Tag: ನಟ ಕಿಚ್ಚ ಸುದೀಪ್

  • ವಾಲ್ಮೀಕಿ ಸಮುದಾಯದ ಪ್ರತಿಭಟನೆಗೆ ನಟ ಸುದೀಪ್ ಬೆಂಬಲ

    ವಾಲ್ಮೀಕಿ ಸಮುದಾಯದ ಪ್ರತಿಭಟನೆಗೆ ನಟ ಸುದೀಪ್ ಬೆಂಬಲ

    ಬೆಂಗಳೂರು: ನಗರದ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ವಾಲ್ಮೀಕಿ ಸಮುದಾಯದ ಪ್ರತಿಭಟನೆಗೆ ನಟ ಕಿಚ್ಚ ಸುದೀಪ್ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ವಿಡಿಯೋ ಮಾಡಿರುವ ನಟ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಪರಿಶಿಷ್ಠ ಪಂಗಡದವರಿಗೆ ಶೇ.7.5ರಷ್ಟು ಮಿಸಲಾತಿಗೆ ಒತ್ತಾಯಿಸಿ ಧರಣಿ ನಡೆಯುತ್ತಿದ್ದು, ಸ್ವಾಮೀಜಿ ಹಾಗೂ ಸ್ನೇಹಿತರಿಗೆ ನನ್ನ ಬೆಂಬಲವಿದೆ ಎಂದು ಸುದೀಪ್ ಹೇಳಿದ್ದಾರೆ. ಇದನ್ನೂ ಓದಿ: ಸ್ವಾಮೀಜಿ ಒಪ್ಪಿದ್ರೆ ಈಗಲೇ ರಾಜೀನಾಮೆ ಕೊಡುತ್ತೇನೆ- ಶ್ರೀರಾಮುಲು

    ವಿಡಿಯೋದಲ್ಲೇನಿದೆ?
    ಶ್ರೀ ಪರಮಪೂಜ್ಯ ಪ್ರಸನ್ನಾನಂದ ಮಹಾಸ್ವಾಮಿಗಳು 16 ದಿನಗಳಿಂದ ನೂರಾರು ಮೈಲಿ ಪಾದಯಾತ್ರೆ ಮಾಡಿ ಇಂದು ಬೆಂಗಳೂರಿಗೆ ತಲುಪಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕೋಸ್ಕರ ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಈ ಕೆಲಸ ಮಾಡಿದ್ದಾರೆ. ಇದನ್ನು ಒಂದು ಒಳ್ಳೆಯ ಛಲ ಎಂದರೆ ತಪ್ಪಾಗಲ್ಲ. ಅದಕ್ಕೆ ಸಾವಿರಾರು ಜನ ಹೆಜ್ಜೆಗೆ ಹೆಜ್ಜೆ ಇಟ್ಟು ಒಂದು ಆನೆ ಬಲ ಕೊಟ್ಟಿದ್ದೀರಿ. ಇದಕ್ಕೆ ಸರ್ಕಾರ ಆದಷ್ಟು ಬೇಗ ಸ್ಪಂದಿಸಿ ಒಂದು ಒಳ್ಳೆಯ ಪರಿಹಾರ ನೀಡುತ್ತದೆ ಎಂಬ ನಂಬಿಕೆಯಿಂದೆ. ಸ್ವಾಮಿಗಳು ಹಾಗೂ ಸ್ನೇಹಿತರೇ ನಿಮಗೆ ನನ್ನ ಬೆಂಬಲ ಕೂಡ ಇದೆ ಎಂದು ಹೇಳುತ್ತಾ, ಆ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ನಾನು ನಿಮಗೆ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದ್ದಾರೆ.

  • ಕಿಚ್ಚ ಸುದೀಪ್ ಚಾಲೆಂಜ್ ಸ್ವೀಕರಿಸಿದ ಪತ್ನಿ ಪ್ರಿಯಾ!

    ಕಿಚ್ಚ ಸುದೀಪ್ ಚಾಲೆಂಜ್ ಸ್ವೀಕರಿಸಿದ ಪತ್ನಿ ಪ್ರಿಯಾ!

