Tag: ನಟ ದಿಗಂತ್

  • ಜಾಲಿ ಮೂಡ್‌ನಲ್ಲಿ ನಟ ದಿಗಂತ್ – ನೇತ್ರಾಣಿಯ ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್‌

    ಜಾಲಿ ಮೂಡ್‌ನಲ್ಲಿ ನಟ ದಿಗಂತ್ – ನೇತ್ರಾಣಿಯ ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್‌

    ಕಾರವಾರ: ಸ್ಯಾಂಡಲ್‌ವುಡ್‌ ನಟ ದಿಗಂತ್‌ ಜಾಲಿ ಮೂಡ್‌ನಲ್ಲಿದ್ದಾರೆ. ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್‌ ಮಾಡಿ ಎಂಜಾಯ್‌ ಮಾಡಿದ್ದಾರೆ.

    ರಾಜ್ಯದ ಏಕೈಕಾ ಸ್ಕೂಬಾ ಡೈವಿಂಗ್ ತಾಣವಾದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನೇತ್ರಾಣಿ ನಡುಗಡ್ಡೆಯಲ್ಲಿ ಇಂದು ನಟ ದಿಗಂತ್, ನೇತ್ರಾಣಿ ಅಡ್ವೇಂಚರ್ ಸಂಸ್ಥೆಯ ಸಹಕಾರದೊಂದಿಗೆ ಅರಬ್ಬೀ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡಿದರು. 10 ಮೀಟರ್ ಆಳಕ್ಕೆ ಹೋಗಿ ವಿವಿಧ ಭಂಗಿಯಲ್ಲಿ ಈಜಿ ಖುಷಿಪಟ್ಟರು. ಸ್ಕೂಬಾ ಡೈವಿಂಗ್‌ಗಾಗಿ ಮಾಲ್ಡೀವ್ಸ್‌ನಲ್ಲಿ ತರಬೇತಿ ಪಡೆದಿದ್ದರು. ಇದನ್ನೂ ಓದಿ: ಮೊದಲ ದಿನದ ಶೂಟಿಂಗ್‍ನಲ್ಲಿ ಪಾಲ್ಗೊಂಡ ಮೇಘನಾ ರಾಜ್

    ಮುರುಡೇಶ್ವರದ ನೇತ್ರಾಣಿಯ ನಡುಗಡ್ಡೆಗೆ ತೆರಳಿದ ಅವರು ಅರಬ್ಬೀ ಸಮುದ್ರದಲ್ಲಿ ಆಕ್ಸಿಜನ್ ಸಿಲಿಂಡರ್ ಹಾಕಿಕೊಂಡು ಡೈವಿಂಗ್ ಮಾಡಿದರು. ನಂತರ ಸಮುದ್ರದಾಳದ ಜಲಚರಗಳನ್ನು ವೀಕ್ಷಿಸಿ ಎಂಜಾಯ್ ಮಾಡಿದರು.

    ಹಲವು ವರ್ಷದ ನಂತರ ವೀಕೆಂಡ್ ಮಸ್ತಿಗಾಗಿ ತಂದೆ ಕೃಷ್ಣಮೂರ್ತಿ ಮಂಚಾಲೆ, ತಾಯಿ ಮಲ್ಲಿಕಾ ಹಾಗೂ ಐಂದ್ರಿತಾ ಸಹೋದರನೊಂದಿಗೆ ಆಗಮಿಸಿದ್ದ ಅವರು ಇದೇ ಮೊದಲ ಬಾರಿಗೆ ಮುರುಡೇಶ್ವರದ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಮಾಡಿದರು. ಇದನ್ನೂ ಓದಿ: ವಿಕ್ರಾಂತ್ ರೋಣ ಚಿತ್ರಕ್ಕೆ ಭರ್ಜರಿ ಆಫರ್ ನೀಡಿದ ಓಟಿಟಿ!

  • ನಟ ದಿಗಂತ್‍ಗೆ ತಪ್ಪದ ಕಂಟಕ- ಮತ್ತೆ ಸಿಸಿಬಿ ಬುಲಾವ್

    ನಟ ದಿಗಂತ್‍ಗೆ ತಪ್ಪದ ಕಂಟಕ- ಮತ್ತೆ ಸಿಸಿಬಿ ಬುಲಾವ್

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆಗೆ ವೇಗ ನೀಡಿರುವ ಸಿಸಿಬಿ ಪೊಲೀಸರು, ಮತ್ತೊಮ್ಮೆ ನಟ ದಿಗಂತ್ ಅವರಿಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

    ಈಗಾಗಲೇ ಒಂದು ಬಾರಿ ಸಿಸಿಬಿ ಎದುರು ಹಾಜರಾಗಿದ್ದ ದಿಗಂತ್, ಐಂದ್ರಿತಾ ದಂಪತಿ ಮತ್ತೆ ಸಿಸಿಬಿ ವಿಚಾರಣೆಗೆ ಕರೆದರೆ ಹಾಜರಾಗುತ್ತೇವೆ ಎಂದು ಹೇಳಿದ್ದರು. ಮೊದಲ ವಿಚಾರಣೆ ನಡೆದ 6 ದಿನಗಳ ಬಳಿಕ ದಿಗಂತ್ ಮತ್ತೆ ನೋಟಿಸ್ ನೀಡಲಾಗಿದೆ. ಇಂದು 11 ಗಂಟೆಗೆ ಕಚೇರಿಗೆ ಆಗಮಿಸುವಂತೆ ದಿಗಂತ್ ಅವರಿಗೆ ಮಾತ್ರ ನೋಟಿಸ್ ತಲುಪಿದೆ ಎಂಬ ಮಾಹಿತಿ ಲಭಿಸಿದೆ. ಸಿಸಿಬಿ ಇನ್ಸ್ ಪೆಕ್ಟರ್ ಪುನೀತ್ ಅವರ ಎದುರು ದಿಗಂತ್ ವಿಚಾರಣೆಗೆ ಹಾಜರಾಗಬೇಕಿದೆ.

    ನಿನ್ನೆಯೇ ವಾಟ್ಸಾಪ್ ಮೂಲಕ ನಟ ದಿಗಂತ್ ಅವರಿಗೆ ನೋಟಿಸ್ ನೀಡಲಾಗಿದೆ. ಈ ಹಿಂದೆ ದಿಗಂತ್ ಮತ್ತು ಐಂದ್ರಿತಾ ರೇ ವಿಚಾರಣೆಗೆ ಹಾಜರಾಗಿದ್ದ ಸಂದರ್ಭದಲ್ಲಿ ಸಿಸಿಬಿ ಅಧಿಕಾರಿಗಳು 4 ರಿಂದ 5 ಗಂಟೆ ವಿಚಾರಣೆ ನಡೆಸಿದ್ದರು. ಆ ಬಳಿಕ ಇಬ್ಬರ ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆದಿದ್ದರು.

    ಸದ್ಯ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವ ಫೋನ್‍ನಲ್ಲಿದ್ದ ಮಾಹಿತಿಯನ್ನು ಸಿಸಿಬಿ ಪೊಲೀಸರು ರೀಟ್ರೀವ್ ಮಾಡಿದ್ದಾರೆ ಎನ್ನಲಾಗಿದೆ. ಈ ಮಾಹಿತಿಯನ್ನ ಆಧರಿಸಿ ಪೊಲೀಸರು ಸದ್ಯ ಮತ್ತೊಮ್ಮೆ ವಿಚಾರಣೆ ನಡೆಸಲು ನೋಟಿಸ್ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ವಿಚಾರಣೆ ಅಂತ್ಯವಾದಾಗ ಈ ಸಾಕ್ಷಿಗಳೇ ಸ್ಟಾರ್ ದಂಪತಿಗೆ ಮುಳುವಾಗ ಬಹುದು ಎನ್ನಲಾಗಿದ್ದು, ಸದ್ಯ ದಿಗಂತ್ ವಿಚಾರಣೆ ತೀವ್ರ ಕುತೂಹಲ ಮೂಡಿಸಿದೆ.

  • ಭಾವಿ ಪತ್ನಿಗೆ ಶೂಟಿಂಗ್ ಸ್ಪಾಟ್‍ನಲ್ಲೇ ಸರ್ಪ್ರೈಸ್ ಕೊಟ್ಟ ದಿಗಂತ್!

    ಭಾವಿ ಪತ್ನಿಗೆ ಶೂಟಿಂಗ್ ಸ್ಪಾಟ್‍ನಲ್ಲೇ ಸರ್ಪ್ರೈಸ್ ಕೊಟ್ಟ ದಿಗಂತ್!

