Tag: ನಟ ದರ್ಶನ್‌ ಗ್ಯಾಂಗ್‌

  • ಇನ್ನೂ ರಿಟ್ರೀವ್ ಆಗಿಲ್ಲ ದರ್ಶನ್, ಪವಿತ್ರಾಗೌಡ ಮೊಬೈಲ್!

    ಇನ್ನೂ ರಿಟ್ರೀವ್ ಆಗಿಲ್ಲ ದರ್ಶನ್, ಪವಿತ್ರಾಗೌಡ ಮೊಬೈಲ್!

    – ಕಳೆದ 2 ತಿಂಗಳಿನಿಂದ ಮೊಬೈಲ್ ರಿಟ್ರೀವ್‌ಗಾಗಿ ಕಾದಿರುವ ಪೊಲೀಸರು

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಹಿನ್ನೆಲೆ ಸಿಎಫ್‌ಎಸ್‌ಎಲ್ ವರದಿ (CFSL Report) ಇನ್ನೊಂದು ವಾರದಲ್ಲಿ ಬರಲಿದ್ದು, ಮೊಬೈಲ್ ರಿಟ್ರೀವ್ ಆಗುವ ಸಾಧ್ಯತೆಯಿದೆ. ವರದಿಯ ಬಳಿಕ ಪೊಲೀಸರು ಹೆಚ್ಚುವರಿ ಚಾರ್ಜ್‌ಶೀಟ್‌ (Chargesheet) ಸಲ್ಲಿಸಲಿದ್ದಾರೆ.

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಕಾಮಾಕ್ಷಿಪಾಳ್ಯ ಪೊಲೀಸರಿಂದ 3991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿತ್ತು. ಈ ವೇಳೆ ಹತ್ತು ಆರೋಪಿಗಳ ಮೊಬೈಲ್ ರಿಟ್ರೀವ್‌ಗಾಗಿ ಹೈದಾರಬಾದ್‌ಗೆ ಕಳುಹಿಸಲಾಗಿತ್ತು. ಆದರೆ ನಟ ದರ್ಶನ್ ಹಾಗೂ ಪವಿತ್ರಾಗೌಡ ಇಬ್ಬರದ್ದು ಐಪೋನ್ ಆಗಿರುವ ಹಿನ್ನೆಲೆ ಮೊಬೈಲ್ ರಿಟ್ರೀವ್ ಆಗಿರಲಿಲ್ಲ.ಇದನ್ನೂ ಓದಿ: Women’s T20 World Cup; ಭಾರತ vs ಪಾಕಿಸ್ತಾನ ಫೈಟ್‌ – ಟೀಂ ಇಂಡಿಯಾಗೆ ಇಂದು ನಿರ್ಣಾಯಕ ಪಂದ್ಯ

    ಹತ್ತು ಆರೋಪಿಗಳ ಪೈಕಿ ಎಲ್ಲರ ಫೋನ್‌ಗಳು ರಿಟ್ರೀವ್ ಆಗಿದ್ದು, ನಟ ದರ್ಶನ್ ಹಾಗೂ ಪವಿತ್ರಾಗೌಡ ಅವರ ಫೋನ್ ರಿಟ್ರೀವ್ ಆಗಬೇಕಿದೆ. ಎರಡು ಐಪೋನ್ ಆಗಿರುವ ಹಿನ್ನೆಲೆ ಮೊಬೈಲ್ ರಿಟ್ರೀವ್ ಕಷ್ಟವಾಗಿದೆ. ಕಳೆದ ಎರಡು ತಿಂಗಳಿನಿಂದ ಮೊಬೈಲ್ ರಿಟ್ರೀವ್‌ಗಾಗಿ ಪೊಲೀಸರು ಕಾದಿದ್ದಾರೆ. ಹೀಗಾಗಿ ತಜ್ಞರ ಅಭಿಪ್ರಾಯ ಪಡೆದು ಪೊಲೀಸರು ರಿಟ್ರೀವ್‌ಗೆ ಮುಂದಾಗಿದ್ದಾರೆ.

    ಪ್ರಕರಣ ಸಂಬಂಧ ಈಗಾಗಲೇ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದ್ದರೂ ಸಿಎಫ್‌ಎಸ್‌ಎಲ್ ವರದಿ ಇನ್ನೂ ಬಂದಿಲ್ಲ. ಮೊಬೈಲ್ ರಿಟ್ರೀವ್ ಆದ ಬಳಿಕ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗುವ ಸಾಧ್ಯತೆಯಿದ್ದು, ಇನ್ನೊಂದು ವಾರದಲ್ಲಿ ರಿಟ್ರೀವ್ ಆಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಶಬರಿಮಲೆ ಯಾತ್ರೆಗೆ ಆನ್‌ಲೈನ್‌ ಬುಕ್ಕಿಂಗ್‌ ಕಡ್ಡಾಯ – ದಿನಕ್ಕೆ 80,000 ಭಕ್ತರಿಗೆ ದರ್ಶನಕ್ಕೆ ಅವಕಾಶ

     

  • ರೇಣುಕಾಸ್ವಾಮಿ ಕೊಲೆ ಪ್ರಕರಣ – ತುಮಕೂರು ಜೈಲಿನಿಂದ ಮೂವರು ರಿಲೀಸ್!

    ರೇಣುಕಾಸ್ವಾಮಿ ಕೊಲೆ ಪ್ರಕರಣ – ತುಮಕೂರು ಜೈಲಿನಿಂದ ಮೂವರು ರಿಲೀಸ್!

    – ಜಾಮೀನು ಆದೇಶ ಬಳಿಕ ಶ್ಯೂರಿಟಿಗಾಗಿ 9 ದಿನಗಳ ಕಾಲ ಪರದಾಡಿದ್ದ ಕುಟುಂಬಸ್ಥರು

    ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಹಿನ್ನೆಲೆ ಜಾಮೀನು ಸಿಕ್ಕ ಬಳಿಕವೂ ಬಿಡುಗಡೆಯಾಗದೇ ಪರದಾಡುತ್ತಿದ್ದ ಮೂವರು ಆರೋಪಿಗಳು ಇಂದು (ಅ.2) ತುಮಕೂರು ಜೈಲಿನಿಂದ (Tumkuru Jail) ಬಿಡುಗಡೆಯಾಗಿದ್ದಾರೆ.

    ಸೆ.23 ರಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಮೂವರು ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್, ಹಾಗೂ ನಿಖಿಲ್‌ಗೆ ಷರತ್ತುಬದ್ಧ ಜಾಮೀನು ದೊರೆತಿತ್ತು.ಇದನ್ನೂ ಓದಿ: Israel | ಜಾಫಾದಲ್ಲಿ ಉಗ್ರರಿಂದ ಮನ ಬಂದಂತೆ ಗುಂಡಿನ ದಾಳಿಗೆ 8 ಬಲಿ

    ಎ-16 ಆರೋಪಿ ಕೇಶವಮೂರ್ತಿಗೆ ಹೈಕೋಟ್‌ನಿಂದ ಹಾಗೂ ಎ-15 ಆರೋಪಿ ಕಾರ್ತಿಕ್, ಎ-17 ಆರೋಪಿ ನಿಖಿಲ್‌ಗೆ 57ನೇ ಸಿಸಿಹೆಚ್ ಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಸಿಕ್ಕಿತ್ತು. ಕೋರ್ಟ್ ಆರೋಪಿಗಳ ಕುಟುಂಬಸ್ಥರಿಗೆ 2 ಲಕ್ಷ ರೂ. ಹಣ ಹಾಗೂ ಇಬ್ಬರು ಶೂರಿಟಿದಾರರನ್ನ ಹೊಂದಿಸಲು ಸೂಚಿಸಿತ್ತು. ಆದರೆ ಜಾಮೀನು ಶ್ಯೂರಿಟಿಗೂ ಹಣವಿಲ್ಲದೇ ಆರೋಪಿಗಳ ಕುಟುಂಬಸ್ಥರು ಪರದಾಡುತ್ತಿದ್ದರು.