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಫಿಟ್ನೆಸ್ ಚಾಲೆಂಜ್ ಅನ್ನು ನಟ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ರಾಧಾಕೃಷ್ಣನ್ ಸ್ವೀಕರಿಸಿ ಟ್ವೀಟ್ ಮಾಡಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಆರಂಭಿಸಿದ ಫಿಟ್ನೆಸ್ ಚಾಲೆಂಜ್ ಅಭಿಯಾನದಲ್ಲಿ ಹಲವು ಸ್ಟಾರ್ ಗಳು ಈಗಾಗಲೇ ಸ್ವೀಕರಿಸಿದ್ದಾರೆ. ಸದ್ಯ ಈ ಸಾಲಿನಲ್ಲಿ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಅವರು ಸೇರ್ಪಡೆಯಾಗಿದ್ದು, ಪತಿ ನೀಡಿದ ಚಾಲೆಂಜ್ ಸ್ವೀಕರಿಸಿರುವ ಅವರು ತಮ್ಮ ಫಿಟ್ನೆಸ್ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಪ್ರಿಯಾ ಅವರು ಚಾಲೆಂಜ್ ಸ್ವೀಕರಿಸಿ ವಿಡಿಯೋ ಪೋಸ್ಟ್ ಮಾಡುತ್ತಿದಂತೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ನಾನು ಪೈಲ್ವಾನ್ ರೀತಿ ಮಾಡಲು ಬಯಸಿದ್ದೆ ಎಂದು ಹೇಳಿ ಟ್ವೀಟ್ ಮಾಡಿದ್ದಾರೆ. ಸದ್ಯ ಪ್ರಿಯಾ ಅವರು ತಮ್ಮ ಟ್ವೀಟ್‍ನಲ್ಲಿ ನಟಿ ಆ್ಯಮಿ ಜಾಕ್ಸನ್, ಸುಜಾತ ಸಂಜೀವ್, ಶೃತಿ ಹರಿಹರಿನ್ ಅವರಿಗೆ ಚಾಲೆಂಜ್ ಮಾಡಿ ಟ್ವೀಟ್ ಮಾಡಿದ್ದಾರೆ.

    ಇದಕ್ಕೂ ಮೊದಲು ಟೀಂ ಇಂಡಿಯಾ ಕ್ರಿಕೆಟ್ ಆಟಗಾರ ವಿನಯ್ ಕುಮಾರ್ ಹಾಕಿದ್ದ ಫಿಟ್ನೆಸ್ ಚಾಲೆಂಜ್‍ನ್ನು ಸುದೀಪ್ ಸ್ವೀಕರಿಸಿ ತಮ್ಮ ವಿಡಿಯೋ ಪೋಸ್ಟ್ ಮಾಡಿದ್ದರು. ಈ ಟ್ವೀಟ್ ನಲ್ಲಿ ನಟರಾದ ಶಿವರಾಜ್ ಕುಮಾರ್, ಯಶ್, ಸೋಹಿಲ್ ಖಾನ್, ರಿತೀಶ್ ದೇಶ್‍ಮುಖ್ ಸೇರಿದಂತೆ ತಮ್ಮ ಪತ್ನಿಗೂ ಚಾಲೆಂಜ್ ಮಾಡಿದ್ದರು.

    ಅಲ್ಲದೇ ಸುದೀಪ್ ಅವರ ಫಿಟ್ನೆಸ್ ವಿಡಿಯೋ ನೋಡಿದ ಕ್ರಿಕೆಟಿಗ ವಿನಯ್ ಕುಮಾರ್ ತಮ್ಮ ಟ್ವಿಟ್ಟರಿನಲ್ಲಿ “ಅದ್ಭುತ ಸಹೋದರ. ನನ್ನ ಚಾಲೆಂಜ್ ಸ್ವೀಕರಿಸಿದ್ದಕ್ಕೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಸುದೀಪ್ ಅವರ ಫಿಟ್ನೆಸ್ ವಿಡಿಯೋ ನೋಡಿದ ಜಿ.ಕೆ ಅನಿಲ್ ಕುಮಾರ್ ಟ್ವಿಟ್ಟರಿನಲ್ಲಿ, “ವ್ಹಾ..ವ್ಹಾ..” ಎಂದು ಟ್ವೀಟ್ ಮಾಡಿದ್ದರು. ಆಗ ಕಿಚ್ಚ ನೀವು ಕೂಡ ಈ ಚಾಲೆಂಜ್ ಸ್ವೀಕರಿಸಿ ಎಂದು ಟ್ವೀಟ್ ಮಾಡಿದ್ದಾರೆ.

  • ದರ್ಶನ್ ಕಾಂಗ್ರೆಸ್‍ಗೆ ಬಂದ್ರೆ ಸುದೀಪ್ ಬಿಜೆಪಿಗಂತೆ- ಕಿಚ್ಚನ ಮನವೊಲಿಸಲು ಬಿಜೆಪಿ ನಾಯಕರ ಸರ್ಕಸ್

    ದರ್ಶನ್ ಕಾಂಗ್ರೆಸ್‍ಗೆ ಬಂದ್ರೆ ಸುದೀಪ್ ಬಿಜೆಪಿಗಂತೆ- ಕಿಚ್ಚನ ಮನವೊಲಿಸಲು ಬಿಜೆಪಿ ನಾಯಕರ ಸರ್ಕಸ್

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸ್ಟಾರ್ ನಟರ ಸುತ್ತಲೂ ರಾಜಕಾರಣ ಗಿರಕಿ ಹೊಡೆಯುತ್ತಿದೆ. ಉಪ್ಪಿ ಆಯ್ತು, ದರ್ಶನ್ ಆಯ್ತು ಈಗ ಮತ್ತೊಬ್ಬ ಸ್ಟಾರ್ ನಟ ರಾಜಕೀಯಕ್ಕೆ ಬರ್ತಾರೆಂಬ ಸುದ್ದಿ ಹರಿದಾಡುತ್ತಿದೆ.

