Tag: ನಟ ಧನುಷ್ ಡಿವೋರ್ಸ್

  • ‘ಫ್ರೆಂಡ್’ ಎಂದಿದ್ದೇ ನಟ ಧನುಷ್ ಗೆ ಮುಳುವಾಯ್ತು: ಅನ್ ಫ್ರೆಂಡ್ ಮಾಡಿ ಹೊರಟೇ ಬಿಟ್ಟ ರಜನಿಕಾಂತ್ ಪುತ್ರಿ

    ‘ಫ್ರೆಂಡ್’ ಎಂದಿದ್ದೇ ನಟ ಧನುಷ್ ಗೆ ಮುಳುವಾಯ್ತು: ಅನ್ ಫ್ರೆಂಡ್ ಮಾಡಿ ಹೊರಟೇ ಬಿಟ್ಟ ರಜನಿಕಾಂತ್ ಪುತ್ರಿ

    ಳೆದ ವಾರವಷ್ಟೇ ತಮ್ಮಿಂದ ದೂರವಿರುವ ಪತ್ನಿ ಐಶ್ವರ್ಯಾ ರಜನಿಕಾಂತ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದ ಖ್ಯಾತ ನಟ ಧನುಷ್, ಇವತ್ತು ಪೇಚಿಗೆ ಸಿಲುಕಿದ್ದಾರೆ. ಐಶ್ವರ್ಯಾ ನಿರ್ದೇಶನದಲ್ಲಿ ಮೂಡಿ ಬಂದ ವಿಡಿಯೋ ಆಲ್ಬಂ ಮೆಚ್ಚಿಕೊಂಡಿದ್ದ ಧನುಷ್, ‘ಶುಭ ಹಾರೈಕೆಗಳು ಫ್ರೆಂಡ್’ ಎಂದು ಟ್ವಿಟ್ ಮಾಡಿದ್ದರು. ಅಧಿಕೃತವಾಗಿ ಡಿವೋರ್ಸ್ ಆಗದ ಗಂಡನು ‘ಫ್ರೆಂಡ್’ ಅಂದನು ಎನ್ನುವ ಕಾರಣಕ್ಕಾಗಿ ಇವತ್ತು ಐಶ್ವರ್ಯಾ ರಜನಿಕಾಂತ್ ತಮ್ಮ ಸೋಷಿಯಲ್ ಮೀಡಿಯಾದ ಖಾತೆಗಳಿಂದ ಧನುಷ್ ನನ್ನು ತಗೆದುಹಾಕಿದ್ದಾರೆ. ಧನುಷ್ಯ ಅವರ ಯಾವೆಲ್ಲ ಪೇಜ್ ಗಳನ್ನು ಫಾಲೋ ಮಾಡುತ್ತಿದ್ದರೋ, ಅಷ್ಟೂ ಪೇಜ್ ಗಳಿಂದ ಹೊರ ನಡೆದಿದ್ದಾರೆ.

    ನಟ ಧನುಷ್ ಮತ್ತು ಪತ್ನಿ, ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್, ಹಲವು ದಿನಗಳಿಂದ ದೂರವಿದ್ದಾರೆ. ಇಬ್ಬರೂ ವಿಚ್ಛೇದನ ಪಡೆಯುವುದಾಗಿ ಹೇಳಿಕೊಂಡಿದ್ದರು. ಈ ನಿರ್ಧಾರವನ್ನು ಎಲ್ಲರೂ ಗೌರವಿಸಬೇಕು ಎಂದು ವಿನಂತಿಸಿದ್ದರು. ಇಬ್ಬರೂ ದೂರವಿದ್ದರೂ, ಒಬ್ಬರಿಗೊಬ್ಬರು ಸೋಷಿಯಲ್ ಮೀಡಿಯಾ ಮೂಲಕ ಕನೆಕ್ಟ್ ಆಗುತ್ತಿದ್ದರು. ಧನುಷ್ ಹಾರೈಸಿದರೆ, ಅದಕ್ಕೆ ಉತ್ತರವಾಗಿ ಐಶ್ವರ್ಯಾ ಥ್ಯಾಂಕ್ಸ್ ಹೇಳಿದ್ದರು. ಇದೀಗ ಏಕಾಏಕಿಯಾಗಿ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲೂ ಒಂದಾಗುವುದು ಬೇಡ ಎಂಬ ನಿರ್ಧಾರಕ್ಕೆ ಬಂದಂತಿದೆ. ಇದನ್ನೂ ಓದಿ : ಶ್ರುತಿ ಹಾಸನ್ ಜತೆ ನನ್ನ ಮದುವೆ ಆಗಿದೆ: ಸ್ಫೋಟಕ ಮಾಹಿತಿ ಹಂಚಿಕೊಂಡ ಬಾಯ್ ಫ್ರೆಂಡ್

    ಹದಿಮೂರು ವರ್ಷಗಳ ದಾಂಪತ್ಯ ಜೀವನದಲ್ಲಿ ಇಬ್ಬರೂ ಯಶಸ್ಸು ಕಂಡವರು. ಎರಡು ಮಕ್ಕಳ ಪಾಲಕರು. ಆದರೂ, ಇಬ್ಬರ ಜೀವನ ಹೊಂದಾಣಿಕೆ ಆಗದೇ ಇರುವ ಕಾರಣಕ್ಕಾಗಿ ದೂರ ಆಗಲು ನಿರ್ಧರಿಸಿದ್ದಾರೆ. ಇವರ ಈ ನಡೆ ಕುಟುಂಬಕ್ಕೆ ಆಘಾತ ತಂದಿದ್ದರೂ, ಎಲ್ಲರೂ ಮೌನವಹಿಸುವಂತಾಗಿದೆ. ಇದನ್ನೂ ಓದಿ : ವರುಣ್ ದವನ್ ಜತೆ ‘ಸಿಟಾಡೆಲ್’ ನಲ್ಲಿ ಸಮಂತಾ: ಕ್ಯಾಮರಾ ಕಣ್ಣಿಗೆ ಹಬ್ಬ

    ಮತ್ತೆ ಇಬ್ಬರನ್ನೂ ಒಂದಾಗಿಸಲು ಖ್ಯಾತ ನಟ ರಜನಿಕಾಂತ್ ಪ್ರಯತ್ನ ಪಟ್ಟರು. ಮಗಳು ಮತ್ತು ಅಳಿಯನನ್ನು ಕೂರಿಸಿಕೊಂಡು ಮಾತನಾಡಿದರು. ಅಲ್ಲದೇ, ಧನುಷ್ ತಂದೆ ಕೂಡ ಇಬ್ಬರೂ ಸರಿ ಹೋಗುತ್ತಾರೆ ಎಂದೇ ಹೇಳಿಕೆ ನೀಡಿದ್ದರು. ಆದರೆ, ಅಂತಹ ಲಕ್ಷಣಗಳು ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಅವರ ಬದುಕು ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ ಎನ್ನುವುದಕ್ಕೆ ಈ ನಡೆಯೇ ಸಾಕ್ಷಿ.