Tag: ನಟ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ

  • ಅನ್ನಸಂತರ್ಪಣೆಯೊಂದಿಗೆ `ನಟಸಾರ್ವಭೌಮ’ನಿಗೆ ಅಭಿಮಾನಿಗಳು ಸ್ವಾಗತ

    ಅನ್ನಸಂತರ್ಪಣೆಯೊಂದಿಗೆ `ನಟಸಾರ್ವಭೌಮ’ನಿಗೆ ಅಭಿಮಾನಿಗಳು ಸ್ವಾಗತ

    ಚಿತ್ರದುರ್ಗ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ನಟಸಾರ್ವಭೌಮ ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ನಟ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದಿಂದ ಜಿಲ್ಲೆಯ ಬಸವೇಶ್ವರ ಚಿತ್ರ ಮಂದಿರದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

    ಕೋಟೆನಾಡಿನ ಬಸವೇಶ್ವರ ಚಿತ್ರ ಮಂದಿರದಲ್ಲಿ ತೆರೆಕಂಡಿರೋ ನಟಸಾರ್ವಭೌಮ ಚಿತ್ರ ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಬೆಳ್ಳಂಬೆಳಗ್ಗೆ ಅನ್ನಸಂತರ್ಪಣೆ ಏರ್ಪಡಿಸಿ ಅಭಿಮಾನಿಗಳು ನಟಸಾರ್ವಭೌಮನಿಗೆ ವಿನೂತವಾಗಿ ಸ್ವಾಗತ ಕೋರಿದ್ದಾರೆ. ಮೊದಲ ಶೋಗೆ ಚಿತ್ರಮಂದಿರ ಮುಂದೆ ಅಪ್ಪು ಫ್ಯಾನ್ಸ್ ಕಿಕ್ಕಿರಿದು ಸೇರಿದ್ದಾರೆ. ಅಪ್ಪು ಬೃಹತ್ ಕಟೌಟ್ ಮುಂದೆ ಕುಂಬಳಕಾಯಿ ಒಡೆದು, ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ ನಟಸಾರ್ವಭೌಮನನ್ನು ಅಭಿಮಾನಿಗಳು ಭರ್ಜರಿಯಾಗಿ ಬರ ಮಾಡಿಕೊಂಡಿದ್ದಾರೆ.

    ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನಟಸಾರ್ವಭೌಮನಾಗಿ ನೋಡಲು ಬಹು ದಿನಗಳಿಂದ ಕಾತುರದಿಂದ ಕಾದು ಕುಳಿತಿದ್ದರು. ಬೆಳ್ಳಂಬೆಳಗ್ಗೆ 5 ಗಂಟೆಗೆ ಚಿತ್ರಮಂದಿರದ ಬಳಿ ಅಪ್ಪು ಅಭಿಮಾನಿಗಳು ಜಮಾಯಿಸಿದ್ದು, ಈಗಾಗಲೇ 7 ಗಂಟೆಯಿಂದ ಬಸವೇಶ್ವರ ಚಿತ್ರ ಮಂದಿರದಲ್ಲಿ ಮೊದಲ ಶೋ ಆರಂಭವಾಗಿದೆ. ಅಭಿಮಾನಿಗಳು ಚಿತ್ರ ವೀಕ್ಷಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv