ್ರಕರಣದಲ್ಲಿ ಯಾವ ಸ್ಟಾರ್ ಕಲಾವಿದರು ಇಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ ಎಂದು ತಿಳಿಸಿದರು.

    ಏನಿದು ಪ್ರಕರಣ?
    ಕನ್ನಡ ನಟರೊಬ್ಬರನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಲಾಗಿತ್ತು. ಶೇಷಾದ್ರಿಪುರಂನ ನಿತೇಶ್, ನಿತ್ಯಾನಂದ, ವಿಜಯನಗರದ ಮಧು ಹಾಗೂ ಪಿಜಿಹಳ್ಳಿಯ ಪೃಥ್ವಿ ಬಂಧಿತ ಆರೋಪಿಗಳು. ಸಿಸಿಬಿ ಪೊಲೀಸರು ಶೇಷಾದ್ರಿಪುರಂ ಠಾಣೆಯ ಬಿಡಿಎ ಕಚೇರಿ ಬಳಿ ಆರೋಪಿಗಳನ್ನ ಬಂಧಿಸಲಾಗಿತ್ತು. ಆದ್ರೆ ಯಾವ ಸ್ಟಾರ್ ನಟನನ್ನು ಹತ್ಯೆ ಮಾಡಲು ಸುಪಾರಿ ನೀಡಲಾಗಿತ್ತು ಎಂಬುದನ್ನು ಪೊಲೀಸರು ಬಹಿರಂಗಗೊಳಿಸರಿಲಿಲ್ಲ.

    ಮಾರ್ಚ್ 7 ರಂದು ಎಸಿಪಿ ಬಾಲರಾಜ್ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ಆರೋಪಿಗಳನ್ನ ಬಂಧಿಸಿ, ನಾಲ್ವರ ಬಳಿಯೂ ಲಾಂಗು ಮತ್ತು ಡ್ರಾಗರ್ ಸೇರಿ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಸಿಬಿ ದಾಳಿ ವೇಳೆ ಐದು ಮಂದಿ ಸ್ಥಳದಲ್ಲಿದ್ದು, ಓರ್ವ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳೆಲ್ಲ ಸ್ಲಂ ಭರತನ ಸಹಚರರು ಎಂದು ಗುರುತಿಸಲಾಗಿದೆ.

    ಭರತ ಯಾರು?
    ಸ್ಲಂ ಭರತ ರಾಜಗೋಪಾಲನಗರ ಠಾಣೆ ರೌಡಿಶೀಟರ್ ಆಗಿದ್ದು, ಕೊಲೆ ಮತ್ತು ಕೊಲೆಯತ್ನ ಸೇರಿ ಸುಮಾರು 30ಕ್ಕೂ ಹೆಚ್ಚು ಕೇಸ್ ಭರತನ ಮೇಲೆ ದಾಖಲಾಗಿದೆ. ಎಡರು ದಿನಗಳ ಹಿಂದೆಯಷ್ಟೆ ಕೊಲೆಯಾಗಿ ರೌಡಿ ಲಕ್ಷ್ಮಣನ ಶಿಷ್ಯನೇ ಈ ಸ್ಲಂ ಭರತ ಎಂದು ತಿಳಿದು ಬಂದಿದೆ. ಕನ್ನಡದ ನಟರೊಬ್ಬರ ಹತ್ಯೆಗೆ ಸುಪಾರಿ ಪಡೆದಿದ್ದಾಗಿ ಸ್ಲಂ ಭರತ ಹೇಳಿಕೊಂಡಿದ್ದನು. ಈ ವಿಚಾರವನ್ನ ಬಾರ್‍ವೊಂದರಲ್ಲಿ ತನ್ನ ಸಹಚರರ ಜೊತೆ ಚರ್ಚಿಸಿದ್ದು, ಕನ್ನಡದ ನಟನ ಹತ್ಯೆಗೆ ಸ್ಲಂ ಭರತ ಸಿದ್ಧತೆ ನಡೆಸಿರುವುದು ಪೊಲೀಸರಿಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸ್ಲಂ ಭರತನ ಕಾಲಿಗೆ ಗುಂಡು ಹಾರಿಸಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಸದ್ಯಕ್ಕೆ ಪರಪ್ಪನ ಅಗ್ರಹಾರದಲ್ಲಿ ಸ್ಲಂ ಭರತ ಇದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕನ್ನಡ ನಟನ ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪಿಗಳು ಅಂದರ್

    ಕನ್ನಡ ನಟನ ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪಿಗಳು ಅಂದರ್

    ಬೆಂಗಳೂರು: ಕನ್ನಡ ನಟರೊಬ್ಬರನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಶೇಷಾದ್ರಿಪುರಂನ ನಿತೇಶ್, ನಿತ್ಯಾನಂದ, ವಿಜಯನಗರದ ಮಧು ಹಾಗೂ ಪಿಜಿಹಳ್ಳಿಯ ಪೃಥ್ವಿ ಬಂಧಿತ ಆರೋಪಿಗಳು. ಸಿಸಿಬಿ ಪೊಲೀಸರು ಶೇಷಾದ್ರಿಪುರಂ ಠಾಣೆಯ ಬಿಡಿಎ ಕಚೇರಿ ಬಳಿ ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‍ವುಡ್ ಸ್ಟಾರ್ ನಟನ ಹತ್ಯೆಗೆ ನಡೆದಿತ್ತು ಪ್ಲಾನ್..!

    ಕಳೆದ ಗುರುವಾರ ಅಂದರೆ ಮಾರ್ಚ್ 7 ರಂದು ಎಸಿಪಿ ಬಾಲರಾಜ್ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದರು. ಬಂಧಿತ ನಾಲ್ವರ ಬಳಿಯೂ ಲಾಂಗು ಮತ್ತು ಡ್ರಾಗರ್ ಸೇರಿ ಮಾರಕಾಸ್ತ್ರಗಳು ಪತ್ತೆಯಾಗಿವೆ. ಸಿಸಿಬಿ ದಾಳಿ ವೇಳೆ ಐದು ಮಂದಿ ಸ್ಥಳದಲ್ಲಿದ್ದು, ಓರ್ವ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳೆಲ್ಲ ಸ್ಲಂ ಭರತನ ಸಹಚರರು ಎಂದು ಗುರುತಿಸಲಾಗಿದೆ.