    ಕಾಂಗ್ರೆಸ್ ಯೋಜನೆಗೆ ತಿರುಗೇಟು ನೀಡಲು ಬಿಜೆಪಿಯೂ ಸಜ್ಜಾಗುತ್ತಿದ್ದು, ಕಿಚ್ಚ ಸುದೀಪ್‍ರನ್ನು ಕರೆಯಲು ಬಿಜೆಪಿಯಲ್ಲಿ ಚಿಂತನೆ ನಡೆಯುತ್ತಿದೆ. ಬಿಜೆಪಿ ಸೇರಲು ನಟ ಕಿಚ್ಚ ಸುದೀಪ್ ಗೆ ಆಹ್ವಾನ ನೀಡಲು ಕಮಲ ಮನೆಯಲ್ಲಿ ತಯಾರಿ ನಡೆಯುತ್ತಿದೆ. ಕಾಂಗ್ರೆಸ್ ಗೆ ದರ್ಶನ ಆದ್ರೆ ನಮ್ಗೆ ಸುದೀಪ್ ಅಂತಿದೆ ಬಿಜೆಪಿ ಪಕ್ಷ.

    ಶ್ರೀರಾಮುಲು, ಆರ್.ಅಶೋಕ್ ಗೆ ಸುದೀಪ್ ಜೊತೆ ಮಾತುಕತೆ ನಡೆಸುವ ಜವಾಬ್ದಾರಿ ನೀಡಿದ್ದು, ಸುದೀಪ್ ಪಕ್ಷ ಸೇರಿದ್ರೆ ರಾಯಚೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಗುತ್ತೆ ಅಂತ ಹೇಳಲಾಗ್ತಿದೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ದರ್ಶನ್ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ರೆ ಬಿಜೆಪಿಯಿಂದ ಸುದೀಪ್‍ಗೆ ಟಿಕೆಟ್ ನೀಡಲಾಗುತ್ತಾ ಎಂಬ ಚರ್ಚೆಯೂ ಎದ್ದಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಸುದೀಪ್ ಮನವೊಲಿಸಲು ಬಿಜೆಪಿ ಯೋಜನೆ ಹಾಕುತ್ತಿದೆ.

    ಇದನ್ನೂ ಓದಿ: ಕಾಂಗ್ರೆಸ್‍ಗೆ ಸೇರ್ಪಡೆಯಾಗ್ತೀರಾ: ಮಾಧ್ಯಮಗಳ ಪ್ರಶ್ನೆಗೆ ದರ್ಶನ್ ಪ್ರತಿಕ್ರಿಯೆ ಹೀಗಿತ್ತು

    ವಿಧಾನಸಭಾ ಚುನಾವಣೆಗೆ ನಿಲ್ಲಬೇಕು ಅಂದ್ರೆ ಬೆಂಗಳೂರಿನ ವಿಧಾನಸಭಾ ಕ್ಷೇತ್ರವೊಂದರಲ್ಲಿ ಸುದೀಪ್‍ಗೆ ಟಿಕೆಟ್ ಅಂತೆಲ್ಲ ರಾಜ್ಯ ಬಿಜೆಪಿಯಲ್ಲಿ ಒಂದು ಸುತ್ತಿನ ಮಾತುಕತೆ ಈಗಾಗಲೇ ನಡೆದಿದೆ. ಆದ್ರೆ ರಾಜಕೀಯ ಸಹವಾಸ ಬೇಡ ಅಂತಾ ಆಪ್ತರ ಬಳಿ ಹೇಳಿದ್ದ ಸುದೀಪ್, ಈಗ ಬಿಜೆಪಿ ಪ್ರಸ್ತಾಪಕ್ಕೆ ಓಕೆ ಅಂತಾರಾ ಅಥವಾ ರಾಜಕೀಯ ಸೇರಲು ಗ್ರೀನ್ ಸಿಗ್ನಲ್ ಕೊಡ್ತಾರಾ? ಮೋದಿಗೆ ಜೈ ಅಂದು ಲೋಕಸಭೆಗೆ ಸ್ಪರ್ಧೆ ಮಾಡಲು ಒಪ್ಪುತ್ತಾರಾ? ಅಂತ ಕಾದುನೋಡಬೇಕು.