Tag: ನಟ ಕೋಮಲ್

  • ಊಟ ಬೇಕಂದ್ರೆ ಕೇಳಿ ಹಾಕಿಸ್ಕೋತಿನಿ ಬಿಡು ಗುರು – ನಟ ಕೋಮಲ್ ಶೈಲಿ ಕಾಪಿ ಹೊಡೆದ್ರಾ ಶಿಖರ್ ಧವನ್?

    ಊಟ ಬೇಕಂದ್ರೆ ಕೇಳಿ ಹಾಕಿಸ್ಕೋತಿನಿ ಬಿಡು ಗುರು – ನಟ ಕೋಮಲ್ ಶೈಲಿ ಕಾಪಿ ಹೊಡೆದ್ರಾ ಶಿಖರ್ ಧವನ್?

    ಮುಂಬೈ: ವಿಶ್ವದ ಬೇರೆಲ್ಲಾ ದೇಶಗಳಿಗಿಂತಲೂ ಭಾರತ ಸಂಸ್ಕೃತಿ ವಿಶಿಷ್ಟ. ಕಲೆ, ಆಹಾರ ಸಂಸ್ಕೃತಿ, ಕೇಶ ವಿನ್ಯಾಸ ಹಾಗೂ ಧರಿಸುವ ಬಟ್ಟೆ ಎಲ್ಲದರಲ್ಲೂ ಒಂದೊಂದು ವಿಶೇಷತೆ ಇದ್ದೇ ಇದೆ. ಅದಕ್ಕಾಗಿ ಎಲ್ಲರೂ ಭಾರತದ ಸಂಸ್ಕೃತಿಯನ್ನು ಇಷ್ಟಪಡುತ್ತಾರೆ. ಕೆಲ ಭಾರತೀಯರು ವಿದೇಶಕ್ಕೆ ತೆಳಿದ್ದರೂ ಆಗಾಗ್ಗೆ ಭಾರತದ ಸಂಸ್ಕೃತಿಯನ್ನು ನೆನಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಜಾಲತಾಣಗಳಲ್ಲಿ ಹಾಸ್ಯ ಮಾಡಿ ಟ್ರೋಲ್‌ಗಳಿಗೂ ಗುರಿಯಾಗುತ್ತಿದ್ದಾರೆ.

    ಹಾಗೆಯೇ ಏಷ್ಯಾಕಪ್ ಬ್ಯುಸಿಯಲ್ಲಿರುವ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಹಾಗೂ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಭಾರತೀಯ ಗ್ರಾಮೀಣ ಶೈಲಿಯಲ್ಲಿ ತಮಗೆ ಊಟ ಬಡಿಸುತ್ತಿರುವ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಧೋನಿ ಹಿಡಿದ ಕ್ಯಾಚ್‍ಗಳಿಗಿಂತ ಬಿಟ್ಟ ಕ್ಯಾಚ್‍ಗಳು ಮಹತ್ವದ್ದಾಗಿತ್ತು: ಪಾಕ್ ಆಟಗಾರ ರಶೀದ್ ಲತೀಫ್ ಟೀಕೆ

     

    View this post on Instagram

     

    A post shared by Shikhar Dhawan (@shikhardofficial)

    ಭಾರತೀಯ ಶೈಲಿಯಲ್ಲಿ ತಮಗೆ ಊಟ ಬಡಿಸುತ್ತಿರುವ ವೀಡಿಯೋ ಒಂದನ್ನು ಹರಿಯಬಿಟ್ಟಿದ್ದು, ಊಟ ಬಡಿಸುತ್ತಿದ್ದಂತೆ ಸಾಕು-ಸಾಕು, ಅರೆ ಸಾಕು ಅಂತ ಹೇಳ್ತಿಲ್ವಾ? ಊಟ ಬೇಕು ಅಂದ್ರೆ ಕೇಳಿ ಹಾಕಿಸ್ಕೋತಿನಿ ಬಿಡಿ’ ಎನ್ನುವಂತೆ ಕೈ ಸನ್ನೆ ಮಾಡುತ್ತಿದ್ದಾರೆ. ಶೀಖರ್ ಧವನ್ ಅವರ ಈ ವೀಡಿಯೋ ಅವರ ಅಭಿಮಾನಿಗಳಿಗೆ ಭಾರೀ ಖುಷಿ ಕೊಟ್ಟಿದ್ದು, ಲಕ್ಷಾಂತರ ವೀಕ್ಷಕರಿಂದ ಮೆಚ್ಚುಗೆ ಪಡೆದಿದ್ದಾರೆ.

    SHIKHAR DHAVAN

    ಶಿಖರ್ ಧವನ್ ಕೇವಲ ಮನರಂಜನೆಯ ಉದ್ದೇಶದಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಅಭಿಮಾನಿಗಳು ಎಂಜಾಯ್ ಮಾಡಲಿ ಎನ್ನುವ ಉದ್ದೇಶದಿಂದ ಶಿಖರ್ ಧವನ್ ಆಗಾಗ ಇಂತಹ ಫನ್ನಿ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಆದರೆ ಈ ವೀಡಿಯೋನಲ್ಲಿ ನಟ ಕೋಮಲ್ ಶೈಲಿ ಕಾಪಿ ಹೊಡೆದ್ರಾ ಎನ್ನುವುದು ಚರ್ಚೆಯಾಗುತ್ತಿದೆ. ಇದನ್ನೂ ಓದಿ: T20 ಸರಣಿಯಲ್ಲಿ ಟೀಂ ಇಂಡಿಯಾದಿಂದ ಹೊರಬಿದ್ದ ಧವನ್‌ಗೆ ಅಪ್ಪನಿಂದಲೇ ಥಳಿತ!

    IPL CSK VS PANJAB

    ಕೆಲ ದಿನಗಳ ಹಿಂದೆಯಷ್ಟೇ ಐಪಿಎಲ್ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡವು ಗೆಲುವು ಸಾಧಿಸುವ ಮೂಲಕ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದೇ ಆವೃತ್ತಿಯಲ್ಲಿ ಧವನ್ 6 ಸಾವಿರ ರನ್‌ಗಳಿಸಿದವರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡು ಸಾಧನೆ ಮಾಡಿದರು. ಆದರೆ ಅವರು ಕ್ವಾಲಿಫೈಯರ್‌ಗೆ ಸೆಲೆಕ್ಟ್ ಆಗಲಿಲ್ಲ ವೆಂದು ತಮ್ಮ ತಂದೆ ಥಳಿಸಿರುವುದಾಗಿ ತಮಾಷೆಯ ವೀಡಿಯೋವನ್ನೂ ಹಂಚಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಅವಾಚ್ಯ ಶಬ್ದಗಳಿಂದ ನಿಂದಿಸಿ, ಥಳಿಸಿದ – ಹಲ್ಲೆ ಹೇಗಾಯ್ತು ವಿವರಿಸಿದ ಕೋಮಲ್

    ಅವಾಚ್ಯ ಶಬ್ದಗಳಿಂದ ನಿಂದಿಸಿ, ಥಳಿಸಿದ – ಹಲ್ಲೆ ಹೇಗಾಯ್ತು ವಿವರಿಸಿದ ಕೋಮಲ್

    ಬೆಂಗಳೂರು: ಮಗಳನ್ನು ಟ್ಯೂಷನ್‍ಗೆ ಬಿಡಲು ತೆರಳಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಹಲ್ಲೆ ನಡೆಸಿದ್ದಾನೆ ಎಂದು ನಟ ಕೋಮಲ್ ಅವರು ತಿಳಿಸಿದ್ದಾರೆ.

    ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಹಲ್ಲೆ ಮಾಡಿದ ವ್ಯಕ್ತಿ ಯಾರು ಎನ್ನುವುದೇ ಗೊತ್ತಿಲ್ಲ. ಆದರೆ ಏಕಾಏಕಿ ಕಾರು ತಡೆದ ಆತ, ಈ ನಡುವೆ ನಿನ್ನದು ಜಾಸ್ತಿಯಾಗಿದೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ. ಆದ್ದರಿಂದ ನಾನು ಕಾರಿನಿಂದ ಇಳಿದೆ. ಕಾರು ಇಳಿಯುತ್ತಿದ್ದಂತೆ ನನ್ನ ಮೇಲೆ ಆತ ಹಲ್ಲೆ ನಡೆಸಿದ. ಆದರೆ ನನ್ನ ಮೇಲೆ ಹಲ್ಲೆ ನಡೆಸುವ ಉದ್ದೇಶ ಏನು ಎನ್ನುವುದು ಗೊತ್ತಿಲ್ಲ ಎಂದು ಹೇಳಿದರು.

    ಸಿನಿಮಾ ಮಾಡುವ ಉದ್ದೇಶದಿಂದ ಕಳೆದ 4 ವರ್ಷಗಳಿಂದ ನಾನು ಮನೆಯಿಂದ ಹೆಚ್ಚು ಹೊರ ಬಂದಿಲ್ಲ. ಆದರೆ ಏಕೆ ನನ್ನ ಮೇಲೆ ಹಲ್ಲೆ ನಡೆದಿದೆ ಎಂಬುವುದು ಅಚ್ಚರಿ ತಂದಿದೆ. ಸಿನಿಮಾ ಮಾಡುವುದೇ ತಪ್ಪು ಎಂದರೆ ಹೇಗೆ ಎಂದು ಪ್ರಶ್ನಿಸಿದರು.

    ಇದೇ ವೇಳೆ ಈ ಘಟನೆ ಸಿನಿಮಾ ರಂಗದವರಿಂದ ಹಲ್ಲೆ ನಡೆದಿದ್ಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚೆಗೆ ನನ್ನ ಸಿನಿಮಾ ಬಿಡುಗಡೆಯಾಗಿದ್ದು, ಆದರ ಕೆಲಸದಲ್ಲಿ ನಾನು ತೊಡಗಿಕೊಂಡಿದ್ದೇನೆ. ಆತ ಯಾರೇ ಎಂಬುವುದು ನನಗೆ ತಿಳಿದಿಲ್ಲ. ಆತನ ಉದ್ದೇಶ ಏನು ಎಂಬುವುದು ಸಹ ಗೊತ್ತಿಲ್ಲ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ವಿಚಾರಣೆ ನಡೆಸುತ್ತಾರೆ ಎಂದರು.

    ಸದ್ಯ ಲಭ್ಯವಿರುವ ಮಾಹಿತಿ ಅನ್ವಯ ಕೋಮಲ್ ಅವರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಜಕ್ಕರಾಯನ ಕೆರೆಯ ನಿವಾಸಿ ವಿಜಯ್ ಅಲಿಯಾಸ್ ವಿಜಿ ಎಂದು ಗುರುತಿಸಲಾಗಿದೆ. ಈತ ತನ್ನ ಭಾವಿ ಪತ್ನಿಯೊಂದಿಗೆ ಬೈಕ್‍ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಬಂದು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಅಲ್ಲದೇ ಈ ವೇಳೆ ಮದ್ಯ ಸೇವನೆ ಮಾಡಿದ್ದ ಎಂಬ ಅನುಮಾನವನ್ನು ಕೋಮಲ್ ಅವರ ಸಹೋದರ, ನಟ ಜಗ್ಗೇಶ್ ವ್ಯಕ್ತಪಡಿಸಿದ್ದಾರೆ.

    ಕೋಮಲ್ ಅವರ ಕಾರು ನನ್ನ ಬೈಕಿಗೆ ತಾಗಿದ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಿದ್ದಾಗಿ ವಿಜಯ್ ಪೊಲೀಸರ ಮುಂದೇ ಹೇಳಿಕೆ ನೀಡಿದ್ದಾನೆ ಎಂಬ ಮಾಹಿತಿ ಲಭಿಸಿದೆ. ಸದ್ಯ ವಿಜಯ್‍ನನ್ನು ಮಲ್ಲೇಶ್ವರಂ ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಸಂಬಂಧ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಟ ಕೋಮಲ್ ಮೇಲೆ ಅಪರಿಚಿತ ವ್ಯಕ್ತಿಯಿಂದ ಹಲ್ಲೆ

    ನಟ ಕೋಮಲ್ ಮೇಲೆ ಅಪರಿಚಿತ ವ್ಯಕ್ತಿಯಿಂದ ಹಲ್ಲೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕೋಮಲ್ ಅವರ ಮೇಲೆ ಅಪರಿಚಿತ ವ್ಯಕ್ತಿ ಹಲ್ಲೆ ಮಾಡಿರುವ ಘಟನೆ ನಗರದ ಸಂಪಿಗೆ ಚಿತ್ರಮಂದಿರದ ರೈಲ್ವೇ ಅಂಡರ್ ಪಾಸ್ ಬಳಿ ಇಂದು ಸಂಜೆ ನಡೆದಿದೆ.

    ಕೋಮಲ್ ಅವರು ತಮ್ಮ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್ ಮೇಲೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕಾರನ್ನು ಅಡ್ಡಗಟ್ಟಿದ್ದು, ಆ ಬಳಿಕ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಕೋಮಲ್ ಅವರ ಮೇಲೆ ಸುಖಾ ಸುಮ್ಮನೆ ರಕ್ತ ಬರುವಂತೆ ಹಲ್ಲೆ ಮಾಡಿದ್ದಾನೆ ಎನ್ನುವ ವಿಚಾರ ತಿಳಿದು ಬಂದಿದೆ.

    ಘಟನೆಯಲ್ಲಿ ಕೋಮಲ್ ಮುಖ ಹಾಗೂ ಮೂಗಿಗೆ ಗಾಯವಾಗಿದ್ದು, ಘಟನೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನೆ ನಡೆದ ಬಳಿಕ ಅಪರಿಚಿತ ವ್ಯಕ್ತಿಯೂ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಹೋಗಿದ್ದಾನೆ ಎಂಬ ಮಾಹಿತಿ ಲಭಿಸಿದೆ. ಸದ್ಯ ಅಪರಿಚಿತ ವ್ಯಕ್ತಿಯನ್ನು ಪೊಲೀಸರು ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ.

    ಕೋಮಲ್ ಮೇಲೆ ಹಲ್ಲೆ ನಡೆದ ಬಗ್ಗೆ ಮಾಹಿತಿ ಪಡೆದ ನಟ ಜಗ್ಗೇಶ್ ಅವರು ಕೂಡ ಪೊಲೀಸ್ ಠಾಣೆಗೆ ಆಗಮಿಸಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕೋಮಲ್ ಅವರು ಗಾಯಗೊಂಡಿರುವುದರಿಂದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಆ ಬಳಿಕ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಘಟನೆ ನಿಖರ ಕಾರಣ ತಿಳಿದು ಬಂದಿಲ್ಲ, ಪೊಲೀಸರು ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.