    ಸ್ಲಂ ಭರತ ಪಡೆದಿದ್ದ ಸುಪಾರಿಯನ್ನ ತೀರಿಸಲು ಈ ನಾಲ್ವರು ಆರೋಪಿಗಳು ಮುಂದಾಗಿದ್ದರು. ಸಿಸಿಬಿ ಎಸಿಪಿ ಬಾಲರಾಜ್ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಈ ವೇಳೆ ನಟನೊಬ್ಬನನ್ನ ಹತ್ಯೆ ಮಾಡಲು ಸಿದ್ಧತೆ ನಡೆಸಿ ಬಂದಿದ್ದಾಗಿ ಸಿಸಿಬಿ ಅಧಿಕಾರಿಗಳ ಮುಂದೆ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಆದರೆ ಪೊಲೀಸರು ಸದ್ಯಕ್ಕೆ ಮಾತ್ರ ಸ್ಟಾರ್ ನಟ ಯಾರು ಎಂಬುದನ್ನು ರಿವೀಲ್ ಮಾಡಿಲ್ಲ.

    ಭರತ ಯಾರು?
    ಸ್ಲಂ ಭರತ ರಾಜಗೋಪಾಲನಗರ ಠಾಣೆ ರೌಡಿಶೀಟರ್ ಆಗಿದ್ದು, ಕೊಲೆ ಮತ್ತು ಕೊಲೆಯತ್ನ ಸೇರಿ ಸುಮಾರು 30ಕ್ಕೂ ಹೆಚ್ಚು ಕೇಸ್ ಭರತನ ಮೇಲೆ ದಾಖಲಾಗಿದೆ. ಎಡರು ದಿನಗಳ ಹಿಂದೆಯಷ್ಟೆ ಕೊಲೆಯಾಗಿ ರೌಡಿ ಲಕ್ಷ್ಮಣನ ಶಿಷ್ಯನೇ ಈ ಸ್ಲಂ ಭರತ ಎಂದು ತಿಳಿದು ಬಂದಿದೆ. ಕನ್ನಡದ ನಟರೊಬ್ಬರ ಹತ್ಯೆಗೆ ಸುಪಾರಿ ಪಡೆದಿದ್ದಾಗಿ ಸ್ಲಂ ಭರತ ಹೇಳಿಕೊಂಡಿದ್ದನು.

    ಈ ವಿಚಾರವನ್ನ ಬಾರ್ ವೊಂದರಲ್ಲಿ ತನ್ನ ಸಹಚರರ ಜೊತೆ ಚರ್ಚಿಸಿದ್ದು, ಕನ್ನಡದ ನಟನ ಹತ್ಯೆಗೆ ಸ್ಲಂ ಭರತ ಸಿದ್ಧತೆ ನಡೆಸಿರುವುದು ಪೊಲೀಸರಿಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸ್ಲಂ ಭರತನ ಕಾಲಿಗೆ ಗುಂಡು ಹಾರಿಸಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಸದ್ಯಕ್ಕೆ ಪರಪ್ಪನ ಅಗ್ರಹಾರದಲ್ಲಿ ಸ್ಲಂ ಭರತ ಇದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯದಿಂದ ಸ್ಪರ್ಧೆ ಖಚಿತ – ಸುಮಕ್ಕನ ಬಗ್ಗೆ ಮಾತನಾಡಲ್ಲ ಅಂದ್ರು ನಿಖಿಲ್

    ಮಂಡ್ಯದಿಂದ ಸ್ಪರ್ಧೆ ಖಚಿತ – ಸುಮಕ್ಕನ ಬಗ್ಗೆ ಮಾತನಾಡಲ್ಲ ಅಂದ್ರು ನಿಖಿಲ್

    ಮಂಡ್ಯ: ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸುವುದು ಖಚಿತ ಎಂದು ನಟ ನಿಖುಲ್ ಕುಮಾರಸ್ವಾಮಿ ಅವರು ಒಪ್ಪಿಕೊಂಡಿದ್ದು, ಆದ್ರೆ ಸುಮಲತಾ ಅಂಬರೀಶ್ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಹೀಗಾಗಿ ಅವರ ಸ್ಪರ್ಧೆ ಬಗ್ಗೆ ನಾನು ಮಾತನಾಡಲ್ಲ ಎಂದು ಹೇಳಿದ್ದಾರೆ.

    ಮದ್ದೂರಿನ ಬಳಿ ಬಸ್ ಉರುಳಿ 50 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ಅವರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಿಮ್ಸ್ ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು, ರಾಷ್ಟ್ರಾಧ್ಯಕ್ಷರು ಸೇರಿದಂತೆ ಎಲ್ಲರು ಕುಳಿತು ತೀರ್ಮಾನ ಮಾಡಿದ್ದಾರೆ. ನನಗೆ ಟಿಕೆಟ್ ಕೊಡಲು ಪಕ್ಷ ತೀರ್ಮಾನ ಮಾಡಿದೆ. ನಾನು ನನ್ನ ಸೇವೆ ಮಾಡುತ್ತೇನೆ ಎಂದು ತಿಳಿಸಿದ್ರು.

    ಇದೇ ವೇಳೆ ಮೈಸೂರಿನಿಂದ ಸ್ಪರ್ಧೆ ಮಾಡುತ್ತಾರೆ ಎಂದು ತಮ್ಮ ಬಗ್ಗೆ ಕೇಳಿ ಬಂದ ಊಹಾಪೋಹವನ್ನು ನಿಖಿಲ್ ನಿರಾಕರಿಸಿದ್ರು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದೆ. ಕಾಂಗ್ರೆಸ್‍ನವರ ಜೊತೆ ಮಾತನಾಡುತ್ತೇನೆ. ದೊಡ್ಡವರು ಕೂಡ ಕುಳಿತು ಮಾತನಾಡ್ತಾರೆ. ಹೀಗಾಗಿ ಕಾಂಗ್ರೆಸ್‍ನವರು ನನಗೆ ಸಪೋರ್ಟ್ ಮಾಡ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.

    ಸುಮಲತಾ ಅವರ ಸ್ಪರ್ಧೆ ಬಗ್ಗೆ ಮಾತನಾಡಿ, ಸುಮಕ್ಕನ ಬಗ್ಗೆ ನನಗೆ ಗೌರವವಿದೆ. ಆದರೆ ಅವರ ಸ್ಪರ್ಧೆ ಬಗ್ಗೆ ನಾನು ಮಾತನಾಡಲ್ಲ. ಸುಮಲತಾ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಅಭಿ ನನ್ನ ತಮ್ಮನ ರೀತಿ. ಅಂಬರೀಶ್ ಅವರು ನನ್ನನ್ನು ಮಗನ ರೀತಿ ಕಾಣುವವರು. ಅವರ ಬಗ್ಗೆ ತುಂಬಾ ಗೌರವವಿದೆ. ಕುರುಕ್ಷೇತ್ರ ಸಿನಿಮಾ ಚಿತ್ರೀಕರಣದ ವೇಳೆ ಅವರ ಜೊತೆ ತುಂಬಾ ಸಮಯ ಕಳೆದಿದ್ದೇನೆ ಎಂದು ತಿಳಿಸಿದ್ರು.

    ನಿಖಿಲ್ ಸ್ಥಳೀಯರಲ್ಲ ಎಂಬ ಟೀಕೆ ಬಗ್ಗೆ ನಾನು ಮಾತನಾಡಲ್ಲ. ನಾನು ಇಲ್ಲೇ ಇರುತ್ತೇನೆ. ಕಚೇರಿ, ಮನೆ ಮಾಡಿ ಶೀಘ್ರದಲ್ಲೇ ತೊಡಗಿಸಿಕೊಳ್ಳುತ್ತೇನೆ ಎಂದು ತಮ್ಮ ಸ್ಪರ್ಧೆಯನ್ನು ಅಧಿಕೃತಗೊಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬಿಜೆಪಿ ವಿರುದ್ಧ ನಟ ಪವನ್ ಕಲ್ಯಾಣ್ ಅಚ್ಚರಿಯ ಹೇಳಿಕೆ

    ಬಿಜೆಪಿ ವಿರುದ್ಧ ನಟ ಪವನ್ ಕಲ್ಯಾಣ್ ಅಚ್ಚರಿಯ ಹೇಳಿಕೆ

    ಆಂಧ್ರಪ್ರದೇಶ: ಲೋಕಸಭಾ ಚುನಾವಣೆಗೂ ಮುನ್ನ ಯುದ್ಧ ನಡೆಯುತ್ತದೆ ಎಂದು ಬಿಜೆಪಿ ನನಗೆ ಹೇಳಿತ್ತು ಅಂತಾ ನಟ ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

    ಕಡಪ ಜಿಲ್ಲೆಯಲ್ಲಿ ಪಕ್ಷದ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ನಾನು ನಿಮಗೆ 2 ವರ್ಷದ ಹಿಂದೆಯೇ ಯುದ್ಧ ನಡೆಯುವ ಬಗ್ಗೆ ಹೇಳಿದ್ದೆ. ದೇಶದಲ್ಲಿ ಎಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ನೀವೇ ಅರ್ಥ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ.

    ಪುಲ್ವಾಮಾ ದಾಳಿಯಿಂದ ಭಾರತ-ಪಾಕ್ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಸಮಸ್ಯೆಗೆ ಯುದ್ಧವೊಂದೇ ಪರಿಹಾರವಲ್ಲ. ಯುದ್ಧವಾದ್ರೆ ಉಭಯ ರಾಷ್ಟ್ರಗಳಿಗೆ ಅಪಾರ ಹಾನಿಯಾಗಲಿದೆ ಅಂದಿದ್ದಾರೆ.

    ದೇಶದಲ್ಲಿ ಬಿಜೆಪಿಯವರು ತಾವು ಮಾತ್ರ ದೇಶಪ್ರೇಮಿಗಳು ಅನ್ನೋ ರೀತಿ ವರ್ತಿಸ್ತಿದ್ದಾರೆ. ನಾವು ಬಿಜೆಪಿಗಿಂತ 10 ಪಟ್ಟು ದೇಶಾಭಿಮಾನಿಗಳು ಎಂದು ಬಿಜೆಪಿ ವಿರುದ್ಧ ಸಿಡಿಮಿಡಿಗೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಸ್, ಲೀಕ್ ಆಗಿರೋ ಬೆತ್ತಲೆ ಫೋಟೋ ನನ್ನದೆ: ನಟ ಅಲಿ ಫಜಲ್

    ಯಸ್, ಲೀಕ್ ಆಗಿರೋ ಬೆತ್ತಲೆ ಫೋಟೋ ನನ್ನದೆ: ನಟ ಅಲಿ ಫಜಲ್

    ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿರುವ ಬೆತ್ತಲೆ ಫೋಟೋ ನನ್ನದೆ ಎಂದು ಬಾಲಿವುಡ್ ನಟ ಅಲಿ ಫಜಲ್ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಇನ್ಸ್ ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡು ನಟ ಸ್ಪಷ್ಟನೆ ನೀಡಿದ್ದಾರೆ.

    ತಮ್ಮ ಫೋಟೋ ಲೀಕ್ ಮಾಡಿದವರದ್ದು ಕೀಳುಮಟ್ಟದ ಯೋಚನೆ, ಅಸಹ್ಯಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ವಾರದಿಂದ ನಟನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸುನಾಮಿಯಂತೆ ಸದ್ದು ಮಾಡಿತ್ತು. ಅಲಿ ಫೈಜಲ್ ಎಲ್ಲಿಯೂ ತಮ್ಮ ಫೋಟೋಗಳ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆಯನ್ನು ಸಹ ನೀಡಿರಲಿಲ್ಲ. ಅಭಿಮಾನಿಗಳು ಇದೊಂದು ಎಡಿಟ್ ಮಾಡಲ್ಪಟ್ಟ ಫೋಟೋ ಎಂದು ವಾದಿಸಿದ್ರೆ, ಮತ್ತೆ ಕೆಲವರು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ತಮ್ಮ ನಟನಲ್ಲಿ ಮನವಿ ಮಾಡಿಕೊಂಡಿದ್ದರು.