    ಬೆಂಗಳೂರು: ಹಲವು ವರ್ಷಗಳಿಂದ ಪ್ರೇಮಪಕ್ಷಿಗಳಾಗಿದ್ದ ಸ್ಯಾಂಡಲ್‍ವುಡ್ ತಾರೆಯರಾದ ದಿಗಂತ್, ಐಂದ್ರಿತಾ ರೇ ಸಪ್ತಪದಿ ತುಳಿಯುಲು ಸಜ್ಜಾಗುತ್ತಿರುವ ಸುದ್ದಿ ಬಹಿರಂಗವಾಗುತ್ತಿದಂತೆ ಇಬ್ಬರಿಗೂ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

    ಇತ್ತ ನಟ ದಿಗಂತ್ ಭಾವಿ ಪತ್ನಿಗೆ ಗೋವಾ ಶೂಟಿಂಗ್ ಸ್ಪಾಟ್‍ನಲ್ಲೇ ಪ್ರಪೋಸ್ ಮಾಡಿದ್ದು, ನೀನು ನನ್ನನ್ನು ಮದುವೆಯಾಗುತ್ತಿಯಾ ಎಂದು ಹೇಳಿ ರಿಂಗ್ ತೊಡಿಸಿದ್ದಾರೆ. ಐಂದ್ರಿತಾ ಅವರಿಗೆ ತಿಳಿಸದೇ ಪ್ಲಾನ್ ಮಾಡಿದ್ದ ದಿಗಂತ್ ಈ ಮೂಲಕ ಬಿಗ್ ಸರ್ಪ್ರೈಸ್ ನೀಡಿದರು.

    ಡಿಸೆಂಬರ್ 12 ರಂದು ಈ ಪ್ರೇಮಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ಬೆಂಗಾಳಿ ಹಾಗೂ ಕರ್ನಾಟಕ ಸಂಪ್ರದಾಯದಲ್ಲಿ ಮದುವೆ ನಡೆಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.

    ಈಗಾಗಲೇ ಶ್ರೀಲಂಕಾದಲ್ಲಿ ನಟ ದಿಗಂತ್ ಬ್ಯಾಚುಲರ್ ಪಾರ್ಟಿ ಮಾಡಿ ಮುಗಿಸಿದ್ದು, ಸದ್ಯ ಐಂದ್ರಿತಾ ಗೋವಾದಲ್ಲಿ ಗರುಡ ಚಿತ್ರದ ಶೂಟಿಂಗ್‍ನಲ್ಲಿದ್ದಾರೆ. ಝೀರೋ ವೇಸ್ಟೇಜ್ ಕಾನ್ಸೆಪ್ಟ್ ನಲ್ಲಿ ಮದುವೆ ಕಾರ್ಯಕ್ರಮ ಮಾಡಲು ಐಂದ್ರಿತಾ ದಿಗಂತ್ ಪ್ಲ್ಯಾನ್ ಮಾಡಿದ್ದು, ಸರಳವಾಗಿ ಸಾಂಪ್ರದಾಯಿಕವಾಗಿ ಮದುವೆ ಆಗಲು ಜೋಡಿ ನಿರ್ಧರಿಸಿದೆ.

    ಶೂಟಿಂಗ್ ಸ್ಥಳದಲ್ಲಿ ಹಿರಿಯ ನಟ ರಂಗಾಯಣ ರಘು ಸೇರಿದಂತೆ ಇಡೀ ಚಿತ್ರತಂಡ ಐಂದ್ರಿತಾ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಡಿಸೆಂಬರ್ 12 ಮದುವೆ ಎಂದು ಐಂದ್ರಿತಾ ಅವರು ಘೋಷಣೆ ಮಾಡುತ್ತಿದಂತೆ ಚಿತ್ರತಂಡ ಎಲ್ಲಾ ಸದಸ್ಯರು ಸಂತಸಗೊಂಡರು. ಬಳಿಕ ಮಾತನಾಡಿದ ರಂಗಾಯಣ ರಘು ಅವರು, ಇಬ್ಬರು ಒಳ್ಳೆ ಜೋಡಿಯಾಗಿದ್ದು, ದೇವರು ಇವರ ಜೀವನದಲ್ಲಿ ಸಂತಸ ನೀಡಲಿ ಎಂದು ಹಾರೈಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv