Tag: ನಟ ಮದನ್ ಪಟೇಲ್

  • ಜಾಗ ಮಾರಿದವರಿಂದಲೇ ಧಮ್ಕಿ – ಠಾಣೆ ಮೆಟ್ಟಿಲೇರಿದ ಮದನ್ ಪಟೇಲ್

    ಜಾಗ ಮಾರಿದವರಿಂದಲೇ ಧಮ್ಕಿ – ಠಾಣೆ ಮೆಟ್ಟಿಲೇರಿದ ಮದನ್ ಪಟೇಲ್

    ಬೆಂಗಳೂರು: ಜಮೀನು ವಿವಾದ ಹಿನ್ನೆಲೆಯಲ್ಲಿ ನಟ ಮದನ್ ಪಟೇಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ನಗರದ ದೊಮ್ಮಲೂರು ಮುಖ್ಯ ರಸ್ತೆಯ ಸಮೀಪದಲ್ಲಿ ಗೀತಾ ಮಂಜುನಾಥ್ ಎಂಬವರಿಗೆ ಸೇರಿದ್ದ ಬಿಡಿಎ ಸೈಟ್ ಖರೀದಿಸಿದ್ದೆ. ಈ ವೇಳೆ ಮಗ ನಟ ಮಯೂರ್ ಪಟೇಲ್, ಪತ್ನಿ ರೇಖಾ ಕೂಡ ಇದ್ದರು. ಆದರೆ ಈಗ ಜಾಗ ಮಾರಿದವರೇ ಮನೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಜೀವ ಬೆದರಿಕೆ ಕೂಡ ಹಾಕುತ್ತಿದ್ದಾರೆ ಎಂದು ಮದನ್ ಪಟೇಲ್ ಆರೋಪಿಸಿದ್ದಾರೆ.

    ಗೀತಾ ಹಾಗೂ ಮಂಜುನಾಥ್ ಅವರು ಬೆದರಿಕೆ ಹಾಕುವುದಷ್ಟೇ ಅಲ್ಲದೆ ಶ್ರೀನಿವಾಸ್, ಇನ್ನಿತರರಿಂದ ಜೀವ ಬೆದರಿಕೆ ಹಾಕುತ್ತಿದ್ದಾರೆ. ನಮಗೆ ರಕ್ಷಣೆ ಕೊಡಿ ಎಂದು ಮದನ್ ಪಟೇಲ್, ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಮದುನ್ ಪಟೇಲ್ ಕೋರಮಂಗಲ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.