    ಅಲಿ ಫಜಲ್ ಹೇಳಿದ್ದೇನು?
    ಲೀಕ್ ಆಗಿರುವ ಫೋಟೋ ನನ್ನದೆ. ಈ ಕುರಿತು ಹೆಚ್ಚು ಮಾತನಾಡಲು ಮತ್ತು ನನ್ನನ್ನು ನಾನು ಸಮರ್ಥಿಸಿಕೊಳ್ಳಲು ಇಷ್ಟಪಡಲ್ಲ. ನನ್ನ ನ್ಯೂಡ್ ಫೋಟೋ ಹೇಗೆ ಲೀಕ್ ಆಯ್ತು ಎಂಬುದು ನನಗೆ ಗೊತ್ತಾಗುತ್ತಿಲ್ಲ. ಇದೊಂದು ಚೀಪ್ ಮೆಂಟಾಲಿಟಿಯಾಗಿದ್ದು, ಲೀಕ್ ಮಾಡಿರುವವರ ಅಸಹ್ಯ ಆಗುತ್ತಿದೆ. ಸದ್ಯಕ್ಕೆ ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹ ನನಗೆ ಬೇಕು. ಸರಿಯಾದ ಸಮಯ ಬಂದಾಗ ಈ ಘಟನೆ ಸವಿವರವಾಗಿ ಎಲ್ಲರಿಗೂ ಹೇಳುತ್ತೇನೆ ಎಂದು ಮಾತು ಕೊಡುತ್ತೇನೆ ಎಂದು ಹೇಳಿದ್ದಾರೆ.

    2008ರಲ್ಲಿ ‘ದ ಅದರ್ ಎಂಡ್ ಆಫ್‍ದ ಲೈನ್’ ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದರು. ರಾಜ್‍ಕುಮಾರ್ ಹಿರಾನಿ ನಿರ್ದೇಶನದ ‘ಥ್ರಿ ಈಡಿಯಟ್ಸ್’ ಸಿನಿಮಾದಲ್ಲಿ ನಟನೆಗಾಗಿ ಉದಯನ್ಮೋಖ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಫಕ್ರೆ ರಿಟರ್ನ್ ಸಿನಿಮಾ ಅಲಿಗೆ ಹೆಸರು ತಂದುಕೊಟ್ಟ ಸಿನಿಮಾ. ಅಲಿ ನಟನೆಯ `ಮಿಲನ್ ಟಾಕೀಸ್’ ಮಾರ್ಚ್ ನಲ್ಲಿ ಬಿಡುಗಡೆಯಾಗಲಿದೆ.

    https://www.instagram.com/p/BuOXHJ0lNda/?utm_source=ig_embed

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬುದ್ಧಿಜೀವಿಗಳ ವಿರುದ್ಧ ನಟ, ನಿರ್ದೇಶಕ ರಿಷಬ್ ಶೆಟ್ಟಿ ಗರಂ

    ಬುದ್ಧಿಜೀವಿಗಳ ವಿರುದ್ಧ ನಟ, ನಿರ್ದೇಶಕ ರಿಷಬ್ ಶೆಟ್ಟಿ ಗರಂ

    – ಹುತಾತ್ಮ ಯೋಧ ಗುರು ಕುಟುಂಬಕ್ಕೆ ಸಾಂತ್ವಾನ, ಪರಿಹಾರ

    ಮಂಡ್ಯ: ಬುದ್ಧಿ ಜೀವಿಗಳನ್ನು ದೇಶದಿಂದ ಓಡಿಸಿದ್ರೆ ಎಲ್ಲವೂ ಚೆನ್ನಾಗಿರುತ್ತದೆ. ಅವರು ನಾನ್ ಸೆನ್ಸ್ ಮಾಡುತ್ತಿದ್ದಾರೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹುತಾತ್ಮ ಯೋಧ ಗುರು ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬುದ್ಧಿ ಜೀವಿಗಳು ಮಾತುಕತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಅವರನ್ನು ಓಡಿಸಿದ್ರೆ ದೇಶ ಚೆನ್ನಾಗಿರುತ್ತದೆ. ಇದಕ್ಕೆ ತಕ್ಕ ಉತ್ತರ ಕೊಡಬೇಕು. ದೊಡ್ಡ ಮಟ್ಟದ ವಾರ್ ಡಿಕ್ಲೇರ್ ಮಾಡಬೇಕು. ಐಡೆಂಟಿಟಿ ಕ್ರೈಸಿಸ್‍ನಿಂದ ಕೆಲವರು ಮಾತಾಡ್ತಾರೆ. ವಂದೇ ಮಾತರಂ ಅಂದ್ರೆ ಗುಂಡಾಕ್ತಾರೆ. ಪಾಕಿಸ್ತಾನಕ್ಕೆ ಜೈಕಾರ ಕೂಗುವವರಿಗೆ ಹುಚ್ಚು ಹಿಡಿದಿದೆ. ಇದಕ್ಕೆ ಕೆಲವೊಂದು ರಾಜಕಾರಣ ಕಾರಣವಾಗಿದೆ. ಈ ರೀತಿ ಕೂಗಿದ್ರೆ ಗುರುತಿಸಿಕೊಳ್ಳಬಹುದು ಅಂದುಕೊಂಡಿದ್ದಾರೆ. ಅವರನ್ನು ಮಟ್ಟ ಹಾಕಬೇಕು ಎಂದು ವಾಗ್ದಾಳಿ ನಡೆಸಿದ್ರು.

    ಗುರು ಕುಟುಂಬದವರಿಗೆ ಸಮಾಧಾನ ಹೇಳೋದು ಬಿಟ್ಟರೆ ನಮ್ಮ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳೋದಕ್ಕೆ ಹೆಮ್ಮೆಯಾಗುತ್ತಿದೆ. ನಾವಂತೂ ಬಾರ್ಡರ್ ನಲ್ಲಿ ಹೋಗಿ ದೇಶ ಕಾಯೋ ಕೆಲಸ ಮಾಡಿಲ್ಲ. ಇಲ್ಲಿ ಆರಾಮಾಗಿದ್ದೇವೆ. ಅವರು ನಮ್ಮನ್ನು ಕಾಯುತ್ತಿರುವುದರಿಂದ ನಾವು ಆರಾಮವಾಗಿರಲು ಕಾರಣ ಎಂದು ಅವರು ಹೇಳಿದ್ರು. ಇದನ್ನೂ ಓದಿ; ಯೋಧ ಗುರು ಮನೆಗೆ ಹೋಗಿ ತಂದೆಯನ್ನು ನೆನೆದು ಹರಿಪ್ರಿಯಾ ಕಣ್ಣೀರು