    ಸತತ 9 ದಿನಗಳಿಂದ ಶ್ಯೂರಿಟಿದಾರರು ಸಿಗದೇ ಪರದಾಟ ನಡೆಸಿದ್ದ ಕುಟುಂಬಸ್ಥರಿಗೆ ಮಂಗಳವಾರ ಜಾಮೀನು ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಂಡಿದೆ. ಮಂಗಳವಾರ ರಾತ್ರಿ ತುಮಕೂರು ಜೈಲಾಧಿಕಾರಿಗಳಿಗೆ ಜಮೀನು ಆದೇಶದ ಪ್ರತಿ ಮೇಲ್ ಮೂಲಕ ತಲುಪಿದ್ದು, ಬುಧವಾರ ಎ-16 ಆರೋಪಿ ಕೇಶವಮೂರ್ತಿ, ಎ-15 ಆರೋಪಿ ಕಾರ್ತಿಕ್, ಎ-17 ಆರೋಪಿ ನಿಖಿಲ್ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.ಇದನ್ನೂ ಓದಿ: ಪುಣೆಯಲ್ಲಿ ಹೆಲಿಕಾಪ್ಟರ್ ಪತನ – ಮೂವರು ದುರ್ಮರಣ

  • ಜಾಮೀನು ಸಿಕ್ಕರೂ ಇಲ್ಲ ಬಿಡುಗಡೆ ಭಾಗ್ಯ – ಮಕ್ಕಳನ್ನು ಬಿಡಿಸಿಕೊಳ್ಳಲು ಹಣವಿಲ್ಲದೇ ಪೋಷಕರ ಪರದಾಟ

    ಜಾಮೀನು ಸಿಕ್ಕರೂ ಇಲ್ಲ ಬಿಡುಗಡೆ ಭಾಗ್ಯ – ಮಕ್ಕಳನ್ನು ಬಿಡಿಸಿಕೊಳ್ಳಲು ಹಣವಿಲ್ಲದೇ ಪೋಷಕರ ಪರದಾಟ

    – 2 ಲಕ್ಷ, ಇಬ್ಬರು ಶೂರಿಟಿದಾರರನ್ನು ಒಪ್ಪಿಸುವಂತೆ ತಿಳಿಸಿದ್ದ ಕೋರ್ಟ್
    – ಜೈಲಲ್ಲೇ ಇರೋ ರೇಣುಕಾಸ್ವಾಮಿ ಕೊಲೆ ಆರೋಪಿಗಳು

    ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಹಿನ್ನೆಲೆ ಮೂವರು ಆರೋಪಿಗಳಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ ಕೋರ್ಟ್ ಜಾಮೀನು (Bail) ನೀಡಿದ್ದರೂ ಬೆಲ್ ಶೂರಿಟಿಗೂ ಹಣವಿಲ್ಲದೇ ಆರೋಪಿಗಳ ಕುಟುಂಬಸ್ಥರು ಪರದಾಡುವಂತಾಗಿದೆ.

    ಕಳೆದ ಸೋಮವಾರ ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಮೂವರು ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್, ಹಾಗೂ ನಿಖಿಲ್‌ಗೆ ಷರತ್ತುಬದ್ಧ ಜಾಮೀನು ದೊರೆತಿತ್ತು. ಎ-16 ಆರೋಪಿ ಕೇಶವಮೂರ್ತಿಗೆ ಹೈಕೋಟ್‌ನಿಂದ ಹಾಗೂ ಎ-15 ಆರೋಪಿ ಕಾರ್ತಿಕ್, ಎ-17 ಆರೋಪಿ ನಿಖಿಲ್‌ಗೆ 57ನೇ ಸಿಸಿಹೆಚ್ ಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಸಿಕ್ಕಿತ್ತು.ಇದನ್ನೂ ಓದಿ: ನಂಬಿಕೆಗೆ ಧಕ್ಕೆಯಾಗದಂತೆ ಮಹಿಷ ದಸರಾ ಆಚರಿಸಿದ್ರೆ ನಮಗೂ ಸಂತೋಷ: ಯದುವೀರ್

    ಜಾಮೀನು ಸಿಕ್ಕಿ 5 ದಿನ ಕಳೆದರೂ ಆರೋಪಿಗಳಿಗೆ ಜೈಲಿನಿಂದ ಬಿಡುಗಡೆಯಾಗುವ ಭಾಗ್ಯ ದೊರೆತಿಲ್ಲ. 2 ಲಕ್ಷ ರೂ. ಹಣ ಹಾಗೂ ಇಬ್ಬರು ಶೂರಿಟಿದಾರರನ್ನು ಒಪ್ಪಿಸುವಂತೆ ಕೋರ್ಟ್ ತಿಳಿಸಿದೆ. ಜಾಮೀನು ನೀಡಲು ಶೂರಿಟಿದಾರರು ಸಿಗದೇ ಆರೋಪಿಗಳ ಕುಟುಂಬಸ್ಥರು ಪರದಾಡುವಂತಾಗಿದೆ. ಹೀಗಾಗಿ ಆರೋಪಿಗಳು ಇನ್ನೂ ತುಮಕೂರು ಜಿಲ್ಲಾ (Tumakuru Jail) ಕಾರಾಗೃಹದಲ್ಲಿದ್ದಾರೆ.

    ಕಳೆದ 6 ದಿನಗಳಿಂದ 2 ಲಕ್ಷ ರೂ. ಹಣ ಹಾಗೂ ಇಬ್ಬರು ಶೂರಿಟಿದಾರರನ್ನ ಹೊಂದಿಸಲು ಆರೋಪಿಗಳ ಕುಟುಂಬಸ್ಥರು ಪರದಾಡುತ್ತಿದ್ದಾರೆ. ಇನ್ನು ಜಾಮೀನಿನ ಕಾನೂನು ಪ್ರಕ್ರಿಯೆ ಮುಗಿಯದ ಹಿನ್ನೆಲೆ ಇಂದು ಕೂಡಾ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗುವುದು ಅನುಮಾನವಾಗಿದೆ. ಶೂರಿಟಿದಾರರನ್ನ ಹೊಂದಿಸಲು ಸಾಧ್ಯವಾಗದ ಕಾರಣ ಆರೋಪಿಗಳ ಕುಟುಂಬಸ್ಥರು ಇಲ್ಲಿಯ ತನಕ ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಈ ಬ್ಲ್ಯಾಕ್‌ಮೇಲರ್ ಹೇಗೆ ಲೂಟಿ ಮಾಡಿದ್ದಾನೆ ಅಂತಾ ಹೇಳಿದ್ದೀನಿ: ಎಡಿಜಿಪಿ ಚಂದ್ರಶೇಖರ್ ವಿರುದ್ಧ ಹೆಚ್‌ಡಿಕೆ ಕಿಡಿ

  • ಬಳ್ಳಾರಿ ಜೈಲಲ್ಲಿ ಗುರುವಾರ ಕೊಲೆ ಆರೋಪಿ ದರ್ಶನ್‌ಗೆ `ಐಟಿ’ ಡ್ರಿಲ್

    ಬಳ್ಳಾರಿ ಜೈಲಲ್ಲಿ ಗುರುವಾರ ಕೊಲೆ ಆರೋಪಿ ದರ್ಶನ್‌ಗೆ `ಐಟಿ’ ಡ್ರಿಲ್

    -ಮಾಹಿತಿ ನೀಡದೇ ವಕೀಲರ ದಿಢೀರ್ ಭೇಟಿ, ದರ್ಶನ್ ಜೊತೆ ಚರ್ಚೆ

    ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಆರೋಪಿ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಆದಷ್ಟು ಬೇಗ ಜಾಮೀನು ಪಡೆದು ಹೊರಗೆ ಬರಬೇಕು ಎನ್ನುವ ಆಲೋಚನೆಯಲ್ಲಿದ್ದ ದರ್ಶನ್‌ಗೆ ಐಟಿ (ಆದಾಯ ತೆರಿಗೆ ಇಲಾಖೆ) (Income Tax) ಅಧಿಕಾರಿಗಳ ವಿಚಾರಣೆ ಬಹುತೇಕ ಮುಳುವಾಗುವ ಸಾಧ್ಯತೆ ಹೆಚ್ಚಾಗಿದೆ.

    ಕೊಲೆ ಪ್ರಕರಣದಲ್ಲಿನ ಹಣದ ವಹಿವಾಟಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಐಟಿ ಎಂಟ್ರಿ ಕೊಟ್ಟಿದೆ. ಗುರುವಾರ ಅಥವಾ ಶುಕ್ರವಾರ ಬಳ್ಳಾರಿ ಜೈಲಿಗೆ ಐಟಿ ಅಧಿಕಾರಿಗಳು ಬರಲಿದ್ದಾರೆ. ಈಗಾಗಲೇ ಆರೋಪಿ ದರ್ಶನ್ ವಿಚಾರಣೆಗೆ ಕೋರ್ಟ್ ಅದೇಶ ನೀಡಿದೆ. ಜೊತೆಗೆ ಐಟಿ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಕೋರ್ಟ್‌ನಿಂದ ಜೈಲಿಗೆ ಇ-ಮೇಲ್ ಕಳುಹಿಸಲಾಗಿದೆ. ಹಣ ಕೊಟ್ಟು ಕೊಲೆ ಆರೋಪವನ್ನು ಮತ್ತೊಬ್ಬರ ಮೇಲೆ ಹೊರಿಸಲು ಪ್ಲಾನ್ ಮಾಡಲಾಗಿತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಅಷ್ಟೊಂದು ಹಣ ಎಲ್ಲಿಂದ ಬಂತು? ಹೇಗೆಲ್ಲ ಹಣ ವರ್ಗಾವಣೆ ಮಾಡಲಾಗಿದೆ? ಎನ್ನುವ ನಿಟ್ಟಿನಲ್ಲಿ ವಿಚಾರಣೆ ನಡೆಸಲಿರುವ ಐಟಿ ಅಧಿಕಾರಿಗಳು ಹಣದ ಮೂಲ ಪತ್ತೆಗೆ ಮುಂದಾಗಿದ್ದು, ಐಟಿ ಅಧಿಕಾರಿಗಳು ಬರುವುದನ್ನು ಜೈಲು ಮೂಲಗಳು ಖಚಿತಪಡಿಸಿವೆ.ಇದನ್ನೂ ಓದಿ: MUDA Scam| ಸಿಎಂ ವಿರುದ್ಧ ಲೋಕಾಯುಕ್ತ ತನಿಖೆಗೆ ಕೋರ್ಟ್‌ ಆದೇಶ

    ಕೊಲೆ ಬಳಿಕ ಅರೋಪ ಮೈಮೇಲೆ ಹೊತ್ತುಕೊಳ್ಳಲು ಆರೋಪಿ ದರ್ಶನ್ (Actor Darshan) ಲಕ್ಷ ಲಕ್ಷ ಡೀಲ್ ನೀಡಿದ್ದ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಐಟಿ ಅಧಿಕಾರಿಗಳು ಆರೋಪಿ ದರ್ಶನ್‌ಗೆ ಡ್ರಿಲ್ ಮಾಡೋದಕ್ಕೆ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬರ್ತಾರೆ ಎನ್ನುವ ಮಾಹಿತಿ ಸಿಕ್ಕಿದ ಕೂಡಲೇ ದರ್ಶನ್ ಪರ ವಕೀಲರು ಬಳ್ಳಾರಿ ಸೆಂಟ್ರಲ್ ಜೈಲಿಗೆ ಬಂದಿದ್ದಾರೆ.

    ಜೈಲಿಗೆ ಬರುವ ಕುರಿತು ಸಣ್ಣ ಸುಳಿವನ್ನು ನೀಡದೇ ದರ್ಶನ್ ಪರ ವಕೀಲ ರಾಮಸಿಂದ್ 35 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ. ಐಟಿ ಅಧಿಕಾರಿಗಳು ದರ್ಶನ್ ವಿಚಾರಣೆ ಮಾಡಲಿರುವ ಹಿನ್ನೆಲೆ ಐಟಿ ಅಧಿಕಾರಿಗಳ ಮುಂದೆ ಯಾವ ರೀತಿಯಲ್ಲಿ ಉತ್ತರ ನೀಡಬೇಕು ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.

    ಒಟ್ಟಿನಲ್ಲಿ ಕೊಲೆ ಆರೋಪದ ಬಳಿಕ ಜಾಮೀನಿನ ನಿರೀಕ್ಷೆಯಲ್ಲಿದ್ದ ಆರೋಪಿ ದರ್ಶನ್‌ಗೆ ಇದೀಗ ಐಟಿ ವಿಚಾರಣೆಯ (IT Enquiry) ಆತಂಕ ಎದುರಾಗಿದೆ. ಐಟಿ ಅಧಿಕಾರಿಗಳ ಮುಂದೆ ಸ್ವಲ್ಪ ಯಾಮಾರಿದ್ರೂ ಜಾಮೀನಿಗೆ ಮತ್ತೇ ಕಷ್ಟ ಎಂದು ಜೈಲಿನಲ್ಲಿ ಆರೋಪಿ ಚಡಪಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಬುಧವಾರ ಬಂದಿದ್ದ ಆರೋಪಿ ದರ್ಶನ್ ಪರ ವಕೀಲರು ಒಂದಷ್ಟು ಆತ್ಮವಿಶ್ವಾಸ ತುಂಬಿದ್ದು, ವಿಚಾರಣೆ ವೇಳೆ ಧೈರ್ಯ ಕಳೆದುಕೊಳ್ಳದಂತೆ ಸಲಹೆ ನೀಡಿದ್ದಾರೆ.ಇದನ್ನೂ ಓದಿ: ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ಬಂತು 1.25 ಕೋಟಿ ಪ್ರತಿಕ್ರಿಯೆ

     

  • ಬಳ್ಳಾರಿ ಜೈಲಿನಲ್ಲಿ ಚೇರ್‌ಗೆ ಬೇಡಿಕೆ ಇಟ್ಟ ದರ್ಶನ್ – `ದಾಸ’ನ ಆಸೆಗೆ ತಣ್ಣೀರು ಎರಚಿದ ಜೈಲಧಿಕಾರಿಗಳು

    ಬಳ್ಳಾರಿ ಜೈಲಿನಲ್ಲಿ ಚೇರ್‌ಗೆ ಬೇಡಿಕೆ ಇಟ್ಟ ದರ್ಶನ್ – `ದಾಸ’ನ ಆಸೆಗೆ ತಣ್ಣೀರು ಎರಚಿದ ಜೈಲಧಿಕಾರಿಗಳು

    – ಕೋರ್ಟ್ ಆದೇಶ ಬರುವವರೆಗೂ ಚೇರ್ ಕೊಡದಿರಲು ನಿರ್ಧಾರ

    ಬಳ್ಳಾರಿ: ಇಲ್ಲಿನ ಸೆಂಟ್ರಲ್ ಜೈಲಿಗೆ ಶಿಫ್ಟ್ ಆದ ಬಳಿಕ ಒಂದೊಂದೇ ಬೇಡಿಕೆ ಇಡುತ್ತಿರುವ ದರ್ಶನ್ ಇದೀಗ ಚೇರ್‌ಗೆ ಬೇಡಿಕೆ ಇಟ್ಟಿದ್ದು, ದರ್ಶನ್ ಬೇಡಿಕೆಗೆ ಜೈಲಧಿಕಾರಿಗಳು ತಣ್ಣೀರು ಎರಚಿದ್ದಾರೆ.

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಿಂದಾಸ್ ಆಗಿ ಎಂಜಾಯ್ ಮಾಡುತ್ತಿದ್ದ ಕೊಲೆ ಆರೋಪಿ ದರ್ಶನ್‌ಗೆ ಬಳ್ಳಾರಿ ಸೆಂಟ್ರಲ್ ಜೈಲು (Ballary Central Jail) ನರದಕರ್ಶನ ಮಾಡಿಸುತ್ತಿದೆ. ಮ್ಯಾನುವಲ್ ಬಿಟ್ಟು ಹೆಚ್ಚುವರಿಯಾಗಿ ಅದೇನೇ ಬೇಡಿಕೆ ಇಟ್ಟರೂ ಜೈಲಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಸರ್ಜಿಕಲ್ ಕಮೋಡ್, ವಿಟಮಿನ್ ಟ್ಯಾಬ್ಲೇಟ್ ಹಾಗೂ ಟಿವಿ ಬಳಿಕ ಇದೀಗ ಕುಳಿತುಕೊಳ್ಳೋಕೆ ಚೇರ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ ದರ್ಶನ್‌ಗೆ ಜೈಲಧಿಕಾರಿಗಳು ನಿಜ ಜೈಲು ಹೇಗಿರುತ್ತದೆ ಎಂಬ ರುಚಿಯನ್ನು ತೋರಿಸುತ್ತಿದ್ದಾರೆ.ಇದನ್ನೂ ಓದಿ: ರೇಣುಕಾಸ್ವಾಮಿ ಪ್ರಾಣಭಿಕ್ಷೆಗೆ ಅಂಗಲಾಚುತ್ತಿರೋದು ‘ಎಐ’ ಫೋಟೊ? – ಆರೋಪಿ ಮೊಬೈಲ್ ಮತ್ತೆ FSL ಪರೀಕ್ಷೆಗೆ

    ಆರೋಪಿ ದರ್ಶನ್ (Actor Darshan) ಎಂತಹ ದೊಡ್ಡ ಸ್ಟಾರ್ ಆಗಿದ್ದರೂ ಬಳ್ಳಾರಿ ಸೆಂಟ್ರಲ್ ಜೈಲಧಿಕಾರಿಗಳು ಅವರನ್ನು ಸ್ಟ್ರಿಕ್ಟ್ ಆಗಿ ನಡೆಸಿಕೊಳ್ಳುತ್ತಿದ್ದಾರೆ. ಆದ ಕಾರಣ ದರ್ಶನ್ ಜೈಲಿನ ಮ್ಯಾನುವಲ್ ಪ್ರಕಾರವೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಯಾವುದೂ ಸುಲಭವಾಗಿ ಸಿಗದೇ ಇರುವ ಕಾರಣಕ್ಕೆ ಒಂದೊಂದೇ ಬೇಡಿಕೆಯನ್ನ ಜೈಲಧಿಕಾರಿಗಳ ಮುಂದೆ ಇಡುತ್ತಿದ್ದಾರೆ.

    ಜೈಲಧಿಕಾರಿಗಳು ಟಿವಿ ನೀಡಿದ ಬಳಿಕ ವಿಟಮಿನ್ ಟ್ಯಾಬ್ಲೇಟ್ ಬೇಡಿಕೆಯನ್ನು ತಿರಸ್ಕರಿಸಿದ್ದರು. ಆರೋಪಿ ದರ್ಶನ್ ಚೇರ್ ಬೇಡಿಕೆ ಇಟ್ಟ ಬಳಿಕ ಜೈಲಧಿಕಾರಿಗಳು ಚೇರ್ ಕೊಡೋದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

    ನಿನ್ನೆ (ಸೆ.17) ನ್ಯಾಯಾಂಗ ಬಂಧನದ ಅವಧಿ ಮುಕ್ತಾಯ ಆಗಿದ್ದರಿಂದ ಎಲ್ಲಾ ಆರೋಪಿಗಳನ್ನು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಆ ವೇಳೆ ಆರೋಪಿ ದರ್ಶನ್ ಪರ ವಕೀಲರು ದರ್ಶನ್‌ಗೆ ತುಂಬಾ ಬೆನ್ನು ನೋವು ಇದೆ. ನೆಲದ ಮೇಲೆ ಕೂಡುವುದಕ್ಕೂ ಅಗುತ್ತಿಲ್ಲ. ಪ್ಲಾಸ್ಟಿಕ್ ಚೇರ್ ವ್ಯವಸ್ಥೆ ಮಾಡೋಕೆ ಜೈಲಧಿಕಾರಿಗಳು ಆಗಲ್ಲ ಎಂದು ಹೇಳುತ್ತಿದ್ದಾರೆ. ಬೇರೆ ಕೈದಿಗಳಿಗೆ ಎಲ್ಲ ವ್ಯವಸ್ಥೆ ಇದೆ. ಎನ್‌ಐಎ ಕೇಸ್‌ನಲ್ಲಿರುವ ಆರೋಪಿಗಳಿಗೆ ವ್ಯವಸ್ಥೆ ಇದೆ. ಆದರೆ ದರ್ಶನ್‌ಗೆ ಚೇರ್ ವ್ಯವಸ್ಥೆ ಮಾಡುತ್ತಿಲ್ಲ. ದರ್ಶನ್ ಅವರನ್ನು ಯಾರು ಏನು ಅಂದುಕೊಂಡಿದ್ದಾರೋ ಗೊತ್ತಿಲ್ಲ. ಫುಲ್ ಹೈ ಸೆಕ್ಯೂರಿಟಿ ಎಂದು ಹೇಳುತ್ತಾರೆ. ಸರಿಯಾದ ವ್ಯವಸ್ಥೆ ಕೂಡ ಸಿಗುತ್ತಿಲ್ಲ ಎಂದು ಬಳ್ಳಾರಿ ಸೆಂಟ್ರಲ್ ಜೈಲಧಿಕಾರಿಗಳು ವಿರುದ್ಧ ಮಾರುದ್ದ ಆರೋಪ ಮಾಡಿದ್ದರು.

    ಆರೋಪಿ ದರ್ಶನ್ ಜೈಲಿನಲ್ಲಿ ಚೇರ್ ಕೇಳೇ ಇಲ್ಲವಂತೆ. ಬೆನ್ನು ನೋವಿದೆ ಎಂದು ಒಂದು ದಿಂಬನ್ನು ಕೇಳಿದ್ದರು. ಜೈಲು ಮ್ಯಾನುಯಲ್ ಪ್ರಕಾರ ಇದ್ದರೆ ಕೊಡುತ್ತಾರೆ ಅಂದಿದ್ದರು. ಆದರೆ ಜೈಲಿನ ಮ್ಯಾನುವಲ್ ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಜೈಲಧಿಕಾರಿಗಳು ದಿಂಬನ್ನು ಕೊಟ್ಟಿಲ್ಲ. ಚೇರ್ ಕೊಡುವ ಬಗ್ಗೆ ಕೋರ್ಟ್ ಆದೇಶ ಮಾಡಿದರೆ ಮಾತ್ರ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಬಳ್ಳಾರಿ ಜೈಲಿನ ಮೂಲಗಳ ಪ್ರಕಾರ ಮಾಹಿತಿ ತಿಳಿದು ಬಂದಿದೆ.

    ಒಟ್ಟಿನಲ್ಲಿ ಆರೋಪಿ ದರ್ಶನ್ ಅವರನ್ನ ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ಇಟ್ಟ ನಂತರ ಭದ್ರತೆ ದೃಷ್ಟಿಯಿಂದ ರಕ್ತ ಸಂಬಂಧಿಕರನ್ನು ಬಿಟ್ಟು ಯಾರೊಬ್ಬರನ್ನು ಭೇಟಿ ಅವಕಾಶ ಇರಲಿಲ್ಲ. ಕೋರ್ಟ್ ಅನುಮತಿ ನೀಡಿದ ಬಳಿಕ ಆಪ್ತರ ಬೇಟಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹೀಗಾಗಿ ನಿನ್ನೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆಗೆ ನಟ ಧನ್ವೀರ್ ಹಾಗೂ ಆಪ್ತ ಹೇಮಂತ್ ಬಂದಿದ್ದರು.ಇದನ್ನೂ ಓದಿ: ಜೈಲಲ್ಲಿ ಕಿರಿಕಿರಿ ಮಾಡಿದ್ರೆ ಬೇಲ್‌ಗೆ ಕಷ್ಟವಾಗುತ್ತೆ – ವಕೀಲರ ಎಚ್ಚರಿಕೆ ಬಳಿಕ ಎಚ್ಚೆತ್ತುಕೊಂಡ ದರ್ಶನ್!

    ಇನ್ನೂ ಚೇರ್ ವಿಚಾರದಲ್ಲೂ ಕ್ಲೀಯರ್ ಆಗಿರುವ ಬಳ್ಳಾರಿ ಜೈಲಧಿಕಾರಿಗಳು ಯಾವುದನ್ನೂ ಮೈ ಮೇಲೆ ಎಳೆದುಕೊಳ್ಳದೇ ಕೋರ್ಟ್ ಅವಕಾಶ ಕೊಟ್ಟರೆ ಮಾತ್ರ ಕೊಡುತ್ತೇವೆ ಎಂದು ನಿರ್ಧಾರಕ್ಕೆ ಬಂದಿರುವುದು ದರ್ಶನ್ ಅವರ ಆಸೆಗೆ ತಣ್ಣೀರು ಎರಚಿದಂತಾಗಿದೆ.

  • ಜೈಲಲ್ಲಿ ಕಿರಿಕಿರಿ ಮಾಡಿದ್ರೆ ಬೇಲ್‌ಗೆ ಕಷ್ಟವಾಗುತ್ತೆ – ವಕೀಲರ ಎಚ್ಚರಿಕೆ ಬಳಿಕ ಎಚ್ಚೆತ್ತುಕೊಂಡ ದರ್ಶನ್!

    ಜೈಲಲ್ಲಿ ಕಿರಿಕಿರಿ ಮಾಡಿದ್ರೆ ಬೇಲ್‌ಗೆ ಕಷ್ಟವಾಗುತ್ತೆ – ವಕೀಲರ ಎಚ್ಚರಿಕೆ ಬಳಿಕ ಎಚ್ಚೆತ್ತುಕೊಂಡ ದರ್ಶನ್!

    – ಆದಷ್ಟು ಬೇಗ ಜಾಮೀನು ಅರ್ಜಿ ಸಲ್ಲಿಸೋದಾಗಿ ಪತ್ನಿ ವಿಜಯಲಕ್ಷ್ಮಿ ಅಭಯ

    ಬಳ್ಳಾರಿ: ಜೈಲಿನಲ್ಲಿ ಪದೇ ಪದೇ ದುರ್ನಡತೆ ತೋರುತ್ತಿದ್ದ ದಾಸನಿಗೆ ಪತ್ರ ಬರೆಯುವ ಮೂಲಕ ವಕೀಲರು ಪಾಠ ಕಲಿಸಿದ್ದು, ಇದೀಗ ದರ್ಶನ್ ಎಚ್ಚೆತ್ತುಕೊಂಡಿದ್ದಾರೆ.

    ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ (Ballary Central Jail) ಕೊಲೆ ಆರೋಪಿ ದರ್ಶನ್ ಪದೇ ಪದೇ ದುರ್ನಡತೆ ತೋರುತ್ತಿದ್ದ ಕಾರಣ ವರ್ತನೆ ಬದಲಾಯಿಸುವ ಕುರಿತು ವಕೀಲರು ಪತ್ರ ಬರೆದಿದ್ದರು. ಇದೀಗ ಆರೋಪಿ ದರ್ಶನ್ (Actor Darshan) ವರ್ತನೆಯಲ್ಲಿ ಬದಲಾವಣೆ ಕಾಣಿಸಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಅಭಿಮಾನ್‌ ಸ್ಟುಡಿಯೋದಲ್ಲಿರೋ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸದಂತೆ ತಡೆ – ಪ್ರತಿಭಟನೆಗೆ ವಿಷ್ಣು ಫ್ಯಾನ್ಸ್‌ ನಿರ್ಧಾರ

    ವಕೀಲರು ದರ್ಶನ್‌ಗೆ ಬರೆದ ಪತ್ರದಲ್ಲಿ ಅನಗತ್ಯ ಕಿರಿಕ್ ಮಾಡಿಕೊಳ್ಳಬೇಡಿ. ಮಾಧ್ಯಮಗಳ ಮೇಲೆ ದುರ್ನಡತೆ ತೋರುವ ಕುರಿತು, ಜೈಲಿನಲ್ಲಿ ಕಿರಿ ಕಿರಿ ಮಾಡಬೇಡಿ. ವರ್ತನೆ ಬದಲಿಸಿಕೊಳ್ಳದಿದ್ದರೇ ಜಾಮೀನು ಅರ್ಜಿ ಹಾಕಿದಾಗ ಸಮಸ್ಯೆ ಆಗುತ್ತದೆ ಎಂದು ಉಲ್ಲೇಖಿಸಿದ್ದರು.

    ಇದೇ ಕಾರಣಕ್ಕೆ ನಿನ್ನೆ (ಸೆ.17) ಪತ್ನಿ ವಿಜಯಲಕ್ಷ್ಮಿ (Vijayalakshmi) ಹಾಗೂ ಆಪ್ತರು ಜೈಲಿಗೆ ಭೇಟಿ ನೀಡಿದ್ದರು. ಅವರ ಭೇಟಿಗೆ ಆರೋಪಿ ದರ್ಶನ್ ನಗು ನಗುತ್ತಾ ಸೆಲ್‌ನಿಂದ ಹೊರ ಬಂದಿದ್ದರು. ಪತ್ನಿ ಹಾಗೂ ಆಪ್ತರ ಭೇಟಿ ಬಳಿಕವೂ ನಗುತ್ತಲೇ ಸೆಲ್‌ಗೆ ಹೋಗಿದ್ದರು. ವಕೀಲರ ಪತ್ರ ತಲುಪಿದ ಬಳಿಕ ಕೊನೆಗೂ ಎಚ್ಚೆತ್ತುಕೊಂಡ ದರ್ಶನ್ ಜೈಲಿನಲ್ಲಿ ತಮ್ಮ ವರ್ತನೆ ಬದಲಾಯಿಸಿಕೊಂಡಿದ್ದಾರೆ.

    ಇನ್ನೊಂದು ಕಡೆ ದರ್ಶನ್‌ಗೆ ಜಾಮೀನು ಚಿಂತೆಯಾಗಿದ್ದು, ಪತ್ನಿ ವಿಜಯಲಕ್ಷ್ಮಿಯವರು ಭೇಟಿಗೆ ಬಂದಾಗಲೂ ಜಾಮೀನು ವಿಚಾರವಾಗಿ ಚರ್ಚೆ ಮಾಡಿದ್ದು, ಜಾಮೀನಿಗೆ ಅರ್ಜಿ ಸಲ್ಲಿಸುವುದು ಯಾವಾಗ? ಎಂದು ಪ್ರಶ್ನಿಸಿದ್ದಾರೆ.

    ದರ್ಶನ್ ವಿರುದ್ಧ ಸಿಕ್ಕಿರುವ ಪ್ರಬಲ ಸಾಕ್ಷಿಗಳ ಬಗ್ಗೆ ದರ್ಶನ್ ಗಮನಕ್ಕೆ ತಂದಿದ್ದ ವಿಜಯಲಕ್ಷ್ಮಿ, ಏನೇ ಸಾಕ್ಷಿ ಸಿಕ್ಕಿದ್ದರೂ ನಮ್ಮ ವಕೀಲರು ಸ್ಟ್ರಾಂಗ್ ಆಗಿ ವಾದ ಮಾಡುತ್ತಿದ್ದಾರೆ. ಆದಷ್ಟು ಬೇಗ ಜಾಮೀನಿಗೆ ಅರ್ಜಿ ಹಾಕೋಣ. ಅದರ ಬಗ್ಗೆಯೇ ನಾನು ವಕೀಲರ ಜೊತೆ ನಿತ್ಯ ಸಂಪರ್ಕದಲ್ಲಿದ್ದೇನೆ. ಯಾವುದಕ್ಕೂ ಆತಂಕ ಪಡಬೇಡಿ, ಆದಷ್ಟು ಬೇಗ ಜಾಮೀನಿಗೆ ಅರ್ಜಿ ಹಾಕುತ್ತೇವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಬಿಯರ್ ಪ್ರಿಯರಿಗೆ ಮತ್ತೆ ಶಾಕ್ – ಅಕ್ಟೋಬರ್ 1ರಿಂದಲೇ ಪರಿಷ್ಕೃತ ದರ ಜಾರಿಗೆ ಸಾಧ್ಯತೆ!

    ಬಹುತೇಕ ಇನ್ನೆರಡು ದಿನಗಳಲ್ಲಿ ಜಾಮೀನಿಗೆ ಅರ್ಜಿ ಹಾಕುವ ಸಾಧ್ಯತೆ ಇದೆ. ಎಲ್ಲಾ ಸಾಧಕ, ಬಾಧಕಗಳನ್ನು ನೋಡಿಕೊಂಡು ಜಾಮೀನಿಗೆ ಅರ್ಜಿ ಹಾಕುವುದಾಗಿ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರಗಳ ಕುರಿತು ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅರ್ಧ ಗಂಟೆ ಚರ್ಚಿಸಿದ್ದಾರೆ.

  • ಕೊಲೆ ಆರೋಪಿ ದರ್ಶನ್ ಸೆಲ್‌ಗೆ ಬರಲಿದೆ 32 ಇಂಚಿನ ಟಿವಿ

    ಕೊಲೆ ಆರೋಪಿ ದರ್ಶನ್ ಸೆಲ್‌ಗೆ ಬರಲಿದೆ 32 ಇಂಚಿನ ಟಿವಿ

    ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಆರೋಪದ (Renukaswamy Murder Case) ಮೇಲೆ ಬಳ್ಳಾರಿ ಜೈಲಿನಲ್ಲಿರುವ (Ballary) ದರ್ಶನ್ ಸೆಲ್‌ಗೆ ಇಂದು (ಮಂಗಳವಾರ) ಬೇರೆ ಟಿವಿ ಬರಲಿದೆ.ಇದನ್ನೂ ಓದಿ: ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ಐಎಂಎಫ್‌ನಿಂದ ಸಿಗುತ್ತಾ ಬೂಸ್ಟರ್‌ ಡೋಸ್‌!

    ಕಳೆದ ವಾರ ಟಿವಿ ನೀಡುವಂತೆ ಬೇಡಿಕೆಯಿಟ್ಟಿದ್ದ ದರ್ಶನ್‌ಗೆ ಜೈಲಧಿಕಾರಿಗಳು ಟಿವಿ ನೀಡಿದ್ದರು. ಆದರೆ ದರ್ಶನ್ ಇದರಲ್ಲಿ ಸರಿಯಾಗಿ ಸೌಂಡ್ ಬರುತ್ತಿಲ್ಲ. ಸ್ಕ್ರೀನ್‌ ಸರಿಯಾಗಿಲ್ಲ ಎಂದು ದೂರಿದ್ದರು. ಈ ಟಿವಿ ಬೇಡ. ಬೇರೆ ಟಿವಿ ನೀಡುವಂತೆ ದರ್ಶನ್ ಕಿರಿಕ್ ಕೂಡ ಮಾಡಿದ್ದರು ಎನ್ನಲಾಗಿದೆ.

    ಟಿವಿ ವಿಚಾರವಾಗಿ ಜೈಲು ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಪದೇ ಪದೇ ಕಿರಿಕಿರಿ ಮಾಡಿದ್ದರು. ಜೊತೆಗೆ ಕ್ಯಾತೆ ಕೂಡ ತೆಗೆದಿದ್ದರು. ಆ ಕಾರಣಕ್ಕೆ ಜೈಲಧಿಕಾರಿಗಳು ಅದೇ ಹಳೆ ಟಿವಿಯನ್ನು ರಿಪೇರಿ ಮಾಡಿಸಿ, ಇಂದು ಮಧ್ಯಾಹ್ನ 1 ಗಂಟೆಗೆ ದರ್ಶನ್ ಇರುವ ಸೆಲ್‌ಗೆ ಹೈಯರ್ ಕಂಪನಿಯ (Haier Company) 32 ಇಂಚಿನ ಟಿವಿ ಸೆಟ್ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಕಾನೂನು ಹೋರಾಟಕ್ಕೆ ತೊಡಕಾಗುವ ಆತಂಕ – ಜೈಲಲ್ಲಿ ಕಿರಿಕ್ ಮಾಡದಂತೆ ದರ್ಶನ್‍ಗೆ ಲಾಯರ್ ಪತ್ರ?

  • ಕೊಲೆಗೂ ಮುನ್ನ ರೇಣುಕಾಸ್ವಾಮಿಯನ್ನು ದರೋಡೆ ಮಾಡಿತ್ತು ‘ಡಿ’ಗ್ಯಾಂಗ್!

    ಕೊಲೆಗೂ ಮುನ್ನ ರೇಣುಕಾಸ್ವಾಮಿಯನ್ನು ದರೋಡೆ ಮಾಡಿತ್ತು ‘ಡಿ’ಗ್ಯಾಂಗ್!

    – ಚೈನ್, ರಿಂಗ್, ವಾಚ್, ಲಿಂಗದ ಕರಡಿಕೆ ಸುಲಿಗೆ

    ಬೆಂಗಳೂರು: ಕೊಲೆಗೂ ಮುನ್ನ ಕಿಡ್ನ್ಯಾಪ್‌ ಮಾಡಿಕೊಂಡು ಬರುವ ಸಮಯದಲ್ಲಿ ರೇಣುಕಾಸ್ವಾಮಿಯನ್ನು ಡಿ-ಗ್ಯಾಂಗ್ ದರೋಡೆ (D-Gang Robbery) ಮಾಡಿದ್ದರು ಎಂಬ ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್‌ (Chargesheet) ಸಲ್ಲಿಸಿದ ಬೆನ್ನಲ್ಲೇ ಒಂದೊಂದಾಗಿ ಮಾಹಿತಿಗಳು ಹೊರ ಬೀಳುತ್ತಲೇ ಇವೆ. ಶೆಡ್‌ನಲ್ಲಿ ನಡೆದ ವಿಚಾರ, ಫೋಟೋಗಳು ಹೀಗೆ ಕಳೆದ ಎರಡು ದಿನಗಳಿಂದ ಸ್ಫೋಟಕ ಮಾಹಿತಿಗಳು ಲಭಿಸಿದ್ದವು.ಇದನ್ನೂ ಓದಿ: ಟಾಟಾ ಏಸ್ ಪಲ್ಟಿ – ಗಣಪತಿ ತರಲು ಹೋಗುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವು

    ಇದೀಗ ಹತ್ಯೆಗೆ ಸಂಬಂಧಿಸಿದಂತೆ ಮತ್ತೊಂದು ಮಾಹಿತಿ ದೊರೆತಿದ್ದು, ರೇಣುಕಾಸ್ವಾಮಿ ಅಪಹರಣ (Renukaswamy Kidnap) ಮಾಡಿಕೊಂಡು ಬರುತ್ತಿರುವಾಗ ಡಿ ಗ್ಯಾಂಗ್ ದರೋಡೆ ಮಾಡಿತ್ತು ಎಂದು ತಿಳಿದು ಬಂದಿದೆ. ಮಾರ್ಗ ಮಧ್ಯೆ ಬರುವಾಗ ರೇಣುಕಾಸ್ವಾಮಿಯ ಬಳಿಯಿದ್ದ ಚೈನ್, ರಿಂಗ್, ವಾಚ್ ಹಾಗೂ ಲಿಂಗದ ಕರಡಿಕೆಯನ್ನು ಸುಲಿಗೆ ಮಾಡಿದ್ದಾರೆ.

    ಅಲ್ಲಿಂದ ತುಮಕೂರು ಬಾರ್‌ಗೆ ತೆರಳಿ ಎ4, ಎ6, ಎ7 ಆರೋಪಿಗಳು ಮದ್ಯವನ್ನು ಖರೀದಿಸಿದ್ದಾರೆ. ಅದು ರೇಣುಕಾಸ್ವಾಮಿ ಹಣದಿಂದಲೇ ಖರೀದಿಸಿದ್ದಾರೆ. ಆನಂತರ ನೆಲಮಂಗಲ, ನೈಸ್ ರಸ್ತೆ ಮೂಲಕ ಎಂಟ್ರಿಯಾಗಿದ್ದಾರೆ. ಇದನ್ನೂ ಓದಿ: ಬಲಮುರಿ ಹಾಗೂ ಎಡಮುರಿ ಗಣಪತಿಗೆ ಇರುವ ವ್ಯತ್ಯಾಸವೇನು?

  • ರೇಣುಕಾಸ್ವಾಮಿ ಕೊಲೆ ಪ್ರಕರಣ – ಇಂದು ಚಾರ್ಜ್‌ಶೀಟ್‌ ಸಲ್ಲಿಕೆ ಡೌಟ್!

    ರೇಣುಕಾಸ್ವಾಮಿ ಕೊಲೆ ಪ್ರಕರಣ – ಇಂದು ಚಾರ್ಜ್‌ಶೀಟ್‌ ಸಲ್ಲಿಕೆ ಡೌಟ್!

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswami Murder Case) ಆರೋಪಿಗಳಾದ ದರ್ಶನ್ & ಗ್ಯಾಂಗ್ (Actor Darshan & Gang) ಮೇಲೆ ಚಾರ್ಜ್‌ಶೀಟ್‌ (Chargesheet) ಸಲ್ಲಿಸಲು ಪೊಲೀಸರು ಸಿದ್ಧಪಡಿಕೊಂಡಿದ್ದಾರೆ. ಕೋರ್ಟ್‌ಗೆ ಇಂದು ಚಾರ್ಜ್‌ಶೀಟ್‌ ಸಲ್ಲಿಸುವುದು ಅನುಮಾನ ಎನ್ನಲಾಗಿದೆ.

    ಚಾರ್ಜ್‌ಶೀಟ್‌ನಲ್ಲಿ ಮೂರು ವಿಧಗಳಾಗಿ ಆರೋಪಿಗಳನ್ನು ವಿಂಗಡಿಸಿದ್ದಾರೆ. ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದಾರೆ. ‘ಡಿ’ ಗ್ಯಾಂಗ್‌ನ ಆರೋಪಿಗಳ ಪೈಕಿ 14 ಮಂದಿಗೆ ಕೊಲೆ ಕೇಸ್‌ನಲ್ಲಿ ಪಿಟ್ ಮಾಡಿದ್ದರೆ, ಇನ್ನೂ ಉಳಿದ ಮೂವರಿಗೆ ಸಾಕ್ಷ್ಯನಾಶದಡಿಯಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ: ರಾಜ್ಯಪಾಲರು ಬಿಜೆಪಿ ಏಜೆಂಟ್ ರೀತಿ ವರ್ತಿಸ್ತಿದ್ದಾರೆ: ಪ್ರದೀಪ್ ಈಶ್ವರ್ ಕಿಡಿ

    ಕೊಲೆಕೇಸ್‌ನಿಂದ ರಿಲಾಕ್ಷೇಷನ್ ಪಡೆದು ಸಾಕ್ಷ್ಯನಾಶ ಮಾಡಿರುವ ಆರೋಪದಡಿಯಲ್ಲಿ ಚಾರ್ಜ್ ಮಾಡಲಾಗಿರುವ ಆರೋಪಿಗಳು:
    * ಕಾರ್ತೀಕ್, ಆರೋಪಿ ನಂಬರ್ 15
    * ಕೇಶವಮೂರ್ತಿ, ಆರೋಪಿ ನಂಬರ್ 16
    * ನಿಖಿಲ್ ನಾಯಕ್, ಆರೋಪಿ ನಂಬರ್ 17

    ಈ ಮೂವರು ಆರೋಪಿಗಳಿನ್ನು ಕೊಲೆ ಕೇಸ್‌ನಿಂದ ಕೈಬಿಟ್ಟಿರಲು ಕಾರಣ?
    ಎ 15 ಕಾರ್ತಿಕ್, 16 ಕೇಶವಮೂರ್ತಿ, ಎ17 ನಿಖಿಲ್ ನಾಯಕ್, ರೇಣುಕಾಸ್ವಾಮಿಯನ್ನು ಹಲ್ಲೆ ಮಾಡಿರುವುದಾಗಲಿ, ಹತ್ಯೆ ಮಾಡಿರುವಂತ ಸಂದರ್ಭಗಳಲ್ಲಾಗಲಿ ಇವರು ಇರಲಿಲ್ಲ ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ ಎನ್ನಲಾಗುತ್ತಿದೆ. ರೇಣುಕಾಸ್ವಾಮಿ ದೇಹವನ್ನು ವಿಲೇವಾರಿ ಮಾಡಿ ಸಾಕ್ಷ್ಯನಾಶ ಮಾಡಲು ಮುಂದಾಗಿದ್ದರು ಎಂದು ತನಿಖೆಯಿಂದ ಪೊಲೀಸರಿಗೆ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಸಾಕ್ಷ್ಯನಾಶ ಆರೋಪದ ಮೇಲೆ ಚಾರ್ಜ್‌ಶೀಟ್‌ ಸಲ್ಲಿಸಲು ತಯಾರಾಗಿದೆ ಎನ್ನಲಾಗಿದೆ.

    ಇನ್ನುಳಿದಂತೆ ಎ1 ನಿಂದ 14 ತನಕ ಇರುವ ಆರೋಪಿಗಳ ವಿರುದ್ಧ, ಕೊಲೆ, ಸಾಕ್ಷ್ಯನಾಶ, ಕಿಡ್ನ್ಯಾಪ್‌ ಸೇರಿದಂತೆ ಹಲವು ಗಂಭೀರ ಸೆಕ್ಷನ್ ಅಡಿಯಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಗೆ ತಯಾರಿ ಮಾಡಿಕೊಂಡಿದ್ದಾರೆ.

    ಕೊಲೆ, ಸಾಕ್ಷ್ಯನಾಶ, ಕಿಡ್ನ್ಯಾಪ್‌ ಸೇರಿದಂತೆ ಗಂಭೀರ ಸೆಕ್ಷನ್ ಅಡಿಯಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಗೆ ಒಳಗಾಗಿರುವ ಆರೋಪಿಗಳು:
    ಪವಿತ್ರಾಗೌಡ (ಎ 1)
    ದರ್ಶನ್ (ಎ 2)
    ಪವನ್ (ಎ 3)
    ರಾಘವೇಂದ್ರ (ಎ 4)
    ನಂದೀಶ್ (ಎ 5)
    ಧನರಾಜ್ (ಎ 9)
    ವಿನಯ್ (ಎ 10)
    ನಾಗರಾಜ್ (ಎ 11)
    ಲಕ್ಷ್ಮಣ್ (ಎ12)
    ದೀಪಕ್ (ಎ 13)
    ಪ್ರದೋಷ್ ( ಎ14)
    ಜಗದೀಶ್ (ಎ6)
    ಅನುಕುಮಾರ್ (ಎ 7)
    ರವಿಶಂಕರ್ (ಎ 8)

    ಈ ಆರೋಪಿಗಳ ಮೇಲೆ ಕೊಲೆ ಕೇಸ್ ಅಡಿಯಲ್ಲಿ ಚಾರ್ಜ್‌ಶೀಟ್‌ ತಯಾರಾಗಿದೆ. ಆರೋಪಿಗಳು ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುವ ಬಗ್ಗೆ ಬಲವಾದ ಸಾಕ್ಷ್ಯಗಳು ಲಭ್ಯವಾಗಿದೆ.ಇದನ್ನೂ ಓದಿ: ಮುಡಾ ಸಂಕಷ್ಟದ ಹೊತ್ತಲ್ಲೇ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ಸಿಎಂ

    ಕಿಡ್ನ್ಯಾಪ್ ಗ್ಯಾಂಗ್:
    ರಾಘವೇಂದ್ರ (ಎ4)
    ಜಗದೀಶ್ (ಎ6)
    ಅನುಕುಮಾರ್ (ಎ 7)
    ರವಿಶಂಕರ್ (ಎ 8)

  • ಹಿಂಡಲಗಾ ಜೈಲಿನ ಅತಿ ಭದ್ರತಾ ವಿಭಾಗಕ್ಕೆ ಪ್ರದೂಷ್ ಶಿಫ್ಟ್: ವಿ.ಕೃಷ್ಣಮೂರ್ತಿ

    ಹಿಂಡಲಗಾ ಜೈಲಿನ ಅತಿ ಭದ್ರತಾ ವಿಭಾಗಕ್ಕೆ ಪ್ರದೂಷ್ ಶಿಫ್ಟ್: ವಿ.ಕೃಷ್ಣಮೂರ್ತಿ

    ಬೆಳಗಾವಿ: ಜೈಲಿನ ಎಲ್ಲಾ ಪ್ರಕಿಯೆ ಮುಗಿಯುತ್ತಿದ್ದಂತೆ ರೇಣುಕಾಸ್ವಾಮಿ ಕೊಲೆ (Renukaswamy Murder Case) ಆರೋಪಿ ಪ್ರದೂಷ್‌ನನ್ನು ಹಿಂಡಲಗಾ ಜೈಲಿನ (Hindalaga Jail) ಅತಿ ಭದ್ರತಾ ವಿಭಾಗದಲ್ಲಿ (High Security Department) (ಅಂಧೇರಿ ಸೆಲ್) ಇಡಲಾಗುವುದು ಮತ್ತು ಏಳು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುವುದು ಎಂದು ಹಿಂಡಲಗಾ ಜೈಲಿನ ಸಹಾಯಕ ಅಧೀಕ್ಷಕ ವಿ.ಕೃಷ್ಣಮೂರ್ತಿ (V. Krishnamurthy) ತಿಳಿಸಿದ್ದಾರೆ.

    ಪರಪ್ಪನ ಅಗ್ರಹಾರದಲ್ಲಿ (Parappana Agrahara) ರಾಜಾತಿಥ್ಯದ ಫೋಟೋ ವೈರಲ್ ಆದ ಬಳಿಕ ನಟ ದರ್ಶನ್ ಗ್ಯಾಂಗ್‌ನ (Actor Darshan Gang) 12 ಆರೋಪಿಗಳನ್ನು ದಿಕ್ಕಾಪಾಲು ಮಾಡಿದ್ದಾರೆ. ಆರೋಪಿಗಳ ಪೈಕಿ ಪ್ರದೂಷ್‌ನನ್ನು ಬೆಳಗಾವಿಯ (Belagavi) ಹಿಂಡಲಗಾ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಿದ ನಂತರ ಜೈಲಿನ ಭದ್ರತೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಅವ್ನೇನ್ ದೊಡ್ಡ ರೋಲ್ ಮಾಡೆಲ್ಲಾ? – ದರ್ಶನ್ ಬಗ್ಗೆ ಕೇಳಿದ್ದಕ್ಕೆ ಕೆ.ಎನ್ ರಾಜಣ್ಣ ಗರಂ

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೈಲಿನಲ್ಲಿ ಸಿಸಿಟಿವಿ ಅಳವಡಿಸುವ ಕಾರ್ಯ ನಡೆಯುತ್ತಿದೆ. ಮಳೆಯಿಂದಾಗಿ ಕೆಲಸದಲ್ಲಿ ವ್ಯತ್ಯಯ ಉಂಟಾಗಿದೆ. ಹೆಚಿನ ಭದ್ರತೆಗಾಗಿ ಕ್ರಮ ವಹಿಸುತ್ತೇವೆ ಎಂದರು.

    ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಭದ್ರತಾ ಕಾರ್ಯ ನಡೆಯುತ್ತಿದೆ. ಪ್ರದೂಷ್ ಭದ್ರತೆಗೆ ಸಹಾಯಕ ಜೈಲರ್ ಹಾಗೂ ಏಳು ಜನ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಜೈಲಿನಲ್ಲಿ 2G ಜಾಮರ್ ಇದ್ದು, 5U ಜಾಮರ್ ಅಳಡಿಸಲು ಸಿದ್ಧತೆ ನಡೆಸಲಾಗಿದೆ. ಟೆಂಡರ್ ಪಡೆದವರಿಗೆ ಬೇಗ ಮುಗಿಸಿಕೊಡುವಂತೆ ಆಗ್ರಹಿಸಿದ್ದೇವೆ ಎಂದು ತಿಳಿಸಿದರು.ಇದನ್ನೂ ಓದಿ: ರಾಜ ಎಲ್ಲಿದ್ದರೂ ರಾಜನೇ ಅಂತ ಘೋಷಣೆ- ದರ್ಶನ್‌ ನೋಡಲು ಮುಗಿಬಿದ್ದ ಫ್ಯಾನ್ಸ್‌

    ಜೈಲಿನಲ್ಲಿ ಊಟ, ಬಿಡಿ, ಸಿಗರೆಟ್ ಎಲ್ಲಾ ವಸ್ತುಗಳಿಗೆ ನಿಷೇಧ ಹೇರಲಾಗಿದೆ. ನಮ್ಮ ಸಿಬ್ಬಂದಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಯಾರೇ ಬಂದರೂ ಭದ್ರತಾ ದೃಷ್ಟಿಯಿಂದ ಅಂಧೇರಿ ಸೆಲ್‌ನಲ್ಲಿ ಇಡುತ್ತೇವೆ. ನಿಯಮಗಳ ಪ್ರಕಾರ ಸಂಬAಧಿಗಳು ಬಂದರೆ ಮಾತ್ರ ಅವಕಾಶ ಕೊಡಲಾಗುವುದು ಎಂದು ತಿಳಿಸಿದ್ದಾರೆ.