    ನಾವೆಲ್ಲ ಹೋಗಿ ನಿಮ್ಮ ಜೊತೆ ಇದ್ದೇವೆ ಅಂದ್ರೆ ಅವರಿಗೂ ಸ್ವಲ್ಪ ಧೈರ್ಯ ಬರುತ್ತದೆ. ಯಾಕಂದ್ರೆ ಅವರಿಗೆ ನನ್ನ ಮಗನನ್ನು ಯಾಕಾದ್ರೂ ಸೇನೆಗೆ ಕಳುಹಿಸಿದೆ ಎಂಬಂತಾಗಬಾರದು. ಹೀಗಾಗಿ ಇಡೀ ದೇಶ, ರಾಜ್ಯ ನಮ್ಮ ಜೊತೆಗಿದೆ ಅನ್ನೋ ಭಾವನೆ ತರಿಸಬೇಕು. ಅವರು ಯಾವತ್ತೂ ಮುಂದೆ ನೊಂದುಕೊಳ್ಳಬಾರದು ಎಂದು ಅವರು ತಿಳಿಸಿದ್ರು. ಇದನ್ನೂ ಓದಿ; ಬುದ್ಧಿಜೀವಿಗಳಿಗೆ ಶಾಸಕ ರಾಜುಗೌಡ ಎಚ್ಚರಿಕೆ

    ನಾನು ಕೂಡ ರಿಕ್ಕಿ ಸಿನಿಮಾದ ಶೂಟಿಂಗ್ ಗೆ ಜಮ್ಮು-ಕಾಶ್ಮೀರಕ್ಕೆ ಹೋಗಿದ್ದೆ. ಅಲ್ಲಿ ಹೋಗಿದ್ದ ನಾನು ಅವರನ್ನು ಗಮನಿಸಿದಂತೆ ಅವರೂ ದಿನದ 24 ಗಂಟೆಯೂ ಅಲರ್ಟ್ ಆಗಿ ಕೆಲಸ ಮಾಡುತ್ತಿದ್ದರು. ಪ್ರತಿಯೊಂದನ್ನು ಚೆಕ್ ಮಾಡುತ್ತಿದ್ದರು. ಅಲ್ಲಿ ಏನೇ ಸ್ವಲ್ಪ ಹೆಚ್ಚು ಕಮ್ಮಿಯಾದ್ರೂ ಅವರ ಗಮನ ಇರುತ್ತಿತ್ತು. ಇದನ್ನೂ ಮೀರಿ ಕೆಲವರು ನಮ್ಮ ದೇಶದ ಒಳಗೆ ನುಗಿ ಇಂತಹ ಹೇಯ ಕೃತ್ಯಗಳನ್ನು ನಡೆಸುತ್ತಾರೆ ಅಂದ್ರೆ ಒಳಗೆನೂ ಅವರಿಗೆ ಬೆಂಬಲ ಇರಬಹುದು ಎಂದು ದೇಶದ್ರೋಹಿಗಳ ವಿರುದ್ಧ ಗರಂ ಆದ್ರು.

    ಗುರು ಇಡೀ ದೇಶದ ಹೆಮ್ಮೆ. ಏನೇ ಸಹಾಯ ಮಾಡಿದ್ರು ನೋವನ್ನು ಬರಿಸಲು ಆಗಲ್ಲ. ಇಡೀ ದೇಶ ಜೊತೆ ಇದೆ ಎಂಬುದನ್ನು ತೋರಿಸಿದ್ರೆ ತಾಯಿಗೆ ಧೈರ್ಯ ಇರುತ್ತೆ. ಪರಿಹಾರ ಕೊಟ್ಟರೆ ನೋವನ್ನು ಬರಿಸಲು ಆಗಲ್ಲ. ನಾನು ನೀಡಿದ ಹಣ ನನ್ನದಲ್ಲ. ಸರ್ಕಾರಿ ಶಾಲೆ ಸಿನಿಮಾ ನೋಡಿ ಜನ ಕೊಟ್ಟ ಹಣ. ಅದನ್ನು ಈ ರೀತಿಯ ಸೇವೆಗೆ ಬಳಸುತ್ತಿದ್ದೇನೆ. ಉಗ್ರರ ಕೃತ್ಯಕ್ಕೆ ತಕ್ಕ ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ರು.

    ಬಳಿಕ ಬೆಲ್‍ಬಾಟಂ ಚಿತ್ರ ತಂಡ ಗುರು ಅವರನ್ನು ಅಂತ್ಯಸಂಸ್ಕಾರ ಮಾಡಿದ ಸ್ಥಳಕ್ಕೆ ಭೇಟಿ ನೀಡಿ ವಂದನೆ ಸಲ್ಲಿಸಿತ್ತು. ಇದೇ ವೇಳೆ ನಟಿ ಹರಿಪ್ರಿಯ ಅವರು ಹುತಾತ್ಮ ಯೋಧ ಗುರು ಮನೆಯವರ ದುಃಖ ನೋಡಿ, ತಂದೆಯ ಸಾವನ್ನು ನೆನೆದು ಕಣ್ಣೀರಿಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೆಟ್‍ನಲ್ಲಿ ಕಿಚ್ಚನನ್ನು ಭೇಟಿ ಮಾಡಿದ ಶ್ರೀಮುರಳಿ

    ಸೆಟ್‍ನಲ್ಲಿ ಕಿಚ್ಚನನ್ನು ಭೇಟಿ ಮಾಡಿದ ಶ್ರೀಮುರಳಿ

    ಹೈದರಾಬಾದ್: ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಹೈದರಾಬಾದ್‍ನ ರಾಮೋಜಿ ಸಿಟಿಯಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರನ್ನು ಭೇಟಿ ಮಾಡಿದ್ದರು. ಮಹೇಶ್ ಬಾಬು ಅವರನ್ನು ಭೇಟಿ ಮಾಡಿದ ನಂತರ ಮುರಳಿ ಅವರು ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ.

    ಶ್ರೀಮುರಳಿ ಅವರು ತಮ್ಮ ಮುಂದಿನ ಚೇತನ್ ಕುಮಾರ್ ನಿರ್ದೇಶನದ ‘ಭರಾಟೆ’ ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್‍ನ ರಾಮೋಜಿ ಫಿಲ್ಮ್ ಸೆಂಟರ್ ಗೆ ಹೋಗಿದ್ದಾರೆ. ಕಿಚ್ಚ ಸುದೀಪ್ ಅವರು ಕೂಡ ತಮ್ಮ ‘ಪೈಲ್ವಾನ್’ ಚಿತ್ರದ ಚಿತ್ರೀಕರಣವನ್ನು ರಾಮೋಜಿ ಸಿಟಿಯಲ್ಲಿ ನಡೆಸುತ್ತಿದ್ದಾರೆ. ಈ ವೇಳೆ ಇಬ್ಬರು ನಟರು ಭೇಟಿ ಆಗಿದ್ದಾರೆ. ಇದನ್ನೂ ಓದಿ: ಟಾಲಿವುಡ್ ಪ್ರಿನ್ಸ್ ಮಹೇಶ್ ಜೊತೆ ರೋರಿಂಗ್ ಸ್ಟಾರ್ ಮುರಳಿ

    ಶ್ರೀಮುರಳಿ ಅವರು ಕಿಚ್ಚ ಸುದೀಪ್ ಹಾಗೂ ನಟಿ ತಾರಾ ಅವರನ್ನು ಭೇಟಿ ಮಾಡಿರುವ ಫೋಟೋಗಳನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. “ಭರಾಟೆ ಸಿನಿಮಾದ ಚಿತ್ರೀಕರಣದ ವೇಳೆ ನನ್ನ ಆತ್ಮೀಯ ಗೆಳೆಯ ಕಿಚ್ಚ ಸುದೀಪ್ ಅವರನ್ನು ‘ಪೈಲ್ವಾನ್’ ಸೆಟ್‍ನಲ್ಲಿ ಭೇಟಿ ಮಾಡಿದೆ. ತುಂಬಾ ದಿನಗಳ ನಂತರ ಅವರನ್ನು ಭೇಟಿ ಮಾಡಿ ಖುಷಿಯಾಯಿತು. ನಾವಿಬ್ಬರು ಖುಷಿಯ ಕ್ಷಣಗಳನ್ನು ಕಳೆದವು. ಇಂದು ಸುದೀಪ್ ಅವರು ಭರಾಟೆ ಸೆಟ್‍ಗೆ ಭೇಟಿ ನೀಡಿದ್ದಾರೆ” ಎಂದು ಶ್ರೀಮುರಳಿ ಟ್ವೀಟ್ ಮಾಡಿದ್ದಾರೆ.

    ಶ್ರೀಮುರಳಿ ಅವರ ಟ್ವೀಟ್‍ಗೆ ಕಿಚ್ಚ ಸುದೀಪ್ ಅವರು, “ನನಗೂ ಯಾವಾಗಲೂ ಖುಷಿ ಆಗುತ್ತದೆ. ಭರಾಟೆ ಚಿತ್ರದ ಟೀಸರ್ ಅದ್ಭುತವಾಗಿ ಕಾಣಿಸುತ್ತದೆ. ಭರಾಟೆ ಚಿತ್ರತಂಡಕ್ಕೆ ಶುಭಾಶಯಗಳು” ಎಂದು ರೀ-ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯ ಮಣ್ಣಲ್ಲಿ `ಸ್ಟಾರ್’ಗಳ ಸಮರ..?

    ಮಂಡ್ಯ ಮಣ್ಣಲ್ಲಿ `ಸ್ಟಾರ್’ಗಳ ಸಮರ..?

    ಮಂಡ್ಯ: ನಟಿ ಸುಮಲತಾ ಅವರು ಮಂಡ್ಯ ಗೌಡ್ತಿ ಅಲ್ಲ ಎಂದು ಎಂಎಲ್‍ಸಿ ಕೆಟಿ.ಶ್ರೀಕಂಠೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೆ ಈ ಬಾರಿಯ ಮಂಡ್ಯ ಲೋಕಸಭಾ ಚುನಾವಣೆ ಸ್ಟಾರ್ ವಾರ್ ಗೆ ವೇದಿಕೆಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.

    ಈಗಾಗಲೇ ಸುಮಲತಾ ಅವರ ಜೊತೆ ಮಾತನಾಡಿರುವ ಕನ್ನಡ, ತೆಲುಗು, ತಮಿಳು ಚಿತ್ರರಂಗ ಸೇರಿದಂತೆ ಭಾರತೀಯ ಚಿತ್ರರಂಗದ ಅಂಬರೀಶ್ ಸ್ನೇಹಿತರು ಮತ್ತು ಹಿತೈಷಿಗಳು, ನೀವು ಚುನಾವಣೆಗೆ ನಿಂತರೆ ನಾವು ನಿಮ್ಮೊಂದಿಗೆ ಇರುತ್ತೇವೆ ಅಂತಿದ್ದಾರಂತೆ. ಮಂಡ್ಯದ ಅಂಬರೀಶ್ ಅಭಿಮಾನಿಗಳೂ ಕೂಡ ಕನ್ನಡ ಚಿತ್ರರಂಗದವರನ್ನು ಭೇಟಿ ಮಾಡಲು ತಯಾರಿ ನಡೆಸಿದ್ದಾರೆ.

    ಇತ್ತ ಜೆಡಿಎಸ್‍ನಿಂದ ನಟ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಖಚಿತ ಎಂದು ಆಪ್ತ ಮೂಲಗಳು ಹೇಳುತ್ತಿವೆ. ಒಂದು ವೇಳೆ ಇಬ್ಬರೂ ಅಭ್ಯರ್ಥಿಯಾದ್ರೆ ಮಂಡ್ಯ ಲೋಕಸಭಾ ಕ್ಷೇತ್ರ ರಾಜಕೀಯವಾಗಿ ಅಷ್ಟೇ ಅಲ್ಲದೇ ಸ್ಟಾರ್ ವಾರ್ ಗೂ ವೇದಿಕೆ ಕಲ್ಪಿಸಿಕೊಡಲಿದೆ. ಇದನ್ನೂ ಓದಿ: ಮಂಡ್ಯದ ನಿಜವಾದ ಮನೆಮಗಳು ಯಾರು? – ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

    ಶ್ರೀಕಂಠೇಗೌಡ ಹೇಳಿದ್ದೇನು..?
    ಸುಮಲತಾ ಎಂದೂ ಕೂಡ ಮಂಡ್ಯದ ಗೌಡ್ತಿ ಅಲ್ಲ. ಮೂಲತಃ ಆಂಧ್ರದವರಾದ ಅವರು ಮಂಡ್ಯದಿಂದ ಹೇಗೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ ಎಂದು ಸುಮಲತಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೆ ಎಂಎಲ್‍ಸಿ ಕೆಟಿ.ಶ್ರೀಕಂಠೇಗೌಡ ಪರೋಕ್ಷವಾಗಿ ಟೀಕಿಸಿದ್ದರು. ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೀಡಾಗಿತ್ತು. ಇದನ್ನೂ ಓದಿ: ಮಂಡ್ಯ ರಾಜಕಾರಣಕ್ಕೆ ಮತ್ತೊಬ್ಬ ಗೌಡ್ತಿ ಎಂಟ್ರಿ?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಖಂಡಿತಾ ಸಿನಿಮಾ ಬಿಡ್ತೀನಿ ಅಂದ್ರು ನಟ ಉಪೇಂದ್ರ..!

    ಖಂಡಿತಾ ಸಿನಿಮಾ ಬಿಡ್ತೀನಿ ಅಂದ್ರು ನಟ ಉಪೇಂದ್ರ..!

    ದಾವಣಗೆರೆ: ಚುನಾವಣೆಗೆ ಸ್ಪರ್ಧಿಸಿ ಗೆದ್ದರೆ ಖಂಡಿತಾ ನಾನು ಸಿನಿಮಾ ಬಿಡ್ತೀನಿ. ಯಾಕಂದ್ರೆ ಅವತ್ತಿನಿಂದ ನಾನು ಪ್ರಜೆಗಳ ಕಾರ್ಮಿಕ ಎಂದು ನಟ, ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳಿವೆ. ಅಲ್ಲದೇ ಈಗಾಗಲೇ ಕೆಲ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದೇನೆ. ಒಂದು ವೇಳೆ ಎಲೆಕ್ಷನ್ ಗೆ ನಿಂತು ಗೆದ್ದರೆ ನನಗೆ ಸಿನಿಮಾ ಮಾಡೋದಿಕೆ ಆಗಲ್ಲ. ನನ್ನ ಸಂಪಾದನೆ, ನನ್ನ ಕೆಲಸ ಎಲ್ಲವೂ ಇಲ್ಲಿರುತ್ತದೆ. ಹೀಗಾಗಿ ಆ ಸಂದರ್ಭದಲ್ಲಿ ಸಿನಿಮಾ ಕೈ ಬಿಡ್ತೀನಿ ಎಂದು ಹೇಳಿದ್ರು.

    ಪ್ರಜಾಕೀಯದಿಂದ ಕಳೆದ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಅಂದುಕೊಂಡಿದ್ದೆವು. ಆದ್ರೆ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಈಗ ನಮ್ಮದೇ ಆದ ಉತ್ತಮ ಪ್ರಜಾಕೀಯ ಪಕ್ಷದ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಗೆ 28 ಕ್ಷೇತ್ರಗಳಿಂದ ಸ್ಪರ್ಧಿಸಬೇಕು ಎಂದು ತುಂಬಾ ಮಂದಿ ಕೇಳಿದ್ದರು. ಹೀಗಾಗಿ ಆ ಕಾರ್ಯದಲ್ಲಿದ್ದೇವೆ ಎಂದು ಅವರು ತಿಳಿಸಿದ್ರು. ಇದನ್ನೂ ಓದಿ: ಸೆಲೆಕ್ಷನ್, ಕರೆಕ್ಷನ್, ರಿಜೆಕ್ಷನ್, ಪ್ರಮೋಷನ್ ಎಲ್ಲ ನಿಮ್ಮದೇ: ಉಪೇಂದ್ರ

    ಈಗಿರುವ ರಾಜಕೀಯ ವ್ಯವಸ್ಥೆ ಸಂಪೂರ್ಣ ತೆಗೆದು ಹಾಕಿ ನಿಜವಾದ ಪ್ರಜಾಪ್ರಭುತ್ವ ಬರಬೇಕು ಎಂದು 5 ತತ್ವಗಳ ಮೇಲೆ ಈ ಪ್ರಜಾಕೀಯ ಪಕ್ಷವನ್ನು ಕಟ್ಟಿದ್ದೇವೆ. ಈ ಚುನಾವಣಾ ಪ್ರಕ್ರಿಯೆ ಹೇಗಿರಬೇಕೆಂದರೆ ಸೆಲೆಕ್ಷನ್, ಕರೆಕ್ಷನ್, ರಿಜೆಕ್ಷನ್ ಹಾಗೂ ಪ್ರಮೋಷನ್ ತತ್ವದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ನಾವು ಯಾವ ಪಕ್ಷದ ಓಟುಗಳನ್ನ ಕೀಳೋದಿಲ್ಲ. ಅಧಿಕಾರಕ್ಕೋಸ್ಕರ ನಾವು ಯಾರ ಜೊತೆನೂ ಸಪೋರ್ಟ್ ಮಾಡಲ್ಲ. ಹೊಸ ವಿಚಾರಕ್ಕೆ ನಮ್ಮ ದೇಶದ ಸಂವಿಧಾನ ಉತ್ತಮವಾಗಿದೆ ಎಂದರು.

    ಹೀಗಾಗಿ ಪ್ರಣಾಳಿಕೆಯನ್ನು ಎರಡು ಭಾಗವಾಗಿ ಮಾಡಿಕೊಂಡಿದ್ದೇವೆ. ಸಾಮಾನ್ಯವಾಗಿ ಪ್ರಣಾಳಿಕೆಯನ್ನು ಸಾಕಷ್ಟು ಭರವಸೆ, ಆಶ್ವಾಸನೆಗಳನ್ನು ಕೊಡುತ್ತಾರೆ. ಅಲ್ಲದೇ ಏನೇನೋ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ವಾಸ್ತವವಾಗಿ ಜನರಿಗೆ ಏನು ಬೇಕು ಅನ್ನೋದು ಗೊತ್ತಿದೆ. ಹೀಗಾಗಿ ಒಂದು ಪ್ರಣಾಳಿಕೆಯನ್ನು ನೀವು ಇಟ್ಟುಕೊಳ್ಳಿ. ಇನ್ನು 2ನೇ ಪ್ರಣಾಳಿಕೆಯನ್ನು ನಮ್ಮ ಅಭ್ಯರ್ಥಿಗಳು ತೆಗೆದುಕೊಂಡು ಬರಬೇಕು. ಯಾಕಂದ್ರೆ ಪ್ರತಿಯೊಬ್ಬ ಅಭ್ಯರ್ಥಿಯೂ ಜನಗಳ ಧ್ವನಿಯಾಗಿರುತ್ತಾರೆ. ಒಟ್ಟಿನಲ್ಲಿ ಒಂದು ಅದ್ಭುತವಾದ ಆಡಳಿತಾತ್ಮಕ ರಚನೆಯನ್ನು ಒಳಗೊಂಡಿದೆ. ಅಲ್ಲಿ ತಜ್ಞರ ಸಮಿತಿ ಇರುತ್ತದೆ. ಹಾಗೆಯೇ ಐಎಎಸ್, ಕೆಎಎಸ್ ಓದಿರೋರು ಇರುತ್ತಾರೆ. ನಿಜವಾದ ಸಮಾಜ ಸೇವೆ ಅಂದರೆ ನನ್ನ ಪ್ರಕಾರ ಪಾಲಿಟಿಕ್ಸ್. ರಾಜಕೀಯ ಇರುವುದೇ ಸಮಾಜ ಸೇವೆಗೋಸ್ಕರವಾಗಿದ್ದು, ಪ್ರತಿಯೊಬ್ಬರು ಸಮಾಜ ಸೇವೆ ಮಾಡುತ್ತಾರೆ ಎಂದು ಅವರು ವಿವರಿಸಿದ್ರು. ಇದನ್ನೂ ಓದಿ: ನಮ್ಮ ಪಕ್ಷದಿಂದ ರಾಜ್ಯದ 28 ಕ್ಷೇತ್ರಗಳಿಂದ ಸ್ಪರ್ಧೆ: ಉಪೇಂದ್ರ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಿರುತೆರೆ ಯುವ ನಟ ನೇಣಿಗೆ ಶರಣು

    ಕಿರುತೆರೆ ಯುವ ನಟ ನೇಣಿಗೆ ಶರಣು

    ಮುಂಬೈ: 28 ವರ್ಷದ ಕಿರುತೆರೆ ಯುವ ನಟ ಬುಧವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

    ರಾಹುಲ್ ಮಹೇಶ್ ದೀಕ್ಷಿತ್ ಆತ್ಮಹತ್ಯೆಗೆ ಶರಣಾಗಿರುವ ಕಿರುತೆರೆ ನಟ. ದೀಕ್ಷಿತ್ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ಎಂದು ದಾಖಲಿಸಿಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

    ಮೃತ ದೀಕ್ಷಿತ್ ಪತ್ನಿ ಪ್ರಿಯಾ ಬುಧವಾರ ಸುಮಾರು 5 ಗಂಟೆಗೆ ಎಚ್ಚರಗೊಂಡಿದ್ದು, ಆಗ ದೀಕ್ಷಿತ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದೀಕ್ಷಿತ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಪ್ರಿಯಾ ವಿಡಿಯೋಗಳನ್ನು ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇತ್ತ ಮೃತ ರಾಹುಲ್ ಅವರ ತಂದೆ ನನ್ನ ಮಗನ ಸಾವಿಗೆ ಪ್ರಿಯಾ ಕಾರಣ ಎಂದು ಆರೋಪಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ದೀಕ್ಷಿತ್ ಸ್ನೇಹಿತರು ಮತ್ತು ನಾವು ಪಾರ್ಟಿ ಮುಗಿಸಿ ಎಲ್ಲರೂ ಮಲಗಿದ್ದೆವು. ನಾನು ದೀಕ್ಷಿತ್ ಒಂದು ರೂಮಿನಲ್ಲಿ ಮಲಗಿದ್ದೆವು. ನನಗೆ ಬೆಳಗ್ಗೆ 5 ಗಂಟೆಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಆಗ ದೀಕ್ಷಿತ್ ಸೀಲಿಂಗ್ ಫ್ಯಾನಿಗೆ ಬೆಡ್ ಶೀಟ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನಾವು ತಕ್ಷಣ ಅವರನ್ನು ಕೊಕಿಲಬೆನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಆದರೆ ಅಷ್ಟರಲ್ಲಿಯೇ ದೀಕ್ಷಿತ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿರುವುದಾಗಿ ದೀಕ್ಷಿತ್ ಪತ್ನಿ ರೂಪಾಲಿ ಹೇಳಿದ್ದಾರೆ.

    ಮೃತ ದೀಕ್ಷಿತ್ ಮೂಲತಃ ಜೈಪುರ ನಿವಾಸಿಯಾಗಿದ್ದು, ಮೂರು ತಿಂಗಳ ಹಿಂದೆ ಮುಂಬೈಗೆ ಬಂದಿದ್ದರು. ಬಳಿಕ ದೀಕ್ಷಿತ್ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಗುರುತಿಸಿಕೊಂಡಿದ್ದರು. ಕಳೆದ ವರ್ಷ ಅಂದರೆ ನವೆಂಬರ್ ತಿಂಗಳಲ್ಲಿ ರೂಪಾಲಿ ಅವರನ್ನು ಮದುವೆಯಾಗಿದ್ದರು. ಮೃತ ದೀಕ್ಷಿತ್ ಮದ್ಯ ಕುಡಿಯುತ್ತಿದ್ದನು. ಇದರಿಂದ ಇಬ್ಬರ ನಡುವೆ ಜಗಳವಾಗುತ್ತಿತ್ತು.

    ಪೊಲೀಸರು ಮೃತ ದೀಕ್ಷಿತ್ ಅವರ ಬೆಡ್ ರೂಮಿನಲ್ಲಿ ಪರಿಶೀಲನೆ ನಡೆಸಿದಾಗ ಎರಡು ಪೇಜ್ ಪತ್ರ ಸಿಕ್ಕಿದೆ. ಅದರಲ್ಲಿ ತಮ್ಮ ಕುಡಿತದ ಅಭ್ಯಾಸದ ಬಗ್ಗೆ ಬರೆದಿದ್ದಾರೆ. ಸದ್ಯಕ್ಕೆ ಕೊಲೆ ಮತ್ತು ಆತ್ಮಹತ್ಯೆ ಸೇರಿದಂತೆ ಎಲ್ಲಾ ರೀತಿಯಲ್ಲೂ ತನಿಖೆ ಮಾಡುತ್ತಿದ್ದೇವೆ. ಈಗಾಗಲೇ ಕುಟುಂಬದ ಸದಸ್ಯರ ಹೇಳಿಕೆಗಳನ್ನು ಸಹ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಕಮಿಷನರ್ ಡಾ. ಮನೋಜ್ ಕುಮಾರ್ ಶರ್ಮಾ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv